ಪ್ರಚಲಿತ

ಭಾರತದ ಸೇನಾ ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತಿದ್ದ ಹಾಗೇ ನೆರೆಯ ರಾಷ್ಟ್ರಗಳಲ್ಲಿ ಭೀತಿ ಶುರುವಾಗಿದ್ದು ಯಾಕೆ ಗೊತ್ತೇ?!

ದೇಶದ ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯ ಶಕೆ ಈಗಾಗಲೇ ಆರಂಭವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೇ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ , ವಾಯುಪಡೆಗೆ ರಫಾಲೆ ಪೈಟರ್ ಜೆಟ್ ನಂತಹ ಯುದ್ದ ವಿಮಾನಗಳಿಗೆ ಮೋದಿ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಇದೀಗ ಪ್ರಾರಂಭಿಸಿದೆ.

ನಮ್ಮ ನೆರೆ ದೇಶ ಚೀನಾ ದಿನೇ ದಿನೇ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವುದು ಗೊತ್ತೇ ಇದೆ!!! ಇನ್ನು ಈಗಾಗಲೇ ಭಾರತ ಒರಿಸ್ಸಾ ಕರಾವಳಿಯ ರಕ್ಷಣಾ ಪರೀಕ್ಷಾ ಸೌಲಭ್ಯದಿಂದ ಸೂಪರ್ಸಾನಿಕ್ ಸರ್ಫೇಸ್-ಟು-ಏರ್ ಮಿಸೈಲ್‍ಆಕಾಶ್ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು, ಚೀನಾದಿಂದ ವಾಯುದಾಳಿಯನ್ನು ತಡೆಗಟ್ಟಲು ಈಶಾನ್ಯ ಗಡಿಯಲ್ಲಿ ಈ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲು ಭಾರತ ಈಗ ಯೋಜಿಸುತ್ತಿದೆ.

ಈ ಹಿಂದೆ ಸಿಕ್ಕೀಂ ಗಡಿಯಲ್ಲಿ ಭಾರತದ ಒಳಗೆ ಪ್ರವೇಶಿಸಲು ಚೀನಾ ಸೈನಿಕರು ಪ್ರಯತ್ನಿಸುವಾಗ ಭಾರತದ ಸೈನಿಕರೊಂದಿಗೆ ವಾಗ್ವಾದ ನಡೆದಿತ್ತು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಹಲವು ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ರಾಷ್ಟ್ರಗಳು ತಮ್ಮ ಸೇನೆಯನ್ನು ಗಡಿಯಲ್ಲಿ ಸನ್ನದ್ಧಗೊಳಿಸಿತ್ತು. ಇದರ ಬೆನ್ನಲ್ಲೇ ಭಾರತದ ಸಮುದ್ರ ತೀರದಲ್ಲಿ ಚೀನಾ ಜಲಂತರ್ಗಾಮಿ ನೌಕೆಯನ್ನು ನಿಯೋಜಿಸಿದ್ದಲ್ಲದೇ ಈ ಸಂದರ್ಭದಲ್ಲಿ ಭಾರತದ ಗಡಿಯಲ್ಲಿ ಸಬ್ ಮರೈನ್ ಗಸ್ತು ತಿರುಗ್ತಿದ್ದು, ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕಾರಣಕ್ಕಾಗಿ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಚೀನಾಗೆ ಟಾಂಗ್ ಕೊಟ್ಟಿದ್ದರು. “1962ರ ಪರಿಸ್ಥಿತಿ ಈಗಿಲ್ಲ. ನಾವು ಸಮರ್ಥರಾಗಿದ್ದೇವೆ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಚೀನಾ ತನ್ನ ಜಲಾಂತರ್ಗಾಮಿ ನೌಕೆಯನ್ನು ಚೂಬಿಟ್ಟಿತ್ತು!!

ಇದೀಗ ಭಾರತ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, ಜಲಾಂತರ್ಗಾಮಿ ನಿರ್ಮಾಣ ಕಾರ್ಯ ರಹಸ್ಯ ಯೋಜನೆಯಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಆಡ್ಮಿರಲ್ ಸುನಿಲ್ ಲಾನ್ಬಾ ತಿಳಿಸಿದ್ದಾರೆ.

ಭಾರತೀಯ ಸೇನೆ ಹಿಂದೂ ಮಹಾಸಾಗರ ಮತ್ತು ಫೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ ಭಾರತೀಯ ನೌಕಾಪಡೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನೌಕಾಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ತಿಳಿಸಿದ್ದಾರೆ. ಈ ಹಿಂದೆ ಭಾರತದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ನೌಕೆ ಐ.ಎನ್.ಎಸ್ ಅರಿಹಂತ್ ತನ್ನ ಸೇವೆಯನ್ನು ಆರಂಭಿಸಿತ್ತು!!

ಅಷ್ಟೇ ಅಲ್ಲದೇ, 6 ಸಾವಿರ ಟನ್ ತೂಕದ ಜಲಾಂತರ್ಗಾಮಿ ನೌಕೆಯನ್ನು ಸೇವೆಗೆ ಸೇರಿಸಿದ ನಂತರ ಭಾರತದ ಮೂರೂ ಸೇನೆಗಳು ಸದ್ದಿಲ್ಲದೆ ತನ್ನ ಪರಮಾಣು ಸೇವೆಯನ್ನು ಪೂರ್ಣಗೊಳಿಸಿದಂತಾಗಿತ್ತು. ಹಾಗಾಗಿ ಐ.ಎನ್.ಎಸ್ ಅರಿಹಂತ್ ನ್ನು ನೌಕಾ ಮುಖ್ಯಸ್ಥ ಸುನಿಲ್ ಲಾನ್ಬಾ 2016ರ ಆಗಸ್ಟ್ ನಲ್ಲಿ ವಿದ್ಯುಕ್ತವಾಗಿ ಭಾರತದ ನೌಕಾ ಸೇವೆಗೆ ಸೇರ್ಪಡೆ ಮಾಡಿದ್ದರು. ಗೌಪ್ಯತೆ ಕಾಪಾಡಲು ಅದನ್ನು ಐ.ಎನ್.ಎಸ್ ಅರಿಹಂತ್ ಎಂದು ಉಲ್ಲೇಖಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿದ್ದವು.

ಪ್ರಧಾನ ಮಂತ್ರಿಗಳ ಕಾರ್ಯಾಲಯದ ಮೇಲ್ವಿಚಾರಣೆ ಮೇರೆಗೆ ಈ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನ ನೌಕೆ ಕಾರ್ಯಕ್ರಮದಡಿಯಲ್ಲಿ ಮಾಡಲಾಗಿದ್ದು ಇದಕ್ಕೆ ರಕ್ಷಣಾ ಇಲಾಖೆ, ಅಣುಶಕ್ತಿ ಕೇಂದ್ರ ಮತ್ತು ಖಾಸಗಿ ಕಂಪೆನಿಗಳು ನೆರವು ನೀಡಿದ್ದವು. ಅಷ್ಟೇ ಅಲ್ಲದೇ, ರಷ್ಯಾದ ಅಕುಲಾ-1 ದರ್ಜೆಯ ನೌಕಾಪಡೆಯ ಮಾದರಿಯಲ್ಲಿ ಐ.ಎನ್.ಎಸ್ ಅರಿಹಂತ್ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದ್ದು ಅದರ 83 ಎಮ್ ಡಬ್ಲ್ಯು ಜಲ ರಿಯಾಕ್ಟರ್ ನ್ನು ಕೂಡ ರಷ್ಯಾದ ನೆರವಿನಿಂದ ಕಟ್ಟಲಾಗಿರುವುದು ವಿಶೇಷ!!

ಇನ್ನು ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಉಪಟಳ ನಡುವೆಯೇ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಬಯಸಿರುವ ಭಾರತೀಯ ಸೇನೆ, ಶೀಘ್ರದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದ್ದು, ಇದಕ್ಕಾಗಿ 40 ಸಾವಿರ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.. ಅಷ್ಟೇ ಅಲ್ಲದೇ, ಅತ್ಯಾಧುನಿಕ ಮಾದರಿಯ ಹಗುರ ಮಷಿನ್ ಗನ್ ಗಳು, ಕಾರ್ಬೆನ್ ಗಳು, ರೈಫಲ್ ಮತ್ತು ಮದ್ದುಗುಂಡುಗಳನ್ನು ಸೇನೆ ಖರೀದಿಸಲಿದೆ. ಹಾಗಾಗಿ ಈ ಪ್ರಸ್ತಾವನೆಯ ಪ್ರಕಾರ, ಸೇನೆ 7 ಲಕ್ಷ ರೈಫಲ್, 44,000 ಹಗುರ ಮಷಿನ್ ಗನ್ ಮತ್ತು 44,600 ಕಾರ್ಬೆನ್ಗಳನ್ನು ಖರೀದಿಸಲಿದೆ. ಈಗಾಗಲೇ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದ್ದಲ್ಲದೇ ಇದೀಗ ಭಾರತೀಯ ಸೇನೆ ಅತ್ಯಾಧುನಿಕ ಟ್ಯಾಂಕ್ ಗಳನ್ನು ಪಡೆದುಕೊಳ್ಳುವ ಭರದಲ್ಲಿದೆ ಎನ್ನುವುದು ಗೊತ್ತಿರುವ ವಿಚಾರ.

ಆದರೆ ಈ ಬಾರಿ ನಮ್ಮ ನೆರೆ ದೇಶ ಚೀನಾ ದಿನೇ ದಿನೇ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುವುದೇ ಹೆಮ್ಮೆಯ ವಿಚಾರವಾಗಿದೆ!!

-ಅಲೋಖಾ

Tags

Related Articles

Close