ಪ್ರಚಲಿತ

ಗೌರಿ ಲಂಕೇಶ್ ಇನ್ನೂ ಸತ್ತಿಲ್ಲವೇ?! ಇನ್ನೂ ಬದುಕಿದ್ದಾರೆಯೇ?! ಇಲ್ಲಿದೆ ಸ್ಫೋಟಕ ಮಾಹಿತಿ!

ಗೌರೀ ಲಂಕೇಶ್ ಮತ್ತೆ ಬಂದಿದ್ದಾರೆಯೇ?!

ಗೌರಿ ಲಂಕೇಶ್ ಹತ್ಯೆಯಾಗಿ ಎರಡು ತಿಂಗಳಾದ ಮೇಲೆ ಅವರ ಫೇಸ್ ಬುಕ್ ಖಾತೆಯೊಂದು ಮತ್ತೆ ಜೀವಂತವಾಗಿದೆ! ತನ್ನಷ್ಟಕ್ಕೇ ತಾನು ಪೋಸ್ಟ್ ಗಳನ್ನು ಹಾಕಲು ಸಾಧ್ಯವಿಲ್ಲ ಎಂದಾದರೆ ಗೌರಿ ಲಂಕೇಶ್ ಮತ್ತೆ ಪುನರ್ಜನ್ಮ ತಾಳಿ ಬಂದಿರುವರೇ ಎಂಬ ಅನುಮಾನದ ಹುತ್ತ ಈಗ ಬೆಳೆದಿದೆ!

ವಿಶೇಷ ತನಿಖಾ ದಳವು ಅವರ ಫೇಸ್ ಬುಕ್ ಖಾತೆಯು ಜೀವಂತವಾಗಿರುವುದರ ಬಗ್ಗೆ ಮಾಹಿತ ನೀಡಿದೆ! ಪುನರ್ಜನ್ಮವೇ ಮೌಢ್ಯ ಎಂದೆನ್ನುವವರ
ರಾಜ್ಯದಲ್ಲಿ ಗೌರಿ ಲಂಕೇಶ್ ಭೂತವಾಗಿ ತನ್ನ ಖಾತೆಯನ್ನು ನಿರ್ವಹಿಸುತ್ತದೆ ಎಂಬುದನ್ನು ನಂಬಲು ಅಸಾಧ್ಯವಿರುವುದರಿಂದ ಇದರ ಹಿಂದೆ ಜೀವಂತ ಪಿಶಾಚಿಯ
ಕೈವಾಡವಿದೆ ಎಂಬುದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲು ಸಾಧ್ಯ!

ಆಕೆಯ ಫೇಸ್ ಬುಕ್ ಮತ್ತೆ ಜೀವಂತವಾಗಿರುವುದ್ಯಾಕೆ?!

ಆಕೆಯ ಖಾತೆ ಸತ್ತ 50 ದಿನಗಳ ನಂತರ ಮತ್ತೆ Active ಆಗಿದೆ ಎಂದು ಸ್ವತಃ ತನಿಖಾ ದಳವೇ ಹೇಳಿದ ಮೇಲೆ ಎಂತಹವರಿಗೂ ಅರ್ಥವಾಗುವುದಿಷ್ಟೇ!

1. ಮೊದಲನೆಯದಾಗಿ, ಗೌರಿ ಲಂಕೇಶ್ ಸಾಮಾನ್ಯ ಪತ್ರಕರ್ತೆಯಾಗಿಲ್ಲವಾದದ್ದರಿಂದ ಆಕೆಯ ಯಾವುದೇ ಪಾಸ್ ವರ್ಡ್ ಅಥವಾ ಖಾತೆಯ ಮಾಹಿತಿಯನ್ನು ಅಷ್ಟು ಸುಲಭಕ್ಕೆ ಇನ್ನೊಬ್ಬರಿಗೆ ಸಿಗುವಂತೆ ಮಾಡಲು ಸಾಧ್ಯವೇ ಇಲ್ಲ.

2. ಅಷ್ಟಾದರೂ ಸಹ ಖಾತೆ ಸಕ್ರಿಯವಾಗಿದೆಯೆಂದರೆ ಇದೊಂದು ವ್ಯವಸ್ಥಿತ ಷಡ್ಯಂತ್ರ!

ಹಾಗಾದರೆ ಈಗಿರುವ ಬಳಕೆದಾರನ ಉದ್ದೇಶ,

1. ಲಭ್ಯವಿರುವ ಅಮೂಲ್ಯ ಸಾಕ್ಷಿಗಳನ್ನು ನಾಶಪಡಿಸುವುದು.

2.ಫೇಸ್ ಬುಕ್ಕಿನಲ್ಲಿ ಪೋಸ್ಟ್ ನ ದಿನಾಂಕವನ್ನು ಬದಲು ಮಾಡುವ ಅವಕಾಶವಿರುವುದರಿಂದ ಬೇರೆ ಯಾರ ಮೇಲೋ ಹತ್ಯೆಗೆ ಸಂಬಂಧಪಟ್ಟ ಆರೋಪವನ್ನು ಹೊರಿಸಲು ಮಾಡುತ್ತಿರುವ ವ್ಯವಸ್ಥಿತ ಯತ್ನ!

3. ಯಾವುದೇ ಪೋಸ್ಟ್ ಗಳನ್ನೂ ಸಹ, ಅಳಿಸಲು ಅಥವಾ ಪರಿಷ್ಕರಿಸಲು ಸಾಧ್ಯವಿದೆ. ಅಲ್ಲದೇ, ಬೇಕಾದವರ ಹೆಸರಿಗೆ ಇರುವ ಪೋಸ್ಟ್ ಗಳನ್ನು ಟ್ಯಾಗ್ ಮಾಡಿ ತನ್ಮೂಲಕ ಪ್ರಕರಣದ ದಿಕ್ಕು ತಪ್ಪಿಸುವುದು!

3. ಯಾವುದೇ ಹತ್ಯೆಯಾದರೂ ಸಹ ಇವತ್ತು ಮೊದಲು ತನಿಖೆ ಮಾಡುವುದೇ ಸಾಮಾಜಿಕ ಜಾಲತಾಣಗಳನ್ನು, ಮೊಬೈಲ್ ಕರೆ ಹಾಗೂ ಸಂದೇಶಗಳನ್ನು. ಇದನ್ನು ಹಾಗಾದರೆ ಎಸ್ ಐಟಿ ಮಾಡಿದೆಯಾ?! ಆಕೆಯ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿರುವಂತಹ ದಾಖಲೆಗಳನ್ನು ಪರಿಶೀಲಿಸಿದೆಯಾ?! ಹ್ಯಾಕ್ ಮಾಡಲು ಸಾಧ್ಯವೇ ಇಲ್ಲವೆಂದಾದರೆ ಸ್ವತಃ Facebook ಸಹಕರಿಸುತ್ತದೆ ದಾಖಲೆಗಳನ್ನು ಸಂಗ್ರಹಿಸಲು!

4. Internet Protocol ಗಳನ್ನು ಇವತ್ತು ಸುಲಭವಾಗಿ ಪತ್ತೆ ಹಚ್ಚಬಹುದು. ತನ್ಮೂಲಕ, ಬಳಕೆದಾರನ ಸ್ಥಳ, ಹೆಸರು ಗಳನ್ನು ಕಂಡು ಹಿಡಿಯಬಹುದು. ಇದನ್ನು ಎಸ್ ಐ ಟಿ ಮಾಡಿದೆಯಾ?! ತನಿಖೆಯ ಬದಲಿಗೆ ಮಾಧ್ಯಮಗಳಿಗೆ ಇಂತಹ ವಿಷಯಗಳನ್ನು ಬಹಿರಂಗ ಪಡಿಸುತ್ತಿರುವುದ್ಯಾಕೆ?!

5. ತನಿಖಾ ದಳವೇ ಆಕೆ ಯಾರಿಗೂ ಸಹ ತನ್ನ ಖಾತೆಯ ಪಾಸ್ ವರ್ಡ್ ಗಳನ್ನೆಲ್ಲ ತಿಳಿಸಿರಲಿಲ್ಲ ಎಂದು ವರದಿ ಮಾಡಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಕುಂತಾಡಿ ನಿತೇಶ್ ಎಂಬ ವ್ಯಕ್ತಿ ಹೇಗೆ ಗೌರಿ ಲಂಕೇಶ್ Facebook ಖಾತೆಯನ್ನು ತೆರೆದುಕೊಡಬೇಕಾಗಿ ಕೇಳಿದ್ದರು, ಹಾಗು ಹೇಗೆ ತನ್ನ ಪಾಸ್ ವರ್ಡ್ ಗಳನ್ನು ತನಗೆ ಹಿಂಜರಿಕೆಯಿಲ್ಲದೇ ಕೊಟ್ಟಿದ್ದರು ಎನ್ನುವುದಾಗಿ ವಿವರಿಸಿ ತಮ್ಮ ವಾಲ್ ನಲ್ಲಿ ಬರೆದುಕೊಂಡಿದ್ದರು. ಹಾಗಾದರೆ.. ಆಕೆಯ ಪಾಸ್ ವರ್ಡ್ ಅಥವಾ ಸೆಕ್ಯುರಿಟಿ ಪ್ರಶ್ನೆ, ಉತ್ತರ ಗಳೆಲ್ಲವೂ ಗೊತ್ತಿರುವುದು ಈ ವ್ಯಕ್ತಿಗೆಂದು ಸಾಬೀತಾಯಿತು! ಆತನೇ ಸ್ವತಃ ಆಕೆಯ ಖಾತೆಯ ಪಾಸ್ ವರ್ಡ್ ಗೊತ್ತಿರುವುದನ್ನು ಹೆಮ್ಮೆಯಿಂದ ಬರೆದುಕೊಂಡಿದ್ದ!! https://m.facebook.com/story.php?story_fbid=926035337550270&id=100004314361037

ಹಾಗಾದರೆ?!

ಹೆಲ್ಮೆಟ್ಟಿನೊಳ ಕಂಡ ಕುಂಕುಮ, ಸಿಸಿಟಿವಿಯಲ್ಲಿ ಕಾಣದ ಮುಖ,. .ಇದೆಲ್ಲ ಯಾವ ಅರ್ಥವನ್ನು ಕೊಟ್ಟೀತು?! ಇನ್ನಾದರೂ ತನಿಖಾ ದಳ ಎಚ್ಚೆತ್ತುಕೊಂಡು ತನಿಖೆ ಪ್ರಾರಂಭ ಮಾಡಲಿದೆಯೇ?! ಅಥವಾ ಹೀಗೇ ಕುಂಕುಮ, ತಾಯತ ಎಂದು ಕೂರಲಿದೆಯೋ?!

– ತಪಸ್ವಿ

Tags

Related Articles

Close