ಅಂಕಣಇತಿಹಾಸದೇಶಪ್ರಚಲಿತ

ನಿಮ್ಮ ಷಂಡತನದ ಪ್ರತೀಕವಾಗಿ ಹರಿದ ಚಪ್ಪರದ ಕೆಳಗೆ ಕೂತಿರುವೆ ನಾನು ದಶರಥ ಪುತ್ರನು!!!

ಹಿಂದೂ ಧರ್ಮದ, ಹಿಂದೂಗಳೇ ಇರುವ ಜಾಗದಲ್ಲಿ ರಾಮ ಮಂದಿರ ಸ್ಥಾಪನೆಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿರುವುದು ಮಾತ್ರ ಬಹಳ ಹಾಸ್ಯಾಸ್ಪದ ಅಲ್ವಾ?

ಹಿಂದೂಗಳು ಭಾರತದ ಬಹುಸಂಖ್ಯಾತರಷ್ಟೇ ಅಲ್ಲ ,ಹಿಂದುಗಳು ಭಾರತದ ರಾಷ್ಟ್ರೀಯರು. ಸೆಕ್ಯುಲರಿಸಂನ ಗಾಂಜಾ ಕುಡಿದವರಿಗೆ ಈ ರಾಷ್ಟ್ರ ಹಿಂದುಗಳದ್ದು ಅಂದ್ರೆ ಅರ್ಥವೇ ಆಗುವುದಿಲ್ಲ.

ಈ ರಾಷ್ಟ್ರೀಯರಿಗೆ ,100 ಕೋಟಿ ಹಿಂದೂಗಳ ಆರಾಧ್ಯ ದೇವ ,ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ಕಟ್ಟೋಕಾಗ್ತಿಲ್ವಲ್ಲ ಎಂತಹ ನಾಚಿಕೆಗೇಡು ಅಲ್ವಾ?

ಶ್ರೀರಾಮ ಕೂಗಿ ಕೂಗಿ ಹೇಳ್ತಿದಾನೆ. ನಿಮ್ಮ (ಹಿಂದುಗಳ)ಷಂಡತನದ ಪ್ರತೀಕವಾಗಿ ಹರಿದ ಚಪ್ಪರದ ಕೆಳಗೆ ಕೂತಿರುವೆ ನಾನು ಅಂತ.

ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ವಿರೋಧ ಮಾಡ್ತಿರೋರು ಬರೀ ಮುಸಲ್ಮಾನರಲ್ಲ . ಕೆಲವೊಂದಿಷ್ಟು ಅಡ್ನಾಡಿ ಬುದ್ಧಿಜೀವಿಗಳು , ಕೆಲವೊಂದಿಷ್ಟು ಅಡಕಸ್ಬಿ ಪ್ರಗತಿಪರರು ,ಕೆಲವೊಂದಿಷ್ಟು ಅರೆಬೆಂದ ಸಾಹಿತಿಗಳು ,ಕೆಲವೊಂದಿಷ್ಟು ಕಾಂಗ್ರೆಸ್ಸಿಗರು.

ಒಂದು ವೇಳೆ ಕೆಲವೊಂದಿಷ್ಟು ಹಿಂದುಗಳು ರಾಮ ಮಂದಿರಕ್ಕೆ ವಿರೋಧ ಮಾಡ್ತಿದ್ರೆ ನಿಮ್ಮ ಹುಟ್ಟಿನ ಬಗ್ಗೆ ಸಂಶಯ ಪಡಿ.

ಅಯೋಧ್ಯೆ ಹಿಂದುಗಳಿಗೆ ಯಾಕೆ ಮುಖ್ಯ ಗೊತ್ತಾ?
ಅಯೋಧ್ಯಾ ,ಮಥುರಾ,ಮಾಯಾ,ಕಾಶಿ,ಕಾಂಚಿ, ಅವಂತಿಕಾ,ಪುರಿ,ದ್ವರವತಿ ಸಪ್ತತೈಕೆ ಮೋಕ್ಷದಾಯಕ.

ಮೋಕ್ಷ ನೀಡುವ ಪವಿತ್ರ 7 ಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನ. ಸರಯೂ ನದಿ ತೀರದಲ್ಲಿರುವ ಭವ್ಯನಗರ ಅಯೋಧ್ಯೆ.

ಹಿಂದುಗಳ ಆರಾಧ್ಯದೇವ ,ಮರ್ಯಾದಾ ಪುರುಷೋತ್ತಮನ ಜನ್ಮಭೂಮಿ ಅಯೋಧ್ಯೆ.

14-15 ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ , ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದ.

ಭಾರತದಲ್ಲಿರುವ ಕೆಲ ಮುಸಲ್ಮಾನರು ರಾಮ ಮಂದಿರಕ್ಕೆ ವಿರೋಧ ಮಾಡಿ , ಬಾಬರಿ ಮಸೀದಿ ಬೇಕು ಅಂತಿದ್ದಾರೆ. ಅದಕ್ಕೆ ಕೆಲ ಸೋ ಕಾಲ್ಡ್ ಸೆಕ್ಯಲರ್ ಗಳು,ಕೆಲ ಕಾಂಗ್ರೆಸ್ಸಿಗರು ಬೆಂಬಲ ಕೊಡ್ತಿದ್ದಾರೆ.ಇದು ಭಾವನಾತ್ಮಕ ಅನ್ನೋ ಟೊಳ್ಳು ವಾದ ಮಾಡ್ತಿದಾರೆ ಇದರಲ್ಲಿ ಅವರ ಯಾವ ಭಾವನೆಯೂ ಇಲ್ಲ ಯಾಕಂದ್ರೆ ಆ ಭಯೋತ್ಪಾದಕ ಬಾಬರ್ ಈ ದೇಶದವನೇ ಅಲ್ಲ . ಅಂದಮೇಲೆ ಅವನ ಮಸೀದಿ ಇವರಿಗೆ ಬೇಕಾ? ಬೇಕು ಎನ್ನುವ ಮುಸಲ್ಮಾನನ ದೇಶ ಪ್ರೇಮವನ್ನು ನಾವು ಪ್ರಶ್ನಿಸಲೇಬೇಕು ಅಲ್ವಾ?

ಬಾಬರಿ ಮಸೀದಿಗೆ ಬೆಂಬಲ ಕೊಡ್ತಿರೋ ಕೆಲ ಮುಸಲ್ಮಾನರೇ ,ಕೆಲ ಬುದ್ಧಿ ಜೀವಿಗಳೇ ,ಕೆಲ ಕಾಂಗ್ರೆಸ್ಸಿಗರೆ ನಿಮಗೆ ಇತಿಹಾಸದ ಜ್ಞಾನವೇ ಇಲ್ವಾ ? ಬಾಬರ್ ಯಾವ ದೇಶದದವನು ಅನ್ನೋ ಸಾಮಾನ್ಯ ಜ್ಞಾನವೂ ಇಲ್ವಾ?

ಬಾಬರ್ ಮಧ್ಯ ಏಶಿಯಾದ ಉಜ್ಬೇಕಿಸ್ತಾನದವನು. ಬಾಬರ್, ಮಧ್ಯ ಏಷ್ಯಾದ ಪ್ರಸಿದ್ಧ ದಾಳಿಕೋರರ ಟರ್ಕ್ ಮೂಲದ ತೈಮೂರ ಮತ್ತು ಮೊಗಲ್ ಮೂಲದ ಚೆಂಗಿಸ್ ಖಾನ್‌ರ ರಕ್ತಸಂಬಂಧಿಯಾಗಿದ್ದ.ಇದೆಲ್ಲಾ ಗೊತ್ತಿದ್ರೂ ಆ ವಿದೇಶಿ ದಾಳಿಕೋರನ ಮಸೀದಿ ಬೇಕು ಅಂತೀರಲ್ಲಾ ನಿಮ್ಮ ದೇಶಪ್ರೇಮದ ಬಗ್ಗೆ ಪ್ರಶ್ನಿಸಬೇಕಾಗಿದೆ.

15 ನೇ ಶತಮಾನದಲ್ಲಿ ಭಯೋತ್ಪಾದಕ ಬಾಬರ್ ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು. ಭಾರತಕ್ಕೆ ಬಂದು ದಾಳಿಮಾಡಿ ಮೊಗಲ ದೊರೆ ಎನಿಸಿಕೊಂಡ.

ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮಮಂದಿರದ ಮೇಲೆ ಬಿತ್ತು .ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತೆ ಎಂದು ಭಾವಿಸಿ ತನ್ನ ಸೇನೆಯನ್ನ ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿಸಿ ಕೆಡವಿದ.

ಅದೇ ಕೆಡವಿದ ಮಂದಿರದ ಅವಶೇಷಗಳಿಂದ ಮಸೀದಿಯನ್ನು ಕಟ್ಟಿಸಿದ . ಅದಕ್ಕೆ ಜನ್ಮಸ್ಥಾನ ಮಸೀದಿ ಎಂದು ಹೆಸರಿಟ್ಟ.1985 ರವರೆಗೂ ಅದನ್ನ ಜನ್ಮಸ್ಥಾನ ಮಸೀದಿ ಅಂತಾನೇ ಕರೆಯುತ್ತಿದ್ದರು.

ಅರೇ ಜನ್ಮಸ್ಥಾನ ಮಸೀದಿ ಅಂದ್ರೆ ಯಾರ ಜನ್ಮಸ್ಥಾನ ಅನ್ನುವ ಪ್ರಶ್ನೆ ಕೇಳ್ಬಹುದು ಅನ್ಕೊಂಡು ಬಾಬರ್ ಕ್ರಿಯಾಸಮಿತಿ ,ಕಾಂಗ್ರೆಸ್ ಮತ್ತು ಬುದ್ದಿಜೀವಿಗಳು ಸೇರಿ ಬಾಬರೀ ಮಸೀದಿ ಅಂತ ಕರೆಯಲು ಪ್ರಯತ್ನ ಮಾಡಿದರು.

1949 ರ ಡಿಸೆಂಬರ್ ತಿಂಗಳಿನಲ್ಲಿ ಭಗವಂತನ ಒಂದು ಲೀಲೆ ನಡೆಯಿತು . ಆ ತಿಂಗಳಿನ ಕೊನೆಯ ವಾರದ ಒಂದು ಮಧ್ಯರಾತ್ರಿಯಲ್ಲಿ ತೊಟ್ಟಿಲಲ್ಲಿ ಮಲಗಿದ ಬಾಲರಾಮನ ಮೂರ್ತಿ ಉದ್ಭವವಾಯಿತು. ಆ ಸಮಯದಲ್ಲಿ ಭಜನೆ ಕೀರ್ತನೆಗಳು ಮೊಳಗಿದವು . ಹಳ್ಳಿ ಹಳ್ಳಿಗಳಿಂದ ಜನ ಬಾಲರಾಮನನನ್ನು ನೋಡಲು ಧಾವಿಸಿ ಬಂದಿದ್ದರು.

ಇದರಿಂದ ಗಾಬರಿಗೊಂಡ ಆಗಿನ ಪ್ರಧಾನಿ ಹಿಂದು ವಿರೋಧಿ ಕಪಟ ನೆಹರು ಆ ವಿಗ್ರಹ ಕಿತ್ತೆಸೆಯಲು ಪ್ರಯತ್ನಿಸಿದರು . ಅವರ ಆಟ ದೇವರ ಎದುರಿನಲ್ಲಿ ನಡೆಯಲಿಲ್ಲ.

ಬರೀ ನೆಹರೂ ಮಾತ್ರವಲ್ಲ ಈ ಕಾಂಗ್ರೆಸ್ ಯಾವಾಗಲೂ ಹಿಂದು ವಿರೋಧಿಯಾಗಿಯೇ ಇದೆ. 1985ರಲ್ಲಿ ರಾಮ ಮಂದಿರವನ್ನು ಮುಕ್ತಿಗೊಳಿಸಿ ಎಂದು ವಿಶ್ವಹಿಂದು ಪರಿಷತ್ತು ಆಗಿನ ಪ್ರಧಾನಿ ರಾಜೀವ್ ಗಾಂಧಿ ಹತ್ತಿರ ಹೋದಾಗಲೂ ಪರಿಣಾಮ ಶೂನ್ಯವೇ ಆಯಿತು.ಆಳುವ ದೊರೆಗಳಿಗೆ ಹಿಂದುಗಳ ಕೂಗು ಕೇಳಲೇ ಇಲ್ಲ.

ಹಿಂದುಗಳು ದಾವೆ ಹೂಡಿದ್ದಾಯಿತು ,ಕದನ ಮಾಡಿದ್ದಾಯ್ತು ,ಆತ್ಮಾಹುತಿ ಮಾಡಿದ್ದಾಯ್ತು ಎಲ್ಲಾ ಮಾಡಿ ನಿರಾಶೆಗೊಂಡರು . ಆಗ ಅಂದರೆ 1989 ನವೆಂಬರನಲ್ಲಿ ಭಾರತೀಯ ಜನತಾ ಪಕ್ಷದ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆವರೆಗಿನ 10,000km ರಥಯಾತ್ರೆ ಮಾಡಿ ಹಿಂದುಗಳಿಗೆ ಹೊಸ ಚೈತನ್ಯ ತುಂಬಿದರು.

 

ಹಿಂದು ಸಹಿಸಿಕೊಳ್ತಿದಾನೆ ಅಂದ್ರೆ ಸಹನೆ ಅವನ ದೌರ್ಬಲ್ಯವಲ್ಲ ಎಂದು ಅವನು ತನ್ನ ಕ್ಷಾತ್ರ ತೇಜವನ್ನು 1992 ಡಿಸೆಂಬರ್ 6 ಕ್ಕೆ ಪ್ರದರ್ಶಿಸಿದ .

1992 ಡಿಸೆಂಬರ್ 6 ,ನಡೆದದ್ದು ಒಂದು ಕಟ್ಟಡದ ಕುಸಿತ ,ಒಂದು ಮಂದಿರದ ನಿರ್ಮಾಣ ಮೇಲ್ನೋಟಕ್ಕೆ ಸತ್ಯ ಇರಬಹುದು.ಆದರೆ ವಾಸ್ತವವಾಗಿ ಏನಂದ್ರೆ ಭಾರತ ಅನ್ನುವ ದೇಶ ಇದೆ ಅಲ್ಲಿ ಹಿಂದು ಅನ್ನವ ಸಮಾಜ ಇದೆ ಸ್ವಾತಂತ್ರ್ಯಕ್ಕಿಂತ ಮೊದಲು ಈ ಸಮಾಜ ತುಳಿತಕ್ಕೆ ಒಳಗಾಗಿತ್ತು ,ಸ್ವಾತಂತ್ರ್ಯ ನಂತರವು ಈ ನಮ್ಮ ಹಿಂದು ಸಮಾಜವನ್ನು ತುಳಿಯುವ ,ಹಕ್ಕನ್ನು ಕಸಿಯುವ, ಸ್ವಾತಂತ್ರ್ಯವನ್ನು ಹರಣ ಮಾಡುವ ,ಸ್ವಾಭಿಮಾನವನ್ನು ಕೊಲ್ಲುವ,ಸೆಕ್ಯುಲರ್ ನೀತಿಯಿಂದಾಗಿ ಈ ಸಮಾಜ ಸಮಾಧಿಯ ಕಡೆಗೆ ಹೊರಟಿತ್ತು.ಅಂತಹ ಸಮಾಜ ಸಾಯುವುದು ಖಾತ್ರಿಯಾದಾಗ ಈ ನೆಲದ ಪ್ರತಿಯೊಬ್ಬ ಹಿಂದು ಇಡೀ ಜಗತ್ತಿಗೆ ತನ್ನ ವಿರಾಟ ರೂಪವನ್ನು ಪ್ರದರ್ಶಿಸಿದ .

ಪ್ರತಿಯೊಬ್ಬ ಹಿಂದುವಿನ ಒಂದೊಂದು ರೂಪ ಈ ಕಾಣಿಕೆ ಆ ಅಯೋಧ್ಯಯ ರಾಮ ಮಂದಿರಕ್ಕೆ
ಗ್ರಾಮ ಗ್ರಾಮಗಳಿಂದ ಹಿಂದುಗಳ ಯಾತ್ರೆ ಅಯೋಧ್ಯೆಯ ಕಡೆಗೆ
ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಆ ಪಶ್ಚಿಮದ ಅಟಕನಿಂದ ಹಿಡಿದು ಆ ಪೂರ್ವದ ಕಟಕನವರೆಗೆ ಎಲ್ಲಿ ನೋಡಿದರಲ್ಲಿ ಎಲ್ಲಿ ಕೇಳಿದರಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಅನ್ನುವ ಘೋಷಣೆಗಳು ಹಿಮಾಲಯ ಪರ್ವತಕ್ಕೆ ಅಪ್ಪಳಿಸಿ ಗ್ರಾಮ ಗ್ರಾಮಗಳಿಗೆ ಬಂದು ಪ್ರತಿಧ್ವನಿಸಿತು .ಅದುವರೆಗೆ ಜಗತ್ತಿಗೆ ಮೆಕ್ಕಾ ಗೊತ್ತಿತ್ತು ಮದಿನಾ ಗೊತ್ತಿತ್ತು, ಜೆರುಸಲೇಂ ,ವ್ಯಾಟಿಕನ್ ಗೊತ್ತಿತ್ತು.ಭಾರತ ಅನ್ನುವ ದೇಶ ಇದೆ ಅಲ್ಲಿ ಹಿಂದು ಎನ್ನುವ ಸಮಾಜ ಇದೆ ಅದಕ್ಕೊಂದು ಅಯೋಧ್ಯೆ ಅದಕ್ಕೊಂದು ಮಥುರಾ,ಅದಕ್ಕೊಂದು ಅವಂತಿಕಾ,ಅದಕ್ಕೊಂದು ಕಾಶಿ ಇದೆ ಎನ್ನುವ ದೃಷ್ಯವನ್ನ ತೋರಿಸಿಕೊಟ್ಟರು. ಇಡೀ ಜಗತ್ತಿನ ಕ್ಯಾಮರಾಗಳು ಅಯೋಧ್ಯಯ ಕಡೆಗೆ ದಿಟ್ಟಿಸಿ ನೋಡ್ತಾ ಇದ್ವು.ಹಿಂದು ತನ್ನ ಸ್ವಾಭಿಮಾನವನ್ನು ಪ್ರದರ್ಶಿಸಿದ್ದ.

1992 ಡಿಸೆಂಬರ್ 6 ರಿಂದ ಸೋ ಕಾಲ್ಡ್ ಬುದ್ಧಿ ಜೀವಿಗಳು ಮಸೀದಿಯನ್ನು ಕೆಡವಿಬಿಟ್ರಲ್ಲ ಎಂದು ಬೊಗಳೆ ಬಿಡ್ತಿದ್ದಾರೆ.

ಅಲೆಲೆ ಅಡಕಸ್ಬಿ ಲದ್ದಿಜೀವಿಗಳಾ ಆ ಮಸೀದಿ ನಿರ್ಮಾಣ ಆಗಿದ್ದೇ ಮಂದಿರ ಕೆಡವಿದ ಮೇಲೆ ಅಂದಮೇಲೆ ದಾಸ್ಯದ ಕುರುಹು ತೊಡೆದದ್ದು ತಪ್ಪಾ?

ಮಸೀದಿ ಕೆಡವಿದ್ದು ನೋವಾಗಿದೆ ಎನ್ನುವುದಾದರೆ ಕಾಶಿ ,ಮಥುರಾ,ಅಯೋಧ್ಯೆಯ ಮಂದಿರಗಳು ,ಕಾಶ್ಮೀರದ ಸಾವಿರಾರು ಮಂದಿರಗಳನ್ನು ಮುಸಲ್ಮಾನರು ಉರುಳಿಸಿದ್ರಲ್ಲ ಆವಗಾ ಹಿಂದುಗಳಿಗೆ ಎಷ್ಟು ನೋವಾಗಿರಬೇಡ?

ಅಷ್ಟಕ್ಕೂ ಆ ಬಾಬರ್ ವಿದೇಶಿ ದಾಳಿಕೋರ ಅಂದಮೇಲೆ ಆ ಮಸೀದಿಯ ಬೆಂಬಲಕ್ಕೆ ನೀವು ನಿಲ್ತಿದ್ದೀರಾ ಅಂದಮೇಲೆ ನಿಮ್ಮ ದೇಶಪ್ರೇಮದ ಬಗ್ಗೆ ನಮಗೆ ಅನುಮಾನವಿದೆ.

ಇನ್ನು ಮುಂದಿನದು ನಿರ್ಣಾಯಕ ಹೋರಾಟ ರಾಮ ಮಂದಿರವನ್ನು ರಾಮಜನ್ಮಭೂಮಿ ಅಯೋಧ್ಯೆಯಲ್ಲಿಯೇ ನಿರ್ಮಿಸಬೇಕು ಎಂಬ ಸಂಕಲ್ಪದೊಂದಿಗೆ ಹಿಂದು ಸೆಟೆದು ನಿಂತಿದ್ದಾನೆ .ಈ ಬಾರಿಯ ಹೋರಾಟ ಮಂದಿರ ನಿರ್ಮಾಣದೊಂದಿಗೆ ಮುಗಿಯುವುದು.

ಪ್ರಭು ಶ್ರೀರಾಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು.
ಜೈ ಶ್ರೀರಾಮ್

– ಮಹೇಶ್

Tags

Related Articles

Close