ಅಂಕಣ

ನಿಮಗಿದು ಗೊತ್ತೇ ? ಸೋನಿಯ ನೇತೃತ್ವದ ಯು.ಪಿ.ಎ ಸರ್ಕಾರ ಕಾಶ್ಮಿರದ ಸಿಯಾಚಿನ್ ಭೂ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡ ಬಯಸಿತ್ತು : ವಿಕಿಲೀಕ್ಸ್

ಭಾರತ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆಸಿದ ಅದೆಷ್ಟೋ ಹಗರಣಗಳನ್ನು, ಭ್ರಷ್ಟಾಚಾರಗಳನ್ನು, ಲೂಟಿ-ಗಲಭೆಗಳ ಬಗ್ಗೆ ಕೇಳಿರಬಹುದು. ಭಾರತದ ಮುಕುಟ ಕಾಶ್ಮೀರಕ್ಕಾಗಿ ನಾವು ಇಂದಿಗೂ ಹೋರಾಡುತ್ತಲೇ ಇದ್ದೇವೆ. ಕಳೆದ 33 ವರ್ಷಗಳಲ್ಲಿ 900 ಸೈನಿಕರು, ಶತ್ರುಗಳ ದಾಳಿಗೆ ಹುತ್ಮಾತರಾದದ್ದನ್ನು ನಾವು ಕೇಳಿದ್ದೇವೆ. ಕಡಿದಾದ ಮತ್ತು ಅತ್ಯಂತ ಕ್ಲಿಷ್ಟಕರವಾದ ಸಿಯಾಚಿನ್‍ನಲ್ಲಿ ಪಾಕಿಸ್ತಾನಿ ಯೋಧರನ್ನು ತಡೆಯಲು ಭಾರತೀಯ ಸೈನ್ಯದ ಒಂದಷ್ಟು ಯೋಧರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಬೇಕಾದರೆ ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭಾರತದ ಮುಕುಟ ಕಾಶ್ಮೀರದ ಸಿಯಾಚಿನ್ ಭೂ ಪ್ರದೇಶವನ್ನು ಪಾಕಿಸ್ತಾನಕ್ಕೆ ದಾನವಾಗಿ ನೀಡ ಬಯಸಿದ್ದು ನಿಮಗೆ ಗೊತ್ತೇ?…. ಮಾಜಿ ಪ್ರಧಾನಿಗಳು ಇಂತಹ ಘೋರ ಕೃತ್ಯ ಮಾಡಿದ್ದಾರೆ ಎಂದರೆ ನಂಬ್ತೀರಾ?..

ಹೌದು… ಇಂತಹ ಆತಂಕಕಾರಿ ಸುದ್ದಿಯನ್ನು ಕೆಲ ದಿನಗಳ ಹಿಂದೆ ವಿಕಿಲೀಕ್ಸ್ ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾರತ ಸರ್ಕಾರವು ಕಾಶ್ಮೀರದ ವಿಷಯವನ್ನು ನಿರ್ವಹಿಸುವಲ್ಲಿ ಅಸಮರ್ಥವಾಗಿತ್ತು, ಅಲ್ಲದೇ ಪಾಕಿಸ್ತಾನದ ಕುಮ್ಮಕ್ಕಿನಿಂದ ಜಮ್ಮುಕಾಶ್ಮೀರದಲ್ಲಿ ಆಗುತ್ತಿದ್ದ ಗಲಭೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ದಾಳಿ ಸಂಭವಿಸಿತ್ತು.

ಈ ದಾಳಿಯಿಂದ ಕಂಗೆಟ್ಟ ಮನಮೋಹನ್ ಸಿಂಗ್ ಸರ್ಕಾರ ಪಾಕಿಸ್ತಾನದ ಮುಂದೆ ತಲೆಬಾಗಿ ತನ್ನನ್ನು ಒಳ್ಳೆಯವರೆಂದು ತಿಳಿದುಕೊಳ್ಳಲು ಸಿಯಾಚಿನ್ ಅನ್ನು ಅವರಿಗೆ ದಾನವಾಗಿ ಕೊಡ ಬಯಸಿದ್ದರಂತೆ. ತಾಯ್ನಾಡಿನ ಒಂದು ಅಂಗವನ್ನೇ ದಾನವಾಗಿ ಕೊಡುವಂತಹ ಅಧಿಕಾರವನ್ನು ಇವರಿಗೆ ಕೊಟ್ಟವರಾದ್ರೂ ಯಾರು?.. ಎಷ್ಟೋ ಸೈನಿಕರ ಹತ್ಯೆಯಾದ್ರೂ ಏನೂ ಹೇಳದ ಸರ್ಕಾರ ಏಕಾಏಕಿ ದಾನವಾಗಿ ಕೊಟ್ಟಿದ್ದಾರೂ ಹೇಗೆ? ಇಂತಹ ಅಗೋಚರ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತೇ ಅಲ್ವೇ…

ಇಂತಹ ಮಾಸ್ಟರ್ ಮೈಂಡ್ ಇರೋದು ಇಟಲಿಯ ಸೋನಿಯಾ ಎಂಬುದು ಎಲ್ಲರಿಗೂ ತಿಳಿದ ವಿಷಯ ಬಿಡಿ. ಆದರೆ ಸಿಯಾಚಿನ್ ಪ್ರದೇಶವನ್ನು ದಾನ ಮಾಡಿದರೆ ಪಾಕಿಸ್ತಾನ ತನ್ನ ನರಿಬುದ್ದಿ ಬಿಡಬಹುದು ಎಂದು ತಿಳಿದ ಸರ್ಕಾರ ದಾನ ಮಾಡಿದ್ದದ್ರೂ ಯಾಕೆ ಗೊತ್ತ?.  ಗಡಿರೇಖೆಯಲ್ಲಿ ಪಾಕಿಸ್ತಾನಿಗಳ ದಾಳಿಗಳನ್ನು ನಿಲ್ಲಿಸಬಹುದು ಎನ್ನುವುದು ಅವರ ಪ್ಲಾನ್ ಆಗಿತ್ತು. ಅದಷ್ಟೇ ಅಲ್ಲದೇ ಮುಂದೆ ತಮ್ಮದೇ ಸರ್ಕಾರ ಆಡಳಿತಕ್ಕೆ ಬರಬಹುದು ಎಂದು ತಿಳಿದಿದ್ದರು.

1956-57ರಲ್ಲಿ ನೆಹರು ಸರಕಾರ ಆಡಳಿತದಲ್ಲಿ ಇರಬೇಕಾದರೆ ಈ ಪ್ರದೇಶದ ಸರ್ವೇ ನಡೆಸಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಚೀನಾ ವಿರುದ್ಧದ 1962ರ ಯುದ್ಧದಲ್ಲಿ ದೇಶಕ್ಕಾದ ಅವಮಾನದ ಗಾಯದ ಮೇಲೆ ಬರೆ ಎಳೆದಂತೆ ಗುಟ್ಟಾಗಿ ಇದೇ ಕಾಶ್ಮೀರದ ಅಕ್ಸಾಯ್‍ಚಿನ್ ಪ್ರದೇಶವನ್ನು ಬಿಟ್ಟುಕೊಟ್ಟ ನೆಹರು “ಈ ಪ್ರದೇಶದಲ್ಲಿ ಹುಲ್ಲೂ ಬೆಳೆಯುವುದಿಲ್ಲ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ.

ಆದರೆ ಈ ಎಲ್ಲಾ ಪ್ಲಾನ್‍ಗೆ ಜಗ್ಗದೆ ಮಾಸ್ಟರ್ ಬ್ರೇನ್ ಉಪಯೋಗಿಸಿದ ಸೋನಿಯಾ ಸರ್ಕಾರವನ್ನೇ ಸಮರ್ಥವಾಗಿ ಎದುರಿಸಿ ಸಿಯಾಚಿನ್‍ನನ್ನು ಭಾರತದ ಕೈ ತಪ್ಪಿ ಹೋಗುವುದರಿಂದ ತಡೆದಿತ್ತು. ಒಂದು ವೇಳೆ ಕೈತಪ್ಪಿ ಹೋಗುತ್ತಿದ್ದರೆ ನೆಹರೂ ತನ್ನ ರಾಜಕೀಯ ಲಾಭಕ್ಕಾಗಿ ಅಖಂಡ ಭಾರತ ತುಂಡರಿಸಿ ಸಿಂಧ್, ಬಲುಚಿಸ್ತಾನ ಹಾಗೂ ಕಾಶ್ಮೀರದ ಅರ್ಧಭಾಗ ಕಳೆದುಕೊಂಡ ಹಾಗೇ ಸಿಯಾಚಿನ್ ಕೂಡ ಕಳೆದುಕೊಳ್ಳಬೇಕಾಗಿತ್ತು.

ಯಾವಾಗ ಪಾಕಿಸ್ತಾನ ಕಾರ್ಗಿಲ್‍ಗೆ ಮೋಸದಿಂದ ಒಳನುಸುಳಿತ್ತೋ ಆ ಸಂದರ್ಭದಲ್ಲಿ ಅತ್ಯಂತ ಬುದ್ಧಿ ಉಪಯೋಗಿಸಿದಲ್ಲದೇ ಕಠಿಣ ಪರಿಶ್ರಮದಿಂದ ಸಿಯಾಚಿನ್‍ನನ್ನು ನಾವು ಪಡೆದಿದ್ದೆವು. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಸೈನಿಕರು ತಮ್ಮ ದೇಹತ್ಯಾಗ ಮಾಡಿದ್ದರು. ಅಲ್ಲದೇ 1984ರಲ್ಲಿ ಭೂಸೇನೆ “ಆಪರೇಷನ್ ಮೇಘದೂತ”ದಲ್ಲಿ 890ಕ್ಕೂ ಹೆಚ್ಚು ಜೀವನವನ್ನೇ ತಮ್ಮ ದೇಶಕ್ಕಾಗಿ ಮುಟಿಪಾಗಿಟ್ಟ ವಿಚಾರವನ್ನು ನಾವು ಇಂದಿಗೂ ಮರೆತಿಲ್ಲ.

ಏನೇ ಆದರೂ ಕೂಡ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನಮ್ಮ ದೇಶದ ಸೈನಿಕರಿಗೆ  ಕೇವಲ ಓಟಿಗಾಗಿ, ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳನ್ನು ಮರೆತು ಶತ್ರು ರಾಷ್ಟ್ರಕ್ಕೆ ತಲೆಬಾಗ ಹೊರಟಿದ್ದು ಎಷ್ಟರ ಮಟ್ಟಿಗೆ ಸರಿ?. ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಭದ್ರತೆಗಾಗಿ ಖರ್ಚು ಮಾಡಿದ್ದಕ್ಕಿಂತ ಜಾಸ್ತಿ ಭ್ರಷ್ಟಾಚಾರದಲ್ಲಿಯೇ ಭದ್ರತೆಗೆ ಮೀಸಲಿಟ್ಟಿದ್ದ ಹಣಗಳನ್ನು ಗುಳುಂ ಮಾಡಿದ್ದರು.  ಶತ್ರು ದೇಶದಿಂದ ನಮ್ಮ ಗಡಿಯಲ್ಲಿ ಅನಿರೀಕ್ಷಿತ ದಾಳಿ ನಡೆದರೂ ಕೂಡ ನಮ್ಮ ಸೇನೆ ಪ್ರತಿ ದಾಳಿ ಮಾಡಲು ಸರ್ಕಾರದ ಆಜ್ಞೆ ಪಡೆಯಬೇಕಿತ್ತು. ಇದಲ್ಲದೆ ಸರಿಯಾದ ಸೇನಾ ಸಾಮಾಗ್ರಿಗಳು ಇಲ್ಲದ ಕಾರಣ ನಾವು ಅದೆಷ್ಟೋ ಸೈನಿಕರನ್ನು ಕಳೆದುಕೊಂಡಿದ್ದೆವು ಗೊತ್ತಿಲ್ಲ.

ಕೇವಲ ಓಟಿಗಾಗಿ,ಅಧಿಕಾರಕ್ಕಾಗಿ ದೇಶದ ಹಲವೆಡೆ ದೇಶದ್ರೋಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಯುವಜನಾಂಗವನ್ನು ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ನ ಅನೇಕ ನಾಯಕರು ಪಾಕಿಸ್ತಾನದ ಮಾಜಿ ಐಎಸ್‍ಐ ಅಧಿಕಾರಿಗಳ ಜೊತೆ ಹಾಗೂ ಉಗ್ರಗಾಮಿಗಳ ಜೊತೆ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ. ಮೋದಿಯನ್ನು ತೆಗಳಲು ಹೋಗಿ ಕಾಂಗ್ರೆಸ್ ನ ಅನೇಕ ನಾಯಕರು, ಕಾಂಗ್ರೆಸ್ ನ ಮಾಧ್ಯಮಗಳು ಹಾಗೂ ಕಾಂಗ್ರೆಸ್ ನ ಬುದ್ಧಿಜೀವಿಗಳು ವಿಶ್ವಕ್ಕೆ ಭಾರತವನ್ನೇ ನಿಕೃಷ್ಟವಾಗಿ ತೋರಿಸ ಹೊರಟಿದ್ದಾರೆ ಇದಕ್ಕೆ ಇತ್ತೀಚೆಗೆ ನಡೆದ ಕೆಲ ಘಟನೆಗಳೇ ಸಾಕ್ಷಿ (ಜೆ ಎನ್ ಯು, ಊನ, ಆಮ್ನೆಷ್ಟಿ).

ಆದರೆ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಆಡಳಿತಕ್ಕೆ ಬಂದ 6 – 7 ತಿಂಗಳುಗಳಲ್ಲಿಯೇ ಬೇಕಾದ ಸೇನಾ ಸಾಮಾಗ್ರಿಗಳನ್ನು ಖರೀದಿಸಲಾಯಿತು. ಸೇನೆಗೆ ಈಗ ಪಾಕಿಸ್ತಾನದಿಂದ ಯಾವುದೇ ರೀತಿಯ ಅನಿರೀಕ್ಷಿತ ದಾಳಿಗಳಾದರೆ ಪ್ರತಿದಾಳಿ ಮಾಡಲು ರಾಜಕಾರಣಿಗಳ ಅನುಮತಿಯನ್ನು ಪಡೆಯುವ ಅವಶ್ಯಕತೆಯೇನೂ ಇಲ್ಲ. ಯುದ್ಧದ ವಿಚಾರವಾಗಲಿ ದೇಶವನ್ನು ಕಾಪಾಡುವಲ್ಲಿಯಾಗಲಿ ಯಾವತ್ತು ನಿರ್ಲಕ್ಷ್ಯತೆಯನ್ನು ತೋರಿಲ್ಲ.

ನಮ್ಮ ಸೈನಿಕರನ್ನು ನೈತಿಕವಾಗಿ ಮಾನಸಿಕವಾಗಿ ದುರ್ಬಲಗೊಳಿಸಿದ್ದ ಯುಪಿಎ ಸರ್ಕಾರಕ್ಕೆ ಪೂರ್ಣವಿರಾಮ ಇಟ್ಟಿದ್ದಾದರೂ ಕಾಂಗ್ರೆಸ್ ಇಂದಿಗೂ ತನ್ನ ದೇಶದ್ರೋಹದ ಬುದ್ಧಿ ಬಿಟ್ಟಿಲ್ಲ.
ವಿಪರ್ಯಾಸವೆಂದರೆ ಭಾರತ ದೇಶದಲ್ಲಿ ರಾಜಕೀಯವನ್ನೇ ಬಂಡವಾಳನ್ನಾಗಿಸಿದ ಕೆಲವು ಪಕ್ಷಗಳು  ನಮ್ಮ ದೇಶದಲ್ಲಿ ಇದ್ದುಕೊಂಡು ದೇಶದ ವಿರುದ್ಧವಾಗಿ ಪೊಳ್ಳು ವದಂತಿಗಳನ್ನು ಹಬ್ಬಿಸಿ ಉಗ್ರ ಸಂಘಟನೆಗಳು ರಕ್ತಹರಿಸಿ ಸಂಪಾದಿಸಿದ ಹಣಕ್ಕೆ ಕೈಒಡ್ಡುತ್ತಾರೆ ಅಂದರೆ ಅವರು ಭಾರತೀಯರು ಎಂದೆನ್ನಬೇಕೇ. ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಬಗ್ಗೆ, ಪ್ರಧಾನಿಗಳ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಸೃಷ್ಟಿಸಿ ಶತ್ರುಗಳನ್ನು ಹುಟ್ಟುಹಾಕಿಸಲು ಹೋರಟಿದ್ದಾರೆ ಅಂದರೆ ಹೊರಗಿನ ದೇಶದ ಶತ್ರುಗಳಿಗಿಂತ ಒಳಗಿನ ದೇಶದಲ್ಲಿರುವ ಶತ್ರುಗಳ ಸಂಖ್ಯೆ ಏರುತ್ತಿದೆ ಅಂದರೆ ಇದೊಂದು ವಿಪರ್ಯಾಸವೇ ಸರಿ.

ಮೂಲ: ವಿಕಿಲೀಕ್ಸ್
– ಸರಿತಾ

Tags

Related Articles

Close