ಅಂಕಣ

ದೋಕ್ಲಾಮ್ ಎಂಬ ವಿಪತ್ತು! ದೋಕ್ಲಾಮ್ ನನ್ನು ವಶಪಡಿಸಿಕೊಳ್ಳಲೇ ಬೇಕು ಎಂದು ಚೀನಾ ಶಪಥ ತೊಟ್ಟಿರುವುದ್ಯಾಕೆ ಗೊತ್ತೇ?!

ಭಾರತವು ತನ್ನ ಗಡಿ ಪ್ರದೇಶದಲ್ಲಿ ಕೇವಲ ಒಂದು ರಾಷ್ಟ್ರವನ್ನು ಹೊಂದಿಲ್ಲ, ಬದಲಾಗಿ ಒಟ್ಟು ಒಂಬತ್ತು ರಾಷ್ಟ್ರಗಳನ್ನು ಹೊಂದಿದೆ!! ಈ ಒಂಬತ್ತು ರಾಷ್ಟ್ರಗಳಲ್ಲಿ,
ಭಾರತದ ಭೂಗಡಿಯನ್ನು ಒಟ್ಟು ಏಳು ದೇಶಗಳು ಹಂಚಿಕೊಂಡರೆ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳ ಜೊತೆ ಕಡಲತೀರಗಳನ್ನು ಹಂಚಿಕೊಂಡಿದೆ!! ಅಷ್ಟೇ
ಅಲ್ಲದೇ, ಭಾರತ ದೇಶದ ಗಡಿಭಾಗದಲ್ಲಿರುವ ಬಾಂಗ್ಲಾದೇಶವು ಸುಮಾರು 4,096 ಕಿಲೋಮೀಟರ್‍ನ ಅತ್ಯಂತ ಉದ್ದವಾದ ಗಡಿಭಾಗವನ್ನು ಹೊಂದಿದ್ದರೆ,
ಅಫ್ಘಾನಿಸ್ತಾನವು ಒಟ್ಟು 106 ಕಿಲೋಮೀಟರ್‍ನಷ್ಟಿರುವ ಅತ್ಯಂತ ಚಿಕ್ಕದಾದ ಗಡಿಪ್ರದೇಶವನ್ನು ಹಂಚಿಕೊಂಡಿದೆ!! ಆದರೆ 3,340 ಕಿಲೋಮೀಟರ್‍ನಷ್ಟು ಉದ್ದವಿರುವ ಎರಡನೇ ಅತೀ ಉದ್ದದ ಗಡಿಪ್ರದೇಶವನ್ನು ಚೀನಾ ಹೊಂದಿದ್ದು, ಇದು ಪಾಕಿಸ್ತಾನದ ಗಡಿಪ್ರದೇಶಕ್ಕಿಂತಲೂ(3,310ಕಿಲೋಮೀಟರ್) ಉದ್ದವಿದೆ!! ಹಾಗೆಯೇ ನೇಪಾಳ 1,747 ಕಿಲೋಮೀಟರ್, ಮ್ಯಾನ್ಮಾರ್ 1,643 ಕಿಲೋಮೀಟರ್ ಹಾಗೂ ಭೂತಾನ್ 643 ಕಿಲೋಮೀಟರ್ ಉದ್ದವಾದ ಗಡಿ ಭಾಗವನ್ನು ಭಾರತದೊಂದಿಗೆ ಹಂಚಿಕೊಂಡಿರುವ ಪ್ರದೇಶಗಳಾಗಿವೆ!!

ಒಟ್ಟಾರೆಯಾಗಿ, ಭಾರತವು ಒಟ್ಟು 7 ರಾಷ್ಟ್ರಗಳೊಂದಿಗೆ ಭೂಗಡಿಯನ್ನು ಹಂಚಿಕೊಂಡಿದ್ದರು ಕೂಡ ಮೂರು ಗಡಿ ಪ್ರದೇಶಗಳನ್ನು ಹೊರತುಪಡಿಸಿ ಬೇರಾವ
ರಾಷ್ಟ್ರಗಳೊಂದಿಗೆ ಸಂಘರ್ಷಗಳು ನಡೆಸಿಲ್ಲ!! ವಾಸ್ತವವಾಗಿ, ಭಾರತ ಹಾಗೂ ನೇಪಾಳವು ಪರಸ್ಪರ ವೀಸಾ ಮುಕ್ತ ಪ್ರವಾಸವನ್ನು ಹೊಂದಿದೆ. ಆದರೆ ಚೀನಾ,
ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಮಾತ್ರ ಭಾರತದೊಂದಿಗೆ ಸಂಘರ್ಷಗಳಲ್ಲಿ ತೊಡಗಿಕೊಂಡಿದೆ!! ಆದರೆ ನಮ್ಮ ಪ್ರಧಾನಿ ನರೇಂದ್ರಮೋದಿಯವರು
ಬಾಂಗ್ಲಾದೇಶದ ಪ್ರಧಾನಿಯಾಗಿರುವ ಶೇಖ್ ಹಸೀನಾ ನಡುವೆ ಐತಿಹಾಸಿಕ ಭೂಗಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಬಾಂಗ್ಲಾದೇಶದ ಗಡಿ ಸಮಸ್ಯೆಯನ್ನು
ಬಗೆಹರಿಸಲಾಗಿದೆ. ಆದರೆ ನಮಗೆ ಗಡಿ ಪ್ರದೇಶದಲ್ಲಿರುವ ಉಳಿದಿರುವ ಏಕೈಕ ತಲೆನೋವು ಎಂದರೆ ಪಾಕಿಸ್ತಾನ ಮತ್ತು ಚೀನಾ!! ಇತ್ತೀಚೆಗೆ ಗಡಿ ಪ್ರದೇಶದಲ್ಲಿ ಚೀನಾ ಪ್ರಾರಂಭಿಸಿದ ಕಿರುಕುಳ ಹೊಸ ಆಯಾಮಕ್ಕೆ ತಲುಪಿದ್ದು, ತನ್ನ ಸೇನಾ ಪಡೆಗಳನ್ನು ದೋಕ್ಲಾಮ್‍ಗೆ ಕಳುಹಿಸಿ, ಭಾರತದ ತಾಳ್ಮೆಯನ್ನು ಪರೀಕ್ಷಿಸಲು ಪ್ರಾರಂಭಿಸಿಯೇ ಬಿಟ್ಟಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಭಾರತದ ಒಳನಸುಳಿದ್ದರು!! ಆದರೆ ಚೀನಾ ತನ್ನ ಅಗ್ಗದ, ಕೆಳಮಟ್ಟದ ಸರಕುಗಳನ್ನು ಭಾರತೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದ್ದಲ್ಲದೇ, ಆ ವೇಳೆ ಆರ್ಥಿಕ ಸ್ಥಿತಿಗತಿಯಲ್ಲಿ ಸದೃಡವಾಗಿತ್ತು!!

ಭಾರತ ಮತ್ತು ಚೀನಾದ ನಡುವಿನ ಗಡಿಪ್ರದೇಶಗಳನ್ನು ಮೂರು ಪ್ರದೇಶಗಳಾಗಿ ವಿಂಗಡಿಸಬಹುದಾಗಿದೆ. ಅವು, ಪೂರ್ವ, ಮಧ್ಯ ಮತ್ತು ಪಶ್ಚಿಮ ಪ್ರದೇಶಗಳು!! ಪೂರ್ವ ಪ್ರದೇಶವು ಸಿಕ್ಕಿಂನಿಂದ ಮ್ಯಾನ್ಮಾರ್ ಗಡಿವರೆಗೆ ಹಬ್ಬಿದರೆ, ಮಧ್ಯ ಗಡಿಪ್ರದೇಶವು ದೆಮ್ಚೊಕ್‍ನಿಂದ ಪ್ರಾರಂಭವಾಗಿ ನೇಪಾಳದ ಗಡಿವರೆಗೆ ಇದೆ ಹಾಗೂ ಪಶ್ಚಿಮ ಪ್ರದೇಶವು ಉತ್ತರ-ಪೂರ್ವದಲ್ಲಿನ ಕಾರ್ಕರೊಮ್‍ಪಾಸ್‍ನಿಂದ ದೆಮ್ಚೊಕ್ ವರೆಗಿದೆ!!

ಚೀನಾ ಎದುರಿಸಿದ 5 ಸವಾಲುಗಳು:

ಈ 5 ಸವಾಲುಗಳಲ್ಲಿ ಭಾರತಕ್ಕೆ ಉದ್ವಿಗ್ನ ಪರಿಸ್ಥಿಯನ್ನು ಉಂಟುಮಾಡಿತ್ತು!!

1. ಅಕ್ಸೈಚಿನ್ (ಪಶ್ಚಿಮ ವಲಯ)

38,000ಚದರ ಕಿಲೋಮೀಟರ್ ವಿಸ್ತಾರವನ್ನು ಹೊಂದಿರುವ ಅಕ್ಸೈಚಿನ್ ಪ್ರದೇಶವು, ಚೀನಾದೊಂದಿಗೆ ಅತೀ ದೊಡ್ಡ ಸಂಘರ್ಷಗಳನ್ನು ಸೃಷ್ಟಿಸಿದ ಪ್ರದೇಶವಾಗಿದೆ. ಇದು ಲಡಖ್‍ನಲ್ಲಿರುವ ಪ್ರದೇಶವಾಗಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿಯಾಗಿತ್ತು!! ಆದರೆ 1950ರ ದಶಕದಲ್ಲಿ ಚೀನಾವು ಈ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಲು ಪ್ರತಿಪಾದಿಸಿತ್ತು. ಅಲ್ಲದೇ, ಚೀನಿಯರು 1957ರಲ್ಲಿ ಅಕ್ಸೈಚಿನ್ ಮೂಲಕ ಕ್ಸಿನ್ಜಿಯಾಂಗ್ ಮತ್ತು ಟಿಬೆಟ್‍ನ್ನು ಸಂಪರ್ಕಿಸುವ ಮಾರ್ಗವನ್ನು ಕಂಡುಕೊಂಡರು!! ಈ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಕಲೆಹಾಕಿದ ಭಾರತೀಯ ಸರಕಾರವು ಈ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕಾಗಿ ಎರಡು ದೇಶಗಳ ನಡುವೆ ಮುಖಾಮುಖಿಯಾಗಿ ಯುದ್ದಕ್ಕೆ ಕಾರಣವಾಯಿತು. ಹಾಗಾಗಿ ಭಾರತ ಮತ್ತು ಚೀನಾ ನಡುವಿನ 1962 ಯುದ್ದದಲ್ಲಿ ಈ ಪ್ರದೇಶವನ್ನು ಚೀನಾ ನಿಯಂತ್ರಿಸಿತ್ತು!!

2. ಮ್ಯಾಕ್ಮೋಹರ್ ಲೈನ್ ಮತ್ತು ಅರುಣಾಚಲ್ ಪ್ರದೇಶ (ಪೂರ್ವ ಪ್ರದೇಶ)

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಆದರೆ ಅರುಣಾಚಲ ಪ್ರದೇಶದ ದಕ್ಷಿಣ ಭಾಗವು, ದಕ್ಷಿಣ ಟಿಬೆಟ್‍ಗೆ ಸೇರಿದ ಸ್ಥಳವಾಗಿದೆ ಎಂದು ಚೀನಾ ಹೇಳುತ್ತಿತ್ತು!! ಆದರೆ 1914ರ ಶಿಮ್ಲಾ ಒಪ್ಪಂದದ ಪ್ರಕಾರ, ಬ್ರಿಟಿಷ್ ಹಾಗೂ ಟಿಬೆಟಿಯನ್ ಅಧಿಕಾರಿಗಳು ಈ ಗಡಿಪ್ರದೇಶದಲ್ಲಿದ್ದರು ಎನ್ನುವುದಕ್ಕೆ ಯಾವುದೇ ಉಲ್ಲೇಖವಿರಲಿಲ್ಲ. ಆದರೂ ಕೂಡ ತನ್ನ ಅಧಿಪತ್ಯ ಸ್ಥಾಪಿಸಿದ್ದ ಚೀನಾ, 1962ರ ಯುದ್ದದ ನಂತರ ತನ್ನ ಪಡೆಗಳನ್ನು ಮ್ಯಾಕ್ಮೋಹರ್ ಲೈನ್‍ನಿಂದ
ಹಿಂತೆಗೆದುಕೊಂಡಿತು (ಇದನ್ನು ವಾಸ್ತವಿಕ ನಿಯಂತ್ರಣದ ಸಾಲು ಎಂದು ಕರೆಯಲಾಗುತ್ತದೆ)

3. ಟಿಬೆಟ್ ಮತ್ತು ದಲಾಯಿ ಲಾಮಾ

ಚೀನಾ ಟಿಬೆಟ್ ವಿಚಾರವಾಗಿ ನೇರವಾದ ಸಂಘರ್ಷದಲ್ಲಿ ತೊಡಗಿರಲಿಲ್ಲ. ಆದರೆ ಚೀನಾ ತಮ್ಮ ದೇಶವನ್ನು ಆಕ್ರಮಿಸಿಕೊಂಡಾಗ ಟಿಬೆಟ್‍ನಿಂದ ಪಲಾಯನ ಮಾಡಿದ ದಲಾಯಿ ಲಾಮನಿಗೆ ಭಾರತ ಆಶ್ರಯವನ್ನು ಒದಗಿಸಿತ್ತು!! ಆ ಕಾರಣದಿಂದ ಅಸಮಾಧಾನವನ್ನು ವ್ಯಕ್ತಪಡಿಸಿತ್ತು ಚೀನಾ!! 1959ರವರೆಗೆ ಸ್ವತಂತ್ರ್ಯ ರಾಷ್ಟ್ರವಾಗಿದ್ದ ಟಿಬೆಟ್, 24ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೆ ಟಿಬೆಟ್ ಮೇಲೆ ನಿಯಂತ್ರಣ ಸಾಧಿಸಿದ ಚೀನಾ, ಟಿಬೆಟಿಯನ್ನರನ್ನು ಮತ್ತು ಆಧ್ಯಾತ್ಮಿಕ ವಿಚಾರದ ನಾಯಕನಾಗಿದ್ದ ದಲಾಯಿ ಲಾಮನನ್ನು ಪಲಾಯನ ಮಾಡಲು ಒತ್ತಾಯಿಸಿತು. ಅಷ್ಟೇ ಅಲ್ಲದೇ, ಇತ್ತೀಚೆಗೆ ಚೀನಾವು ದಲಾಯಿ ಲಾಮ ಅವರ ಅರುಣಾಚಲ ಪ್ರದೇಶದ ತಮಾಂಗ್ ಪ್ರದೇಶಕ್ಕೆ ನೀಡುವ ಭೇಟಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು!!

4. ಸಿಕ್ಕಿಂ (ಮಧ್ಯಪ್ರದೇಶ)

1975ರಲ್ಲಿ, ಸಿಕ್ಕಿಂ ಪ್ರದೇಶವು ತನ್ನ ಜನರ ಅಭಿಪ್ರಾಯವನ್ನು ಸ್ವೀಕರಿಸಿ, ಭಾರತೀಯ ಒಕ್ಕೂಟಕ್ಕೆ ಸೇರಿಕೊಂಡಿತು. ಆದರೆ, ಸಿಕ್ಕಿಂ ಪ್ರದೇಶವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ವಿಚಾರವಾಗಿ, ಚೀನಾ ತೀವ್ರ ಆಕ್ಷೇಪಣೆಯನ್ನು ಎತ್ತಿತ್ತು!! ಆದರೆ, ಸಿಕ್ಕಿಂ ತನ್ನ ಎಲ್ಲಾ ಅಧಿಕೃತ ನಕ್ಷೆಗಳಲ್ಲಿ ಸ್ವತಂತ್ರ ರಾಷ್ಟ್ರವೆಂದು
ತೋರಿಸಿಕೊಳ್ಳುತ್ತಿದೆ!!

5. ಸಮುದ್ರಗಳಲ್ಲಿ ಸ್ಥಾಪಿಸಿರುವ ಅಧಿಪತ್ಯ

ಕೋಕೋ ದ್ವೀಪಗಳಲ್ಲಿ ತನ್ನ ಸೈನ್ಯವನ್ನು ಸ್ಥಾಪಿಸಿರುವ ಚೀನಾ, ಭಾರತದ ಹಕ್ಕಿನ ಮೇಲೆ ನಿಯಂತ್ರಣವನ್ನು ಮಾಡುತ್ತಿದೆ!! ಆದರೆ ಭಾರತವು ನೇರವಾಗಿ ದಕ್ಷಿಣ
ಚೀನಾ ಸಮುದ್ರದಲ್ಲಿನ ಗಡಿವಿವಾದಗಳ ಬಗ್ಗೆ ಯಾವುದೇ ರೀತಿಯಾದ ವಿಚಾರವನ್ನು ಪ್ರಸ್ತಾಪಿಸಿಲ್ಲ!! ಆದರೂ, ಚೀನಾ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗದಲ್ಲಿ ಭಾರತೀಯ ಹಡಗುಗಳನ್ನು ಅನುಮತಿಸಬಾರದು ಎಂದು ತಾಕಿತ್ತು ಮಾಡಿತ್ತು. ಅಷ್ಟೇ ಅಲ್ಲದೇ, ವಿಯೆಟ್ನಾಂ ಪ್ರದೇಶದಲ್ಲಿ ತೈಲವನ್ನು ತೆಗೆಯುವುದಕ್ಕಾಗಿ ಭಾರತವನ್ನು ಅನುಮತಿಸಬಾರದು ಎಂದು ಹೇಳಿತ್ತು. ಆದರೆ 2011ರಲ್ಲಿ ಭಾರತೀಯ ನೌಕಾದಳವಾದ ಐಎನ್‍ಎಸ್ ಐರಾವತ್, ವಿಯೆಟ್ನಾಂಗೆ ಪ್ರಯಾಣ ಬೆಳೆಸಿ ಸೌಹಾರ್ದ ಕಾರ್ಯಾಚರಣೆಯಲ್ಲಿ ತೊಡಗಿದ್ದರು!! ಆದರೆ ಚೀನಾ ಮಾತ್ರ ದಕ್ಷಿಣ ನೌಕಾ ಸಮುದ್ರದಲ್ಲಿ ಭಾರತೀಯ ನೌಕಾಪಡೆಯು ಆಕ್ರಮಣಕ್ಕೊಳಗಾಗಿದೆ ಎಂದು ಚೀನಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು!! ಈ ಘಟನೆಯ ನಂತರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ ನೀರಿನಲ್ಲಿ ಸಮುದ್ರ ಪ್ರಯಾಣದಲ್ಲಿ ಕಾಣುತ್ತಿರುವ ಸ್ವತಂತ್ರದ ಕೊರತೆಯನ್ನು ಹೇಳಿಕೊಂಡಿತು!!

ದೀರ್ಘಕಾಲದ ಸಹಕಾರದ ದೃಷ್ಟಿಕೋನದಿಂದ, ಭಾರತೀಯ ಸರಕಾರದ ಒಡೆತನದಲ್ಲಿದ್ದ ಹಾಗೂ ಒಎನ್‍ಜಿಸಿ ಸಾಗರೋತ್ತರ ಅಂಗವಾಗಿದ್ದ, ಒಎನ್‍ಜಿಸಿ ವಿದೇಶ್ ಲಿಮಿಟೆಡ್‍ಗೆ , ವಿಯೆಟ್ನಾಂನ ಪೆಟ್ರೋ ವಿಯೆಟ್ನಾಂ ಕಂಪನಿಯೊಂದಿಗೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು!! ಹಾಗಾಗಿ, ದಕ್ಷಿಣ ಚೀನಾ ಸಮುದ್ರದ ಕೆಲವು ಪ್ರದೇಶಗಳಲ್ಲಿ ತೈಲ ಉತ್ಪಾದನೆಯನ್ನು ಒಳಗೊಂಡಿತ್ತು!! ಹಾಗಾಗಿ ಕೋಪಗೊಂಡ ಚೀನಾ ಮತ್ತೊಮ್ಮೆ ಚೀನಾದ ಕಡಲ ಗಡಿಗಳ ಬಳಿ ವಿದೇಶಿ ಉಪಸ್ಥಿತಿಯನ್ನು ವಿರೋಧಿಸಿತು!! ಆದರೆ ಭಾರತವು ಚೀನಾವನ್ನು ನಿರಾಕರಿಸಿ ವಿಯೆಟ್ನಾಂನ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೊಂಡಿದೆ ಎಂದು ಭಾರತ ಪ್ರತಿಪಾದಿಸಿತು.

ಭಾರತವನ್ನು ವಶಪಡಿಸಿಕೊಳ್ಳಲು ಚೀನಾ ಮಾಡುತ್ತಿರುವ ತಂತ್ರಗಳು:

ಚೀನಾವು ತನ್ನ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ತಂತ್ರಗಳನ್ನು ಉಪಯೋಗಿಸಿ ಭಾರತವನ್ನು ಹಿಂಸಿಸಲು ಆರಂಭಿಸಿತ್ತು!! ಯಾಕೆಂದರೆ ಏಷ್ಯಾದಲ್ಲೇ ಎರಡನೇ ಅತ್ಯಂತ ಪ್ರಬಲ ದೇಶವಾಗಿರುವ ಕಾರಣಕ್ಕೆ ಭಾರತದ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿತು. ಭಾರತದ ನೆರೆಯವರೊಂದಿಗೆ ಸೌಹಾರ್ದ ಸಂಬಂಧವನ್ನು ನಿರ್ಮಿಸುವ ಮೂಲಕ ಮತ್ತು ಆ ಸಣ್ಣ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ, ಚೀನಾ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿತ್ತು!! ಯಾಕೆಂದರೆ ಇದು ಭಾರತದ ಸುತ್ತಲಿನ ಎಲ್ಲಾ ನಾಲ್ಕು ಕಡೆಗಳಲ್ಲಿರುವ ಭಾರತೀಯ ಮಿಲಿಟರಿಯನ್ನು ತನ್ನ ಕಣ್ಗಾವಲಿನ ಅಡಿಯಲ್ಲಿ ಇರಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶವಾಗಿತ್ತು!!

ಇದಲ್ಲದೇ, ಭಾರತದ ಅಕ್ಕಪಕ್ಕದ ದೇಶಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಾಪಿಸುವ ಮೂಲಕ, ಚೀನಾವು ಸಂಪೂರ್ಣವಾಗಿ ಭಾರತವನ್ನು
ವಶಪಡಿಸಿಕೊಳ್ಳುವ ಉದ್ದೇಶವಾಗಿತ್ತು!!!

ಹಾಗಾಗಿ, ಚೀನಾವು ಭಾರತದ ನೆರೆಯ ದೇಶಗಳಲ್ಲಿನ ನಾಯಕರುಗಳ ಜೊತೆ ಮೈತ್ರಿಯನ್ನು ಬೆಳೆಸಿದ್ದು, ಅವರಲ್ಲಿ ಶ್ರೀಲಂಕಾದ ಶರತ್ ಫೊನ್ಸೆಕಾ, ನೇಪಾಳದ
ಪ್ರಚಂಡ, ಪಾಕಿಸ್ತಾನದ ಬಿರುವಾಲ್, ಮ್ಯಾನ್ಮಾರ್‍ನ ಜುಂಟಾ ಇವರೆಲ್ಲರು ಭಾರತದ ವಿರುದ್ಧ ಚೀನಾಕ್ಕೆ ಸಹಾಯ ಹಸ್ತ ಚಾಚಿರುವ ನಾಯಕರುಗಳಾಗಿದ್ದಾರೆ!! ಶ್ರೀಲಂಕಾದ ನಿವೃತ್ತ ಫೀಲ್ಡ್ ಮಾರ್ಷಲ್ ಶರತ್ ಫೊನ್ಸೆಕಾ, ಭಾರತದ ವಿರುದ್ದ ದ್ವೇಷವನ್ನು ಕಾರುವ ಈಕೆ, ಚೀನಾದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ!! ಶ್ರೀಲಂಕಾದ ಹಿಂದಿನ ಅಧ್ಯಕ್ಷೆ ಮಹಿಂಧಾ ರಾಜಪಕ್ಷೆ ಭಾರತಕ್ಕಿಂತಲೂ ಹೆಚ್ಚಾಗಿ ಚೀನಾದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ!! ಇವರೆಲ್ಲರೂ ಕೂಡ ಭಾರತವನ್ನು ನಿರ್ಲಕ್ಷಿಸಿ ಚೀನಾ-ಸ್ನೇಹಿಯನ್ನು ಜಾರಿಗೆ ತಂದಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಬೆದರಿಕೆ ನೀಡುವ ಚಿಂತನೆಯನ್ನು ಹೊಂದಿದ್ದಾರೆ!!

ನೇಪಾಳದ ಮಾಜಿ ಪ್ರಧಾನಮಂತ್ರಿಯಾಗಿದ್ದ ಪ್ರಚಂಡ, ಚೀನಾದ ಪ್ರಭಾವದಿಂದಾಗಿ ಭಾರತದ ಸ್ನೇಹ ಸಂಬಂಧವನ್ನು ಕಡಿದುಕೊಂಡು ಉತ್ತಮ ಸಂಬಂಧವನ್ನು
ಮುಂದುವರೆಸಲಿಲ್ಲ!! ನೇಪಾಳದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಪಕ್ಷವಾಗಿದ್ದರೂ ಕೂಡ ಕಮ್ಯುನಿಸ್ಟ್ ಪಕ್ಷವು ನೇಪಾಳದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿದೆ. ಇವಿಷ್ಟೇ ಅಲ್ಲದೇ ಇಂಡೋ-ನೇಪಾಳ ಸಂಬಂಧಗಳಲ್ಲಿ ಏರಿಳಿತಗಳನ್ನು ಉಂಟುಮಾಡುವ ಸಾಮಥ್ರ್ಯವನ್ನು ನೇಪಾಳ ಹೊಂದಿದೆ!!

ಸಣ್ಣ ಈಶಾನ್ಯ ರಾಷ್ಟ್ರವಾಗಿರುವ ಮ್ಯಾನ್ಮಾರ್‍ನ್ನು ಆಳುವ ಮಿಲಿಟರಿ ಜುಂಟಾ, ಚೀನಾ ದೇಶದ ಬಗ್ಗೆ ಬಹಳಷ್ಟು ಪ್ರಭಾವಿತನಾಗಿರುವ ವ್ಯಕ್ತಿ!! ಚೀನಾವು ಮ್ಯಾನ್ಮಾರ್‍ನ ಕೊಕೊದ್ವೀಪವನ್ನು ಬಳಸುತ್ತಿದ್ದು, ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕೇವಲ 18 ಕಿಲೋಮೀಟರ್‍ನಷ್ಟು ದೂರದಲ್ಲಿದೆ!!! ಹಾಗಾಗಿ ಈ ಪ್ರದೇಶವು ಚೀನಿಯರಿಗೆ, ಭಾರತೀಯ ಮಿಲಿಟರಿ ಪಡೆಯ ನಡೆಯನ್ನು ಗಮನಿಸಲು ಸೂಕ್ತ ಸ್ಥಳವಾಗಿದೆ!!

ಇನ್ನೊಂದೆಡೆ ಪಾಕಿಸ್ತಾನವು ಚೀನಾದ ಕೈಯಲ್ಲಿ ಕೈಗೊಂಬೆಯಂತೆ ಕುಣಿಯುತ್ತಿದೆ. ಹಾಗಾಗಿ ಚೀನಾ ಮತ್ತು ಪಾಕಿಸ್ತಾನವು ಉತ್ತಮ ಸಂಬಂಧಗಳನ್ನು ಹೊಂದಿದ್ದು, ಪಾಕಿಸ್ತಾನ ಗ್ವಾಡಾರ್‍ನ ಆಳ ಸಮುದ್ರದಲ್ಲಿ ಚೀನಾ ತನ್ನ ಬಂದರನ್ನು ನಿರ್ಮಿಸಿದೆ. ಅಲ್ಲಿಂದಲೇ ಭಾರತೀಯ ಮಿಲಿಟರಿ ಚಟುವಟಿಕೆಗಳನ್ನು ಕಣ್ಗಾವಲಿರಿಸಿಕೊಳ್ಳುವ ಯೋಜನೆ ಇದಾಗಿದೆ!! ಗ್ವಾಡಾರ್ ಪ್ರದೇಶದಲ್ಲಿ, ಚೀನಾ ನೌಕಾ ನೆಲೆಯನ್ನು ಯೋಜಿಸಿದ್ದಲ್ಲದೇ ಪಾಕಿಸ್ತಾನ-ಚೀನಾ ಸಂಪರ್ಕಿಸುವ ಗ್ವಾಡಾರ್‍ನಿಂದ ಇಕಾನಾಮಿಕ್ ಕಾರಿಡಾರ್‍ನ್ನು ನಿರ್ಮಿಸಲು ಪ್ರಾರಂಭಿಸಿದೆ. ಈ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಿದ್ದರೂ ಕೂಡ ಚೀನಾ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ!!

ರಾಷ್ಟ್ರೀಯ ಹೆದ್ದಾರಿ 219(ಜಿ 219)ನಲ್ಲಿರುವ ಟಿಬೆಟ್ ಮತ್ತು ಅಕ್ಸೈಚಿನ್ ಗಳಲ್ಲಿ ಎಲ್ಲಾ ಹವಾಮಾನ ರಸ್ತೆಗಳು, ರೈಲ್ವೆ ಮಾರ್ಗಗಳು, ದೂರಸಂಪರ್ಕ ಸಾಲುಗಳನ್ನು ನಿರ್ಮಿಸಲು ಚೀನಾ ಮಹತ್ತರ ಯೋಜನೆಗಳನ್ನು ಕೈಗೊಂಡಿದೆ.

ತೈಲ ವಲಯದಲ್ಲಿ ಮಧ್ಯಪೂರ್ವ ಪ್ರದೇಶದೊಂದಿಗೆ ಆರ್ಥಿಕ ಸಹಕಾರವನ್ನು ಚೀನಾ ಅಭಿವೃದ್ದಿಪಡಿಸಿತ್ತು!! ಹಾಗಾಗಿ, ಭಾರತ ಮಧ್ಯಪೂರ್ವ ದೇಶಗಳೊಂದಿಗೆ
ತೈಲಕ್ಕಾಗಿ ಬೇರೆ ರಾಷ್ಟ್ರಗಳೊಂದಿಗೆ ತೊಡಗಿಸಿಕೊಳ್ಳಲು ಆರಂಭಿಸಿದಾಗ, ಚೀನಾವು ಭಾರತವನ್ನು ಅನುಸರಿಸಿತು!! ಭಾರತವು ತೈಲಕ್ಕಾಗಿ ಒಪ್ಪಂದಗಳಿಗೆ ಸಹಿ ಹಾಕಲು ಪ್ರಾರಂಭಿಸಿದಾಗ ಚೀನಾವು ಅದನ್ನೇ ಅನುಸರಿಸಿತು!! ಉದಾಹರಣೆಗೆ ಭಾರತದ ಸೌದಿ ಅರೇಬಿಯಾ ಅಥವಾ ಇರಾನ್ ಅಥವಾ ಇತರ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಾರಂಭಿಸಿದಾಗ, ಚೀನಾವು ಅದೇ ದೇಶಗಳಲ್ಲಿ ವ್ಯಾಪಾರದ ಪಾಲುಗಾಗಿ ಭಾರತದೊಂದಿಗೆ ಸ್ಪರ್ಧಿಸಿತು.

ಇದಲ್ಲದೇ, ಚೀನಾವು ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಮತ್ತು ಸಾಮಾಗ್ರಿಗಳನ್ನು ಸರಬರಾಜು ಮಾಡುವ ಕಾರ್ಯತಂತ್ರದಲ್ಲಿ ತೊಡಗಿತ್ತು!! ನೇಪಾಳದಲ್ಲಿ ಆರಂಭಗೊಂಡು ಆಂಧ್ರಪ್ರದೇಶದಲ್ಲಿ ಕೊನೆಗೊಳ್ಳುವ ರೆಡ್ ಕಾರಿಡಾರ್ ಸ್ಥಾಪನೆಗೆ ಚೀನಾ ಪೂರ್ವಭಾವಿ ಬೆಂಬಲವನ್ನು ಸೂಚಿಸಿತ್ತು!!

ದೊಕ್ಲಾಮ್ ಬಿಕ್ಕಟ್ಟು!!

ಜೂನ್ 16ರಂದು ಚೀನಾವು ತ್ರಿವಳಿ ದೇಶಗಳಾದ ಭಾರತ, ಭೂತಾನ್ ಮತ್ತು ಚೀನಾ ಸೇರುವ ಸ್ಥಳವಾದ ದೋಕ್ಲಾಮ್‍ನಲ್ಲಿ ಭಾರತವನ್ನು ಎದುರಿಸಿತು. ದೋಕ್ಲಾಮ್ ಭೂತಾನ್ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದು, ಈ ಪ್ರದೇಶದಲ್ಲಿ ತೊಂದರೆಗಳು ಸಂಭವಿಸಿದರು ಕೂಡ ಚೀನಾಕ್ಕೆ ಭೂತಾನ್ ಸಹಾಯ ಹಸ್ತ ಚಾಚುತ್ತಿದೆ!!

ಆದರೆ, ಚೀನಾವು ಇತ್ತೀಚಿನ ದಿನಗಳಲ್ಲಿ ಭಾರತ, ಚೀನಾ ಮತ್ತು ಭೂತಾನ್ ಸೇರುವ ಜಾಗವಾದ ಡೊಂಗ್ಲಾಂಗ್ ನಲ್ಲಿ ತನ್ನ ಮೂಲಸೌಕರ್ಯ ಕಟ್ಟಡಗಳ
ಚಟುವಟಿಕೆಗಳನ್ನು ವೃದ್ದಿಪಡಿಸುತ್ತಿತ್ತು ಮಾತ್ರವಲ್ಲದೇ, ಹಳೆಯ ಭಾರತೀಯ ಬಂಕರ್‍ಗಳನ್ನು ತೆಗೆದುಹಾಕಿತು!! ಹಾಗಾಗಿ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‍ಎ)ಯನ್ನು ತಡೆಗಟ್ಟಲು 300 ಭಾರತೀಯ ಸೈನಿಕರು ದೋಕ್ಲಾಮ್‍ನಲ್ಲಿ ಕ್ಯಾಂಪಿಂಗ್ ಹೂಡಿದರು!! ಘನೀಕರಿಸುವ ತಾಪಮಾನದಿಂದ ಭಾರತೀಯ ಸೇನೆಯು ತನ್ನ ನೆರೆಯ ಆಕ್ರಮಣಕಾರಿಗಳಿಂದ ಸುರಕ್ಷಿತವಾಗಿದೆ ಎಂದು ಖಾತ್ರಿ ಪಡಿಸಿತ್ತು!! ಆದರೂ, ಚೀನಾ ಆಕ್ರಮಣಕಾರಿ ಹೇಳಿಕೆಗಳನ್ನು ನೀಡುತ್ತಾ, ಭಾರತವನ್ನು ಪೀಡಿಸಲು ಪ್ರಯತ್ನಟ್ಟರೂ ಕೂಡ ಭಾರತವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವನ್ನು ಕಾಣಲಿಲ್ಲ!!

ಮೂಲ:https://www.readoo.in/2017/10/the-dhoklam-face-off-chinas-never-ending-lust-for-land

– ಅಲೋಖಾ

 

Tags

Related Articles

Close