ಅಂಕಣ

ಆರ್ ಎಸ್ ಎಸ್ ವಿರುದ್ಧದ ಪ್ರಚಾರದ ಗುಪ್ತಕಾರ್ಯಾಚರಣೆ; ಪ್ರತಿಯೊಬ್ಬ ಭಾರತೀಯನೂ ತಿಳಿಯಬೇಕಾದ ವಿಚಾರ!!!

ಸಂಘವೆಂದರೆ ಏನು?? ಅದರ ವಿಶ್ಲೇಷಣೆ‌ ಮಾಡಲು ನನಗೆ ಅರಿಯದು. ಆದರೆ ರಾಷ್ಟ್ರೀಯ‌ ಸ್ವಯಂಸೇವಕಾ ಸಂಘವಂತೂ ಕೋಮುಪ್ರಚೋದನೆಯನ್ನೂ ಸಮಾಜದಲ್ಲಿ ಬೇರೂರಿಸುತ್ತಾ ಸಾಗಿದೆ‌ ಅನ್ನುವುದು ಮಾತ್ರ‌ ಸತ್ಯ. ಇದು ದೇಶದ್ರೋಹಿಗಳ ಮಾತು.‌ಸ್ವತ: ನಾನೇ ಅನೇಕ ಬಾರಿ ಕಮ್ಮಿನಿಷ್ಠರ ಬಾಯಿಯಿಂದ ಕೇಳಿದ ‌ನುಡಿಗಳಾಗಿದ್ದವು ಇವು. ಸಂಘದ ‌ಉದ್ದೇಶ ಮತ್ತು‌ ಧ್ಯೇಯದ ಪರಿಕಲ್ಪನೆ ಆ‌ ಮತಾಂಧರಿಗೆ ಇರದ ಪರಿಣಾಮವಿದೆಂದು ಭಾವಿಸುತ್ತೇವೆ.

ಕಳೆದ ಎರಡು ವರ್ಷಗಳಲ್ಲಿ
ನಾವು ಎರಡು ವಿಷಯಗಳ ಕುರಿತಾಗಿ ಅತ್ಯಧಿಕ ಹೆಚ್ಚಳವನ್ನು ಕಾಣುತ್ತಿದ್ದೇವೆ :

1. ಎಡಪಂಥೀಯರು ಸಂಘದ ವಿರುದ್ಧ ಮಾಡುವ ಪ್ರಚಾರದಲ್ಲಿ ಅಪಾರವಾದ ಏರಿಕೆ.

2.ಸಂಘದ ಸಿದ್ಧಾಂತದ ಕಡೆಗೆ ಹೆಚ್ಚು ಹಿಂದೂ ಯುವಜನರು ಬರುತ್ತಿದ್ದಾರೆ.

ಸಂಘದ ವಿರುದ್ಧದ ಮಾಡಿದ ಕೆಲವು ಪ್ರಚಾರದಿಂದ ನಾವು ಆರಂಭಿಸೋಣ.

ರಾಷ್ಟ್ರೀಯ ‌ಸ್ವವಂ ಸೇವಕಾ ಸಂಘವು ದಲಿತ ಹಾಗೂ ಇಸ್ಲಾಂ ವಿರೋಧಿಯಾಗಿದೆ :
ಸಂಘದ ಧ್ಯೇಯದ ಕುರಿತಾಗಿ ಅರಿವಿಲ್ಲದವರು ಇದನ್ನು ಪ್ರಥಮವಾಗಿ ತಿಳಿಯಬೇಕು. “ಪಂಗಡ, ನಂಬಿಕೆ, ಜಾತಿ, ಮತ ಮತ್ತು ರಾಜಕೀಯ, ಆರ್ಥಿಕ, ಭಾಷಾ ಮತ್ತು ಪ್ರಾಂತೀಯ ಭಿನ್ನತೆಗಳಿಂದ ಹಿಂದುಗಳ ನಡುವಿನ ವೈವಿಧ್ಯತೆಯಿಂದ ಉಂಟಾಗುವ ಉತ್ಸಾಹಭರಿತ ಪ್ರವೃತ್ತಿಯನ್ನು ನಿರ್ಮೂಲನೆ ಮಾಡುವುದು.” ಇದು ಸಂಘದ ಪ್ರಮುಖ ಧ್ಯೇಯ.

ಜಾತಿಗೆ ಸಂಬಂಧಿಸಿದಂತೆ ಎಲ್ಲಾ ಹಿಂದೂಗಳನ್ನೂ ಸಂಘಟಿಸಲು ಸಂಘವು ಸದಾ ಶ್ರಮಿಸುತ್ತಿದೆ. ಈ ಒಗ್ಗಟ್ಟಿನ ಮೂಲಕ ಬಲವಾದ ರಾಷ್ಟ್ರವನ್ನು ನಿರ್ಮಿಸುವಲ್ಲಿ ಇದು ಸಹಕಾರಿಯಾಗಲಿದೆ. ಸಂಘ ಪರಿವಾರದ ಹಲವಾರು ನಾಯಕರು ಜಾತಿವಾದದ ನಡುವಿನ ಗದ್ದಲದಲ್ಲಿ ಬಲಿಪಶುಗಳಾದ ಹಿಂದುಳಿದ ಜಾತಿಗಳ ಜನರನ್ನು
ಮುಖ್ಯವಾಹಿನಿಗೆ ತಂದು ಆಶಾಕಿರಣಗಳಾಗಿದ್ದಾರೆ. ನೆನಪಿರಲಿ. ನಮ್ಮ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಅನೇಕ ನಾಯಕರು ಹಿಂದುಳಿದ ವರ್ಗದಿಂದ ಬಂದವರೇ ಆಗಿದ್ದರು, ಆಗುತ್ತಲೇ ಇದ್ದಾರೆ. ಅವರಿಗೆ ಅಂತಹ ಸಾಧವೆಗೈಯ್ಯಲು ವೇದಿಕೆ‌‌ ಸೃಷ್ಟಿಸಿದ್ದು ದೇಶದ್ರೋಹಿ ಸಂಘಟನೆಯೆಂದೂ, ಚಡ್ಡಿಗಳ ಸಂಘವೆಂದು
ಬುದ್ಧಿ(ಲದ್ಧಿ)ಜೀವಿಗಳಿಂದ‌ ಕರೆಯಲ್ಪಡುವ ಅದೇ ಸಂಘ.

ಶ್ರೀ ನರೇಂದ್ರ ಮೋದಿ, ಶ್ರೀ ರಾಮನಾಥ್ ಕೋವಿಂದ್, ಶ್ರೀ ಕಲ್ಯಾಣ್ ಸಿಂಗ್, ಶ್ರೀಮತಿ ಉಮಾ ಭಾರ್ತಿ, ಶ್ರೀ ಗೋಪಿನಾಥ್ ಮುಂಡೆ, ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಡಾ.ಸುರಾಜ್ ಭಾನ್, ಶ್ರೀ.ಕಾರಿಯಾ ಮುಂಡಾ, ಶ್ರೀ ಜುವಾಲ್ ಓರಮ್, ಇವರುಗಳು ಒಂದು ಕಾಲದಲ್ಲಿ ದಲಿತರೆಂಬುದಾಗಿ‌ ಅಥವಾ ಸಮಾಜದಲ್ಲಿ ಜೀವಿಸಲು ಅವರಿಗೆ ಹಕ್ಕೇ ಇಲ್ಲವೆಂಬುದಾಗಿ ಸಮಾಜದಲ್ಲಿ ಬಿಂಬಿಸಲಾಗುತ್ತಿದ್ದ ವ್ಯಕ್ತಿಗಳು‌, ನಂತರ ಸಂಘದ ಪ್ರಚಾರಕರಾಗಿಯೂ, ಸಂಘದ‌ ಉನ್ನತ ಜವಾಬ್ದಾರಿಯನ್ನೂ ವಹಿಸಿ‌ ಮುನ್ನಡೆಸಿದ್ದು ಮಾತ್ರ‌ ವಾಸ್ತವ ಹಾಗೂ ಸತ್ಯ.

ವನವಾಸಿ ಕಲ್ಯಾಣ ಆಶ್ರಮ (ಬುಡಕಟ್ಟಿನವರ ಸುಧಾರಣೆಗೆ ಸಂಘಟನೆ), ಫ್ರೆಂಡ್ಸ್ ಆಫ್ ಟ್ರೈಬಲ್ ಸೊಸೈಟಿ, ಅನುಸುಚಿತ್ ಜಾತಿ-ಜಮಾತಿ ಅರಕ್ಷನ್ ಬಚಾವೊ
ಪರಿಷತ್ (ದಲಿತರ ಅಭಿವೃದ್ಧಿಗೆ ಸಂಸ್ಥೆ), ಏಕಲ್ ವಿದ್ಯಾಲಯ (ಉಚಿತ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಪ್ರದೇಶಗಳಲ್ಲಿ ಭಾರತದ ) ದಲಿತರು / ಹಿಂದುಳಿದ ಜಾತಿಗಳ ಸಬಲೀಕರಣದಲ್ಲಿ ತೊಡಗಿರುವ ಸಂಘ ಪರಿವಾರಕ್ಕೆ ಸೇರಿದ ಕೆಲವು ಸಂಘಟನೆಗಳು ಇವು.

ಮುಸ್ಲಿಂ ರಾಷ್ಟ್ರೀಯ ಮಂಚ್:
ಸಂಘವು ಮುಸಲ್ಮಾನರ ವಿರೋಧವನ್ನೇ ಮಾಡುತ್ತಿದೆಯೆಂದೆಲ್ಲಾ ಮಾತನಾಡುವವರಿಗೆ‌ಈ ವಿಚಾರದ ‌ಅರಿವೇ ಇಲ್ಲವೆಂದು ತೋರುತ್ತದೆ. ಸಂಘ ಪರಿವಾರದ ಮುಸ್ಲಿಂ ವಿಂಗ್ ‌ಇದಾಗಿದೆ. ಇದು 10,000 ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದೆ ಮತ್ತು ಇನ್ನೂ ಬೆಳೆಯುತ್ತಿದೆ. ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಸ್ನೇಹವನ್ನು ಮರು-ಸ್ಥಾಪಿಸುವ ಉದ್ದೇಶದಿಂದ 2002 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇಂದು ವಂದೇ ಮಾತರಂ ಅನ್ನು ಮುಸ್ಲಿಮರು ಹಾಡುವುದರೊಂದಿಗೆ ಅಥವಾ ಯೋಗ ದಿನವನ್ನು ಆಚರಿಸುವುದೊಂದಿಗೆ ಧರ್ಮವನ್ನು ಮುಂಚಿತವಾಗಿ ರಾಷ್ಟ್ರವೇ ಪ್ರಮುಖವಾದುದಂದು ನಿರೂಪಿಸಿದ್ದು ಮಾತ್ರ ಸುಳ್ಳಲ್ಲ.

ರಾಷ್ಟ್ರೀಯ ಸೇವಿಕಾ ಸಮಿತಿ, ಶಿಖಾ ಭಾರತಿ, ದುರ್ಗಾ ವಹಿಣಿ :
ಇವುಗಳು ಸಂಪೂರ್ಣವಾಗಿ ಮಹಿಳೆಯರಿಗೆ ಮಾತ್ರ, ಸಂಘದ ಪರಿವಾರ್ ಸಿದ್ಧಾಂತವನ್ನು ಅವರೂ ಹಂಚಿಕೊಳ್ಳುತ್ತಿದ್ದಾರೆ.
“ಸ್ತ್ರೀಯರು ಕುಟುಂಬಕ್ಕೆ ಮತ್ತು ರಾಷ್ಟ್ರಕ್ಕಾಗಿ ಸ್ಪೂರ್ತಿದಾಯಕ ಶಕ್ತಿಯಾಗಿದ್ದಾರೆ. ಈ ಬಲವು ಜಾಗೃತಗೊಳ್ಳದಷ್ಟು ಕಾಲ, ಸಮಾಜವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ “. ಈ ಚಿಂತನೆಯೊಂದಿಗೆ ಅದು ಮುನ್ನಡೆಯುತ್ತಿದೆ.

ಈ ಸಂಸ್ಥೆಗಳು ಶಿಕ್ಷಣ, ಸ್ವರಕ್ಷಣೆ ತರಬೇತಿ ಮತ್ತು ಸಾಂಸ್ಕೃತಿಕ ತರಬೇತಿಯ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ನಿರ್ಮಿಸುವ ಗುರಿ ಹೊಂದಿದೆ.

ಮಹಿಳೆಯರನ್ನು ತಮ್ಮ ಗಡಿರೇಖೆಗಳಿಂದ ಹೊರಬಂದು ಅವರ ಆಂತರಿಕ ಶಕ್ತಿಯನ್ನು ಅಳವಡಿಸಿಕೊಳ್ಳಲು ಕಲಿಸುತ್ತದೆ. ಮಹಿಳೆ ಪರಿಣಾಮಕಾರಿಯಾಗಿ ಎಲ್ಲ ಮೂರು ಕೆಲಸಗಳನ್ನು ಮಾಡಬಹುದು ಎಂದು ಇದು ಕಲಿಸುತ್ತದೆ;

1.ಮಾತೃತ್ವ (ಸಾರ್ವತ್ರಿಕ ಮಾತೃತ್ವ)

2.ಕರ್ತೃತ್ವ (ದಕ್ಷತೆ ಮತ್ತು ಸಾಮಾಜಿಕ ಸಕ್ರಿಯತೆ)

3.ನೇತ್ರತ್ವ (ನಾಯಕತ್ವ)

ಎಲ್ಲಾ ಮಹಿಳೆಯರು ಬಲವಾದ ಸಮಾಜವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸಂಘವು ಬಲವಾಗಿ ಪ್ರತಿಪಾದಿಸುತ್ತದೆ.

ಹಿಂದುತ್ವದ‌ ಅಗಾಧ ಚಿಂತನೆಗಳನ್ನು ಪ್ರತಿಪಾದಿಸುತ್ತಿದೆ ಸಂಘ :

ಹೌದು, ಸಂಘ ಪರಿವಾರ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ. ಇದು ಹಿಂದೂ ರಾಷ್ಟ್ರದ ನಂಬಿಕೆ. ಹಿಂದೂ ಧರ್ಮವು
ಸಹಿಷ್ಣುತೆಯನ್ನು ಉತ್ತೇಜಿಸುವ ಒಂದು ಧರ್ಮವಾಗಿದೆ, ಅದು ಎಲ್ಲರ ಸ್ವೀಕಾರವನ್ನು ಉತ್ತೇಜಿಸುತ್ತದೆ, ಶಾಂತಿ ಮತ್ತು ಒಳ್ಳೆಯತನವನ್ನು ಭೋದಿಸುತ್ತದೆ.
ಸಾಮರಸ್ಯದ ಸಮಾಜದಲ್ಲಿ ನಂಬಿಕೆಯಿಡುತ್ತದೆ. ಅದುವೇ ಹಿಂದುತ್ವ. “ವಸುಧೈವ ಕುಟುಂಬಕಮ್”, ಸಮಸ್ತ ಲೋಕಾ ಸುಖಿನೋ ಭವಂತು” ಇದು ಹಿಂದುತ್ವದ
ಜೀವಾಳ.

ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಭಾರತಕ್ಕೆ ಸ್ಥಳೀಯವಲ್ಲದಿದ್ದರೂ, ಹಿಂದೂ ಧರ್ಮ ಭಾರತದ ಆಸ್ತಿಯೇ ಆಗಿದೆಯೆಂದರೆ ತಪ್ಪಲ್ಲ.. ಇಲ್ಲಿಯೇ ಹಿಂದೂ ರಾಷ್ಟ್ರ ಕಲ್ಪನೆಯು ಹುಟ್ಟಿಕೊಂಡಿತು. ಇದೇ ಅರ್ಥದಲ್ಲಿ ಹಿಂದೂ ರಾಷ್ಟ್ರದಲ್ಲಿ ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನ್ನು ಸಹಿಸುವುದಿಲ್ಲವೆಂದು ಅರ್ಥವನ್ನು ಕೊಡಲು ಸಾಧ್ಯವೇ?? ಖಂಡಿತವಾಗಿಯೂ ಅಲ್ಲ, ನೆನಪಿರಲಿ. ಹಿಂದೂ ಧರ್ಮವು ಸಹಿಷ್ಣುತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ.

ಅಷ್ಟೇ‌ ಅಲ್ಲದೇ, ನೀವೆಲ್ಲಾ ಗಮನಿಸಿರಬಹುದು..ಯಾವುದೇ ಪ್ರವಾಹಗಳು ಬಂದಾಗ, ಅನೇಕ ಧಾರ್ಮಿಕ ಸಂಸ್ಥಗಳು ತಮ್ಮ ಸ್ವಾರ್ಥಕ್ಕೆ ಪ್ರವಾಹಪೀಡಿತ ಪ್ರದೇಶದಲ್ಲಿ ಸೇವೆಗೈಯ್ಯುತ್ತವೆ. ಆದರೆ ಸಂಘದ ಸ್ವಯಂಸೇವರು ಅಲ್ಲಿಗೆ ತೆರಳಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ , ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ. ಯಾರೂ ಹೇಳದ ವಾಸ್ತವ ಹಾಗೂ ಬಚ್ಚಿಟ್ಟ ಸತ್ಯವಿದು. ಅದರ ಸೇವಾ‌ ಚಟುವಟಿಕೆಗಳನ್ನು ಪಟ್ಟಿ‌ ಮಾಡುತ್ತಾ ಹೋದರೆ ಎಷ್ಟು‌ ಬರೆದರೂ ಸಾಲದು!!

1972 ರಲ್ಲಿ ಶ್ರೀ ಗೋಲ್ವಾಲ್ಕರ್ ಹೇಳಿದಂತೆ:

” ಹಿಂದೂಗಳು ಮುಸ್ಲಿಮ್ ವಿರೋಧಿ ಅಥವಾ ಕ್ರಿಸ್ಚಿಯನ್ ವಿರೋಧಿ ಎಂಬ ಆರೋಪಗಳು ಸಣ್ಣ ಮನಸ್ಥಿತಿ ಮತ್ತು ಗೊಂದಲಗಳಿಂದ ಹುಟ್ಟಿದವು. ಇದರಲ್ಲಿ ಯಾವುದೇ ಸತ್ಯವಿಲ್ಲ. ಇವೆಲ್ಲವೂ ಸುಳ್ಳುತನಗಳು. ಹಿಂದೂ ಯಾರಿಗೂ ವಿರುದ್ಧವಾಗಿಲ್ಲ.”

ಹೌದು, ನಾವು ಹಿಂದೂಗಳು ಎಂದು ಸಂಪೂರ್ಣ ನಿರ್ಣಯವನ್ನು ನಾವು ದೃಢೀಕರಿಸಬೇಕು. ಇದು ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಸಮಾಜ; ಮತ್ತು ಇದರಿಂದ ನಮ್ಮ ರಾಷ್ಟ್ರವನ್ನು ನಿರ್ಮಿಸಲಾಗಿದೆ. ಶಕ್ತಿಯುತ, ಸಮರ್ಥ, ಭವ್ಯವಾದ, ಪ್ರಕಾಶಮಾನವಾದ ಸಾರ್ವಭೌಮ ಜೀವನವನ್ನು ನಿರ್ಮಿಸುವುದು ನಮ್ಮ ಉದ್ದೇಶ. ನಾವು ಈ ಉದ್ದೇಶಕ್ಕಾಗಿ ಜನರನ್ನು ಪ್ರೇರೇಪಿಸಬೇಕು. ಈ ನಂಬಿಕೆಯನ್ನು ಘೋಷಿಸುವಲ್ಲಿ ಮುಜುಗರದ ಅಗತ್ಯವಿಲ್ಲ ಅಥವಾ ಹೆದರಬೇಕಿಲ್ಲ “.

ಅದರ ನಂಬಿಕೆಗಳ ಪ್ರಕಾರ, ಸಂಘ ಪರಿವಾರವು ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ, ಕಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ.

ನಮ್ಮ ಹಿರಿಯರ ಪಾದಗಳನ್ನು ಮುಟ್ಟುವಲ್ಲಿ ಮತ್ತು ಅವರ ಆಶೀರ್ವಾದವನ್ನು ಪಡೆಯುವುದನ್ನು ನಾವು ನಂಬುತ್ತೇವೆ, ನಮ್ಮ ಪೋಷಕರು, ಶಿಕ್ಷಕರು ಮತ್ತು ಅತಿಥಿಗಳಲ್ಲಿ ದೇವರನ್ನು ನೋಡಬೇಕೆಂದು ನಾವು ಕಲಿಯುತ್ತೇವೆ. ಗೋಮಾತಾ ಎಂದು ಹಸುಗಳನ್ನು ಗೌರವಿಸಲು ನಾವು ಕಲಿಯುತ್ತೇವೆ. ಹಿಂದೂ ಧರ್ಮವು ಕಣ-ಕಣಗಳಲ್ಲಿಯೂ ದೇವರನ್ನು ಕಾಣಬೇಕೆಂದು ಕಲಿಸುತ್ತದೆ, ಅದು ನೀರು, ಭೂಮಿ ಅಥವಾ ಬೆಂಕಿಯಲ್ಲಿಯೂ ಕೂಡ.

ನಮ್ಮ ಸಂಸ್ಕೃತಿಯನ್ನು ಕಲಿಯುವುದರಿಂದ, ಬೋಧನೆ ಮತ್ತು ಅಭ್ಯಾಸ ಮಾಡುವುದರಿಂದ ಹಿಂದುಳಿದ ಮನಸ್ಸು ಎಂದು ಕರೆಯಲ್ಟಟ್ಟರೆ ಯಾವುದೇ ಸಮಸ್ಯೆಯಿಲ್ಲ. ನಾವು ಆ ಬಿರುದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ.

ಇಂದಿನ ಯುವಕರು ಕೆಲವು ದಶಕಗಳ ಹಿಂದೆ ಇದ್ದದ್ದಕ್ಕಿಂತ ಉತ್ತಮವಾಗಿ ಮತ್ತು ಚುರುಕಾಗಿರುತ್ತಾರೆ. ಅವರು ತೀಕ್ಷ್ಣ ವೀಕ್ಷಕರಾಗಿರುವುದಂತೂ‌ ಸತ್ಯ.. ಅಪಪ್ರಚಾರ, ಸುಳ್ಳು ನಿರೂಪಣೆಗಳು, ಮೃದು ಮೆದುಳು ತೊಳೆಯುವಿಕೆಯನ್ನು ಅತೀ ವೇಗವಾಗಿ ಗುರುತಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಧರ್ಮಕ್ಕಾಗಿ ನಿಲ್ಲಬೇಕು ಎಂಬ ದೃಢ ಸಂಕಲ್ಪವನ್ನೂ ಮಾಡಿದ್ದಾರೆ. ಉತ್ತಮ ಸಮಾಜವನ್ನು ರಚಿಸಲು ಬಯಸುತ್ತಿರುವ, ರಾಷ್ಟ್ರಕ್ಕೆ ಸೇವೆ ಮಾಡಲು ನಿಜವಾಗಿಯೂ ಇವತ್ತು ಯುವಕರು ಆಸಕ್ತಿ ವಹಿಸಿರುವುದೇ ಉತ್ತಮ ವಿಚಾರ. ಬಹುಶಃ ಈ ಕಾರಣದಿಂದಾಗಿ, ಕಳೆದ ಒಂದೆರಡು ವರ್ಷಗಳು ಸಂಘದ ಸಿದ್ಧಾಂತದ ಕಡೆಗೆ ಹೆಚ್ಚಾದ ಒಲವನ್ನು ತೋರುತ್ತಿದ್ದಾರೆ.

ಸಂಘದ ಪ್ರಾರ್ಥನೆಯಲ್ಲಿರುವುದು ಪ್ರಮುಖವಾಗಿ ಎರಡೇ ಸಂಗತಿ. “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” – ನನ್ನ ಮಾತೃಭೂಮಿಗೆ ನಾನು ಸದಾ ‌ವಂದಿಸುತ್ತೇನೆ. “ಪರಮ್ ವೈಭವಂ ನೇ ತುಮೇ ತತ್ ಸ್ವರಾಷ್ಟ್ರಮ್” – ನನ್ನ ರಾಷ್ಟ್ರವನ್ನು ಪರಮ ವೈಭವದ ದಿಕ್ಕಿಗೆ ಸಾಗಿಸುವುದು ನನ್ನ ಧ್ಯೇಯ”.

ಸಂಘದ ಸಿದ್ಧಾಂತವು ಬೆಳೆಯುತ್ತಲೇ ಇರಲಿ, ಭಾರತವು ಒಂದು “ಹಿಂದೂ ರಾಷ್ಟ್ರ” ಎಂಬ ಸತ್ಯದ ಅರ್ಥದಲ್ಲಿ ಭವ್ಯರಾಷ್ಟ್ರ ನಿರ್ಮಾನವಾಗಲಿ.ಆಗ ಮಾತ್ರ ಶಾಂತಿ ಮತ್ತು ಸಾಮರಸ್ಯವು ಮೇಲುಗೈ ಸಾಧಿಸಬಹುದು.

– ವಸಿಷ್ಠ

Tags

Related Articles

Close