ಪ್ರಚಲಿತ

ಮಾಜಿ ಪ್ರಧಾನಿಯೊಬ್ಬರ ಸಾವಿನಲ್ಲೂ ರಾಜಕೀಯ ಮಾಡಿದ ಈ ಕಾಂಗ್ರೆಸ್ ಸಂತಾನದ ಮತ್ತೊಂದು ಮುಖ ಅನಾವರಣ!! ಮಾಜಿ ಪ್ರಧಾನಿಗೆ ಇದೆಂತಹ ಘೋರ ಅವಮಾನ!!

ಪಿ.ವಿ ನರಸಿಂಹ ರಾವ್ ಅವರು ಶ್ರೇಷ್ಟ ವಿದ್ವಾಂಸರಲ್ಲಿ ಒಬ್ಬರಾಗಿದ್ದರು ಮತ್ತು ರಾಜಕೀಯ ನಾಯಕನಾಗಿ ಶ್ರೇಷ್ಟರಾಗಿದ್ದರು. ಒಂದು ಪೌರಾಣಿಕ ವ್ಯಕ್ತಿಯಾಗಿದ್ದ ಅವರು ತಮ್ಮ ಇಡೀ ದೇಶವನ್ನು ತಮ್ಮದೇ ಆದ ರೀತಿಯಲ್ಲಿ ಬದಲಿಸಿದರು. 20 ನೇ ಶತಮಾನದ ಭಾರತದಲ್ಲಿ ಒಂದು ಶ್ರೇಷ್ಠ ವ್ಯಕ್ತಿತ್ವ, ಹಾಗು ಸುಧಾರಣೆಗಳ ಪಿತಾಮಹರಾಗಿದ್ದರು. ನಿಸ್ಸಂದೇಹವಾಗಿ ಅತ್ಯುತ್ತಮವಾದ ದೇಶದ ಪ್ರಧಾನ ಮಂತ್ರಿಯಾಗಿದ್ದರು. ಅಂತಹ ವ್ಯಕ್ತಿಗೆ ಅವರ ಸಾವು ಅವರಿಗೇ ಸರಿಸಾಟಿಯಿಲ್ಲದ ಅವಮಾನ, ಅಪಮಾನ ಮತ್ತು ಅಸಹ್ಯತೆಗಳ ಒಂದು ಕಥೆಯಾಗಿತ್ತು!!!. ಆ ಕಥೆ ಕೇಳಿದರೆ ಕಣ್ಣುಗಳು ಕಣ್ಣೀರನ್ನು ತರುತ್ತದೆ ಮತ್ತು ನಿಮ್ಮ ರಕ್ತ ಕುದಿಯುತ್ತದೆ. ಇಂತಹ ಅಸಾಮಾನ್ಯ ವ್ಯಕ್ತಿಯನ್ನು ಸೋನಿಯಾ ಗಾಂಧಿ ಅವಮಾನಿಸಿದಳೇ? ಎನ್ನುವಂತಹದ್ದು ವಿಸರ್ಯಾಸವೇ ಸರಿ.!!

ಹೃದಯಾಘಾತದಿಂದ ಬಳಲುತ್ತಿದ್ದ ಪಿ.ವಿ ನರಸಿಂಹ ರಾವ್‍ರವರು ಡಿಸೆಂಬರ್ 23, 2004 ರಂದು ಇಹ ಲೋಕ ತ್ಯಜಿಸಿದ್ದರು. ಬಿಳಿ ಧೋತಿ, ಗೋಲ್ಡನ್ ರೇಷ್ಮೆ ಕುರ್ತಾ ಮತ್ತು ಭುಜದಲ್ಲಿ ಶಾಲನ್ನು ಹಾಕಿದ ಮಾಜಿ ಪ್ರಧಾನ ಮಂತ್ರಿಯ ದೇಹವು ಶಾಂತಿ ಮತ್ತು ಪ್ರಶಾಂತತೆಯ ಒಂದು ಚಿತ್ರಣವಿತ್ತು.

ಅವರ ಎಂಟು ಮಕ್ಕಳು ಅವರ ಮುಂದೆ ಕುಳಿತಿದ್ದರು ಹಾಗೂ ಎಲ್ಲಾ ಗಣ್ಯಾತಿ ಗಣ್ಯರು ಬಂದು ಪಿ.ವಿ ನರಸಿಂಹರಾವ್ ಅವರ ಪಾರ್ಥಿವ ಶರೀರಕ್ಕೆ ಗೌರವವನ್ನು ಸಲ್ಲಿಸಿದರು. ರಾವ್‍ರವರ ಕಿರಿಯ ಪುತ್ರ ಪ್ರಭಾಕರ್ ಅವರು ದೆಹಲಿಯ “ಕರ್ಮಭೂಮಿಯಲ್ಲಿ” ಅವರ ಸಮಾಧಿಯನ್ನು ಮಾಡಲು ತಯಾರಾಗುತ್ತಾರೆ. ಅವರು ದೆಹಲಿಯಲ್ಲಿ ವಿವಿಧ ಸಚಿವ ಸಂಪುಟಗಳಲ್ಲಿ ಮತ್ತು ಭಾರತದ ಪ್ರಧಾನ ಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೂರು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ವಾಸಿಸಿದ್ದರು…

ಮೊದಲು ಬಂದ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ರಾವ್ ಅವರ ಕಿರಿಯ ಮಗ ಪ್ರಭಾಕರ್‍ರನ್ನು ಕರೆದು ನೀವು ರಾವ್‍ರವರನ್ನು ದೆಹಲಿಯಲ್ಲಿ ಸಮಾದಿ ಮಾಡಲಾಗುವುದಿಲ್ಲ, ಹೈದರ್‍ಬಾದ್‍ಗೆ ದೇಹವನ್ನು ತೆಗೆದುಕೊಳ್ಳವಂತೆ ಸಲಹೆ ನೀಡುತ್ತಾರೆ. ತದನಂತರ ಗುಲಾಮ್ ನಬಿ ಅಝಾದ್ ಅವರು ದೇಹವನ್ನು ಶವಸಂಸ್ಕಾರಕ್ಕೆ ಹೈದರ್‍ಬಾದ್‍ಗೆ ದೇಹವನ್ನು ಕರೆದೊಯ್ಯುವಂತೆ ಸೂಚಿಸುತ್ತಾರೆ. ಸುಮಾರು 6:30 ರ ವೇಳೆಗೆ ಸೋನಿಯಾ ಗಾಂಧಿ ಅವರು ಡಾ. ಮನಮೋಹನ್ ಸಿಂಗ್ ರೊಂದಿಗೆ ಆಗಮಿಸುತ್ತಾರೆ. ಪ್ರಭಾಕರರನ್ನು ಶ್ಮಶಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕೇಳಿದಾಗ, ನರಸಿಂಹ ರಾವ್ ಅವರನ್ನು ದೆಹಲಿಯಲ್ಲಿ ಸಮಾಧಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿತ್ತಾರೆ…

ಅದೇ ಸಮಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ತನ್ನ ಎಲ್ಲಾ ಮಂತ್ರಿ ಸದಸ್ಯರನ್ನು ಈ ವಿಷಯವಾಗಿ ಮನವೊಲಿಸುತ್ತಾರೆ. ಆದರೆ ಸೋನಿಯಾ ಗಾಂಧಿ ಮಾತ್ರ ಏನೂ ಮಾತನಾಡದೆ ಮೌನವಾಗಿ ಬಿಡುತ್ತಾರೆ… ಇವರೆಲ್ಲರ ಅಭಿಪ್ರಾಯ ಕೇಳಿ ಮನಮೋಹನ್ ಸಿಂಗ್ ಕೂಡಾ ಮೌನವಾಗಿ ಬಿಟ್ಟರು ಎಂಬೂದೇ ನಂಬಲಸಾಧ್ಯವಾದ ಸತ್ಯ…!! ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅಲ್ಲಿಂದ ಹೊರನಡೆಯುತ್ತಾರೆ. ಶವ ಸಂಸ್ಕಾರಕ್ಕಾಗಿ ದೇಹವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲು ಎಲ್ಲಾ ಹಿರಿಯ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಿಂದ ಪ್ರಭಾಕರ್ ರಾವ್ ಅವರು ಅಪಾರ ಒತ್ತಡ ಎದುರಿಸಬೇಕಾಗುತ್ತದೆ. ಅಂತಿಮವಾಗಿ ರಾವ್ ಅವರ ಪಾರ್ಥೀವ ಶರೀರವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲಾಗುತ್ತದೆ.

ಮರುದಿನ ಅಂದರೆ ಡಿಸೆಂಬರ್ 24, 2004 ರಂದು ರಾವ್ ಅವರ ಮನೆಯಿಂದ ಅವರ ದೇಹವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲಾಯಿತು. ಅಕ್ಬರ್ ರೋಡ್ ಮುಖಾಂತರ ಪಾರ್ಥೀವ ಶರೀರವನ್ನು ಕರೆದೊಯ್ಯುವ ಬಯಕೆಯನ್ನು ರಾವ್ ಮಗ ಪ್ರಸ್ತಾಪಿಸುತ್ತಾರೆ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯಾಲಯವಿರುವುದು ಅಲ್ಲೇ. ಪಿ.ವಿ ನರಸಿಂಹ ರಾವ್ ಅವರು ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕಾಗಿ ಮೀಸಲಿಟ್ಟಿದ್ದರು. ರಾವ್ ಅವರ ದೇಹವನ್ನು ಕಾಂಗ್ರೆಸ್‍ನ ಪ್ರಧಾನ ಕಾರ್ಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸ್ವಲ್ಪ ಸಮಯದ ಕಾಲ ಪಾರ್ಥೀವ ಶರೀರವನ್ನು ಅಂತಿಮ ವೀಕ್ಷಣೆಗೆ ಇಡಲಾಗಿತ್ತು.

ಪಿ.ವಿ ನರಸಿಂಹ ರಾವ್‍ರವರಿಗೆ ಇಲ್ಲೇ ಅವಮಾನ ಕೊನೆಗೊಂಡಿಲ್ಲ. ಕಾಂಗ್ರೆಸ್ ಪಕ್ಷ ಪಿ.ವಿ ರಾವ್ ಅವರಿಗೆ ಅತ್ಯಂತ ಶ್ರೇಷ್ಟವಾದ ಅವಮಾನವನ್ನೇ ಮಾಡುತ್ತದೆ..!! ಅವರ ಅಂತ್ಯ ಕ್ರೀಯೆಯ ಪೈರ್ ಲಿಟ್ ಮಾಡಿದ ನಂತರ, ಯಾರೂ ಸಮಾದಿಯ ಬಳಿ ಉಳಿಯಲಿಲ್ಲ!!!.. ಅವರ ಸುಟ್ಟ ಅರ್ಧ ದೇಹವನ್ನು ಬಿಟ್ಟು ಎಲ್ಲರೂ ಹೊರ ನಡೆಯುತ್ತಾರೆ.. ಅವರ ದೇಹ ಸಂಪೂರ್ಣ ಸುಟ್ಟಿದಯೇ ಎಂದು ನೋಡುವುದಕ್ಕೂ ಯಾರೂ ಇರಲಿಲ್ಲ. ಅರ್ಧ ಸುಟ್ಟ ದೇಹವನ್ನು ಯಾರೋ ರವಾನೆ ಮಾಡುವ ಮಾಹಿತಿಯನ್ನು ಹೈದರ್‍ಬಾದ್‍ನಲ್ಲಿ ಅಧಿಕಾರಿಗಳಿಗೆ ತಿಳಿಸಿದ ನಂತರ ಮತ್ತೆ ಶವವನ್ನು ಸಂಪೂರ್ಣವಾಗಿ ಸುಡಲಾಗುತ್ತದೆ.

ಇಂತಹ ಘಟನೆ ನಡೆಯಬೇಕಾದರೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದರು. ವಿ.ವಿ ನರಂಸಿಂಹ ರಾವ್ ಅವರು ಡಾ.ಮನಮೋಹನ್ ಸಿಂಗ್ ಅವರ ಕೇವಲ ಗುರು ಮಾತ್ರ ಆಗಿರಲಿಲ್ಲ!! ಅವರ ಖ್ಯಾತಿಗೆ ಪ್ರಮುಖ ಪಾತ್ರವಹಿಸಿದ್ದರು.!! ಬಜೆಟ್‍ನ ನಂತರ ಮನಮೋಹನ್ ಸಿಂಗ್ ಅವರಿಗೆ ಇಡೀ ರಾಜಕೀಯವು ಒತ್ತಡವನ್ನು ಹಾಕಿದಾಗ ಪಿ.ವಿ ನರಸಿಂಹ ರಾವ್ ರವರು ಮನಮೋಹನ್ ಸಿಂಗ್ ಅವರನ್ನು ಎಲ್ಲಾ ಆರೋಪದಿಂದ ರಕ್ಷಿಸಿದರು ಹಾಗು ಅವರನ್ನು ಬೆಂಬಲಿಸಿ ದೈರ್ಯವನ್ನು ತುಂಬಿದ್ದರು.

ಪಿ.ವಿ ರಾವ್ ಅವರು ಪ್ರಧಾನಿಯಾಗಿದ್ದಾಗ ಡಾ. ಮನಮೋಹನ್ ಸಿಂಗ್ ಅವರನ್ನು ನಿರಾಸೆ ಮೂಡಿಸದೆ ಎಲ್ಲಾ ಕಡೆಗಳಲ್ಲಿ ಬೆಂಬಲಿಸುತ್ತಾ ಬಂದಿದ್ದರು. ಆದರೆ ಇಷ್ಟೆಲ್ಲಾ ಮಾಡಿದ ಅವರಿಗೆ ಭಾರತದ ಪ್ರಧಾನಿ ಪಿ.ವಿ ರಾವ್ ಅವರಿಗೆ ಕೊನೆಗೆ ರಾವ್ ಮಗನ ಆಶಯವನ್ನು ಪೂರೈಸಲು ಸಾಧ್ಯವಾಗಿಲ್ಲ ಅನ್ನೋದು ವಿಷಾದನೀಯವಲ್ಲವೇ??.. ದೆಹಲಿಯಲ್ಲಿ ರಾವ್ ಅವರ ಪಾರ್ಥೀವ ಶರೀರವನ್ನು ಮಣ್ಣು ಮಾಡಲು ಬಯಸಿದಾಗ ಮೌನವಾಗಿಯೇ ಇದ್ದ ಮನಮೋಹನ್ ಸಿಂಗ್, ಮುಂದೆ ಸ್ಮಾರಕವನ್ನು ನಿರ್ಮಿಸುವುದಕ್ಕೂ ಮೌನ ಮುರಿದಿದ್ದರು!!….ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರಿಗೆ ಇಷ್ಟೇನಾ ನೀವು ಗೌರವ ಸಲ್ಲಿಸುವುದು ಮನಮೋಹನ್ ಸಿಂಗ್‍ರವರೇ??? ಸೋನಿಯಾ ಗಾಂಧಿಗಂತೂ ಬುದ್ಧಿಯಿಲ್ಲ…ಅಂತೂ ನಿಮ್ಮ ಬುದ್ಧಿಗೆ ಏನಾಗಿತ್ತು???


ಇಂತಹ ಶ್ರೇಷ್ಟ ವಿದ್ವಂಸಕರಿಗೆ ಇಂತಹ ಅಪಮಾನಕರ ಅಂತ್ಯ ನಿಜಕ್ಕೂ ದುರಂತ!!.. ಅವರು ದುರಂತವಾದ ಅಂತ್ಯವನ್ನೇ ಎದುರಿಸಿದರು. ಏಕೆಂದರೆ ಅವರು ಗಾಂಧಿ ಕುಟುಂಬದ ರೇಖೆಯನ್ನು ಕೆಡಿಸಲಿಲ್ಲ ಮತ್ತು ಶ್ರೀಮಂತ ಭಾರತವನ್ನು ಮಾಡಲು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡರು. ಭಾರತದ ಇತಿಹಾಸದಲ್ಲಿ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್‍ರವರಿಗೆ ಆದ ಅವಮಾನ ಬೇರೊಬ್ಬರಿಗೆ ಆಗಲು ಸಾಧ್ಯವಿಲ್ಲವೇನೋ…!! ಸೋನಿಯಾ ಗಾಂಧಿಯವರ ನಿರ್ದೇಶನದಲ್ಲಿ ಕಾಂಗ್ರೆಸ್ ಪಿ.ವಿ ರಾವ್ ಅವರನ್ನು ನಿರಾಕರಿಸಿತ್ತು ಮತ್ತು ಸ್ಮಾರಕ ನಿರ್ಮಾಣಕ್ಕೂ ನಿರಾಕರಿಸಿತ್ತು… ಇಷ್ಟು ವರ್ಷ ಕಳೆದರೂ, ಪಿ.ವಿ ರಾವ್ ಅವರ ಸ್ಮಾರಕನಿರ್ಮಾಣ ಮಾಡಲಿಲ್ಲ… ಭಾರತದ ಇತಿಹಾಸದಲ್ಲಿ ಹನ್ನೊಂದು ವರ್ಷಗಳ ನಂತರ ನಮ್ಮ ಪ್ರಧಾನಿ ನರೇಂದ್ರ ಮೋದಿ ಅಂತಿಮವಾಗಿ ಮಹಾನ್ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಸ್ಮಾರಕವನ್ನು ದೆಹಲಿಯಲ್ಲಿನಿರ್ಮಿಸಲು ತಯಾರಾಗುತ್ತಾರೆ.

ಪವಿತ್ರ

Tags

Related Articles

Close