ಪ್ರಚಲಿತ

ಕಪ್ಪು ಹಣದ ಸ್ಫೋಟಕ ಮಾಹಿತಿ, ಭರ್ಜರಿ ಬಹಿರಂಗ!! ಸೋನಿಯಾ ಗಾಂಧಿ ಸೇರಿ ಹಲವರಿಗೆ ಶುರುವಾಗಲಿದೆ ನಡುಕ!!

ಕಪ್ಪುಹಣದ ವಿರುದ್ಧ ಸಮರ ಸಾರುತ್ತಲೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಸರ್ಕಾರ, ಕಳೆದ ಎರಡೂವರೆ ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ. ಕಾಳಧನವನ್ನು ಹೊರಗೆಳೆಯುವ ಮೂಲಕ ಜನಮಚ್ಚುಗೆ ಗಳಿಸಿರುವುದು ಗೊತ್ತೇ ಇದೆ. ಆದರೆ ಇದೀಗ ತೆರಿಗೆ ಸ್ವರ್ಗ ಎನಿಸಿಕೊಂಡಿರುವ ಸ್ವಿಜರ್‍ಲೆಂಡ್‍ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಮಾಹಿತಿ ಮುಂದಿನ ವರ್ಷದ ಜನವರಿ 1ರಿಂದ ಭಾರತಕ್ಕೆ ಲಭ್ಯವಾಗಲಿದೆ ಎನ್ನುವ ವಿಚಾರ ಇದೀಗ ತಿಳಿದು ಬಂದಿದೆ.

ಜನಸಾಮಾನ್ಯರಿಗೆ ಯಾವುದೇ ಹೊರೆಯಾಗದೆ, ಕಾಳಧನಿಕರಿಗೆ ಉಳಿಗಾಲವಿರಬಾರದೆಂಬ ತಂತ್ರಗಾರಿಕೆಯಿಂದ 500 ಹಾಗೂ 1000 ರೂ. ನೋಟು ಚಲಾವಣೆ ರದ್ದುಪಡಿಸಲು ಕೈಗೊಂಡ ಈ ನಿರ್ಧಾರ, ಕಪ್ಪು ಹಣ, ಭಯೋತ್ಪಾದನೆ, ಭ್ರಷ್ಟಾಚಾರದ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿ ಎಂದೇ ವಿಶ್ಲೇಷಿಸಲ್ಪಟ್ಟಿದೆ. ಅಷ್ಟೇ ಅಲ್ಲದೇ, ಕಾಳಧನ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಕೇಂದ್ರ ಸರ್ಕಾರ ಕಪ್ಪುಹಣದ ಕಳ್ಳಮಾರ್ಗಗಳನ್ನು ಮುಚ್ಚುವ ಕೊನೆಯ ಪ್ರಯತ್ನವಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದಲ್ಲದೇ ಕಾಳಧನಿಕರಲ್ಲಿ ಭಯದ ಹುಟ್ಟಿಸಿತ್ತು.

ಈವರೆಗೆ ತೆರಿಗೆ ತಪ್ಪಿಸಿದ ಹಣವನ್ನು ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಹೇರಳವಾಗಿ ಠೇವಣಿ ಮಾಡಿರುವ ಸುದ್ದಿ ಇದೆ. ಈ ಕಪ್ಪು ಹಣದ ಒಟ್ಟು ಪ್ರಮಾಣ ತಿಳಿದಿಲ್ಲವಾದರೂ ಕೆಲವು ಮಾಧ್ಯಮ ವರದಿಗಳ ಪ್ರಕಾರ ಒಟ್ಟು $ 1.4 ಟ್ರಿಲಿಯನ್ ಹಣವನ್ನು ಸ್ವಿಜರ್ಲ್ಯಾಂಡ್ ನಲ್ಲಿ ಬಚ್ಚಿಡಲಾಗಿದೆ ಎಂದು ಹೇಳಲಾಗುತ್ತದೆ. ಇತರ ವರದಿಗಳು ಸೇರಿದಂತೆ, ಸ್ವಿಸ್ ಬ್ಯಾಂಕರ್ಸ್ ಅಸೋಸಿಯೇಷನ್ ಮತ್ತು ಸ್ವಿಜರ್ಲ್ಯಾಂಡ್ ಸರ್ಕಾರವು ಈ ವರದಿಗಳನ್ನು ತಪ್ಪು ಹಾಗೂ ಕೃತ್ರಿಮ ಎಂದು ತಿಳಿಸಿತು, ಮತ್ತು ಎಲ್ಲಾ ಸ್ವಿಸ್ ಬ್ಯಾಂಕುಗಳಲ್ಲಿ ಭಾರತದ ನಾಗರಿಕರು ಠೇವಣಿ ಮಾಡಿರುವ ಒಟ್ಟು ಪ್ರಮಾಣ ಸುಮಾರು $ 2 ಬಿಲಿಯನ್ ಎಂದು ತಿಳಿಸಿದೆ. ಪನಾಮಾ ದೇಶದ ಬೊಗಸ್ ಕಂಪನಿಗಳಲ್ಲಿ ಈ ತೆರಿಗೆ ತಪ್ಪಿಸಿದ ಹಣ ಇಟ್ಟಿರುವುದಾಗಿ ಸುದ್ದಿ ಹಬ್ಬಿಸಿತ್ತು.

ಫೆಬ್ರವರಿ 2012 ರಲ್ಲಿ, ಕೇಂದ್ರೀಯ ತನಿಖಾ ದಳದ ನಿರ್ದೇಶಕ ಭಾರತಿಯರು ವಿದೇಶಿ ಅಕ್ರಮ ಒಟ್ಟು $ 500 ಬಿಲಿಯನ್ ಹಣವನ್ನು ಇರಿಸಿದ್ದು, ಈ ಪ್ರಮಾಣದ ಹಣವನ್ನು ಬೇರೆ ದೇಶವು ಇರಿಸಿಲ್ಲ. ಮಾರ್ಚ್ 2012 ರಲ್ಲಿ, ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ ಭಾರತ ಸರ್ಕಾರವು, ಸ್ಪಷ್ಟಪಡಿಸಿದ0ತೆ $ 500 ಬಿಲಿಯನ್ ಮೇಲೆ ಸಿಬಿಐ ನಿರ್ದೇಶಕರ ಹೇಳಿಕೆಯೂ ಜುಲೈ 2011ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯನ್ನು ಆಧರಿಸಿದ ಅಂದಾಜಿನ ಮೊತ್ತ ಎಂದು ಸ್ಪಷ್ಟಪಡಿಸಿತು.

ಕಾಳಧನಿಕರ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಸ್ವಿಜರ್ಲೆಂಡ್ ಕೊನೆಗೂ ಭಾರತಕ್ಕೆ ಕಾಳಧನಿಕರ ಮಾಹಿತಿ ನೀಡಲು ತೀರ್ಮಾನಿಸಿತ್ತು. ಅಲ್ಲದೇ ಈ ಸಂಬಂಧ ಭಾರತದ ಜತೆ ಸಹಿ ಹಾಕಿರುವ “ಸ್ವಯಂ ಚಾಲಿತ ಮಾಹಿತಿ ವಿನಿಮಯ ಒಪ್ಪಂದ”ಕ್ಕೆ ಅದು ಅಧಿಸೂಚನೆ ಜಾರಿ ಮಾಡಿತ್ತು!! ಆದರೆ ತೆರಿಗೆ ಸ್ವರ್ಗ ಎನಿಸಿಕೊಂಡಿರುವ ಸ್ವಿಜರ್‍ಲೆಂಡ್‍ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಮಾಹಿತಿ ಮುಂದಿನ ವರ್ಷದ ಜನವರಿ 1 ರಿಂದ ಭಾರತಕ್ಕೆ ಲಭ್ಯವಾಗಲಿದೆ ಎನ್ನುವ ಖುಷಿಯ ವಿಚಾರ.

ಅಷ್ಟೇ ಅಲ್ಲದೇ, ಮೋದಿ ಅಧಿಕಾರದ ಗದ್ದುಗೆಯನ್ನು ಏರುವ ಸಂದರ್ಭದಲ್ಲಿ ಕಪ್ಪುಕುಳಗಳಿಗೆ ಬಿಸಿ ಹುಟ್ಟಿಸಿದ್ದಲ್ಲದೇ, ಸ್ವಿಜ್ ಬ್ಯಾಂಕ್ ನಲ್ಲಿರುವ ಕಪ್ಪುಹಣವನ್ನು ಹೊರಗೆಳೆಯುವುದಾಗಿ ನಾಡಿನ ಜನತೆಗೆ ಭರವಸೆಯನ್ನು ನೀಡಿರುವುದು ಗೊತ್ತೇ ಇದೆ.

ತೆರಿಗೆ ತಪ್ಪಿಸಲು ವಿದೇಶದಲ್ಲಿಡಲಾಗಿರುವ ಕಪ್ಪು ಹಣದ ವಿರುದ್ಧ ಹೋರಾಟದ ಗುರಿಯೊಂದಿಗೆ, ತೆರಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ಜ.1ರಿಂದ ಸ್ವಯಂಚಾಲಿತವಾಗಿ ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸ್ವಿಜರ್‍ಲೆಂಡ್ ಜತೆ ಭಾರತ ಸಹಿ ಹಾಕಿದೆ. ಜ.1ರಿಂದ ಜಾಗತಿಕ ಮಾನದಂಡಗಳ ಪ್ರಕಾರ ಮಾಹಿತಿ ಸಂಗ್ರಹಿಸಿ 2019ರ ಸೆಪ್ಟೆಂಬರ್’ನಿಂದ ಪರಸ್ಪರ ಹಂಚಿಕೊಳ್ಳಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ. ಆದರೆ ಸರ್ಕಾರದ ಮಟ್ಟದಲ್ಲಿ, ಸ್ವಿಸ್ ಬ್ಯಾಂಕ್‍ನಲ್ಲಿ ಹೂಡಿಕೆ ಮಾಡಿದ ಭಾರತೀಯರ ವಿವರ ಲಭಿಸಲಿದ್ದು, ಅದರನ್ವಯ ಗೌಪ್ಯವಾಗಿಯೇ ಸರ್ಕಾರ ಕಾಳನಿಕರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದಾಗಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ಭಾರತೀಯರು, ಸರ್ಕಾರದ ಹದ್ದಿನ ಕಣ್ಣಿಗೆ ಬೀಳುವುದು ನಿಶ್ಚಿತವಾಗಿದೆ.

source: http://kannada.asianetnews.com/news/people-who-kept-their-money-in-swiss-bank-are-in-danger?cf=related

– ಅಲೋಖಾ

 

Tags

Related Articles

Close