ಅಂಕಣ

ಕಲ್ಲು ತೂರಾಟ ನಡೆಸಿದರೆ ಸಿಗುತ್ತಿತ್ತು ಹಣ, ಬಟ್ಟೆ ಹಾಗೂ ಶೂ!! ಇದು ಪ್ರತ್ಯೇಕತಾವಾದಿಗಳ ಆಜಾದಿ ಆಂದೋಲನ!!!

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವಂತೆ
ಯುವಕರಿಗೆ ಪ್ರಚೋದನೆ ನೀಡುತ್ತಿರುವರ ಬಗ್ಗೆ ಸ್ಫೋಟಕ ಮಾಹಿತಿ ಈಗಾಗಲೇ ಹೊರ ಬಿದ್ದಿದೆ!! ಅಷ್ಟೇ ಅಲ್ಲದೇ ಕಲ್ಲು ತೂರಾಟ ನಡೆಸುವವರಿಗೆ ಭರಪೂರ ಹಣವನ್ನು ಸಂದಾಯ ಮಾಡುತ್ತಿರುವರಾದರೂ ಯಾರು?? ಎನ್ನುವ ಆಘಾತಕಾರಿ ಮಾಹಿತಿಗಳು ಇದೀಗ ಬೆಳಕಿಗೆ ಬಂದಿದೆ.

ಕಳೆದ ತಿಂಗಳಷ್ಟೇ, ಭಯೋತ್ಪಾದನೆ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣದ ನೆರವು ಪಡೆಯುತ್ತಿದ್ದ ಆರೋಪದ ಮೇಲೆ ಏಳು ಮಂದಿ ಪ್ರತ್ಯೇಕತಾ ವಾದಿಗಳನ್ನು ಬಂಧಿಸಿತ್ತು. ದೇಶದ್ರೋಹಿ ಚಟುವಟಿಕೆಗಳಿಗೆ ಇಂಬು ನೀಡಲು, ಹಲವು ಅಪರಾಧಗಳಲ್ಲಿ ಪ್ರತ್ಯೇಕತಾವಾದಿಗಳು ಭಾಗಿಯಾಗಿದ್ದರು ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಕಾಶ್ಮೀರದಲ್ಲಿ ಕಲ್ಲುತೂರಾಟ ಕುರಿತಂತೆ ಉದ್ಭವಗೊಂಡಿದ್ದ ಪ್ರಶ್ನೆಗಳಿಗೆ ಕಳವಳಕಾರಿ ಉತ್ತರ ಲಭ್ಯವಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವಂತೆ ಕಾಶ್ಮೀರಿ ಯುವಕರಿಗೆ ತಲೆಕೆಡಿಸುತ್ತಿರುವ ಪಾಕಿಸ್ತಾನ, ಕಲ್ಲು ತೂರಾಟ ನಡೆಸುವವರಿಗೆ ಭರಪೂರ ಹಣವನ್ನು ಸಂದಾಯ ಮಾಡುತ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಕಲ್ಲುತೂರಾಟ ನಡೆಸುವವರಿಗೆ ರೂ.70 ಲಕ್ಷಕ್ಕೂ ಅಧಿಕ ಹಣವನ್ನು ಪಾಕಿಸ್ತಾನ ರವಾನಿಸಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗೊಂಡಿದೆ. ಈ ಕುರಿತಂತೆ ಆಂಗ್ಲ ಸುದ್ದಿವಾಹಿನಿಯೊಂದು ವರದಿಯನ್ನು ಮಾಡಿತ್ತು!!!

ಬಂಧಿತರಲ್ಲಿ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾಹ ಗಿಲಾನಿ ಅಳಿಯ ಅಲ್ತಾಫ್ ಶಾ ಪ್ರಮುಖ. ಇತರರೆಂದರೆ, ನಯೀಮ್ ಖಾನ್, ಆಯಾಜ್ ಅಕ್ಬರ್
ಖಂಡೇ, ಮೆಹ್ರಾಜುದ್ದೀನ್ ಕಲ್ವಾಲ್, ಪೀರ್ ಸೈಫುಲ್ಲಾಹ (ಹುರಿಯತ್), ಶಾಹಿದ್-ಉಲ್-ಇಸ್ಲಾ (ಮಿರ್ವಾಜಿ ನೇತೃತ್ವದ ಹುರಿಯತ್) ಮತ್ತು ಫಾರೂಖ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ (ಜ ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್) ಎಂದು ಹೇಳಲಾಗಿದೆ!!!

ಕಲ್ಲು ತೂರಾಟ ನಡೆಸಿದರೆ ಸಿಗುತ್ತಿತ್ತು ಹಣ, ಬಟ್ಟೆ ಹಾಗೂ ಶೂ!!

ಫಾರೂಕ್ ಅಹ್ಮದ್ ಲೋನ್ ಎನ್ನುವಾತ ಸೈನ್ಯದ ಮೇಲೆ ಕಲ್ಲು ತೂರಾಟ ನಡೆಸಿದ ವ್ಯಕ್ತಿ. ಈತ ನೀಡಿದ ಹೇಳಿಕೆ ಪ್ರಕಾರ ಸೈನ್ಯದ ಮೇಲೆ ಕಲ್ಲು ತೂರಾಟ ನಡೆಸಿದರೆ ಹಣವನ್ನು ಪಡೆಯುತ್ತಿದ್ದರು. ಅಷ್ಟೇ ಅಲ್ಲದೇ, ಕಲ್ಲು ತೂರಾಟ ನಡೆಸಲು ಎಷ್ಟು ಹಣ ಪಡೆಯುತ್ತಿದ್ದಿ ಎನ್ನುವ ಪ್ರಶ್ನೆಗೆ 1000, 2000, 3000 ಅಥವಾ 5000 ರುಪಾಯಿ ಎಂದು ಉತ್ತರಿಸಿದ್ದಾನೆ!!ಅಲ್ಲದೇ, ಒಂದು ಪೆಟ್ರೋಲ್ ಬಾಂಬ್ ತಯಾರಿಸಿದರೆ 500 ರಿಂದ 700 ರುಪಾಯಿ ಸಿಗುತ್ತಿತ್ತು ಎನ್ನುವ ಆಘಾತಕಾರಿ ಅಂಶವನ್ನು ಹೇಳಿದ್ದಾನೆ!!

ತಾನೇ ಈ ಪೆಟ್ರೋಲ್ ಬಾಂಬ್‍ಗಳನ್ನು ವಾಹನವೊಂದಕ್ಕೆ ಎಸೆದಿದ್ದು, ಅದರಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಪೊಲೀಸರು ಜೀವಂತವಾಗಿ ಸುಟ್ಟು ಹಾಕಿದ್ದೇನೆ!! ಅಲ್ಲದೇ ಕಾಂಕ್ರೀಟ್ ಸೇತುವೆಯ ಮೇಲೆ ಬಾಂಬ್ ದಾಳಿ ಮಾಡಿರುವುದಾಗಿಯೂ ತಪ್ಪೊಪ್ಪಿಕೊಂಡಿದ್ದಾನೆ!! ಇದನ್ನು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ನಂತರ ಅಂದರೆ 2014ರಲ್ಲಿ ಮಾಡಲಾಯಿತು. ಅಲ್ಲದೇ ಅಫ್ಜಲ್ ಗುರುವನ್ನು ‘ಶಹೀದ್’ ಅಫ್ಜಲ್ ಗುರು ಎನ್ನುವ ಹೆಸರನ್ನು ಉಲ್ಲೇಖಿಸಿದ್ದಾನೆ!!!

ಅಲ್ಲದೇ ತಮ್ಮ ಚಟುವಟಿಕೆಗಳಿಗೆ ಕೆಲವೊಮ್ಮೆ ಬಟ್ಟೆ ಮತ್ತು ಶೂಗಳನ್ನು ಕೂಡ ಪಡೆಯುತ್ತಿದ್ದೆವು ಎನ್ನುವ ಮಾಹಿತಿಯನ್ನು ನೀಡಿದ್ದಲ್ಲದೇ ಕಲ್ಲು ತೂರಾಟ ನಡೆಸಿ ಆ ಪ್ರದೇಶವನ್ನು ಮುಷ್ಕರ ಮಾಡಿದರೆ 5000 ದಿಂದ 7000 ರೂಪಾಯಿಗಳನ್ನು ಪಡೆಯುತ್ತಿದ್ದರು ಎನ್ನುವುದನ್ನು ಹೇಳಿದ್ದಾನೆ!!

ವರದಿಯ ಪ್ರಕಾರ, ಪಾಕಿಸ್ತಾನ ಗುಪ್ತಚರ ಇಲಾಖೆಯಿಂದ ಐಎಸ್‍ಐ ನಿಂದ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹರಿಯತ್ ಕಾನ್ಫರೆನ್ಸ್ ಗೆ ಹಣ ಬರುತ್ತಿದ್ದು, ಆ ಹಣವನ್ನು ಹರಿಯತಂ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರ್ ಶಾ ಎಂಬಾತ ಹುರಿತಯ್ ಜಿಲ್ಲಾ ಘಟಕಗಳಿಗೆ ಹಂಚಿ, ಕಲ್ಲು ತೂರಾಟ
ನಡೆಸುವರನ್ನು ಸೆಳೆಯುತ್ತಿದ್ದಾನೆಂದು ಎನ್ನುವುದನ್ನು ತಿಳಿಸಿದೆ!!!

ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ತಮಗೆ ಹಣ ನೀಡುತ್ತಿದ್ದರು ಎಂದು ಇತ್ತೀಚೆಗಷ್ಟೇ ಬಂಧಿತನಾಗಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಏಜೆಂಟ್‍ಗಳಿಬ್ಬರು ತಪೆÇ್ಪಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಕಲ್ಲು ತೂರಾಟ ನಡೆಸುವವರಿಗೆ ಐಎಸ್‍ಐ ಹಣ ಕೊಡುತ್ತಿದೆ ಎಂಬ ಸಂಗತಿ
ಬಹಿರಂಗೊಂಡಿರುವುದರಿಂದ ಭಾರತದಲ್ಲಿ ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆ ಪಸರಿಸಲು ಕಾಶ್ಮೀರ ಹಣದ ಹೊಳೆ ಹರಿಸುತ್ತಿದೆ ಎಂಬ ಭಾರತದ ಬಹು ದಿನ ವಾದಕ್ಕೆ ತೂಕ ಬಂದಂತಾಗಿದೆ.

ತನ್ನ ವಿದ್ವಂಸಕತೆಯ ಮೂಲಕ ಭಾರತೀಯ ಸೇನಾ ಕಾರ್ಯಾಚರಣೆಗಳನ್ನು ನಾಶಮಾಡುವಲ್ಲಿ ಪ್ರಯತ್ನಿಸಿದ ವ್ಯಕ್ತಿಯಲ್ಲಿ ವಾಸಿಮ್ ಅಹ್ಮದ್ ಖಾನ್ ಕೂಡ ಒಬ್ಬ!! ಇವನು ಸಶಸ್ತ್ರಪಡೆಗಳಿಗೆ, ಎಂಎಲ್‍ಎಗಳಿಗೆ, ಮಂತ್ರಿಗಳಿಗೆ ಮತ್ತು ಇವರ ಸಹಾಯಕರಿಗೆ ಕಲ್ಲು ತೂರಾಟ ನಡೆಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ!! ಅಷ್ಟೇ ಅಲ್ಲದೇ, 2009ರ ಪೂರ್ಣ ಅವಧಿಯಲ್ಲಿ ಜೈಲಿನಲ್ಲಿದ್ದೇ ಎನ್ನುವುದನ್ನೂ ಕೂಡ ಹೇಳಿಕೊಂಡಿದ್ದಾನೆ. ಈ ಗುಂಪು, ಭಾರತ ವಿರೋಧಿ ಕ್ರಮಗಳನ್ನು ಮಾತ್ರ ಒಳಗೊಂಡಿಲ್ಲ. ಅದರೊಂದಿಗೆ ವಾಹನಗಳ ಮೇಲೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದರು. ಇದು ಜನ ಸಾಮಾನ್ಯರ ವಾಹನಗಳಿಗಲ್ಲ, ಬದಲಿಗೆ ಪೊಲೀಸರ, ಸೇನಾ ಸಿಬ್ಬಂದಿಗಳ ಮತ್ತು ಮಂತ್ರಿಗಳ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದರು ಎನ್ನುವ ಅಂಶವನ್ನು ಹೇಳಿಕೊಂಡಿದ್ದಾರೆ!!

ಅಷ್ಟೇ ಅಲ್ಲದೇ ಒಂದು ತಿಂಗಳುಗಳ ಕಾಲ ಕಲ್ಲು ತೂರಾಟ ನಡೆಸಿದರೆ 5000 ದಿಂದ 6000ದವರೆಗೆ ಹಣವನ್ನು ಸಂಪಾದಿಸುತ್ತಿದ್ದ!! ವರದಿಗಾರ ಕೇಳಿರುವ ಪ್ರಶ್ನೆಗೆ, ತಾನು ಮಾಡಿರುವ ಅಪರಾಧದ ಬಗೆಗೆ ಯಾವುದೇ ರೀತಿ ಪಶ್ಚತ್ತಾಪವಿಲ್ಲದೇ ಕನಿಷ್ಠ 30ರಿಂದ 35ಜನರಿಗೆ ಕಲ್ಲು ತೂರಾಟ ನಡೆಸಿ ಹಿಂಸಿಸಿದ್ದೇನೆ ಎಂದು ಉತ್ತರಿಸಿದ್ದಾನೆ!! ಅಷ್ಟೇ ಅಲ್ಲದೆ ಇವರಿಗೆ 400-700 ರುಪಾಯಿಯವರೆಗೆ ಹಣವನ್ನು ಒಬ್ಬ ವ್ಯಕ್ತಿ(ಹೆಸರನ್ನು ಬಹಿರಂಗ ಪಡಿಸದೇ)ಕೊಡುತ್ತಿದ್ದ, ಆದರೆ ಜಮ್ಮುವಿನಲ್ಲಿ ಈ ವ್ಯಕ್ತಿ ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದ ಎಂದು ಹೇಳಿದ್ದಾನೆ.

12 ವರ್ಷದ ಮಕ್ಕಳು ಭಾಗಿ!!!!

ಒಳ್ಳೆಯ ದೇಹವನ್ನು ಹೊಂದಿರುವ ವ್ಯಕ್ತಿ ಸುಮಾರು 7000ದಿಂದ 7500ರವರೆಗೆ ಪಡೆಯುತ್ತಾರೆ ಎಂದು ಇಬ್ರಾಹಿಂ ಖಾನ್ ಎನ್ನುವ ಕಲ್ಲು ತೂರಾಟ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದಾನೆ!! ಒಬ್ಬ ಹುಡುಗ ದುರ್ಬಲ ಹಾಗೂ ಕುಳ್ಳಗಿದ್ದರೆ ಸುಮಾರು 5500 ರಿಂದ 6000ರೆಗೆ ಪಡೆಯುತ್ತಾರೆ. ಅಷ್ಟೇ ಅಲ್ಲದೇ 12 ವಯಸ್ಸಿನ ಮಕ್ಕಳನ್ನು ಕೂಡ ಕಲ್ಲಿನ ತೂರಾಟದಲ್ಲಿ ಬಳಸಲಾಗುತ್ತಿದ್ದು, ಇವರಿಗೆ ಸುಮಾರು 4000 ರೂಪಾಯಿಗಳವರೆಗೆ ನೀಡಲಾಗುತ್ತದೆ ಎನ್ನುವ ಅಂಶವನ್ನು ಹೇಳಲಾಗಿದೆ!!

ಮಾಹಿತಿ ರವಾನಿಸುತ್ತಿದ್ದದ್ದು ವಾಟ್ಸಾಪ್ ಮೂಲಕ!!!

ಹೌದು… ವಾಟ್ಸಾಪ್ ಗುಂಪುಗಳ ಮೂಲಕ ಈ ಕಲ್ಲು ತೂರಾಟ ನಡೆಸುವ ಜನರಿಗೆ ಮಾಹಿತಿ ತಲುಪುತ್ತಿತ್ತು. ಇದರಲ್ಲಿ ಯಾರನ್ನು ಹೊಡೆಯಬೇಕು ಎನ್ನುವ ಸ್ಪಷ್ಟ
ಮಾಹಿತಿಯನ್ನು ನೀಡಲಾಗುತ್ತಿತ್ತು!! ಕಲ್ಲುತೂರಾಟವನ್ನು ಬಾರಾಮುಲ್ಲಾ, ಸೋಪೋರ್, ಖೋಜ್‍ಬಾಗ್ ಮತ್ತು ಶ್ರೀನಗರಗಳಲ್ಲಿ ಮಾಡಲಾಗಿದೆ. ಇಬ್ರಾಹಿಂ ಎನ್ನುವ ವ್ಯಕ್ತಿ ತಿಂಗಳಿಗೆ 10000 ದಿಂದ 12000 ರುಪಾಯಿಗಳನ್ನು ಪಡೆಯುತ್ತಿದ್ದ!!!ಅಷ್ಟೇ ಅಲ್ಲದೇ ಈ ದರಗಳು ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನವಾಗಿರುತ್ತಂತೆ!! ಹಾಗೂ ಅವುಗಳ ಅನುಭವದ ಪ್ರಕಾರ ದರದಲ್ಲೂ ಬದಲಾವಣೆಗಳು ನಡೆಯುತ್ತವೆ ಎನ್ನುವುದನ್ನು ಹೇಳಿದ್ದಾರೆ.

ರಾವಲ್ಪಿಂಡಿಯ ಐಎಸ್‍ಐ ಕಚೇರಿಯಲ್ಲಿರುವ ಅಹ್ಮದ್ ಸಾಗರ್ ಎಂಬಾತ ಹುರಿಯತ್ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರಪ್ ಶಾ ಜತೆ ನಿರಂತರ
ಸಂಪರ್ಕದಲ್ಲಿದ್ದಾನೆ. ಪಾಕಿಸ್ತಾನದಿಂದ ಬಂದ ಹಣವನ್ನು ವಿವಿಧ ಕಚೇರಿಗಳಿಗೆ ವಿತರಿಸುವ ಶಾ, ಕಲ್ಲು ತೂರಾಟ ನಡೆಸುವ ಕೆಲಸಕ್ಕೆ ಯುವಕರನ್ನು
ನೇಮಿಸಿಕೊಳ್ಳುತ್ತಿದ್ದಾನೆ. ಅಹ್ಮದ್ ಸಾಗರ್ ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಜೊತೆಗೆ ನಿಕಟವರ್ತಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. ಇದೇ ತಿಂಗಳ ಆರಂಭದಲ್ಲಿ ಎನ್‍ಐಎ ಕಾಶ್ಮೀರಿ ಉದ್ಯಮಿ ಜಹೂರ್ ವಟಾಲಿ ಅವರನ್ನು ಬಂಧಿಸಿತ್ತು. ಇವರ ವ್ಯವಹಾರ ದೆಹಲಿ, ಮುಂಬೈ, ಚಂಡೀಗಢ ಮತ್ತು ದುಬೈನಲ್ಲಿ ನಡೆಯುತ್ತಿದೆ. ಪಾಕಿಸ್ತಾನದಿಂದ ಹಣ ಸಹಾಯ ಪಡೆದು, ವಟಾಲಿ ಕಾಶ್ಮೀರದಲ್ಲಿ ಯೋಧರ ಮೇಲೆ ಕಲ್ಲು ತೂರಾಟ ನಡೆಸುವವರಿಗೆ ಪ್ರಚೋದನೆ ನೀಡುತ್ತಿದ್ದ. ಈತ ಗೀಲಾನಿ ಆಪ್ತನೆಂದು ಹೇಳಲಾಗುತ್ತಿದೆ.

ಈ ಆಘಾತಕಾರಿ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಹಾಗೂ ಹರಿಯತ್ ನಾಯಕರ ನಡುವಿನ ವ್ಯವಹಾರಗಳು ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಕಾಶ್ಮೀರ ಪೆÇಲೀಸ್ ಪ್ರಧಾನ ನಿರ್ದೇಶಕರಿಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

– ಅಲೋಖಾ

Tags

Related Articles

Close