ಪ್ರಚಲಿತ

ನಟ ಉಪೇಂದ್ರ ಪ್ರಧಾನಿ ಮೋದಿಯ ನ್ಯೂ ಇಂಡಿಯಾಗೆ ಕೈ ಜೋಡಿಸುವ ಕಾಲ ಸನ್ನಿಹಿತವಾಗಿದೆಯೇ?

ಕನ್ನಡಿಗರು ಆ ವ್ಯಕ್ತಿತ್ವಕ್ಕೆ ರಿಯಲ್ ಸ್ಟಾರ್ ಎಂದೇ ಬಿರುದು ಕೊಟ್ಟಿದ್ದಾರೆ. ನಟನೆಯ ಪ್ರೌಢಿಮೆಯೊಂದಿಗೆ ಅವರ ಪ್ರತಿ ಸಿನಿಮಾಗಳಲ್ಲೂ  ಸಮಾಜಕ್ಕೊಂದು ಉದಾತ್ತ ಸಂದೇಶ ಇದ್ದೇ ಇರುತ್ತವೆ. ವಾಸ್ತವದ ಅರಿವಿನ ಜೊತೆ ಪರಿಹಾರವನ್ನೂ ಸೂಚಿಸುವ ಅವರ ರಾಜಕೀಯ ಬುದ್ಧಿಮತ್ತೆ ನಿಜಕ್ಕೂ ಅಪರೂಪವೇ ಸರಿ!

ಸತ್ಯ! ಸಿದ್ಧಾಂತಗಳನ್ನು ನಂಬುವ ಯಾರೇ ಆದರೂ ಕೂಡ ಒಂದಷ್ಟು ತತ್ವಧಾರಿತವಾದ ನಡತೆಯನ್ನೂ ಹೊಂದಿರುತ್ತಾರೆ ಎಂಬುದಕ್ಕೆ ನಟ ಹಾಗೂ ನಿರ್ದೇಶಕ ‘ಉಪೇಂದ್ರ’ ರಿಗಿಂತ ಬೇರೆ ಉದಾಹರಣೆ ಬಹುಷಃ ಬೇಡ! ಇಪ್ಪತ್ತೈದು ವರ್ಷದ ಸಿನಿಮಾ ಹಾದಿಯಲ್ಲಿ 45 ಕ್ಕೂ ಹೆಚ್ಚು ಸಿನಿಮಾಗಳಲಿ ನಟಿಸಿ 9 ಸಿನಿಮಾಗಳ ನಿರ್ದೇಶನ ಮಾಡಿದ ಇವರು ಕೇವಲ ಕಲಾವಿದ ಮಾತ್ರವಲ್ಲ! ಸಮಾಜದ ಅಂತಃಕರಣ ಅರಿತ ಮಾನವೀಯ ಜೀವಿಯೂ ಹೌದು!

ಕರ್ನಾಟಕದ ಕಾವೇರಿ ಗಲಾಟೆಯಲ್ಲಿ ಮಾಧ್ಯಮಗಳು ತೀರಾ ಅತಿರೇಕವೆನ್ನುವಷ್ಟು ವಾರಗಟ್ಟಲೇ ಕೇವಲ ಪರಿಹಾರಗಳಿಲ್ಲದ ರೆಕ್ಕೆ -ಬಾಲ ಸೇರಿಸಿದ ಸಮಸ್ಯೆಗಳನ್ನೊಂದನ್ನೇ ಬಿತ್ತರಿಸುತ್ತಿದ್ದಾಗ ನೇರವಾಗಿ ಫೋನ್-ಇನ್ ಮೂಲಕ ಗ್ರಹಚಾರ ಬಿಡಿಸಿದ್ದರು. ಸಮಸ್ಯೆಗಳಿದೆ ಅಂತ ಮಾತ್ರ ಕರ್ನಾಟಕದ ಘನತೆ ಹಾಳು ಮಾಡುವ ಬದಲು ಪರಿಹಾರಗಳನ್ನು ನೀಡಿ. ಅದಿಲ್ಲದೇ ಹೋದರೆ ಸಮಸ್ಯೆಗಳನ್ನು ಸ್ಕ್ರಿಪ್ಟ್ ಗಳ ಮೂಲಕ ತಯಾರಿಸಿ ನಾಟಕವಾಡಬೇಡಿ ಎಂದು ಹೇಳಿದ್ದರು. ಅದಲ್ಲದೆಯೇ ಬಹಳಷ್ಟು ಸಮಾಜದ ಸ್ಥಿತಿಗಳನ್ನು ಅವಲೋಕಿಸಿದಂತಹ ಉಪೇಂದ್ರರವರು 2010 ರಲ್ಲಿ ಭಾರತೀಯ ಜನತಾ ಪಕ್ಷ  ಸೇರುವುದು ಬಹಳಷ್ಟು ಖಚಿತವಾಗಿತ್ತು. ಪತ್ರಿಕಾ ಘೋಷ್ಠಿಯಲ್ಲಿ  ರಾಜಕೀಯ ನಿಲುವಿನ ಬಗ್ಗೆ ಉತ್ತರಿಸಿದ್ದ ಉಪೇಂದ್ರವರ ಈ ನಿರ್ಧಾರದ ಬಗ್ಗೆ ಬಹಳಷ್ಟು ಜನತೆ ಸ್ವಾಗತಿಸಿ ಅಭಿನಂದಿಸಿತ್ತು. ‘ಉಪ್ಪಿದಾದಾ’ ಎಂದೇ ಪ್ರೀತಿಯಿಂದ ಬಿಂಬಿಸಲ್ಪಡುತ್ತಿದ್ದ ಉಪೇಂದ್ರರವರ ಅಭಿಮಾನಿಗಳೂ ಕೂಡ ಸಂತಸಗೊಂಡಿದ್ದರು!

ಅಚ್ಚರಿಯಾಗುವುದದೇ! ದಕ್ಷಿಣ ಭಾರತದ ಉಳಿದೆಲ್ಲ ರಾಜ್ಯಗಳಲ್ಲಿ ಸಿನಿಮಾ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ! ಆದರೆ ಕರ್ನಾಟಕದಲ್ಲಿ ಸಿನಿಮಾ ರಂಗದಲ್ಲಿರುವವರು ರಾಜಕೀಯವಾಗಿ ಪ್ರಬುದ್ಧತೆಯಿಂದ ನಡೆಯುವುದು ಬಹಳ ಕಡಿಮೆ! ರಾಜಕುಮಾರ್ ರವರು ರಾಜಕೀಯವಾಗಿ ಪ್ರಬುದ್ಧತೆ ಇದ್ದರೂ ಕೂಡ ಸಕ್ರಿಯವಾಗಿರಲಿಲ್ಲ. ಆದರೆ, ಉಪ್ಪಿದಾದಾರವರ ಈ ನಿರ್ಧಾರ ನಿಜಕ್ಕೂ ಕರ್ನಾಟಕಕ್ಕೊಬ್ಬ ಒಳ್ಳೆಯ ನಾಯಕನನ್ನೂ ನೀಡಬಹುದೆಂಬ ನಿರೀಕ್ಷೆ ಸಹಜವೇ!!

2011 ರಲ್ಲಿ ಅಣ್ಣಾ ಹಜಾರೆ  ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಉಪೇಂದ್ರವರು ಬಹಳ ಆಸಕ್ತಿ ವಹಿಸಿದ್ದರು! ಅಲ್ಲದೇ, ತಮ್ಮ ಸಂಪೂರ್ಣ ಬೆಂಬಲವನ್ನೂ ನೀಡಿದ್ದರು. ಅಣ್ಣಾ ಹಜಾರೆಯ ಆಪ್ತರಾಗಿದ್ದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಆರಂಭಿಸಿದಾಗ ರಾಜಕೀಯಕ್ಕೆ ತನ್ಮೂಲಕ ಪ್ರವೇಶ ಮಾಡಲು ತಯಾರಿ ನಡೆಸಿದ್ದರು. ಆದರೆ, ಕೇಜ್ರಿವಾಲರ ಭ್ರಷ್ಟಾಚಾರ ಬಯಲಾದ ಮೇಲೆ ಸ್ವಲ್ಪ ಕಾಲ ಮೌನವಾಗಿದ್ದ ಉಪೇಂದ್ರ ರವರು ಮೋದಿಯವರ ಡಿಮೊನೈಟೇಶನ್ ವಿಚಾರದಲ್ಲಿ ಬೆಂಬಲಕ್ಕೆ ನಿಂತರು.

ನಾಲ್ಕು ದಿನದಿಂದ ತೆರಿಗೆ ಅಧಿಕಾರಿಗಳು ಇಂಧನ ಸಚಿವ ಡಿಕೆಶಿ ಯ ಬೆನ್ನು ಬಿದ್ದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ! ಎಲ್ಲವೂ ತೋರಿಸಿದ್ದು ಭ್ರಷ್ಟ ರಾಜಕಾರಣಿಗಳೆಂದೇ! ಆದರೆ, ಅದಕ್ಕೆ ಸರಿಯಾಗಿ ಉಪೇಂದ್ರರವರು ಟ್ವೀಟ್ ಮಾಡಿದರು.
‘ರಾಜಕೀಯ ಬೇಡ, ಪ್ರಜಾಕೀಯ ಬೇಕು. ಇವತ್ತು ಅವರನ್ನು ನಾವು ದೂಷಿಸುತ್ತೇವೆ, ಆದರೆ ಅವರು ಭ್ರಷ್ಟರಾಗಲು ನೇರ ಕಾರಣ ನಾವೇ ಅಲ್ಲವೇ?!’ ಎಂದು ಕೇಳುವ ಮೂಲಕ ಹೊಸ ಚಿಂತನೆಗೊಂದು ಅವಕಾಶ ನೀಡಿದ್ದಾರೆ! ಅವರ ದೂರದೃಷ್ಟಿಯ ವಿಚಾರಧಾರೆಗೆ ಇದಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿದೆಯೇ/?!

“‘ಆದಾಯ ತೆರಿಗೆ ಇಲಾಖೆ ದಾಳಿಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಕೊಂಡು ಸಾರ್ವಜನಿಕರು ವೀಕ್ಷಿಸುವಂತೆ ಬಿಡುಗಡೆಗೊಳಿಸಬೇಕು. ಜನರಿಗೆ ಸತ್ಯವನ್ನು ತಿಳಿದುಕೊಳ್ಳುವ ಹಕ್ಕಿದೆ. ವಿಡಿಯೋ ಪ್ರದರ್ಶಿಸುವುದಕ್ಕೆ ಯಾಕೆ ಅವಕಾಶ ಕೊಡಬಾರದು?!”

“ನಮಗೆ ರಾಜಕಾರಣ, ರಾಜಕೀಯ, ರಾಜನೀತಿ ಬೇಡ. ನಮಗೆ ಪ್ರಜಾಕಾರಣ, ಪ್ರಜಾಕೀಯ ಹಾಗೂ ಪ್ರಜಾನೀತಿ ಬೇಕು.”

ಸತ್ಯ! ಅವರು ಹೇಳುವ ಈ ಮಾತುಗಳ ಹಿಂದೆ ಬಹಳಷ್ಟು ಅರ್ಥವಿದೆ! ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯ ಪ್ರವೇಶಿಸಿದ ನಂತರ ಆತ ರಾಜನಾಗಿಬಿಡುತ್ತಾನೆ. ರಾಜನ ದರ್ಬಾರಿನ ಅವಕಾಶವನ್ನು ಕಲ್ಪಿಸಿಕೊಡುವುದು ನಾವೇ ಅಲ್ಲವೇ?! ರಾಜಕಾರಣಿಯನ್ನು ರಾಜನ ಹಾಗೆ ಬಿಂಬಿಸಿ ಅತಿಯೆನ್ನುವಷ್ಟು ವಿಧೇಯತೆಯ ಮೂಲಕ ‘ರಾಜನ’ ಹಾಗೆ ಆಸ್ತಿ ಗಳಿಸಲು ಅವಕಾಶ ಕೊಡುವುದು ನಾವೇ ಎಂಬುವ ಒಂದು ವಾಸ್ತವದ ಅರಿವು ನಿಜಕ್ಕೂ ಈ ಸಮಾಜದ ಇಂದಿನ ಸ್ಥಿತಿಗತಿಯನ್ನು ಅವಲೋಕಿಸಲೊಂದು ಸಾಧನವೇ!

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಪ್ಪುಹಣದ ವಿರುದ್ಧ ಡಿಮೊನಟೈಸೇಷನ್ ಹಾಗೂ ಜಿಸ್ ಟಿ ಪ್ರಸ್ತುತ ಪಡಿಸಿದಾಗ ಅವರ ನಿರ್ಧಾರವನ್ನು ಹೃದಯಪೂರ್ವಕವಾಗಿ ಗೌರವಿಸಿದ ಸಿನಿಮಾ ರಂಗದ ಕಲಾವಿದರಲ್ಲಿ ಇವರೂ ಒಬ್ಬರು. ದೇಶದ ಹಿತದ ಪ್ರಶ್ನೆ ಬಂದಾಗ ಹಿಂಜರಿಕೆಯಿಲ್ಲದೇ ಅಭಿಪ್ರಾಯ ಹಾಗೂ  ಮಾರ್ಗದರ್ಶನ ನೀಡುವ ಉಪೇಂದ್ರ ರವರು ಈ ದೇಶದ ಪ್ರತಿ ಸವಲತ್ತುಗಳನ್ನೂ ಅನುಭವಿಸಿ ಪಾಕಿಸ್ಥಾನವೇ ಸ್ವರ್ಗ ಎಂದು ಬೊಗಳುವ ಅದೆಷ್ಟೋ ಸಿನಿಮಾ ರಂಗದವರಿಗಿಂತ ಬಹಳ ದೂರವೇ ನಿಲ್ಲುತ್ತಾರೆ.

ಉಪ್ಪಿದಾದಾ ಬಿಜೆಪಿ ಸೇರುತ್ತಾರೆಯೇ?! ಉತ್ತರ ಬಹುತೇಕ ಖಚಿತವಾಗಿದೆ! ಪ್ರಾರಂಭದಿಂದಲೂ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದ  ಉಪೇಂದ್ರರವರು ಸಿದ್ಧಾಂತಗಳ ಪ್ರಶ್ನೆ ಬಂದಾಗ, ನ್ಯಾಯ ನೀತಿಗಳ ಪ್ರಶ್ನೆ ಬಂದಾಗ  ಎದುರಲ್ಲೇ ಪ್ರಶ್ನೆ ಮಾಡುತ್ತಾ ಬಂದಿದ್ದಾರೆ. ಆದರೆ, ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಉಪೇಂದ್ರರವರ ಬೆಂಬಲ ಹಾಗೂ ಮೋದಿಯವರ ಜೊತೆ ಕೈಗೂಡಿಸುವ ಪ್ರತಿ ಲಕ್ಷಣಗಳೂ ಎದ್ದು ಕಾಣುತ್ತಿದೆ. ಅದರಲ್ಲಿಯೂ, ಕರ್ನಾಟಕದ ಸರಕಾರದ ಹಗರಣಗಳ ವಿರುದ್ಧ ಪ್ರತಿಕ್ರಿಯಿಸಿದ್ದ ಅವರ ನಡೆ ನಿಜಕ್ಕೂ ಒಬ್ಬ ಉತ್ತಮ ನಾಯಕನಾಗುವಲ್ಲಿ ಕರೆದೊಯ್ಯಬಹುದು. ರಾಜ್ಯ ಬಿಜೆಪಿಯಲ್ಲಿ ಉಪೇಂದ್ರರವರಿಗೆ ಅವಕಾಶ ಕೊಡುವ ಎಲ್ಲಾ ಹಾದಿಗಳೂ ಗೋಚರವಿರುವುದರಿಂದ ಉಪ್ಪಿದಾದಾ ಬಹುತೇಕ ಮಟ್ಟಿಗೆ  ಬಿಜೆಪಿ ಪಕ್ಷದ ಕಡೆ ಕೈ ಜೋಡಿಸುವುದು ಖಚಿತವಾಗಿದೆ.

ಕರ್ನಾಟಕದ ಸಿನಿಮಾ ರಂಗದಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ.  ಹಿಂದೆಯೂ ‘ಶಂಕರ್ ನಾಗ್, ರಾಜಕುಮಾರ್’ ರಂತಹವರು ರಾಜಕೀಯವಾಗಿದ್ದರೂ ಸಹ ಅಷ್ಟು ಸಕ್ರಿಯವಾಗಿದ್ದದ್ದು ವಿರಳವೇ! ಆದರೆ, ಇವತ್ತಿನ ಸಿನಿಮಾರಂಗದಲ್ಲಿಯ ಕಲಾವಿದರೂ ರಾಜಕೀಯವಾಗಿಯೂ ಸಕ್ರಿಯವಾಗುತ್ತಿರುವುದು ಒಂದಷ್ಟು ಬದಲಾವಣೆಗಳಿಗೆ ಎಡೆ ಮಾಡಬಲ್ಲಹುದೇನೋ! ಅದು ‘ರಮ್ಯಾಳಂತಹ ಅರೆ ಬುದ್ಧಿ ಪಾಕಿ ಪದ್ಮಾವತಿ’ ಯಂತಹ ದ್ರೋಹಿಗಳು ರಾಜಕೀಯಕ್ಕೇ ಕಪ್ಪು ಚುಕ್ಕೆಯಾಗಿದ್ದರೂ ಉಪೇಂದ್ರರಂತಹ ‘ದೂರಾಲೋಚನೆಯುಳ್ಖ ದೇಶಭಕ್ತ ದಾದಾ’ ಎಣಿಸಿದಂತೆ ರಾಜಕೀಯಕ್ಕೆ ಪ್ರವೇಶಿಸಿದರೆ ಕರ್ನಾಟಕದ ರಾಜಕೀಯದ ನಡೆಯ ಹಾದಿ ಬೇರೆಯಾಗುವುದರಲ್ಲಿ ಸಂಶಯವಿಲ್ಲ.

Tags

Related Articles

Close