ಅಂಕಣದೇಶಪ್ರಚಲಿತ

ಪ್ರಧಾನಿ ಮೋದಿಯೆದುರು ಚೀನಾಕ್ಕೆ ಸೋಲು ! ಕೊನೆಗೂ ದೋಕ್ಲಂ ಬಿಕ್ಕಟ್ಟು ಶಮನ!!

ಇನ್ನೇನು ಭಾರತ ಮತ್ತು ಚೀನಾ ಯುದ್ಧ ಸಂಭವಿಸಿತು ಎನ್ನುವಷ್ಟರಲ್ಲಿ ಎರಡೂ ದೇಶಗಳು ಒಂದು ಒಮ್ಮತದ ನಿರ್ಧಾರಕ್ಕೆ ಬಂದಿದೆ. ಎರಡೂ ದೇಶಗಳು ನಿಯೋಜಿತ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಲು ನಿರ್ಧರಿಸಿದ್ದು, ದೋಕ್ಲಂ ಬಿಕ್ಕಟ್ಟು ಶಮನಗೊಂಡಿದೆ. ಇದು ನರೇಂದ್ರ ಮೋದಿ ಸರಕಾರದ ರಾಜತಾಂತ್ರಿಕ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ.ದೋಕಲಂ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಕಳೆದೆರಡು ತಿಂಗಳಿನಿಂದ ತಿಕ್ಕಾಟ ನಡೆಯುತ್ತಿತ್ತು. ಭಾರತ, ಭೂತಾನ್ ಹಾಗೂ ಚೀನಾ ದೇಶಗಳ ಗಡಿ ಕೂಡುವ ಪ್ರದೇಶ ಯಾರಿಗೆ ಸೇರಿದ್ದು, ಈ ಪ್ರದೇಶದ ಮೇಲೆ ಯಾವ ದೇಶಕ್ಕೆ ಅಧಿಕಾರವಿದೆ ಎಂಬ ಚರ್ಚೆ ಆರಂಭವಾಗಿತ್ತು.


ಆದರೆ ಇಂದು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದವೇರ್ಪಟ್ಟಿದ್ದು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಿದೆ. ಚೀನಾ ಹಾಗೂ ಭಾರತ ಎರಡೂ ದೇಶಗಳು ತಾವು ನಿಯೋಜಿಸಿದ್ದ ಸೇನೆಯನ್ನು ವಾಪಸ್ ಕರೆಸಿದ್ದು, ಸಂಭವಿಸಬಹುದಾಗಿದ್ದು ಯುದ್ಧ ಕಾರ್ಮೋಡವೊಂದು ತಪ್ಪಿದಂತಾಗಿದೆ.

ಮೋದಿಯ ರಾಜತಾಂತ್ರಿಕ ಗೆಲುವು!!

ದೋಕಲಂ ಬಿಕ್ಕಟ್ಟು ಕುರಿತು ನರೇಂದ್ರ ಮೋದಿಯವರ ಜಾಣೆ ನಡೆಯಿಂದ ಸಂಭಾವ್ಯ ನಡೆಯಬಹುದಾಗಿದ್ದ ಯುದ್ಧವೊಂದು ತಪ್ಪಿದಂತಾಗಿದೆ. ಚೀನಾ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಭಾರತದ ವಿರುದ್ಧ ಎಚ್ಚರಿಕೆ ನೀಡುತ್ತಲೇ ಇದ್ದು, ಭಾರತದ ಜೊತೆ ನಿರ್ದಯವಾಗಿ ವರ್ತಿಸುತ್ತದೆ. ಚೀನಾದ ಸಾರ್ವಭೌಮತೆಯನ್ನು ರಕ್ಷಿಸಲು ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ಧರಿದ್ದೇವೆ ಎಂದೆಲ್ಲಾ ಎಚ್ಚರಿಕೆ ನೀಡುತ್ತಾ ಬರುತ್ತಿತ್ತು. ಆದರೆ ಸರಕಾರ ಮಾತ್ರ ಚೀನಾದ ಬೆದರಿಕೆಗಳಿಗೆ ಯಾವುದೇ ಸೊಪ್ಪು ಹಾಕದೆ ತನ್ನ ನಿಯೋಜಿತ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿರಲಿಲ್ಲ.

 


ಚೀನಾದ ಬೆದರಿಕಗಳಿಗೆ ಮಣಿಯದೆ ಇನ್ನಷ್ಟು ಗಟ್ಟಿ ನಿರ್ಧಾರಗಳನ್ನು ಕೈಗೊಂಡ ಮೋದಿ ಸರಕಾರದ ನಡೆಯಿಂದ ಇಂದು ಎಲ್ಲವೂ ಶಾಂತಗೊಂಡಂತಾಗಿದೆ.
ಒಂದರ್ಥದಲ್ಲಿ ಚೀನಾ ಭಾರತಕ್ಕೆ ಹೆದರಿದೆ ಎಂದೇ ಅರ್ಥೈಸಲಾಗುತ್ತಿದೆ.ಚೀನಾ ದೇಶಕ್ಕೆ ಹಲವಾರು ವರ್ಷಗಳಿಂದ ಬೇರೆ ರಾಷ್ಟ್ರಗಳ ಭೂಮಿಯನ್ನು ಕಬಳಿಸುವ ಚಾಳಿ ಹೊಂದಿದೆ. ಇದೇ ಉದ್ದೇಶದಿಂದ ದೋಕಲಂ ಅನ್ನೂ ನಿಯಂತ್ರಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿತ್ತು. ತನ್ನ ಸರಕಾರಿ ನೇತೃತ್ವದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಮುಖಾಂತರ ಭಾರತವನ್ನು ಹೆದರಿಸಲು ನೋಡಿಕೊಂಡಿತ್ತು. ಇಂದು ವಿದೇಶಿ ಸಚಿವಾಲಯ ಹೇಳಿಕೆಯೊಂದನ್ನು ಹೊರಡಿಸಿದ್ದು, ಭಾರತ ಮತ್ತಯ ಚೀನಾ ಎರಡೂ ರಾಷ್ಟ್ರಗಳು ದೋಕಲಂ ಗಡಿ ಪ್ರದೇಶದ ಮೇಲೆ ಗೌರವವನ್ನು ಕಾಯ್ದುಕೊಂಡು ಬರುತ್ತಿದೆ. ಎರಡೂ ರಾಷ್ಟ್ರಗಳು ಗಡಿ ಪ್ರದೇಶದ ಕುರಿತು ಎರಡೂ ದೇಶಗಳ ಗೌರವದ ಭಾವನೆಯನ್ನು ತೋರಿಸಿಕೊಂಡು ಬರಬೇಕಲ್ಲದೆ ಮುಂದೆಯೂ ಯಥಾ ಸ್ಥಿತಿಯನ್ನು ಕಾಯ್ದುಕೊಂಡು ಬರಲಾಗುತ್ತಿದೆ ಎಂದು ಹೇಳಿಕೊಂಡಿದೆ

ಚೀನಾದ ಅತಿದೊಡ್ಡ ಸೇನೆಯನ್ನು ಎದುರು ಹಾಕಿಕೊಂಡು ಭಾರತ ದೃಢವಾಗಿ ಚೀನಾದ ಎದುರು ಎದೆಗೆ ಎದೆ ಕೊಟ್ಟು ನಿಂತಿರುವುದಕ್ಕೆ ಇಡೀ ವಿಶ್ವದಲ್ಲೇ ಭಾರತ ಗೌರವಕ್ಕೆ ಪಾತ್ರವಾಗಿದೆ. ಚೀನಾದ ಎಷ್ಟೇ ದೊಡ್ಡ ಸೇನೆ ಇದ್ದರೂ ಅದರ ಎದುರು ಮಂಡಿಯೂರದ ಮೋದಿ ಸರಕಾರದ ನಡೆ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ಪಾಕಿಸ್ತಾನಕ್ಕೆ ಅಸಮಾಧಾನ…!
ಚೀನಾ ಮತ್ತು ಭಾರತದ ಮಧ್ಯೆ ಯುದ್ಧ ಸಂಭವಿಸಿತು ಎಂದು ಮಂಡಿಗೆ ಮೆಲ್ಲುತ್ತಿದ್ದ ಪಾಕಿಸ್ತಾನಕ್ಕೆ ಎರಡೂ ರಾಷ್ಟ್ರಗಳ ನಿರ್ಧಾರದಿಂದ ಅಸಮಾಧಾನ ಮೂಡಿದೆ. ಗಡಿ ವಿಚಾರದಲ್ಲಿ ಎರಡೂ ರಾಷ್ಟ್ರಗಳು ಶಾಂತಿ ಸಂಯಮದಿಂದ ವರ್ತಿಸಲು ನಿರ್ಧರಿಸಿದ ವಿಚಾರ ಪಾಕಿಸ್ತಾನದ ಅಸಮಾಧಾನಕ್ಕೆ ಕಾರಣವಾಗಿದೆ. ಚೀನಾ ಏಷ್ಯಾ ಖಂಡದಲ್ಲಿ ಸುಪರ್ ಪವರ್ ಆಗಬಹುದು ಎಂದು ಪಾಕಿಸ್ತಾನ ನಿರೀಕ್ಷಿಸಿದ್ದು, ಅದೆಲ್ಲಾ ಇದೀಗ ಹುಸಿಯಾದಂತಾಗಿದೆ.

Indian and Chinese Army during the parade on the fourth India China joint military training excercise Hand -in-Hand at Aundh military station on it’s concluding day on Tuesday. Express Photo by Arul Horizon, 25-11-2014, Pune

-ಚೇಕಿತಾನ**

Tags

Related Articles

Close