ಪ್ರಚಲಿತ

ಮೊಘಲ್ ದೊರೆಯ ಎಲುಬಿನೊಂದಿಗೆ ಆಟವಾಡಿದ ಈ ಹಿಂದೂ ದೊರೆಯ ಸಾಹಸಗಾಥೆ ನಿಮಗೆಷ್ಟು ಗೊತ್ತು?

ಭಾರತೀಯ ಇತಿಹಾಸದ ಪುಟಗಳಲ್ಲಿ ಶ್ರೇಷ್ಠ ಆಡಳಿತಗಾರನೆಂದು ಬಿಂಬಿತನಾಗಿದ್ದ ಅಕ್ಬರ್ 1605 ರಲ್ಲಿ ನಿಧನರಾಗಿದ್ದಲ್ಲದೇ ಆತನ ಸಮಾಧಿ ಆಗ್ರಾದ ಸಿಖಂದ್ರಲ್ಲಿದೆ ಎನ್ನುವ ವಿಚಾರ ನಮಗೆ ತಿಳಿದಿದೆ. ಆದರೆ ಬರೀ ಎಲುಬುಗಳಿಂದಲೇ ತುಂಬಿದ್ದ ಅಕ್ಬರನ ಸಮಾಧಿಯನ್ನು ಅಮೃತ ಶಿಲೆಯಿಂದ ಮುಚ್ಚಲಾಗಿದ್ದರು ಕೂಡ ಅದನ್ನು ಛಿದ್ರ ಛಿದ್ರಗೊಳಿಸಲಾಗಿದೆ. ಆದರೆ ಈ ವಿಚಾರವು ಹೆಚ್ಚಿನವರಿಗೆ ತಿಳಿದೇ ಇಲ್ಲ. ಈ ಬಗ್ಗೆ ಆಳವಾದ ಅಧ್ಯಯನ ಮಾಡಿದಾಗ ಒಂದಷ್ಟು ವಿಚಾರಗಳು ತಿಳಿದುಬಂದಿರುವುದರಿಂದ, “ಔರಂಗಜೇಬ್”ನ ಆಳ್ವಿಕೆಯ ಇತಿಹಾಸವನ್ನು ನೋಡೋದು ಅತೀ ಮುಖ್ಯ!!

ಅಂದು ಭಾರತದಲ್ಲಿ ಆಳ್ವಿಕೆ ಮಾಡಿದ ಮೊಘಲರ ವಂಶದಲ್ಲಿಯೇ ಅತೀ ಹೆಚ್ಚು ಸಮಯಗಳ ಕಾಲ ರಾಜನಾಗಿ ಮೆರೆದಿದ್ದ ಔರಂಗಜೇಬನ ಆಳ್ವಿಕೆಯ ಬಗ್ಗೆ ತಿಳಿದುಕೊಂಡಾಗ ಒಂದು ಕ್ಷಣ ಕೋಪ ನೆತ್ತಿಗೇರೋದು ಸಹಜ. ಯಾಕೆಂದರೆ ಆತನ ಅಧಿಕಾರದ ಸಂದರ್ಭದಲ್ಲಿ ಹಿಂದೂಗಳ ಜನಜೀವನವೇ ಅತ್ಯಂತ ನರಕದಲ್ಲಿತ್ತಲ್ಲದೇ, ಹಿಂದೂಗಳು ಸ್ವತಂತ್ರ್ಯ ವಂಚಿತರಾಗಿದ್ದಂತೂ ಅಕ್ಷರಶಃ ನಿಜ. ಸಿಂಹಾಸನಕ್ಕೋಸ್ಕರ ಒಡಹುಟ್ಟಿದ ಅಣ್ಣ ತಮ್ಮಂದಿರನ್ನು ಕೊಂದು ಅಧಿಕಾರಕ್ಕೆ ಏರಿದ ಔರಂಗಜೇಬನು, ಭಾರತದಲ್ಲಿ ಹಿಂದೂಗಳಿಗೆ ಶಾಂತಿಯುತ ಜೀವನವನ್ನು ನೀಡಲು ಹೇಗೆ ಸಾಧ್ಯ? ಅಲ್ವೇ…….

ಹೌದು…. ಔರಂಗಜೇಬ ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದಲ್ಲದೇ ಈತನ ಕ್ರೌರ್ಯಗಳು ಎಂದಿಗೂ ಕೊನೆಗೊಳ್ಳಲೇ ಇಲ್ಲ. ಅಷ್ಟೇ ಅಲ್ಲದೇ ಉತ್ತಮ ಆಡಳಿತಗಾರನಾಗಿದ್ದ ಔರಂಗಜೇಬನು, ತನ್ನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ಬಹಳ ವಿಸ್ತಾರವನ್ನು ಕಂಡಿತ್ತಲ್ಲದೇ ಈತನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ದಂಗೆಗಳು ಸಂಭವಿಸುತ್ತಿದ್ದರಿಂದ ಈಡೀ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು.

ಈತನ ಕಾಲದಲ್ಲಿ ಹಿಂದೂಗಳಿಗೆ ನೀಡಲಾಗುತ್ತಿದ್ದ ಹಿಂಸಾಚಾರ ದಿನೇ ದಿನೇ ತಾರಕಕ್ಕೇರಿತ್ತು!! ಔರಂಗಜೇಬನ ಕ್ರೂರತೆಯ ವಿರುದ್ಧ ನಿಲ್ಲಲು ಯಾರೂ ಕೂಡ ಶ್ರಮಿಸದಿದ್ದಾಗ, ಒರ್ವ ವ್ಯಕ್ತಿ ಮಾತ್ರ ಆತನ ವಿರುದ್ಧ ಹೋರಾಡಲು ಧೈರ್ಯದಿಂದ ಮುಂದೆ ಬಂದಿದ್ದರು… ಆತ ಬೇರಾರು ಅಲ್ಲ ಆತನೇ ರಾಜರಾಮ್!! ಹೌದು…. ರಾಜರಾಮ್ ಜಾಟ್ ಅವರು ಜಾಟ್ ಸಮುದಾಯದ ನೇತೃತ್ವ ವಹಿಸಿದ್ದ ಒರ್ವ ಕೆಚ್ಚೆದೆಯ ಯೋಧ ಮತ್ತು ಒಬ್ಬ ಮಹಾನ್ ರಾಜಕಾರಣಿಯಾಗಿದ್ದರು. ಅಷ್ಟೇ ಅಲ್ಲದೇ, ರಾಜರಾಮ್ ಜಾಟ್ ಅವರು ತನ್ನ ಜನರ ಮನಸ್ಸಿನಲ್ಲಿ ಔರಂಗಜೇಬನ ಭಯೋತ್ಪಾದನೆಯನ್ನು ಖಂಡಿಸಿ, ಅವುಗಳನ್ನು ಅಂತ್ಯಗೊಳಿಸಬೇಕೆಂದು ನಿರ್ಧರಿಸಿದಂತಹ ಮೊದಲಿಗ ಎಂದರೆ ತಪ್ಪಾಗಲಾರದು.

ಮೂಲಭೂತವಾಗಿ ಪಂಜಾಬಿಯ ಸಮುದಾಯವಾಗಿರುವ ಜಾಟ್ಸ್ ಸಮುದಾಯವೂ ಮೂಲತಃ ಕೃಷಿಕರಾಗಿದ್ದಾರೆ. ಆದರೆ ಈ ಜಾಟ್ಸ್ ಸಮುದಾಯವು ಪಂಜಾಬ್ ಮಾತ್ರವಲ್ಲದೇ, ಮಥುರಾ ಮತ್ತು ಆಗ್ರಾದ ಸುತ್ತಮುತ್ತ ನೆಲೆಸಿದ್ದ ಕೆಚ್ಚೆದೆಯ ವೀರರ ಸಮುದಾಯ ಅದಾಗಿತ್ತು!! ಆದರೆ ಈ ಸಮುದಾಯಕ್ಕೆ ಭಾರಿ ಪ್ರಮಾಣದ ತೆರಿಗೆಯನ್ನು ಪಾವತಿಸಲು ಆದೇಶಿಸಲಾಗಿತ್ತು. ಹಾಗಾಗಿ 1668 ರಲ್ಲಿ, ಔರಂಗಜೇಬನ ಧಾರ್ಮಿಕ ವ್ಯಕ್ತಿಯಾಗಿದ್ದ ಅಬ್ದುನ್ ನಬಿ ಖಾನನ್ನು ಮಥುರಾದ ಫೌಜಾರ್ ಎಂದು ಆಯ್ಕೆ ಮಾಡಿ, ಈ ಪ್ರದೇಶದ ಹಿಂದೂಗಳನ್ನು ನಿಗ್ರಹಿಸಲು ನೇಮಿಸಿಕೊಂಡನು. ಅಷ್ಟೇ ಅಲ್ಲದೇ, ಮಥುರಾ ಕೃಷ್ಣನ ಜನ್ಮಸ್ಥಳ ಮತ್ತು ಹಿಂದೂಗಳಿಗೆ ಪವಿತ್ರವಾಗಿರುವುದರಿಂದ ಮಥುರಾದಲ್ಲಿ ಹಿಂದೂ ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು.

ಮೊದಲ ದಂಗೆಗೆ ಕಾರಣವಾಯಿತು…. ಗೋಕುಲಾರ ದಂಗೆ!!

ಜಾಟ್ಸ್ ಸಮುದಾಯವು ತನ್ನ ಮೊದಲ ದಂಗೆಯನ್ನು ಮಥುರಾ ಸಮೀಪದ ತಿಲ್ಪಾಟದಲ್ಲಿ ಗೊಕುಲಾ ಎನ್ನುವ ಜಮೀನ್ದಾರರ ನೇತೃತ್ವದಲ್ಲಿ ವಹಿಸಿದ್ದರು. ಗೋಕುಲಾ ನೇತೃತ್ವದಲ್ಲಿ ಜಾಟ್ಸ್ ಸಮುದಾಯವು ದಂಗೆ ಎದ್ದಿದ್ದಲ್ಲದೇ ಬಾರಿ ಪ್ರಮಾಣದ ಆದಾಯವನ್ನು ನೀಡಲು ನಿರಾಕರಿಸಿದರು. ಅಷ್ಟೇ ಅಲ್ಲದೇ ಈ ದಂಗೆಯಲ್ಲಿ ಮೆವೊ, ಮೀನಾ, ಅಹಿರ್, ಗುಜ್ಜರ್, ನರುಕಾ ಮತ್ತು ಪನ್ವಾರ್ ಮುಂತಾದ ಇತರ ಸ್ಥಳೀಯ ಜನರನ್ನು ಒಳಗೊಂಡಿದ್ದ ಬಂಡುಕೋರರ ಸಂಖ್ಯೆಯ ಬಹುಪಾಲು ಜನರು, ಜಾಟ್ಸ್ ಸಮುದಾಯದವರೇ ಇದ್ದು ತಮ್ಮ ಮೇಲುಗೈ ಸಾಧಿಸಿದ್ದರು.

ಈ ಸಂದರ್ಭದಲ್ಲಿ ಗೋಕುಲಾ ನೇತೃತ್ವದ ಜಾಟ್ಸ್ ಸಮುದಾಯ ಅಬ್ದುನ್ ನಬಿ ಖಾನ್ ನನ್ನು ಸೋಲಿಸಿದರು ಮತ್ತು ಸದಾಬಾದ್ ನ ಪಾರ್ಗಾನವನ್ನು ಲೂಟಿ ಮಾಡಿದರು. ಆದರೆ ಈ ಸುದ್ದಿಯು ಶೀಘ್ರದಲ್ಲೇ ಆಗ್ರಾವನ್ನು ತಲುಪಿತ್ತು!! ಆ ವೇಳೆ ಬಂಡುಕೋರರನ್ನು ವಜಾಗೊಳಿಸಲು ಔರಂಗಜೇಬ್ ರಾದಾಂದಾಜ್ ಖಾನ್ ನೇತೃತ್ವದಲ್ಲಿ ಪ್ರಬಲವಾದ ಸೇನೆಯನ್ನು ಕಳುಹಿಸಿದನು. ಆ ಸಂದರ್ಭದಲ್ಲಿ ಗೋಕುಲಾ ಅವರೊಂದಿಗೆ ಒಪ್ಪಂದವನ್ನೂ ಮಾಡಲಾಯಿತು. ಅದೇನೆಂದರೆ “ತಾವು ಮಾಡಿದ ಈ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದರೆ ನಿಮ್ಮನ್ನು ಬಿಡಲಾಗುತ್ತದೆ” ಎಂದರೂ ಕೂಡ ಅದನ್ನು ಜಾಟ್ಸ್ ಸಮುದಾಯವು ನಿರಾಕರಿಸಿದರು. ಆ ಸಂದರ್ಭದಲ್ಲಿ ರೇವರ, ಚಂದರ್ಖಾ ಮತ್ತು ಸರ್ಖುದ್ ಗ್ರಾಮಗಳಿಗೆ ಬಂಡುಕೋರರನ್ನು ಹಸನ್ ಅಲಿ ಖಾನ್ ಕಳುಹಿಸಿದ.

ಆದರೆ ಈ ಹಳ್ಳಿಗರು ಬಿಲ್ಲು ಮತ್ತು ಮಸ್ಕಟ್ ಗಳನ್ನು ಹಿಡಿದು ಮಧ್ಯಾಹ್ನದವರೆಗೆ ಹೋರಾಡಿದರು; ತದನಂತರ ಇವರಿಗೆ ಯಾವುದೇ ರೀತಿಯಲ್ಲಿ ಮುಂದೆ ಅವರನ್ನು ವಿರೋಧಿಸಲು ಸಾಧ್ಯವಾಗಲಿಲ್ಲ, ಅನೇಕ ಮಹಿಳೆಯರು ಚಿತೆಗೆ ಹಾರಿದರೆ ಇನ್ನು ಕೆಲವರು ಮೊಘಲರ ಕತ್ತಿಯ ಬಾಯಿಗೆ ಸಿಲುಕಿಕೊಂಡರು. ಸುಮಾರು 300ರಷ್ಟು ಗ್ರಾಮಸ್ಥರನ್ನು ಕೊಂದರಲ್ಲದೆ ಇನ್ನುಳಿದ ಜಾಟ್ಸ್ ಗಳನ್ನು ಕೈದಿಗಳಾಗಿ ಬಂಧಿಸಿದರು.

ಹೀಗೆ ಜಾಟ್ಸ್ ಸಮುದಾಯವನ್ನು ಬರ್ಬರವಾಗಿ ಹಿಂಸಿಸಲಾಯಿತು. ಹಸನ್ ಅಲಿ ಖಾನನ ಈ ಸಾಧನೆಯನ್ನು ಕಂಡ ಔರಂಗಜೇಬನು ಮೆಚ್ಚುಗೆ ವ್ಯಕ್ತಪಡಿಸಿದನಲ್ಲದೇ ಮಥುರಾದ ಹೊಸ ಫೌಜ್ದರನನ್ನಾಗಿ ಹಸನ್ ಅಲಿ ಖಾನನ್ನು ನೇಮಕ ಮಾಡಿದನು. ಆದರೆ ಹಸನ್ ಅಲಿ ಖಾನನಿಗೆ ಇದೆಲ್ಲವೂ ಸಾಧ್ಯವಾಗಿದ್ದು ಹೇಗೆಂದರೆ ಗೋಕುಲಾ ಅವರನ್ನು ಸೆರೆಹಿಡಿದ ನಂತರ ಹಸನ್ ಅಲಿ ಖಾನನು ಪೆಷ್ಕರ್, ಶೇಖ್ ರಝಿ-ಉದ್-ದಿನ್ ಅವರ ಸಹಾಯದಿಂದ ಎಲ್ಲ ಪ್ರದೇಶಗಳನ್ನು ಆಕ್ರಮಣ ಮಾಡಿ, ಜಾಟ್ ದಂಗೆಯನ್ನು ಹತ್ತಿಕ್ಕಲಾಯಿತು.

ಇನ್ನು ಗೊಕುಲಾ ಅವರ ಪುತ್ರನನ್ನು ಮತ್ತು ಮಗಳನ್ನು ಬಲವಂತವಾಗಿ ಇಸ್ಲಾಂಗೆ ಪರಿವರ್ತನೆಗೊಳಿಸಲಾಯಿತು. ತದ ನಂತರ ಔರಂಗಜೇಬನು, ಬಿರ್ ಸಿಂಗ್ ದೇವ್ ಬುಂಡೇಲಾ (ಅಬುಲ್ ಫಝಲ್ ನನ್ನು ಕೊಲ್ಲಲು ಚಕ್ರವರ್ತಿ ಜಹಾಂಗೀರ್ ನೇಮಕಗೊಂಡಾತ) ನಿರ್ಮಿಸಿದ ಮಥುರಾದ ಕೇಶವ ರಾಯ್ ದೇವಾಲಯವನ್ನು ನಾಶ ಮಾಡಲು ಆದೇಶವನ್ನು ಜಾರಿಗೊಳಿಸಿದನು. ಹಾಗಾಗಿ ಈತನ ಆಜ್ಞೆಯಂತೆ ದೇವಾಲಯವನ್ನು ನಾಶ ಮಾಡಿದ ನಂತರ, ಅದರ ಮೇಲೆ ಎತ್ತರದ ಮಸೀದಿಯನ್ನು ನಿರ್ಮಿಸಲಾಯಿತು. ದುಬಾರಿ ಆಭರಣಗಳನ್ನು ಹೊಂದಿದ ವಿಗ್ರಹಗಳನ್ನು ಆಗ್ರಕ್ಕೆ ಕರೆತರಲಾಯಿತು ಮತ್ತು ಜಹಾನ್ ಅರಾ ಬೇಗಂನ ಸಮಾಧಿಯನ್ನು ಮಸೀದಿಯಲ್ಲಿ ಇರಿಸಲಾಯಿತಲ್ಲದೆ, ಔರಂಗಜೇಬ್ “ಮಥುರಾ ಎನ್ನುವ ಹೆಸರನ್ನು ಇಸ್ಲಾಮಾಬಾದ್” ಎಂದು ಬದಲಾಯಿಸಿಕೊಂಡನು.
ಔರಂಗಜೇಬ್ ವಿರುದ್ಧ ಹೋರಾಡಿದ ರಾಜರಾಮ್ !!

ಔರಂಗಜೇಬ್ ಡೆಕ್ಕನ್ ನಲ್ಲಿ ತನ್ನ ಸಾಮ್ರಾಜ್ಯದ ವಿಸ್ತಾರಣೆಯಲ್ಲಿ ತೊಡಗಿಕೊಂಡಿದ್ದಾಗ, ಜಾಟ್ಸ್ ಸಮುದಾಯಕ್ಕೆ ಹೊಸ ನಾಯಕನಾಗಿ ಸಿನ್ಸಿನ್ ನ ಜಮೀನ್ದಾರರಾದ ರಾಜಾರಾಮ್ ಜಾಟ್ಸ್ ಅವರು ಅಧಿಕಾರದ ಗದ್ದುಗೆಯನ್ನೇರುತ್ತಾರೆ.

ಆ ಸಂದರ್ಭದಲ್ಲಿ ರಾಜರಾಮ್ ವಿವಿಧ ಜಾತಿಗಳ ಜಾಟ್ ಗುಂಪುಗಳನ್ನು ಸಂಘಟಿಸಿದರಲ್ಲದೇ, ಅವರೆಲ್ಲರನ್ನು ಒಟ್ಟುಗೂಡಿಸಿದರು. ಅಷ್ಟೇ ಅಲ್ಲದೇ, ಅವರು ರೈತರಿಗೆ ಮಿಲಿಟರಿ ತರಬೇತಿ, ಆಳವಾದ ಕಾಡುಗಳಲ್ಲಿ ಮಣ್ಣಿನ ಕೋಟೆಗಳನ್ನು ನಿರ್ಮಿಸುವ ತರಬೇತಿಯನ್ನು ನೀಡುತ್ತಾರಲ್ಲದೇ ಇದು ಗೆರಿಲ್ಲಾ ಯುದ್ಧಕ್ಕೂ ಕೂಡ ಅಡಿಪಾಯ ಹಾಕಿಕೊಡುತ್ತದೆ. ತದನಂತರ ರಾಜರಾಮ್ ಆಗ್ರಾದಲ್ಲಿ ದಾಳಿ ಮಾಡಿ, ಹಲವಾರು ಮೊಘಲರ ಸಾಮ್ಯಾಜ್ಯ ಶಾಯಿಗಳನ್ನು ಲೂಟಿ ಮಾಡಿದರು. ಆಗ್ರಾದ ಗವರ್ನರ್ ಸಫೀ ಖಾನ್ ನು ಸಂಪೂರ್ಣವಾಗಿ ರಾಜರಾಮ್ ಮತ್ತು ಅವರ ದಂಗೆಯನ್ನು ತಡೆಯಲು ವಿಫಲರಾದರು.

ಅದೇ ಸಂದರ್ಭದಲ್ಲಿ ಅಕ್ಬರನ ಸಮಾಧಿಯನ್ನು ಕೆಡವಲು ರಾಜರಾಮ್ ಮಾಡಿದ ಮೊದಲ ಪ್ರಯತ್ನವು ಸ್ಥಳೀಯ ಫೌಜ್ದರ್ ಆಗಿದ್ದ ಮೀರ್ ಅಬುಲ್-ಫಝಲ್ರಿಂದ ಹಿಮ್ಮೆಟ್ಟಿಸಲ್ಪಟ್ಟಿತ್ತಲ್ಲದೇ ಈ ದಾಳಿಯನ್ನು ಎದುರಿಸುವುದು ಆತನಿಗೆ ಕಷ್ಟಕರವಾಗಿತ್ತು. ಆ ಬಳಿಕ ರಾಜರಾಮ್ ಅವರು ಮೊಘಲ್ ಕಮಾಂಡರ್ ಆಗಿದ್ದ ಅಘರ್ ಖಾನನನ್ನು (ಕಾಬೂಲ್ನಿಂದ ಆಗ್ರಕ್ಕೆ ಬರುತ್ತಿದ್ದ) ದೋಲ್ಪುರ್ ಬಳಿ ದಾಳಿ ಮಾಡಿದನು ಮತ್ತು ಆತನ ಅನೇಕ ಕುದುರೆ ಗಾಡಿಗಳನ್ನು, ಬಂಡಿಗಳನ್ನು, ಕುದುರೆಗಳನ್ನು ವಶಪಡಿಸಿಕೊಂಡನಲ್ಲದೇ ಮಹಿಳೆಯರನ್ನು ಕೈದಿಗಳನ್ನಾಗಿ ಮಾಡಿಕೊಂಡನು. ಆದರೆ ಅಘರ್ ಖಾನ್ ಈತನ ಕೋಟೆಯವರೆಗೆ ಹಿಂಬಾಲಿಸಿದ್ದಲ್ಲದೇ ಕಠಿಣವಾದ ಹೋರಾಟದ ನಂತರ ತನ್ನ ಮಹಿಳೆಯರನ್ನು ರಕ್ಷಿಸಿದನು.

ಅಷ್ಟೇ ಅಲ್ಲದೇ, ಜಾಟ್ಸ್ ಗಳ ಕೋಟೆಯನ್ನೇ ಹೂಡಿಕೆ ಮಾಡಿಕೊಂಡ ನಂತರದಲ್ಲಿ ಮಸ್ಕೆಟ್ ಬುಲೆಟ್ ನಿಂದ ಈತನು ಕೊಲ್ಲಲ್ಪಟ್ಟನು. ಇನ್ನು ರಾಜರಾಮ್ 1688 ರಲ್ಲಿ ಮಹಾರಾಜ ಖಾನ್ ಗುಜರಾತ್ ನಿಂದ ಲಾಹೋರ್ ತೆರಳುತ್ತಿದ್ದ ಸಂದರ್ಭದಲ್ಲಿ ಆತನನ್ನು ಸಿಕಂದ್ರಾದಲ್ಲಿ ದಾಳಿ ಮಾಡಿದರು. ತೀವ್ರ ಹೋರಾಟ ನಡೆದ ಬಳಿಕ ರಾಜರಾಮ್ ಹಿಂತಿರುಗಿದರು. ಈ ಸಮಯದಲ್ಲಿ ಔರಂಗಜೇಬನ ಚಿಕ್ಕಪ್ಪನಾದ ಶಾಯಿಸ್ಟಾ ಖಾನ್ ನನ್ನು ಆಗ್ರಾದ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು, ಆದರೆ ಅದೇ ಸಂದರ್ಭದಲ್ಲಿ ಶಾಯಿಸ್ಟಾ ಖಾನ್ ಅಧಿಕಾರ ವಹಿಸಿಕೊಳ್ಳುವ ಮೊದಲು ರಾಜರಾಮ್ ಸಿಕಂದ್ರಾನಲ್ಲಿ ಮತ್ತೆ ಕಾಣಿಸಿಕೊಂಡರು.
“already angered by the demands of the governors for revenue, a great number of the Jaats assembled and marched to the mausoleum of Akbar. They began their pillage by breaking in the great gates of bronze which it had, robbing the valuable precious stones and plates of gold and silver, and destroying what they were not able to carry away. Dragging out the bones of Akbar from the grand grave, they threw them angrily into the fire and burnt them chanting their curses” (Storia-Mogor by Manucci)- (“ಈಗಾಗಲೇ ಗವರ್ನರ್ ನ ಬೇಡಿಕೆಯಿಂದ ಕೋಪಗೊಂಡಿದೆ, ಅಸಂಖ್ಯಾತ ಜಾಟ್ಸ್ ಒಟ್ಟುಗೂಡಿ ಅಕ್ಬರನ ಸಮಾಧಿಯೆಡೆಗೆ ಸಾಗಿದರು. ಅಷ್ಟೇ ಅಲ್ಲದೇ ಕಂಚಿನ ದೊಡ್ಡ ದ್ವಾರಗಳನ್ನು ಮುರಿದು, ಬೆಳ್ಳಿ ಮತ್ತು ಬಂಗಾರದಿಂದ ಕೂಡಿದ್ದ ಅನೇಕ ಬೆಲೆಬಾಳುವ ಅಮೂಲ್ಯವಾದ ಕಲ್ಲುಗಳನ್ನು ಮತ್ತು ಫಲಕಗಳನ್ನು ದರೋಡೆ ಮಾಡಿ ಮುಂದೆ ಸಾಗಿದರು. ದರೋಡೆ ಮಾಡಲು ಸಾಧ್ಯವಾಗದ್ದನ್ನು ನಾಶ ಮಾಡಿದರು. ಕೋಪದಿಂದ ಮಹಾ ಸಮಾಧಿಯಲ್ಲಿದ್ದ ಅಕ್ಬರನ ಎಲುಬುಗಳನ್ನು ಎಳೆದುಕೊಂಡು ಹೋಗಿ ಬೆಂಕಿಯೊಳಗೆ ಎಸೆದಿದ್ದಲ್ಲದೇ ತಮ್ಮ ಹಿಡಿ ಶಾಪಗಳನ್ನು ಹಾಕಿದರು).

ರಾಜಾರಾಮ್ ಮೊಘಲರ ವಿರುದ್ಧ ತನ್ನ ಶೌರ್ಯವನ್ನು ಪ್ರದರ್ಶಿಸಿ, ಮೊಘಲರನ್ನು ಹುಟ್ಟಡಗಿಸಿದಂತಹ ವ್ಯಕ್ತಿಯಾಗಿದ್ದರು. ಆದರೆ, 1688 ರ ಜುಲೈ 4 ರಂದು ನಡೆದ ಯುದ್ಧದಲ್ಲಿ ಮೊಘಲ್ ಸೈನ್ಯವು ತಮ್ಮ ಪಿತೂರಿಯಿಂದಾಗಿ ರಾಜರಾಮ್ ಅವರನ್ನು ಕೊಂದರು. ಅಷ್ಟೇ ಅಲ್ಲದೇ ರಾಜರಾಮ್ ಅವರ ತಲೆಯನ್ನು ಕತ್ತರಿಸಿ ಔರಂಗಜೇಬನ ನ್ಯಾಯಾಲಯಕ್ಕೆ ಕೊಂಡೊಯ್ದು ಅದನ್ನು ಕ್ರೂರವಾಗಿ ಕತ್ತರಿಸಿ ಹಾಕಿದರು.

ವಿಪರ್ಯಾಸ ಏನೆಂದರೆ, ನಮ್ಮ ಇತಿಹಾಸದ ಪುಟಗಳಲ್ಲಿ ಮೊಘಲರ ಮಾಹಿತಿಗಳು ಇರುವಷ್ಟು ಕೆಚ್ಚೆದೆಯ ವೀರರ ಸಾಹಸದ ಕಥೆಗಳು ಮಾಸಿ ಹೋಗಿದ್ದಲ್ಲದೇ ಅದೆಷ್ಟೋ ವೀರರ ಬಗ್ಗೆ ನಮಗೆ ಅರಿವೇ ಇಲ್ಲ ಎಂಬುದು ದುಃಖದ ವಿಚಾರ. ಇನ್ನು ಮೊಘಲರ ಪರವಾಗಿ ಭಾರತದಲ್ಲಿ ಅದೆಷ್ಟೋ ಜಾತ್ಯತೀತವಾದಿಗಳು ಮೊಘಲರನ್ನೇ ದೇಶಪ್ರೇಮಿಗಳೆಂದು ಬಿಂಬಿಸಿ ಮಕ್ಕಳ ಪಠ್ಯಪುಸ್ತಕಗಳಲ್ಲಿಯೂ ಮೊಘಲರ ಸಾಧನೆಗಳನ್ನು ಗೀಚಿ ಅದೆಷ್ಟೋ ಶೂರರನ್ನು ಇತಿಹಾಸದ ಪುಟಗಳಲ್ಲಿಯೇ ಹರಿದು ಬೀಸಾಕಿದ್ದರೋ ಗೊತ್ತಿಲ್ಲ!! ಆದರೆ ಇಂತಹ ಕೆಚ್ಚೆದೆಯ ವೀರರ ಸಾಧನೆಗಳು ಪಾತಾಳದಲ್ಲಿ ಹುದುಗಿ ಹೋಗಿರುವುದೇ ಬೇಸರದ ಸಂಗತಿ!!
– ಅಲೋಖಾ

Tags

Related Articles

Close