ಪ್ರಚಲಿತ

ಇಂದಿರೆಯ ಮಗ ಸಂಜಯನಾದರೂ, ಸಂಜಯನ ಅಪ್ಪ ಫಿರೋಜ ಗಾಂಢೀಯಲ್ಲ!!

ಅಚ್ಚರಿಯಾಯಿತಾ?! ಇಷ್ಟು ದಿನವೂ ನಮಗೆ ಗೊತ್ತಿರುವುದೇ ಇತಿಹಾಸ ಎಂದರೆ ತಪ್ಪಾಗಿ ಹೋಗುತ್ತದೆ !! ಅದರಲ್ಲಿಯೂ, ಎಂತೆಂತಹ ಜನರಿಗೆ ನಮ್ಮ ದೇಶದ ಅಧಿಕಾರವನ್ನು ಕೊಟ್ಟಿದ್ದೇವೆ ಎಂಬುದನ್ನು ಒಮ್ಮೆ ಹಿಂದಿರುಗಿ ನೋಡಬೇಕಾಗಿದೆ!

ಇಂದಿರಾ ಎಂಬ ಭಾರತದ ಉಕ್ಕಿನ ಮಹಿಳೆ!

ಬಹುಷಃ ‌‌‌‍‍ಭಾರತದಲ್ಲಿ ತೀರಾ ವಿವಾದಾತ್ಮಕವಾದ ರಾಜಕೀಯ ಪಕ್ಷ ಮತ್ತು ರಾಜಕೀಯ ಕುಟುಂಬ ವೆಂದರೆ ಅದು ಕಾಂಗ್ರೆಸ್ ಮತ್ತು ನೆಹರೂ ಕುಟುಂಬ! ಪದೇ ಪದೇ , ಯಾಕೆ ಕಾಂಗ್ರೆಸ್ಸಿನ ವಿಷಯವನ್ನೇ ಬರೆಯುತ್ತೇವೆಂದರೆ ಯೋಚಿಸಿ; ಮೋತಿಲಾಲ್ ನೆಹರೂವಿನಿಂದ ಇವತ್ತಿನ ರಾಹುಲ್ ಗಾಂಧಿಯ ತನಕ ಅದೆಷ್ಟು ಕೊಳ್ಳೆ ಹೊಡೆದಿರಬಹುದೆಂದು!! ಎಷ್ಟು ಬರೆದರೂ ಮುಗಿಯದ ಪುರಾಣವೆಂದರೆ ಅದು ಕೇವಲ ನೆಹರೂ ಕುಟುಂಬ!!

ಇಷ್ಟಾದರೂ ಸಹ, ಭಾರತೀಯರೆನ್ನಿಸಿಕೊಂಡವರು ಯಾವುದೇ ಸಿದ್ಧಾಂತಗಳನ್ನೇ ಪಾಲಿಸದ ಪಕ್ಷವನ್ನು ಸಮರ್ಥಿಸಿಕೊಳ್ಳುವಾಗ ಅಚ್ಚರಿಯೆನಿಸುತ್ತದೆ!

Related image

ಬಹುಷಃ ನಮಗೆಲ್ಲ ಗೊತ್ತಿರುವುದು ಇಂದಿರಾ ಗಾಂಧಿಯ ರಾಜಕೀಯ ಮೊಗವಷ್ಟೇ!! ಆದರೆ, ವೈಯುಕ್ತಿಕ ಬದುಕಿನಡೆ ನೋಡಿದಾಗ, ಇಂದಿರಾ ಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವುದಕ್ಕೆ ಸಾಧ್ಯವೇ ಇಲ್ಲ! ಯಾವತ್ತೂ, ಯಾವುದೇ ಸಮಾಜದಲ್ಲಾಗಲಿ, ಒಬ್ಬ ವ್ಯಕ್ತಿಯ ಗೌರವ ಘನತೆ ನಿಂತಿರುವುದು ಆತ ವೈಯುಕ್ತಿಕವಾಗಿ ಹೇಗಿದ್ದಾನೆ ಎಂಬುವುದರ ಮೂಲಕವೇ! ಗಮನಿಸಿ ಬೇಕಾದರೆ! ಭಾರತವನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗ ಬಯಸುವವರು ನೆಹರೂವನ್ನು ಯಾವುದೇ ಕಾರಣಕ್ಕೂ ಒಪ್ಪುವುದೇ ಇಲ್ಲ! ರಾಜಕೀಯವಾಗಿ ನೆಹರೂ ಹೇಗಿದ್ದರೆಂದರೆ “ಎಡ್ವಿನಾ” ಳ ಹೆಸರೊಂದು ತಳುಕು ಹಾಕಿಕೊಳ್ಳುತ್ತದೆ!

ಅದೇ ರೀತಿ ಮಗಳದ್ದೂ ಸಹ! ಎಮ್ ಓ ಮಥಾಯ್, ಧೀರೇಂದ್ರ ಬ್ರಹ್ಮಚಾರಿ, ಇನ್ನೂ ಇತರೆ ಎಂದು ಹೇಳಬಹುದೇನೋ!! ಆದರೆ, ಎಲ್ಲದಕ್ಕಿಂತ ಒಮ್ಮೆ ತೀರಾ ಎನ್ನುವಷ್ಟು ಆಘಾತವೆನಿಸುವುದು ಸಂಜಯ್ ಗಾಂಧಿಯ ಜನನದ ಬಗ್ಗೆ!

ರಾಜೀವ್ ಗಾಂಧಿ ಹುಟ್ಟಿದ ನಂತರ, ಇಂದಿರಾ ಮತ್ತು ಫಿರೋಜ್ ಗಾಂಢಿ ಇಬ್ಬರೂ ಬೇರೆ ಬೇರೆಬೇರೆಯಾಗಿಯೇ ವಾಸಿಸುತ್ತಿದ್ದರು ಎಂಬುದು ಗೊತ್ತಿರುವ
ಸಂಗತಿ! ಸಹವಾಸವೇ ಬೇಡವೆಂದು ಇಬ್ಬರೂ ಬೇರೆಯಾಗಿದ್ದರೂ ಸಹ, ವಿಚ್ಛೇಧನವನ್ನು ತೆಗೆದುಕೊಂಡಿರಲಿಲ್ಲ ಇಬ್ಬರೂ ಎನ್ನುವುದೂ ಗೊತ್ತಿದೆ! ಅಷ್ಟಾದರೂ, ಫಿರೋಜ್ ಗಾಂಢಿಯ ಸಾವಾದಾಗ, ಇಂದಿರಾ ನೊಂದು ತನ್ನ ಆತ್ಮೀಯ ಸ್ನೇಹಿತನಾದ ಮೊಹಮ್ಮದ್ ಯೂನಸ್ ಗೆ ಪತ್ರ ಬರೆದಿದ್ದರು ಎಂಬುದಷ್ಟೇ ನಮಗೆ ಗೊತ್ತಿರುವುದು!

ಕೆ.ಎನ್‌.ರಾವ್ ‍ಬರೆದಿರುವ “The Nehru Dynasty (ISBN 10:8186092005)” ಎಂಬ ಪುಸ್ತಕದಲ್ಲಿ, ಲೇಖಕರು ಉಲ್ಲೇಖಿಸಿರುವ ಪ್ರಕಾರ, ಇಂದಿರಾಳ ಎರಡನೇ ಮಗನಾದ ಸಂಜಯ್ ಗಾಂಧಿಯ ಅಪ್ಪ ಫಿರೋಜ್ ಗಾಂಢಿಯಲ್ಲ!!! ಸಂಜಯ್ ಗಾಂಧಿ, ಇಂದಿರಾಳ ಇನ್ನೊಬ್ಬ ಮುಸಲ್ಮಾನ ಪ್ರಿಯಕರನಾದ ಮೊಹಮ್ಮದ್ ಯೂನಸ್ ಎಂಬುವವರಿಗೆ ಜನಿಸಿದವರು!!

ಅಚ್ಚರಿಯೆಂದರೆ ಸಂಜಯ್ ಗಾಂಧಿಯ ಮದುವೆಯ ಸಮಾರಂಭ ನಡೆದಿದ್ದೂ ಸಹ ಮೊಹಮ್ಮದ್ ಯೂನಸ್ ನ ಮನೆಯಲ್ಲಿಯೇ!! ಮಹಮ್ಮದ್ ಯೂನಸ್ ರಿಗೆ ಸಂಜಯ ಗಾಂಧಿ ಮುಸಲ್ಮಾನ ಹುಡುಗಿಯನ್ನು ವರಿಸಲಿ ಎಂಬ ಆಶಯವಿದ್ದುದರಿಂದ ಸಂಜಯ್ ಗಾಂಧಿ ಸಿಖ್ಖ್ ಹೆಣ್ಣು ಮಗಳಾದ ಮೇನಕಾರನ್ನು ವರಿಸುವುದಕ್ಕೆ ಅಸಮಾಧಾನ ತೋರಿದ್ದರು ಮೊಹಮ್ಮದ್ ಯೂನಸ್ !

ತದನಂತರ, ಸಂಜಯ ಗಾಂಧಿ ವಿಮಾನಾಪಘಾತದಲ್ಲಿ ತೀರಿದಾಗಲೂ ಸಹ, ಎಲ್ಲರಿಗಿಂತ ಜಾಸ್ತಿ ಅತ್ತಿದ್ದೂ ಸಹ ಮೊಹಮ್ಮದ್ ಯೂನಸ್ ರೇ ಹೊರತು ಬೇರೆ ಯಾರೂ ಅಲ್ಲ ಎನ್ನುತ್ತಾರೆ ಲೇಖಕರು!!

ಯೂನಸ್ ಬರೆದ ” Persons, Passions and Politics (ISBN-10: 0706910176)” ಎಂಬ ಪುಸ್ತಕದಲ್ಲಿ, “ಮುಸಲ್ಮಾನ ಸಂಪ್ರದಾಯದ ಪ್ರಕಾರ ಸಂಜಯ್ ಗಾಂಧಿಗೆ ಬಸುನ್ನತ್ ಆಗಿತ್ತು” ಎಂಬುದನ್ನು ಉಲ್ಲೇಖಿಸಿದ್ದಾರೆ. ಅದಲ್ಲದೇ, ಸಂಜಯ್ ಗಾಂಧಿ ತನ್ನ ತಾಯಿಯ ವಿರುದ್ಧವೇ ತಿರುಗಿ ಬಿದ್ದದ್ದೂ ಇದೇ ಕಾರಣಕ್ಕಾಗಿ! ತನ್ನ ನಿಜವಾದ ತಂದೆ ಯಾರು ಎನ್ನುತ್ತಲೇ ಇಂದಿರಾಳಿಗೆ ಬ್ಲಾಕ್ ಮೇಲ್ ಪ್ರಾರಂಭಿಸಿದ್ದ ಸಂಜಯ್ ಗಾಂಧಿ, ಅಣ್ಣನಾದ ರಾಜೀವ್ ಗಾಂಧಿಯನ್ನೂ ಬದಿಗೆ ಸರಿಸಿ ರಾಜಕೀಯದ ಹಿಡಿತವನ್ನು ಪರೋಕ್ಷವಾಗಿ ತೆಗೆದುಕೊಂಡಿದ್ದರು ಎನ್ನುತ್ತಾರೆ ಯೂನಸ್!

Related image

ತೀರಾ ಅನುಮಾನಾಸ್ಪದ ನಡೆಗಳೂ ಇದ್ದವು ಸಂಜಯ್ ಗಾಂಧಿಯ ಹತ್ಯೆಯಲ್ಲಿ!

ಯಾವಾಗ ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ತೀರಿರುವ ವಿಷಯ ಇಂದಿರಾರಿಗೆ ತಿಳಿಯಿತೋ, ಮೊದಲು ಇಂದಿರಾ ಕೇಳಿದ ಪ್ರಶ್ನೆ, “ಸಂಜಯ್ ನ ಕೀ ಮತ್ತು ಕೈಗಡಿಯಾರ ಎಲ್ಲಿದೆ?!” ಎಂದು! ನೆಹರೂ ಕುಟುಂಬಕ್ಕೆ ಸಂಬಂಧಪಟ್ಟ ರಹಸ್ಯ ವಿಚಾರವೇನಾದರೂ ಅದರೊಳ ಅಡಗಿತ್ತೇ ಅಥವಾ ಸಂಜಯ್ ಗಾಂಧಿಯ ಸಾವಿನ ಬಗ್ಗೆ ಅದೇ ಸಾಕ್ಷಿಯಾಗು ಪರಿಣಮಿಸುತ್ತಿತ್ತೇ?! ಗೊತ್ತಿಲ್ಲ!

ವಿಮಾನಾಪಘಾತವಾಗಲು ಸಾಧ್ಯವೇ ಇರಲಿಲ್ಲ!

ಅದು ಹೊಸದಾದ ವಿಮಾನ! ಆಗಷ್ಟೇ ಎಲ್ಲವೂ ಸರಿಯಿದೆಯೇ ಎಂದು ಪರೀಕ್ಷಿಸಿಯೇ ಸಂಜಯ್ ಗಾಂಧಿಯನ್ನು ಕೂರಿಸಿ ಬೀಳ್ಕೊಡಲಾಗಿತ್ತು! ಆದರೂ ವಿಮಾನಾಪಘಾತದಿಂದ ಸಂಜಯ್ ಮೃತಪಟ್ಟರು! ವಿಮಾನದಲ್ಲಿ ಇಂಧನ ಖಾಲಿಯಾಗಿತ್ತೆಂದು ಅಭಿಪ್ರಾಯ ಪಟ್ಟರು! ನಂತರದ ವರದಿ
ನೋಡಿದಾಗ, ವಿಮಾನದಲ್ಲಿ ಬೇಕಾದಷ್ಟು ಇಂಧನವಿತ್ತು! ಆದರೂ ಹೇಗಾಯಿತು ವಿಮಾನಾಪಘಾತ? ವಿಚಾರಣೆ ನಡೆಸಬೇಕೆನ್ನುವಾಗ ಸ್ವತಃ ಇಂದಿರಾ ಗಾಂಧಿಯೇ ವಿಚಾರಣೆಗೆ ತಡೆಯೊಡ್ಡಿ ಶಾಶ್ವತವಾಗಿ ವರದಿಯನ್ನೇ ಅಳಿಸಿ ಹಾಕಿದರು!

ಹಾಗಾದರೆ ಸಂಜಯ್ ಗಾಂಧಿಯದು ಸಾವಾಗಿತ್ತೋ ಅಥವಾ ಹತ್ಯೆಯಾಗಿತ್ತೋ?! ಯೋಚಿಸಲೇ ಬೇಕಿದೆ!

ಸಂಜಯ್ ಗಾಂಧಿ ಎಂಬುವುದೂ ಸಹ ನಿಜ ನಾಮವಲ್ಲ!!

ಹಾ! ಅಸಲಿಗೆ ಸಂಜಯ್ ಎನ್ನುವುದೂ ಸಹ ನಿಜನಾಮವಲ್ಲ!! ಸಂಜಯ್ ರ ಅಸಲಿ ನಾಮಧೇಯ ಸಂಜೀವ ಗಾಂಧಿ! ಅಣ್ಣನ ಹೆಸರಾದ ರಾಜೀವ್ ಗಾಂಧಿಗೆ ಪ್ರಾಸಬದ್ಧವಾಗಿಟ್ಟಿದ್ದ ಹೆಸರು ಸಂಜೀವ! ಆದರೆ, ಯುನೈಟೆಡ್ ಕಿಂಗ್ ಡಮ್ ನಲ್ಲಿ ಕಾರು ಕಳವಿನ ಆರೋಒದ ಮೇಲೆ ಬ್ರಿಟಿಷ್ ಪೋಲಿಸರು ಸಂಜಯ್ ಗಾಂಧಿಯನ್ನು ಬಂಧಿಸಿ, ಪಾಸ್ ಪೋರ್ಟನ್ನು ವಶ ಪಡಿಸಿಕೊಂಡರು!! ಆಗ, ಇಂದಿರಾ ಗಾಂಧಿಯ ನಿರ್ದೇಶನದ ಮೇರೆಗೆ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ಕೃಷ್ಣಾ ಮೆನನ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸಂಜೀವ ನೆಂಬ ಹೆಸರನ್ನು ಸಂಜಯ್ ನನ್ನಾಗಿ ಬದಲಾಯಿಸಿ ಬೇರೆ ಪಾಸ್ ಪೋರ್ಟಿನ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟಿದ್ದರು! ತದನಂತರ, ಸಂಜೀವ ಗಾಂಧಿ ಸಂಜಯ ನಾಗಿ ಗುರುತಿಸಿಕೊಂಡಿದ್ದು!!!

ವಾಸ್ತವವಾಗಿ, ಭಾರತದ ರಾಜಕೀಯ ವ್ಯವಸ್ಥೆಯನ್ನೇ ಹಾಳುಗೆಡವಿದ ನೆಹರೂ ಕುಟುಂಬಕ್ಕೆ ನಿಜಕ್ಕೂ ದೇಶದ ಅಭಿವೃದ್ಧಿಗಿಂತ ಕಾಳಜಿ ವಹಿಸಿಬೇಕಿದ್ದದ್ದು ಬಹಳವೇ ಇತ್ತು ಎನ್ನುವುದೂ ನಿಜವೇ! ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತ ವೈಭೋಗದ ಬದುಕು ನಡೆಸಿರಲಿಲ್ಲ, ಬದಲಿಗೆ ದಾಸ್ಯದ ಸ್ಥಿತಿಯ ಇನ್ನೊಂದು ರೂಪದಲ್ಲಿ ನರಕವನ್ನನುಭವಿಸಿತ್ತಷ್ಟೇ!

Image result for indira gandhi with sanjay gandhi

– ಅಜೇಯ ಶರ್ಮಾ

Tags

Related Articles

Close