ಪ್ರಚಲಿತ

ಕರ್ನಾಟಕದ ಕ್ರೈಸ್ತರೇ! ನಮ್ಮ ಪೂರ್ವಜರನ್ನು ಟಿಪ್ಪು ಬಲಾತ್ಕರಿಸಿದರೂ ಕೂಡ ಆತನ ಜಯಂತಿಯನ್ನು ಆಚರಿಸಲು ಸಿದ್ಧರಿದ್ದೀರಾ?! : ಎಡ್ವಿನ್ ಡಿಸೋಜಾ

ಟಿಪ್ಪು ಸುಲ್ತಾನ್… ಜಗತ್ತು ಕಂಡ ಅತ್ಯಂತ ಕ್ರೂರಿ, ಮತಾಂಧ, ಅತ್ಯಾಚಾರಿ, ಕೊಲೆ ಕಟುಕ, ಹೀಗೆ ಅತನನ್ನು ಯಾವ ರೀತಿ ನಿಂದಿಸಿದರೂ ತೃಪ್ತಿ ತರುವುದಿಲ್ಲ. ತನ್ನ ಆಡಳಿತಾವಧಿಯಲ್ಲಿ ತನಗೆ ಹಾಗೂ ತನ್ನ ಧರ್ಮಕ್ಕೆ ವಿರುದ್ಧ ನಿಂತವರನ್ನು ಹಿಂಸಿಸುತ್ತಾ, ಕೊಲೆ ಮಾಡುತ್ತಾ, ಮಾರಣ ಹೋಮ ನಡೆಸಿದ್ದ ಇಸ್ಲಾಂ ರಾಷ್ಟ್ರ ಸ್ಥಾಪನೆಗೆ ಮುಂದಾಗಿದ್ದ ಮತಾಂಧ. ತನ್ನ ರಾಜ್ಯದಲ್ಲಿದ್ದ ಅನೇಕ ಹಿಂದೂಗಳನ್ನು, ಕ್ರೈಸ್ಥರನ್ನು ಸಹಿತ ಅನೇಕ ಜನರನ್ನು ಹಿಂಸಿಸಿ ರಾಜ್ಯವನ್ನು ಆಳುತ್ತಿದ್ದ.

800ಕ್ಕೂ ಹೆಚ್ಚು ಹಿಂದೂಗಳ ದೇವಸ್ಥಾನಗಳನ್ನು ನೆಲಸಮ ಮಾಡಿ ಅದರ ಮೇಲೆ ಇಸ್ಲಾಂ ಸಾಮ್ರಾಜ್ಯ ಕಟ್ಟಿದ್ದ ಟಿಪ್ಪು ಮಾಡಿದ್ದ ದೌರ್ಜನ್ಯ ಒಂದೆರಡಲ್ಲ. ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ, ಲಕ್ಷಾಂತರ ಹಿಂದೂಗಳ ಮತಾಂತರ, ಅದಕ್ಕೆ ಒಪ್ಪದಿದ್ದವರನ್ನು ಕೊಲೆ ಮಾಡುತ್ತಿದ್ದ ಮತಾಂಧ ಟಿಪ್ಪುವಿನ ಕರಾಳ ಕಥೆಗಳನ್ನು ಹೇಳುತ್ತಾ ಹೋದರೆ ಸಾಲುಗಳೆ ಸಾಕಾಗಲ್ಲ.

ಶ್ರೀರಂಗಪಟ್ಟಣದ ಅಯ್ಯಂಗಾರ್ ಜನಾಂಗದವರನ್ನು, ಕೊಡಗಿನ ಕೊಡವ ಜನಾಂಗದವರನ್ನು ಮೋಸದಿಂದ ಕೊಲೆ ಮಾಡಿ, ಆ ಕರಾಳ ಘಟನೆಯನ್ನು ಇಂದಿಗೂ
ಅವರ ಜೀವನದಲ್ಲಿ ಮಾಸದಂತೆ ಮಾಡಿದ್ದಾನೆ ಕ್ರೂರಿ ಟಿಪ್ಪು. ದೀಪಾವಳಿಯ ದಿನದಂದೇ ಆತ ಮಾಡಿದ್ದ ಘೋರ ಕೃತ್ಯವು ಇಂದಿಗೂ ಹಲವರ ಬಾಳಿನಲ್ಲಿ ಕರಾಳ
ದೀಪಾವಳಿಯನ್ನೇ ಆಚರಿಸುವಂತೆ ಮಾಡಿದೆ.

ಇಷ್ಟಿದ್ದರೂ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಟಿನ ಆಸೆಗಾಗಿ, ಅವರ ಓಲೈಕೆಗಾಗಿ, ಮುಸಲ್ಮಾನರ ಸಹಮತವಿಲ್ಲದಿದ್ದರೂ ಟಿಪ್ಪು
ಜಯಂತಿಯನ್ನು ಆಚರಣೆ ಮಾಡಿ ರಾಜ್ಯದ ಮಾತ್ರವಲ್ಲದೆ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಚರಣೆಗೆ ತಂದಿರುವ ಈ ಟಿಪ್ಪು ಜಯಂತಿಯು ಹಲವಾರು ಜೀವಹಾನಿಗಳಿಗೆ ಕಾರಣವಾಗಿದೆ. ಹಿಂದೂ ಸಂಘಟನೆಯ ಮುಖಂಡ ಕುಟ್ಟಪ್ಪ ಸಹಿತ ಅನೇಕ ಜನರ ಜೀವವೇ ಹೋಗಲು ಕಾರಣವಗಿದೆ. ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಹಲವಾರು ಹಿಂದೂ ಕಾರ್ಯಕರ್ತರು ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ತನ್ನ ಪ್ರಾಣವನ್ನೇ ಬಲಿಕೊಟ್ಟು ಅನೇಕ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದರು. ಟಿಪ್ಪು ಜಯಂತಿಯನ್ನು ಕೊಟ್ಯಾಂತರ ಜನರ ವಿರೋಧಿಸಿದರೂ ಆಚರಣೆಯನ್ನು ಮಾಡಿ ತನ್ನ ದರ್ಪವನ್ನು ಪ್ರದರ್ಶಿಸಿತ್ತು ರಾಜ್ಯ ಕಾಂಗ್ರೆಸ್ ಸರ್ಕಾರ. ಅನೇಕ ಹಾನಿ, ಕೋಮು ಗಲಭೆಗಳಾದರೂ ತನ್ನ ಅಹಂಕಾರವನ್ನು ಬಿಡದ ಸರ್ಕಾರ ಮತ್ತೆ ಈ ಬಾರಿ ಟಿಪ್ಪು ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ.

ಆತ್ಮೀಯ ಕ್ರೈಸ್ತ ಸಮಾಜ ಬಾಂದವರೇ, ನಿಮ್ಮ ಮೇಲಿನ ಟಿಪ್ಪು ದೌರ್ಜನ್ಯವನ್ನು ಬಲ್ಲಿರಾ..?

ಟಿಪ್ಪುವಿನ ಕ್ರೂರತೆಯ ಪರಿಣಾಮ ಕೇವಲ ಹಿಂದೂ ಸಮಾಜಕ್ಕೆ ಮಾತ್ರವಲ್ಲ. ಅದು ಕ್ರೈಸ್ತ ಸಮಾಜದ ಮೇಲೂ ಇದೆ. ಕ್ರೈಸ್ತ ಸಮಾಜದ ಮೇಲೆ ಟಿಪ್ಪುವಿನ ಕ್ರೌರ್ಯತೆ ಎಷ್ಟಿತ್ತೆಂದರೆ, ಕ್ರೈಸ್ತರನ್ನು ಬಂಧಿಸಲು “ಮಂಗಳೂರಿನ ಕ್ಯಾಥೋಲಿಕ್ ಜನಾಂಗವನ್ನು ಸೆರೆ ಹಿಡಿಯುವ ಪದ್ದತಿ, 24 ಫೆಬ್ರವರಿ 1784 ರಂದು ಪ್ರಾರಂಭವಾಗಿ ಮೇ 4, 1799 ರಲ್ಲಿ ಅಂತಿಮವಾಗಿತ್ತು. ನಂತರ ನಡೆದ 1799ರಲ್ಲಿ ಮಂಗಳೂರು ಒಪ್ಪಂದದಂತೆ, ಟಿಪ್ಪು ಕೆನರಾ ಭೂಮಿಯನ್ನು ಆಳುವ ಅಧಿಕಾರವನ್ನು ಪಡೆದನು. ಆನಂತರ ಅಲ್ಲಿ ಕ್ರೈಸ್ತ ಮತಕ್ಕೆ ಸೇರಿದ ಎಲ್ಲಾ ಜನರ ಆಸ್ತಿಗಳನ್ನು ಕಸಿದುಕೊಂಡು, ತನ್ನ ಸಾಮ್ರಾಜ್ಯದ ರಾಜಧಾನಿಯಾದ ಶ್ರೀರಂಗ ಪಟ್ಟಣದಲ್ಲಿ ಲಕ್ಷಾಂತರ ಕ್ರೈಸ್ತರನ್ನು ಗಡಿಪಾರು ಮಾಡಲು ಆತನ ಸೈನಿಕರಿಗೆ ಆದೇಶವನ್ನು ಹೊರಡಿಸುತ್ತಾನೆ. ಬಂಧನಕ್ಕೊಳಗಾದ ಕ್ರೈಸ್ತರು ತಪ್ಪಿಸಲು ಪ್ರಯತ್ನ ಪಟ್ಟರೆ ಅವರನ್ನು ನೇಣು ಹಾಕಿ ಕೊಲ್ಲಲಾಗುವುದು ಎಂದು ಹೆದರಿಸಿದ್ದನು. 27 ಕ್ಯಾಥೋಲಿಕ್ ಚರ್ಚುಗಳಲ್ಲಿ ವಿವಿಧ ಸಂತರ, ಕ್ರೈಸ್ತ ಗುರುಗಳ ವಿವರವನ್ನು ವರ್ಣಿಸುವಂತೆ ಸುಂದರವಗಿ ಕೆತ್ತಿದ್ದ ಮೂರ್ತಿಗಳನ್ನು ವಿನಾಶ ಮಾಡುವಂತೆ, ಟಿಪ್ಪು ಆತನ ಸೈನಿಕರಿಗೆ ಆದೇಶಿಸುತ್ತಾನೆ. ಕ್ಯಾಥೋಲಿಕ್ ಚರ್ಚುಗಳ ಜೊತೆಗೆ ಇನ್ನೂ ಹಲವಾರು ಚರ್ಚುಗಳನ್ನು ನಾಶಪಡಿಸುತ್ತಾನೆ.

ಕ್ರೈಸ್ತರ ಮೇಲಿನ ಟಿಪ್ಪುವಿನ ಕ್ರೌರ್ಯ ಹೇಗಿತ್ತು ಗೊತ್ತಾ..?

ಟಿಪ್ಪು ಕ್ರೈಸ್ತ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಾ ಬಂದಿರುವ ಕ್ರೂರಿ. ದಾಖಲೆಗಳ ಪ್ರಕಾರ ಸುಮಾರು 70000 ಸಾವಿರ ಕ್ರೈಸ್ತರನ್ನು
ಬಂಧಿಸುತ್ತಾನೆ. ಇದರಲ್ಲಿ 10 ಸಾವಿರ ಕ್ರೈಸ್ತರು ತಪ್ಪಿಸಿಕೊಳ್ಳುತ್ತಾರೆ. ಉಳಿದೆಲ್ಲಾ ಕ್ರೈಸ್ತರನ್ನು ಪರ್ವತ, ಗುಡ್ಡಕಾಡುಗಳನ್ನು ಹತ್ತಿಸಿ ಎಳೆದುಕೊಂಡು ಶ್ರೀರಂಗ ಪಟ್ಟಣಕ್ಕೆ ಹೋಗುತ್ತಾನೆ. ದಾರಿ ಮಧ್ಯೆ ಆತನ ನಡತೆ ಸಂಪೂರ್ಣ ಹಿಂಸಾತ್ಮಕ ರೂಪದಲ್ಲಿತ್ತು. ಸುಮಾರು 4000 ಅಡಿ, ಅಂದರೆ 1200 ಕಿಲೋ ಮೀಟರ್ ಎತ್ತರದ ಶಿಖರವನ್ನು ಬಲವಂತವಾಗಿ ಏರಿಸುತ್ತಾನೆ. ಇದು ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ 210 ಮೈಲಿ ದೂರದಲ್ಲಿದೆ. ಹೀಗೆ ಬಂಧಿತ ಕ್ರೈಸ್ತರಿಗೆ ಶ್ರೀರಂಗ ಪಟ್ಟಣ ತಲುಪಲು ಸುಮಾರು 7 ವಾರಗಳೇ ಹಿಡಿಯುತ್ತವೆ. ಹೊಟ್ಟೆಗೆ ಆಹಾರವಿಲ್ಲದೆ ಸುಮಾರು 20000 ಕ್ರೈಸ್ತರು ಮಾರ್ಗ ಮಧ್ಯೆಯೇ ಸಾವನ್ನಪ್ಪುತ್ತಾರೆ.

ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕಾರ್ರಿಯವರ ಪ್ರಕಾರ ಸೆರೆ ಹಿಡಿದ ಕ್ರೈಸ್ತರಲ್ಲಿ ಸುಮಾರು 30000 ಮಂಗಳೂರಿನ ಕ್ರೈಸ್ತರನ್ನು ಟಿಪ್ಪು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಾನೆ. ಕ್ರೈಸ್ತ ಧರ್ಮದ ಮಹಿಳೆಯರನ್ನು ಮತ್ತು ಹುಡುಗಿಯರನ್ನು ಬಲವಂತವಾಗಿ ಅಲ್ಲಿರುವ ಮುಸ್ಮಾನರಿಗೆ ಪತ್ನಿಯರನ್ನಾಗಿ ಮಾಡುತ್ತಾನೆ. ಇದಕ್ಕೆ ವಿರೋಧಿಸಿದ್ದ ಕ್ರೈಸ್ತ ಯುವಕರ ಮೂಗುಗಳನ್ನು, ಮೇಲಿನ ತುಟಿಗಳನ್ನು, ಕಿವಿಗಳನ್ನು ಕತ್ತರಿಸಲು ಆದೇಶಿಸುತ್ತಾನೆ. ಕ್ರೈಸ್ತ ಯುವಕರು ಏನನ್ನೂ ಮಾತನಾಡಲು ಬಿಡದೆ ಅವರನ್ನ ಕ್ರೂರ ಹಿಂಸೆಗೆ ಒಳಪಡಿಸುತ್ತಾನೆ.

ಇಷ್ಟೇ ಅಲ್ಲ, ಟಿಪ್ಪುವಿನ ಕ್ರೈಸ್ತ ವಿರೋಧಿ ಧೋರಣೆಗೆ ಕೊನೆಯೇ ಇಲ್ಲದಂತಾಗಿತ್ತು. ಟಿಪ್ಪು ಸುಮಾರು 30000 ವೆಸ್ಟ್ ಕೋಸ್ಟ್ ಕ್ರೈಸ್ತರನ್ನು ಬಲವಂತವಾಗಿ ಎಳೆದು
ತರುತ್ತಾನೆ. ಟಿಪ್ಪು ಆಳುತ್ತಿದ್ದ ಮಲಬಾರ್‍ನಲ್ಲಿರುವ ಸಂತ ಥಾಮಸ್ ಕ್ರೈಸ್ತ ಸಮುದಾಯದ ಮೇಲೆ ದಾಳಿ ಮಾಡಿ ಅಲ್ಲಿದ್ದ ಅನೇಕ ಕ್ರೈಸ್ತ ಮಂದಿರಗಳನ್ನು
ಧ್ವಂಸಗೊಳಿಸುತ್ತಾನೆ. ಅನೇಕ ಶತಮಾನಗಳಿಂದ ಈಸ್ಟ್ ಶಿಕ್ಷಣ ಕೇಂದ್ರಕ್ಕೆ ಮೂಲವಾಗಿದ್ದ ಆಂಗ್ಲಮಲಿಯಲ್ಲಿರುವ ಸಿಯ್ರ್ಯನ್ ನಸ್ರಾನಿ ಸೆಮಿನಾರಿ ಕೂಡಾ ಟಿಪ್ಪು
ಸೈನಿಕರಿಂದ ನೆಲಸಮಗೊಳಿಸಲ್ಪಟ್ಟವು. ಹಲವಾರು ಶತಮಾನಗಳಿಂದ ಇದ್ದ ಕ್ರೈಸ್ತರ ಹಲವು ಧಾರ್ಮಿಕದ ಬಹಳಷ್ಟು ಹಸ್ತಪ್ರತಿಗಳು ಶಾಶ್ವತವಾಗಿ ಕಣ್ಮರೆಯಾಗಿದ್ದವು. ಮಾತ್ರವಲ್ಲದೆ, ಅಕಾಪ ರಂಬುನಲ್ಲಿದ್ದ ಮೋರ್ ಸಾಬೂರ್ ಚರ್ಚು ಕೂಡಾ ನಾಶಪಡಿಸಲಾಗಿತ್ತು. ಟಿಪ್ಪುವಿನ ಸೇನೆ ಪಲಯೂರ್ ಚರ್ಚು ಮತ್ತು ಸೆಮಿನರಿಗೆ ಮೀಸರಿಸಿದ್ದ ಮಾರ್ಥಾ ಮರಿಯಮ್ ಚರ್ಚನ್ನು ಕೂಡಾ ನಾಶಪಡಿಸಿ ತನ್ನ ಕ್ರೈಸ್ತ ವಿರೋಧಿ ಧೋರಣೆಯನ್ನು ಬಿತ್ತರಿಸುತ್ತಿದನು.

ಟಿಪ್ಪುವಿನ ಸೇನೆ ಪಲಯೂರ್ ಚರ್ಚಿಗೆ ಬೆಂಕಿ ಹಾಕಿ 1790ರಲ್ಲಿ ಉಲ್ಗುರ್ ಚರ್ಚನ್ನು ಧ್ವಂಸಗೊಳಿಸಿತು. ಅದರೊಂದಿಗೆ ಆರ್ತ ಎನ್ನುವ ಚರ್ಚು ಕೂಡಾ ನಾಶವಾಯಿತು. ಅಲ್ಲೂ ಅನೇಕ ಕ್ರೈಸ್ತರನ್ನು ಮತಾಂತರ ಮಾಡಿ, ಒಪ್ಪದಿದ್ದವರನ್ನು ಕೊಂದು ಹಾಕಿ ತನ್ನ ವಿಕೃತಿಯನ್ನು ಮೆರೆದಿದ್ದನು. ಅವರು ಬೆಳೆಸಿದ್ದ ಅಪಾರ ಪ್ರಮಾಣದ ಬೆಳೆಗಳಾದ ತೆಂಗು, ಅಡಿಕೆ, ಮೆನಸು ಸಹಿತ ಅನೇಕ ಬೆಳೆಗಳನ್ನು ನಾಶಪಡಿಸಿ ಚಿತ್ರಹಿಂಸೆಯನ್ನು ಕೊಟ್ಟಿದ್ದನು. ಅವರ ಜೀವನಾದಾರವಾಗಿದ್ದ ಆಹಾರ ಪದಾರ್ಥಗಳನ್ನೇ ಕಸಿದುಕೊಂಡಿದ್ದನು.

ಅನೇಕ ಕ್ರೈಸ್ತ ಹುಡುಗಿಯರನ್ನು ಸೆರೆ ಹಿಡಿದು ಅವರನ್ನು ಮುಸಲ್ಮಾನ ಪುರುಷರೊಂದಿಗೆ ರಾಸಲೀಲೆಗೆ ಬಿಡುತ್ತಿದ್ದನು. ಹೀಗೆ ಬಂಧಿಸಿ ಕೆಲವು ಹುಡುಗಿಯರನ್ನು
ನಂಗಾನಾಚ್‍ಗೆ ಹಾಗೂ ತನ್ನ ವಿಕೃತ ಮನರಂಜನೆಗೆ ಮೀಸಲಿಡುತ್ತಿದನು.

ಮಂಗಳೂರಿನಲ್ಲಿ ಇಂದು ಹೆಸರು ವಾಸಿಯಾಗಿರುವ ಮಿಲಾಗ್ರೀಸ್ ಚರ್ಚನ್ನು ಕೂಡಾ ಧ್ವಂಸಗೊಳಿಸಿದ್ದನು. ಅಲ್ಲಿದ್ದ ಅನೇಕ ಕ್ರೈಸ್ತರನ್ನು ಬಲವಂತವಾಗಿ ಕಾರಾಗೃಹಕ್ಕೆ ತಳ್ಳಿದನು. ನಂತರ ಟಿಪ್ಪುವಿನ ಮರಣಾ ನಂತರ ಬಂಧಮುಕ್ತಗೊಂಡ ಕ್ರೈಸ್ತರು, ಮತ್ತೆ ಮಿಲಾಗ್ರಿಸ್ ಚರ್ಚನ್ನು ಕಟ್ಟುತ್ತಾರೆ…

ಇದು ಕೇವಲ ಸ್ಯಾಂಪಲ್ ಅಷ್ಟೇ. ಕ್ರೈಸ್ತರ ಮೇಲಿನ ಟಿಪ್ಪುವಿನ ದೌರ್ಜನ್ಯವು ಹೇಳತೀರದಷ್ಟಿದೆ. ನಾವು ಸದಾ ಅಲ್ಪ ಸಂಖ್ಯಾತರ ಪರ ಎಂದು ಬೊಗಳೆ ಬಿಡುತ್ತಿರುವ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಮಾಡಿ ಕ್ರೈಸ್ತ ಧರ್ಮೀಯರಿಗೆ ಅವಮಾನ ಮಾಡುತ್ತಿಲ್ಲವೇ. ತನ್ನ ಓಟ್‍ಬ್ಯಾಂಕ್ ಭದ್ರಗೊಳಿಸಲು ಕ್ರೈಸ್ತರ ಕಾಲು ಹಿಡಿಯುವ ನಾಯಕರಿಗೆ ಕನಿಷ್ಟ ಇತಿಹಾಸವು ತಿಳಿದಿದಿಯಾ..?

ಆತ್ಮೀಯ ಕ್ರೈಸ್ತ ಸಮಾಜ ಬಾಂಧವರೇ,

ಯಾವಾಗ ಸಿಡಿದೇಳುವಿರಿ.? ಹಾಗಾದರೆ ಪೌರುಷ, ರೋಷ ಅನ್ನೋದು ಇರೋದು ಕೇವಲ ಹಿಂದೂ ಸಮಾಜಕ್ಕೆ ಮಾತ್ರವೇ..? ತಮ್ಮ ಸ್ವಾಭಿಮಾನವನ್ನು ಯಾಕೆ ಪಕ್ಷಕ್ಕಾಗಿ ಅಡವಿಡುತ್ತೀರಾ..? ಬೀದಿಗಿಳಿದು ಹೋರಾಟ ನಡೆಸಿ. ನಮ್ಮ ಧರ್ಮದ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿರುವ ಆ ಮತಾಂಧನ ಜಯಂತಿಯ ಆಚರಣೆಯ ವಿರುದ್ಧ ಸರ್ಕಾರದ ವಿರುದ್ಧ ತೊಡೆ ತಟ್ಟಿ ಪ್ರತಿಭಟಿಸಿ. ಹಿಂದೂ ಸಮಾಜ ಮತ್ತು ಕ್ರೈಸ್ತ ಸಮಾಜಕ್ಕೆ ಆದಂತಹ ಅವಮಾನವನ್ನು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿರುವ ಆಧುನಿಕ ಟಿಪ್ಪು ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ. ಸರ್ಕಾರದ ಕ್ರೈಸ್ತ ಸಮಾಜದ ಪ್ರತಿನಿದಿಗಳನ್ನು ಒತ್ತಾಯಿಸಿ.

ಬನ್ನಿ ಒಟ್ಟಾಗಿ, ರಾಜಕೀಯ ರಹಿತವಾಗಿ ಹೋರಾಡೋಣ. ನಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳೋಣ. ಟಿಪ್ಪುವಿನ ಹೆಸರು ಇತಿಹಾಸದ ಪುಟಗಳಿಂದ
ಅಳಿಯುವಂತೆ ಮಾಡೋಣ!!

-ಎಡ್ವಿನ್ ಡಿಸೋಜಾ

Tags

Related Articles

Close