ಅಂಕಣಪ್ರಚಲಿತ

ಪ್ರಾಚೀನ ಭಾರತದಲ್ಲಿ ಹಿಂದುಳಿದ ಮುಹಿಳೆಯರಿಗೆ ಸ್ತನಗಳನ್ನು ಮುಚ್ಚಲು ಬಿಡುತ್ತಿರಲಿಲ್ಲ!! ಇದು ಸತ್ಯವೇ?!

ಇತಿಹಾಸ ತಿಳಿಯದೆ ಅದರ ಪೂರ್ವಾಪರವನ್ನು ಅರಿಯದೆ ಮೇಲು ವರ್ಗ ಮತ್ತು ಕೆಳವರ್ಗ ಎಂದು ಚರ್ಚಿಸುತ್ತಾ ಹಿಂದೂ ಸಂಸ್ಕøತಿಯನ್ನೇ ಕೆಳಗೆ ತಳ್ಳುವ ರೀತಿಯಲ್ಲಿ ಕೆಲ ಹಿಂದೂ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ!! ಗೂಗಲ್‍ಗಳಲ್ಲಿ ಇದರ ಬಗ್ಗೆ ನೀವು ಹುಡುಕಿದಾಗ ಮಾಹಿತಿಗಳು ಅಗಾಧವಾಗಿ ಸಿಗುತ್ತದೆ!! ಆದರೆ ಅದು ಹಿಂದೂ ಪರವಾಗಿಲ್ಲದೆ ಹಿಂದುಗಳನ್ನು ಧೂಷಿಸಿ ಲೇಖನಗಳನ್ನು ಬರೆಯಲಾಗುತ್ತಿದೆ.. ಕೆಲವೊಂದು ಅಂಕಣಗಳನ್ನು ನಾವು ಓದಿದಾಗ ಹಿಂದೂ ಸಂಸ್ಕøತಿಯಲ್ಲಿ ಈ ರೀತಿಯಾದಂತಹ ಕೆಟ್ಟ ಕೆಟ್ಟ ಆಚರಣೆಗಳೂ ಇತ್ತಾ ಎಂದು ಕೆಲವರು ಮೂಗಿಗೆ ಬೆರಳಿಟ್ಟವರೂ ಇದ್ದಾರೆ.. ಆದರೆ ಇಂತಹ ಕೃತ್ಯಗಳನ್ನು ಎಸಗುವವರು ಹಿಂದೂ ವಿರೋಧಿಗಳು ಮಾತ್ರ..!! ಇಲ್ಲದ ಇತಿಹಾಸವನ್ನು ಸೃಷ್ಟಿಸುವಲ್ಲಿ ಈ ಜಾತಿವಾದಿಗಳದ್ದು ಎತ್ತಿದ ಕೈ!!

ಈ ಭೂಮಿ ಮೇಲೆ ಮಾನವ ಹುಟ್ಟಿದಂದಿನಿಂದ ಇದುವರೆಗೂ ತನ್ನ ಅಧಿಪತ್ಯವನ್ನು ತೋರಿಸಲು ಅದೆಷ್ಟೋ ಪ್ರಯತ್ನಗಳನ್ನು ಮಾಡಿದ್ದಾನೆ. ಅವುಗಳ ಭಾಗವಾಗಿಯೇ ಜಾತಿ ವ್ಯವಸ್ಥೆಯನ್ನು ತಂದು ಉನ್ನತ, ನೀಚ ಜಾತಿಗಳೆಂದು ಸಮಾಜವನ್ನು ಒಡೆದು ಈ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.. ಉನ್ನತ ಜಾತಿಗಳನ್ನು ಕೊಂಡಾಡಿ ನೀಚ ಜಾತಿಗಳಗಳನ್ನು ಕೆಳಗೆ ತಳ್ಳಿದೆ ಎಂಬ ವಿವಾದವನ್ನು ಕೆಲ ಹಿಂದೂ ವಿರೋಧಿಗಳು ಪ್ರಚಾರವನ್ನು ಮಾಡುತ್ತಿದ್ದಾರೆ.. ಇದರಿಂದಾಗಿ ನೀಚ ಜಾತಿಯನ್ನು ಕೆರಳಿಸುವಂತೆ ಮಾಡುತ್ತಿದೆ.. ಕೆಳ ಜಾತಿಯ ಮೇಲೆ ನಿಬಂಧನೆಗಳನ್ನು ಹಾಕಿ ಪೈಶಾಚಿಕ ಆನಂದ ಅನುಭವಿಸುತ್ತಿದ್ದಾರೆ ಈ ಈ ಹಿಂದೂ ವಿರೋಧಿಗಳು!! ಆದರೆ ಹಿಂದೂ ಸಮಾಜದಲ್ಲಿ ಯಾರನ್ನೂ ಕೆಳವರ್ಗ ಮೇಲುವರ್ಗ ಎಂದು ಎಲ್ಲೂ ಪರಿಗಣಿಸಿಲ್ಲ…

17 ನೇ ಶತಮಾನದಲ್ಲಿ ಟ್ರಾವೆಂಕೂರ್ (ತಿರುವನಂತಪುರಂ) ಅನ್ನು ಆಳಿದ ರಾಜರುಗಳು, ಮಹಿಳೆಯರ ಸ್ತನಗಳ ಮೇಲೆ ವಿಧಿಸಿದ ತೆರಿಗೆ `ಮುಲಕರಂ’ ಅತಿ ಹೀನವಾದದ್ದು. ಮಹಿಳೆಯರ ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದು ಇನ್ನೂ ಹೇಯಕರ. ಅದಲ್ಲದೆ ಮಾತೆಯರು ತಮ್ಮ ಮಕ್ಕಳಿಗೆ ಹಾಲುಣಿಸಬೇಕಾದರೆ ಮೊದಲಿಗೆ ತೆರಿಗೆ ಕಟ್ಟಬೇಕಿತ್ತಂತೆ!! ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ `ಮುಲಕರಂ’ ಪದ್ಧತಿಯನ್ನು ಪ್ರಜೆಗಳು ವಿರೋಧಿಸುತ್ತಿದ್ದರು ಎಂಬಂತಹ ಕೆಲ ಕಟ್ಟು ಕತೆಗಳು ಈಗ ಹಲವೆಡೆ ಪ್ರಚಾರ ಮಾಡುತಿದ್ದಾರೆ..


ಈ ಸ್ತನ ತೆರಿಗೆ ಆಧಾರವಾಗಿ ಅಂದಿನ ದಲಿತ ಮಹಿಳೆಯರು ತಮ್ಮ ಸ್ತನಗಳನ್ನು ಯಾವುದೇ ವಸ್ತ್ರದಿಂದ ಮುಚ್ಚಿಕೊಳ್ಳುವಂತಿರಲಿಲ್ಲವಂತೆ!! ಮುಖ್ಯವಾಗಿ ಬಹಿರಂಗ ಪ್ರದೇಶಗಳಿಗೆ ಬಂದಾಗ ಅವರ ಸ್ತನ ಎಲ್ಲರಿಗೂ ಕಾಣಿಸಬೇಕಿತ್ತಂತೆ!! ಆಗಿನ ಸರಕಾರಿ ಅಧಿಕಾರಿಗಳು ಪ್ರತಿ ತಿಂಗಳು ಪ್ರತಿ ದಲಿತ ಮಹಿಳೆಯ ಸ್ತನದ ಗಾತ್ರವನ್ನು ಅಳೆದು ಅದಕ್ಕೆ ತಕ್ಕಂತೆ ತೆರಿಗೆ ವಿಧಿಸುತ್ತಿದ್ದರಂತೆ.!! ಈ ತೆರಿಗೆ ವ್ಯವಸ್ಥೆಗೆ “ಮುಳಕ್ಕರಂ” ಎನ್ನುತ್ತಿದ್ದರು. ಈ ಅಮಾನುಷ ಕಾನೂನುಗಳಿಂದ ಅಂದಿನ ದಲಿತ ಮಹಿಳೆಯರ ಮಾನ ಪ್ರಾಣಗಳು ಗಾಳಿಯಲ್ಲಿನ ದೀಪದಂತಿದ್ದವಂತೆ. ಬಹಳಷ್ಟು ಸಲ ತೆರಿಗೆ ವಸೂಲಿ ನೆಪದಲ್ಲಿ ಸ್ವತಃ ಸರಕಾರಿ ಅಧಿಕಾರಿಗಳು ಆ ದಲಿತ ಮಹಿಳೆಯರ ಮಾನ ದೋಚುತ್ತಿದ್ದರಂತೆ.. ಈ ನಿಯಮದಿಂದ ಅಂದಿನ ದಲಿತ ಪ್ರಜೆಗಳಲ್ಲಿ ಮೇಲ್ಜಾತಿಯವರ ಮೇಲೆ ತುಂಬಾ ಕೋಪ ಇದ್ದರೂ ಅವರ ಧನಬಲ, ತೋಳ್ಬಲದ ಮುಂದೆ ಅವರು ಏನೂ ಮಾಡಲಿಕ್ಕೆ ಆಗುತ್ತಿರಲಿಲ್ಲವಂತೆ!!
ಒಂದು ವೇಳೆ ಯಾರಾದರೂ ತಿರುಗಿ ಬಿದ್ದರೆ ನಾನಾ ರೀತಿಯ ಹಿಂಸೆಗಳನ್ನು ಕೊಟ್ಟು ಸಾಯಿಸುತ್ತಿದ್ದರಂತೆ. ಈ ನೀಚ ಕೃತ್ಯದ ವಿರುದ್ದ ಮಹಿಳೆಯೊಬ್ಬರು ತಿರುಗಿಬಿದ್ದು ಆ ಆಚಾರಕ್ಕೆ ಮಂಗಳ ಹಾಡುವಂತೆ ಮಾಡಿದ್ದರಂತೆ ಅಂದಿನ ಟ್ರಾವಂಕೂರು ಸಂಸ್ಥಾನದಲ್ಲಿನ ಚರ್ಯಲ ಎಂಬ ಪ್ರದೇಶದ ನಂಗೇಲಿ ಎಂಬ ದಲಿತ ಮಹಿಳೆ ಈ ಕಂದಾಚಾರದ ವಿರುದ್ಧ ತಿರುಗಿ ಬಿದಿದ್ದರಂತೆ!!

ಮಹಿಳೆಯರ ಸಹಜ ಅಂಗದ ಮೇಲೆ ತೆರಿಗೆ ಹಾಕುವುದರ ವಿರುದ್ಧ, ಮೇಲ್ಜಾತಿಯವರಂತೆ ನಾವೇಕೆ ಕುಪ್ಪಸ ತೊಡಬಾರದು ಎಂದು ಕೇಳಿದರಂತೆ? ಆಕೆಗೆ ತನ್ನ ಪತಿಯೂ ಸಾಕಷ್ಟು ಸಹಾಯ ಮಾಡಿದ್ದ. ಆ ವಿಧವಾಗಿ ಅಂದಿನ ಈ ಕಾನೂನಿಗೆ ವಿರುದ್ಧವಾಗಿ ಬಹಿರಂಗ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಬಟ್ಟೆ ಹಾಕಿಕೊಂಡು ಓಡಾಡುವುದು, ತೆರಿಗೆ ಕಟ್ಟದಂತೆ ಇರುವುದು, ಸಹ ದಲಿತ ಮಹಿಳೆಯರನ್ನು ಈ ಚಳವಳಿಗೆ ಧುಮುಕುವಂತೆ ಮಾಡಿದರು.

ನಂಗೇಲಿಯನ್ನು ಹೇಗಾದರೂ ತಡೆಯಬೇಕೆಂಬ ಉದ್ದೇಶದಿಂದ ಅಂದಿನ ಪಾಲಕರು ಆಕೆಯ ಆತ್ಮೀಯರನ್ನು ಬಂಧಿಸಿ ತೆರಿಗೆ ಕಟ್ಟಬೇಕೆಂದು ತೀವ್ರವಾಗಿ ಒತ್ತಡ ತಂದರಂತೆ. ಇದರಿಂದ ನಂಗೇಲಿ ತಮ್ಮ ಸ್ತನಗಳನ್ನು ಕುಯ್ದು ಇದರ ಬಗ್ಗೆಯೇ ಅಲ್ಲವೆ ನಿಮ್ಮ ಕಣ್ಣು. ಈ ರಕ್ತದ ಮುದ್ದೆಯನ್ನು ನೀವೆ ತೆಗೆದುಕೊಳ್ಳಿ ಎಂದು ಅಧಿಕಾರಿಗಳ ಮುಖಕ್ಕೆ ಹೊಡೆದರಂತೆ. ಆಕೆಯ ಈ ರೀತಿಯ ಧೋರಣೆಯಿಂದ ಕಂಗಾಲಾದ ಅಧಿಕಾರಿಗಳು ಅಲ್ಲಿಂದ ಓಡಿಹೋದರಂತೆ, ತೀವ್ರ ರಕ್ತಸ್ರಾವದಿಂದ ಆಕೆ ಮರಣಿಸಿದರು. ಆಕೆಯ ಗಂಡ ಆಕೆಯ ಸಾವನ್ನು ಜೀರ್ಣಿಸಿಕೊಳ್ಳಲಾಗದೆ ಆಕೆಯ ಚಿತೆ ಮೇಲೆ ಬಿದ್ದು ತಾನೂ ಪ್ರಾಣಾರ್ಪಣೆ ಮಾಡಿಕೊಂಡನಂತೆ. ಅವರ ಚಿತೆಯ ಬೆಂಕಿ ಅಲ್ಲೇ ಇದ್ದ ಸಾಕಷ್ಟು ದಲಿತರಲ್ಲಿ ಹೊತ್ತಿಕೊಂಡಿತು. ಅದು ಅಗ್ನಿಜ್ವಾಲೆಯಲ್ಲಿ ಚಳವಳಿ ರೂಪ ಪಡೆದುಕೊಂಡಿತು. ಕಡೆಗೆ ಅಲ್ಲಿನ ಪಾಲಕರು ವಿಧಿ ಇಲ್ಲದೆ ತಲೆಬಾಗಲೇಬೇಕಾಯಿತು. ಆ ಒಂದು ಚಳವಳಿ ನವ ಸಮಾಜಕ್ಕೆ ನಾಂದಿ ಹಾಡಿತು ಎಂದು ಈಗಲೂ ಕೇರಳದಲ್ಲಿ ಹೇಳಿಕೊಳ್ಳುತ್ತಾರೆ ಎಂಬ ಇಲ್ಲದ ಸಲ್ಲದ ವದಂತಿಯನ್ನು ಹಬ್ಬಿಸಲು ಹಿಂದೂ ವಿರೋಧಿಗಳು ಶ್ರಮಿಸುತ್ತಿದ್ದಾರೆ..

Image result for ravi verma painting of women
ಆದರೆ ನಾವು ಈ ಕತೆಯನ್ನು ಇಂದಿನವರೆಗೂ ಯಾವ ಇತಿಹಾಸವೂ ಬರೆದುಕೊಂಡಿಲ್ಲ ಯಾಕೆಂದರೆ ಇಂತಹ ಇತಿಹಾಸ ಇರಲೇ ಇಲ್ಲ… ಈ ಪದ್ಧತಿ ಇದ್ದಿರುವುದು ಸತ್ಯ ಅದಕ್ಕೆ ಕೆಲ ಆಧಾರಗಳೂ ನಮಗೆ ದೊರೆತೆವೆ… ಆದರೆ ಇಂತಹ ಕಟ್ಟುಪಾಡುಗಳಿಗೆ ಪಾಲಿಸುತ್ತಿದ್ದದ್ದು ಕೆಳಜಾತಿಯವರು ಎಂದು ಯಾವ ಇತಿಹಾಸದಲ್ಲೂ ಮಾಹಿತಿ ಇಲ್ಲ… ಇಲ್ಲಿ ಮೇಲು ವರ್ಗದವರು ಅಥವಾ ಕೆಳ ವರ್ಗದವರು ಎನ್ನುವ ಯಾವ ಭೇದ ಭಾವವೂ ಇರಲಿಲ್ಲ.. ಎಂಬುವುದಕ್ಕೆ ಸ್ಪಷ್ಟವಾಗಿ ಹಲವಾರು ಚಿತ್ರಣಗಳು ನಮಗೆ ದೊರೆಯುತ್ತದೆ. ಆದರೆ ಇಂತಹ ತೆರಿಗೆ ಪದ್ಧತಿಗಳು ಆಗಲಿ ಎಲ್ಲೂ ಯಾವ ಇತಿಹಾಸವನ್ನು ನೋಡಿದರೂ ಕಾಣ ಸಿಗುವುದಿಲ್ಲ… ಹಿಂದೂ ವಿರೋಧಿಗಳು ಮಾತ್ರ ಹಿಂದೂಗಳನ್ನು ಸಮಾಜದಲ್ಲಿ ದೂಷಣೆ ಮಾಡಲು ಇಂತಹ ಕೃತ್ಯಗಳನ್ನು ಮಾಡುತ್ತಿವೆ..
ಈ ರೀತಿಯಾಗಿ ಹಿಂದೂಗಳನ್ನು ಸಮಾಜದಿಂದ ತುಚ್ಚ ರೀತಿಯಲ್ಲಿ ಕಾಣಿಸುವಂತೆ ಮಾಡುತ್ತಿರುವ ಕೈವಾಡ ಯಾರದ್ದೂ ಎಂದು ತಿಳಿದಿದೆಯೇ? ಈತ ಬೇರಾರು ಅಲ್ಲ ಟಿ. ಮುರಳಿ( ಚಿತ್ರಕರಣ್) ಹಿಂದೂಗಳ ವಿರುದ್ಧ ನಕಲಿ ಕಥೆಯನ್ನು ಸೃಷ್ಠಿ ಮಾಡುವಲ್ಲಿ ಈತನದ್ದು ಎತ್ತಿದ ಕೈ!! ಎಲ್ಲಾ ಜಾತ್ಯಾತೀಯ ಉದಾರವಾದಿಗಳಿಂದ ಇಂತಹ ಕಥೆಗಳಿಗೆ ಅಭೂತ ಪೂರ್ವ ಪ್ರಚಾರವನ್ನು ನೀಡಲಾಗಿದೆ.. ಕೇವಲ ಗೂಗಲ್‍ಗಳು ಅಲ್ಲದೆ ನಿಯತಕಾಲಿಕೆಗಳು ಅಂತರಾಷ್ಟ್ರೀಯ ಪ್ರಚಾರದ ವ್ಯಾಪ್ತಿಯನ್ನು ಪಡೆದಿದೆ.. ಆದರೆ ಒಮ್ಮೆ ಈತನ ಬಗ್ಗೆ ತಿಳಿದುಕೊಳ್ಳೋಣ… ಈತ ಒಬ್ಬ ಹಿಂದೂ ವಿರೋಧಿ!! ಈತನ ಬ್ಲಾಗ್‍ಗಳನ್ನು ಗಮನಿಸಿದಾಗ ಹಿಂದೂಗಳು ಮತ್ತು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಒಂದಾ ಎರಡಾ? ಹಿಂದೂಗಳನ್ನು ಅವಮಾನಿಸಿ ಮತ್ತು ಹಿಂದೂ ಆರಾಧ್ಯ ದೇವರುಗಳನ್ನು ನಿಂದನೆ ಮಾಡಿ ಬರೆಯುವುದೇ ಈತನ ಕೆಲಸ!! ಈತ ಜಾತಿವಾದಿಗಗಳಿಂದ, ಹಿಂದೂ ವಿರೋಧಿಗಳಿಂದ ಬೆಂಬಲ ಪಡೆದು ಹಿಂದೂ ಸಂಸ್ಕøತಿಗೆ ಅವಮಾನ ಮಾಡಲು ಹೊರಟಿದ್ದಾನೆ!!


ಇದನ್ನು ಗಮನಿಸಿದಾಗ ಯಾಕೆ ಈ ರೀತಿಯಾಗಿ ಪದ್ಧತಿ ಜಾರಿಯಲ್ಲಿತ್ತು ಅಂದರೆ ಅವರಿಗೆ ಬೇಕಾಗಿರುವಂತಹ ಬಟ್ಟೆ ಬರೆ ಇರಲಿಲ್ಲ ಹಾಗಗಿ ಇಲ್ಲಿ ಪ್ರತೀಯೊಬ್ಬ ಹೆಂಗಸರೂ ಗಂಡಸರೂ ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ…. ಇದಕ್ಕೆ ಇಂತಹ ಹಿಂದೂ ವಿರೋಧಿಗಳು ಇತಿಹಾಸವನ್ನೇ ತಿರುಚಿ ಈ ರೀತಿಯಾಗಿ ಹಿಂದೂಗಳನ್ನು ದೂರಿದ್ದಾರೆ ಅಷ್ಟೇ!!

 

ಮೊದಲು ನಾವು ಈ ಚಿತ್ರವನ್ನು ಗಮನಿಸೋಣ!! ಈ ಚಿತ್ರದಲ್ಲಿರುವವರು ಕೀಳು ಮಟ್ಟದವರು ಅಲ್ಲ!! ಬಡವರೂ ಅಲ್ಲ!! ಆತ ಬರೆದಿರುವ ರೀತಿಯನ್ನು ಗಮನಿಸಿದಾಗ ಕೆಳ ಜಾತಿಯ ಜನರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದರು ಎಂದು.. ಆದರೆ ಇಲ್ಲಿ ಇಂತಹ ಪದ್ಧತಿ ಇದ್ದಿರುವುದು ನಿಜ.. ಮೇಲ್ಜಾತಿಯವರೂ ಹಾಗೂ ಕೆಳ ಜಾತಿಯವರನ್ನೂ ಸಮಾನವಾಗಿ ಕಾಣುತ್ತಿದ್ದರು … ಯಾವು ತೆರಿಗೆಯೂ ಅಲ್ಲಿ ಇರಲಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣ ಸಿಗುತ್ತದೆ.

ನಾವು ನಿಧಾನವಾಗಿ ಈ ಚಿತ್ರವನ್ನು ಗಮನಿಸಿದಾಗ ಈ ಚಿತ್ರದಲ್ಲಿರುವ ಮಹಿಳೆಯರು ದೇಹದ ಮೇಲಿನ ಭಾಗಕ್ಕೆ ಯಾವುದೇ ಬಟ್ಟೆಯನ್ನು ಹಾಕಿಲ್ಲ!! ಇವರು ನಿಜವಾಗಿಯೂ ಕೆಳ ವರ್ಗದವರೇ? ನಿಜವಾಗಿಯೂ ಅಲ್ಲ!! ಎರಡನೇ ಚಿತ್ರವನ್ನು ಗಮನಿಸಿದಾಗ ತಿರುವನಂತಪುರದ ರಾಣಿ!! ಆಕೆ ಯಾವ ರೀತಿಯಾಗಿ ಬಟ್ಟೆ ಧರಿಸಿದ್ದಾಳೆ ಎಂದು ನಾವು ಗಮನಿಸಬಹುದು… ಒಬ್ಬ ರಾಣಿ ಕೆಳ ಜಾತಿಯವಳೇ? ಈ ಚಿತ್ರವನ್ನು ಬಿಡಿಸಿದ್ದು 17ನೇ ಶತಮಾನದಲ್ಲಿ ವಿಲಿಯಮ್ ನೆಹ್ಯೂಫ್ ಬಿಡಿಸಿದ ಚಿತ್ರ ಇದಾಗಿದೆ…ಈ ಚಿತ್ರವು ಎಲ್ಲಾ ನೋಡುಗರಿಗೆ ಸಮರ್ಥನೆಯನ್ನು ನೀಡುತ್ತದೆ..

ಆ ಸಮಯಲ್ಲಿ ಆತ ಬರೆದ ಪುಸ್ತಕದಲ್ಲಿ ರಾಣಿಯೊಂದಿಗಿನ ಈ ಸಭೆಯನ್ನು ವಿವರಿಸುತ್ತಾನೆ…, ನಾನು ಅವರ ಘನತೆಯ ಉಪಸ್ಥಿತಿಯಲ್ಲಿ ಪರಿಚಯಿಸಲ್ಪಟ್ಟಿದೆ. ಅವಳು ಸುಮಾರು 700 ನಾಯರ್ ಸೈನಿಕರ ಸಿಬ್ಬಂದಿಯಾಗಿದ್ದಳು, ಮಲಬಾರ್ ಫ್ಯಾಶನ್ ನಂತರ ಎಲ್ಲಾ ಉಡುಪುಗಳನ್ನು ಧರಿಸಿದ್ದಳು; ರಾಣಿಯ ವೇಷಭೂಷಣವು ಅವಳ ಮಧ್ಯದ ಸುತ್ತಲಿನ ಕ್ಯಾಲಿಕೋ ವಸ್ತ್ರವನ್ನು ಹೊರತುಪಡಿಸಿ, ತನ್ನ ದೇಹದ ಮೇಲಿನ ಭಾಗವು ನಗ್ನವಾಗಿತ್ತು ಎಂಬುವುದನ್ನು ಆ ಸಮಯದಲ್ಲಿಯೇ ವಿವರಿಸಿದ್ದ..

ಕೇರಳದ ಸಾಂಪ್ರದಾಯಿಕ ಉಡುಗೆ ಪುರುಷರಿಗೆ ಸರಳವಾದ ಲಂಗ್ಗಿ (ಧೋತಿ) ಮತ್ತು ಮಹಿಳೆಯರಿಗೆ ಕುಪ್ಪಸವಿಲ್ಲದೇ ಸರಳವಾದ ಬಿಳಿ / ಕೆನೆ ಸೀರೆ ಆ ಭಾಗದ ಉಡುಪಾಗಿತ್ತು… ಇದು ಮುಖ್ಯವಾಗಿ ಕೇರಳದ ಉಷ್ಣವಲಯದ ಹವಾಮಾನದಿಂದಾಗಿತ್ತು ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಧರ್ಮ ಅಥವಾ ದುರ್ಬಳಕೆಗೆ ಸಂಬಂಧಿಸಿರಲಿಲ್ಲ. ಇಂದಿಗೂ ಸಹ ನೀವು ಕೇರಳದ ಕೆಲವೊಂದು ಆಂತರಿಕ ಭಾಗಗಳನ್ನು ಭೇಟಿ ಮಾಡಿದರೆ, ಕುಪ್ಪಸವಿಲ್ಲದೆ ಮೇಲ್ಜಾತಿಯ ಧರಿಸಿರುವ ಅನೇಕ ಸೀರೆಗಳನ್ನು ನೀವು ನೋಡಲು ಸಾಧ್ಯ.. ಆದರೆ ಇಂತಹ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ಹಿಂದೂ ಧರ್ಮ, ಹಿಂದೂ ಸಂಸ್ಕøತಿಯನ್ನು ಈ ರೀತಿಯಾಗಿ ಕೀಳುಮಟ್ಟಕ್ಕೆ ತೆಗೆದುಕೊಳ್ಳುವುದು ನಿಜವಾಗಿಯೂ ಅಸಹ್ಯಕರ!!!
ಭಾರತಕ್ಕೆ ಬ್ರಿಟಿಷರ ಆಗಮನವಾಗುತ್ತದೆ.. ಆ ಸಮಯದಲ್ಲಿ ಅಂತಹ ಮಹಿಳೆಯರನ್ನು ಕಂಡಂತಹ ಬ್ರಿಟಿಷರು ಅವರು ಬೇಕಾದ ರೀತಿಯಲ್ಲಿ ಬಳಸುತ್ತಾರೆ.. ಆಗ ಸಾಮಾನ್ಯ ಜನರಿಗೆ ಇದನ್ನು ವಿರೋಧಿಸಲೂ ಸಾಧ್ಯವಾಗಲಿಲ್ಲ… ಯಾಕೆಂದರೆ ಎಲ್ಲಾ ಅಧಿಕಾರ ಬ್ರಿಟಿಷರದ್ದಾಗಿತ್ತು.. ಆ ಸಮಯದಲ್ಲಿ ಹೆಂಗಳೆಯರು ದೇಹವನ್ನು ಮೇಲ್ಭಾಗವನ್ನು ತೆಳುವಾಗಿರುವಂತಹ ಬಟ್ಟೆಯಿಂದ ಮುಚ್ಚಲು ಆರಂಭಿಸುತ್ತಾರೆ..ಅದಕ್ಕಿಂತ ಮುಂಚೆ ಮೇಲು ವರ್ಗ ಕೀಳು ವರ್ಗ ಎಂಬ ಯಾವ ಭೇದ ಭಾವವಿಲ್ಲದೆ ಎಲ್ಲರೂ ಸಮಾನವಾಗಿಯೇ ಬಟ್ಟೆಯನ್ನು ಧರಿಸುತ್ತಿದ್ದರು..

1813ರಲ್ಲಿ ಜಾನ್ ಮುನ್ರೋ ಎನ್ನುವಂತಹವನು ಕೇರಳದಲ್ಲಿ ಈ ಕೆಳಜಾತಿಯವರನ್ನೆಲ್ಲಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒತ್ತಡ ಹೇರುತ್ತಾನೆ.. ಮತಾಂತರವಾದರೆ ನಿಮಗೆ ದೇಹ ಪೂರ್ತಿ ಬಟ್ಟೆ ಹಾಕಲು ಅವಕಾಶ ಕೊಡುತ್ತೇವೆ ಎಂದು ಹೇಳುತ್ತಾನೆ.. ಆದರೆ ತಿರುವನಂತಪುರದ ರಾಜ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಬಿಡುವುದಿಲ್ಲ ಮುಂದೆ ಅವರಿಗೆ ದೇಹ ಪೂರ್ತಿಯಾಗಿ ಮುಚ್ಚಲು ಬೇಕಾದ ಬಟ್ಟೆಯನ್ನು ಒದಗಿಸುವಲ್ಲಿ ತಿರುವನಂತಪುರದ ರಾಜ ಸಫಲನಾಗುತ್ತಾನೆ.

ಹಿಂದೂ ಧರ್ಮ ಎಂದರೆ ಇಂತಹ ಜಾತಿವಾದಿಗಳು ಏನೆಂದುಕೊಂಡಿದ್ದಾರೆ? ಹಿಂದೂ ಧರ್ಮಕ್ಕೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ… ಹಿಂದೂ ಧರ್ಮವನ್ನು ವಿದೇಶದಲ್ಲೂ ಇದಕ್ಕೆ ಒಂದು ವಿಭಿನ್ನ ಗೌರವವನ್ನು ನೀಡುತ್ತಾರೆ.. ಇಲ್ಲಿ ಹೆಣ್ಣು ಮಕ್ಕಳಿಗೆ ಒಂದು ವಿಷೇಶ ಗೌರವವಿದೆ… ಪ್ರತೀಯೊಂದು ಹೆಣ್ಣನ್ನು ತಾಯಿ ಸಮಾನವಾಗಿ ನೋಡಿಕೊಳ್ಳುವ ಸಂಸ್ಕøತಿ ಹಿಂದೂ ಧರ್ಮದ್ದು!! ಹಿಂದೂ ಧರ್ಮಕ್ಕೆ ಯಾವಾಗಲೂ ಸತ್ಯದೆಡೆಗೆ ಇರುವಂತಹದ್ದು.. ಇಲ್ಲಿ ಯಾವುದೂ ಮೇಲೂ ಅಲ್ಲ.. ಯಾವ ಜಾತಿಯೂ ಕೀಳೂ ಅಲ್ಲ ಎಂಬುವುದನ್ನು ಜಾತಿವಾದಿಗಳು ತಿಳಿದುಕೊಳ್ಳಬೇಕು… “ವಿನಾಶ ಕಾಲೇ ವಿಪರೀತ ಬುದ್ಧಿ “

ಪವಿತ್ರ

Tags

Related Articles

Close