ಪ್ರಚಲಿತ

ಜವಾಹರಲಾಲ್ ನೆಹರು ಮತ್ತು ಲೇಡಿ ಮೌಂಟ್ ಬ್ಯಾಟನ್ ಮಧ್ಯೆ ನಿಜಕ್ಕೂ ನಡೆದಿದ್ದಾದರೂ ಏನು?!

ಮೌಂಟ್ ಬ್ಯಾಟನ್ ನೊಂದಿಗೆ ನೆಹರೂರವರ ಫೆÇೀಟೋಗಳನ್ನು ನಾವು ನೋಡಿದಾಗ, ಮೌಂಟ್ ಬ್ಯಾಟನ್ ಗಿಂತಲೂ ಹೆಚ್ಚು ನೆಹರೂರವರ ಹತ್ತಿರ ಕಾಣುವುದು ಒಬ್ಬ ಮಹಿಳೆ ಎನ್ನುವುದನ್ನು ನಾವು ಗಮನಿಸಿದ್ದೇವೆ !! ಆಕೆ ಬೇರಾರು ಅಲ್ಲ…. ಲೇಡಿ ಮೌಂಟ್ ಬ್ಯಾಟನ್ ಅಥವಾ ಎಡ್ವಿನಾ ಎಂದು ಕರೆಯಲ್ಪಡುವ ಮೌಂಟ್ ಬ್ಯಾಟನ್ ಅವರ ಪತ್ನಿ!!

ನೆಹರೂರವರು ಮೌಂಟ್ ಬ್ಯಾಟನ್ ಅವರ ಹೆಂಡತಿಯೊಂದಿಗೆ ಯಾಕೆ ತುಂಬಾ ಆಪ್ತರಾಗಿದ್ದರು ಎಂದು ಅನೇಕ ಲೇಖನಗಳ ಮೂಲಕ ನಮಗೆ ತಿಳಿದಿವೆ!! ಆದರೆ, ನೆಹರೂ ಅವರು ತಮ್ಮ ವೈವಾಹಿಕ ಜೀವನದಿಂದಾಗಿ ತುಂಬಾ ಸಂತೋಷದಿಂದಿರಲಿಲ್ಲ ಎನ್ನುವುದು ಹಲವರಿಗೆ ತಿಳಿಯದ ವಿಚಾರ!! ನೆಹರೂರವರ ವಿವಾಹವು ಕಮಲಾ ಅವರೊಂದಿಗೆ ನಡೆದಿದ್ದು, ಆದರೆ ಅವರು ತಮ್ಮ ವಿವಾಹದಿಂದಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸಿದರು. ನೆಹರು ಅವರ ಸೋದರಸಂಬಂಧಿ ನಯಂತರಾ ಸಾಹಗಾಲ್ ಅವರು ಒಮ್ಮೆ ನೆಹರು ಮತ್ತು ಕಮಲಾ ನೆಹರು ಅವರೊಂದಿಗಿನ ವಿವಾಹವು “ಎರಡು ವಿಭಿನ್ನ ವ್ಯಕ್ತಿಗಳ ಬಹು ದೊಡ್ಡದಾದ ಪ್ರಮಾದ” ಎಂದು ಹೇಳಿದ್ದರು.

ಮತ್ತೊಂದೆಡೆ, ಡಿಕ್ಕಿ ಮೌಂಟ್ ಬ್ಯಾಟನ್ ಮತ್ತು ಎಡ್ವಿನಾಳೊಂದಿಗಿನ ವಿವಾಹವು ಕೂಡ ಬಿಕ್ಕಟ್ಟಿನಿಂದ ಕೂಡಿತ್ತು!! ಅಷ್ಟೇ ಅಲ್ಲದೇ ಎಡ್ವಿನಾಳಿಗೆ ಮದುವೆಯ ಮುಂಚೆ ಮತ್ತು ಮದುವೆಯ ನಂತರ ಆಕೆಯು ಅನೇಕ ಸಂಬಂಧಗಳನ್ನು ಹೊಂದಿದ್ದಳು ಎಂದು ಹೇಳಲಾಗಿದೆ. ಅಕ್ಟೋಬರ್ 1926 ರಂದು, ಸ್ಯಾನ್ ಫ್ರಾನ್ಸಿಸ್ಕೋ ಕ್ರೊನಿಕಲ್ ಎನ್ನುವ ಪತ್ರಿಕೆಯು ಲೇಡಿ ಮೌಂಟ್ ಬ್ಯಾಟನ್ ಕುರಿತಾದ ಒಂದು ಲೇಖನವನ್ನು ಬಿಡುಗಡೆ ಮಾಡಿತ್ತು. “ಎ ರಾಯಲ್ ‘ಸ್ಪ್ಯಾಂಕಿಂಗ್’ ಫಾರ್ ಗೇ ಲೇಡಿ ಮೌಂಟ್ ಬ್ಯಾಟನ್” ಎನ್ನುವ ಶೀರ್ಷಿಕೆಯಡಿ ಈ ದಂಪತಿಗಳ ಸಂಸಾರವು ಬಿಕ್ಕಟ್ಟಿನಿಂದಲೇ ಕೂಡಿತ್ತು ಎನ್ನುವುದನ್ನು ಹೇಳಲಾಗಿದೆ. ಅಷ್ಟೇ ಅಲ್ಲದೇ, ವಿಚ್ಛೇದನೆಯನ್ನು ಪಡೆಯಲು ಕೂಡ ಮೌಂಟ್ ಬ್ಯಾಟನ್ ನಿಂದ ಎಡ್ವಿನಾಳಿಗೆ ಬೆದರಿಕೆ ಇತ್ತು ಎನ್ನುವುದನ್ನು ಹೇಳಲಾಗಿದೆ.

Image result for jawaharlal nehru and lady mount bataine

ಮೌಂಟ್ ಬ್ಯಾಟನ್ ಬರೆದಿರುವ ಪತ್ರಗಳಲ್ಲಿ “I wish I knew how to flirt with other women, and especially with my wife. I wish I’d sown more wild oats in my youth, and could excite more than I fear I do. I wish I wasn’t in the Navy and had to drag you outto Malta. I wish I had an equal share ofthe money so thatI could give you far handsomer presents than I can really at present honestly manage. In other words, I’d like to feelthatI was really worthy of your love.” ಹೀಗೆ ಬರೆಯಲಾಗಿತ್ತು!!

ಕಮಲಾ ನೆಹರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಹಾಸಿಗೆ ಹಿಡಿದಿದ್ದು, ಆಕೆ ಆಸ್ಪತ್ರೆಯಲ್ಲಿರುವ ವೇಳೆ ನೆಹರೂರವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಇನ್ನು ಮುಂದೆ ನೆಹರೂರವರೊಂದಿಗೆ ಹೆಚ್ಚು ಸಮಯ ನಿಕಟತೆಯನ್ನು ಅನುಭವಿಸಲಾಗುವುದಿಲ್ಲ ಎನ್ನುವುದನ್ನು ಗಮನಿಸಿದರು!! ಅದೇ ಸಂದರ್ಭದಲ್ಲಿ ಅವರು ಶಾಂತಿಯುತ ಆಧ್ಯಾತ್ಮಿಕ ಜೀವನವನ್ನು ಕಳೆಯಲು ಬಯಸಿದ್ದೇನೆ ಮತ್ತು ಇನ್ನು ಮುಂದೆ ಲೈಂಗಿಕ ಸಂಬಂಧಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ಹೇಳಿದರು. ಆದರೆ ಕಮಲಾ ನೆಹರೂರು ಕೇವಲ 37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ತದನಂತರದಲ್ಲಿ, ತನ್ನ ವೈಯಕ್ತಿಕ ಡೈರಿಯಲ್ಲಿ ನೆಹರೂರವರು “ನಾನು ಅಲ್ಲಿ ಮಾನಸಿಕ ಬದಲಾವಣೆಯನ್ನು ಬಯಸಿದೆ. ಆಕೆ ಕಾಯ್ದಿರಿಸಿದಳು” ಎಂದು ಉಲ್ಲೇಖಿಸಿದ್ದಾರೆ.

Image result for jawaharlal nehru and edwina

ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಎಸ್.ಎಸ್ ಪಿರ್ಝಾದ ಹೇಳುವ ಪ್ರಕಾರ, ನೆಹರೂ ಹಾಗೂ ಎಡ್ವಿನಾರವರ ಪತ್ರ ವ್ಯವಹಾರದ ಸಂಗತಿ ಜಿನ್ನಾ ರವರಿಗೂ ತಿಳಿದಿತ್ತು. ಕೆಲವು ಪತ್ರಗಳು ಜಿನ್ನಾರ ಕೈಯನ್ನೂ ಸೇರಿತ್ತೆಂಬುವುದೇ ಸೋಜಿಗದ ಸಂಗತಿ. ಆ ಪತ್ರಗಳಲ್ಲಿದ್ದ ಕೆಲವು ಸಂಗತಿಗಳು ಇಲ್ಲಿವೆ:

ಪತ್ರವೊಂದರಲ್ಲಿ, ಎಡ್ವಿನಾ ಬರೆಯುತ್ತಾರೆ, “ಡಿಕ್ಕಿ ಇವತ್ತು ರಾತ್ರಿ ಹೊರಗಡೆ ಹೋಗುತ್ತಾರೆ, 10 ಗಂಟೆಯ ನಂತರ ಬನ್ನಿ”. ಇನ್ನೊಂದು ಪತ್ರದಲ್ಲಿ, “ನೀವು ನಿಮ್ಮ ಕರವಸ್ತ್ರವನ್ನು ಮರೆತಿದ್ದೀರಿ, ಡಿಕ್ಕಿ ಅದನ್ನು ಗುರುತಿಸುವ ಮೊದಲು ನಾನು ಅದನ್ನು ತೆಗೆದಿಟ್ಟಿದ್ದೇನೆ” ಎಂದು ಪತ್ರದಲ್ಲಿ ಅವಳು ಹೇಳುತ್ತಾಳೆ. ಮೂರನೆಯ ಪತ್ರದಲ್ಲಿ, “ಶಿಮ್ಲಾದ ಸುಮಧುರ ನೆನಪುಗಳನ್ನಂತೂ ನಾನು ಮರೆಯಲಾರೆ- ಅಲ್ಲಿನ ಸವಾರಿ ಮತ್ತು ನಿಮ್ಮ ಸ್ಪರ್ಶದ ಬಗ್ಗೆ ನನಗೆ ನೆನಪಿದೆ.” ಎಂದು!!

ನೆಹರೂ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿರುವ ನಯಂತರಾ ಪಂಡಿತ್ ಅವರು ತಮ್ಮ ಚಿಕ್ಕಪ್ಪ (ನೆಹರು) ಮತ್ತು ಎಡ್ವಿನಾ ಉತ್ತಮ ಸಂಬಂಧವನ್ನು ಹೊಂದಿದ್ದರಲ್ಲದೇ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಯಾವುದೇ ಸಂದೇಹವೇ ಬೇಡ ಎಂದೂ ಹೇಳಿದ್ದಾರೆ.

Image result for jawaharlal nehru and edwina

ಇನ್ನು ನೆಹರು ಅವರ ಕಿರಿಯ ಸಹೋದರಿ ಬೆಟ್ಟಿ ಯವರು ಹೇಳುವ ಪ್ರಕಾರ, “ಆ ದಿನಗಳಲ್ಲಿ ಪರಿಸ್ಥಿತಿಯು ಉದ್ವಿಗ್ನ ಸ್ಥಿತಿಯಲ್ಲಿದ್ದಾಗ, ಯಾವಾಗ ಆಕೆ (ಎಡ್ವಿನಾ) ತನ್ನ ಸಹೋದರನ ಜೀವನದಲ್ಲಿ ಪ್ರವೇಶಿಸಿದಳೋ ತದ ನಂತರದಿಂದ ನನ್ನ ಸಹೋದರ ಭಾರತದ ಪ್ರಧಾನಿಯಾದರಲ್ಲದೇ, ಸಹೋದರನ ಅಶಾಂತಿಯುತ ಮನಸ್ಥಿತಿಯನ್ನು ದೂರ ಮಾಡಿರುವ ಕೆಲಮಂದಿಯರಲ್ಲಿ ಇವಳೂ ಒಬ್ಬಳು ಎಂದು ಹೇಳಿದ್ದರು. ಅಷ್ಟೇ ಅಲ್ಲದೇ, ನಾವು ಚಿಕ್ಕವರಿರುವಾಗ ಆಕೆಯೂ ಅಲ್ಲಿದ್ದ ಸಂದರ್ಭದಲ್ಲಿ, ನನ್ನ ಸಹೋದರನ ನಗು ಈಡೀ ಮನೆಯನ್ನೇ ಸುತ್ತುವರೆಯುತಿತ್ತು. ಎಂದು ಹೇಳಿದ್ದಾರೆ.

ಮೌಂಟ್ ಬ್ಯಾಟನ್ ಹಾಗೂ ಎಡ್ವಿನಾ ಕಿರಿಯ ಪುತ್ರಿ ಪಮೀಲಾ ಹಿಕ್ಸ್ ಹೇಳುವ ಪ್ರಕಾರ, “ಜವಾಹರಲಾಲ್ ನೆಹರು ಮತ್ತು ನನ್ನ ತಾಯಿ (ಎಡ್ವಿನಾ) ಪರಸ್ಪರ ಇಷ್ಟಪಡುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಿಬ್ಬರೂ ಆತ್ಮಸಂಗಾತಿಗಳಾಗಿದ್ದರು. ಆದರೂ ನನ್ನ ತಂದೆ (ಬ್ಯಾಟನ್) ಕರುಬಲಿಲ್ಲ. ಈ ಸಂಬಂಧದಿಂದ ಆಕೆ ಖುಷಿಯಾಗಿರುವುದನ್ನು ಗಮನಿಸಿದ್ದರು ಎಂದಿದ್ದಾರೆ ಪಮೀಲಾ.

ಭಾರತ ಸ್ವಾತಂತ್ರ್ಯ ಪಡೆದುಕೊಂಡ ನಂತರ ಮೌಂಟ್ ಬ್ಯಾಟನ್ ಎಲ್ಲಾ ಪ್ರತಿನಿಧಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದ ಆ ಸಂದರ್ಭದಲ್ಲಿ ನೆಹರೂರವರು ಭಾಷಣವನ್ನು ಮಾಡಿದ್ದರು. ಆದರೆ ಎಡ್ವಿನಾ ಬಹಳ ಬೇಗನೇ ದೇಶವನ್ನು ತೊರೆದ ನಂತರ ನೆಹರು ಅಸಹನೀಯರಾಗಿದ್ದರು. ಈ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಬಹಿರಂಗವಾಗಿ ತನ್ನ ಭಾವನೆಗಳನ್ನು ಬಹಿರಂಗಪಡಿಸಿದ್ದಾರೆ.

Image result for jawaharlal nehru and edwina

ಆಕೆಯ ಸೌಂದರ್ಯವನ್ನು ಹಾಡಿ ಹೊಗಳಿದ್ದ ನೆಹರೂರವರು, ನೀವು ಎಲ್ಲಿಗೆಲ್ಲ ಹೋಗಿದ್ದಿರೋ ಅಲ್ಲಿ ಸಮಾಧಾನವನ್ನು ತಂದಿದ್ದೀರಲ್ಲದೇ, ಭರವಸೆಯನ್ನು, ಪ್ರೋತ್ಸಾಹವನ್ನೂ ತಂದಿದ್ದೀರಿ. ಹಾಗಾಗಿ, ಭಾರತದ ಜನರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ತಮ್ಮಲ್ಲಿ ಒಬ್ಬರಾಗಿ ನಿಮ್ಮನ್ನು ನೋಡಬೇಕು ಮತ್ತು ನೀವು ಹೋಗುತ್ತಿರುವಿರಿ ಎಂದು ನಮಗೆಲ್ಲಾ ದುಃಖವಾಗುತ್ತಿದೆ. ಅಷ್ಟೇ ಅಲ್ಲದೇ, ನೂರಾರು ಸಾವಿರ ಜನರು ವೈಯಕ್ತಿಕವಾಗಿ ವಿವಿಧ ಶಿಬಿರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ನಿಮ್ಮನ್ನು ನೋಡಿದ್ದಾರೆ, ಮತ್ತು ನೂರಾರು ಸಾವಿರ ಜನರು ನೀವು ಹೋಗುವ ಸುದ್ದಿಯನ್ನು ಕೇಳಿ ದುಃಖ ಪಡುತ್ತಾರೆ ಎಂದಿದ್ದಾರೆ. (“The gods or some good fairy gave you beauty and high intelligence, and grace and charm and vitality— great gifts—and she who possesses them is a great lady wherever she goes. But unto those who have, even more shall be given: and they gave you something that was even rarer than those gifts—the human touch,the love of humanity,the urge to serve those who suffer and who are in distress. And this amazing mixture of qualities results in a radiant personality and in the healer’s touch. Wherever you have gone you have brought solace, and you have brought hope and encouragement. Is it surprising, therefore,that the people of India should love you and look up to you as one of themselves and should grieve that you are going? Hundreds ofthousands have seen you personally in various camps and other places and in hospitals, and hundreds ofthousands will be sorrowful atthe news that you have gone.”)

ಭಾರತವನ್ನು ತೊರೆದ ಬಳಿಕ ನೆಹರು ಅವರು ಎಡ್ವಿನಾಳಿಗೆ ಪತ್ರ ಬರೆಯುವುದನ್ನು ಮುಂದುವರಿಸಿದ್ದರು. ಆದರೆ ಆಕೆಯು ತನ್ನ ಈ ಪತ್ರಗಳನ್ನು ತನ್ನ ಗಂಡನಿಂದ ಯಾವತ್ತು ರಹಸ್ಯವಾಗಿರಿಸಿದವಳೇ ಅಲ್ಲ. ಅವಳ ಮರಣದ ದಿನ, ಆಕೆ ತನ್ನ ಹತ್ತಿರವಿರುವ ಎಲ್ಲಾ ಹಳೆಯ ಅಕ್ಷರಗಳ ರಾಶಿಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಲ್ಲದೇ, ಅವಳು ಸಾಯುವ ಮುನ್ನ ಕೆಲ ಪತ್ರಗಳನ್ನು ಹರಿದು ಹಾಕಿದ್ದಾಳೆ. ತದನಂತರದಲ್ಲಿ ಆಕೆಯ ಬಳಿ ಉಳಿದಿದ್ದ ಎಲ್ಲಾ ಪತ್ರಗಳನ್ನು ವೈದ್ಯರು ಮೌಂಟ್ ಬ್ಯಾಟನ್ ಗೆ ಒಪ್ಪಿಸಿದರು. ಆದರೆ ಅವೆಲ್ಲವೂ ಕೂಡ ನೆಹರು ಅವರು ಬರೆದ ಪತ್ರಗಳಾಗಿದ್ದವು.

ವಿಪರ್ಯಾಸವೆಂದರೆ, ಮೌಂಟ್ ಬ್ಯಾಟನ್ ಗೆ ನೆಹರು ಮತ್ತು ಆತನ ಹೆಂಡತಿ ಬಗ್ಗೆ ತಿಳಿದಿದ್ದರೂ ಕೂಡ ಆತ ಹಸ್ತಕ್ಷೇಪ ಮಾಡಲಿಲ್ಲ. ತಿಳಿದೂ ತಿಳಿಯದಂತೆ ವರ್ತಿಸಿದ!! ಯಾಕೆಂದರೆ, ನೆಹರು ಅವರೊಂದಿಗೆ ನಯವಾದ ಸಂಬಂಧವನ್ನು ಇಟ್ಟುಕೊಳ್ಳಲು ಇದುವೇ ದಾರಿಯಾಗಿತ್ತಲ್ಲದೇ, ಅನೇಕ ಬ್ರಿಟಿಷ್ ರಾಜ್ ನೀತಿಗಳನ್ನು ಭಾರತಕ್ಕೆ ಜಾರಿಗೆ ತರಲು ಆತ ಬಯಸಿದ್ದರಿಂದ ತನ್ನ ಹೆಂಡತಿ ಹಾಗೂ ನೆಹರುವಿನ ಸಂಬಂಧದ ಕುರಿತು ಕುರುಡನಂತೆ ವರ್ತಿಸಿದ ಎಂದು ಹೇಳಲಾಗಿದೆ.

Image result for jawaharlal nehru and edwina

ನೆಹರೂ ಒಬ್ಬ ಉನ್ನತ ವರ್ಗದ ಆಧುನಿಕ ವ್ಯಕ್ತಿಯಾಗಿದ್ದರೂ ಕೂಡ ಅವರು ಬೇರೊಬ್ಬ ವ್ಯಕ್ತಿಯ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುವುದು ಅವರು ಯೋಚಿಸಿರಲಿಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ!!

ಆದರೆ…. ಬಹಳ ಆಶ್ವರ್ಯಕರ ಸಂಗತಿ ಎಂದರೆ, ಭಾರತದ ರಾಜಕಾರಣದಲ್ಲಿ ಅನೇಕ ನಿರ್ಧಾರಗಳನ್ನು ಮಾಡಿದ್ದು ಎಡ್ವಿನಾ!! ಹೌದು.. ಇದು ನಂಬಲಾಗದಿದ್ದರೂ ಕಹಿಸತ್ಯವಿದು. ನೆಹರೂರವರು ಅನೇಕ ಬಾರಿ ನಿರ್ಧಾರಗಳನ್ನು ಕೈಗೊಳ್ಳುವಾಗ ಸಲಹೆಯನ್ನು ಎಡ್ವಿನಾನ ಬಳಿ ಪಡೆದಿದ್ದು ಅನೇಕ ಸಿದ್ಧಾಂತಗಳು ಎಡ್ವಿನಾ ಅವರ ಮೋಡಿಯೆಂದು ಸೂಚಿಸುತ್ತವೆ. ಅಷ್ಟೇ ಅಲ್ಲದೇ, ನಾವು ಸ್ವಾತಂತ್ರ್ಯ ಸಾಧಿಸಿದ ನಂತರವೂ ಸರ್ಕಾರದಲ್ಲಿ ಹಲವು ನಿರ್ಧಾರಗಳನ್ನು ಬ್ರಿಟಿಷರ ಪರವಾಗಿ ಮಾಡಲಾಗಿದೆ. ನೆಹರೂ ಅವರು ತನ್ನ ಸಂಬಂಧದಲ್ಲಿ ಕುರುಡನಾಗಿದ್ದಲ್ಲದೇ ಅನೇಕ ಪ್ರಮಾದಗಳನ್ನು ಹೊಂದಿದ್ದು, ಬ್ರಿಟಿಷ್ ವ್ಯಕ್ತಿಯಾಗಿದ್ದ ಲಾಕ್ಹಾರ್ಟ್ ಎನ್ನುವಾತನನ್ನು ಭಾರತದ ಮೊದಲ ಸೇನಾ ಮುಖ್ಯಸ್ಥನಾಗಿ ನೇಮಿಸಿದ್ದರು ನೆಹರು!!

ಕಾಂಗ್ರೆಸ್ ಪಕ್ಷವು ನೆಹರೂರವರು ಯಾವ ರೀತಿ ಗ್ರಾಮೀಣ ಮತಗಳನ್ನು ಪಡೆಯುತ್ತಿದ್ದರು ಎನ್ನುವುದನ್ನೇ ಮರೆಮಾಚಿ ಅವರನ್ನು ಭಾರತದ ಜಂಟಲ್ಮ್ಯಾನ್ ಎಂದು ಕರೆದಿದ್ದಾರೆ. ಆದರೆ ವಾಸ್ತವವಾಗಿ ಅನೇಕ ಜನರು ಅವರನ್ನು ವುಮೆನೈಝರ್ (ಕಾಮುಕ) ಎಂದು ಕರೆದಿರುವುದು ಮಾತ್ರ ಅಕ್ಷರಶಃ ನಿಜ!!

ಅದೇನೇ ಇರಲಿ…. ಒಂದು ವೇಳೆ ನೆಹರೂ ರವರಿಗೆ ಮತಗಳ ಬಗ್ಗೆ ಚಿಂತಿಯಿಲ್ಲದ್ದರೆ, ಬಹುಶಃ ಅವರು ಭಾರತಕ್ಕೆ “ಬ್ರಿಟಿಷ್ ಚಾಚಿ” ಯನ್ನೂ ನೀಡುತ್ತಿದ್ದರೋ ಏನೋ ಗೊತ್ತಿಲ್ಲ!!

ಮೂಲ:http://postcard.news/really-happened-jawaharlal-nehru-lady-mountbatten/

– ಅಲೋಖಾ

Tags

Related Articles

Close