ಅಂಕಣಇತಿಹಾಸ

ತನ್ನ ಮಕ್ಕಳ ಗುಪ್ತಾಂಗಗಳನ್ನು ಕತ್ತರಿಸಿದರೂ ಸಹ ಆಕೆ ಮತಾಂತರವಾಗಲು ಒಪ್ಪಲೇ ಇಲ್ಲ!!!

ಧಾರ್ಮಿಕ ಪರಿವರ್ತನೆ ಎಂಬುವುದು ಹೊಸ ಪರಿಕಲ್ಪನೆ ಅಲ್ಲ. ಇದು ಶತಮಾನಗಳ ಹಿಂದೆಯೇ ರೂಢಿಯಲ್ಲಿದ್ದ ತಂತ್ರ! ಹೌದು ದುರಾದೃಷ್ಟವಶಾತ್ ವಿಷಯವೆಂದರೆ ಬಲವಂತದ ಮತ ಪರಿವರ್ತನೆಯು ಇಂದು ಕೂಡ ಅಸ್ತಿತ್ವದಲ್ಲಿರುವುದು. 1752 ರಲ್ಲಿ ಲಾಹೋರ್ ನ ಗವರ್ನರ್(ರಾಜ್ಯಪಾಲ) ನಾದ ಮ್ಯುನಲ್ ಮುಲ್ಕ್ ಕೆಲವು ಸಿಖ್ಖರಿಗೆ ಮರಣದಂಡನೆಯನ್ನು ಆದೇಶಿಸಿದನು. ಜೊತೆಗೆ ಸಿಖ್ಖ್ ಪುರುಷರ ಶಿರಚ್ಛೇದನವನ್ನು ಸಾರ್ವಜನಿಕವಾಗಿ ಮಾಡಲಾಯಿತು. ಇದಕ್ಕೆ ಪ್ರಮುಖ ಕಾರಣ ಸಿಖ್ಖರ ಯುವ ಅವಿವಾಹಿತ ಹೆಣ್ಣು ಮಕ್ಕಳನ್ನು ಮುಸ್ಲಿಂ ಮತಕ್ಕೆ ಮತಾಂತರ ಮಾಡುವ ಸಂಚು ಇದಾಗಿತ್ತು. ಇಸ್ಲಾಂ ಧರ್ಮೀಯರು ಮಹಿಳೆ ಮತ್ತು ಮಕ್ಕಳನ್ನು ಇಲ್ಲಿ ಕಠಿಣವಾಗಿ ನಡೆಸಿಕೊಲ್ಲಾಗುತ್ತಿತ್ತು. ಇವರನ್ನು ಲಾಹೋರ್ ನ ಜೈಲಿನಲ್ಲಿ ಅನ್ನ ನೀರು ನೀಡದೆ ಬಂಧಿಸಿ, ಇಲ್ಲಿ ಮಹಿಳೆಯರನ್ನು ಭಾರವಾದ ಬೀಸುವಕಲ್ಲಿನಿಂದ ಕೆಲಸ ಮಾಡಿಸಲಾಗುತ್ತಿತ್ತು. ಇದರ ಹೊರತಾಗಿಯೂ ಇವರನ್ನು 4 ದಿವಸಗಳ ಕಾಲ ಉಪವಾಸ ಗೆಡವಲಾಯಿತು. ಮುಸಲ್ಮಾನರು ಈ ಮಹಿಳೆಯರಿಗೆ ಆಯ್ಕೆಯನ್ನು ನೀಡುವ ಮೂಲಕ ನರಿ ಬುದ್ಧಿಯನ್ನು ತೋರಿಸುತ್ತಾರೆ ,ಆ ಮುಗ್ದ ಮಹಿಳೆಯರು ಮತಾಂಧರಾಗದ ಪಕ್ಷದಲ್ಲಿ ಕ್ರೂರ ಜಿಹಾದಿ ಹಿಂಸೆಯು ಅವರಿಗೆ ಕಟ್ಟಿಟ್ಟ ಬುತ್ತಿಯಾಗಿತ್ತು.

300 ಅಮಾಯಕ ಮಕ್ಕಳು ಅವರ ತಾಯಂದಿರ ಮುಂದೆ ಕ್ರೂರವಾಗಿ ಇಲ್ಲಿ ಕೊಲ್ಲಲ್ಪಟ್ಟರು. ಆದರೂ ಕೂಡ ಇಂತಹ ನಿಷ್ಟುರ ಬದುಕನ್ನು ಪರಿಹರಿಸಲು ಸಿಖ್ಖ್
ಮಹಿಳೆಯರಿಗೆ ಸಾಧ್ಯವಾಗಲಿಲ್ಲ. ಎಳೆಯ ಶಿಶುವಿನ ಆಂತರಿಕ ಅಂಗಗಳನ್ನು ಹೊರ ತೆಗೆದು ಅವರ ತಾಯಂದಿರ ಹತ್ತಿರ ತಂದು ಹಿಂಸೆ ನೀಡಲಾಗುತ್ತಿತ್ತು. ಇದರ
ಮುಖ್ಯ ಉದ್ದೇಶ ಸಿಖ್ಖ್ ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವುದಾಗಿತ್ತು. ಆದರೆ ಈ ಕೃತ್ಯಕ್ಕೆ ಸಿಖ್ಖ್ ಮಹಿಳೆಯರು ಅಡ್ಡಿ ವ್ಯಕ್ತಪಡಿಸಿದರು. ಇವರು ತಮ್ಮ ಧಾರ್ಮಿಕ ನಂಬಿಕೆಯನ್ನು ಕೊಲ್ಲಲು ತಯಾರಿರಲಿಲ್ಲ. ಇದರ ಬದಲಾಗಿ ಸಿಖ್ಖ್ ಅಮಾಯಕ ಮಹಿಳೆಯರು ಹತ್ಯೆಗೀಡಾದರು. ಆದರೆ ಇಲ್ಲಿ ಕೆಲವೊಮ್ಮೆ ಸಿಖ್ಖ್ ಅಕಾಲಿಸ್ ( ಕುದುರೆ ಸವಾರರು) ಇವರ ಕೆಲವು ಸಹೋದರಿಯರನ್ನು ರಕ್ಷಿಸುತ್ತಿದ್ದರು. ಅದರೂ ಕೆಲವು ಮಹಿಳೆಯರನ್ನು ರಕ್ಷಿಸಲು ಸಾಧ್ಯವಾಗದೆ ನಿಷ್ಟುರವಾಗಿ ಬಲಿಯಾದರು.

ಈ ಅಮಾನವೀಯ ಗವರ್ನರ್ ಆದ ಮ್ಯುನುಲ್ ಮುಲ್ಕ್ 1753 ರಲ್ಲಿ ಮರಣ ಹೊಂದುತ್ತಾನೆ. ಆದರೂ ಈ ಎಲ್ಲಾ ಸಿಖ್ಖ್ ಮಹಿಳೆಯರನ್ನು ರಕ್ಷಿಸಲು ಸಾಧ್ಯವಾಗಳಿಲ್ಲ. ಕೆಲ ಮುಗ್ದ ಜನರು ಇಂತಹ ಬದುಕನ್ನು ಬದುಕಲೂ ಇಷ್ಟಪಡಲಿಲ್ಲ . ಈ ಕೃತ್ಯ ನಡೆದು 2.5 ದಶಕಗಳು ಕಳೆದರೂ ಕೂಡ ಈ ವಿಷಯದಲ್ಲಿ ಏನೂ
ಬದಲಾವಣೆಯಾಗಲಿಲ್ಲ.

ಯಾಜಿದ್‍ನ ಮಹಿಳೆಯರು ಇದೇ ಸಮಸ್ಯೆಯನ್ನು ಇಂದು ಎದುರಿಸುತ್ತಿದ್ದಾರೆ. ಕೆಲವರನ್ನು ಅತ್ಯಾಚಾರ, ವಧೆಗಳು ಹಾಗು ಹಿಂಸೆಗೆ ಒಳಗಾಗುವಂತೆ ಮಾಡಿದೆ.

ಕಾಲ ನಂತರದಲ್ಲಿ ಸಿಖ್ಖರು ಈ ಇಸ್ಲಾಂ ಮತಾಂಧತೆಯನ್ನು ಕಾಫಿರ್ಸ್ ಎಂದು ಕರೆಯಲಾರಂಭಿಸಿದರು. ಸಿಖ್ಖ್ ಮಹಿಳೆಯರು ಅವರ ಮಕ್ಕಳ ಮತ್ತು ಗಂಡಂದಿರ ಸಾಮೂಹಿಕ ಮಾರಣಹೋಮಕ್ಕೆ ಸಾಕ್ಷಿಯಾದರು. ಅದಕ್ಕಿಂತ ಭಯಂಕರ ಕೃತ್ಯ ಬೇರೊಂದು ಇರಲಿಲ್ಲ. ಇಂತಹ ಅನಿಷ್ಠ ಪದ್ದತಿಯಿಂದ ಸಿಖ್ಖ್ ಧರ್ಮೀಯರು ಧೈರ್ಯಗೆಡಲಿಲ್ಲ. ಆದ್ದರಿಂದ ಪ್ರಸ್ತುತವಾಗಿಯು ಸಿಖ್ಖ್ ಧರ್ಮೀಯರು ಯು.ಎಸ್ ಅಂತಹ ದೇಶಗಳನ್ನು ಇಂದಿಗೂ “ವಿರೋಧಿ” ಎಂಬ ಭಾವನೆಯನ್ನು ಇಟ್ಟು ಕೊಂಡಿದ್ದಾರೆ.

ಲಾಹೋರ್‍ನಲ್ಲಿ ಇಂದಿಗೂ ಇಂತಹ ದೌರ್ಜನ್ಯ ಗಳಿಂದ ತಮ್ಮ ಅಣ್ಣ-ತಂಗಿ ಯರನ್ನು ರಕ್ಷಿಸಿ ಎಂಬ ಪದಗಳೇ ಕೇಳಿ ಬರುತ್ತದೆ.

ನಾವು ಸಿಖ್ಖ್ ಮಹಿಳೆಯರ ಕೆಚ್ಚೆದೆಯನ್ನು ಮೆಚ್ಚಲೇ ಬೇಕು. ಇದು ಕೇವಲ ಮತಾಂಧರ ತತ್ವ ಮಾತ್ರವಾಗಿಲ್ಲ. ಇದು ಸಿಖ್ಖ್ ಮಹಿಳೆಯರ ತ್ಯಾಗ ಬಲಿದಾನದ
ವಿಷಯವಾಗಿದೆ, ಈ ಕೃತ್ಯವು ಆ ಮುಗ್ದ ಮಹಿಳೆಯರ ಮಕ್ಕಳು ಹಾಗೂ ಇಡೀ ಕುಟುಂಬವನ್ನೇ ಅವರಿಂದ ಕಿತ್ತುಕೊಂಡಿತು! ಇವರು ಈ ದುಷ್ಟರ ನೀಚ ಕೃತ್ಯಗಳಿಗೆ
ವಿರೋಧ ವ್ಯಕ್ತ ಪಡಿಸಿದರೆ ವಿನಃ, ಇಸ್ಲಾಂ ಧರ್ಮಕ್ಕೆ ವಿರೋಧ ವ್ಯಕ್ತ ಪಡಿಸಿಲ್ಲ. ಅವರು ಬಲವಂತದ ಮತಾಂಧತೆಯ ಕಲ್ಪನೆಯನ್ನು ಒಪ್ಪಲು ತಯಾರಿರಲಿಲ್ಲ.

ಈ ಕೆಚ್ಚೆದೆಯ ಮಹಿಳೆಯರು ಇಸ್ಲಾಂ ಧರ್ಮೀಯರ ದುಷ್ಟ ಯೋಚನೆಗೆ ನಿಷ್ಟುರವಾಗಿ ಬಲಿಯಾದರು.

ಕಾಫಿರ್ ದೇವರಲ್ಲಿ ನಂಬಿಕೆ ಇಲ್ಲದವರು ಎಂಬ ಅರ್ಥವನ್ನು ನೀಡುವುದು ಆದರೆ ಕಾಫಿರ್ ನಂತವರು ಇತರ ಧರ್ಮದಲ್ಲೂ ಇದ್ದಾರೆ. ಪಾಕಿಸ್ತಾದ ಮುಸ್ಲಿಮರು ಭಾರತದ ಮುಸಲ್ಮಾನರನ್ನು ಕೂಡ ಕಾಫಿರ್ ಎಂಬ ದೃಷ್ಟಿಯಿಂದಲೇ ನೋಡುತ್ತಾರೆ. ಕೆಲ ಜನರು ಅವರ ಸಿನಿಮಾಗಳು ಕೂಡ ತೆರೆ ಮೇಲೆ ಬರುವುದನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಾರೆ.

ಒಂದು ಕಾಲದಲ್ಲಿ ಮುಸ್ಲಿಂ ಪೂರ್ವಜರೆಲ್ಲರು ಹಿಂದೂಗಳಾಗಿದ್ದರು, ಆದರೆ ಮುಂದಿನ ಪೀಳಿಗೆಯಲ್ಲಿ ಇಡೀ ವಿಶ್ವವೇ ಇಸ್ಲಾಂ ಅಸ್ತಿತ್ವದಲ್ಲಿ ತುಂಬಿತುಳುಕುವುದು
ನಿಸ್ಸಂಶಯ. ಪ್ರಮುಖ ವಿಷಯವೆಂದರೆ ಪ್ರಾಚೀನ ಕಾಲದಲ್ಲಿ ಇಸ್ಲಾಂ ಧರ್ಮೀಯರು ಹಿಂದು ಹಬ್ಬಗಳಾದ ದೀಪಾವಳಿ & ಹೋಳಿಯನ್ನು ಆಚರಿಸುತ್ತಿದ್ದರು ಎಂಬುವುದನ್ನು ಈಗ ಮರೆತಿದ್ದಾರೆ.

ಸಿಖ್ಖ್ ಧರ್ಮದ ಮಹಿಳೆಯರು ಇವರ ವಿರುದ್ಧ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇವರ ಬೇಟೆಯ ಮೆಚ್ಚುಗೆಯ ದಾರಿಯನ್ನು ಎಲ್ಲರೂ ಮೆಚ್ಚಲೇ
ಬೇಕು!

ಇದನ್ನು ಅವರ ಧರ್ಮೀಯರು ಕೂಡ ಅನುಸರಿಸುತ್ತಿದ್ದಾರೆ. ಇವರು ಕಷ್ಟಕರ ದಾರಿಯನ್ನು ಆಯ್ಕೆಮಾಡಿದ್ದರೂ ಕೂಡ ಪ್ರಸ್ತುತವಾಗಿ ಎಲ್ಲರೂ ಅವರ ಸಿದ್ಧಾಂತವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. 1800 ರಲ್ಲಿ ಪಂಜಾಬ್ ಸಿಖ್ಖ್ ಚಕ್ರವರ್ತಿಗಳು ಆಳುತ್ತಿದ್ದರು ಹಾಗೂ ಇಸ್ಲಾಂ ದರ್ಪದ ವಿರುದ್ಧ ಸಿಡಿದೆದ್ದರು. ಆ ಮೂಲಕ ಅವರು ಅನೇಕ ಇಸ್ಲಾಂ ಮಸೀದಿಗಳನ್ನು ಧ್ವಂಸ ಮಾಡಿದರು. ಇದಕ್ಕೆ ಪ್ರಮುಖ ಕಾರಣ ಪಂಜಾಬ್‍ನಲ್ಲಿ ಅನೇಕ ಮುಸ್ಲಿಂ ಧರ್ಮೀಯರು ವಾಸವಾಗಿದ್ದರು. ಅವರ ಜಿಹಾದಿ ಪ್ರವೃತ್ತಿಗಳನ್ನು ಅಲ್ಲಿ ಸಿಖ್ಖರು ಹುಟ್ಟಡಗಿಸಿದರು.

2011 ರ ಹೊತ್ತಿಗೆ ಪಂಜಾಬ್ ನಲ್ಲಿ 2.08 ಕೋಟಿಯಷ್ಟು ಸಿಖ್ಖ್ ಜನರು ನೆಲೆಸಿದ್ದರು.

ಸಿಖ್ಖ್ ಧರ್ಮೀಯರು ಇಡೀ ಭಾರತದಲ್ಲೆ 4 ನೇ ಬೃಹತ್ ಧರ್ಮವಾಗಿ ನೆಲೆನಿಂತಿದ್ದಾರೆ. ಪಂಜಾಬ್ ನಲ್ಲಿ 58% ರಷ್ಟು ಸಿಖ್ಖ್ ಸಮುದಾಯ ವಾಸವಿದ್ದು, 77% ಜನ ಸಿಖ್ಖ್ ರು ಭಾರತದಲ್ಲಿ ಪ್ರಸ್ತುತವಾಗಿ ನೆಲೆಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ಅಂತರ್ ಜಾಲವನ್ನು ಇವರು ಇಂದು ಬಳಸುತ್ತಿದ್ದಾರೆ. ಅದೃಷ್ಟವಶಾತ್ ಜನರು ಕೊನೆಗೂ ಇಸ್ಲಾಂ ಬೆದರಿಕೆ ಹಾಗೂ ಅವರ ನೀಚ ಜಿಹಾದ್ ಸಿದ್ಧಾಂತದ ಬಗ್ಗೆ ಮಾತನಾಡಲು ಅದರ ವಿರುದ್ಧ ಸಿಡಿದೇಳಲು ಅಂತರ್ಜಾಲವು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

ಏನೇ ಆದರೂ ನಮ್ಮ ಧರ್ಮವನ್ನು ತೊರೆಯದೆ, ಅನ್ಯ ಧರ್ಮದ ಬೆದರಿಕೆಗೆ ತಲೆಬಾಗದೆ, ಅದೇನೆ ಕಷ್ಟ ಎದುರಾದರೂ ತಮ್ಮ ಧರ್ಮದ ಮೇಲಿರುವ ಪ್ರೀತಿ
ಗೌರವವನ್ನು ಸಿಖ್ಖ್ ಕೆಚ್ಚೆದೆಯ ಮಹಿಳೆಯರು ಸಾಬೀತು ಪಡಿಸಿದ್ದಾರೆ. ನಿಮ್ಮ ಈ ತ್ಯಾಗ ಬಲಿದಾನಕ್ಕೆ ನಾ ಸದಾ ಚಿರಋಣಿ… ಈ ನೀತಿಯನ್ನು ನಾವೆಲ್ಲರೂ ಪಾಲಿಸಿದರೆ ಭಾರತದಲ್ಲಿ ಮತಾಂತರ ಎಂಬ ಪದಕ್ಕೆ ಅರ್ಥವಿಲ್ಲದಂತಾಗುವುದು ನಿಸ್ಸಂಶಯ.

-ಕಾವ್ಯ ಅಂಚನ್

Tags

Related Articles

Close