ಅಂಕಣದೇಶಪ್ರಚಲಿತ

ಕೇಸರೀ ಖದರ್!! ರಸ್ತೆಯಲ್ಲಿ ನಮಾಜ್ ನಿಲ್ಲಿಸದ ನನಗೆ, ಠಾಣೆಗಳಲ್ಲಿ ಜನ್ಮಾಷ್ಟಮಿ ನಿಷೇಧಿಸುವ ಹಕ್ಕಿಲ್ಲ!!

ಕೇಸರೀ ವಸ್ತ್ರ ಧರಿಸಿದ ಒಬ್ಬ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯೊಂದು ಹುಸಿ ಸೆಕ್ಯುಲರ್ ವಾದಿಗಳನ್ನೆಲ್ಲ ನಡುಗಿಸಿರುವುದು ಸುಳ್ಳಲ್ಲ! ಆ ಹೇಳಿಕೆ ನೀಡಲು ತಾಕತ್ತೂ ಬೇಕು ಹಾಗೂ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ವಿವೇಕತನವೂ ಬೇಕು.

“ರಸ್ತೆಯಲ್ಲಿ ನಮಾಜು ನಿಲ್ಲಿಸಲು ಸಾಧ್ಯವಾಗದ ನನಗೆ, ಠಾಣೆಗಳಲಿ ಜನ್ಮಾಷ್ಠಮಿ ನಿಷೇಧಿಸುವ ಹಕ್ಕಿಲ್ಲ.” ಎಂದಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ!

ಹೌದು! ಇದು ನಿಜಕ್ಕೂ ಒಂದು ಮುಖ್ಯ ಅಂಶ! ಶತಮಾನಗಳಿಂದಲೂ ಎಲ್ಲಾ ಹಿಂದೂಗಳನ್ನು ಬೇಟೆಯಾಡುತ್ತಿರುವುದಿದೇ! ಈ ಹೇಳಿಕೆಯನ್ನು ‘ಕೋಮುವಾದ’ ಎನ್ನುವ ಬಿರುದು ಕೊಟ್ಟು ಎಡಪಂಥೀಈಯರು ಬೊಬ್ಬಿರಿದರೂ ಇದುವೇ ನಿಜವಾದ ‘ಜಾತ್ಯಾತೀತ’ ಸಿದ್ಧಾಂತ! ಈದ್ ಹಬ್ಬಗಳಲ್ಲಿ ಕುರಾನ್ ನನ್ನು ಅದೆಷ್ಟೋ ದೊಡ್ಡ ಸ್ಪೀಕರುಗಳಲ್ಲಿ ತಮಟೆ ಒಡೆಯುವ ಹಾಗೆ ಪಠಿಸಬೇಕಾದರೆ, ಆರಕ಼್ಕ ಠಾಣೆಗಳಲ್ಲಿ ಜನ್ಮಾಷ್ಟಮಿ ನಡೆಸಲೂ ಹಕ್ಕಿದೆ ಎಂದೆ ಅರ್ಥವಲ್ಲವೇ?! ಆಗ ಮಾತ್ರ ಅದು ‘ಜಾತ್ಯತೀತ’!

ಈ ಹಿಂದೆಯಷ್ಟೇ ಕನ್ವರ್ ಯಾತ್ರಿಗಳಿಗೆ ಆಡಳಿತಾಧಿಕಾರಿಗಳು ಮೈಕ್ರೋಫೋನ್, ಡಿಜೆಗಳನ್ನು ಬಳಸದಂತೆ ನಿಷೇಧ ಹೇರಿತ್ತು. ಆದರೆ, ಯೋಗಿ ಆದಿತ್ಯನಾಥ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು!

“ಖಂಡಿತವಾಗಿಯೂ ನೀವು ಎಲ್ಲಿಯೂ ಪ್ರಾರ್ಥನೆ ನಡೆಯುವ ಸ್ಥಳಗಳಲ್ಲಿ ಮೈಕ್ರೋಫೋನ್ ಬಳಸದಂತೆ ತಡೆ ಹೇರಿ! ಆದರೆ, ನೀವು ಎಲ್ಲ ಕಡೆಯೂ ನಿಷೇಧಿಸಲಾಗದಿದ್ದರೆ ಅದಕ್ಕೆ ಅರ್ಥವಿದೆಯೇ?! ಕನ್ವರ್ ಯಾತ್ರಿಗಳಿಗೆ ಮಾತ್ರ ನಿಷೇಧಿಸಿಸುವುದ್ಯಾಕೆ?!”

” ನಾನು ಇದು ಕನ್ವರ್ ಯಾತ್ರೆಯೋ ಅಥವಾ ಶವ ಯಾತ್ರೆಯೋ ಎಂದು ಕೇಳಿದ್ದೆ. ಅವರು ಯಾವುದೇ ಸಂಗೀತಗಳನ್ನು ಬಳಸದೇ, ಭಜನೆ ಹಾಡದೇ, ಸದ್ದಿಲ್ಲದೇ ನಡೆಯುವುದು ಕನ್ವರ್ ಯಾತ್ರೆ ಹೇಗಾಗುತ್ತದೆಂದು ಕೇಳಿ‌ದ್ದೆ.”

ಇದಲ್ಲದೇ, ಯಾರೂ ಕೂಡ ಯಾವುದೇ ಸ್ಥಳಗಳಲ್ಲಿಯೂ ಗಣೆಶ ಚತುರ್ಥಿಯ ಸಡಗರದ ಮೇಲೆ ಪ್ರತಿಬಂಧ ಹೇರಬಾರದು ಎಂದೂ ಹೇಳಿಕೆ ನೀಡಿದ್ದಾರೆ.

ನಾನು ಹೆಮ್ಮೆಯಿಂದ ಹಿಂದೂ ಎಂದರೆ, ನಾನೊಬ್ಬ ಕೋಮುವಾದಿಯಾಗುತ್ತೇನೆ!

ಯೋಗಿ ಆದಿತ್ಯನಾಥ್ ರವರ ಈ ಹೇಳಿಕೆ ನಿಜಕ್ಕೂ ಸತ್ಯ! ಇವತ್ತು ಭಾರತದಲ್ಲಿ ಅಪ್ಪಿ ತಪ್ಪಿ ಯಾರಾದರೂ ಹಿಂದೂ ಎಂದು ಕರೆದುಕೊಂಡರೂ ಆತ ‘ಕೋಮುವಾದಿ’ಯೆಂಬ ಪಟ್ಟ ಕಟ್ಟಿಸಿಕೊಂಡು ಸಮಾಜದ ವಿರೋಧ ಎದುರಿಸಬೇಕಾಗುತ್ತದೆ. ಭಾರತದಲ್ಲಿ ತಮ್ಮ ಪೂರ್ವಜರ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ, ಆದರೆ ನೇಪಾಳ, ಮಾರಿಷಸ್ ಜನರು ಹೆಮ್ಮೆಯಿಂದ ಅವರವರ ಧರ್ಮದ ಕುರಿತು ಹೇಳುತ್ತಾರೆ.

ನಂತರ, ” ಪ್ರಾರ್ಥನೆ ಹಾಗೂ ಕೀರ್ತನೆ ಎರಡೂ ಕೂಡ ಆರಕ್ಷಕ ವ್ಯವಸ್ಥೆಯನ್ನು ಒಂದು ಹಂತಕ್ಕೆ ಬೆಳೆಸಬಲ್ಲದು.” ಎಂದ ಯೋಗಿ ಆದಿತ್ಯನಾಥ್ ಒಳಗಿನ ಕರ್ತವ್ಯ ಶ್ರದ್ಧೆಯೊಂದು ಮತ್ತೆ ಮತ್ತೆ ಪ್ರತಿಬಿಂಬಿತವಾಗುತ್ತಲೇ ಹೋಗುತ್ತದೆ.

ಇದೊಂದು ಬದಲಾಗುವ ಆಟ!

ಅಕಸ್ಮಾತ್ ಯಾವಾಗಲಾದರೂ ಒಂದು ಧರ್ಮದ ಅಥವಾ ವರ್ಗದ , ಆಚರಣೆಗಳನ್ನು ಪ್ರತಿಬಂಧಿಸಿದರೆ ರಸ್ತೆಗಿಳಿದು ಪ್ರತಿಭಟಿಸಿ, ಕಲ್ಲುಗಳನೆಸೆದು, ಸಾರ್ವಜನಿಕ ವ್ಯವಸ್ಥೆಗಳಿಗೂ ತೊಂದರೆ ಕೊಟ್ಟು, ತೀರಾ ಮುಂದೆ ಹೋಗಿ ಒಂದು ಹತ್ಯೆಯೂ ನಡೆಯುತ್ತದೆ!
ಆದರೆ,
ಅದೆಷ್ಟೋ ಶತಮಾನಗಳಿಂದಲೂ ಹಿಂದೂ ಧರ್ಮದ ಆಚರಣೆಗಳ ಮೇಲೆ ಪ್ರತಿಬಂಧನ ಮಾಡುತ್ತಲೇ ಬಂದ ಕಾಂಗ್ರೆಸ್ ಸರಕಾರದ ವಿರುದ್ಧ ಯಾರೂ ಪ್ರತಿಭಟಿಸಲಿಲ್ಲ. ಪ್ರತಿಭಟಿಸಿದರೂ, ಎರಡೇ ದಿನದ ಸಂಗತಿಯಾಗುಳಿದು ಹೋಯಿತು.

ಆದರೀಗ, ಉತ್ತರ ಪ್ರದೇಶದ ಹೆಮ್ಮೆಯ ಮುಖ್ಯ ಮಂತ್ರಿಯರಾದ ಯೋಗಿ ಆದಿತ್ಯನಾಥ್ ರು ನಿಜಕ್ಕೂ ತಾಕತ್ತಿನ ನಡೆಯೊಂದನ್ನು ಸಮಾಜಕ್ಕೆ ತೋರಿಸಿದ್ದಾರೆ!
ಇನ್ನು ಮೇಲಾದರೂ, ಹಿಂದೂ ಧರ್ಮದ ಆಚರಣೆಗಳನ್ನು ಮಾತ್ರವೇ ‘ಜಾತ್ಯಾತೀತ’ ಎಂಬ ಸಿದ್ಧಾಂತದ ಮೇರೆಗೆ ನಿಷೇಧಿಸುವವರು ‘ಈದ್’ ಬಗ್ಗೆಯೂ ಮಾತನಾಡುವ ತಾಕತ್ತನ್ನು ತೋರಿದರೆ ಮಾತ್ರ ‘ಜಾತ್ಯಾತೀತ’ದ ಸಿದ್ದಾಂತಕ್ಕೆ ಅರ್ಥವಿರಬಹುದೇನೋ!!!!

– ಪೃಥು ಅಗ್ನಿಹೋತ್ರಿ

Tags

Related Articles

Close