ಅಂಕಣದೇಶಪ್ರಚಲಿತ

ಗೋರಖ್ ಪುರ ದುರಂತ ಆಕಸ್ಮಿಕವೂ ಅಥವಾ ರಾಜಕೀಯ ಪಿತೂರಿಯೋ?! ಕುತೂಹಲ ಕೆರಳಿಸಿತೊಂದು ಟ್ವಿಸ್ಟು!

ಉತ್ತರ ಪ್ರದೇಶದ ಗೋರಖ್ ಪುರ ದುರಂತ ಎಲ್ಲರಿಗೂ ಗೊತ್ತಿರುವಂತಹ ಸಂಗತಿಯೇ! ಆಮ್ಲಜನಕದ ಕೊರತೆಯಿಂದಾಗ ಒಂದೇ ವಾರದಲ್ಲಿ 60 ಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ವೈದ್ಯರ ತಂಡ ಇದಕ್ಕೆಲ್ಲ ಉತ್ತರ ಪ್ರದೇಶದ ಸರಕಾರವೇ ಕಾರಣವೆಂದು ಆರೋಪಿಸಿ ಯುಪಿಯ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ರವರ ಮೇಲೆ ಕೆಂಡ ಕಾರಿತ್ತು.

ತದನಂತರವೂ, ಕಾಂಗ್ರೆಸ್ ನ ಬಹುತೇಕ ನಾಯಕರು ಕೂಡ ಸಮಯದ ಸದವಕಾಶವೋ ಎಂಬಂತೆ ಉತ್ತರಪ್ರದೇಶದ ಬಿಜೆಪಿಯ ನಾಯಕರನ್ನೆಲ್ಲ ನೇರವಾಗಿ ‘ಕೊಲೆ’ ಎಂದೇ ಆರೋಪಿಸಿದ್ದು ನಮಗೆಲ್ಲ ಗೊತ್ತಿರುವ ಸಂಗತಿಯೇ!

ದಿನೇ ದಿನೇ ತಿರುವು ಪಡೆದುಕೊಂಡ ಈ ದುರಂತದ ಪ್ರಕರಣವೊಂದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದಲ್ಲದೇ, ಯೋಗಿ ಆದಿತ್ಯನಾಥ್ ತಕ್ಕ ಕ್ರಮವನ್ನೂ ತೆಗೆದುಕೊಂಡಿದ್ದರು. ಆಮ್ಲಜನಕದ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಪೂರೈಕೆ ಮಾಡುತ್ತಿದ್ದ ಪುಷ್ಪಾ ಸೇಲ್ಸ್ ಕಂಪೆನಿಯ ಮೇಲೂ ಯೋಗಿ ಆದಿತ್ಯನಾಥ್ ಪೋಲಿಸರನ್ನು ಕಳುಹಿಸಿ ತರಾಟೆಗೆ ತೆಗೆದುಕೊಂಡಾಗ ‘ಆಸ್ಪತ್ರೆಯವರು ಹಣ ಕಟ್ಟಿರಲಿಲ್ಲ. ಹಣ ಬಾಕಿಯಿದೆಯೆಂದು ನಾವು ಅವರಿಗೆ ಮೊದಲೇ ಹೇಳಿದ್ದೆವಾದರೂ ಅವರು ಪಾವತಿಸಿರಲಿಲ್ಲ. ತದನಂತರವೂ, ಪೂರೈಕೆ ನಿಲ್ಲಿಸುತ್ತೇವೆಂದರೂ ಆಸ್ಪತ್ರೆಯವರಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲವಾದ್ದರಿಂದ ನಾವು ಪೂರೈಕೆ ಮಾಡಲಿಲ್ಲ.’ ಎಂದು ಸಾಕ್ಷ್ಯಾಧಾರಗಳ ಸಮೇತ ಹೇಳಿದಾಗ ‘ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿಯೊಂದು ಬಟಾ ಬಯಲಾಗಿ ಆದಿತ್ಯನಾಥ್ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಿದ್ದರು.

ಆದರೀಗೊಂದು ಟ್ವಿಸ್ಟು!!!

ಹೌದು!
ಮುಂಚೆ ಪುಷ್ಪಾ ಸೇಲ್ಸ್ ಪೂರೈಕೆಯನ್ನು ನಿಲ್ಲಿಸಿದ್ದೇವೆಂದು ಹೇಳಿದ್ದರಾದರೂ ಈಗ ಮತ್ತೆ ಮೌನ ಮುರಿದು ಇನ್ನೊಂದು ಸ್ಫೋಟಕ ಮಾಹಿತಿಯನ್ನು ಬಯಲುಗೊಳಿಸಿದೆ!
‘ಬಿಆರ್ ಡಿ ಆಸ್ಪತ್ರೆಯವರು 69 ಲಕ್ಷವನ್ನು ಬಾಕಿ ಇರಿಸಿದ್ದರೂ ನಾವು ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿರಲಿಲ್ಲ’ ಎಂದು ಹೇಳಿದೆ.
‘ಮೊದಲ ಪೂರೈಕೆ ಆಗಸ್ಟ್ 4 ರಂದಾಗಿತ್ತು. ಕೊನೆಗೆ ಮತ್ತೆ ಆಗಸ್ಟ್ 12 ಕ್ಕೆ ಪೂರೈಕೆ ಮಾಡಿದ್ದೆವು. ನಾವು ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿರಲಿಲ್ಲ.’ ಎಂದು ಆಸ್ಪತ್ರೆಯ ಮೀನಾ ವಾಲಿಯಾ ಹೇಳಿದ್ದಾರೆ.

‘ಆಗಸ್ಟ್ 8 ಕ್ಕೆ ಆಸ್ಪತ್ರೆಯ ಬಾಕಿ 69 ಲಕ್ಷಕ್ಕೇರಿತ್ತು. ನಾವು ಅವರಿಗೆ ಮುನ್ಸೂಚನೆ ನೀಡಿದ್ದೆವಾದರೂ ಅವರು ಪಾವತಿಸಿರಲಿಲ್ಲ. ಆದರೂ, ಆಗಸ್ಟ್ 12 ಕ್ಕೆ ಮತ್ತೆ ನಾವು ಆಮ್ಲಜನಕದವನ್ನು ಪೂರೈಕೆ ಮಾಡಿದ್ದೆವು. ”

ವೈದ್ಯಕೀಯ ಬಿಆರ್ ಡಿ ಕಾಲೇಜಿನ ಪ್ರಾಂಶುಪಾಲರಾದ ಆರ್ ಕೆ ಮಿಶ್ರಾರನ್ನು ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಅಮಾನತುಗೊಳಿಸಲಾಗಿತ್ತು. ಆಮ್ಲಜನಕ ಪೂರೈಕೆಯಾಗಿರಲಿಲ್ಲವೆಂದು ಹೇಳಿಕೆ ಕೊಟ್ಟಿದ್ದ ಮಿಶ್ರಾರವರ ಹಿಂದೆ ಯಾವ ‘ಕೈ’ ಇರಬಹುದೆಂಬ ಶಂಕೆಯಿರುವಾಗಲೇ ಈಗ ‘ಪುಶ್ಪಾ ಸೇಲ್ಸ್ ನವರು ಜೀವ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ.

‘ನಾವು ಏಪ್ರಿಲ್ ನಿಂದಲೇ ಆಸ್ಪತ್ರೆಯವರಿಗೆ ಮುನ್ಸೂಚನೆ ನೀಡುತ್ತಾ ಬಂದಿದ್ದೇವೆ. ಅಲ್ಲದೇ, ಮೂರು ತರಹದ ಆಮ್ಲಜನಕ ಪೂರೈಕೆಯನ್ನೂ ನಾವು ಮಾಡುತ್ತಲೇ ಬಂದಿದ್ದೇವೆ. ಕೊನೆ ಕೊನೆಗೆ ಆಸ್ಪತ್ರೆ ಪಾವತಿ ಬಾಕಿ ಉಳಿಸಿದರೂ ನಾವು ಪೂರೈಕೆ ನಿಲ್ಲಿಸಿರಲಿಲ್ಲ. ಸರಕಾರ 400 ಸಿಲಿಂಡರ್ ಬದಲಿಗೆ 50 ಸಿಲಿಂಡರ್ ಮಾತ್ರ ಯಾಕೆ ಇತ್ತು ಎಂಬುದನ್ನು ವಿಚಾರಿಸಬೇಕಾಗಿದೆ. ಹಾಗಾದಾಗ ಮಾತ್ರ ಯಾರದ್ದು ತಪ್ಪೆಂದು ತಿಳಿಯುತ್ತದೆ.” ಎಂದು ಪುಷ್ಪಾ ಸೇಲ್ಸ್ ಮ್ಯಾನೇಜರ್ ಮನೀಶ್ ಬಂಢಾರಿ ಹೇಳಿಕೆ ನೀಡಿದ್ದಾರೆ!

ಪುಷ್ಪಾ ಸೇಲ್ಸ್ ಕಂಪೆನಿಯೊಂದು ಈ ಕೆಳಗಿನ ಮಾಹಿತಿಯನ್ನು ಬಹಿರಂಗಗೊಳಿಸಿದೆ!

1. ಕಂಪೆನಿ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸಿರಲಿಲ್ಲ.
2. ಆಗಸ್ಟ್ 4 ರ ತನಕ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸಿರಲಿಲ್ಲ. ಆದರೆ, ಆಸ್ಪತ್ರೆಯವರ ಎರಡನೇ ಪೂರೈಕೆಯ ಬಗ್ಗೆ ತಿಳಿಸಿದ್ದು ಆಗಸ್ಟ್ 11, ಅಂದರೆ ಮಕ್ಕಳ ಸಾವಾದ ನಂತರವೇ!
3. ಒಪ್ಪಂದದ ಪ್ರಕಾರ ಪೂರೈಕೆಯ ಸೂಚನೆಯನ್ನು ಆಸ್ಪತ್ರೆಯವರು ಮೂರು ದಿನದ ಮುಂಚೆಯೇ ತಿಳಿಸಬೇಕಿತ್ತಾದರೂ ತಿಳಿಸಿರಲಿಲ್ಲ.
4. 10 ಲಕ್ಷ ಪಾವತಿ ಬಾಕಿಯಾದರೆ ನಾವು ಪೂರೈಕೆ ಮಾಡುವುದಿಲ್ಲವೆಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ., 69 ಲಕ್ಷವಾದರೂ ನಾವು ನಿಲ್ಲಿಸಿರಲಿಲ್ಲ.
5. ಒಪ್ಪಂದದ ಪ್ರಕಾರ ಆಸ್ಪತ್ರೆಯವರು 400 ಸಿಲಿಂಡರ್ ನನ್ನು ಕಾಯ್ದಿರಿಸಲೇಬೇಕು. ಆದರೆ, 57 ಸಿಲಿಂಡರ್ ಗಳು ಮಾತ್ರ ಆಸ್ಪತ್ರೆಯಲ್ಲಿತ್ತು.

ಸಾವಿನ ರಹಸ್ಯ!

1. ಆಸ್ಪತ್ರೆಯವರು ಆಗಸ್ಟ್ 10 ಕ್ಕೆ ಆಮ್ಲಜನಕದ ಕೊರತೆಯಿದೆಯೆಂದು ಹೇಳಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.
2. ದೆಹಲಿಯಿಂದ ಬಂದಂತಹ ವೈದ್ಯರ ತಂಡಕ್ಕೂ ಇದಕ್ಕೂ ಸಂಬಂಧವೇ ಇಲ್ಲ.
3. ಇನ್ಸೆಫಿಲಿಟಿಸ್ ಎಂಬ ಕಾಯಿಲೆಯಿಂದ ಪ್ರತಿ ವರ್ಷವೂ ಬಹಳ ಮಂದಿ ಸಾವನ್ನಪ್ಪಿದ್ದಾರೆ. ಇದು, ಆಮ್ಲಜನಕದ ಕೊರತೆಯಿಂದಲೇ ಎಂದು ಹೇಳಲು ಯಾವುದೇ ಆಧಾರಗಳಿಲ್ಲ.

ಉತ್ತರ ಪ್ರದೇಶದ ಸರಕಾರದ ಸೌಲಭ್ಯಗಳು!

1. ಆಗಸ್ಟ್ 5 ರಂದೇ ಸರಕಾರ ಧನ ಸಹಾಯ ಮಾಡಿತ್ತು.
2. ಆಗಸ್ಟ್ 7 ಕ್ಕೇ ಕಾಲೇಜಿನ ಬ್ಯಾಂಕ್ ಖಾತೆಗೆ ದುಡ್ಡು ವರ್ಗಾವಣೆಯಾಗಿತ್ತು.
3. ಅಷ್ಟಾದರೂ ಕಾಲೇಜಿನಿಂದ ಆಮ್ಲಜನಕದ ಪೂರೈಕೆಗೆ ಕರೆ ಬಂದಿದ್ದು ಆಗಸ್ಟ್ 11 ಕ್ಕೆ.

ರಾಜಕೀಯದ ದ್ವೇಷವೇ?!

ಇಷ್ಟೆಲ್ಲ ಕುತೂಹಲಗಳನ್ನು ಹುಟ್ಟು ಹಾಕಿರುವ ಗೋರಖ್ ಪುರ ದುರಂತ ಆಕಸ್ಮಿಕವೋ ಅಥವಾ ಯೋಗಿ ಆದಿತ್ಯನಾಥ್ ರವರ ಮೇಲಿನ ದ್ವೇಷದಿಂದ ನಡೆದ ರಾಜಕೀಯ ಪಿತೂರಿಯೇ ಎಂಬುದೂ ಗೊತ್ತಾಗಬೇಕಿದೆ.
ಆಸ್ಪತ್ರೆಯ ಸಿಬ್ಬಂದಿಗಳ ಹೇಳಿಕೆಗೂ ವಿರೋಧ ಪಕ್ಷದ ನಾಯಕರ ಹೇಳಿಕೆಗಳೂ ಪೂರ್ವಯೋಜನೆಯಂತೆಯೇ ನಡೆಯುತ್ತಿರುವುದರಿಂದ ಈ ದುರಂತದ ಹಿಂದೆ ಯಾರ ಕೈಗಳಿದೆ ಎಂದು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆಂದು ಯುಪಿಯ ಆರೋಗ್ಯ ಸಚಿವರಾದ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.

– ಪೃಥ

Tags

Related Articles

Close