ಅಂಕಣಪ್ರಚಲಿತ

ಸಿದ್ಧರಾಮಯ್ಯ ಬಗೆಗಿನ ಅಭಿಮಾನದ ಮೇರೆಗೆ ಸ್ವತಂತ್ರ ದಿನವನ್ನಾಚರಿಸಲಿದೆಯೇ ಕರ್ನಾಟಕದ ಮದರಾಸಗಳು?!

ತಮ್ಮ ಸಂಸ್ಥೆಗಳ ಅಭಿವೃದ್ದಿಗೆ ಅನುದಾನವನ್ನು ಸರಕಾರ ಕೊಡಬೇಕು. ಸರಕಾರದ ಬೊಕ್ಕಸವನ್ನು ತುಂಬಿಸುವುದು ಭರತಖಂಡದ ಹೆಮ್ಮೆಯ ಪ್ರಜೆಗಳು. ಅದಕ್ಕೆ ಪ್ರತಿಯಾಗಿ ಆ ಸಂಸ್ಥೆಗಳು ರಾಷ್ಟ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದರ ಮೂಲಕ ಋಣವನ್ನು ತೀರಿಸುವ ಪ್ರಯತ್ನ ಮಾಡಬಹುದು. ಆದರೆ ಇಂದು ಹಾಗೆ ಆಗುತ್ತಿಲ್ಲವೆಂಬುದೇ ವಿಪರ್ಯಾಸ.

ಇದನ್ನೆಲ್ಲಾ ಪರಿಗಣಿಸಿದ ಉತ್ತರಪ್ರದೇಶ ಸರಕಾರ ಎಲ್ಲಾ ಮದರಾಸಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಬೇಕಾಗಿ ಆದೇಶಿಸಿದೆ.
ಎಲ್ಲ ಮದರಾಸಗಳಲ್ಲಿ ರಾಷ್ಟ್ರಧ್ವಜವನ್ನೇರಿಸಿ, ಹುತಾತ್ಮರಿಗೆ ಗೌರವವನ್ನು ಸಲ್ಲಿಸಬೇಕೆಂದು ನಿರ್ದೇಶಿಸಿದೆ. ಅಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿ, ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಬೇಕಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ ಕಾರ್ಯಕ್ರಮದ ವಿವರಗಳನ್ನು ಸರಕಾರಕ್ಕೆ ಕಳುಹಿಸಬೇಕೆಂದೂ ಹೇಳಿದೆ.

ಇಂತಹ ಆದೇಶವನ್ನು ಉತ್ತರಪ್ರದೇಶ ರಾಜ್ಯ ಹಾಲಿ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ಹೊರಡಿಸಿದ್ದಾರೆ. ರಾಷ್ಟ್ರನಿರ್ಮಾಣದ ಈ ಕಾರ್ಯಕ್ಕೂ ಕೂಡ ಅನೇಕ ವಿರೋಧ ವ್ಯಕ್ತವಾಗಿರುವುದೇ ವಿಪರ್ಯಾಸ.

ಹುತಾತ್ಮರನ್ನು ಗೌರವಿಸುವ ಅಗತ್ಯ ಇಲ್ಲವೇ?

ನಾವು ಈ ರಾಷ್ಟ್ರದಲ್ಲಿ ಪ್ರತಿಕ್ಷಣ ನೆಮ್ಮದಿಯಿಂದ ಬದುಕುತ್ತಿದ್ದರೆ ಅದಕ್ಕೆ ಮೂಲ ಕಾರಣವೇ ಲಕ್ಷಾಂತರ ದೇಶಭಕ್ತರು ತಮ್ಮ ಪ್ರಾಣವನ್ನು ನಾಡಿನ ರಕ್ಷಣೆಗೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಫಲ. ಆದರೆ ಅವರನ್ನೂ ನೆನಪಿಸಬೇಕಾಗಿದೆಂದು ಒಂದು ಸರಕಾರ ಹೇಳಿ ಜನರನ್ನು ಎಚ್ಚೆರಿಸಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಸ್ವತಂತ್ರ ರಾಷ್ಟ್ರ ಯಾವ ಸ್ಥಿತಿಗೆ ಸಾಗುತ್ತಿದೆ?

ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯದಿನದಂದು ಅರೋಹಣ ಮಾಡುವುದು ಅವರ ನೆನಪಿಗಾಗಿ ಮಾತ್ರ ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕುರಿತಾಗಿ ಅರಿತು ಅವರಿಂದ ಪ್ರೇರಣೆ ಪಡೆಯಲಿಕ್ಕಾಗಿ ಆಗಿದೆ. ಇಂತಹ ಚಿಂತನೆಯನ್ನು ವಿರೋಧಿಸುವ ಮೂಲಕ ಮದರಾಸಗಳು ಸಮಾಜಕ್ಕೆ ಯಾವ ರೀತಿಯಾದ ಸಂದೇಶಗಳಮ್ನು ರವಾನಿಸಲು ಹೊರಟಿದೆ?

ಮದರಾಸಗಳ ಅಭಿವೃದ್ದಿಗೆ ಪ್ರತಿವರ್ಷ ಕೋಟಿ ಕೋಟಿ ಸರಕಾರ ಅನುದಾನವನ್ನು ನೀಡುತ್ತಿದೆ. ಆದರೆ ಅದೇ ಸರಕಾರ ಉತ್ತಮ ಚಿಂತನೆಯನ್ನು, ದೇಶಚಿಂತನೆಯನ್ನು ಮಾಡಿ ಎಂದಾಗ ಅದನ್ನು ಮದರಾಸಗಳು ವಿರೋಧಿಸುತ್ತವೆ.

ಇದರಲ್ಲಿ ರಾಜಕೀಯ ಹಿತಾಸಕ್ತಿಯಿದೆಯೆಂದು ಬೊಬ್ಬಿಡುವ ಜನರೂ ಇದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನು ನಿಮ್ಮ ಕ್ಷೇತ್ರಗಳಲ್ಲಿ ಆಚರಿಸಿ ಎಂಬುದಾಗಿ ಆದೇಶಿಸುವುದು ರಾಜಕೀಯ ಹಿತಾಸಕ್ತಿ ಹೇಗಾಗುತ್ತದೆ??

ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಬೇಕಾದುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯ. ಆದರೆ ಸ್ವತಂತ್ರ ಲಭಿಸಿದ ದಿನವನ್ನು ಆಚರಿಸಿ ಎಂದು ಆದೇಶಿಸಿದಾಗಲೂ ವಿರೋಧ ವ್ಯಕ್ತವಾಗಿರುವುದು ನಮ್ಮ ದೇಶದ ದುಃಸ್ಥಿತಿಯೇ ಸರಿ.

ಕರ್ನಾಟಕ ರಾಜ್ಯ ಸರಕಾರವೂ ಕೂಡ ಮದರಾಸಗಳಿಗೆ ಅತೀ ಹೆಚ್ಚು ಅನುದಾನವನ್ನು ದಯಪಾಲಿಸುತ್ತದೆ. ಸ್ವಾತಂತ್ರ್ಯ ದಿನವನ್ನು ಆಚರಿಸುವ ಕುರಿತಾಗಿ ಅವರು ಯಾವ ನಿಲುವನ್ನು ಹೊಂದಿದ್ದಾರೆ?? ಉತ್ತರಪ್ರದೇಶದಲ್ಲಿ ಯೋಗಿಯವರು ಮಾಡಿದ ‌ಆದೇಶದ ಹಾಗೆಯೇ ಕರ್ನಾಟಕದಲ್ಲಿ ಸಿದ್ದರಾಮಯ್ಯನವರಿಗೆ ದೇಶದ ಕುರಿತಾಗಿ ಚಿಂತನೆ ಮಾಡಿಯೆಂದು ಆದೇಶಿಸುವ ಶಕ್ತಿಯಿದೆಯಾ?? ಅಥವಾ ಅವರ ಮನಗೆಲ್ಲಲು ದೇಶದ ಚಿಂತನೆಯನ್ನೇ ಮರೆತುಬಿಡುತ್ತಾರಾ?? ಈ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು.

ದೇಶದ ಎಲ್ಲಾ ಮದರಾಸಗಳು ರಾಷ್ಟ್ರೀಯ‌ ಚಿಂತನೆಯನ್ನು ಮಾಡಿದರಷ್ಟೇ ಅವರಲ್ಲೂ ದೇಶಕ್ಕಾಗಿ ದುಡಿಯಬೇಕೆಂಬ ಮನಸ್ಸು ಮತ್ತು ಇಚ್ಛಾಶಕ್ತಿ ಪ್ರಬಲಗೊಳ್ಳುತ್ತವೆ. ಕರ್ನಾಟಕದಲ್ಲಿರುವ ಮದರಾಸಗಳೂ ಅಂತಹ ಸಂಕಲ್ಪವನ್ನು ಮಾಡಬೇಕಿದೆ. ಹಾಗೆ ಮಾಡಿದರೆ ಮಾತ್ರ ಭಟ್ಕಳದ ಯಾಸಿನ್ ಮುಂತಾದವರು ತಯಾರಾಗದೆ ಶಿಶುನಾಳ ಷರೀಫ್ ರಂತಹ ಸಾಧಕರು ಹುಟ್ಟಲು ಸಾಧ್ಯ. ಈಗ ನಮ್ಮನ್ನು ಕಾಡುವುದೂ ಅದೇ ಪ್ರಶ್ನೆ.. ಕರ್ನಾಟಕದ ಮದರಾಸಗಳೂ ಸರಕಾರದಿಂದ ಅನುದಾನವನ್ನು ಪಡೆದುಕೊಳ್ಳುತ್ತವೆ. ಅವರೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಮುಂದಾಗುತ್ತವೆಯೇ ಎಂಬುದು..

– ವಸಿಷ್ಠ

Tags

Related Articles

Close