ಪ್ರಚಲಿತ

ಬ್ರೇಕಿಂಗ್……!!!! ಜಯಲಲಿತಾ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್!!! ಸಾವಿನ ಬಗ್ಗೆ ಪಕ್ಷ ಸುಳ್ಳು ಹೇಳಿತೇ?!!!

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಾವಿನ ಪ್ರಕರಣ ಸಾಕಷ್ಟು ನಿಗೂಢತೆಯನ್ನು ಸೃಷ್ಟಿಸಿದೆ. ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಬಹುತೇಕ ಚಿಕಿತ್ಸೆ ಪಡೆದ ಬಳಿಕ ಮೃತಪಟ್ಟಿದ್ದರು. ಈಕೆಯದ್ದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವ ಶಂಕೆ ಇನ್ನೂ ಶಮನಗೊಂಡಿಲ್ಲ. ಈ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಾಸೆಯನ್ನೂ ಹಲವಾರು ಮಂದಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆಯುತ್ತಾ ಸಾಗುವ ಜಯಾ ಸಾವಿನ ಪ್ರಕರಣ, ಕೊನೆಕೊನೆಗೆ ಅದೊಂದು ವ್ಯವಸ್ಥಿತ ಹತ್ಯೆಯಾಗಿರಬಹುದೆಂಬ ಶಂಕೆ ಬಲವಾಗುವಂತೆ ಮಾಡುತ್ತಿದೆ.

ಈ ಶಂಕೆ ಬಲವಾಗುವಂತೆ ಮಾಡಲು ಕಾರಣವೂ ಇದೆ. ಯಾಕೆಂದರೆ ತಮಿಳುನಾಡಿನ ಅರಣ್ಯ ಮಂತ್ರಿ ಡಿಂಡಿಗಲ್ ಶ್ರೀನಿವಾಸನ್ ಅವರು ನೀಡಿರುವ ಹೇಳಿಕೆಯೊಂದು ಇಡೀ ದೇಶದಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಯಾಗುವಂತೆ ಮಾಡಿದೆ. ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ… `ಜಯಲಲಿತಾ ಅವರ ಆರೋಗ್ಯದ ಬಗ್ಗೆ ಪಕ್ಷ ಸುಳ್ಳು ಹೇಳುತ್ತಿದೆ’ ಎಂಬ ಮಾತು ದೇಶದಲ್ಲೇ ಬಿರುಗಾಳಿ ಸೃಷ್ಟಿಸಿದಂತಾಗಿದೆ.’

ತಮಿಳುನಾಡಿನ ಅರಣ್ಯ ಸಚಿವ ಡಿಂಡಿಗಲ್ ಶ್ರೀನಿವಾಸನ್ ಅವರು ಸಭೆಯೊಂದರಲ್ಲಿ ಹೇಳಿಕೆಯೊಂದನ್ನು ನೀಡಿ, `ಎಐಡಿಎಂಕೆ ಪಕ್ಷ ಜಯಾ ಆರೋಗ್ಯದ ಬಗ್ಗೆ ಸುಳ್ಳು ಹೇಳುತ್ತಿದೆ. ಈ ಬಗ್ಗೆ ಜನತೆಯಲ್ಲಿ ನಾವು ಕ್ಷಮೆಯಾಚಿಸಬೇಕು. ಇವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆ ವಾರ್ಡಲ್ಲಿದ್ದ ಅವರನ್ನು ನೋಡಲು ಯಾರಿಗೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಪಕ್ಷ ಅವರ ಸಾವಿನ ಕುರಿತು ಸುಳ್ಳನ್ನು ಹೇಳುತ್ತಿದೆ. ಆಸ್ಪತ್ರೆಗೆ ಹೋದವರಿಗೆ ಶಶಿಕಲಾರನ್ನು ಭೇಟಿ ಮಾಡಲು ಅವಕಾಶ ಸಿಗುತ್ತತ್ತೇ ಹೊರತು ಅಮ್ಮನನ್ನು ಭೇಟಿಯಾಗಲು ಅವಕಾಶ ಸಿಗುತ್ತಿರಲಿಲ್ಲ. ನಮ್ಮನ್ನು ಕ್ಷಮಿಸಿ ಯಾಕೆಂದರೆ ನಾವೆಲ್ಲರೂ ವಾರ್ಡಿಗೆ ಹೋಗಿ ನೋಡಲಿಲ್ಲ. ಪಕ್ಷದ ರಹಸ್ಯ ಕಾಪಾಡಲು ನಾವು ನೋಡಿದ್ದೆವು ಎಂದು ಸುಳ್ಳು ಹೇಳಿದ್ದೇವೆ ಎಂದು ಹೇಳಿದ್ದಾರೆ.

ದೇಶದ ಪರಮೋಚ್ಛ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಅಮ್ಮನನ್ನು ಭೇಟಿಯಾಗಿದ್ದರು. ಶಶಿಕಲಾ ಹಾಗೂ ಮತ್ತು ವೈದ್ಯರು ಅವರಿಗೆ ಭೇಟಿ ಮಾಡಲು ಮಾತ್ರ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಆದರೆ ನಮಗೆ ಅವಕಾಶವನ್ನೇ ಕೊಡಲಿಲ್ಲ. ಎಂದು ಹೇಳಿದ್ದಾರೆ.

ಅರಣ್ಯ ಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನಕರನ್ ಅವರು ನಾವು ಅಪೋಲೋ ಆಸ್ಪತ್ರೆಯಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ನೀಡಿದ್ದೇವೆ. ಶಶಿಕಲಾರಿಂದ
ಅನುಮೋದನೆ ಪಡೆದ ಬಳಿಕ ಸರಿಯಾದ ಮಾಹಿತಿ ನೀಡಲಿದ್ದೇವೆ. ಪ್ರಕರಣದ ಕುರಿತು ಸಿಬಿಐ ತನಿಖೆಯನ್ನು ಎದುರಿಸಲೂ ಸಿದ್ಧ ಎಂದು ಹೇಳಿದ್ದಾರೆ.

ಈ ಮಾತುಗಳು ಸಾಕಷ್ಟು ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಹಾಗಿದ್ದರೆ ಜಯಲಲಿತಾ ಅವರಿಗೆ ಏನಾಗಿತ್ತು, ಆಕೆ ಮೃತಪಟ್ಟಿದ್ದು ಹೇಗೆ, ಎಂಬ ನಾನಾ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ. ಜಯಲಲಿತಾ ಅಸೌಖ್ಯಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಳಿಕ ಆಕೆಯನ್ನು ನೋಡಿಕೊಳ್ಳುತ್ತಿದ್ದುದು ಆಕೆಯ ಆಪ್ತೆ ಶಶಿಕಲಾ ನಟರಾಜನ್. ಜಯ ಅವರನ್ನು ಯಾರಿಗೂ ನೋಡಲು ಅವಕಾಶ ಮಾಡಿಕೊಡಲೊಲ್ಲದ ಶಶಿಕಲಾ ವರ್ತನೆಯ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತವಾಗಿತ್ತು. ತಿಂಗಳುಗಟ್ಟಲೆ ಆಸ್ಪತೆಯಲ್ಲಿದ್ದ ಜಯಲಲಿತಾ ಒಂದು ದಿನ ಇದ್ದಕ್ಕಿದ್ದಂತೆ ಮೃತಪಟ್ಟಿದ್ದರು. ಇದು ತಮಿಳುನಾಡು ಜನತೆಯ ಆಕ್ರೋಶಕ್ಕೂ ಕಾರಣವಾಗಿತ್ತು. ಜಯಾ ಅವರದ್ದು ವ್ಯವಸ್ಥಿತ ಕೊಲೆ ಎಂಬ ಆರೋಪ ಕೇಳಿಬಂದಿತ್ತಲ್ಲದೆ ಶಶಿಕಲಾ ಅವರ ಮೇಲೆ ಶಂಕೆ ವ್ಯಕ್ತಪಡಿಸಿ ಮಾತಾಡಿದ್ದರು.

ಆದರೆ ಇದೀಗ ಅಕ್ರಮ ಆಸ್ತಿ ಕಬಳಿಕೆಯ ಆರೋಪದ ಮೇರೆಗೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಜಯಾ ಪ್ರಕರಣ ಇನ್ನೇನು ತಣ್ಣಗಾಗಯಿತು ಎನ್ನುವಷ್ಟರಲ್ಲಿ ತಮಿಳುನಾಡು ಮಂತ್ರಿ ಜಯ ಸಾವಿನ ಬಗ್ಗೆ ಅನುಮಾನವಿದ್ದು, ಪಕ್ಷ ಏನನ್ನೋ ಮುಚ್ಚಿಡುತ್ತದೆ ಎಂಬ
ಹೇಳಿಕೆ ಗಂಭೀರ ತಿರುವನ್ನು ಪಡದುಕೊಂಡಿದೆ.

ಸಿಬಿಐ ತನಿಖೆ ನಡೆಸುವಂತೆ ಬಲವಾದ ಒತ್ತಾಯಜಯಲಲಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾತಾಡಿದ ಬೆನ್ನಲ್ಲೇ ತಮಿಳುನಾಡಲ್ಲಿ ಪ್ರತಿಭಟನೆಗಳು ತೀವ್ರವಾಗುವ ಲಕ್ಷಣಗಳು ಗೋಚರಿಸಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯ ಬಲವಾಗಿದೆ. ಸ್ಟಾಲಿನ್ ಅವರು ಪ್ರತಿಕ್ರಿಯಿಸಿ ಪ್ರಕರಣದ ಸಿಬಿಐ ತನಖೆ ಒತ್ತಾಯಿಸಿದ್ದಾರೆ. ಅಮ್ಮನಿಗೆ ನೀಡಿದ್ದ ಚಿಕಿತ್ಸೆಯ ಬಗ್ಗೆ ಆಕೆಯ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂಬ ಒತ್ತಾಯ ಸಾಕಷ್ಟು ಕೇಳಿಬಂದಿದೆ.

-ಚೇಕಿತಾನ

source: http://www.republicworld.com/s/7892/tn-minister-makes-sensational-claim-says-
party-lied-about-jayalalithaas-health

Tags

Related Articles

Close