ಅಂಕಣ

ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎನ್ನುವ ಹಾಗಿದೆ ಮೋದಿ ವಿರೋಧಿಗಳ ಬಾಯಿ ಚಪಲತೆ!! ಯಾಕೆ ಗೊತ್ತಾ ??

” ನೀವು ಮೋದಿ ಅಭಿಮಾನಿಗಳಾ?? ಹಾಗಾದರೆ ನೀವು ಖಂಡಿತ ಭಾರತದ ಉದ್ಧಾರವನ್ನು ಬಯಸುವವರಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ
ಅಸಹಿಷ್ಣು ಅಧಿಕವಾಗಿದೆ. ಕೃಷಿ ವ್ಯವಸ್ಥೆ ಏನಾಗುತ್ತಿದೆಯೆಂಬ ಕಲ್ಪನೆ ಇದೆಯಾ ನಿಮಗೆ? ಉದ್ದಿಮೆದಾರರ ಗೆಳೆನಾಗಷ್ಟೇ ಕೆಲಸ ಮಾಡುತ್ತಿದ್ದಾರೆ ಮೋದಿ. ನೋಟು
ಬ್ಯಾನ್ ಆದ ಸಂದರ್ಭದಲ್ಲಿ ಸಾಮಾನ್ಯ ಜನ ಅನುಭವಿಸಿದ ಕಷ್ಟಗಳ ಕುರಿತಾಗಿ ನಿಮಗೆ ಹಾಗೂ ನಿಮ್ಮ ಮೋದಿಗೆ ಅರಿವಿದೆಯಾ?? ಮೋದಿ ಒಬ್ಬ ನರಹಂತಕ. ಅವರು ಬಡವರ ಕುರಿತಾಗಿ ಕಿಂಚಿತ್ತೂ ಚಿಂತಿಸುವವರಲ್ಲ. ವಸಿಷ್ಠರವರೇ, ನೀವು ಅವರ ಬಗ್ಗೆ ಎಷ್ಟು ಬರೆಯುತ್ತೀರಿ? ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನೀವು ದೇಶದ್ರೋಹಿಯೊಂದಿಗೆ ಕೈಜೋಡಿಸಬೇಡಿ” .

ಗಾಬರಿಯಾಗಬೇಡಿ. ಹಿಂದಿನ ಲೇಖನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಮಹಾನ್ ದೇಶಭಕ್ತರು ನೀಡಿದ ಪ್ರತಿಕ್ರಿಯೆಯಿದು.

ಬಹಳ ಸಂತೋಷದ ವಿಚಾರವೆಂದರೆ ಅವರೂ ದೇಶದ ಕುರಿತಾಗಿ ಚಿಂತಿಸುತ್ತಾ ದೇಶಭಕ್ತರನ್ನು ತೆಗಳುತ್ತಿದ್ದಾರೆ. ವಿಪರ್ಯಾಸವಂದರೆ ಇದೇ ಇರಬೇಕು. ಯಾರ
ಸಾಧನೆಯನ್ನು ಅಳತೆ ಮಾಡಬೇಕಾದರೂ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಕಾಗುತ್ತದೆ. ಆದರೆ ಮೋದಿಯವರ ವಿಚಾರದಲ್ಲಿ ಮಾತ್ರ ಅದು ಅನಗತ್ಯ.
ಯಾಕೆಂದರೆ ಹಿಂದಿನ ಸರಕಾರದ ಸಾಧನೆ ಶೂನ್ಯ. ಹಾ.. ಕೆಲವು ಸಾಧನೆಗಳಿವೆ. ಅದನ್ನು ಉಲ್ಲೇಖಿಸದಿದ್ದರೆ ಹೇಗೆ ಹೇಳಿ?? 2ಜಿ ಹಗರಣ, ಕಲ್ಲಿದ್ದಲು ಹಗರಣ, ಜನರ
ದುಡ್ಡಿನಲ್ಲಿ ಐಷಾರಾಮೀ ವಿದೇಶಿ ಪ್ರವಾಸ ಇತ್ಯಾದಿ ಇತ್ಯಾದಿ. ಆದರೆ ಪ್ರಸ್ತುತ ಸರಕಾರದ ಸಾಧನೆಯ ಪಟ್ಟಿ ಮಾಡುತ್ತಾ ಸಾಗಬಹುದು. ಜನಧನ ಯೋಜನೆ, ಸ್ವಚ್ಛ ಭಾರತಕ್ಕೆ ಕರೆ, ಭಯೋತ್ಪಾದಕರ ವಿರುದ್ಧ ತಳೆದ ಕಠಿಣ ನಿಲುವು, ಡೋಕ್ಲಾಮ್ ವಿಚಾರದಲ್ಲಿ ರಾಜತಾಂತ್ರಿಕ ಗೆಲುವು, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಪರಿಕಲ್ಪನೆ, ಅಂತರಾಷ್ಟ್ರೀಯವಾಗಿ ದೇಶವನ್ನು ಗೌರವಿಸುವಂತೆ ಮಾಡಲು ಕೈಗೊಂಡ ಕಾರ್ಯಸೂಚಿಗಳು.. ವ್ಹಾ.. ಹೇಳುತ್ತಾ ಹೋದರೆ ಅದು ಮುಗಿಯದ ಅಧ್ಯಾಯ.. ಆದರೆ ಇದು ಎಡಬಿಡಂಗಿ ಬುದ್ಧಿಜೀವಿಗಳಿಗೆ ಹಾಗೂ ಲದ್ದಿಜೀವಿ ಎಡಪಂಥೀಯರಿಗೆ ಹೇಗೆ ಗೊತ್ತಾಗಬೇಕು??

ಸ್ಪಷ್ಟೀಕರಣ ಅಥವಾ ಸಮರ್ಥನೆಯಲ್ಲ: ಆದರೆ ವಾಸ್ತವ ವಿಚಾರ :

ವೈಚಾರಿಕ ದೃಷ್ಟಿಕೋನವಿರಬೇಕೆಂದು ನಮಗೆ ಉಪದೇಶಿಸುವ ಲದ್ಧಿಜೀವಿಗಳು ಮಾತ್ರ ಆ ನಿಟ್ಟಿನಲ್ಲಿ ಚಿಂತಿಸುವುದು ಕೂಡ ಇಲ್ಲ. ಕೆಲವೊಂದು ವಿಚಾರಗಳನ್ನು
ವೈಚಾರಿಕ ದೃಷ್ಟಿಕೋನದಿಂದಲೇ ವಿಮರ್ಶಿಸೋಣ.

1. ನೋಟು ಅಪಮೌಲ್ಯವೆಂಬ ಯೋಜನೆಯ ಸುತ್ತಮುತ್ತ :

ಅದು ನವೆಂಬರ್ 8 ರ ರಾತ್ರಿಯ ಸಮಯ. ಅನೇಕರು ತಮ್ಮ ಕಾಯಕವನ್ನು ಮುಗಿಸಿ ,ಮನೆಗೆ ಬಂದು, ಊಟ ಮಾಡಿ ಟೀವಿಯ ಮುಂದೆ ಕುಳಿತುಕೊಳ್ಳುತ್ತಿದ್ದ ಸಮಯ. ಅದೇ ಸಮಯಕ್ಕೆ ಟಿವಿಯಲ್ಲ ಕಾಣಿಸಿಕೊಂಡರು ಪ್ರಧಾನಿ. “ನನ್ನ ಅಣ್ಣ ತಂಗಿಯರೇ, ಇವತ್ತು ರಾತ್ರಿಯಿಂದ 1000 ಮತ್ತು 500 ಹಣದ ನೋಟನ್ನು ನಿಷೇಧ ಮಾಡಲಾಗುವುದು” ಎಂದುಬಿಟ್ಟರು. ಅಲ್ಲಿಗೆ ಎಡಪಂಥೀಯ ಬುದ್ಧಿಗಳಿಗೆ ಹಾಗೂ ಭ್ರಷ್ಟರಿಗೆ ಆ ರಾತ್ರಿ ನಿದ್ದೆ ಬರಲೇ ಇಲ್ಲ. ಪಾಪ!! ಅನೇಕರು ಅಸ್ವಸ್ಥರಾಗಿ
ಆಸ್ಪತ್ರೆಯನ್ನೇ ಸೇರಿದರು. ಆದರೆ ಸಾಮಾನ್ಯ ಪ್ರಜೆ ಮಾತ್ರ ದೇಶದ ಹಿತಕ್ಕಾಗಿ ನಾವು ಸ್ವಲ್ಪ ಕಷ್ಟವನ್ನು ಸಹಿಸಲು ಸಿದ್ಧವೆಂದರು. ನೈಜ ರಾಷ್ಟ್ರಪ್ರೇಮಿಗಳನ್ನು ದೇಶದ ಮುಂದೆ ತೆರೆದಿಟ್ಟ ಸನ್ನಿವೇಶವೆನ್ನಬಹುದು ಅದನ್ನು. ನನ್ನ ಪ್ರಕಾರ ಅದು ದೇಶಭಕ್ತರಿಗೆ ಒದಗಿದ ಪರೀಕ್ಷೆ. ಬಿಡಿ. ಅದರಿಂದ ಸಾಮಾನ್ಯ ಜನರಿಗೆ ಆದ ಕಷ್ಟವನ್ನು ಮಾತ್ರ ಬೊಬ್ಬಿಡುತ್ತಾರೆ. ಆದರೆ ಅದರ ನಂತರದ ಪರಿಣಾಮ .. ಅನೇಕರಿಗೆ ಗೊತ್ತೇ ಆಗಲಿಲ್ಲ. ನೀವೇ ವಿಮರ್ಶಿಸಿ ನೋಡಿ.

ಅದರ ಸಾಮಾನ್ಯ ಪರಿಣಾಮ ನಮಗೆಲ್ಲಾ ಅರಿವಿದೆ. ಭ್ರಷ್ಟರ ನಿರ್ಮೂಲನೆ, ಕಳ್ಳಹಣವನ್ನು ಸ್ಥಗಿತವಾಗಿಸುವುದು, ಇತ್ಯಾದಿ. ಆದರೆ ಮಕ್ಕಳ ಕಳ್ಳಸಾಗಾಣಿಕೆಯೂ
ಸ್ಥಗಿತವಾಗಿದೆಯೆಂಬುದು ಅದೆಷ್ಟು ಜನರಿಗೆ ಗೊತ್ತು?? ನಿಜ. ಮಕ್ಕಳ ಹಕ್ಕುಗಳ ಹೋರಾಟಗಾರರಾಗಿರುವ ರಾಕೇಶ್ ಸೇಂಜೆರ್ ಅವರು “ಹುಡುಗಿಯರನ್ನು ಸುಮಾರು 2-3 ಲಕ್ಷಕ್ಕೆ ಮಾರಾಟ ಮಾಡಲಾಗುತ್ತದೆ. ಇದರ ಹಿಂದೆ ದೊಡ್ಡ ಮಾಫಿಯಾವೇ ಭಾಗಿಯಾಗಿದೆ. ಅನೇಕರಿಗೆ ಕೊಡುವ ಲಂಚ ಕೂಡ ಇದು ಒಳಪಟ್ಟಿದೆ.” ಎಂಬುದಾಗಿ ಹೇಳಿದ್ದರು. ಈ ದಂಧೆ ಅಸ್ಸಾಂ, ಬಿಹಾರ, ಝಾರ್ಖಾಂಡ್, ಚೆನ್ನೈ, ಬೆಂಗಳೂರು, ಮುಂಬೈ ನಗರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಕೈಲಾಶ್ ಸತ್ಯಾರ್ಥಿಯವರು ನೋಟು ಅಮೌಲ್ಯದಿಂದಾಗಿ ಈ ದಂಧೆಗೆ ಬಹಳ ದೊಡ್ಡ ಆಘಾತವೇ ಆಗಿದೆ ಎಂದರು. ಇದುವರೆಗೆ ನೇರಾನೇರಾ ನಡೆಯುತ್ತಿದ್ದ ಈ ವ್ಯವಹಾರಕ್ಕೆ ಈಗ ಕಡಿವಾಣ ಬಿದ್ದಿದೆ. ಯಾಕೆ ಗೊತ್ತಾ?? 2.5 ಲಕ್ಷ ಮಾತ್ರ ಹಣವನ್ನು ನೇರವಾಗಿ ವರ್ಗಾವಣೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಮೂಲಕವೇ ಪಾವತಿಸಬೇಕು. ಆಗ ಉಪಯೋಗ ಮಾಡಬೇಕಾದ ಕಾರಣವನ್ನೂ ಕೊಡಬೇಕಾಗುತ್ತದೆ. ಇದೆಲ್ಲದರ ಪರಿಣಾಮ ಆ ದಂಧೆ ಬಹುತೇಕ ಅಂತ್ಯವಾಗಿದೆ. ಹಳೆ ನೋಟುಗಳು ನಡೆಯುತ್ತಿಲ್ಲ, ಹೊಸ ನೋಟುಗಳು ಅಷ್ಟೊಂದು ಮೊತ್ತದಷ್ಟು ಸಿಗೋದಿಲ್ಲ.

ರಾಕೇಶ್ ಅವರು ಇದರ ಕುರಿತಾಗಿ ಒಂದು ವರದಿಯಲ್ಲಿ ಉಲ್ಲೇಖ ಮಾಡುತ್ತಾರೆ, “ಸುಮಾರು 10-12 ವರ್ಷ ಪ್ರಾಯದ ಹುಡುಗಿಯರು 5 ಲಕ್ಷ ಮೊತ್ತದವರೆಗೂ
ಮಾರಾಟವಾಗುತ್ತಾರೆ. ಆದರೆ ಎಲ್ಲವೂ ಕಳ್ಳಹಣದ ಮೂಲಕವೇ.!! ” ಈಗ ಈ ಎಲ್ಲಾ ಚಟುವಟಿಕೆಗಳು ನಿತ್ತಿವೆ. ಇದನ್ನು ಸ್ವತಃ ಕೇಂದ್ರ ಅಧಿಕಾರಿಗಳೇ
ಸ್ಪಷ್ಟಪಡಿಸಿದ್ದಾರೆ. ಆದರೆ ಗಂಜಿಗಿರಾಕಿಗಳಿಗೆ ಈ ಅಪೂರ್ವ ಗೆಲುವು ಗೋಚರಿಸಲೇ ಇಲ್ಲ.

ಅದುವರೆಗೂ ಕಾಶ್ಮೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳು ನವೆಂಬರ್ 8 ರಿಂದ ಭಾರೀ ಪ್ರಮಾಣದಲ್ಲಿ ಕುಸಿತವುಂಟಾಯಿತಲ್ಲ!! ಅದಾವುದರ ಪರಿಣಾಮ?? ಅದೇ ನೋಟು ಅಮೌಲ್ಯೀಕರಣ. ಯೋಚಿಸಿ. ಕೇವಲ ಒಂದು ದೂರದೃಷ್ಟಿಯ ಚಿಂತನೆ ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಯೆತೆಂಬುದು ಮಾತ್ರ ಸ್ಪಷ್ಟ.

2. ಸ್ಕಿಲ್ ಭಾರತ, ಡಿಜಿಟಲ್ ಭಾರತ !!

ನಾವು ಪದೇ ಪದೇ ಕೇಳುತ್ತಿರುವ ಮಾತುಗಳಿವು. ಭಾರತದ ಯುವ ಜನತೆ ಹಾಳಾಗಿಹೋಗಿದ್ದಾರೆ. ಆದರೆ ಯುವ ಜನತೆಗೆ ಶಕ್ತಿಯನ್ನು ತುಂಬಿಸುವ ಕಾರ್ಯ ಕೇವಲ ಅವರ ಮನೆಯವೆರದ್ದು ಆಗಿರುವುದಿಲ್ಲ, ಅದು ಸರಕಾರದ ಕಾರ್ಯವೆಂದು ನಿರೂಪಿಸಿದ ಪ್ರಥಮ ಸರಕಾರವಿದು. ಯುವಕರಿಗೆ ಸ್ಫೂರ್ತಿಯನ್ನು, ಪ್ರೇರಣೆಯನ್ನು, ಉದ್ಯೋಗ ಮಾಡಲು ಅಗತ್ಯವಿರುವ ಪರಿಪೂರ್ಣ ತರಬೇತಿಯನ್ನು ಕೊಡುವಲ್ಲಿ ಮೋದಿ ಸರಕಾರ ತಲ್ಲೀನವಾಗಿದೆ. ಆ ಮೂಲಕ ಯುವಕರಿಗೆ ಜವಾಬ್ದಾರಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದಷ್ಟೇ ಅಲ್ಲದೇ ಅವರನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿದೆ. ದೇಶವನ್ನು ಬೆಳಗುವಲ್ಲಿ ಅವರು ಆಶಾಕಿರಣಗಳಾಗುತ್ತಿದ್ದಾರೆ.

ಡಿಜಿಟಲ್ ಭಾರತ!! ಭಾರತವನ್ನು ಸಂಪೂರ್ಣ ತಂತ್ರಜ್ಞಾನದಲ್ಲಿ ಮುಳುಗಿಸಬೇಕೆಂಬ ಚಿಂತನೆಯಲ್ಲಿ ಪ್ರಾರಂಭವಾದ ಯೋಜನೆಯಲ್ಲವಿದು. ಕಾಗದರಹಿತ ಸಮಾಜವನ್ನು ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿದೆ. ಆ ಮೂಲಕ ಪರಿಸರ ರಕ್ಷಣೆಯ ಜವಾಬ್ದಾರಿ. ಇದು ವಿಫಲವಾದ ಯೋಜನೆಯೆಂದುಕೊಳ್ಳಬೇಡಿ. ಅನೇಕ ಬೀದಿಯಂಗಡಿಯವರೂ ಕೂಡ ಇದರಲ್ಲಿ ಪಾಲುದಾರರು. ಅತೀ ಬಡತನದಲ್ಲಿರುವ ವ್ಯಕ್ತಿ ಕೂಡ ಈ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದರು.
ಭ್ರಷ್ಟಾಚಾರವನ್ನು ಕಾನೂನುಸಮ್ಮತವಾಗಿ ಮಾಡಿಬಿಟ್ಟಿದೆ ಮೋದಿ ಸರಕಾರ ಅನ್ನುವವರಿಗೆ ಒಂದು ಕಿವಿ ಮಾತು. ಹಣಕಾಸಿನ ಎಲ್ಲಾ ವ್ಯವಹಾರಗಳು ಈ ಯೋಜನೆಯ ಪ್ರಕಾರ ಬ್ಯಾಂಕ್ ಮೂಲಕವೇ ನಡೆಯಬೇಕು. ಪ್ರತೀ ವ್ಯವಹಾರಗಳ ಮೇಲೂ ಒಂದು ನಿರ್ದಿಷ್ಟ ವ್ಯವಸ್ಥೆ ಕಣ್ಣಿಟ್ಟಿರುವಾಗ ಅವ್ಯವಹಾರ ಸಾಧ್ಯವೇ??

3. ರಸ್ತೆ ಕಾಮಗಾರಿ :

ವಿಶ್ವ ಸಂಸ್ಥೆ ನೀಡಿದ ವರದಿಯ ಪ್ರಕಾರ ಭಾರತವು ಬರೋಬ್ಬರಿ 3.3 ಮಿಲಿಯನ್ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ ವಿಶ್ವದ ಎರಡನೆಯ ಅತೀ ದೊಡ್ಡ
ಸಂಪರ್ಕ ವ್ಯವಸ್ಥೆಯನ್ನು ಹೊಂದಿವೆ. ರಸ್ತೆ ನಿರ್ಮಾಣ ಕಾರ್ಯದಲ್ಲಿ ಹಿಂದಿನ ಸರಕಾರಕ್ಕಿಂತ ವೇಗವಾಗಿ ನಿರ್ಮಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿವೆ. 2019 ನೆಯ ಇಸವಿಯಲ್ಲಿ ದಿನಕ್ಕೆ 30 ಕಿಲೋಮೀಟರ್ ರಸ್ತೆ ನಿರ್ಮಿಸುವ ಗುರಿಯನ್ನೂ ಮೋದಿ ನೇತೃತ್ವದ ಸರಕಾರ ಹೊಂದಿದೆ.

4. ಕೃಷಿ ವ್ಯವಸ್ಥೆ :

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : “ಒಂದು ಹನಿಗೆ ಹೆಚ್ಚು ಬೆಳೆ” ಅನ್ನುವ ಸಂಕಲ್ಪದೊಂದಿಗೆ ರೂಪಿತಗೊಂಡ ಯೋಜನೆ. ಕೃಷಿಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನವನ್ನೂ ಈ ಯೋಜನೆಯ ಮೂಲಕ ಮಾಡಿದ್ದಾರೆ. ನೀರು ಸಂರಕ್ಷಣೆಯ ಕುರಿತಾಗಿಯೂ ಹೆಚ್ಚು ಪ್ರಾಮುಖ್ಯ ವಹಿಸುತ್ತಿದೆ ಮೋದಿ ಸರಕಾರ. 5 ವರ್ಷಕ್ಕೆ 50000 ಕೋಟಿ ರೂಗಳನ್ನು ಈ ಯೋಜನೆಗಳಿಗೆ ವಿನಿಯೋಜಿಸಲಾಗಿದೆ. 2015-16 ರಲ್ಲಿ 5300 ಕೋಟಿ ರೂಗಳನ್ನು ನಿಗಡಿಪಡಿಸಲಾಗಿದೆ. ಮಣ್ಣಿನ ಮಹತ್ವವನ್ನು ಸಾರುವುದಕ್ಕಾಗಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ. ಕೃಷಿಯಲ್ಲಿ ಬಳಸಲ್ಪಡುವ ಜಾನುವಾರುಗಳಿಗೂ ವಿಶೇಷ ಸ್ಥಾನಮಾನ. ಆಶ್ಚರ್ಯಗೊಳ್ಳಬೇಡಿ. ಪ್ರತಿಯೊಂದು ಜಾನುವಾರುಗಳ ಮೇಲೂ ನಿಗಾವಹಿಸಲು ಆಧಾರ್ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ದನಗಳ ಕಳ್ಳಸಾಗಾಣಿಕೆ ಹಾಗೂ ಅವ್ಯವಹಾರವನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯೆಂದೇ ಹೇಳಬೇಕು. ಈ ಎಲ್ಲಾ ಯೋಜನೆಗಳ ಫಲ ಕೆಲವೇ ವರ್ಷಗಳಲ್ಲಿ ದೊರೆಯಲಿದೆ. ಕಳೆದ ಮೂರು ವರ್ಷಗಳಲ್ಲಿ ಆಹಾರ ಧಾನ್ಯದ ಉತ್ಪಾದನೆಯಲ್ಲಿಯೂ ಏರಿಕೆಯನ್ನು ಕೃಷಿ ಕಂಡಿದೆ. 2014 ರಲ್ಲಿ 252.02 ಮಿಲಿಯನ್ ಟನ್ ಆಗಿದ್ದರೆ 2016-17ರಲ್ಲಿ 273.38 ರಷ್ಟು ಏರಿಕೆಯನ್ನು ಕಂಡಿವೆ.

5. ಸ್ವದೇಶಿ ಮಾರುಕಟ್ಟೆಯನ್ನು ಉತ್ತೇಜಿಸಲು ಮುದ್ರಾ ಯೋಜನೆ :

Make in India ಯೋಜನೆಯಿಂದ ಸ್ವದೇಶೀ ಮಾರುಕಟ್ಟೆ ನಶಿಸಿ ಹೋಗುತ್ತಿದೆಯೆಂದೆಲ್ಲಾ ಮಾತನಾಡುತ್ತಿರುವವರು ತಿಳಿಯಲೇ ಬೇಕಾದ ವಿಚಾರವಿದು.
ಸ್ವದೇಶೀ ಮಾರುಕಟ್ಟೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರಕಾರ ಕೈಗೊಂಡಿರುವ ಯೋಜನೆಯಿದು 3 ವಿಧದಲ್ಲಿವೆ.
1. ಶಿಶು – 50000 ರೂ ಗಳವರೆಗೆ ಸಾಲ.
2. ಕಿಶೋರ – 5 ಲಕ್ಷದ ತನಕ ಹಾಗೂ ಅಂತಿಮ ಘಟ್ಟ
3. ತರುಣ – 10 ಲಕ್ಷದವರೆಗೆ ಸಾಲ.
ಈ 3 ಘಟ್ಟದಲ್ಲಿ ವಿವಿಧ ಉದ್ಯಮಿಗಳಿಗೆ ಸಹಾಯವನ್ನು‌ ನೀಡುತ್ತಿದೆ. ನಿಮಗೆ ನೆನಪಿರಲಿ. ಇದುವರೆಗೆ ಭಾರತದ 58 ಮಿಲಿಯನ್ ಸಣ್ಣ ಉದ್ಯಮಿಗಳಿಗೆ ಇದು
ಆಶಾಕಿರಣಗಳಾಗಿವೆ. 120 ಮಿಲಿಯನ್ ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ. ಇನ್ನು ಬೇರೇನು ಬೇಕು ಹೇಳಿ??

6. ಬುಲೆಟ್ ರೈಲು ಎಂಬ ವೇಗದೂತ :

ಇದರ ಕುರಿತಾಗಿಯೂ ಹಲವೆಡೆ‌ ಚರ್ಚೆಯಾಗುತ್ತಿದೆ. 88000 ಕೋಟಿ ಸಾಲವನ್ನು ಜಪಾನ್ ನಿಂದ ಪಡೆದು 0.01% ಬಡ್ಡಿಯೊಂದಿಗೆ ಮುಂದಿನ 50 ವರ್ಷಗಳ
ಮುಂಚಿತವಾಗಿ ಮರುಪಾವತಿಸಬೇಕು. ಇದರ ಲಾಭದ ಕುರಿತಾಗಿ ಅಥವಾ ಪ್ರಯಾಣಿಕರಿಗೆ ದರವನ್ನು ಇನ್ನೂ ನಿಗದಿಪಡಿಸಿಲ್ಲ. ಆದರೆ ಈ ಯೋಜನೆ ಶೀಘ್ರ
ಸಂಪರ್ಕವನ್ನು ಸಾಧಿಸಲು ಪೂರಕವಾಗಲಿದೆ. ಸುಮಾರು 4000 ನೇರ ಉದ್ಯೋಗ, 20000 ಉದ್ಯೋಗಗಳು ಪರೋಕ್ಷವಾಗಿ ಸೃಷ್ಚಿಯಾಗಲಿವೆ. ಅಷ್ಟೇ‌ ಅಲ್ಲದೆ
20000 ಜನರಿಗೆ ಕಾಮಗಾರಿಯ ಮೂಲಕವೂ ಉದ್ಯೋಗ ಸಿಗಲಿವೆ. ಅಲ್ಲದೇ ಮುಂದಿನ ದಿನಗಳಲ್ಲಿ ಇದು ಯಶಸ್ವಿಯಾದ ಉದ್ದಿಮೆಯೇ ಆಗಲಿವೆಯೆಂಬುದೂ ಸ್ಪಷ್ಟ. 2022 ರ ಆಗಸ್ಟ್ 15 ರ ಒಳಗೆ ಈ ಯೋಜನಾ ಕಾಮಗಾರಿ ಪೂರ್ಣವಾಗಲಿವೆಯೆಂಬುದಾಗಿ ಪೀಯೂಷ್ ಗೋಯಲ್ ಅವರು ಸ್ಪಷ್ಟಪಡಿಸಿದ್ದಾರೆ.

7. ಲದ್ಧಿಜೀವಿಗಳ ಪ್ರಶ್ನೆಗಳಿಗೆ ಕೆಲವು ಉತ್ತರಗಳು :

ಗುಜರಾತ್ ಹತ್ಯಾಖಾಂಡದ ಕುರಿತಾಗಿ ಮಾತನಾಡುವವರು ತುರ್ತು ಪರಿಸ್ಥಿತಿಯ ಸಂದರ್ಭ ಹಾಗೂ ಸಿಖ್ ನರಮೇಧದ ಕುರಿತಾಗಿ ಪ್ರಥಮವಾಗಿ ಉತ್ತರಿಸಲಿ.
ಉತ್ತರಪ್ರದೇಶದಲ್ಲಿ ಅಮಾಯಕ ಮಕ್ಕಳು ಆಸ್ಪತ್ರೆಯಲ್ಲಿ ಮರಣಹೊಂದಿದ ವಿಚಾರವನ್ನೇ ಹಿಡಿದೆಳೆದ ಬುದ್ಧಿಜೀವಿಗಳಿಗೆ ಕರ್ನಾಟಕದ ಕೋಲಾರದ ಆಸ್ಪತ್ರೆಯಲ್ಲಿ ನಡೆದ ದುರಂತದ ಅರಿವೇ ಆಗಲಿಲ್ಲವೇನೋ!! ಉತ್ತರಪ್ರದೇಶದಲ್ಲಿ ತಕ್ಷಣ ಅದರ ಮೂಲವನ್ನು ಹಿಡಿದು ಪರಿಹಾರವನ್ನು ಸೂಚಿಸಿದರು. ಆದರೆ ಕರುನಾಡಿನಲ್ಲಿ?? ಅದೇ ನಿದ್ದೆ. ಅದೇ ಕುತಂತ್ರ ರಾಜಕಾರಣ..ಅವರಿಗೆ ಮುಗ್ಧ ಮಕ್ಕಳ ಜೀವವನ್ನು ತಮ್ಮ ಸ್ವಾರ್ಥಕ್ಕೆ ಬಲಿತೆಗೆಯುವುದು ಮಾತ್ರ ಅರಿವಿದೆ. ದುರಂತ!!!

ನಿರ್ಮಲಾ ಸೀತಾರಾಮನ್ ಶಾಂತಿಯ ದೂತರಾಗಲಿ. ಮೋದಿಯಂತೆ‌ ಯುದ್ಧ ಪಿಪಾಸುವಾಗದೇ ಇರಲಿಯೆಂಬ ಆಶಯವಿತ್ತಲ್ಲವೇ ವಿಚೀರವಾದಿಗಳಿಗೆ? ಒಂದು ಕ್ಷಣ ಆಲೋಚನೆ ಮಾಡಿ. ಪಾಕಿಸ್ತಾನ ಹಾಗೂ ಚೀನಾ ಒಟ್ಟಿಗೆ ಭಾರತದ ಮೇಲೆ ಯುದ್ಧ ಸಾರಿತು. ಸೀತಾರಾಮನ್ ನೆಹರೂವಿನಂತೆ ಸಹೋದರತ್ವದ, ಶಾಂತಿಯ ಪಾಠವನ್ನು ಬೋಧಿಸುತ್ತಿರಬೇಕೇ?? ಅಥವಾ ಅವರ ಪ್ರಶ್ನೆಗೆ ಅವರದ್ದೇ ಆದ ರೀತಿಯಲ್ಲಿ ಪ್ರತಿಕ್ರಯಿಸಬೇಕೇ?? ನೈಜ ಭಾರತೀಯರಿಗೆ 1962 ರ ಭಾರತ ಮರುಕಳಿಸುವುದಂತೂ ಸುತಾರಾಂ ಇಷ್ಟವಿಲ್ಲ. ಆ ನಿಟ್ಟಿನಲ್ಲಿ , ಆ ಸಂದರ್ಭದಲ್ಲಿ ಅಂದು ಬಾಂಗ್ಲಾದೇಶ ವಿಚಾರದಲ್ಲಿ ಇಂದಿರಾರಂತೆ ಕಾಳಿ ರೂಪವನ್ನು ಸೀತಾರಾಮನ್ ಅವರು ತೋರಿದರೆ ನಮಗೆ ಹೆಮ್ಮೆಯೇ.

ಈ ದೇಶದಲ್ಲಿ ವಿಚಾರವಾದಿಗಳೇ ಹತ್ಯೆಯಾಗುತ್ತಿದ್ದಾರೆಂಬ ಆರೋಪವೂ ಮೋದಿಯ ಮೇಲೆಯೇ.. ಯಾವುದು ನಿಜವಾದ ವಿಚಾರ ಸ್ವಾಮೀ?? “ಭಾರತವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆಂದು ನುಡಿದವರೇ?”. ಓರ್ವ ಪ್ರಧಾನಿಯನ್ನು ಹುಚ್ಚಾ ವೆಂಕಟ್ ಎಂಬುದಾಗಿ ಸಂಬೋಧಿಸಿದವರನ್ನೇ?? ಯಾವುದೇ ವೈಚಾರಿಕ ಭಿನ್ನಾಭಿಪ್ರಾಯವಿದ್ದರೂ ದೇಶದ ಪ್ರಧಾನಿಯೋರ್ವರನ್ನು ನೀಚವಾಗಿ ಉಚ್ಚರಿಸುವುದು ವೈಚಾರಿಕತೆಯೇ?? ಹಾಗಾದರೆ ದೇಶಭಕ್ತರು ಅಮಾನುಷವಾಗಿ ಕೇರಳ ಹಾಗೂ ಬಂಗಾಳದಲ್ಲಿ ಹತ್ಯೆಯಾಗುತ್ತಾರಲ್ಲಾ.. ಅದರರ್ಥ ನೀವು ರಾಷ್ಟ್ರೀಯ ಚಿಂತನೆಯನ್ನು ಮಾಡದಿರಿ. ಹತ್ಯೆಯಾಗುತ್ತೀರಿ ಎಂದೇ?? ಅಷ್ಟಕ್ಕೂ ಯಾವುದೇ ರಾಜ್ಯದಲ್ಲಿ ಸಮಸ್ಯೆ ಉದ್ಭವಿಸಿದರೆ ಅದಕ್ಕೆ ಪರಿಹಾರ ಸೂಚಿಸಬೇಕಾದ್ದು ರಾಜ್ಯ‌ ಸರಕಾರ.‌ ಅದನ್ನು ಬಿಟ್ಟು, ಸರ್ವ ಸಮಸ್ಯೆಗಳನ್ನು ಕೇಂದ್ರದ ಮೇಲೆ ಹೊರಿಸುವುದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಅಷ್ಟೇ.!!!

ಮೋದಿಯವರು ಜಾರಿಗೆ ತಂದ ಅನೇಕ ಯೋಜನೆಗಳಲ್ಲಿ ಕೆಲವನ್ನು ಉಲ್ಲೇಖಿಸುತ್ತೇನೆ. ಜಸ್ಟ್‌ ನೋಡಿಬಿಡಿ.

1. ಪ್ರಧಾನಮಂತ್ರಿ ಜನಧನ ಯೋಜನೆ.

2. ಸರ್ದಾರ್ ಪಟೇಲ್ ಗೃಹ ನಿರ್ಮಾಣ ಯೋಜನೆ

3. ದೀನದಯಾಲ್ ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆ

4. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ

5. ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ

6. ಅಟಲ್ ಪೆನ್ಷನ್ ಯೋಜನೆ

7. ನಮಾಮಿ ಗಂಗಾ ಯೋಜನೆ

8. ಪ್ರಧಾನ ಮಂತ್ರಿ ಫಸಲ್ ಬೀಮ ಯೋಜನೆ

9. ಸಂಸದ್ ಆದರ್ಶ ಗ್ರಾಮ ಯೋಜನೆ

10. ಪ್ರಧಾನ ಮಂತ್ರಿ ಉಜ್ವಲ ಯೋಜನೆ.

ನಾನು ಕೆಲವೇ ಕೆಲವನ್ನು ಉಲ್ಲೇಖಿಸಿದ್ದೇನಷ್ಟೇ. ಇನ್ನೂ ಅದೆಷ್ಟೋ‌ ಇವೆ. ಆದರೆ ನೈಜ ರಾಷ್ಟ್ರಪ್ರೇಮಿಯೋರ್ವ ಪ್ರಧಾನಿಯಾದುದು ಬಹುಶ: ದೇಶದ್ರೋಹಿಗಳಿಗೆ
ತಡೆಯಲಾಗದೇ ಹಿಂದಿನದನ್ನೇ ಕೆದಕುತ್ತಾ , ಅದರಲ್ಲಿಯೂ ವಿಫಲವಾಗಿ, ನಂತರ ದೇಶದ್ರೋಹಿಗಳ ತಾಯಿಗೆ ಪ್ರೋತ್ಸಾಹವನ್ನಿಟ್ಚು, ಅಂತಿಮವಾಗಿ ಕಾಶ್ಮೀರ
ಸ್ವತಂತ್ರವಾಗಲಿ ಅನ್ನುವಲ್ಲಿಯವರೆಗೆ ಹೋರಾಟ ಮುಂದುವರೆಸಿದ್ದಾರೆ. ನಮ್ಮ ಹೆಮ್ಮೆಯ ದೇಶದ ದುರಂತದ ಕಥನವಿದು!!!

ಮಿತ್ರರೇ.. ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು. ಇದುವರೆಗೆ ಭಾರತದಲ್ಲಿ‌ ನಾವು ಕಂಡಿದ್ದು ಅಕ್ಷರಶ: ದಬ್ಬಾಳಿಕೆಯ, ಕುತಂತ್ರ ಹಾಗೂ ಸ್ವಾರ್ಥ ರಾಜಕಾರಣಿಗಳ ಆಡಳಿತ. ಆದರೆ ಅಪರೂಪಕ್ಕೆ ದೇಶವನ್ನು ಅಪಾರವಾಗಿ ಪ್ರೀತಿಸುವ ಓರ್ವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಏನೇ ಆದರೂ ದೇಶಕ್ಕೆ ದ್ರೋಹ ಬಗೆಯಲಾರರು ‌ಅನ್ನುವ ನಂಬಿಕೆ ನಮಗಿರಬೇಕಷ್ಟೇ. ಪ್ರಜೆ ರಾಜನ ಮೇಲೆ ನಂಬಿಕೆಯಿಡದಿದ್ದರೆ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುವುದು‌ ಹೇಗೆ ಹೇಳಿ??

ತಮ್ಮ ಬೇಳೆ ಬೇಯೋದಿಲ್ಲ ಅನ್ನುವ ಕಾರಣಕ್ಕೇ ಸರ್ವ ವಿಚಾರದಲ್ಲಿಯೂ ಕೊರತೆಗಳನ್ನು ಹುಡುಕುತ್ತಿದ್ದಾರಷ್ಟೇ. ನಮಗೆ ಪ್ರಥಮವಾಗಿ ಬೇಕಾದುದು ದೂರದೃಷ್ಟಿಯ‌ ಚಿಂತನೆ. ನಂತರ ಅದರ ಕುರಿತಾಗಿ ವಿಮರ್ಶೆ. ಚಿಂತನೆ ಉದಯವಾದ ಕೂಡಲೇ ಸಮಸ್ಯೆಗಳನ್ನು ಹೇಳಿದರೆ ಪರಿಹಾರ ಹೇಗೆ ಸಿಕ್ಕೀತು ನೀವೇ ಯೋಚಿಸಿ.!! ನೆನಪಿರಲಿ. ಮೋದಿ ತಮ್ಮ ಸ್ವಾರ್ಥಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿಲ್ಲ. ತಕ್ಷಣ ಬದಲಾವಣೆಬೇಕೆಂದು. ಆದರೆ ತಮ್ಮ ದೂರದೃಷ್ಚಿಯ ಚಿಂತನೆಗಳಿಂದ ಯೋಜನೆಗಳನ್ನು ರೂಪಿಸುತ್ತಿದ್ದಾರೆ, ರಾಷ್ಟ್ರದ ಮುಂದಿನ ಪೀಳಿಗೆಗೂ ಪೂರಕವಾಗಲಿಯೆಂದು!!!

ಒಂದಂತೂ ಸ್ಪಷ್ಟವಾಯಿತು. ದೇಶದ್ರೋಹಿಗಳು ಈಗ ಯಾವ ರೀತಿಯಾಗಿದ್ದಾರೆಂದರೆ, “ಕಾಮಾಲೆಗಳ ಕಣ್ಣಿಗೆ ಕಾಣೋದೆಲ್ಲ ಹಳದಿ” ಅನ್ನುವ ಗಾದೆಯಿದೆಯಲ್ಲ.
ಅಕ್ಷರಶ: ಸತ್ಯವದು. ದೇಶವನ್ನು ಅಗಾಧವಾಗಿ ಪ್ರೀತಿಸುವವರಿಗೆ ಮಾತ್ರ ಗೊತ್ತು ದೇಶಪ್ರೇಮಿಯೋರ್ವರ ಆಡಳಿತದ ಪ್ರಾಮುಖ್ಯತೆ..!! ನಿಜ‌ ಅಲ್ಲವೇ??

– ವಸಿಷ್ಠ

Tags

Related Articles

Close