ಪ್ರಚಲಿತ

ಪ್ರಧಾನಿ ಮೋದಿಯ ಡಿಮಾನಿಟೈಸೇಶನ್ ಗೆ ಇಂದಿಗೆ ಒಂದು ವರ್ಷ! ನೋಟು ರದ್ದತಿಯಿಂದ ದೇಶಕ್ಕೆ ಲಾಭವಾಯಿತಾ? ಯಾರಿಗೆ ಲಾಭವಾಗಿದೆ ಯಾರಿಗೆ ನಷ್ಟವಾಗಿದೆ?

ಕಳೆದ ವರ್ಷ ಪ್ರಧಾನಿ ಮೋದಿ ಭಾರತದ ಕರಾಳ ಆರ್ಥಿಕತೆಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಒಂದನ್ನ ನಡೆಸಿದ್ದರು. ಆ ಸರ್ಜಿಕಲ್ ಸ್ಟ್ರೈಕ್ ಹೆಸರೇ ‘ಡಿಮಾನೆಟೈಸೇಶನ್’.

ಕಳೆದ ವರ್ಷ ನವೆಂಬರ್ 8 ರ ರಾತ್ರಿ 8 ಗಂಟೆಗೆ ಟಿವಿ ಮಾಧ್ಯಮಗಳ ಎದುರು ಬಂದ ಪ್ರಧಾನಿ ಮೋದಿ “ಇವತ್ತು ರಾತ್ರಿ 12 ಗಂಟೆಯಿಂದ ಐನೂರು, ಒಂದು ಸಾವಿರದ ನೋಟುಗಳ ಲೀಗಲ್ ಟೆಂಡರ್ ನ್ನ ರದ್ದು ಮಾಡಿದ್ದೇವೆ ಅಂತ ಹೇಳಿಕೆಯೊಂದನ್ನ ನೀಡಿದ್ದರು.

ಆ ಹೇಳಿಕೆಯ ಅರ್ಥ ಆವತ್ತಿನಿಂದ 500, 1000 ಮುಖಬೆಲೆಯ ನೋಟುಗಳು ಇನ್ನುಮುಂದೆ ರದ್ದಿಪೇಪರ್ರಿಗೆ ಸಮ ಎಂಬುದಾಗಿತ್ತು.

ಅಷ್ಟಕ್ಕೂ ಈ ನೋಟುಗಳನ್ನ ಪ್ರಧಾನಿ ಬ್ಯಾನ್ ಮಾಡಿದ್ದೇಕೆ? ದೇಶದಲ್ಲಿ ಹೆಚ್ಚಿದ್ದ ಭ್ರಷ್ಟಾಚಾರ, ಹವಾಲಾ ಹಣ ಸಾಗಾಣಿಕೆ, ಕಂಡಕಂಡಲ್ಲಿ ಆಸ್ತಿಯನ್ನ ಕೂಡಿಟ್ಟಿದ್ದ ಕುಳಗಳನ್ನ ಬಿಲದಿಂದ ಹೊರತರೋದಕ್ಕೆ ಪ್ರಧಾನಿ ಹೂಡಿದ್ದ ತಂತ್ರ ಇದಾಗಿತ್ತು.

ಇಂದಿಗೆ ಪ್ರಧಾನಿ ನೋಟ್ ಬ್ಯಾನ್ ಮಾಡಿ ಒಂದು ವರ್ಷ ಕಳೆದಿದೆ. ಅಷ್ಟಕ್ಕೂ ನೋಟ್ ಬ್ಯಾನ್ ಆಗಿದ್ದರಿಂದ ಆದ ಬದಲಾವಣೆಗಳಾದರೂ ಏನು?
ಯಾರಿಗೆ ಲಾಭವಾಯ್ತು ಯಾರಿಗೆ ನಷ್ಟವಾಯ್ತು?

* ಪಾಕಿಸ್ತಾನ ಭಾರತದ ದೊಡ್ಡ ಕರೆನ್ಸಿಗಳಾದ 500, 1000 ನೋಟುಗಳನ್ನ ತನ್ನ ದೇಶದಲ್ಲಿ ಮುದ್ರಿಸಿ ಭಾರತಕ್ಕೆ ಖೋಟಾ ನೋಟುಗಳ ರೂಪದಲ್ಲಿ ಕಳಿಸುತ್ತಿತ್ತು. ಈ ಎರಡೂ ಮುಖಬೆಲೆಯ ನೋಟುಗಳನ್ನ ಮೋದಿ ಬ್ಯಾನ್ ಮಾಡಿದಾಕ್ಷಣ ಪಾಕಿಸ್ತಾನ ಪ್ರಿಂಟ್ ಮಾಡಿಸಿದ್ದ ಕೋಟ್ಯಾಂತರ ರೂಪಾಯಿ ಖೋಟಾ ನೋಟುಗಳು ಪಾಕಿಸ್ತಾನಕ್ಕೇ ಖೋಟಾ ಆದವು.

* ಪಾಕಿಸ್ತಾನದ ಮೂಲಕ ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡಲು ತಲೆಗೆ 500, 1000 ಮುಖಬೆಲೆಯ ನೋಟುಗಳು ನೀಡಲಾಗುತ್ತಿತ್ತು. ನೋಟ್ ಬ್ಯಾನ್ ಆದತಕ್ಷಣ ಕಾಶ್ಮೀರದಲ್ಲಿ ಕಲ್ಲುತೂರಾಟಗಾರರಿಗೆ ಆರ್ಥಿಕ ಸಮಸ್ಯೆ ಕಾಡಿ ಕಲ್ಲು ತೂರಾಟ ಕಡಿಮೆಯಾಯ್ತು

* ನೋಟು ರದ್ದತಿಯಿಂದಾಗಿ ಎಡಪಂಥೀಯ ಉಗ್ರವಾದವಿರುವ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಗಣನೀಯ ಇಳಿಕೆಯಾಗಿದೆ.

* ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ನಕ್ಸಲರಿಗೆ ಬರುತ್ತಿದ್ದ ಹಣದ ಹರಿವು ಕಡಿಮೆಯಾಯ್ತು

* ನೋಟು ಬ್ಯಾನ್ ಮಾಡಿದ ನಂತರ 2000 ರೂ.ಮುಖಬೆಲೆಯ ನೋಟುಗಳನ್ನ ಕಂಡಕಂಡಲ್ಲಿ ಶೇಖರಿಸಿಟ್ಟಿದ್ದ ಹಲವಾರು ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನ ವಶಪಡಿಸಿಕೊಳ್ಳಲಾಗಿದೆ

* ನೋಟ್ ಬ್ಯಾನ್ ನಂತರ ಅಕ್ರಮವಾಗಿ ನಡೆಸುತ್ತಿದ್ದ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಶೆಲ್ ಕಂಪೆನಿಗಳನ್ನ ಬಂದ್ ಮಾಡಿಸಲಾಗಿದೆ

* ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ ನಂತರ ದೇಶದ ಜನತೆಯಲ್ಲಿ ನಗದುರಹಿತ ಅಂದರೆ ಡಿಜಿಟಲ್ ಟ್ರಾನ್ಸ್ಯಾಕ್ಷನ್ ಮೂಲಕ ನಿಮ್ಮ ವ್ಯವಹಾರಗಳನ್ನ ಮಾಡಿ ಎಂದು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಮುಂಚೆ 400% ದಷ್ಟಿದ್ದ ಡಿಜಿಟಲ್ ವ್ಯವಹಾರ ನೋಟ್ ಬ್ಯಾನ್ ನ ನಂತರ 1000% ದಷ್ಟು ಏರಿಕೆ ಕಂಡಿದೆ.

ಅರುಣ್ ಜೆಟ್ಲಿ ತಮ್ಮ ಬ್ಲಾಗಿನಲ್ಲಿ ನೋಟ್ ಬ್ಯಾನ್ ನ ಕುರಿತು ಈ ರೀತಿ ಬರೆದುಕೊಂಡಿದ್ದಾರೆ.

ಸೌತ್ ಏಷ್ಯನ್ ಟೆರರಿಸಂ ಪೋರ್ಟಲ್‍ನಲ್ಲಿ ನೀಡಿದ ಅಂಕಿ ಅಂಶ ಪ್ರಕಾರ ನೋಟು ರದ್ದತಿ ನಂತರ ಭಯೋತ್ಪಾದನಾ ಕೃತ್ಯಗಳಿಂದ ಸಾವಿಗೀಡಾದವರ ಸಂಖ್ಯೆ ಏರಿಕೆಯಾಗಿದೆ.

2016ರಲ್ಲಿ 267 ಮಂದಿ ಸಾವನ್ನಪ್ಪಿದರೆ 2017 ಅಕ್ಟೋಬರ್ 31 ರ ವರೆಗೆ ಸಾವಿಗೀಡಾವರ ಸಂಖ್ಯೆ 298.

2016ರಲ್ಲಿ 16 ಕಾಶ್ಮೀರಿ ನಿವಾಸಿಗಳು, 88 ಯೋಧರು, 165 ಉಗ್ರರು ಬಲಿಯಾಗಿದ್ದಾರೆ. ಅದೇ ವೇಳೆ 2017ರಲ್ಲಿ 53 ಕಾಶ್ಮೀರಿಗಳು, 67 ಯೋಧರು ಮತ್ತು 178 ಉಗ್ರರು ಬಲಿಯಾಗಿದ್ದಾರೆ.

2015 -16 ವರ್ಷದೊಂದಿಗೆ ಹೋಲಿಕೆ ಮಾಡಿ ನೋಡಿದರೆ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಹಣದಲ್ಲಿ ಏರಿಕೆಯಾಗಿದೆ.

2016-17 ರಲ್ಲಿ 13,716 ಕೋಟಿ ಲೆಕ್ಕ ರಹಿತ ಹಣ ವಶ ಪಡಿಸಿಕೊಳ್ಳಲಾಗಿದೆ. ಹೀಗೆ ವಶಪಡಿಸಿಕೊಂಡ ಹಣದಲ್ಲಿ 2015-16 ಅವಧಿಗಿಂತ ಶೇ.41 ಏರಿಕೆಯಾಗಿದೆ.

ನೋಟು ರದ್ದು ಮಾಡಿದ ನಂತರ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹೆಚ್ಚಿದೆ.

ನೋಟು ರದ್ದತಿಯಿಂದ ಏನು ಲಾಭ ಎಂದು ಈಗ ಹೇಳಲು ಸಾಧ್ಯವಿಲ್ಲ. ಮುಂದಿನ ತಲೆಮಾರು 2016 ನವೆಂಬರ್ ನಂತರದ ಆರ್ಥಿಕ ಬೆಳವಣಿಗೆಯನ್ನು ಅಭಿಮಾನದಿಂದ ಕಾಣಲಿದೆ ಎಂದಿದ್ದಾರೆ ಜೇಟ್ಲಿ.

ಒಟ್ಟಿನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ದೇಶವನ್ನ ಭ್ರಷ್ಟಾಚಾರ ಮುಕ್ತ ಮಾಡುವುದರಲ್ಲಿ ಮೋದಿ ಸರ್ಕಾರ ದಿಟ್ಟತೆಯನ್ನ ಪ್ರದರ್ಶಿಸುತ್ತಿದೆ.

– Vinod Hindu Nationalist

Tags

Related Articles

Close