ಪ್ರಚಲಿತ

ನಕ್ಸಲಿಸಂ ತೊರೆದು ಮುಖ್ಯವಾಹಿನಿಗೆ ನಿಜವಾಗಲೂ ಬಂದಿದ್ದರೆ,.ಮತ್ತೆ ಹಿಂದೆ ಬಿದ್ದು ನಕ್ಸಲಿಸಂ ಕಡೆ ಓಡಿದ್ಯಾಕೆ ನಾಗರಾಜ?!

ಹುಟ್ಟುಗುಣ ಸುಟ್ಟರು ಹೋಗಲ್ಲ ಅನ್ನೋ ಮಾತಿದೆ ಅದು ಈಗ ಮಾವೋವಾದಿ ಸಿರಿಮನೆ ನಾಗರಾಜ್‍ನ ನಡವಳಿಕೆಯಲ್ಲಿ ನಿಜವೆಂದು ಸಾಬೀತಾಗಿದೆ. ಅಲ್ಲ ಈ
ಮನುಷ್ಯನಿಗೆ ಇಲ್ಲ-ಸಲ್ಲದ ವಹಿವಾಟು ಯಾಕೆ ಬೇಕು? ಪ್ರಭುತ್ವದ ವಿರುದ್ಧ ಸಮರ ಸಾರಿ ಮಾರಕಸ್ತ್ರಗಳನ್ನು ಹಿಡಿದು ಕಾಡಿನತ್ತ ಕಾಲಿಟ್ಟವನು.. ಅದು ಅವನಿಂದ
ಸಾಧ್ಯವಾಗದೆ ಇದ್ದಾಗ ಹಿಡಿದ ಶಸ್ತ್ರವನ್ನು ಕೈಚೆಲ್ಲಿ ಸರ್ಕಾರದ ಮುಂದೆ ಮಂಡಿಯೂರಿ, ತಲೆ ತಗ್ಗಿಸಿ ಶರಣಾದ ಸಿರಿಮನೆ ನಾಗರಾಜ್ ವಿಷಕಾರೋ ಸರ್ಪ ಎಂದು ನನಗೆ ಸ್ಪಷ್ಟವಾಯಿತು.

ಈ ಮನುಷ್ಯ ಸರ್ಕಾರದ ಮುಂದೆ ಶರಣಾದ ಮೇಲೆ ತಾನಾಯಿತು ತನ್ನ ಕೆಲಸವಾಯಿತೆಂದು ತೆಪ್ಪಗಿರೋದು ಬಿಟ್ಟು ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ತನ್ನ
ಹಳೆಯ ಭೂಗತ ಸಂಗಾತಿಗಳ ಪರವಾಗಿ ಮಾಧ್ಯಮಗಳ ಮುಂದೆ ವಕಾಲತ್ತು ವಹಿಸಿದರೆ ಅವರ ಕಪಟ ಶರಣಾಗತಿ ಅರ್ಥವೆಲ್ಲಿದೆ ಸ್ವಾಮಿ? ಈ ವಂಚಕ ಸರ್ಕಾರದ ನಂಬಿಕೆಗೆ ದ್ರೋಹ ಬಗೆಯುತ್ತಿರುವುದು ನಮಗೆ ಎದ್ದು ಕಾಣುತ್ತಿಲ್ಲವೆ?

ಕೇವಲ ಒಂದೂವರೆ ವರ್ಷದ ಹಿಂದೆ ಈ ಮಹಾನ್ ತ್ಯಾಗಿ ಚಿಕ್ಕಮಂಗಳೂರು ಜಿಲ್ಲಾಧಿಕಾರಿ ಮತ್ತು ಎಸ್ಪಿಯವರ ಮುಂದೆ ಮಂಡಿಯೂರಿ ಶರಣಾಗಿದ್ದ! ರಾಜ್ಯ ಪೋಲಿಸರ ಪ್ರಕಾರ ಅವರ ಸುಳಿವಿಗೆ ಬಹುಮಾನ ಘೋಷಿಸಿದ್ದ ನಕ್ಸಲ್ ಸಂಘಟನೆಯ ಸದಸ್ಯರಾದ ಸಿರಿಮನೆ ನಾಗರಾಜು ಮತ್ತು ನೂರ್ ಜುಲ್ಫಿಕರ್ ಅಲಿಯಾಸ್ ನೂರ್ ಶ್ರೀಧರ್ ತಮಗೆ ಶಸ್ತ್ರಾಸ್ತ್ರ ಚಳುವಳಿಯಲ್ಲಿ ನಂಬಿಕೆ ಇಲ್ಲ, ತಮಗೆ ಚಳುವಳಿಯಲ್ಲಿ ನಂಬಿಕೆ ಇಲ್ಲ, ತಾವು ಆ ಚಳುವಳಿಯಲ್ಲಿ ಭಾಗವಹಿಸಿಯೇ ಇಲ್ಲ, ನಾವು ರಾಜ್ಯದಲ್ಲಿ ಸಕ್ರಿಯವಾಗಿರುವ ನಕ್ಸಲ್ ಸಂಘಟನೆಯ ಪರ ಸಹಾನುಭೂತಿ ಹೊಂದಿದ್ದೆವು, ಆದರೆ ಪೋಲಿಸರು ಭೂಗತ ನಕ್ಸಲರ ಜತೆ ನಮಗೂ ಸಂಬಂಧ ಕಲ್ಪಿಸಿ ನಮ್ಮ ತಲೆದಂಡಕ್ಕೆ ಮುಂದಾದಾಗ ನಾವು ಅನಿವಾರ್ಯವಾಗಿ ಭೂಗತರಾಗಬೇಕಾಯಿತು! ಈಗ ಸರಕಾರ ನಮಗೆ ಕ್ಷಮಾದಾನ ನೀಡುತ್ತಿರುವುದರಿಂದ ನಾವು ಆ ಸಂಘಟನೆಯ ಸಂಪರ್ಕ ಕಡಿದುಕೊಂಡು ಅದರಿಂದ ಹೊರಬಂದು ಸಮಾಜದ ಮುಖ್ಯವಾಹಿನಿಯನ್ನು ಸೇರುತ್ತಿದ್ದೇವೆ! ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮಗೆ ನ್ಯಾಯ ಸಿಗುವುದೆಂಬ ನಂಬಿಕೆ ಇದೆ!” ಎಂದೆಲ್ಲಾ ಹೇಳಿಕೊಂಡಿದ್ದರು. ಇದಾದ ನಂತರ ಹಲವಾರು ಪ್ರಗಿತಿಪರ ಸಂಘಟನೆಗಳಲ್ಲಿ , ಸಮಾವೇಶಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನಡೆದ ಚರ್ಚೆಗಳಲ್ಲಿ ಕೂಡ ಪಾಲ್ಗೊಂಡಿದ್ದರು.

ತಾವು ಬದಲಾಗಿರೋದಾಗಿ ಬೊಗಳೆ ಬಿಟ್ಟಿದ್ದಾರೆನೋ ಅನ್ನೋ ಸಂಶಯ ಈಗ ಎಲ್ಲರಲ್ಲೂ ಮೂಡಿ ಬರುತ್ತಿದೆ! ಹೌದು! ಈ ಮನುಷ್ಯ ನಾನು ಮತ್ತು ಶ್ರೀಧರ್ ನಕ್ಸಲೈಟ್ ಸಂಘ ಚಟುವಟಿಕೆಗಳಿಂದ ಹೊರ ಬಂದ ಮೇಲೆ ಇನ್ನೂ ಮೂವರು ಮುಖ್ಯವಾಹಿನಿಗೆ ಬರುವ ಸಂಪರ್ಕದಲ್ಲಿದ್ದಾರೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅವುಗಳಿಂದ ಹೊರ ಬಂದು ಸಮೂಹ ಸಂಘಟನೆಯಲ್ಲಿ ಮುಕ್ತವಾಗಿ ಕೆಲಸ ಮಾಡುವುದಾಗಿ ಎಲ್ಲರ ಮುಂದೆ ಈ ಮಹಾನ್‍ಭಾವರು ಮನವಿ ಮಾಡಿಕೊಳ್ಳುತಾರೆ.

ಆದರೆ ಸೆ. 5 ರಂದು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ಶವವಿನ್ನೂ ಆವರಣದಲ್ಲಿರುವಾಗಲೇ ಅಲ್ಲಿ ಜಮಾಯಿಸಿದ ಈ ಪ್ರಗತಿಪರ ಸಂಘಟನೆಯ ಸದಸ್ಯರುಗಳು ಪೊಲೀಸರು ತನಿಖೆ ಪ್ರಾರಂಭಮಾಡುವ ಮುಂಚೆಯೇ ಸದಸ್ಯರುಗಳು ಸಂಘಪರಿವಾರದ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಇಡೀ ಪ್ರಕರಣದ ಮೂಲವನ್ನೇ ಬುಡಮೇಲು ಮಾಡಿ ತನಿಖೆಯನ್ನು ಕೋಮುವಾದಿ ಸಂಘ ಪರಿವಾರದ ಕಡೆ ತಿರುಗಿಸುವ ಪ್ರಯತ್ನ ಮಾಡಿದ್ದಾರೆ!!!

ಆದರೆ ಅವರ ಪ್ರಯತ್ನ ಸಫಲವಾಗದೇ ಮಾಧ್ಯಮಗಳಲ್ಲಿ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡಯಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ , ಪ್ರಕರಣದ ಜಾಲ ಹಿಡಿದು ತನಿಖೆಯನ್ನು ಚುರುಕುಗೊಳಿಸಿದ ಪೋಲಿಸರು ಈ ಹತ್ಯೆಯಲ್ಲಿ ನಕ್ಸಲರ ಕೈವಾಡದ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಗೌರಿ ಲಂಕೇಶ್ ಕೊಲೆಯನ್ನು ಸಂಘ ಪರಿವಾರದವರ ಮತ್ತು ಕರ್ಮಠ ಹಿಂದುತ್ವವಾದಿಗಳ ತಲೆಗೆ ಕಟ್ಟಿ ಅವರನ್ನು ರಾಜಕೀಯದಿಂದ ಕೆಳಗಿಳಿಸಿ ಅವರನ್ನು ಅವಮಾನಿಸಲು ಯತ್ನಿಸಿದ ಈ ಪಗ್ರತಿಪರರಿಗೆ ಪೋಲಿಸರ ಹಾಗೂ ಮಾಧ್ಯಮಗಳ ತನಿಖೆ ಹಾಗೂ ವರದಿಗಳು ತಲೆನೋವಾಗಿ ಪರಿಣಮಿಸಿತು.

ಇವೆಲ್ಲವುದರ ಮಧ್ಯೆ ಎಸ್‍ಐಟಿ ಪೊಲೀಸರ್ ಆಂಧ್ರದ ನಕ್ಸಲ ನಿಗ್ರಹ ದಳದ ಅಧಿಕಾರಿಗಳೊಂದಿಗೆ ನಕ್ಸಲ್ ಹತ್ಯೆಗಳ ಬಗ್ಗೆ ಮಾಹಿತಿ ಕಳೆ ಹಾಕುತ್ತಿದ್ದಾಗ ದಿಗಿಲಿಗೆ ಬಿದ್ದ ರಾಜ್ಯದ ಪ್ರಗತಿಪರರು ಅದರಲ್ಲೂ ಪ್ರಮುಖವಾಗಿ ಗೌರಿ ಲಂಕೇಶ್ ಆಪ್ತರಾಗಿದ್ದ ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫಿಕರ್. ಸೆ. 11 ರ ಸೋಮವಾರದಂದು ಮಾಧ್ಯಮಗಳೆದುರು ಸುದ್ಧಿಗೋಷ್ಠಿ ನಡೆಸಿದ ಈ ಭೂಪರು ಗೌರಿ ಹತ್ಯೆಯ ಹೊಣೆಗಾರಿಕೆಯನ್ನು ನೇರವಾಗಿ ಸಂಘಪರಿವಾರದವರ ಹಣೆಗೆ ಕಟ್ಟಲು ಯತ್ನಿಸಿದ್ದಾರೆ! ಇದೇ ವೇಳೆ ತಮ್ಮ ಮಾತಿನ ಮುಖಾಂತರ ನಿಜಸ್ವರೂಪವನ್ನು ತೋರಿಸಿದ ಇವರು “ನಮ್ಮ ಸಂಘಟನೆಯಲ್ಲಿ ಯಾವುದೇ ಹತ್ಯೆ ಮಾಡುವುದಿದ್ದರು ಅದು ಟಾರ್ಗೆಟ್ ಆಗಿರುವರಿಗೆ ಎರಡು ಬಾರಿ ಎಚ್ಚರಿಕೆಯನ್ನು ನೀಡಿ ನಂತರವೇ ಹತ್ಯೆ ಮಾಡುತ್ತೇವೆ” ” ಗೌರಿಯವರೊಂದಿಗೆ ನಮ್ಮ ಸಂಘಟನೆಗೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ! ಅವರಿಗೆ ನಕ್ಸಲರೊಂದಿಗೆ ಉತ್ತಮ ಸಂಭಂದವಿದ್ದು ಅವರಿಗೆ ನಕ್ಸಲರ ಬಗ್ಗೆ ಅಭಿಮಾನ ಕೂಡ ಇತ್ತು” ಎಂದು ಹೇಳಿಕೊಂಡ ಈ ಹೇಡಿಗಳು ತಾವು ಶರಣಾಗಿದ್ದು ನೆಪಮಾತ್ರ! ನಾವೆಂದಿಗೂ ನಕ್ಸಲರ ಪರ! ನಮ್ಮ ರಕ್ತದ ಕಣ ಕಣದಲ್ಲೂ ಅವರ ತತ್ವವೇ ಅಡಗಿದೆ! ಈ ಹೇಳಿಕೆಯ ಮೂಲಕ ತಾವು ನಕ್ಸಲರೆಂದು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದಾರೆ.

ಅಲ್ಲ ತಾವು ನಕ್ಸಲರ ಪರವಲ್ಲವೆಂದು ಗೋಮುಖ ವ್ಯಾಘ್ರಗಳಂತೆ ಅವೆಲ್ಲವನ್ನು ತೊರೆದು ಸರ್ಕಾರಕ್ಕೆ ಶರಣಾದ ಸಿರಿಮನೆ ನಾಗರಾಜ್ ಮತ್ತು ನೂರು ಜುಲ್ಫಿಕರ್ ನಾವು ನಕ್ಸಲರ ಜೊತೆ ಸಂಬಂಧವನ್ನು ಹೊಂದಿ, ನಾವು ನಕ್ಸಲ ಸಂಘಟನೆ ಎಂದು ಹೇಳುತ್ತಿರುವುದು ಎಷ್ಟು ಸರಿ? ಹಾಗಾದರೆ ಸಂಘಟನೆಯ ಚಟುವಟಿಕೆಯನ್ನು ತೊರೆದು ಶರಣಾಗಿದ್ದೇವೆ ಎಂದು ಹೇಳಿದ್ದು ಸುಳ್ಳೇ? ಅವರ ಹಳೆಯ ಚಾಳಿ ಇನ್ನೂ ಬಿಟ್ಟಿಲ್ಲವೇ? ಅಷ್ಟಕ್ಕೂ ನಾಗರಾಜ್‍ನವರೆ ನಿಮ್ಮ ಶರಣಾಗತಿಯ ಬಗ್ಗೆ ನಮಗೆ ಅನುಮಾನ ಬರುತ್ತಿದೆ! ಅಲ್ಲ ಈ ಮನುಷ್ಯ ಮುಖ್ಯವಾಹಿನಿಯಲ್ಲಿದ್ದುಕೊಂಡೆ ಕರ್ನಾಟಕದ ಯುವಕರನ್ನು ನಕ್ಸಲ್ ಚಟುವಟಿಕೆಗಳಿಗೆ ಹುರಿದುಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆಯೇ? ಎಂಬುವುದು ಪ್ರಸ್ತುತವಾಗಿ ಎಲ್ಲರ ತಲೆಯಲ್ಲೂ ಮೂಡಿರುವ ಸಂಶಯ.!

– ಕಾವ್ಯ ಅಂಚನ್

Tags

Related Articles

Close