ಪ್ರಚಲಿತ

ಮೊಹಮ್ಮದಿಯರ ದಾಳಿಯ ಮುನ್ನ ಇರಾಕ್ ಹಿಂದೂರಾಷ್ಟ್ರವಾಗಿತ್ತು… ಇಸ್ಲಾಂ ಮತಪಂಡಿತರ ತಿಳುವಳಿಕೆಯನ್ನೇ ಬುಡಮೇಲುಗೊಳಿಸಿದ ಪ್ರಬಲ ಸಾಕ್ಷಿ ಪತ್ತೆ!!

ಹಿಂದೂ ಸಂಸ್ಕøತಿ ವಿಶ್ವದ ಯಾವೆಲ್ಲಾ ಭಾಗಗಳಲ್ಲಿ ಇದ್ದವು ಎಂದು ತಿಳಿದುಕೊಂಡರೆ ಒಂದು ಕ್ಷಣ ಅಚ್ಚರಿಯನ್ನುಂಟು ಮಾಡುತ್ತೆ!! ಯಾಕೆಂದರೆ ಬಹಳ ವರ್ಷಗಳ ಹಿಂದೆ ಹಲವಾರು ಇಸ್ಲಾಮಿಕ್ ದೇಶಗಳು ಹಿಂದೂ ರಾಷ್ಟ್ರವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಕೂಡ ಸಿಕ್ಕಿರುವುದು ಗೊತ್ತೇ ಇದೆ!! ಆದರೆ ಇರಾಕ್ ನಂತಹ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಹಿಂದೂಗಳ ದೇವಾಲಯ ಇತ್ತು ಎನ್ನುವುದಕ್ಕೆ ಇದೀಗ ಪುರವೆಗಳು ಸಿಕ್ಕಿರುವುದರಿಂದ ಇರಾಕ್ ನಲ್ಲಿಯೂ ಹಿಂದೂಗಳ ಪಾರಂಪರ್ಯವಿತ್ತು ಎನ್ನುವುದಕ್ಕೆ ಸಾಕ್ಷಿ ಸಿಕ್ಕಂತಾಗಿದೆ.

ಹೌದು… ಕಟು ಮುಸ್ಲಿಂ ರಾಷ್ಟ್ರವಾದ ಇರಾಕ್ ನಲ್ಲಿ ಹಿಂದೂಗಳು ಇದ್ದರು ಎಂದರೆ ಅದು ಸಂತಸದ ವಿಚಾರ!! ಆದರೆ ಮುಸಲ್ಮಾನರ ದಬ್ಬಾಳಿಕೆಯಿಂದ ರೋಸಿ ಹೋಗಿರುವ ಹಿಂದೂಗಳ ಸಂತತಿಯೇ ನಶಿಸಿ ಹೋಗಿರುವುದು ಮಾತ್ರ ದುಃಖಕರವಾದ ವಿಚಾರ. ಆದರೆ ಇರಾಕ್‍ನಲ್ಲಿ ಸಂಶೋಧಕರಿಗೆ ಶ್ರೀರಾಮ ಮತ್ತು ಶ್ರೀ ಹನುಮಂತನ 6 ಸಾವಿರ ವರ್ಷಗಳಷ್ಟು ಹಳೆಯ ಮೂರ್ತಿ ಪತ್ತೆಯಾಗಿದ್ದಲ್ಲದೇ ಸಾಕಷ್ಟು ಕುರುಹುಗಳು ಸಿಕ್ಕಿರುವುದರಿಂದ ಇರಾಕ್ ಕೂಡ ಹಿಂದೂಗಳ ಪುಣ್ಯಭೂಮಿಯಾಗಿತ್ತು ಎಂದರೆ ತಪ್ಪಾಗಲಾರದು.

ಇರಾಕ್ ನ ಪುರಾತತ್ತ್ವ ಶಾಸ್ತ್ರಜ್ಞರಾದ ಸರ್ ಲಿವೋನಾರ್ದ್ ವೂಲೆ ಎನ್ನುವವರು ಈ ಬಗ್ಗೆ ಉರ್‍ನಲ್ಲಿ ಸಂಶೋಧನೆಗಳನ್ನು ನಡೆಸಿದ್ದು, ಇದರಿಂದಾಗಿ ಶ್ರೀರಾಮ ಮತ್ತು ಶ್ರೀ ಹನುಮಂತನ 6 ಸಾವಿರ ವರ್ಷಗಳಷ್ಟು ಹಳೆಯಾದದ ವಿಗ್ರಹಗಳು ಪತ್ತೆಯಾಗಿವೆ.

Inline image 1

ಇಂದು ಅರಬ್ ರಾಷ್ಟ್ರಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ. ಆದರೆ ಈ ಹಿಂದೆ ಅರಬ್ ನಾಗರಿಕತೆ ಶ್ರೀಮಂತ ನಾಗರಿಕತೆಗಳಲ್ಲಿ ಒಂದಾಗಿತ್ತು ಮತ್ತು ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಪರವಾಗಿತ್ತು. ಯಾಕೆಂದರೆ ಆ ಸಂದರ್ಭದಲ್ಲಿ ವೈದಿಕ ಧರ್ಮ ಅಲ್ಲಿ ನೆಲೆಯೂರಿತ್ತು. ಮೊದಲು ವೈದಿಕ ಸಂಪ್ರದಾಯವನ್ನು ಅನುಸರಿಸುತ್ತಿದ್ದ ಅಲ್ಲಿನ ನಾಗರೀಕರು ಜಗತ್ತಿನೆಲ್ಲೆಡೆ ಇಸ್ಲಾಂ ದಾಳಿಯಾದ ಹಾಗೆ ಇಲ್ಲಿಯೂ ಕೂಡ ದಾಳಿಯಾಯಿತು. ಹಾಗಾಗಿ ಈ ದಾಳಿಯಿಂದ ಒಂದು ಅದ್ಬುತ ಯುಗದ ನಾಶಕ್ಕೆ ಕಾರಣವಾಯಿತು.

Inline image 5

ಪ್ರಾಚೀನ ಅವಶೇಷಗಳಿಂದ ಹೊಸ ಸಂಶೋಧನೆ ಮಾಡಿರುವ ಸರ್ ಲಿವೋನಾರ್ದ್ ವೂಲೆ ಅವರ ಈ ಹೊಸ ಸಂಶೋಧನೆ, ಆಧುನಿಕ ಪುರಾತತ್ತ್ವಶಾಸ್ತ್ರದ ಬಹುದೊಡ್ಡ ವಿಜಯವಾಗಿದೆ. ಅಷ್ಟೇ ಅಲ್ಲದೇ ಇರಾಕ್ ನಂತಹ ಮುಸ್ಲಿಂ ರಾಷ್ಟ್ರದಲ್ಲಿಯೂ ಹಿಂದೂಗಳ ಐತಿಹ್ಯವಿರುವಂತಹ ಕುರುಹುಗಳು, ದಾಖಲೆಗಳು ಸಿಕ್ಕಿರುವುದು ಹಿಂದೂಗಳ ಸಂಖ್ಯೆ ಎಲ್ಲಿವರೆಗೆ ಹಬ್ಬಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

Inline image 2

ಸಂಶೋಧನೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿತು ಹಲವಾರು ವಿಚಾರಗಳು………….!!

ಉರ್‍ನಲ್ಲಿ ಮಾಡಿರುವ ಉತ್ಖನನದ ಸಮಯದಲ್ಲಿ ಅವರಿಗೆ ಶ್ರೀರಾಮನ ದೇವಸ್ಥಾನ ಸಿಕ್ಕಿದೆ. ಅಷ್ಟೇ ಅಲ್ಲದೇ, ಅದರಲ್ಲಿ ಅವರಿಗೆ ಭಗವಾನ್ ಶ್ರೀರಾಮ ಮತ್ತು ಶ್ರೀ ಹನುಮಂತನ ಮೂರ್ತಿಗಳು ಸಿಕ್ಕಿದವು. ಈ ಸಂಶೋಧನೆಯಿಂದ ಸಂಯುಕ್ತ ಪ್ರಾಚೀನ ಭಾರತ, ಇರಾನ್ ಮತ್ತು ಸುಮೇರ ಇವುಗಳಲ್ಲಿನ ಐತಿಹಾಸಿಕ ಸಂಬಂಧವು ಬೆಳಕಿಗೆ ಬಂದಿದೆ ಹಾಗೂ ಈ ಸಂಶೋಧನೆಯಿಂದ ಭಾರತೀಯ ಸಂಸ್ಕೃತಿ ಮತ್ತು ಪುರಾತತ್ತ್ವ ಶಾಸ್ತ್ರದ ಅಂತರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

Inline image 4

 

ಲಾರ್ಸಾದಲ್ಲಿ ರಾಮ-ಸೀತೆಯರ ಸ್ಮರಣಾರ್ಥ ನಿರ್ಮಿಸಿರುವ ಈ ದೇವಸ್ಥಾನವು ವಾಲ್ಮಿಕಿ ರಾಮಾಯಣದಲ್ಲಿನ ಶ್ರೀರಾಮನದ್ದೇ ಆಗಿದೆ ಎಂದು ತಿಳಿದು ಬಂದಿದೆ. ಉರ್ ನಲ್ಲಿರುವ ರಾಮಮಂದಿರವು ಭಗವಾನ ಶ್ರೀರಾಮನ ಬೇರೆ ಮಂದಿರಗಳಿಗಿಂತಲೂ ಅತ್ಯಂತ ಪ್ರಾಚೀನ ಸ್ಮಾರಕವಾಗಿದೆ. ಉತ್ಖನನದ ಸಮಯದಲ್ಲಿ ಸಾಕಷ್ಟು ಪುರಾವೆಗಳು ಕಂಡು ಬಂದಿದ್ದು ಇರಾಕ್ ಎನ್ನುವ ಇಸ್ಲಾಮಿಕ್ ರಾಷ್ಟ್ರ, ಹಿಂದೂಗಳ ಪುಣ್ಯಭೂಮಿಯಾಗಿತ್ತು ಎನ್ನುವುದಕ್ಕೆ ಎರಡು ಮಾತಿಲ್ಲ.

Inline image 3

ಅಷ್ಟೇ ಅಲ್ಲದೇ, ಪ್ರಾಚೀನ ಕಾಲದಲ್ಲಿ ಆ ಕ್ಷೇತ್ರದಲ್ಲಿ ವಾಸಿಸುತ್ತಿದ್ದ ದಿಲಮೂನ ವ್ಯಾಪಾರಿಗಳು ಈ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಹೇಳಲಾಗುತ್ತದೆ. ಸುಮೇರಿ ಗ್ರಂಥ ಗಳಲ್ಲಿ ಮಗನ ಮತ್ತು ಮೆಲುಖಾ ಮತ್ತು ದಿಲಮೂನರ ಉಲ್ಲೇಖಗಳು ಕಂಡುಬರುತ್ತದೆ. ಆದ್ದರಿಂದ ಆ ಕಾಲದಲ್ಲಿ ಈ ಮೂರು ರಾಜ್ಯಗಳು ಪರಸ್ಪರ ಜೋಡಿಸಲ್ಪಟ್ಟಿದ್ದವು ಎಂಬುದು ಸ್ಪಷ್ಟವಾಗುತ್ತದೆ ಕಾಣುತ್ತದೆ ಎನ್ನುವುದು ಸಂಶೋಧನೆಯ ಮೂಲಕ ತಿಳಿದು ಬರುತ್ತದೆ.

ಜಗತ್ತಿನೆಲ್ಲೆಡೆ ಇಸ್ಲಾಂ ದಾಳಿಯಾದ ಹಾಗೆ ಇಲ್ಲಿಯೂ ದಾಳಿಯಾಯಿತು ಎನ್ನುವುದಕ್ಕೆ ಎರಡು ಮಾತಿಲ್ಲ. ವೈದಿಕ ಧರ್ಮವನ್ನು ಪಾಲಿಸುತ್ತಿದ್ದ ಈ ರಾಷ್ಟ್ರಗಳು ಇಂದು ಕಟುಮುಸ್ಲಿಂ ರಾಷ್ಟ್ರವಾಗಿ ಮೆರೆಯುತ್ತಿದೆ ಎಂದರೆ ಅದೆಷ್ಟು ಹಿಂದೂಗಳ ಮಾರಣಹೋಮ ನಡೆದಿದೆಯೋ…. ಗೊತ್ತಿಲ್ಲ!!
– ಅಲೋಖಾ

Tags

Related Articles

Close