ಪ್ರಚಲಿತ

ಖ್ಯಾತ ಭವಿಷ್ಯಕಾರ ನಾಸ್ಟ್ರಡಾಮಸ್‍ ಹೇಳಿದ ಭವಿಷ್ಯ ಸುಳ್ಳಾಗಲಿಲ್ಲ!! 2018ರ ಭವಿಷ್ಯ ಇನ್ನಷ್ಟು ಭಯಾನಕ!! ಹೇಗೆ ಗೊತ್ತೇ?

ಒಂದು ವೇಳೆ ಈ ಭವಿಷ್ಯ ನಡೆದುಬಿಟ್ಟರೆ.... ಸಕಲ ಮಾನವ ಕೋಟಿಗಳ ಗತಿಯೇನು?!

ಖ್ಯಾತ ಭವಿಷ್ಯಕಾರ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯ ಯಾವುದೂ ಸುಳ್ಳಾಗಲಿಲ್ಲ. ಫ್ರಾನ್ಸ್‍ನವನಾಗಿರುವ ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ (1503- 1566) ಶ್ರೇಷ್ಠ ಭವಿಷ್ಯಕಾರ ಎಂದು ಹೆಸರು ಪಡೆದಿರುವ ವ್ಯಕ್ತಿ. ಇವರು ಹೇಳಿದ ಭವಿಷ್ಯ ಸುಳ್ಳಾಗದೇ ಇರುವುದು ವಿಜ್ಞಾನಿಗಳಿಗೆ ಒಂದು ರಹಸ್ಯವಾಗಿಯೇ ಉಳಿದಿದೆ. ಅದು ಹೇಗೆ ಚಾಚೂತಪ್ಪದೆ ಇದ್ದದ್ದನ್ನು ಇದ್ದಹಾಗೆ ಹೇಳಿದ್ದಾರೆ ಎನ್ನುವುದು ಒಂದು ಅಚ್ಚರಿಯಾಗಿ ಉಳಿದಿದೆ. ಇವರು ಮುಂದಿನ 400 ವರ್ಷಗಳಲ್ಲಿ ಈ ಭೂಮಿಯಲ್ಲಿ ಏನೆಲ್ಲಾ ನಡೆಯುವುದು ತಿಳಿಸಿದ್ದಾರೆ. ಅಲ್ಲದದೆ ನಾಸ್ಟ್ರಾಡಾಮಸ್ ತನ್ನ `ದ ಪ್ರೊಫೆಸೀಸ್’ ಎಂಬ ಪುಸ್ತಕದಲ್ಲಿ ಮೂರನೇ ಮಹಾಯುದ್ಧದ ಭವಿಷ್ಯವಾಣಿಯನ್ನು ತಿಳಿಸಿದ್ದಾರೆ.. ನಾಸ್ಟ್ರಾಡಾಮಸ್‍ನ ಭವಿಷ್ಯದ ಹೊಸ್ತಿಲಲ್ಲಿ ನಿಂತಿದ್ದು, ಅವರು ಹೇಳಿರುವ ಭಯಾನಕ ವಿಚಾರಗಳನ್ನು ನೆನೆದಾಗಲೇ ಭಯ ಉಂಟಾಗುತ್ತದೆ.

ಒಂದು ವೇಳೆ ಈ ಭವಿಷ್ಯ ನಡೆದುಬಿಟ್ಟರೆ…. ಸಕಲ ಮಾನವ ಕೋಟಿಗಳ ಗತಿಯೇನು?

ನಾಸ್ಟ್ರಾಡಾಮಸ್ ಕವಿತೆಗಳ ಸಹಾಯದಿಂದ ತನ್ನ ಭವಿಷ್ಯವನ್ನು ಹೇಳತೊಡಗಿದರು. ಈ ಭವಿಷ್ಯ ಹೇಳಿರುವುದೆಲ್ಲಾ ಸತ್ಯವಾಗಿದೆ. ಅದರಂತೆ 2018ರಲ್ಲಿ ಏನು ನಡೆಯುತ್ತದೆ ಎಂದು ಅವರು 400 ವರ್ಷ ಮುಂಚಿತವಾಗಿಯೇ ತಿಳಿಸಿದ್ದಾರೆ. ಈಗಿನ ವಿದ್ಯಾಮಾನವನ್ನು ನೋಡಿದಾಗ ಇದು ಖಂಡಿತಾ ಸತ್ಯವಾಗಲಿದೆ ಎನ್ನುವ ಮಟ್ಟಕ್ಕೆ ಬಂದು ತಲುಪಿದೆ.

Image result for nostradamus

ಈ ಭವಿಷ್ಯದ ಪ್ರಕಾರ 2018ರಲ್ಲಿ ಮೂರನೇ ಮಹಾಯುದ್ಧ ಸಂಭವಿಸಲಿದೆ…!!!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಉನ್ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಇವರ ಮಧ್ಯೆ ಹೆಚ್ಚುತ್ತಿರುವ ಯುದ್ಧಸದೃಶ್ಯ ಉದ್ವಿಗ್ನ ಸ್ಥಿತಿಯನ್ನು ಕಂಡಾಗ ಖಂಡಿತಾ ಯುದ್ಧ ಸಂಭವಿಸಲಿದೆಯೇ ಎಂಬ ಭೀತಿ ವ್ಯಕ್ತವಾಗಿದೆ. ಇದರ ನಡುವೆ ಬಲಿಷ್ಠರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಚೀನಾ ಕೂಡಾ ಉತ್ತರ ಕೊರಿಯಾದ ಪರವಾಗಿದ್ದು, ಒಂದು ವೇಳೆ ಯುದ್ಧ ಸಂಭವಿಸಿದ್ದೇ ಆದರೆ ಪರಿಣಾಮ ಘೋರವಾಗಲಿದೆ.

ಮೂರನೇ ಮಹಾಯುದ್ಧದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ನಾಸ್ಟ್ರಾಡಾಮಸ್ ಮೊದಲೇ ಹೇಳಿದ್ದಾರೆ.. ಈ ಯುದ್ಧ ಎಷ್ಟು ಭಯಾನಕವಾಗಿದೆ ಎಂದು ತಮ್ಮ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಿದ್ದಾರೆ

ಪ್ರೇತಾತ್ಮಗಳು ಸ್ಮಶಾನದಿಂದ ಹೊರಬಂದು ಹಿಂಸಿಸುತ್ತದೆ:

2018ರಲ್ಲಿ ಪ್ರೇತಾತ್ಮಗಳೆಲ್ಲಾ ಸ್ಮಶಾನದಿಂದ ಹೊರಬಂದು ಜಗತ್ತಿನಾದ್ಯಂತ ಭಯಾಕವಾಗಿ ಕ್ರೂರವಾಗಿ ಹಿಂಸೆ ನೀಡಲು ಆರಂಭಿಸುತ್ತದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಇದರಂತೆ ಭೂಕಂಪ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ.

ಜಗತ್ತಿನ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ರಾಷ್ಟ್ರಗಳಲ್ಲಿ ಯುದ್ಧ ನಡೆಯಲಿದೆ!

ನಾಸ್ಟ್ರಾಡಾಮಸ್ ತನ್ನ `ದ ಪ್ರೊಫೆಸೀಸ್’ ಎಂಬ ಪುಸ್ತಕದಲ್ಲಿ ಮೂರನೇ ಮಹಾಯುದ್ಧದ ಭವಿಷ್ಯವಾಣಿಯನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಜಗತ್ತಿನಲ್ಲಿ ಜಾಗತಿಕವಾಗಿ ದೊಡ್ಡಮಟ್ಟದಲ್ಲಿ ಬದಲಾವಣೆ ಸಂಭವಿಸಬಹುದು. ನಾಸ್ಟ್ರಾಡಾಮಸ್ ಭವಿಷ್ಯದ ಪ್ರಕಾರ ಮೂರನೇ ಮಹಾಯುದ್ಧದಲ್ಲಿ 2 ಅಥವಾ 2ಕ್ಕಿಂತ ಹೆಚ್ಚು ರಾಷ್ಟ್ರಗಳು ಯುದ್ಧದಲ್ಲಿ ಭಾಗವಹಿಸುತ್ತವೆ. ಮುಖ್ಯವಾಗಿ ಎರಡು ದಿಕ್ಕುಗಳಲ್ಲಿ ಅಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ರಾಷ್ಟ್ರಗಳಲ್ಲಿ ಯುದ್ಧ ಸಂಭವಿಸುತ್ತದೆ. ಈಗಿನ ಪರಿಸ್ಥಿತಿಯನ್ನು ನೋಡಿದಾಗ ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳಾದ ಕೊರಿಯಾ ಹಾಗೂ ಅಮೆರಿಕಾದ ಮಧ್ಯೆ ಯುದ್ಧಸದೃಶ್ಯ ವಾತಾವರಣ ಸೃಷ್ಟಿಯಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.

ಮಾನಸ ಸಮೂಹದ ನಾಶ

ಮೂರನೇ ಮಹಾಯುದ್ಧದ ವೇಳೆ ಮಾನವ ಸಮೂಹ ನಾಶವಾಗುತ್ತದೆ. ಜಗತ್ತಿನಲ್ಲಿ ಅಲ್ಪಸ್ವಲ್ಪ ಜನರು ಮಾತ್ರ ಉಳಿಯಲಿದ್ದು, ಇವರು ಶಾಂತಿಯ ಆನಂದವನ್ನು ಪಡೆಯುತ್ತಾರೆ. ಉಳಿದವರು ನಾಶವಾಗುತ್ತಾರೆ. ಆಕಾಶದಿಂದ ಬೆಂಕಿಯುಂಡೆಗಳು ಭೂಮಿಗೆ ಬಿದ್ದು ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ. ಜನರು ಅಸಹಾಯಕರಾಗಿ ಅತ್ತಿಂದಿತ್ತ ಓಡಾಡಬೇಕಾಗುತ್ತದೆ. ನಾಸ್ಟ್ರಾಡಾಮಸ್‍ಗೆ ಬಾಂಬು, ಕ್ಷಿಪಣಿಯಂಥಾ ಮಾರಕಾಯುಧಗಳ ಅಂದಾಜಿರದಿದ್ದರೂ ಅದನ್ನೇ ಉದ್ದೇಶಿಸಿ ಬೆಂಕಿಯುಂಡೆಗಳ ಬಗ್ಗೆ ಉಲ್ಲೇಖಿಸುರುವುದು ಅಚ್ಚರಿ ಮೂಡಿಸುತ್ತದೆ.

ಇದೀಗ ಮಾನಸ ಸಮೂಹ ನಾಶ ಮಾಡುವ ಅಣುಅಸ್ತ್ರಗಳನ್ನು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾನ್ ಉನ್ ನಿರ್ಮಿಸುತ್ತಿದ್ದಾನೆ. ಈತ ಅಮೆರಿಕಾವನ್ನು ಗುರಿಯಾಗಿಸಿ ಸಾವಿರಾರು ಕಿಲೋಮೀಟರ್ ಕ್ರಮಿಸುವ ಅಣ್ವಸ್ತ್ರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಇಡೀ ಜಗತ್ತಿಗೆ ಭಯಹುಟ್ಟಿಸುವ ಕೆಲಸ ಮಾಡುತ್ತಿದ್ದು, ಯುದ್ಧದ ಕಾರ್ಮೋಡ ದಟ್ಟವಾಗಿ ಮೂಡಿರುವುದು ಕಂಡುಬರುತ್ತಿದೆ.

ಭೂಕಂಪ, ನೆರೆಹಾವಳಿ ಸೃಷ್ಟಿ

ನಾಸ್ಟ್ರಾಡಾಮಸ್ ಅವರು 2018ರಲ್ಲಿ ಸಾವಿರಾರು ಶಕ್ತಿಶಾಲಿ ಹಾಗೂ ವಿನಾಶಕಾರಿ ಭೂಕಂಪ ಆಗುವ ಭವಿಷ್ಯವನ್ನು ನುಡಿದಿದ್ದಾರೆ. ಈ ಭವಿಷ್ಯದ ಪ್ರಕಾರ ಚೀನಾದಲ್ಲಿ ಭೂಕಂಪ ಹಾಗೂ ಪ್ರಕೃತಿವಿಕೋಪ ಸಂಭವಿಸುತ್ತದೆ. ಈ ಸಂದರ್ಭ ಸಾವಿರಾರು ಮಂದಿ ಸಾಯುತ್ತಾರೆ. 2018ರ ಚಳಿಗಾಲದಲ್ಲಿ ಫೆಸಿಪಿಕ್ ಸಾಗರದ ಮಧ್ಯೆಯಿಂದ ಅನೇಕ ಭೂಕಂಪವಾಗುತ್ತದೆ. ಜ್ವಾಲಾಮುಖಿ ಸಂಭವಿಸಿ ಜಗತ್ತಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ. ನೆರಹಾವಳಿ ಸಂಭವಿಸಿ ಇಡೀ ಜಗತ್ತಿನಲ್ಲೇ ಆಹಾಕಾರ ಸಂಭವಿಸುತ್ತದೆ. ಚೀನಾ, ಜಪಾನ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಸುಂಟರಗಾಳಿ ಉಂಟಾಗುತ್ತದೆ. ಮಳೆ ಹಾಗೂ ನೆರೆಯಿಂದಾಗಿ ರಷ್ಯಾದ ಜನರು ಅತೀ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕ್ಕೀಡಾಗುವರು.

ಹೆಚ್ಚಿನ ತಾಪಮಾನ, ಬೆಳೆ ನಾಶ

ದ ಪ್ರೊಫೆಸೀಸ್‍ನಲ್ಲಿ ನಾಸ್ಟ್ರಾಡಾಮಸ್ ಬರೆದ ಪ್ರಕಾರ, ರಾಜ ಅರಣ್ಯಗಳನ್ನು ಕಳ್ಳತನ ಮಾಡುವನು. ಆಕಾಶ ಸಂಪೂರ್ಣವಾಗಿ ನಿರಭ್ರವಾಗಿರುತ್ತದೆ. ತಾಪಮಾನ ಹೆಚ್ಚಳದಿಂದ ಅಸಂಖ್ಯಾತ ಬೆಳೆಗಳು ಸುಟ್ಟು ನಾಶವಾಗುತ್ತದೆ. ಇಂದು ತಾಪಮಾನ ಹೆಚ್ಚುತ್ತಿರುವುದು ಇದರ ಮುನ್ಸೂಚನೆ ಎನ್ನಲಾಗಿದೆ. ಅನೇಕ ವಿಜ್ಞಾನಿಗಳ ಪ್ರಕಾರ ಈ ಭವಿಷ್ಯವನ್ನು ಓಝೋನ್ ಪದರಕ್ಕೆ ಹೋಲಿಸಿದ್ದಾರೆ. ಓಝೋನ್ ಪದರ ಛಿದ್ರಗೊಂಡು ಸೂರ್ಯನ ಅತಿನೇರಳಾತೀತ ಕಿರಣಗಳು ಭೂಮಿಯನ್ನು ಪ್ರವೇಶಿಸಿ ವಾತಾವರಣವನ್ನು ವಿನಾಶ ಮಾಡುತ್ತದೆ.

ಜ್ವಾಲಾಮುಖಿ ಸಂಭವಿಸುತ್ತದೆ, ಇಟಲಿಗೆ ಅಪಾಯ

2018ರಲ್ಲಿ ಜ್ವಾಲಾಮುಖಿ ಉಂಟಾಗಲಿದ್ದು, ಇದರಿಂದ ಇಟಲಿಗೆ ಹೆಚ್ಚು ಅಪಾಯವಾಗಲಿದೆ. ಇಟಲಿಯ ಸಂಶೋಧಕರ ಅಭಿಪ್ರಾಯದ ಪ್ರಕಾರ `ವಿಸುವಿಯಸ್’ ಎನ್ನುವ ಮಹಾಕಾಯ ಸಕ್ರಿಯ ಜ್ವಾಲಾಮುಖಿಯಾಗಿದ್ದು, ಜೀವಂತ ಜ್ವಾಲಾಮುಖಿಯಾಗಿದೆ. ಈ ಜ್ವಾಲಾಮುಖಿ 2018ರ ಕೊನೆಗೆ ಅಥವಾ 2019ರ ಆರಂಭದಲ್ಲಿ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಜ್ವಾಲಾಮುಖಿ ಇದುವರೆಗೆ 2 ಬಾರಿ ಸ್ಫೋಟಗೊಂಡಿದೆ.

ಬೆರಳೆಣಿಕೆಯಷ್ಟೇ ಉಳಿಯುವ ಜನರು!!

2018ರಂದು ಸಂಭವಿಸುವ ನಾನಾ ಭೀಕರ ಘಟನೆಗಳಿಂದ ಸಕಲ ಮಾನವಕೋಟಿ ಸರ್ವನಾಶವಾಗಲಿದ್ದು, ಇದರಲ್ಲಿ ಬೆರಳೆಣಿಕೆಯ ಜನರಷ್ಟೇ ಉಳಿಯುತ್ತಾರೆ. 2018ರಲ್ಲಿ ಉಂಟಾಗುವ ನಾಶ 2025ರವರೆಗೆ ಮುಂದುವರಿಯುತ್ತದೆ. 2025ರ ಅಂತ್ಯದಲ್ಲಿ ಹೊಸತು ನಿರ್ಮಾಣವಾಗುತ್ತದೆ. ಇದರ ಪೂರ್ವದಲ್ಲಿ ಸಂಭವಿಸುವ ಘಟನೆಗಳಿಂದ ಇಡೀ ಜಗತ್ತಿನಲ್ಲೇ ಹತಾಶೆ, ಭಯ ಸೃಷ್ಟಿಯಾಗುತ್ತದೆ. 2025ರ ನಂತರ ಮತ್ತೊಮ್ಮೆ ಶಾಂತಿಯ ನಿರ್ಮಾಣಗೊಂಡು ಇದರ ಆನಂದವನ್ನು ಪಡೆಯಲು ಬೆರಳೆಣಿಕೆಯ ಜನರಷ್ಟೇ ಉಳಿಯುತ್ತಾರೆ.

ನಾಸ್ಟ್ರಾಡಾಮಸ್‍ನ ಇದುವರೆಗೆ ನಿಜವಾದ ಭವಿಷ್ಯಗಳು

ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಾಣಿಯ ಪ್ರಕಾರ ಇದುವರೆಗೆ ನಡೆದ ಘಟನೆಗಳು ನಿಜವಾಗಿದೆ. ಇದರ ಪ್ರಕಾರ ಇಂಗ್ಲೆಡ್‍ನ ರಾಜಕುಮಾರಿ ಪ್ರಿನ್ಸೆಸ್ ಡಾಯಾನಾ ಮರಣವನ್ನಪ್ಪಿದ್ದಾರೆ. ಅಡಾಲ್ಫ್ ಹಿಟ್ಲರ್‍ನ ಸರ್ವಾಧಿಕಾರಿ ಆಡಳಿತದಿಂದ ಕೋಟ್ಯಂತರ ಮಂದಿ ಸತ್ತಿದ್ದಾರೆ. ಎರಡನೇ ಮಹಾಯುದ್ಧ ನಾಸ್ಟ್ರಾಡಾಮಸ್ ಹೇಳಿದಂತೆ ಸಂಭವಿಸಿದೆ. ಅಣುಬಾಂಬ್ ದಾಳಿ ನಡೆದಿದೆ. ಅಮೇರಿಕಾದಲ್ಲಿ ನಡೆದ 9/11ರ ಉಗ್ರದಾಳಿ ನಿಜವಾಗಿದೆ. ಇತ್ತೀಚೆಗೆ ನೇಮಕಗೊಂಡ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಮೋದಿ ಬಗ್ಗೆಯೂ ನಾಸ್ಟ್ರಾಡಾಮಸ್ ಭವಿಷ್ಯದಲ್ಲಿ ಉಲ್ಲೇಖಗೊಂಡಿದೆ.

ನಾಸ್ಟ್ರಾಡಾಮಸ್ ತನ್ನ ಮೃತ್ಯುವಿನ ವಿಷಯದಲ್ಲಿ ನೀಡಿದ ಸಂಕೇತ ಈ ರೀತಿ ಇತ್ತು. ಅವರ ಮರಣ ಒಂದು ಟೇಬಲ್ ಮತ್ತು ಮಲಗುವ ಸ್ಥಳದಲ್ಲಿ ಆಗುವುದು ಎಂದು ತಿಳಿಸಿದ್ದರು. ಮರಣದ ಒಂದು ರಾತ್ರಿ ಮೊದಲು ಅವರು ನಾನು ನಾಳೆ ರಾತ್ರಿಯವರೆಗೆ ಜೀವಂತ ಇರುವುದಿಲ್ಲ ಎಂದು ಭವಿಷ್ಯವಾಣಿ ನುಡಿದಿದ್ದರು. ಮರುದಿನ ಬೆಳಿಗ್ಗೆ ಅವರು ತಮ್ಮ ಮಲಗುವ ಕೋಣೆಯಲ್ಲಿನ ಮೇಜಿನ ಮರಣಶಯ್ಯೆಯಲ್ಲಿದ್ದರು..

ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಾಣಿ ಎಲ್ಲವೂ ನಿಜವಾಗಿದೆ.

ಕೃಪೆ: ಸನಾತನ ಪ್ರಭಾತ

-ಚೇಕಿತಾನ

Tags

Related Articles

Close