ಅಂಕಣ

ಅಷ್ಟಕ್ಕೂ ಈ ಕಾಂಗ್ರೆಸ್ ಗೆ ಯಾಕೆ ಹಿಂದೂ ಸಂತರ ಬೆನ್ನು ಬಿದ್ದಿದೆ ಗೊತ್ತಾ?!

ಭಾರತದ ಪರಂಪರೆ ಸೃಷ್ಟಿಯಾಗಿದ್ದಾಗಿನಿಂದಲೂ ಆ ಪರಂಪರೆಯನ್ನು ಯಾವುದೇ ಸ್ವಾರ್ಥವಿಲ್ಲದೇ ರಕ್ಷಿಸಿಕೊಂಡು ಬಂದಿರುವವರು ಸಂತರು. ಸಂತರು ಬಯಸುವುದು ಇಡೀ ಜಗತ್ತಿಗೆ ಒಳ್ಳೆಯದಾಗಲೆಂದು. ಆದರೆ ಆ ಸಂತರನ್ನು ಹಿಂದೆ ರಾಕ್ಷಸರು ಕಂಟಕವಾಗಿದ್ದರೆ, ಈಗ ಕಾಂಗ್ರೆಸ್ ಎಂಬ ರಾಕ್ಷಸ ಇಂದಿನ ಸಂತರಿಗೆ ಕಂಟಕವಾಗಿದೆ. ರಾಕ್ಷಸರನ್ನೂ ಮೆಟ್ಟಿ ನಿಂತ ಸಂತರು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಂತಹುದರಲ್ಲಿ ಈ ಚಿಲ್ಲರೆ ಕಾಂಗ್ರೆಸ್ ಯಾವ ಲೆಕ್ಕ? ಇದೇ ಸಂತರ ಆಶಿರ್ವಾದದಿಂದ, ಇದೇ ಸಂತರ ಬೆಂಬಲದಿಂದ, ಇದೇ ಸಂತರ ಬಯಕೆಯಿಂದ, ಇದೇ ಸಂತರ ಹೋಮ-ಹವನಗಳಿಂದ ಇಂದು ಮೋದಿಜಿ ಭಾರತದ ಪರಂಪರೆಯನ್ನು ಕಾಪಾಡಲು ದೆಹಲಿಯ ಗದ್ದುಗೆಗೆ ಏರಿದ್ದಾರೆ. ಕಾಂಗ್ರೆಸ್ಸಿನವರು ಒಂದು ಕಡೆಯಾದರೆ, ಈ
ಮಾಧ್ಯಮದವರಿದ್ದಾರಲ್ಲ ಇವರೂ ಕೂಡಾ ಹಿಂದು ಸಂತರಿಗೆ ಕಂಟಕರಾಗಿದ್ದಾರೆ. ಹೇಗೆ ಗೊತ್ತಾ? ಎಲ್ಲೋ ಯಾವುದೋ ಒಬ್ಬ ಸಂತ ಏನೋ ಮಾಡಿದ್ದರೆ, ಅದರ ಪೂರ್ವಾಪರ ವಿಚಾರಿಸದೆ ಆ ಸಂತರ ಹಿಂದೆ ಕ್ಯಾಮರಾ ಹಿಡಿದುಕೊಂಡು ಎಂಜಲು ಕಾಸಿಗೆ ಆಸೆ ಪಟ್ಟು ದಿನವಿಡೀ ಅದೇ ಸುದ್ದಿಯನ್ನು ತೋರಿಸುತ್ತಾರೆ. ಮಾಧ್ಯಮದವರೆ ನಿಮಗೆ ತಾಕತ್ತಿದ್ದರೆ ಮೌಲ್ವಿಗಳು ಮಾಡುವ ಹಲ್ಕಾ ಕೆಲಸಗಳನ್ನು ಮತ್ತು ಪಾದ್ರಿಗಳು ಮಾಡುವ ಹಲ್ಕಾ ಕೆಲಸಗಳ ತೋರಿಸಿ! ಯಾಕೆ ಅವರಿಂದ ಎಂಜಲು ಕಾಸು ಸಿಗುತ್ತಾ? ಅಥವಾ ಕಾಂಗ್ರೆಸ್ ಎಂಬ ಕೆಟ್ಟ ಹುಳು ನಿಮ್ಮ ಹಿಂದೆ ಬಿದ್ದಿರುತ್ತಾ?

ಮೊದಲೆಲ್ಲಾ ಸಂತರು ಮಾಡುವ ಹೋಮ ಹವನಗಳಿಂದ ನಾಡಿಗೆ ಒಳ್ಳೆಯದಾಗುತ್ತೆ ಅಂತ ರಾಕ್ಷಸರೆಲ್ಲಾ ಸೇರಿ ಹೋಮ ಹವನಗಳನ್ನು ಹಾಳು
ಮಾಡುತ್ತಿದ್ದರಂತೆ. ಈಗ ಮಾಧ್ಯಮಗಳು ಆ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಅಷ್ಟಕ್ಕೂ ಮಾಧ್ಯಮದವರು ಹಿಂದೂ ಸಂತರನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ? ಮಾಧ್ಯಮದವರೇ ನಿಮಗೆ ಅನ್ಯ ಧರ್ಮೀಯ ಸನ್ಯಾಸಿಗಳು ಸಿಗೋದೇ ಇಲ್ವಾ ಅಥವಾ ಆ ತಾಕತ್ತು ನಿಮ್ಮ ಹತ್ತಿರ ಇಲ್ವಾ? ಕಪಟ ಸನ್ಯಾಸಿಯಾಗಿದ್ರೆ ಸರಿ ಆದರೆ ಅದರ ಪೂರ್ವಾಪರ ಸುದ್ದಿಯನ್ನು ತಿಳಿಯದೇ ,ಸತ್ಯಾ ಸತ್ಯತೆಯನ್ನು ಅರಿಯದೇ ಕಪಟ , ಢೋಂಗಿ ಅಂತ ತೋರಿಸುವುದು ಸರಿಯಲ್ಲ. ಸಂತರ ಹೆಸರನ್ನು ಹಾಳು ಮಾಡುವವರು ನೀವೇ ಕಾಲೆಳೆಯೋರು ನೀವೇ , ಆಮೇಲೆ ಆ ಸಂತನ ತಪ್ಪೇ ಇರಲಿಲ್ಲ ಎಂದು ನ್ಯಾಯಾಲಯ ಘಂಟಾಘೋಷವಾಗಿ ಹೇಳಿದಾಗ ಮಾಧ್ಯಮ ಅದನ್ನು ತೋರಿಸದೇ ಸುಮ್ಮನೆ ಕುಳಿತು ಬಿಡುತ್ತವೆ. ಆಂದರೆ ನೀವೆಲ್ಲಾ ಏನು ಮಾಡಲು ಹೊರಟಿದ್ದೀರಿ? ಹಿಂದುಗಳಂದ್ರೆ ಫುಟ್ ಬಾಲ್ ಅನ್ಕೊಂಡಿದ್ದೀರಾ? ಯಾರ್ ಬೇಕಾದರೂ ಒದೆಯಬಹುದು ಅನ್ಕೊಂಡಿದ್ದೀರಾ? ಅದು ನಿಮ್ಮ ತಪ್ಪು ಕಲ್ಪನೆ ಮತ್ತು ಅದು ನಿಮ್ಮ ಕರ್ತವ್ಯಕ್ಕೆ ಮಾಡುವ ದ್ರೋಹ.

ಇಷ್ಟಕ್ಕೂ ಸಂತರನ್ನೇ ಟಾರ್ಗೆಟ್ ಮಾಡುವುದೇಕೆ?

ಸಮಾಜವೂ ಕೂಡಾ ಅದೇಕೆ ಸಂತರ ಬದುಕಿನ ಕುರಿತಂತೆ ಅಪದ್ಧದ ಮಾತುಗಳನ್ನಾಡಿದರೆ ಚಪ್ಪರಿಸಿಕೊಂಡು ಕೇಳುತ್ತದೆ? ಬರೀ ಕೇಳುವುದಷ್ಟೇ ಅಲ್ಲ , ಅದಕ್ಕೆ ತನ್ನದೊಂದಿಷ್ಟನ್ನೂ ಸೇರಿಸಿ ಸಂತರನ್ನು ಅವಮಾನಿಸಿಬಿಡುತ್ತೆ. ಆ ಸ್ವಾಮಿಜಿಯ ಬಗ್ಗೆ ಗೊತ್ತಿಲ್ಲದೇ ಹೋದರೂ , ಆ ಸ್ವಾಮೀಜಿಯ ಹೆಸರನ್ನೇ ಕೇಳದೇ ಹೋದರೂ , ಆ ಸ್ವಾಮಿಜಿಯ ಪರಿಚಯವೇ ಇಲ್ಲದೇ ಹೋದರೂ ಕಳ್ಳ ಸನ್ಯಾಸಿ , ಢೋಂಗಿ ಎಂದು ಕರೆಯುವುದೇಕೆ? ಅಷ್ಟೊಂದು ಹಾಳಾಗಿದೆಯಾ ನಮ್ಮ ಸಮಾಜದ ಮನಸು.

ಅದಕ್ಕೆ ನೇರ ಕಾರಣ ಮಾಧ್ಯಮಗಳೇ ಹೊರತು ಬೇರೊಂದಿಲ್ಲ. ಸಮಾಜಕ್ಕೆ ತನ್ನಿಂದ ಶ್ರೇಷ್ಠ ಮೌಲ್ಯದೊಂದಿಗೆ ಆಗದೇ ಇದ್ದರೂ ಕೂಡಾ ಆ ಶ್ರೇಷ್ಠ ಮೌಲ್ಯದೊಂದಿಗೆ ಬದುಕುವ ಸಂತರನ್ನು ಹೀಗಳೆಯುವುದೇಕೆ? ಅದರಲ್ಲೂ ಭಾರತದಲ್ಲಿ ಒಂದು ದೊಡ್ಡ ಪಟಾಲಂ ಇದೆ. ಅದರ ಕೆಲಸವೆಂದರೆ ಹಿಂದೂ ಧರ್ಮವನ್ನು ನಿಂದಿಸುವುದು , ಅಪಪ್ರಚಾರ ಮಾಡಿ ಸಮಾಜಕ್ಕೆ ಗೊಂದಲ ಮೂಡಿಸುವುದು , ಸಂತರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಇದೆಲ್ಲಾ ಭಾರತದಲ್ಲಿರುವ ಒಂದು ಪಟಾಲಂನ ಕೆಲಸ. ಆ ಪಟಾಲಂ ಬೇರಾವುದೂ ಅಲ್ಲ.. ಇದೇ ಕಾಂಗ್ರೆಸ್ಸಿನ ಎಂಜಲು ತಿನ್ನುವ ಸೋ ಕಾಲ್ಡ್ ಬುದ್ಧಿ ಜೀವಿಗಳು, ಇದೇ ಕಾಂಗ್ರೆಸ್ಸಿನ ಎಂಜಲು ತಿನ್ನುವ ಅರೆಬೆಂದ ಸಾಹಿತಿಗಳು, ಇದೇ ಕಾಂಗ್ರೆಸ್ಸಿನ ಎಂಜಲು ತಿನ್ನುವ ಪ್ರಗತಿಪರರು, ಇದೇ ಕಾಂಗ್ರೆಸ್ಸಿನ ಎಂಜಲು ತಿನ್ನುವ ಎಡಪಂಥೀಯರು, ಇದೇ ಕಾಂಗ್ರೆಸ್ಸಿನ ಎಂಜಲು ತಿನ್ನುವ ಕಮ್ಮಿನಿಷ್ಠೆಯ ಕಮ್ಯುನಿಸ್ಟರು ಇತ್ಯಾದಿ ಇತ್ಯಾದಿ.

ಇದೇ ಪಟಾಲಂಗಳು ಬಾಬಾ ರಾಮದೇವರ ಹಿಂದೆ ಬಿದ್ದದ್ದು ಗೊತ್ತಿದೆಯಾ?

ಬಾಬಾ ರಾಮದೇವ್ ಗುರೂಜಿಯವರು ಹಿಂದೂ ಸಮಾಜವನ್ನು ಸಂಘಟಿಸುವ ಜೊತೆಗೆ ಬೇರೆಯವರನ್ನೂ ಯೋಗ-ಆಯುರ್ವೇದಗಳ ಮೂಲಕ ಭಾರತೀಯ ಪರಂಪರೆಯತ್ತ ಎಳೆದು ತರುತ್ತಿದ್ದಾಗ , ಮತ್ತೆ ಹಿಂದೂ ಸಂಸ್ಕೃತಿ ಜಗದ್ವ್ಯಾಪಿ ಆಗಿಬಿಡುತ್ತದೆಯಲ್ಲಾ ಅಂತ ಎಡಪಂಥೀಯರು ಬೆದರಿಬಿಟ್ಟರು. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗ ಯಾವ್ದು ಗೊತ್ತೆ? ಬಾಬಾ ರಾಮದೇವ್ ತಮ್ಮ ಆಯುರ್ವೇದೀಯ ಔಷಧಗಳಲ್ಲಿ ಮನುಷ್ಯನ ಮೂಳೆಯ ಪುಡಿ ಮತ್ತು ತಲೆಬುರುಡೆಯನ್ನು ಬಳಸುತ್ತಾರೆಂದು ಅಪಪ್ರಚಾರ ಮಾಡಿದರು. ಆಗ ಮಾಧ್ಯಮಗಳಿಗೆ ಭಾರಿ ಅವಕಾಶ ಸಿಕ್ಕಂತಾಯಿತು. ಅನೇಕ ಮಾಧ್ಯಮಗಳು ಬಾಬಾ ರಾಮದೇವರ ಆಯುರ್ವೇದ ಔಷಧದ ಬಗ್ಗೆ ಅಪಪ್ರಚಾರ ಮಾಡಿದವು. ಅದರೆ ಬಾಬಾ ರಾಮದೇವ್ ಗುರೂಜಿಯವರು ಬೆದರಲಿಲ್ಲ. ಅರೋಪ
ಮಾಡಿದ ಚಿಲ್ರೆಗಳನ್ನು ಝಾಡಿಸಿದರು. ವಿಚಾರಣೆಗೆ ಸಿದ್ಧ ಎಂದರು. ವಿಚಾರಣೆಯ ನಂತರ ಬಾಬಾ ರಾಮದೇವ್ ಗುರೂಜಿಯವರು ಗೆದ್ದು ಬಂದರು. ಆಗಿನ್ನೂ ಬಾಬಾ ರಾಮದೇವ ಗುರೂಜಿಯವರು ಕಪ್ಪುಹಣ, ಭ್ರಷ್ಟಾಚಾರದ ಕುರಿತಂತೆ ಮಾತಾಡಿರಲಿಲ್ಲ ಹೀಗಾಗಿ ಕಾಂಗ್ರೆಸ್ ಸುಮ್ಮನೆ ಇತ್ತು.

ಬಾಬಾ ರಾಮದೇವ್ ಗುರೂಜಿಯವರ ಔಷಧಗಳ ಬಗ್ಗೆ ಅಪಪ್ರಚಾರ ಮಾಡುವಾಗ ಬಂದಿದ್ದ ಮಾಧ್ಯಮದವರು ಭರಪೂರ ಅಪಪ್ರಚಾರ ಮಾಡಿ ಹೋಗಿದ್ದರು. ಆದರೆ ವಿಚಾರಣೆಯಾಗಿ ಬಾಬಾ ರಾಮದೇವ್ ಗುರೂಜಿ ಗೆದ್ದು ಬಂದಾಗ ಮಾಧ್ಯಮಗಳು ಆ ಔಷಧಿಗಳ ಮೇಲಿನ ಆರೋಪ ಸುಳ್ಳೆಂದು ಸಾಬೀತಾಗಿದೆ ಎಂದು ತೋರಿಸಲೇ ಇಲ್ಲ. ಇಂತವುಗಳೆಲ್ಲಾ ನಮ್ಮ ಮಾಧ್ಯಗಳು. ಬಾಬಾ ರಾಮದೇವ್ ಗುರೂಜಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೆತ್ತಿಕೊಂಡಾಗ ಆರಂಭದಲ್ಲಿ ವ್ಯಾಪಕ ಪ್ರಚಾರ ಕೊಡಲಾಯ್ತು ಸರಿ. ಆದರೆ ಅರ್ಧರಾತ್ರಿಯಲ್ಲಿ ಲಾಠಿ ಚಾರ್ಜು ನಡೆದಾಗ ಮಾಧ್ಯಮಗಳು ಗುರೂಜಿ ಜೊತೆ ನಿಲ್ಲಲೇ ಇಲ್ಲ. ಲಾಠಿ ಏಟಿನಿಂದ ತಪ್ಪಿಸಿಕೊಂಡು ಮಾರುವೇಷದಲ್ಲಿ ಪರಾರಿಯಾಗಿ ಜೀವಂತ ಬಂದ ಬಾಬಾ ರಾಮದೇವ್ ಗುರೂಜಿಯ ಜೊತೆ ಮಾಧ್ಯಮಗಳು ನಿಲ್ಲಬೇಕಾಗಿತ್ತು.

ಆದರೆ ಅದೇ ಮಾಧ್ಯಮಗಳು ಬಾಬಾ ರಾಮದೇವ್ ಗುರೂಜಿಯವರನ್ನು ಕಳ್ಳನೆಂದು ನಂಬಿಸಿತು ಅದರಂತೆ ನಮ್ಮ ಸಮಾಜವೂ ನಂಬಿತು. ಬರೀ ಬಾಬಾ ರಾಮದೇವ್ ಗುರೂಜೀಯವರ ವಿಚಾರವಷ್ಟೇ ಅಲ್ಲ. ಭಾರತದಲ್ಲಿ ಅನೇಕ ಹಿಂದೂ ಸಂತರ ಬಗ್ಗೆ ಕೆಟ್ಟದಾಗಿ ಬಿಂಬಿಸಿರೋದು ಮಾಧ್ಯಮಗಳೇ. ಯಾವುದೋ ಒಬ್ಬ ಸನ್ಯಾಸಿಯ ಮೇಲೆ ಅರೋಪವಿದ್ರೆ ನ್ಯಾಯಾಲಯ ಅಪರಾಧಿ ಎಂದು ಸಾಬೀತು ಮಾಡುವ ಮುನ್ನವೇ ಮಾಧ್ಯಮಗಳು ಅವರನ್ನು ಅಪರಾಧಿ ಎನ್ನುವಂತೆ ಬಿಂಬಿಸಿರುತ್ತೆವೆ. ಹಿಂದೂ ಧರ್ಮದ ಉಳಿವಿನ ಕೇಂದ್ರ ಬಿಂದುಗಳಾದ ಸಂತರ ನಾಶಕ್ಕೆ ಬ್ರಿಟಿಷರು ಇನ್ನಿಲ್ಲದ ಯತ್ನ ಮಾಡಿದ್ದರು. ಈಗ ಮಾಧ್ಯಮಗಳು ಮತ್ತು ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿವೆ.

-ಶಿವಾಂಶ

Tags

Related Articles

Close