ಅಂಕಣ

ನಿಜವಾಗಲೂ ಭಾರತದ ತಾಯಂದಿರನ್ನು ಅವಮಾನಿಸಿದ್ದು ಮಾಜಿಸಚಿವ ಸುರೇಶ್ ಕುಮಾರ್ ರವರಾ ಅಥವಾ ಎಡಪಂಥೀಯರಾ?!!!

ಮೊನ್ನೆ ಮೊನ್ನೆಯಷ್ಟೇ ಗೌರೀ ಲಂಕೇಶ್ ಹತ್ಯೆಯನ್ನಿಟ್ಟುಕೊಂಡು ತಿರುಪೆ ಎತ್ತಿದ್ದು ಸ್ವಲ್ಪ ಸಾರ್ಥಕವಾಯಿತೆಂದು ನರಿಗಳೆಲ್ಲ ಊಳಿಡಲು ಶುರು ಮಾಡಿದ್ದವಷ್ಟೇ! ಗೌರಿಯ ಸಾವಿನಿಂದ ನೂರಾರು ಗೌರಿಗಳು ಹುಟ್ಟುತ್ತಾರೆ ಎಂದೆಲ್ಲ #ನಾನುಗೌರಿ, #IamGouri ಅಂತೆಲ್ಲ ಬಾಯಿಬಡಿದುಕೊಂಡಿದ್ದ ಎಡಪಂಥೀಯರಿಗೆ ಬಿಜೆಪಿಯ ಸುರೇಶ್ ಕುಮಾರ್ ಹಂಗೇ ಸುಮ್ಮನೇ ಒಂದು ಪ್ರಶ್ನೆ ಕೇಳಿದ್ದಾರೆ!

ಪ್ರತಿರೋಧ ಸಮಾವೇಶದಲ್ಲಿ ಒಬ್ಬ ತಾಯಿ ‘I am Gauri’ ಎಂದು ಬರೆದಿದ್ದ ಫಲಕವನ್ನು ಉಲ್ಟಾ ಹಿಡಿದುಕೊಂಡಿದ್ದನ್ನು ಪ್ರಶ್ನಿಸಿ “ಈ ಚಿತ್್ರ ಏನು ಹೇಳುತ್ತದೆ?!’ ಎಂದು ಫೋಟೋ ಹಾಕಿದ್ದಕ್ಕೆ ಇಡೀ ಎಡಪಂಥೀಯರು ನೆಲದ ಮೇಲೆಲ್ಲ ಬಿದ್ದು ಎದೆ ಎದೆ ಬಡಿದುಕೊಳ್ಳುತ್ತಿದ್ದಾರೆ!

ಅದರಲ್ಲೂ, ಸಿಕ್ಕಾಪಟ್ಟೆ ತಳಸ್ಪರ್ಶಿ ಸಂವೇದನೆಗೆ ಹೊಡೆತ ಬಿದ್ದಿರುವುದು ಅಮೀನ್ ಮಟ್ಟುವಿಗೇ ಬಿಡಿ! ಕಳೆದ ವರ್ಷದಲ್ಲಿ ಒಂದನ್ನು ಮಾಡಲು ಇನ್ನೇನೋ ಮಾಡಿದ್ದ ಮಟ್ಟುಗೆ ಮೆಟ್ಟು ಬಿದ್ದಿದ್ದರೂ ಆಸಾಮಿಗೆ ಮರ್ಯಾದೆಯೇನೂ ಇಲ್ಲ ಎಂಬಂತೆ ವರ್ತಿಸುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ!

‘ಇದು ತಾಯಂದಿರಿಗೆ ಮಾಡಿದ ಅವಮಾನ! ಸುರೇಶ್ ರವರು ಕ್ಷಮೆ ಕೇಳಬೇಕು’ ಎಂದೆಲ್ಲ ಬಡಿದುಕೊಂಡಿರುವ ಅಮೀನ್ ಮಟ್ಟು ಹಾಗೂ ಎಡಪಂಥೀಯರಿಗೆ ಬಹುಷಃ ಘನವೆತ್ತ ಗೌರೀ ಲಂಕೇಶ್ ಳ ದತ್ತುಪುತ್ರ ಅವನ್ಯಾರೋ ಜಿಗ್ನೇಶ್ ಮೇವಾನಿ ಮೋದಿಯ ತಾಯಿಯ ಬಗ್ಗೆ ಮೈಕು ಹಿಡಿದು ನಾಲಗೆ ಹರಿ ಬಿಟ್ಟಾಗ, ಯಾವ
ಎಡಪಂಥದವರಿಗೂ ಬಹುಷಃ ಮಾತೃತ್ವದ ತಳಸ್ಪರ್ಶಿ ಸಂವೇದನೆಯಾಗಿರಲೇ ಇಲ್ಲ ಎಂದೆನಿಸುತ್ತೆ! ಅದೂ ಹೋಗಲಿ, ಗೌರೀ ಲಂಕೇಶ್ ಸಂಘದವರ ಹೆಣ್ಣು ಮಕ್ಕಳಿಗೆಲ್ಲ ಬಾಯಿಗೆ ಬಂದ ಹಾಗೆ ಹೇಳಿದ್ದು ಯಾವ ತಾಯಿಗೂ ಮಾಡಿದ ಅಪಮಾನವಾಗಿರಲೇ ಇಲ್ಲ ಇವಕ್ಕೆ!

ಆಗೆಲ್ಲ, ಅಪಮಾನವಾಯಿತು, ಮಾನ ಹೋಯಿತು ಎಂದು ಬಾಯಿ ತೆಗೆಯದೇ ಕುಳಿತುಕೊಂಡ ಈ ಎಡಪಂಥದವರು ಈಗ ಸುರೇಶ್ ಕುಮಾರ್ ಪ್ರಶ್ನಿಸಿದ್ದಕ್ಕೆ
ಎಗರಿಕೊಂಡು ಬಿದ್ದಿದ್ದಾರೆ.. ಮೇದಿದ್ದು ಜಾಸ್ತಿಯಾಗಿ ಮೇವಾನಿ ಅವತ್ತು ಮೋದಿಯ ತಾಯಿಯನ್ನು ಪ್ರಶ್ನಿಸಿದನಲ್ಲ, ಯಾವೊಬ್ಬನೂ ಸಭೆಯಲ್ಲೆದ್ದು ಕೇಳಲೇ ಇಲ್ಲ! ತಿರುಗಿ ‘ಮೋದಿ ಬಗ್ಗೆ ಮಾತನಾಡು, ಅವರ ಅಮ್ಮನ ಬಗ್ಗೆ ಅಲ್ಲ. ಸ್ವಲ್ಪ ಮರ್ಯಾದೆ’ ಎಂದು ಪ್ರಶ್ನಿಸಲೇ ಇಲ್ಲ! ಬದಲಿಗೆ ಚಪ್ಪಾಳೆಗಳು ಶಿಳ್ಳೆಗಳು!

ಬಿಡಿ! ಈ ಮಟ್ಟುಗೆ ಪ್ರತಿರೋಧ ಸಭೆಯಲ್ಲಿ ವಾಕಿಟಾಕಿ ಹಿಡಿದು ಮೋದಿಯ ವಿರುದ್ಧ ಅರಚುತ್ತಲೇ ಓಡಾಡುತ್ತಿದ್ದವನಿಗೆ ಈಗ ತನ್ನ ತಾಯಿಯ ನೆನಪಾಗೋಗಿದೆ! ಪಾಪ!

‘ನಮ್ಮ ತಾಯಿಯೂ ಅನಕ್ಷರಸ್ಥೆ, ಆಕೆಗೆ ಅಕ್ಷರಗಳೆಲ್ಲ ಗೊತ್ತಿಲ್ಲ. ಅದೇ ರೀತಿ ಈ ತಾಯಿಗೂ ಅಕ್ಷರಗಳೆಲ್ಲ ಗೊತ್ತಿಲ್ಲ. ಸುರೇಶ್ ಕುಮಾರ್ ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಕ್ಷಮೆ ಕೇಳಲೇಬೇಕು.’ ಎಂದು ಬೊಬ್ಬಿಡುತ್ತಿರುವ ಮಟ್ಟು ಹಾಗೂ ಅವನ ಹಿಂಬಾಲಕರಾದವರಿಗೆಲ್ಲ ತಳಸ್ಪರ್ಶಿ ಸಂವೇದನೆಯ ಅರಿವಾದದ್ದು ಒಬ್ಬ ಬಿಜೆಪಿಯ ಪಕ್ಷದವರು ಪ್ರಶ್ನಿಸಿಬಿಟ್ಟರೆಂಬುದಕ್ಕೆ ಮಾತ್ರ!

ಈ ಹುಚ್ಚರಂತೆ ಮೈ ಮುರಕೊಂಡು ಬೀಳುವುದೆಲ್ಲ ಇದೆಯಲ್ಲ, ಅದು ಈ ‘middle – class’ ಜನರ ಹಿಪಾಕ್ರಸಿಗಳಷ್ಟೇ!

ಅಲ್ಲ ಅಮೀನ್ ಮಟ್ಟುರವರೇ?! ಇಷ್ಟೆಲ್ಲ ಪ್ರಶ್ನಿಸೋ ನಿಮಗೆ ನೈತಿಕತೆ ಅನ್ನುವುದೇನಾದರೂ ಇದೆಯೇ?! ಸುರೇಶ್ ಕುಮಾರ್ ರ ನಯವಾದ ಮಾತುಗಳಿಗೇ ನೀವು ತಾಯಿಯ ಬಗ್ಗೆ ಅಷ್ಟೆಲ್ಲ ಗೌರವವಿರುವಂತೆ ರೇಗಾಡುವಾಗ, ನಿಮ್ಮ ಮೇವಾನಿ ಮೋದಿ ತಾಯಿಯ ಬಗ್ಗೆ ಬೊಗಳುವಾಗ ಎಲ್ಲಿ ಹೋಗಿತ್ತು ನಿಮ್ಮ ಗೌರವ?! ನಿಮಗೆ ಪ್ರಜ್ಞೆ ಇರಲಿಲ್ಲವೇ ಅಥವಾ ತಾಯಿಯ ಬಗ್ಗೆ ಅರಿವಿರಲಿಲ್ಲವೇ?!

ಅನಕ್ಷರಸ್ಥ ತಾಯಿಗೆ ಅದಾವುದೋ ಕಚಡಾ ಫಲಕ ಕೊಟ್ಟು ಮರ್ಯಾದೆ ತೆಗೆದದ್ದು ಅದ್ಯಾವ ನಿಮ್ಮ ‘ಗೌರವದ’ ಕೆಟಗರಿಯಲ್ಲಿ ಬರುತ್ತದೆ?!

ನಿಮ್ಮ ತಲೆಕೆಟ್ಟ ಸಿದ್ಧಾಂತಗಳನ್ನೆಲ್ಲ ನೀವೇ ಹೇಳುವ ಅನಕ್ಷರಸ್ಥ ತಾಯಿ ಅರ್ಥೈಸಬಲ್ಲಳು ಸ್ವಾಮಿ?! ಅಂತಹ ಮುಗ್ಧರನ್ನು ನಿಮ್ಮ ಪ್ರತಿರೋಧ ಸಮಾವೇಶಕ್ಕೆ ಜನಗಳ ಕೊರತೆ ಬಿದ್ದು ಬಳಸಿಕೊಂಡಿದ್ದು ಯಾವ ಪೌರುಷ?!

ಹೋಗಲಿ! ನಿಮ್ಮ ತಿರುಪೆ ಎತ್ತುವ ಬಳಗದಲ್ಲಿ ಮಕ್ಕಳ ಹೆತ್ತ ತಾಯಂದಿರೂ ಇರಬೇಕಲ್ಲವಾ?! ಎಲ್ಲಿ ಹೋಗಿತ್ತು ಅವತ್ತಿನ ಮಾತೃತ್ವ?! ಒಬ್ಬ ಮೇವಾನಿ ‘ನಾಲಾಯಕ್ ಮಗನನ್ನು ಹುಟ್ಟಿಸಿದೆ’ ಎಂದಾಗಲೇ, ಅಲ್ಲಿಯೇ ಮೆಟ್ಟು ಬೀಸಿದ್ದರೆ ಅವರ ಮಾತೃತ್ವಕ್ಕೆ ಸ್ತ್ರೀ ತತ್ವಕ್ಕೆ ಅವರೆಲ್ಲ ನ್ಯಾಯ ಒದಗಿಸುತ್ತಿದ್ದರೇನೋ! ಅದು ಹೇಗೂ ನಡೆಯದ ಸಂಗತಿ ಬಿಡಿ!

ದಕ್ಷ ಅಧಿಕಾರಗಳ ಹತ್ಯೆಯಾದಾಗಲೆಲ್ಲ ಚಾರಿತ್ರ್ಯದ ಬಗ್ಗೆಯೆಲ್ಲ ಪ್ರಶ್ನಿಸುತ್ತಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ತಳಸ್ಪರ್ಶಿ ಸ್ತ್ರೀ ಸಂವೇದನೆ?!

ಅಯ್ಯೋ!! ಯಾವತ್ತೂ ಸಮಾಜದಲ್ಲಿ ಏನಾಗ್ತಿದೆ ಎಂದು ತಲೆಕೆಡಿಸಿಕೊಳ್ಳದೇ ಬಣ್ಣ ಹಚ್ಚಿಕೊಂಡೇ ಇರುತ್ತಿದ್ದ ಪ್ರಕಾಶ್ ರೈ ಗೌರಿಯ ಹತ್ಯೆಯಾಗುತ್ತಿದ್ದ ಹಾಗೇ,
‘ಏನಾಗುತ್ತಿದೆ ಕರ್ನಾಟಕದಲ್ಲಿ?!’ ಎಂದೆಲ್ಲ ತಾನೊಬ್ಬ ದೇಶದ ಹಿತ ಕಾಯುವವ ಎಂಬಂತೆ ಬಿಂಬಿಸಿ ಕೊಚ್ಚಿದ್ದೇ ಕೊಚ್ಚಿದ್ದು. ಆದರೆ, ಈ ಆಸಾಮಿ ಶರತ್, ಕಟ್ಟಪ್ಪ,
ಪ್ರಶಾಂತ್ ಪೂಜಾರಿ, ಡಿ.ಕೆ.ರವಿ, ಗಣಪತಿಯವರದೆಲ್ಲ ಹತ್ಯೆಯಾದಾಗ ಪ್ರಶ್ಜಿಸುವ ಧೈರ್ಯವನ್ನೇ ತೋರಲಿಲ್ಲ. ತನ್ನ ಪಾಡಿಗೆ ತಾನು ನಟನೆ ಮಾಡಿಕೊಂಡು ಉಳಿದಿದ್ದರೆ ಬಹುಷಃ ಕರ್ನಾಟಕದೆದುರಿಗೆ ಮರ್ಯಾದೆ ಹೋಗುತ್ತಿರಲಿಲ್ಲವೇನೋ! ಎಡಪಂಥೀಯರ ಜೊತೆ ತಿರುಪೆ ಎತ್ತಲು ಕೈ ಜೋಡಿಸಿದ್ದೇ, ಕರ್ನಾಟಕ ಕೆರ ತೆಗೆದುಕೊಂಡು ಅಟ್ಟಾಡಿಸಿ ಬಿಟ್ಟಿತು!

ಇಂತಹ ಮಟ್ಟು, ಚೇ ‘ಲಾ’, ರೈ ಮತ್ತವರ ಗ್ಯಾಂಗುಗಳೆಲ್ಲ ನಾಲಿಗೆ ಇದೆ ಎಂದು ಹರಿಬಿಡಬಹುದು. ಆದರೆ, ಬಿಜೆಪಿಯ ಸುರೇಶ್ ಕುಮಾರ್ ಪ್ರಶ್ನೆ ಮಾಡುವ
ಹಾಗಿಲ್ಲವೆಂದರೆ ಯಾವ ಸೀಮೆಯ ನ್ಯಾಯ?! ಅಭಿವ್ಯಕ್ತಿ ಸ್ವಾತಂತ್ರ್ಯ ಇವಕ್ಕೆ ಮಾತ್ರ ಬರೆದು ಸಹಿ ಹಾಕಿಸಿಕೊಂಡಿದೆಯಾ?!

ಕಂಡ ಕಂಡ ಅಮಾಯಕರನ್ನೆಲ್ಲ, ಆಮಿಷಕ್ಕೊಳಪಡಿಸಿ ಫಲಕ ಹಿಡಿಸಿ ತಿರುಪೆ ಎತ್ತಿದರಲ್ಲ, ನಿಮಗೆಲ್ಲ ಏನು ತೆಗೆದುಕೊಂಡು ಆರತಿ ಎತ್ತಬೇಕು ಹೇಳಿ?!

– ತಪಸ್ವಿ

Tags

Related Articles

Close