ದೇಶಪ್ರಚಲಿತ

ಕೊನೆಗೂ ಬಯಲಾಯಿತು Ryan ಶಾಲೆಯ ಒಳಗೆ ನಡೆದ ಹತ್ಯೆ!!! ಏಳು ವರ್ಷದ ಕಂದ ಪ್ರದ್ಯುಮ್ನನ ಹತ್ಯೆಗೆ ಕಾರಣವಾದರೂ ಏನು ಗೊತ್ತಾ?!

ಈ ಘಟನೆ ಹೃದಯವಿದ್ರಾವಕ ಮಾತ್ರವಲ್ಲ, ಬದಲಿಗೆ ಪುರುಷಾರ್ಥದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡುತ್ತದೆ! ಈ ‘ಅಶೋಕ’ನೆಂಬ ವ್ಯಕ್ತಿಯ ಕಾಮೋದ್ರೇಕದಿಂದ ಎರಡನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ‘ಪ್ರದ್ಯುಮ್ನನ್’ ಅಸುನೀಗಿದ್ದಾನೆ! ಈತನ ಸಾವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವುದೂ ಅಲ್ಲದೇ, Ryan ಅಂತ್ರಾಷ‌್ಟ್ರೀಯ ಶಾಲೆಯ ಆಡಳಿತ ವರ್ಗದ ಬೇಜವಾಬ್ದಾರಿತನವೂ ಸಹ ಬಯಲಾಗಿದೆ!

ಪ್ರದ್ಯುಮ್ನನ ಶವ ಶಾಲೆಯ ಶೌಚಾಲಯದಲ್ಲಿ ಸಿಕ್ಕಿದ್ದರ ಬಗ್ಗೆ ತನಿಖೆ ಕೈಗೊಂಡ ಪೋಲಿಸ್ ಅಧಿಕಾರಿಗಳೇ ನಿಬ್ಬೆರಗಾಗಿದ್ದರು! ಶೌಚಾಲಯದಲ್ಲಿ ಆ ಬಾಲಕನ ಶವ ಸಿಕ್ಕಾಗ ಆತನ ಕತ್ತು ಕೊಯ್ದಿತ್ತು!! ಅಯ್ಯೋ! ಬದುಕು ನೋಡಬೇಕಿದ್ದ ಪ್ರದ್ಯುಮ್ನನ ಮುಗ್ಧ ಕನಸೊಂದು ಅಲ್ಲಿಯೇ ಕಮರಿ ಹೋಗಿತ್ತು!

ಪ್ರದ್ಯುಮ್ನನ ಸಾವಿಗೆ ಕಾರಣ ಬಸ್ ಕಂಡಕ್ಟರ್ ಅಶೋಕನ ಕಾಮಕೇಳಿ!!!

ಇದಕ್ಕೆ ದುರಂತವೆನ್ನಬೇಕೋ ಅಥವಾ ಹೀಗಾಯಿತಲ್ಲ ಎಂದು ವಿಷಾದಿಸಬೇಕೋ ಎಂದೂ ತಿಳಿಯದಾಗಿದೆ! ಅಶೋಕ ಶೌಚಾಲಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುಗ ಸಮಯಕ್ಕೆ ಅಚಾನಕ್ಕಾಗಿ ಶೌಚಾಲಯಕ್ಕೆ ಬಂದ ಪ್ರದ್ಯಮ್ನನನ್ನು ಹಿಡಿದು ತನ್ನ ಕಾಮಕೇಳಿ ಶುರು ಹಚ್ಚಿದ ಅಶೋಕ್, ಏಳು ವರ್ಷದ ಬಾಲಕ ತನಗೆ ‘ಸಹಕಾರ’ ನೀಡದಿರುವುದಕ್ಕೆ ಹತ್ಯೆ ಮಾಡಿದ್ದಕ್ಕಾಗಿ ಒಪ್ಪಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಈ ಎಲ್ಲಾ ಘಟನೆಗಳು ಕೇವಲ 15 ನಿಮಿಷದಲ್ಲಿ ನಡೆದು ಹೋಗಿದೆ! ಯಾವಾಗ ಪ್ರದ್ಯುಮ್ನ ಆತನ ಲೈಂಗಿಕಾಸಕ್ತಿಗೆ ಸಹಕರಿಸದೇ ತಿರುಗಿ ಬಿದ್ದನೋ, ಕೋಪಗೊಂಡ ಅಶೋಕ ಚಾಕುವಿನಿಂದ ಆತನ ಕತ್ತು ಕೊಯ್ದು ಏನೂ ಆಗಿಲ್ಲವೆಂಬಂತೆ ರಕ್ತಸಿಕ್ತವಾಗಿದ್ದ ಕೈ ತೊಳೆದು ಹೊರಬಿದ್ದಿದ್ದಾನೆ.

ಎಸಿಪಿ ಬಿರೇಮ್ ಸಿಂಗ್, ‘ಈ ತನಿಖೆಯ ಬಗ್ಗೆ ಇನ್ನಿಬ್ಬರು ಶಾಲಾ ವಿದ್ಯಾರ್ಥಿಗಳು ಪ್ರದ್ಯುಮ್ನನನ್ನು ಅಶೋಕ್ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದನ್ನು ನೋಡುದ್ದೇವೆಂದು ತಿಳಿಸಿದ ಮೇರೆಗೆ ಅಪರಾಧಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.’ ಎಂದು ಅಭಿಪ್ರಾಯ ಪಟ್ಟಿದ್ದಾರೆ!

ಶವಪರೀಕ್ಷೆ ನಡೆಸಿದ ಡಾ| ದೀಪಕ್ ಮಥೂರ್, ‘ಕತ್ತಿನಲ್ಲಿ ಎರಡು ಬಾರಿ ಕತ್ತರಿಸಿದ ಗುರುತಿತ್ತು. ಮೊದಲನೆಯದು ಆಳವಾಗದೇ ಇದ್ದರೂ, ಎರಡನೆಯದು ಬಹಳ ಆಳವಾಗಿ ಅರ್ಧ ಕುತ್ತಿಗೆಯನ್ನೇ ಕತ್ತರಿಸಿದೆ.’ ಎಂದು ತಿಳಿಸಿದ್ದಾರೆ.

ಅಲ್ಲದೇ, ‘ಬಾಲಕನ ದೇಹದಲ್ಲಿ ಬಲಾತ್ಕಾರಕ್ಕೊಳಗಾದಂತಹ ಯಾವ ಗುರುತೂ ಇಲ್ಲ. ಮುಂಚೆಯೇ, ಬಲಾತ್ಕಾರ ನಡೆದಿದ್ದರೆ ಹೇಳುವುದು ಕಷ್ಟ. ಆದರೆ, ಸದ್ಯಕ್ಕೆ ಯಾವ ಗುರುತಿಲ್ಲ’ ಎಂದಿದ್ದಾರೆ.

ಶಾಲೆಯ ಸಂಘಟಕರಾದ ನೀರಜ್ ಬಾತ್ರಾ, ‘ ಬೆಳಗಿನ ಅಸೆಂಬ್ಲಿಯ ನಂತರ ಆ ಬಾಲಕನನ್ನು ನಾವು ನೋಡಿರಲಿಲ್ಲ. ಕೊನೆಗೆ ಆತನ ದೇಹ ಸಿಕ್ಕಿದ ಮೇಲೆ ನಾವು ಆಸ್ಪತ್ರೆಗೆ ಕಳುಹಿಸಿ ಹೆತ್ತವರಿಗೂ ಮಾಹಿತಿ ನೀಡಿದ್ದೇವೆ. ಉಳಿದ ಸಂಗತಿ ಎಲ್ಲವೂ ಪೋಲಿಸ್ ತನಿಖೆಗೆ ಬಿಟ್ಟದ್ದು,’ ಎಂಬ ಬೇಜವಾಬ್ದಾರಿ ಮಾತನಾಡಿದ್ದಾರೆ!

ತಂದೆಯಾದ ವಿನೋದ್ ಚಂದ್ ಠಾಕೂರ್ ಆಡಳಿತದ ಬೇಜವಾಬ್ದಾರಿಯ ಬಗ್ಗೆ ಪ್ರಶ್ನಿಸಿದ್ದಾರೆ. ‘ನನಗೆ ನನ್ನ ಹೆಂಡತಿಯಿಂದ ರಾತ್ರಿ 8.10 ಕ್ಕೆ ಕರೆ ಬಂದಿದೆ. ನನ್ನ ಮಗನಿಗೆ ಅಪಘಾತವಾಗಿರುವುದಾಗಿಯೂ, ರಕ್ತಸ್ರಾವವಾಗಿರುವುದಾಗಿಯೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಹೇಳಿದ್ದಾರೆ. ಅಲ್ಲದೇ, ಬಸ್ ಕಂಡಕ್ಟರ್ ಗೆ ಚಾಕುವಿನ ಅವಶ್ಯಕತೆ ಏನಿತ್ತು ಹಾಗೂ ಶಾಲೆಯ ಒಳಗೆ ಚಾಕುವನ್ನಿಟ್ಟುಕೊಂಡು ಬರಲು ಅನುಮತಿ ನೀಡಿದವರಾರು?!”

ಏನಂತೀರಿ?!

ಮಾತೆತ್ತಿದರೆ, ನಾವು ಶಿಸ್ತು ಪಾಲಿಸುತ್ತೇವೆ, ಸುರಕ್ಷೆಯಿದೆ, ಕ್ರೈಸ್ತನ ಕರುಣಾಮಯಿ ಹಿಂಬಾಲಕರೆಂದೆಲ್ಲ ಬಡಾಯಿ ಕೊಚ್ಚುವ ಈ ಮಿಷನರಿ ಶಾಲೆಯ ಶಿಸ್ತಿನ ಬಗ್ಗೆ ಗೊತ್ತಾಯಿತಲ್ಲವೇ?! ಒಬ್ಬ ಹುಡುಗ ಪ್ರಾರ್ಥನಾ ಸಮಯದಲ್ಲಿದ್ದವನು ತರಗತಿಗೂ ಬರದೇ ಇದ್ದುದನ್ನು ಗಮನಿಸಿದರೂ ಸಹ ಸಂಜೆಯ ತನಕ ಸುಮ್ಮನಿದ್ದದ್ದು ಯಾಕೆ ಸ್ವಾಮಿ?!

ಈತನ ಈ ಕ್ರೂರ ಕೃತ್ಯಕ್ಕೆ ಏಳು ವರ್ಷದ ಕಂದನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅಶೋಕನ ಕಾಮಕೇಳಿಗೆ ಅನ್ಯಾಯವಾಗಿ ಒಬ್ಬನ ಹತ್ಯೆ ನಡೆದಿದೆ. ಅದಾದರೂ ಸಹ, ಬಸ್ ಕಂಡಕ್ಟರ್ ನನ್ನು ಅಮಾನತುಗೊಳಿಸುವ ಬಗೆಗಾಗಲಿ ಯಾವುದೇ ಚಕಾರ ಎತ್ತದ ಶಾಲೆಯ ಆಡಳಿತ ವರ್ಗ ಹೆತ್ತವರ ಹೋರಾಟಕ್ಕೋ ತಣ್ಣಗೆ ಕುಳಿತಿರುವ ಅರ್ಥವೇನು?!

Tags

Related Articles

Close