ಪ್ರಚಲಿತ

ದೇವಸ್ಥಾನಕ್ಕೆ ತೆರಳಿ ನಮಾಜ್ ಮಾಡುವವರು ದೇವಸ್ಥಾನಕ್ಕೆ ಯಾಕೆ ಹೋಗಬೇಕು?-ಯೋಗಿ

ರಾಹುಲ್ ಗಾಂಧಿ. (ಕ್ಷಮಿಸಿ, ಗುಜರಾತ್ ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪಪ್ಪು ಎಂದು ಕರೆಯುವ ಹಾಗಿಲ್ಲ). ದೇಶ ಕಂಡ ಮಹಾ ಜೋಕರ್. ಅದೆಲ್ಲೇ ಹೋದರೂ ತನ್ನ ನಡವಳಿಕೆಯಿಂದ ತೀವ್ರ ಟೀಕೆಗೆ ಗುರಿಯಾಗುತ್ತಿರುವ ರಾಹುಲ್ ಗಾಂಧಿ ಈಗ ಮತ್ತೊಮ್ಮೆ ತನ್ನ ನಡವಳಿಕೆಯಿಂದ ಟೀಕೆಗೊಳಗಾಗಿದ್ದಾರೆ.

ಇತ್ತೀಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ವಾರಾಣಾಸಿಯ ಪ್ರಸಿದ್ಧ ದೇವಸ್ಥಾನವಾದ ಕಾಶೀ ವಿಶ್ವನಾಥ ದೇವಸ್ಥಾನಕ್ಕೆ ತೆರಳಿದ್ದರು. ಆವೇಳೆ ಅಲ್ಲಿ ರಾಹುಲ್ ಗಾಂಧಿ ಹಿಂದೂ ಶೈಲಿಯಲ್ಲಿ ನಮಸ್ಕಾರ ಮಾಡುವುದನ್ನು ಬಿಟ್ಟು ಮುಸಲ್ಮಾನ ಶೈಲಿಯಲ್ಲಿ ನಮಾಜ್ ಮಾಡುವ ಹಾಗೆ ನಮಸ್ಕಾರ ಮಾಡಿದ್ದಾರೆ. ಕೇವಲ ನಮಸ್ಕಾರ ಮಾತ್ರವಲ್ಲದೆ ಸಾಮಾನ್ಯವಾಗಿ ಕುಳಿತುಕೊಳ್ಳುವಾಗಲೂ ಈ ರೀತಿಯೇ ಕುಳಿತುಕೊಂಡಿದ್ದರು. ಇದನ್ನು ಕಂಡ ದೇವಸ್ಥಾನದ ಅರ್ಚಕರು, “ಇದು ಮಸೀದಿ ಅಲ್ಲಪ್ಪಾ, ದೇವಸ್ಥಾನ. ಮೊದಲು ಎಲ್ಲಿ, ಹೇಗೆ ಕುಳಿತುಕೊಳ್ಳಬೇಕೆಂದು ತಿಳಿದುಕೊಳ್ಳಬೇಕು” ಎಂದು ರಾಹುಲನನ್ನು ಝಾಡಿಸಿದ್ದರು.

ವಿವಾದ ಎನ್ನುವುದು ರಾಹುಲ್ ಗಾಂಧಿಯನ್ನು ಬೆನ್ನು ಬಿಡದ ಬೇತಾಳನಂತೆ ಹಿಂಬಾಲಿಸಿಕೊಂಡೇ ಬರುತ್ತಿದೆ. ಇಡಿ ದೇಶವೇ ಇಂದು ಕಾಂಗ್ರೆಸ್ ದುರಾಡಳಿತವನ್ನು ಕಂಡು ಬೆಚ್ಚಿ ಬಿದ್ದಿದೆ. ಕಾಂಗ್ರೆಸ್‍ನ್ನು ಕಿತ್ತೊಗೆಯುವ ಸಂಕಲ್ಪವನ್ನು ಮಾಡಿದ್ದ ಜನತೆ, 2014ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ಗೆ ಕೇವಲ ಅರ್ಧಶತಕಕ್ಕೂ ಸೀಟುಗಳು ಸಿಗಲಿಲ್ಲ. 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್, 2014ರ ಚುನಾವಣೆಯಲ್ಲಿ ಹೇಳ ಹೆಸರಿಲ್ಲದೆ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು. ಈ ಸೋಲಿಗೆ ಕಾರಣ ಏನೆಂದು ಕೆದಕುತ್ತಾ ಹೋದರೆ, ಹಗರಣಗಳ ಮೇಲೆ ಹಗರಣಗಳು, ಹಿಂದೂ ವಿರೋಧಿ ನೀತಿಗಳು ಹಾಗೂ ಆರ್ಥಿಕತೆಯಲ್ಲಿ ಭಾರತ ಕುಗ್ಗಿರುವ ರೀತಿ ಎಂಬ ಅಂಶ ಬೆಳಕಿಗೆ ಬರುತ್ತದೆ. ಇದು ಸತ್ಯ ಕೂಡಾ ಹೌದು. ಆದರೆ ರಾಹುಲ್ ಗಾಂಧಿಯನ್ನು ಆ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿ, ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿದ್ದೇ ಹೀನಾಯ ಸೋಲಿಗೆ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿತ್ತು.

ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ, ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿತ್ತು. ಆವಾಗಲೇ ದೇಶದಲ್ಲಿ ಮೋದಿ ಅಲೆ ಎದ್ದೇ ಬಿಟ್ಟಿತ್ತು. ಮೋದಿ ಎಲ್ಲೇ ಹೋದರು ಲಕ್ಷ ಲಕ್ಷ ಜನ ಸೇರುತ್ತಿದ್ದರು. ಯುಪಿಎ ಸರ್ಕಾರದ ಹಗರಣಗಳಿಗೆ ಬೇಸತ್ತ ಜನರು ಮೋದಿ ಅಲೆಯಲ್ಲಿ ತೇಲುತ್ತಿದ್ದರು. ಅದೇ ಮೋದಿ ಅಲೆಗೆ ಕಾಂಗ್ರೆಸ್ ಎನ್ನುವ ರಾಷ್ಟ್ರೀಯ ಪಕ್ಷ ಕೊಚ್ಚಿ ಹೋಗಿತ್ತು.

ಕಾಂಗ್ರೆಸ್‍ನಲ್ಲಿ ಹಿರಿಯ ತಲೆಗಳಿಗೆ ಬೆಲೆನೇ ಇರಲಿಲ್ಲ. ಪ್ರಧಾನಿ ಅಭ್ಯರ್ಥಿಯಾಗಲು ಎಲ್ಲಾ ಅರ್ಹತೆಯನ್ನು ಹೊಂದಿದ್ದ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಹುದ್ದೆಗೇರಿಸಿ ರಾಹುಲ್ ಗಾಂಧಿಯ ಹಾದಿಗೆ ಹೂವಿನ ಹಾಸಿಗೆಯನ್ನು ಹಾಸಿದ್ದರು. ಪ್ರಣಬ್ ಮುಖರ್ಜಿ ಪ್ರಧಾನಿ ಅಭ್ಯರ್ಥಿ ಆಗಿದ್ದಿದ್ದರೆ ಸ್ವಲ್ಪಾನಾದರೂ ಸ್ಥಾನವನ್ನು ಗೆಲ್ಲುತ್ತಿದ್ದ ಕಾಂಗ್ರೆಸ್, ರಾಹುಲ್ ಗಾಂಧಿ ಎಂಬ ಜೋಕರ್‍ನನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿ ತನ್ನ ಕೊರಳಿಗೆ ತಾನೇ ಹಗ್ಗವನ್ನು ಹಾಕಿಕೊಂಡಿತ್ತು.

ಲೋಕಸಭೆಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ನೇತೃತ್ವದಿಂದ ಪಕ್ಷ ಹೀನಾಯ ಸೋಲನುಭವಿಸಿದರೂ ಮತ್ತೆ ತಾನು ಪ್ರಧಾನಿ ಆಗಬೇಕೆಂಬ ಆಸೆಯಿಂದ ದೇಶಾದ್ಯಂತ ತೆರಳಿ ಪಕ್ಷ ಸಂಘಟಿಸುವತ್ತ ಕೆಲಸ ಮಾಡುತ್ತಿದ್ದಾರೆ. ಅದರೆ ಎಲ್ಲಿಗೆ ಹೋದರೂ ಒಂದೊಂದು ವಿವಾದವನ್ನು ಮೈಮೇಲೆ ಎಳೆದುತಂದು ಸಮಾಜದ ಮುಂದೆ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಇಂದು ದೇಶದ ಅತಿ ದೊಡ್ಡ ಜೋಕ್ ಎಂದರೆ ರಾಹುಲ್ ಎನ್ನುವಷ್ಟರ ಮಟ್ಟಿಗೆ ಆಗಿ ಹೋಗಿದೆ. ಅವರು ಎಲ್ಲಿ ಮಾತನಾಡಿದರೂ ಅದರಲ್ಲಿ ನ್ಯೂನತೆಗಳು ಕಂಡು ಬಂದೇ ಬರುತ್ತದೆ. ಅದೆಷ್ಟರ ಮಟ್ಟಿಗೆ ಅಂದರೆ ತಾನೂ ರಾತ್ರಿಯಿಡೀ ಅಭ್ಯಾಸ ಮಾಡಿದ ಭಾಷಣ ಕೂಡಾ ಮರುದಿನ ಮಾತನಾಡುವಾಗ ಅದು ಬೇರೆನೇ ಆಗಿ ಹೋಗುತ್ತದೆ. ರಾಹುಲ್ ಬಾಯಲ್ಲಿ ಅದೇನೇನೋ ಬಂದು ಬಿಡುತ್ತದೆ.

ದೇಶದ ಪ್ರಮುಖ ಟ್ರೋಲ್‍ಗಳಲ್ಲಿ ಇಂದು ರಾಹುಲ್ ಗಾಂಧಿಯ ಕಾಮಿಡಿಯೇ ಹೆಚ್ಚಾಗಿ ಹೋಗಿದೆ. ವಿವಿಧ ಭಂಗಿಗಳಲ್ಲಿ ರಾಹುಲನ ಜೋಕ್ಸ್‍ಗಳನ್ನು ಚಿತ್ರಿಸಲಾಗುತ್ತಿದೆ. ಇತ್ತೀಚೆಗೆ ಕೂಡಾ ಆಲೂಗಡ್ಡೆಯಿಂದ ಚಿನ್ನ ತೆಗೆದು ಕೊಡುತ್ತೇನೆ ಎಂದು ದೇಶವಾಸಿಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು.

ಕಾಂಗ್ರೆಸ್ ಪಕ್ಷ ಎಂದರೆ ಅದೊಂದು ನಾಸ್ತಿಕರನ್ನು, ದೇಶದ್ರೋಹಿಗಳನ್ನು, ಭ್ರಷ್ಟ ರಾಜಕಾರಣಿಗಳನ್ನು ಹೊಂದಿಕೊಂಡಿರುವ ಪಕ್ಷ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ತನ್ನ ರಾಜಕೀಯಕ್ಕಾಗಿ, ಹಣದ ಆಸೆಗಾಗಿ ಯಾವ ಮಟ್ಟಕ್ಕೂ ಇಳಿಯಲೂ ಈ ಪಕ್ಷ ಹಿಂದೆ ಮುಂದೆ ನೋಡೋದಿಲ್ಲ ಎಂಬುವುದೂ ಎಲ್ಲರಿಗೂ ಗೊತ್ತಾಗಿರುವ ಸಂಗತಿ.

ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ, ರಾಮ, ಕೃಷ್ಣ ಸಹಿತ ಎಲ್ಲಾ ಹಿಂದೂ ದೇವರುಗಳನ್ನು ಕಾಲ್ಪನಿಕ ಎಂದು ಟೀಕಿಸಿದ್ದರು. ದೇವರುಗಳು ಎಂಬುವುದು ಇಲ್ಲವೇ ಇಲ್ಲ. ಅದು ಹಿಂದೂಗಳ ಕಲ್ಪನೆ ಅಷ್ಟೆ, ಎಂದು ಈ ಹಿಂದೆ ಕಾಂಗ್ರೆಸ್ ಜರೆದಿತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇವಸ್ಥಾನಗಳಿಗೆ ತೆರಳಿ ನೈಜ ಹಿಂದೂಗಳೂ, ಸ್ವಾಮೀಜಿಗಳೂ ನಾಚುವಂತೆ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ ಈ ಕಾಂಗ್ರೆಸ್ ನಾಯಕರು.

ಆವರೆಗೆ ದೇವಸ್ಥಾನಗಳಿಗೆ ತೆರಳದೆ ಅಮೇರಿಕಾ, ಲಂಡನ್ ಎಂದು ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ ಚುನಾವಣೆ ಹತ್ತಿರ ಬಂದರೆ ಭಗವಂತನ ನೆನಪಾಗುತ್ತೆ. ಹಾಗಂದ ಮಾತ್ರಕ್ಕೆ ಅದು ದೈವಭಕ್ತಿ ಎಂದು ನಾವು ಎನಿಸಿದರೆ ಅದು ನಮ್ಮ ಮೂರ್ಖತನ. ಆಸ್ತಿಕರ ಓಟು ಗಳಿಸಲು, ದೈವಾರಾದಕರಾದ ಹಿಂದೂಗಳನ್ನು ಮೋಸಗೊಳಿಸಲು ಹೆಣೆಯುವ ತಂತ್ರವೇ ದೇವಾಲಯಗಳ ಭೇಟಿ ಎಂಬ ನಾಟಕ ಅಷ್ಟೆ.

ಗುಜರಾತ್‍ನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಅದ್ಯಾವ ತಂತ್ರವನ್ನು ಹೆಣೆದರೂ ಅಲ್ಲಿ ಗೆಲ್ಲುವುದು ಕಾಂಗ್ರೆಸ್‍ನಿಂದ ಅಸಾಧ್ಯ. ಹಾಗಾಗಿಯೇ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿರುವ ಮತದಾರರನ್ನು ಸೆಳೆಯುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ ಮತದಾರರಿಗೆ ಸನ್ಯಾಸಿಯೊಳಗಿನ ರಾವಣ ಗೊತ್ತಿರೋದಿಲ್ವೇ…!!!

ಹಾಗೆನೇ ಕಾಶೀ ವಿಶ್ವನಾಥನ ಸನ್ನಿಧಾನಕ್ಕೆ ತೆರಳಿ ಅಲ್ಲಿ ದೇವರಿಗೆ ನಮಸ್ಕಾರ ಮಾಡುವುದು ಹೇಗೆ ಎಂದು ತಿಳಿಯದೆ, ಮುಸಲ್ಮಾನರು ನಮಾಜ್ ಮಾಡುವ ರೀತಿ ಕುಳಿತಿದ್ದರು ರಾಹುಲ್ ಗಾಂಧಿ. ಇಷ್ಟರಲ್ಲೇ ಗೊತ್ತಾಗಲ್ವೇ ಇವರೆಷ್ಟು ದೇವರನ್ನ ಕಂಡಿದ್ದಾರೆಂದು. ಇದು ಅಲ್ಲಿನ ಅರ್ಚಕರಿಗೆ ಸಹಜವಾಗಿಯೇ ಕೋಪವನ್ನು ತರಿಸಿದೆ. ದೇಶದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಪ್ರಖ್ಯಾತಿಯನ್ನು ಹೊಂದಿರುವ ದೇವಸ್ಥಾನವದು. ಅಲ್ಲಿ ತನ್ನದೇ ಆದಂತಹ ಶಿಸ್ತು ಇದೆ. ಆದರೆ ದೇವಸ್ಥಾನಕ್ಕೆ ತೆರಳಿ ನಮಾಜ್ ಮಾಡುವ ರೀತಿ ಕುಳಿತುಕೊಂಡರೆ ಯಾರಿಗೆ ಸಿಟ್ಟು ಬರೋಲ್ಲ ಹೇಳಿ.

ಮುಸ್ಲಿಂರ ಓಟಿಗಾಗಿ ಮಸೀದಿಗೆ ತೆರಳಿ ಅಲ್ಲಿ ನಮಾಜ್ ಮಾಡಿ ಅಭ್ಯಾಸವಾಗಿರುವ ಈ ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ನಮಸ್ಕಾರ ಮಾಡುವುದು ಹೇಗೆ ಎಂಬುವುದೇ ಗೊತ್ತಿಲ್ಲ. ರಾಹುಲ್ ಈ ರೀತಿಯ ನಡವಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಟೀಕಿಸಿದ್ದಾರೆ. “ದೇವಾಲಯದಲ್ಲಿ ಹೇಗೆ ಕುಳಿತುಕೊಳ್ಳಬೇಕೆಂಬುವುದೇ ರಾಹುಲ್ ಗಾಂಧಿಗೆ ತಿಳಿದಿಲ್ಲ. ಇನ್ನು ದೇಶದ ಪ್ರಧಾನಿಯಾಗುತ್ತಾರೆಯೇ. ರಾಮ ಕೃಷ್ಣರೆಲ್ಲ ದೇವರಲ್ಲ ಎಂದು ಲೇವಡಿ ಮಾಡುತ್ತಿದ್ದ ಕಾಂಗ್ರೆಸ್ಸಿಗರು ಈಗ ದೇವಸ್ಥಾನಗಳನ್ನು ಸುತ್ತುತ್ತಿರುವುದೇಕೆ?” ಎಂದು ಟೀಕಿಸಿದ್ದಾರೆ.

ಈ ಹಿಂದೆ “ದೇಶದಲ್ಲಿ ಮಹಿಳೆಯರ ಮೇಲೆ ಭ್ರಷ್ಟಾಚಾರ ಆಗುತ್ತಿದೆ” ಎಂದು ಹೇಳುವ ಮೂಲಕ ತೀವ್ರ ಮುಜುಗರಕ್ಕೀಡಾಗಿದ್ದರು. ಮಾತ್ರವಲ್ಲದೆ “ಆರ್‍ಎಸ್‍ಎಸ್ ಶಾಖೆಗಳಲ್ಲಿ ಮಹಿಳೆಯರು ಯಾಕೆ ಚಡ್ಡಿ ಹಾಕೋದಿಲ್ಲ” ಎಂದು ಕೇವಲವಾಗಿ ಮಾತನಾಡಿ ಟೀಕೆಗೂ ಗುರಿಯಾಗಿದ್ದರು. ಗುಜರಾತ್ ಭೇಟಿ ಸಂದರ್ಭದಲ್ಲಿ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದಂತೂ ತುಂಬಾನೆ ಕಾಮಿಡಿಯಾಗಿತ್ತು.

ಒಟ್ಟಾರೆ ಅದೇನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿ, ಕೊನೆಗೆ ಹೀಗಾಯಿತಲ್ಲಾ ಎಂದು ತಲೆಗೆ ಕೈಯಿಟ್ಟುಕೊಳ್ಳುವ ರಾಹುಲ್ ಗಾಂಧಿಯನ್ನು ಮುಂದಿನ ಲೋಕಸಭೆಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದು ದೇಶದ ಅತಿದೊಡ್ಡ ತಮಾಷೆ ಅನ್ನದೆ ಮತ್ತಿನ್ನೇನ್ನಬೇಕೆ..?

-ಸುನಿಲ್ ಪಣಪಿಲ

Tags

Related Articles

Close