ಪ್ರಚಲಿತ

ಪ್ರತಾಪ್ ಸಿಂಹರ ಆ ಮಾತಿನಿಂದ ನಟ ಪ್ರಕಾಶ್ ರೈಯ ತಲೆಯೊಳಗೇನಿತ್ತು ಎನ್ನುವುದು ಕೊನೆಗೂ ಬಯಲಾಯಿತು…..!!!

ತಾನೊಬ್ಬ ಬಲುದೊಡ್ಡ ನಟನೆಂಬ ಅಹಂಕಾರದಿಂದ ಮೆರೆಯುತ್ತಿದ್ದ ನಟ ಪ್ರಕಾಶ್ ರೈಗೆ ಸಂಸದ ಪ್ರತಾಪ್ ಸಿಂಹ ಅವರು ಸೂಕ್ತ ಮದ್ದು ಅರೆದು ತಲೆಗಡರಿದ್ದ ಅಹಂಕಾರವನ್ನು ಇಳಿಸಿದ್ದಾರೆ. ತಾನು ಒಬ್ಬ ಮಹಾನ್ ನಟ ತಾನು ಏನು ಹೇಳಿದ್ರೂ ನಡೆಯುತ್ತದೆ, ಅದನ್ನೆಲ್ಲಾ ಜನರು ಕಣ್ಣು ಮುಚ್ಚಿ ನಂಬಿ ಬಿಡುತ್ತಾರೆ ಎಂದು ನಟ ಪ್ರಕಾಶ್ ರೈ ಅಂದುಕೊಂಡಿದ್ದರು. ಪ್ರತಾಪ್ ಸಿಂಹ ಮಾತುಗಳಲ್ಲಿ ಪ್ರಕಾಶ್ ರೈ ಅವರ ಇನ್ನೊಂದು ಮುಖವೂ ಕಳಚಿಬಿದ್ದಿತು.

ಸಂಸದ ಪ್ರತಾಪ್ ಸಿಂಹ ಅವರು ಇತ್ತೀಚೆಗೆ ಸುದ್ದಿಗಾರರ ಜೊತೆ ಮಾತಾಡಿ, ಪ್ರಕಾಶ್ ರೈ ಅವರ ಮನಸಲ್ಲೇನಿದೆ ಎನ್ನುವುದನ್ನು ಚೆನ್ನಾಗಿ ಅರ್ಥೈಸಿ ಹೇಳಿಕೆ ನೀಡಿದ್ದಾರೆ. ಮನಶಾಶ್ತ್ರೀಯ ನೆಲೆಯಲ್ಲಿ ಯೋಚಿಸುವುದಾದದರೂ ಪ್ರಕಾಶ್ ರೈ ತನ್ನ ಬಗ್ಗೆ ತಾನು ಮಹೋನ್ನತ ಭ್ರಾಂತಿ ಹೊಂದಿದ್ದಾರೆಂದೇ ಹೇಳಬಹುದು. ಇದರ ಪ್ರಕಾರ ತಾನು ಎಲ್ಲರಂತೆ ಸಾಮಾನ್ಯ ಮನುಷ್ಯನಲ್ಲ, ತಾನು ಒಂದು ಹೆಜ್ಜೆ ಹೆಚ್ಚು ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ನರೇಂದ್ರ ಮೋದಿ, ಟ್ರಂಫ್‍ನಂತಹಾ ನಾಯಕನನ್ನು ವೈಯಕ್ತಿಕ ನೆಲೆಯಲ್ಲಿ ಹೇಳಿಕೆ ನೀಡಿ ತಾನೂ ಕೂಡಾ ಅವರ ಲೆವಲ್ಲಿನವನು ಎಂದು ಬಿಂಬಿಸಲು ಮುಂದಾಗುತ್ತಾರೆ.

ಪ್ರತಾಪ್ ಸಿಂಹ ಹೇಳಿಕೆ ಏನು ಎಂದು ಗಮನಿಸಿ ಅವರ ಮಾತುಗಳು ಯಾಕಿಷ್ಟು ಮಹತ್ವ ಎಂದು ಕೊಂಚ ವಿಶ್ಲೇಷಿಸಿದರೆ ಪ್ರಕಾಶ್ ರೈ ಅವರ ಹೇಳಿಕೆಗಳ ಹಿನ್ನೆಲೆ ಮುನ್ನೆಲೆ ಎಲ್ಲಾ ಗೊತ್ತಾಗಿಬಿಡುತ್ತದೆ. `ಟ ಪ್ರಕಾಶ್ ರೈ ನಾನೊಬ್ಬ ದೊಡ್ಡ ನಟ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಡಾ.ರಾಜ್, ಅಮಿತಾಬ್, ಎನ್.ಟಿ. ಆರ್ ಯಾರೂ ಕೂಡ ನಾನು ದೊಡ್ಡ ನಟ ಎಂದು ಹೇಳಿಕೊಂಡಿಲ್ಲ. ಹೀಗಾಗಿ ರೈ ಹೇಳಿಕೆ ಒಂದು ರೀತಿಯ ಅಭಾಸ ಸೃಷ್ಠಿಸುತ್ತದೆ, ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟ ಅಷ್ಟೇ. ಇವರು ತಮ್ಮನ್ನ ದೊಡ್ಡ ನಟ ಅಂದುಕೊಂಡು ರಾಜಕಾರಣಿಗಳನ್ನು ಟೀಕೆ ಮಾಡೋದು ಸರಿಯಲ್ಲ. ಪ್ರಕಾಶ್ ರೈ “ಸ್ಪಿಟ್ ಅಂಡ್ ರನ್ ಥರ. ಗುದ್ದು ಓಡೋದಲ್ಲ. ಉಗಿದು ಓಡೋದು”. ಆದ್ರೆ ನಾನು ಅವರಂತೆ ಇರೋಕೆ ಆಗೋಲ್ಲ. ನನಗೆ ಜವಾಬ್ದಾರಿ ಇದೆ, ಕ್ಷೇತ್ರ ಇದೆ. ಅವರಂತೆ ನಾನು ಓಡಿ ಹೋಗೋಕೆ ಆಗೋಲ್ಲ.. ನಾನು ನಟ ಪ್ರಕಾಶ್ ರೈ ಕುರಿತು ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಮೋದಿ, ಯೋಗಿ ಆದಿತ್ಯನಾಥ್, ಟ್ರಂಪ್ ಚೈನಾ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಹಕ್ಕಿದೆ. ಅಂತೆಯೇ ಇವರನ್ನು ಪ್ರಶ್ನೆ ಮಾಡುವ ಹಕ್ಕು ಸಹ ಸಾರ್ವಜನಿಕರಿಗೆ ಹಾಗೂ ನನಗೆ ಇದೆ. ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಆತ್ಮಸಾಕ್ಷಿ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿ ಇವರು ಯಾಕೆ ಮಾತನಾಡೋಲ್ಲ. ಇತರರನ್ನು ಪ್ರಶ್ನೆ ಮಾಡುವ ಧಾವಂತದಲ್ಲಿ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ? ದೇಶದಲ್ಲಿ ಮಾತನಾಡಲು ಭಯವಾಗುತ್ತಿದೆ ಎಂಬ ಪ್ರಕಾಶ್ ರೈ ಮೋದಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಇನ್ನೆನು ಬೇಕಿದೆ. ಮೋದಿ ಬಗ್ಗೆ ಯಾರೇ ಏನೆ ಮಾತನಾಡಿದ್ರು ಅವರು ಸುಮ್ಮನೆ ಇದ್ದಾರೆ. ಇದಕ್ಕಿಂತ ವಾಕ್ ಸ್ವಾತಂತ್ರ್ಯ ಇನ್ಯಾವ ದೇಶದಲ್ಲಿದೆ…’ ಎನ್ನುವುದು ಪ್ರತಾಪ್ ಸಿಂಹ ಅವರ ಹೇಳಿಕೆ..

ಪ್ರತಾಪ್ ಅವರ ಹೇಳಿಕೆಯ ಪ್ರಕಾಶ್ ರೈಯವರನ್ನು ವಿಶ್ಲೇಷಿಸಿದಾಗ ಕೆಲವೊಂದು ಮನಶಾಸ್ತ್ರೀಯ ವಿಚಾರಗಳ ಅರಿವಾಗಿಬಿಡುತ್ತದೆ. ಯಾಕೆಂದರೆ ಪ್ರಕಾಶ್ ರೈ ಅವರಿಗೆ ಚಿತ್ರರಂಗದಲ್ಲಿ ಹಿಂದಿನಷ್ಟು ಬೇಡಿಕೆ ಇಲ್ಲ. ತನ್ನ ಮುಂದೆಯೇ ಉದಯೋನ್ಮುಖ ಕಲಾವಿದರೆಲ್ಲಾ ಸ್ಟಾರ್ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಇದನ್ನು ನೋಡಿ ಪ್ರಕಾಶ್ ರೈ ಅವರ ಒಳಮನಸ್ಸು ಸಹಿಸುವುದಿಲ್ಲ.

ತಾನೇನು ಅವರಿಗಿಂತ ಕಮ್ಮಿ ಇಲ್ಲ ಎಂಬ ಭಾವನೆ ಸುಪ್ತ ಮನಸ್ಸಲ್ಲಿ ಮೂಡಿರುವುದರಿಂದ ಅದನ್ನು ಜಗತ್ತಿನ ಮುಂದೆ ಪ್ರಚುರಪಡಿಸಲು ಮುಂದಾಗುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೋದಿ, ಯೋಗಿ ಆದಿತ್ಯನಾಥ್ ಅಂಥವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಯಾವುದು ಇಷ್ಟ ಇದೆಯೋ ಅದರ ವಿರುದ್ಧವಾಗಿ ಹೋಗಿ ನೆಗೆಟಿವ್ ಪ್ರಚಾರ ಪಡೆದು ಜನರ ಮನಸ್ಸಲ್ಲಿ ಸ್ಥಿರಸ್ಥಾಯಿಯಾಗಿ ಉಳಿದುಬಿಡುವ ಸಲುವಾಗಿ ಈ ತಂತ್ರವನ್ನು ಅವರು ಮಾಡುತ್ತಿದ್ದಾರೆ.
ಇಂಥಾ ಹೇಳಿಕೆಗಳನ್ನು ಕಟ್ಟಿಕೊಂಡು ಪ್ರಕಾಶ್ ರೈಗೆ ಆಗಬೇಕಾಗಿದ್ದು ಏನೂ ಇಲ್ಲ. ಒಟ್ಟಾರೆ ನೋಡುವುದಾದರೆ ಅದೊಂದು ಪ್ರಚಾರದ ಚಾಳಿ ಅಷ್ಟೆ. ಈ ಚಾಳಿಗೋಸ್ಕರ ನಾನಾ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಅಷ್ಟೆ. ತನ್ನ ಬಗ್ಗೆ ನೆಗೆಟಿವ್ ಬಂದಷ್ಟೇ ಅವರು ಮನದಲ್ಲಿ ಒಳಗೊಳಗೇ ಖುಷಿ ಪಡುತ್ತಾ ಇರುತ್ತಾರೆ. ಆರಂಭದಲ್ಲಿ ಭಗವಾನ್, ಮಾಸ್ತರ್ ಇಂಥವರಿಗೆಲ್ಲಾ ಇತ್ತಲ್ಲಾ ಅದೂ ಕೂಡಾ ಇಂಥದ್ದೇ ಫೀಲಿಂಗು… ಆರಂಭದಲ್ಲಿ ಇಂಥವರ ಮಾತುಗಳನ್ನು ಕೇಳಿ ಒಂದಷ್ಟು ದಿನ ಅದರ ಬಗ್ಗೆಯೇ ಮಾತಾಡಿಕೊಂಡು ಇರುತ್ತಾರೆ. ಆಮೇಲೆ ಜನರೂ ಕೂಡಾ ಇಂಥವರನ್ನು ಮರೆತು ಬಿಡುತ್ತಾರೆ. ಇವರದ್ದು ಅದೇ ರಾಗ ಅದೇ ಹಾಡು ಎಂದು ಇಂಥವರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ…

ಆರಂಭದಲ್ಲಿ ವಿವಾದಾತ್ಮಕವಾಗಿ ಮಾತಾಡುವುದು, ಆಮೇಲೆ ಅದು ವಿವಾದವಾದಾಗ ಅಲ್ಲಿಂದ ಎಸ್ಕೇಪ್ ಆಗುವುದು, ಇಂಥವರ ಹೇಳಿಕೆಗೆ ಒಂದು ಗಟ್ಟಿ ನಿರ್ಧಾರವಿರುವುದಿಲ್ಲ. ಇಂದು ಯಾವುದು ಹೆಚ್ಚು ಟ್ರೆಂಡಿಂಗ್ ಆಗುತ್ತದೋ ಅದರಲ್ಲೇ ಉಳಿದುಬಿಡುತ್ತಾರೆ. ಟ್ರೆಂಡಿಂಗ್ ಮುಗಿದಾಗ ಅವರನ್ನು ಗಣನೆಗೆ ತೆಗೆದುಕೊಳ್ಳುವ ಜನರೂ ಯಾರೂ ಇರುವುದಿಲ್ಲ. ಇದರ ಬಗ್ಗೆ ಇನ್ನೂ ಚೆನ್ನಾಗಿ ಅರ್ಥವಾಗಬೇಕಾದರೆ ಉದಾಹರಣೆಯೊಂದಿಗೆ ವಿವರಿಸುತ್ತೇನೆ..
ಒಬ್ಬ ಮಿಮಿಕ್ರಿ ಕಲಾವಿದನಿದ್ದ. ಆರಂಭದಲ್ಲಿ ಬೆಕ್ಕು, ಕಾಗೆ, ಗೂಬೆ ಮುಂತಾದ ಪ್ರಾಣಿಗಳ ಮಿಮಿಕ್ರಿ ಮಾಡ್ತಾ ಇದ್ದ. ಜನರಿಗೂ ಆರಂಭದಲ್ಲಿ ಭಾರೀ ಆಸಕ್ತಿ, ಕುತೂಹಲ. ಈ ಕಲಾವಿದನ ಮಿಮಿಕ್ರಿ ಅಂದರೆ ಜನರು ಮುಗಿಬಿದ್ದು ಕಾಯುತ್ತಿದ್ದರು. ಆರಂಭದಲ್ಲಿ ಸ್ವಲ್ಪ ದಿನ ಮಿಮಿಕ್ರಿ ಕೇಳಿ ಖುಷಿಪಟ್ಟರು. ಆ ಬಳಿಕ ಮಿಮಿಕ್ರಿಯಿಂದ ಬೋರು ಹೊಡೆಯಲಾರಂಭಿಸಿತು. ಆಮೇಲೆ ಅವರ ಮಿಮಿಕ್ರಿ ಕೇಳುವುದನ್ನೇ ಬಿಟ್ಟುಬಿಟ್ಟರು. ಇದೇ ಸಾಲಿಗೆ ಪ್ರಕಾಶ್ ರೈ ಅವರೂ ಸೇರಿಕೊಳ್ಳುತ್ತಾರೆ.  ಇದೇ ಪರಿಸ್ಥಿತಿ ಅವರಿಗೆ ಖಂಡಿತಾ ಬಂದುಬಿಡುತ್ತದೆ. ತಾನೊಬ್ಬ ಶ್ರೇಷ್ಠ ವ್ಯಕ್ತಿ ಎಂದು ಯಾರೆಲ್ಲಾ ಭಾವಿಸುತ್ತಾರೋ ಅವರಿಂದ ಈ ಸಮಸ್ಯೆ ಜಾಸ್ತಿ.  ರಜನಿಕಾಂತ್, ಡಾ. ರಾಜ್‍ಕುಮಾರ್, ಅಮಿತಾ ಬಚ್ಚನ್ ತರದ ನಟರನ್ನು, ಎಪಿಜೆ ಅಬ್ದುಲ್ ಕಲಾಂ ಮುಂತಾದವರು ಬಹಳ ದೊಡ್ಡ ಹೆಸರು ಹೊಂದಿದ್ದರೂ ಅವರ ಮನದಲ್ಲಿ ಅಹಂಕಾರದ ಲವಲೇಷವೂ ಇರಲಿಲ್ಲ. ತಾನೊಬ್ಬ ಶ್ರೇಷ್ಠ ವ್ಯಕ್ತಿ ಅಂದುಕೊಂಡಿರಲೇ ಇಲ್ಲ. ತನ್ನ ಪರಿಧಿಯೇನು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಇದಕ್ಕಾಗಿಯೇ ಅವರನ್ನು ಜನ ಇಂದಿಗೂ ಪೂಜಿಸುತ್ತಾರೆ. ಅವರ ವಿರುದ್ಧ ಮಾತಾಡಿದರೆ ರೊಚ್ಚಿಗೇಳುತ್ತಾರೆ.  ಇವರ ಸಾಲಿಗೆ ಸೇರಬೇಕೆಂದು ಪ್ರಕಾಶ್ ರೈಗೂ ಮನಸ್ಸಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅವರು ಗಿಮಿಕ್ ಮಾಡಲಾರಂಭಿಸಿ ಜನರ ಮನದಲ್ಲಿ ಸದಾ ಉಳಿಯಬೇಕೆಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಪ್ರಚಾರ ಪಡೆಯುತ್ತಾರೆ ಅಷ್ಟೆ. ಯಾಕೆಂದರೆ ಅವರ ಹೇಳಿಕೆಗಳನ್ನೇ ಗಮನಿಸಿದರೂ ಇದು ಚೆನ್ನಾಗಿ ಅರ್ಥವಾಗಿಬಿಡುತ್ತದೆ. ಆದ್ದರಿಂದ ಪ್ರಕಾಶ್ ರೈ ಅವರಲ್ಲಿ ನಾಯಕತ್ವ ಗುಣ ಕಂಡುಬರುವುದಿಲ್ಲ. ಬದಲಿಗೆ ಅವರೊಬ್ಬ ಪ್ರಚಾರಪ್ರಿಯ ಅಷ್ಟೆ.

ಪ್ರತಾಪ್ ಸಿಂಹ ಅವರ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದರ ವಿಶ್ಲೇಷಣೆಯನ್ನು ತುಲನಾತ್ಮಕವಾಗಿ ಅರ್ಥಮಾಡಿಕೊಂಡರೆ ಪ್ರಕಾಶ್ ರೈ ಅವರ ಮಾತುಗಳು ನಾಳೆಯಿಂದಲೇ ಬಂದ್ ಆಗಿ ಬಿಡುತ್ತದೆ. ಅಲ್ಲದೆ ತನ್ನ ಮನದಲ್ಲಿ ಅಡರಿದ್ದ ಅಹಂಕಾರವೂ ಇಳಿದುಬಿಡುತ್ತದೆ. ನೋಡ್ತಾ ಇರಿ.

-ಚೇಕಿತಾನ

Tags

Related Articles

Close