ಅಂಕಣಪ್ರಚಲಿತರಾಜ್ಯ

ಡಿವೈಎಸ್ಪಿ ಗಣಪತಿ ಅವರನ್ನು ಗುಂಡಿಟ್ಟು ಕೊಂದರೆ? ಅದರ ಹಿಂದಿನ “ಕೈ”ವಾಡ ಬಯಲು!!!

ಎಸ್ಪಿ ಗಣಪತಿ ಸಾವು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಘಟನೆಯೆಂದೇ ಪರಿಗಣಿಸಲಾಗಿದೆ. ಡಿವೈ ಎಸ್ಪಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದಾಗ ಇಡೀ ರಾಜ್ಯವೇ ಒಂದು ಕ್ಷಣ ಬೆಚ್ಚಿಬಿದ್ದಿತ್ತು. ಆದರೆ ಸಾವೇ ಒಂದು ವಿವಾದವಾಗಿದ್ದು ಮಾತ್ ವಿಪರ್ಯಾಸವೇ ಸರಿ. ಅವರು ಮರಣವನ್ನುಪ್ಪುವ ಕೆಲವೇ ಗಂಟೆಗಳ ಮುಂಚೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನವೊಂದನ್ನು ನೀಡಿ, ಕರ್ನಾಟಕ ಗೃಹ ಸಚಿವ ಕೆ. ಜೆ. ಜಾರ್ಜ್ ಅವರು ಬೆದರಿಕೆ ಹಾಕಿದ್ದರು ಎಂಬುದಾಗಿ ಹೇಳಿದ್ದರು. ಆದರೆ ಈಗ ಪ್ರಕರಣದ ಕುರಿತಾಗಿ ಸ್ಫೋಟಕ ಮಾಹಿತಿಯೊಂದು ಬಯಲಾಗಿವೆ.

ಒಂದು ವೇಳೆ ತಾನು ಕೊಲ್ಲಲ್ಪಟ್ಟರೆ ಅಥವಾ ಏನಾದರೂ ಸಂಭವಿಸಿದರೆ, ಕೆ ಜೆ ಜಾರ್ಜ್, ಎಎಂ ಪ್ರಸಾದ್ (ಎಡಿಜಿ, ಇಂಟೆಲಿಜೆನ್ಸ್ ವಿಂಗ್) ಮತ್ತು ಪ್ರಸಾದ್ ಮೊಹಂತಿ ಅವರು ನೇರವಾಗಿ ಜವಾಬ್ದಾರರಾಗುತ್ತಾರೆ ಎಂದೂ ಅವರು ಉಲ್ಲೇಖಿಸಿದ್ದರು.

ಆದರೆ ಯಾವ ಪರಿಯಾಗಿ ಸರಕಾರ ಈ ವಿಚಾರದಲ್ಲಿ ಅಸಡ್ಡೆ ತೋರಿತ್ತೆಂಬುದನ್ನು ಗಮನಿಸಿ. ಕರ್ನಾಟಕ ಸರಕಾರ ಈ ವಿಷಯವನ್ನು ಮುಚ್ಚಿಡವ‌ ಚಿಂತನೆಯನ್ನು ಮಾಡಿಯೇ ಸಂಪೂರ್ಣ ತನಿಖೆ ನಡೆಸಿದೆ. ಪೋಲಿಸ್ ಅಧಿಕಾರಿ ಮಾನಸಿಕ ಅಸ್ಥಿರ ಎಂದೂ, ಕುಟುಂಬದ ಸಮಸ್ಯೆಗಳು ಆತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿತೆಂಬುದಾಗಿ ತನಿಖೆಯ ಪ್ರಾರಂಭ ಹಂತದಲ್ಲೇ ಘೋಷಿಸಿತ್ತು.

ಆದರೆ ಈಗ ಎಸ್ಪಿ ಗಣಪತಿಯ ಫೋರೆನ್ಸಿಕ್ ವರದಿಗಳು ಬಯಲಾಗಿವೆ. ಅದು ಆತ್ಮಹತ್ಯೆಯಾಗಿಲ್ಲ ಆದರೆ ತಣ್ಣನೆಯ ರಕ್ತಪಾತದ ಕೊಲೆ ಎಂದು ಸ್ಪಷ್ಟ ಸಾಕ್ಷಿ ಅದರಲ್ಲಿ ಉಲ್ಲೇಖವಾಗಿವೆ. ಎಸ್ಪಿ ಗಣಪತಿಯ ದೇಹದಲ್ಲಿ ಬುಲೆಟ್ ಗಾಯಗಳನ್ನು ಗಮನಿಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.ತನಿಖೆಯ‌ ಸಂದರ್ಭದಲ್ಲಿ ಸಾಕ್ಷಿ ಹೇಳಿದವರನ್ನು ಸಿಐಡಿ ಅವರು ಖಾಲಿ ಪತ್ರಿಕೆಗಳಲ್ಲಿ ಸಹಿ ಮಾಡಿಸಿದರು ಮತ್ತು ಅಪರಾಧದ ದೃಶ್ಯದಲ್ಲಿ ನಿರ್ಣಾಯಕ ಪುರಾವೆಗಳನ್ನು ಕಡೆಗಣಿಸಿದ್ದಾರೆ ಎಂದು ಅವರು ದೂರಿದ್ದಾರೆ. ಒಟ್ಟಾರೆಯಾಗಿ ತನಿಖೆಯ ಹಾದಿ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ ಅನ್ನುವುದು ಸ್ಪಷ್ಚವಾಗಿದೆ.

ಅಗತ್ಯ ಸಾಕ್ಷಾಧಾರವನ್ನು ‌ನಾಶ ಮಾಡಲೆತ್ನಿಸಲಾಗಿದೆಯಾ??

ಈ ಅನುಮಾನ ತನಿಖೆ‌ ಪ್ರಾರಂಭವಾದಾಗಲೇ ಉದ್ಭವವಾಗಿತ್ತು. ಸರಕಾರದ ಭ್ರಷ್ಟರನ್ನು ಉಳಿಸಲೋಸುಗ ಪ್ರಾಮಾಣಿಕ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದನ್ನು ನಾವು ಕಾಣಬಹುದು. ಆಶ್ಚರ್ಯಕರವಾದ ಸಂಗತೆಯೆಂದರೆ, ಎಲ್ಲಾ ಇಮೇಲ್ಗಳು, ಎಸ್ಪಿ ಗಣಪತಿಯ ಲ್ಯಾಪ್ಟಾಪ್ನಲ್ಲಿನಲ್ಲಿದ್ದ ಮಾಹಿತಿ, ಮೊಬೈಲ್ ಫೋನ್ಗಳಿಂದ ‌ಲಭಿಸಿದ ಮಾಹಿತಿಗಳನ್ನು ತನಿಖಾ ಸಂಸ್ಥೆಯು ಅಳಿಸಿದೆ. ಕರ್ನಾಟಕದ ಪ್ರಬಲ ಮಂತ್ರಿಗಳ ಹೆಸರುಗಳನ್ನು ಅಳಿಸಲಾಗಿದೆ.

ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿದೆ.
100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ,8ಜಿಬಿ ಪೆಣ್ ಡ್ರೈವ್ ನಲ್ಲಿದ್ದ‌ ಅಷ್ಟೂ ಮಾಹಿತಿಯನ್ನು ಅಳಿಸಲಾಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿದೆ.

ಎಸ್ಪಿ ಗಣಪತಿ ಅವರು ಕೊಲ್ಲಲ್ಪಟ್ಟಾಗ ಕರ್ನಾಟಕದಲ್ಲಿ ಕಾಂಗ್ರೆಸ್ನ ಕೆಲವು ಪ್ರಬಲ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಕುರಿತಾಗಿ ತನಿಖೆ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿದೆ. ಅವರು ಅನೇಕ ಬಾರಿ ನೇರವಾಗಿ ಕೆ ಜೆ ಜಾರ್ಜ್ನನ್ನು ಹಣದ ಲಾಂಡರಿಂಗ್ ಕೃತ್ಯಗಳಲ್ಲಿ , ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಆರೋಪಿಸಿದ್ದಾರೆ. ಆದರೆ ಇವುಗಳು ಯಾವುದೂ ಮಾಧ್ಯಮದಿಂದ ಹೈಲೈಟ್ ಮಾಡಲ್ಪಟ್ಟಿಲ್ಲ ಮತ್ತು ಇಡೀ ವ್ಯವಸ್ಥೆಯೇ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿರುವುದು ಪ್ರಸ್ತುತ ಸರಕಾರದ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ. ಸರಕಾರಕ್ಕೆ ಅಂತಹ ಸಾವುಗಳು ಏನೂ ಅಲ್ಲವೇ??

ಕರ್ನಾಟಕದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಗುರಿಯಾಗಿಸಿರುವುದು ಇದು ಮೊದಲ ಬಾರಿಗೆ ಅಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ, 10 ಕ್ಕಿಂತಲೂ ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ, ಅನೇಕರು ಸಾವನ್ನಪ್ಪಿದ್ದಾರೆ. ಆದರೆ ಪ್ರಕರಣವನ್ನು ಪರಿಹರಿಸಲಾಗಿಲ್ಲ‌, ಅದರ ಬದಲಾಗಿ ದಮನ ಮಾಡಿದೆ.

ಯಾವುದೇ ಒಂದು ಪ್ರಶ್ನೆಗೆ ಉತ್ತರಿಸುವುದಕ್ಕೆ ನಾವು ಅರ್ಹರಲ್ಲವೆಂದೇ ಕಾಂಗ್ರೆಸ್ ಸರ್ಕಾರ ಇನ್ನೂ ಭಾವಿಸುತ್ತಿರುವುದು ವಿಪರ್ಯಾಸವೇ ಸರಿ. ಅವರು ತಮ್ಮಿಷ್ಟದಂತೆ ನಡೆದುಕೊಳ್ಳುವುದಂತೂ ‌ಮುಂದುವರೆಸಿದ್ದಾರೆ. ಹೆಚ್ಚು ಪ್ರಾಮಾಣಿಕ ಅಧಿಕಾರಿಗಳು ಸಾವನ್ನಪ್ಪಬೇಕಾದರೆ ಅಥವಾ ದಾರಿ ತಪ್ಪಿಸಬೇಕಾದರೆ ಅಂತಹ ಜನರು ಅಧಿಕಾರದಲ್ಲಿ ಉಳಿಯಬೇಕು .. ಅಲ್ಲವೇ ?? ಈ ಪ್ರಶ್ನೆಗೆ ಉತ್ತರ ಹಾಗೂ ತೀರ್ಮಾನವನ್ನು ನಿರ್ಣಯ ಮಾಡಬೇಕಾದವರು ಪ್ರಜೆಗಳು.

– ವಸಿಷ್ಠ

Tags

Related Articles

Close