ಪ್ರಚಲಿತ

ಇಂದಿಗೆ 25 ವರ್ಷಗಳ ಹಿಂದೆ ಅಯೋಧ್ಯದಲ್ಲಿ ನಡೆದದ್ದು ಬರೀ ಬಾಬರಿ ಮಸೀದಿಯ ಧ್ವಂಸವಲ್ಲ!

ಡಿಸೆಂಬರ್ 6 ಎಂದರೆ ಮೈ ರೋಮಾಂಚನವಾಗುತ್ತೆ!!

ಸತತವಾಗಿ ಹಿಂದೂ ಧರ್ಮವನ್ನ ಹಿಂದುಗಳನ್ನ ಮಟ್ಟ ಹಾಕಿ ಇಸ್ಲಾಮಿನ ಅಧಿಪತ್ಯ ಭಾರತದಲ್ಲೂ ಸ್ಥಾಪಿಸಿ ಭಾರತವನ್ನ ಘಜವಾ ಎ ಹಿಂದ್ ಮಾಡಲು ಮುಸಲ್ಮಾನ ಆಕ್ರಮಣಕಾರರು ನಡೆಸಿದ ಆಕ್ರಮಣ, ಅತ್ಯಾಚಾರ, ಬಲವಂತದ ಮತಾಂತರ ಅಷ್ಟಿಷ್ಟಲ್ಲ.

ಇಸ್ಲಾಮಿನಲ್ಲಿ ಹೇಳುವ ಪ್ರಕಾರ ಈ ಭೂಮಿಯ ಮೇಲಿರುವ ಎರಡೇ ದೇಶಗಳು, ಒಂದು ದಾರುಲ್ ಇಸ್ಲಾಂ ಮತ್ತೊಂದು ದಾರುಲ್ ಹರಬ್ .

ದಾರುಲ್ ಇಸ್ಲಾಂ ಎಂದರೆ ಆ ದೇಶ ಇಸ್ಲಾಮೀಕರಣಗೊಂಡು ಅಲ್ಲಿ ಇಸ್ಲಾಮಿನ ಷರಿಯಾ ಕಾನೂನು ಜಾರಿಯಲ್ಲಿರೋದು.ದಾರುಲ್ ಹರಬ್ ಎಂದರೆ ಇಸ್ಲಾಮೇತರ ದೇಶ.

ಯಾವ ರಾಷ್ಟ್ರದಲ್ಲಿ ಇಸ್ಲಾಮಿನ ಅಧಿಪತ್ಯ ಇಲ್ಲವೋ ಅದನ್ನ ದಾರುಲ್ ಹರಬ್ ಅಂತ ಕರೀತಾರೆ, ಅಂತಹ ರಾಷ್ಟ್ರವನ್ನ ದಾರುಲ್ ಇಸ್ಲಾಂ ಆಗಿ ಬದಲಾಯಿಸೋದೇ ಭಾರತದ ಮೇಲೆ ಆಕ್ರಮಣವೆಸಗಿದ್ದ ಮುಸಲ್ಮಾನ ಆಕ್ರಮಣಕಾರರ ಉದ್ದೇಶವಾಗಿತ್ತು.

ವ್ಯವಸ್ಥಿತವಾಗಿ ಕ್ರೂರತನದಿಂದ ಮುಸ್ಲಿಂ ಆಕ್ರಮಣಕಾರರು ತಮ್ಮ ಇಸ್ಲಾಂ ನಿಷ್ಠೆಯನ್ನ ಸರಿಯಾಗಿಯೇ ನಿಭಾಯಿಸುತ್ತ ಬಂದಿದ್ದರು.

ಹಾಗಾಗಿಯೇ ಅಲ್ಲವೆ ಭಾರತ ಸರಿಸುಮಾರು 500 ವರ್ಷಗಳ ಕಾಲ ಇಸ್ಲಾಮಿನ ದಾಸ್ಯತೆಯಲ್ಲಿ ನರಳಿದ್ದು.

ಇಲ್ಲೊಂದು ಪ್ರಶ್ನೆ ನಿಮ್ಮ ತಲೆಯಲ್ಲಿ ಬರಬಹುದು,.500 ವರ್ಷಗಳ ಕಾಲ ಮುಸಲ್ಮಾನರು ಭಾರತವನ್ನ ಆಳಿದರೂ ಹಿಂದುಗಳು ಅದ್ಹೇಗೆ ಬಹುಸಂಖ್ಯಾತರಾಗಿ ಈ ದೇಶದಲ್ಲಿ ಉಳಿದಿದಾರೆ? ಅಂತ.

ಭಾರತವೆಂಬುದು ಈಗ ನಾವು ನೀವು ನೋಡುತ್ತಿರುವಷ್ಟೇ ಭೂಪ್ರದೇಶ ಹೊಂದಿದ್ದಾಗಿರಲಿಲ್ಲ.ಅಖಂಡ ಭಾರತವೆಂದರೆ ಅದರಲ್ಲಿ ಈಗಿನ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ ದೇಶಗಳೆಲ್ಲ ಕೂಡಿ ಅದೊಂದು ಭಾರತವಾಗಿತ್ತು.

500 ವರ್ಷಗಳ ಮುಸ್ಲಿಂ ಆಕ್ರಮಣಕಾರರ ದಾಳಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ನಮ್ಮ ಕೈ ಬಿಟ್ಟು ಹೋಗಿವೆ, ಈಗ ಅಲ್ಲಿರೋ ಜನಗಳೂ ಒಂದು ಕಾಲದಲ್ಲಿ ಹಿಂದುವಾಗಿದ್ದವರೇ ಮುಸಲ್ಮಾನರಾಗಿ ಮತಾಂತರವಾದವರು.

ಇಷ್ಟು ಭೂಭಾಗ ಕಳೆದುಕೊಂಡೂ ನಾವು ಭಾರತದಲ್ಲಿ ಬಹುಸಂಖ್ಯಾತರಾಗೇ ಉಳಿದಿದೀವಿ ಅನ್ನೋದು ನಮ್ಮ ಮೂರ್ಖತನವಷ್ಟೆ.

ಇರಲಿ ಇವತ್ತಿನ ವಿಶೇಷ ದಿನದ ಬಗ್ಗೆ ವಿವರಿಸಬೇಕಾದರೆ ಸ್ವಲ್ಪ ಇತಿಹಾಸದ ಬಗ್ಗೆ ಅರಿತುಕೊಂಡರೆ ಇಂದಿನ ದಿನದ ಶೌರ್ಯದ ಬಗ್ಗೆ ಅರ್ಥ ಮಾಡಿಕೊಳ್ಳಬಹುದಂತ ಅದನ್ನ ತಿಳಿಸಿದೆ.

ಮೇಲೆ ತಿಳಿಸಿದ ಇಸ್ಲಾಮಿಕ್ ಆಕ್ರಮಣ ಮಾಡೋಕೆ ಭಾರತಕ್ಕೆ ಬಂದ ವಿದೇಶಿ ಮುಸ್ಲಿಂ ಆಕ್ರಮಣಕಾರರಲ್ಲಿ ಬಾಬರ್ ಎಂಬ ಮತಾಂಧನೂ ಒಬ್ಬನಾಗಿದ್ದ.

ಬಾಬರ್ ಎಂಬ ಆ ವಿದೇಶಿ ಮುಸಲ್ಮಾನ ಆಕ್ರಮಣಕಾರ ಭಾರತದ ಮನದಲ್ಲಿ ನೆಲೆಸಿರುವ, ಭಾರತದ ಅಸ್ಮಿತೆಯನ್ನ ರಾಮನಲ್ಲಿ ಕಾಣುವ ಭವ್ಯ ರಾಮಮಂದಿರವನ್ನ ಆಯೋಧ್ಯೆಲ್ಲಿ ಧ್ವಂಸಗೊಳಿಸಿ ಅದೇ ಮಂದಿರದ ಅವಶೇಷಗಳಿಂದ ಮಸ್ಜಿದ್ ಒಂದನ್ನ ಕ್ರಿ.ಶ.1528 ರಲ್ಲಿ ನಿರ್ಮಿಸಿಯೇ ಬಿಟ್ಟಿದ್ದ.

ವಿದೇಶಿ ಆಕ್ರಮಣಕಾರನಿಂದ ರಾಮನ ಮಂದಿರ ಧ್ವಂಸವಾಗಿ ತನ್ನ ನೆಲದಲ್ಲೇ ಶ್ರೀರಾಮಚಂದ್ರ ಪ್ರಭು ಅನಾಥನಾಗಿದ್ದ. ವಿದೇಶಿ ಮುಸ್ಲಿಂ ಆಕ್ರಮಣಕಾರನ ಕಳಂಕದ ಢಾಂಚಾ ಕೆಡವಲು ಭಾರತದಲ್ಲಿ ಪ್ರತಿಯೊಬ್ಬ ಹಿಂದೂವಿನ ಮನ ತುಡಿಯುತ್ತಿತ್ತು.

ಸತತ 464 ವರ್ಷಗಳ ಸಂಘರ್ಷದ ಅಧ್ಯಾಯಕ್ಕೆ ಕೊನೆಗೂ 1992 ಡಿಸೆಂಬರ್ 6 ಕ್ಕೆ ತೆರೆ ಬಿದ್ದಿತ್ತು. ಲಕ್ಷಾಂತರ ರಾಮಭಕ್ತ ಕರಸೇವಕರಿಂದ ಕೊನೆಗೂ ಬಾಬ್ರಿ ಮಸೀದಿಯೆಂಬ ಕಳಂಕದ ಕಟ್ಟಡ ಧ್ವಂಸವಾಗೇ ಬಿಟ್ಟಿತ್ತು.

ಯೆಸ್ ದೇಶಾದ್ಯಂತ ಕೋಟ್ಯಂತರ ಹಿಂದುಗಳಿಂದ ರಾಮನಾಮ ಜಪ ಶುರುವಾಗಿ ಅಯೋಧ್ಯೆಯಲ್ಲಿದ್ದ ಕಳಂಕ ಕಟ್ಟಡ ಧರೆಗುರುಳಿದ ದಿನವನ್ನೇ ಇಂದು ಬಹುಸಂಖ್ಯಾತ ಹಿಂದುಗಳು ವಿಜಯ್ ದಿವಸ್ ಅಂತ ಆಚರಿಸಲು ಕಾರಣವಾಗಿರೋದು.

ಇದಕ್ಕಾಗಿ ಭಾರತದ ಸ್ವಾತಂತ್ರ್ಯಾನಂತರ ನಡೆದ ಹೋರಾಟ ಅಷ್ಟಿಷ್ಟಲ್ಲ.

ವಿಶ್ವಹಿಂದೂಪರಿಷತ್ತಿನ ಮಾರ್ಗದರ್ಶನ, ಸಂಘಶಕ್ತಿಯ ಪ್ರೇರಣೆ, ಭಜರಂಗದಳ, ದುರ್ಗವಾಹಿನಿಯ ಜನ್ಮ, ತರುಣ ಶಕ್ತಿಯ ಹೊಸ ಶಕೆ ಆರಂಭವಾಗಲು ಈ ಆಂದೋಲನ ಕಾರಣವಾಯಿತೆಂದರೆ ತಪ್ಪಾಗಲಾರದು.

ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಸಾಧುಸಂತರು ಅಖಾಡಕ್ಕಿಳಿದರು, ಮಠಾಧೀಶರ ಸಂಕಲ್ಪ, ಉಪವಾಸ ಸತ್ಯಾಗ್ರಹ, ತ್ಯಾಗ, ಬಲಿದಾನ, ಜನ್ಮಭೂಮಿ ಮುಕ್ತಿಗೆ ರಾಷ್ಟ್ರೀಯ ಸ್ವರೂಪ, ರಾಮಭಕ್ತರಿ೦ದ ಹೋರಾಟಕ್ಕೆ ನಾಂದಿ, ದೇವಸ್ಥಾನದ ಬೀಗ ತೆರೆಯೋದಕ್ಕೆ ಆಂದೋಲನ ಶುರುವಾಗಿದ್ದು.

ರಾಮಮಂದಿರದ ಬಗ್ಗೆ ದೇಶಾದ್ಯಂತ ರಣಘೋಷ ಮುಂದುವರೆದಿತ್ತು. ದೇಶದ್ಯಂತ ರಾಮ ಜಾನಕಿ ರಥಯಾತ್ರೆ ಆರಂಭವಾದವು, ಮನೆ ಮನೆಗಳಲ್ಲಿ ಶ್ರೀರಾಮ ಶಿಲಾ ಪೂಜನವಾಗಲು ಪ್ರಾರಂಭ, ರಾಮಜ್ಯೋತಿ, ರಾಮ ಪಾದುಕೆ ಪೂಜನ,ರಾಮ ಧ್ವಜ ಪೂಜನ, ರಾಮ ಪ್ರಸಾದ, ಸಂತಯಾತ್ರೆ ಆರಂಭವಾಗಿಬಿಟ್ಟವು

ಲಾಲ್ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ದೇಶಾದ್ಯಂತ ರಥಯಾತ್ರೆ ಶುರುವಾಯಿತು, ಕರಸೇವಕರ ದಂಡು ಆಯೋಧ್ಯೆಯತ್ತ ಮುಖ ಮಾಡಿ ನಿಂತು ಬಿಟ್ಟಿತು.

ಅವರೆಲ್ಲರ ಚಿತ್ತ ಹಾಗು ಕೇಂದ್ರ ಬಿಂದುವಾಗಿ ಕಾಣುತ್ತಿದ್ದ ಒಂದೇ ಜಾಗ ಅದು ಶ್ರೀರಾಮ ಪ್ರಭುವಿನ ಜನ್ಮಸ್ಥಳವಾದ ಆಯೋಧ್ಯೆ.

ಈ ಆಂದೋಲನವನ್ನ ಹತ್ತಿಕ್ಕಲು 1990 ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್ ಯಾದವ್ ಟೊಂಕ ಕಟ್ಟಿ ಮುಸಲ್ಮಾನರ
ಬಾಬ್ರಿ ಮಸೀದಿಯ ಪರವಾಗಿ ನಿಂತುಬಿಟ್ಟಿದ್ದ.

ಇದರಿಂದ ಕರಸೇವಕರ ಬಂಧನವಾಯ್ತು, ಉತ್ತರ ಪ್ರದೇಶಕ್ಕೆ ಹೋಗುವ ರೈಲು ತಡೆಯಾಯ್ತು. ದೇಶವೇ ಅತೀ ದೊಡ್ಡ ಬಂಧಿಖಾನೆಯಾಗಿ ಉತ್ತರಪ್ರದೇಶ, ದೇಶದಲ್ಲಿ ಪ್ರಥಮ ಬಾರಿಗೆ ಕರ್ಫ್ಯೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ರಾಷ್ಟ್ರದಾದ್ಯಂತ ಜನಜಾಗೃತಿ, ಪ್ರತಿಭಟನೆ ಸತ್ಯಗ್ರಹ ನಡೆದವು.

ಇತಿಹಾಸದ ಸುಧೀರ್ಘ ಸಂಘರ್ಷದ ಹೋರಾಟದ ಭಾಗವಾದ ಆಯೋಧ್ಯೆಯ ಹೋರಾಟವನ್ನ ಹತ್ತಿಕ್ಕಲು 1990 ರಲ್ಲಿ ಮುಲಾಯಂ ಸಿಂಗ್ ಯಾದವ್
ನಿಂದ ನಿಷೇಧಾಜ್ಞೆ ಹೇರಿ “ಒಂದು ಹಕ್ಕಿಯನ್ನೂ ಇಲ್ಲಿ ಹಾರಲು ಬಿಡುವುದಿಲ್ಲ” ಅಂತ ಹೇಳಿಬಿಡುತ್ತಾನೆ.

ಆದರೆ ಧರ್ಮಾಭಿಮಾನಿ ಹಿಂದುಗಳು ಇದಕ್ಕೆ ಸೊಪ್ಪು ಹಾಕುವರೇ? ರಾಮಭಕ್ತರಿಂದ ಮುಗಿಲು ಮುಟ್ಟಿದ ಘೋಷಣೆಗಳನ್ನ ಕಂಡ ಮುಲಾಯಂ ಇದನ್ನ ಒಂದು ಸವಾಲಾಗಿ ಸ್ವಿಕರಿಸಿ, ಅರೆ ಮಿಲಿಟ್ರಿ ಪಡೆ ಸೈನ್ಯ, ಬಿ.ಎಸ್.ಎಫ್ ರಕ್ಷಣಾ ಪಡೆ, ವಿವಿಧ ರಾಜ್ಯದ ಪೊಲೀಸ್ ಪಡೆಯ ಸರ್ಪಗಾವಲನ್ನು ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಕಿಬಿಟ್ಟ

ಆದರೆ ರಾಮಭಕ್ತರು ಅವೆಲ್ಲವನ್ನೂ ಬೇಧಿಸಲು ಮುಂದಾದಾಗ ಪೋಲಿಸರಿಂದ ಗೋಲಿಬಾರ್ ಆದೇಶ ನೀಡಿದ ಮುಲಾಯಂ ಸಿಂಗ್ 20 ಜನ ರಾಮಭಕ್ತರನ್ನ ಕೊಲ್ಲಿಸಿ ಹೇಳ್ತಾನೆ “20 ಅಲ್ಲ 50 ಜನರನ್ನ ಕೊಲ್ಲಿಸುತ್ತಿದ್ದೆ”

ಕೊನೆಗೂ ತನ್ನ ಹಿಂದೂ ವಿರೋಧಿ ನೀತಿಯಿಂದ ಮುಲಾಯಂ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಹೋರಾಟ ನಿಲ್ಲಲಿಲ್ಲ 1992 ರಲ್ಲಿ ಮತ್ತೆ ಕರಸೇವೆ ದೇಶಾದ್ಯಂತ ಆರಂಭವಾಗಿ ಕಳಂಕ ಕಟ್ಟಡ ಧ್ವಂಸವಾಗಿ ಅಲ್ಲಿ ಭಗವಾ ಧ್ವಜ ಹಾರಾಡುತ್ತಿತ್ತು.

ಕೊನೆಗೂ ಶ್ರೀರಾಮಪ್ರಭುವಿನ ಜನ್ಮಸ್ಥಳದಲ್ಲಿದ್ದ ಕಳಂಕವನ್ನು ಲಕ್ಷಾಂತರ ರಾಮಭಕ್ತರು ಅಳಿಸಿ ಹಾಕಿದ್ದರು.

ಇದೇ ದಿನದಂದು ಇಷ್ಟೆಲ್ಲ ಐತಿಹಾಸಿಕ ಘಟನೆಗಳು ಘಟಿಸಿದ್ದರಿಂದ ಈ ದಿನವನ್ನ ವಿಜಯ್ ದಿವಸ್ ಅಂತಲೂ ಧರ್ಮಾಭಿಮಾನಿಗಳು ಆಚರಿಸುತ್ತಾರೆ.

ಕಳಂಕ ಕಟ್ಟಡವೇನೋ ಧ್ವಂಸಗೊಂಡಿತು ಆದರೆ ಈಗಲೂ ಶ್ರೀರಾಮಚಂದ್ರ ಪ್ರಭು ಮಾತ್ರ ಚಿಕ್ಕ ಗುಡಿಸಲಿನಲ್ಲಿ ಅನಾಥನಾಗಿ ವಿರಾಜಮಾನನಾಗಿದ್ದಾನೆ.

ಅತ್ತ ಗುಜರಾತಿನ ಚುನಾವಣಾ ಪ್ರಚಾರಕ್ಕಾಗಿ ದೇವಸ್ಥಾನಗಳಿಗೆ ಟೆಂಪಲ್ ರನ್ ಮಾಡಿ ತಾನೊಬ್ಬ ಜನಿವಾರ ಧರಿಸುವ ಬ್ರಾಹ್ಮಣ ಅಂತ ಶಿವಭಕ್ತನ ಪೋಸ್ ಕೊಡುತ್ತೀರೋ ರಾಹುಲ್ ಗಾಂಧಿಗೆ ಮಾತ್ರ ಶ್ರೀರಾಮನ ನೆನಪೇ ಆಗಲಿಲ್ಲ

ಅಂದು ಮುಲಾಯಂಸಿಂಗ್ ಅಯೋಧ್ಯೆಗೆ ರಾಮಭಕ್ತರನ್ನ ತಡೆದಿದ್ದ ಇಂದು ಕಾಂಗ್ರೆಸ್ ತನ್ನ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟಿನಿಂದ ರಾಮಮಂದಿರಕ್ಕೆ ಅಡ್ಡಿಯಾಗಿ ನಿಂತಿದ್ದಾರೆ.

ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡದೇ ಹೋದರೆ ಇತಿಹಾಸ ಮರುಕಳಿಸಿ ತಮ್ಮ ಸರ್ವನಾಶಕ್ಕೆ ತಾವೇ ಕಾರಣರಾಗುತ್ತಾರೆ ಅನ್ನೋದು ಹಿಂದೂ ವಿರೋಧಿಗಳು ಈಗಲೂ ಅರ್ಥೈಸಿಕೊಳ್ಳಿತ್ತಿಲ್ಲ.

ಹಾಗಂತ ಧರ್ಮಾಭಿಮಾನಿಗಳೂ ಸುಮ್ಮನಿಲ್ಲ, ಮಂದಿರ ನಿರ್ಮಾಣದ ಕುರಿತಾದ ಎಲ್ಲ ಕೆಲಸಗಳೂ ನಡೀತಿವೆ, ಆದಷ್ಟು ಬೇಗ ಮಂದಿರ
ನಿರ್ಮಾಣವಾಗಿ ಭವ್ಯ ಮಂದಿರದಲ್ಲಿ ಶ್ರೀರಾಮಪ್ರಭು ವಿರಾಜಮಾನನಾಗಿ ಕೂತಿರುವ ದೃಶ್ಯ ನೋಡುವ ದಿನಗಳು ಬಹಳ ದೂರವಿಲ್ಲ.

ಜೈ ಶ್ರೀರಾಮ್!!!

– Vinod Hindu Nationalist

Tags

Related Articles

Close