ಅಂಕಣದೇಶಪ್ರಚಲಿತ

ಮಾದಕ ಪದಾರ್ಥದ ನಿಷೇಧ !!ಭಾರತ-ನೇಪಾಲ ದ್ವಿಪಕ್ಷೀಯ ಒಪ್ಪಂದ !!

ಮಾದಕ ಔಷಧಿಗಳ ಹಾಗೂ ದ್ರವ್ಯಗಳ ಅಕ್ರಮ ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ಭಾರತ ಹಾಗೂ ನೇಪಾಲದ ಅನುಮೋದನೆ ಪತ್ರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕ್ಯಾಬಿನೆಟ್ ಅನುಮೋದಿಸಿದೆ. ಆ ಪತ್ರದಲ್ಲಿ ಇನ್ನೂ ಕೆಲವು ವಿಚಾರಗಳೂ ಒಳಗೊಂಡಿದೆ. ಮಾದಕ ದ್ರವ್ಯ ಹಾಗೂ ಮಾನಸಿಕ ಔಷಧಿಗಳ ವಿಚಾರದಲ್ಲಿ ಭಾರತ ಹಾಗೂ ನೇಪಾಲ ಪರಸ್ಪರ ಸಹಕರಿಸುವುದರ ಕುರಿತಾಗಿ ತಿಳುವಳಿಕೆಯ ಸ್ಮರಣಿಕೆಯಲ್ಲಿ (ಎಂ ಓ ಉ) ಉಲ್ಲೇಖಿಸಲಾಗಿದೆ. ಆ ಪ್ರತಿಯಲ್ಲಿ ಉಲ್ಲೇಖವಾಗಿರುವ ವಿಚಾರಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಾಗೂ ಈ ವಿಚಾರಗಳ ಕುರಿತಾಗಿ ವಿಚಾರ ವಿನಿಮಯ ಮಾಡುವುದಾಗಿಯೂ ಅದರಲ್ಲಿ ನಮೂದಿಸಲಾಗಿದೆ.

ತಿಳುವಳಿಕೆಯ ಸ್ಮರಣಿಕೆಯು ಹಲವು ವಿಚಾರಗಳನ್ನು ಒಳಗೊಂಡಿದೆ.

1. ಅಮಲು ಪದಾರ್ಥ, ಮಾದಕ ದ್ರವ್ಯ , ಮಾನಸಿಕ ಔಷಧಿಗಳ ಅನಧಿಕೃತ ಕಳ್ಳಸಾಗಣಿಕೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಹಾಗೂ ಅಂತಹ ದ್ರವ್ಯಗಳ ಬೇಡಿಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತಡೆಯುವುದು , ಅದರ ಕುರಿತಾಗಿ ಜಾಗೃತಿ, ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

2. ಇದರ ಕುರಿತಾದ ಕಾರ್ಯಾಚರಣೆಯ ಕುರಿತಾದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದು, ಅಗತ್ಯವಿದ್ದಲ್ಲಿ ಅದರ ಕುರಿತಾಗಿ ನಿರ್ಮಿತವಾದ ಕಾನೂನನ್ನು ತಿದ್ದುಪಡಿ ಮಾಡುವುದು.

ಈ ವಿಚಾರಗಳು ಅದರಲ್ಲಿ ಒಳಗೊಂಡಿದೆ. ಭಾರತ ಈ ಹಿಂದಿನಿಂದಲೂ ಮಾದಕ ದ್ರವ್ಯ ಮತ್ತು ಪದಾಥ್ದ ಅಕ್ರಮ ಕಳ್ಳಸಾಗಣಿಕೆಯನ್ನು ತಡೆಗಟ್ಟುವ ಪ್ರಯತ್ನವನ್ನೂ ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದೆ. ವಿಶ್ವಸಂಸ್ಥೆಯೊಂದಿದೆ ಭಾರತ ಅನೇಕ ದ್ವಿಪಕ್ಷೀಯ ಒಪ್ಪಂದಗಳಿಗೆ ಇದೇ ವಿಚಾರದ ಆಧಾರದ ಮೇಲೆ ಸಹಿ ಹಾಕಿವೆ. ಈಗಾಗಲೇ ಅನೇಕ ರಾಷ್ಟ್ರಗಳು ಮಾದಕ ಪದಾರ್ಥದ ಬಳಕೆಯನ್ನು ಉಪಯೋಗಿಸುವುದನ್ನು ತಡೆಯಲು ಹಲವು ಕಾನೂನುಗಳನ್ನೇ ಜಾರಿಗೆ ತಂದಿವೆ. ದ್ವಿಪಕ್ಷೀಯ ಒಪ್ಪಂದದ ಮೂಲಕ ಹಾಗೂ ತಿಳುವಳಿಕೆಯ ಮೂಲಕ ಹಲವು ದೇಶಗಳು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಿವೆ. ಈ ನಿಟ್ಟಿನಲ್ಲಿಯೂ ಭಾರತ-ನೇಪಾಲ ಹೆಜ್ಜೆಯಿಟ್ಟಿರುವುದು ಮಹತ್ವದ ಬೆಳವಣಿಗೆಗಳಾಗಿವೆ.

ಮಾದಕ ದ್ರವ್ಯಗಳು ಕೇವಲ ಒಬ್ಬ ವ್ಯಕ್ತಿಯನ್ನು ನಾಶ ಮಾಡಲ್ಲ, ಬದಲಾಗಿ ದೇಶದ ಮೂಲ ಬೇರಾಗಿರುವ ಯೌವ್ವನವನ್ನೇ ಬೇರು ಸಮೇತ ಕಿತ್ತುಹಾಕುತ್ತವೆ. ಹಾಗಾಗಿ ಇದರ ಕುರಿತಾದ ಕಟ್ಟುನಿಟ್ಟಿನ ಕ್ರಮ ಅತ್ಯಗತ್ಯವೇ ಆಗಿದೆ. ಈ ನಿಟ್ಟಿನಲ್ಲಿ ಈಗ ಭಾರತ-ನೇಪಾಲ ಹೆಜ್ಜೆ ಇಟ್ಟಿರುವುದು ಖುಷಿಯ ಸಂಗತಿ.

ಭಾರತ ಹಾಗೂ ನೇಪಾಲ ಸಾಂಸ್ಕøತಿಕವಾಗಿ, ಐತಿಹಾಸಿಕವಾಗಿಯೂ ಅನೇಕ ಸಂಬಂಧವನ್ನು ಉಳಸುತ್ತಾ, ಬೆಳೆಸುತ್ತಾ ಬಂದಿದೆ. ಈಗ ಮತ್ತೊಂದು ದ್ವಿಪಕ್ಷೀಯ ಒಪ್ಪಂದದ ಮೂಲ ಅದನ್ನು ಗಟ್ಟಿಗೊಳಿಸಿದೆ. ಈ ಒಪ್ಪಂದದ ಕುರಿತಾಗಿ ಮಾತನಾಡುವಾಗ ಆಭರತದ ಪ್ರಧಾನಿ ಮೋದಿಯವರು,” ನಮ್ಮ ಹಾಗೂ ನೇಪಾಲದ ಸಂಬಂಧ ಹಿಮಾಲಯದಷ್ಟು ಎತ್ತರವಿದೆ ” ಎಂದಿದ್ದರು. ಇದು ಅನೇಕ ನಿದರ್ಶನಗಳಿಂದ ನಿರೂಪಿಸಲ್ಪಟ್ಟಿದೆ ಅನ್ನುವುದೂ ಸತ್ಯ.

ಭಾರತದ ಪ್ರಧಾನಿ ಹಾಗೂ ನೇಪಾಲದ ಪ್ರಧಾನಿ ಶೇರ್ ಬಹದ್ದೂರ್ ಎರಡೂ ರಾಷ್ಟ್ರಗಳ ಬಾಂಧವ್ಯದ ಅಭಿವೃದ್ದಿಗೆ ಪ್ರಯತ್ನಿಸುತ್ತಿದಾರೆ. ದೊಡ್ಡ ದೊಡ್ಡ ರಾಷ್ಟ್ರಗಳ ಬಾಂಧವ್ಯಕ್ಕೆ ಮಾತ್ರ ಭಾರತ ಪ್ರಾಮುಖ್ಯತೆಯನ್ನು ವಹಿಸುತ್ತದೆ ಎಂದು ತಿಳಿದ ಅನೇಕ ಮೂರ್ಖ ರಾಷ್ಟ್ರಗಳಿಗೆ ಭಾರತ ನಿರಾಶೆ ಮೂಡಿಸಿದ್ದು ಮಾತ್ರ ಸತ್ಯ. ಯಾಕೆಂದರೆ ಮೋದಿಯವರು ಭಾರತದ ಪ್ರಧಾನಿ ಆದ ನಂತರ ಮಾಡಿದ ಪ್ರಥಮ ಕಾರ್ಯವೆಂದರೆ ಭೂತಾನ್ ಗೆ ಪ್ರವಾಸ ಮಾಡಿದರು. ನಂತರ ನೇಪಾಲ್ ಗೆ ಹೋದರು. ಈ ರೀತಿಯಾಗಿ ನೆರೆಹೊರೆಯ ದೇಶದ ಬಾಂಧವ್ಯವನ್ನು ವೃದ್ಧಿಸಲು ಪ್ರಯತ್ನಪಟ್ಟರು. ದ್ವೇಷ ರಾಜಕಾರಣ ಮಾಡದೇ ನಿಜವಾದ ದೇಶದ ಹಿತವನ್ನು ಬಯಸುತ್ತಾ ಸೇವೆ ಮಾಡುತ್ತಿದ್ದಾರೆ. ಅದು ನಮ್ಮ ಹೆಮ್ಮೆ ಹಾಗೂ ಭಾಗ್ಯವೆನ್ನಬಹುದು.

ಮಾದಕ ದ್ರವ್ಯಗಳ ಕುರಿತಾಗಿ ಅನೇಕ ರಾಷ್ಟ್ರಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿವೆ. ಚೀನಾ ಕೆಲವು ಮಾದಕ ದ್ವವ್ಯಗಳನ್ನು ಸೇವಿಸಿ ಮಾಡಿದ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯನ್ನೂ ವಿಧಿಸುತ್ತಿದೆ. ಅಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರಷ್ಟೇ ವಿಶ್ವದ ಶಕ್ತಿಯಾದ ಯೌವ್ವನ ಉಳಿಯಲು ಸಾಧ್ಯವಿದೆ. ಇಲ್ಲವಾದರೆ ದೇಶದ ಯುವಜನತೆಯ ನಿಜವಾದ ಅಂತಃಸತ್ವ ಸತ್ತುಹೋಗಲಿದೆ. ರಾಷ್ಟ್ರಗಳು ಮಗದೊಮ್ಮೆ ಶತಮಾನಗಳ ಹಿಂದೆ ಸರಿದುಹೋಗಲಿದೆ. ಹಾಗಾಗಬಾರದೆಂದರೆ ಮೋದಿ ನೇತೃತ್ವದ ಸರಕಾರ ಜಾಗೃತೆಯ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ. ಯುವಶಕ್ತಿಯಲ್ಲಿ ಜಾಗೃತಿಯಲ್ಲಿ ಮೂಡಿಸಬೇಕಿದೆ.

– ವಸಿಷ್ಠ

Tags

Related Articles

Close