ಅಂಕಣದೇಶಪ್ರಚಲಿತ

ಚೀನಾವನ್ನೆದುರಿಸಿ ಭಾರತಕ್ಕೆ ಬೆಂಬಲ ನೀಡುತ್ತದೆಯೇ ಜಪಾನ್?! ಜಪಾನ್ ನ ಇನ್ನೊಂದು ಮುಖದ ಅನಾವರಣ!!

ಡೊಕ್ಲಾಮ್ ವಿಷಯದಲ್ಲಿ ಚೀನಾ ಭಾರತಕ್ಕೆ ಅಡ್ಡಿಯಾಗುವುದರ ಮೂಲಕ ದೊಡ್ಡ ತಪ್ಪು ಮಾಡಿದೆ. ಈಗ ಎಲ್ಲಾ ಪ್ರಮುಖ ರಾಷ್ಟ್ರಗಳೂ ಭಾರತಕ್ಕೆ ಬೆಂಬಲ ನೀಡುತ್ತಿರುವುದು ಚೀನಾಕ್ಕೆ ಹಿನ್ನಡೆಯಾಗಿದೆ. ಇತ್ತೀಚೆಗೆ ಯುಎಸ್ಎ ರಕ್ಷಣಾ ತಜ್ಞರು ಯುನೈಟೆಡ್ ಸ್ಟೇಟ್ಸ್ಗಿಂತ ಅಗತ್ಯವಿದ್ದಲ್ಲಿ ಖಂಡಿತವಾಗಿ ಭಾರತದ ಪರವಾಗಿ ನಿಲುವನ್ನು ಹೊಂದುತ್ತೇವೆ ಎಂದು ಹೇಳಿದರು. ಮತ್ತು ಈಗ ಜಪಾನ್ ಕೂಡ ಭಾರತಕ್ಕೆ ಬೆಂಬಲಿಸಲು ತುದಿಗಾಲಲ್ಲಿ ನಿಂತಿದೆ.

ಜಪಾನ್ ಹಾಗೂ ಭಾರತದ ಸಂಬಂಧಕ್ಕೆ ಇತಿಹಾಸವಿದೆ. ಅಚ್ಚರಿಯ ಸಂಗತಿಯೇನೆಂದರೆ ಅವರೆಡೂ ರಾಷ್ಟ್ರಕ್ಕೆ ಅಡ್ಡಿಯಾಗುತ್ತಿರುವುದು ಚೀನಾ ದೇಶ. ಚೀನಾ ದೇಶ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹೊರಟಿರುವುದು ನಮಗೆಲ್ಲಾ ಅರಿವಿದೆ. ಇತ್ತ ಭಾರತ, ಅತ್ತ ಭೂತಾನ್. ಇನ್ನೊಂದು ಕಡೆ ವೀಯೆಟ್ನಾಂ,
ಮಗದೊಂದು ಕಡೆಯಿಂದ ಜಪಾನ್ ಗೆ ಸದಾ ಕಿರಿಕಿರಿಯನ್ನುಂಟು ಮಾಡುತ್ತಿರುವ ಚೀನಾ ದೇಶಕ್ಕೆ ಎಲ್ಲಾ ರಾಷ್ಟ್ರಗಳು ಸೇರಿ ಪಾಠವನ್ನು ಕಲಿಸಬೇಕಿದೆ. ಆ ನಿಟ್ಟಿನಲ್ಲಿ ಜಪಾನ್ ಡೋಕ್ಲಾನ್ ವಿಚಾರದಲ್ಲಿ ಭಾರತವನ್ನು ಬೆಂಬಲಿಸಿದ್ದು, ಚೀನಾಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ.

ಸಾಂಸ್ಕøತಿಕವಾಗಿ, ಆರ್ಥಿಕವಾಗಿ ಹಾಗೂ ರಕ್ಷಣಾತ್ಮಕವಾಗಿ ಜಪಾನ್ ಭಾರತದೊಂದಿಗೆ ಸಂಬಂಧವನ್ನು ಸದಾ ಇಟ್ಟುಕೊಂಡಿದೆ. ಆದರೆ ಇತ್ತ ಕಡೆ ಚೀನಾ ಮಾತ್ರ ಕುಚೇಷ್ಟೆಗಳನ್ನು ಮಾಡುತ್ತಾ ನೆರೆಹೊರೆಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದೆ. ಅಂತಹ ಕುತಂತ್ರಿ ಚೀನಾದ ಮುಖವಾಡ ಜಗತ್ತಿನೆದುರು ಬಟಾಬಯಲಾಗಿದೆ. ಇತ್ತ ಕಡೆ ಅಮೇರಿಕಾ ಭುತಾನ್ ಹಾಗೂ ಭಾರತಕ್ಕೆ ಸಹಕಾರವನ್ನು ನೀಡಲಿದೆ ಎಂದಿದೆ, ಜಪಾನ್ ಕೂದ ಅಗತ್ಯವಿದಲ್ಲಿ ಭಾರತ ಪರವಾಗಿ ನಾವಿದ್ದೇವೆ ಅನ್ನುವ ಸಂದೇಶವನ್ನು ಕೊಟ್ಟಿದ್ದಾರೆ. ಚೀನಾ ದೇಶಕ್ಕೆ ವ್ಯಾಪಾರದ ಸಂಬಂಧವಲ್ಲದೇ ಇರುವ ಎರಡು ಮಿತ್ರ ರಾಷ್ಟ್ರಗಳೆಂದರೆ ಅದು ಸರ್ವಾಧಿಕಾರವನ್ನು ಹೊಂಡಿರುವ ಉತ್ತರ ಕೊರೆಯಾ ಇನ್ನೊಂದು ಪಾಪಿ ಪಾಕಿಸ್ತಾನ. ಆದರೆ ಉಳಿದೆಲ್ಲಾ ರಾಷ್ಟ್ರಗಳು ಮಿತ್ರರಾಗಿವೆ ಎಂದೇ ಹೇಳಬಹುದು. ಈ ಬೆಳವಣಿಗೆಗಳನ್ನು ಗಮನಿಸಿದಾಗ ಚೀನಾದ ಅವಸಾನದ ಕಾಲ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ.

ಚೀನಾ ವಿರುದ್ಧದ ರಾಜತಾಂತ್ರಿಕವಾಗಿ ಯುದ್ಧವನ್ನು ಮೋದಿ ಇವತ್ತು ಗೆಲ್ಲುತ್ತಿರುವುದು ಸ್ಪಷ್ಟವಾಗಿದೆ. ಹತಾಶೆಗೊಂಡ ಚೀನಾ ಹಲವಾರು ಸಂದರ್ಭಗಳಲ್ಲಿ ಮಾತನ್ನೇ ಬಳಸಿತು ಆದರೆ ಡೋಕ್ಲಾಮ್ನಿಂದ ಭಾರತೀಯ ಯೋಧರನ್ನು ಹಿಮ್ಮೆಟ್ಟಿಸಲು ಯಶಸ್ವಿಯಾಗಿಲ್ಲ. ಭಾರತವನ್ನು ಅವಮಾನಿಸುವಂತೆ ತನ್ನ ಸುದ್ದಿ ವಾಹಿನಿಯ ಮೂಲಕ ಜನಾಂಗೀಯ ವಿಡಿಯೋವನ್ನು ಕೂಡ ಚೀನಾ ಪ್ರಸಾರ ಮಾಡಿಸಿತ್ತು.

ಡೊಕ್ಲಾಮ್ ವಿವಾದದ ಕಾರಣದಿಂದ ಸಂಘರ್ಷದ ಸಂದರ್ಭದಲ್ಲಿ ಚೀನಾದ ಪ್ರಮುಖ ದಿನಪತ್ರಿಕೆಗಳು ಟೋಕಿಯೊದಲ್ಲಿ ಬ್ಯಾಂಕಿಂಗ್ ನಡೆಸುವುದರ ವಿರುದ್ಧ ಎಚ್ಚರಿಸಿದೆ .ಆದರೆ ಜಪಾನ್ ಭಾರತಕ್ಕೆ ಎಲ್ಲಾ ರೀತಿಯಾದ ಬೆಂಬಲವನ್ನೂ ಕೊಡಲಿದೆ.

“ನಾವು ಡೋಕ್ಲಾನ್, ಭೂತಾನ್ ಮತ್ತು ಚೀನಾ ವಿವಾದಿತ ಪ್ರದೇಶವಾಗಿದೆ ಎಂದು ಗುರುತಿಸುತ್ತೇವೆ ಮತ್ತು ಎರಡು ರಾಷ್ಟ್ರಗಳು ಗಡಿ ಮಾತುಕತೆಗಳಲ್ಲಿ ತೊಡಗಿವೆ. ಭಾರತವು ಭೂತಾನ್ ಜೊತೆಗಿನ ಒಪ್ಪಂದವನ್ನು ಅರ್ಥ ಮಾಡಿಕೊಳ್ಳುತ್ತಿದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ, ಅದಕ್ಕಾಗಿಯೇ ಭಾರತೀಯ ಪಡೆಗಳು ಈ ಪ್ರದೇಶದಲ್ಲಿ ತೊಡಗಿಸಿಕೊಂಡಿದ್ದಾರೆ “, ಎಂದು ಜಪಾನ್ ಹೇಳಿಕೆಯನ್ನು ನೀಡಿದೆ.

ಸೇನ್ಕಾಕು ದ್ವೀಪಗಳ ಬಳಿ ಪೂರ್ವ ಚೀನಾದ ಸಮುದ್ರದ ಸ್ಥಿತಿಯನ್ನು ಬದಲಾಯಿಸಲು ಚೀನಾ ಬಯಸಿದಾಗ ಹಾಗೂ ಅದನ್ನು ಆಕ್ರಮಿಸಲು ಯತ್ನಿಸಿದಾಗ ಭಾರತವು ಜಪಾನಿಗೆ ಬೆಂಬಲ ನೀಡಿತು. ಚೀನಾ ಆಕ್ರಮಣಶೀಲತೆ ವಿರುದ್ಧ ಈಗ ಜಪಾನ್ ಮುಕ್ತವಾಗಿ ಭಾರತವನ್ನು ಬೆಂಬಲಿಸುತ್ತಿರುವುದು ಭಾರತಕ್ಕೆ ವರದಾನವಾಗಲಿದೆ.

ಚೀನಾ ವಿರುದ್ಧ ಭಾರತವನ್ನು ಬೆಂಬಲಿಸುವುದಕ್ಕೆ ಜಪಾನ್ ಮತ್ತೊಂದು ಕಾರಣವನ್ನು ಹೊಂದಿದೆ. ಜಪಾನ್ ದ್ವೀಪಗಳ ಮೇಲೆ ಬೀಜಿಂಗ್ ಹೇಳಿಕೆ ನೀಡಿದೆ. ಈ ವರ್ಷ ಮೇ ತಿಂಗಳಲ್ಲಿ, ಜಪಾನ್ ನಾಲ್ಕು ಚೀನೀ ಹಡಗುಗಳನ್ನು ಹಾಗೂ ತನ್ನ ಯುದ್ಧನೌಕೆಗಳನ್ನು ತಿರುಗಿಸಿತು ,‌ಕಾರಣ ಚೀನೀದ ಡ್ರೋನ್ ವಿಮಾನವು ಸೆನ್ಕಾಕು ದ್ವೀಪಗಳಿಗೆ ಪ್ರವೇಶಿಸಿತ್ತು. ಈ ರೀತಿಯಾಗಿ ಚೀನಾ ಜಪಾನ್ ಗೆ ಸಂಬಂಧಪಟ್ಟ ದ್ವೀಪವನ್ನು ತನ್ನದಾಗಿಸಲು ಪ್ರಯತ್ನಿಸಿತ್ತು.

ಜಪಾನ್ ರಾಯಭಾರಿಯ ಅಭಿಪ್ರಾಯದ ಬಗ್ಗೆ ಚೀನಾ ಕುಪಿತಗೊಂಡಿದೆ ಎಂದು ತೋರುತ್ತಿದೆ. “ನಾನು ಭಾರತದಲ್ಲಿ ಜಪಾನೀ ರಾಯಭಾರಿಯನ್ನು ನಿಜವಾಗಿಯೂ ಭಾರತವನ್ನು ಬೆಂಬಲಿಸಲು ಬಯಸಿದ್ದನ್ನು ನೋಡಿದ್ದೇವೆ. ಸಂಬಂಧಿತ ಸಂಗತಿಗಳನ್ನು ಸ್ಪಷ್ಟಪಡಿಸುವ ಮೊದಲು ಯಾದೃಚ್ಛಿಕವಾಗಿ ಪ್ರತಿಕ್ರಯಿಸಬಾರದು ಎಂದು ನಾನು ಅವನಿಗೆ ನೆನಪಿಸಲು ಬಯಸುತ್ತೇನೆ “ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಯಿಂಗ್ ಹೇಳಿಕೆ ನೀಡಿದ್ದಾರೆ. “ಮತ್ತು ಗಡಿಯಲ್ಲಿ ನಿಯಮಗಳನ್ನು ಮುರಿಯುವ ಮೂಲಕ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿಲು ಪ್ರಯತ್ನ ಪಡುತ್ತಿರುವುದು ಭಾರತ, ಚೀನಾ ಅಲ್ಲ”. ಎಂದೂ ಹೇಳಿದರು.

ಇದರಿಂದ ‌ಒಂದು ವಿಚಾರ ಸ್ಪಷ್ಟವಾಗಿದೆ. ಡೊಕ್ಲಾಮ್ ಪ್ರದೇಶದಲ್ಲಿ ಭಾರತೀಯ ಯೋಧರನ್ನು ಹಿಮ್ಮೆಟ್ಟಿಸಲು ಅಥವಾ ಹೆದರಿಸಲು ಸಾಧ್ಯವಾಗದ ಕಾರಣ ಚೀನಾ ಅವಮಾನವನ್ನೆದುರಿಸುತ್ತಿದೆ ಹಾಗೂ ಮತ್ತು ಅಸಹಾಯಕವಾಗಿದೆ.

– ವಸಿಷ್ಠ

 

Tags

Related Articles

Close