ಅಂಕಣದೇಶಪ್ರಚಲಿತ

ಮೋದಿಯವರ ಕುಟುಂಬ ರಾಜಕಾರಣವನ್ನು ನೋಡಿ ದಂಗಾಗುವಿರಿ! ಅವರ ಅಣ್ಣ-ತಮ್ಮಂದಿರ ಆಸ್ತಿ ವಿವರಗಳೇನು ಗೊತ್ತೇ?

ಉತ್ತಮ ಪದವಿಗೆ ಏರಿದರೆ ತನ್ನ ಕುಟುಂಬವೂ ಶ್ರೀಮಂತಿಕೆಯ ತೊಟ್ಟಿಲಿನಲ್ಲಿ ಉಂಡು ಮಲಗಬೇಕೆಂಬ ಹಂಬಲ ಯಾರಲ್ಲಿ ಇರುವುದಿಲ್ಲ ಹೇಳಿ? ಮನುಷ್ಯ ತಾನು ತನ್ನ ಕುಟುಂಬದ ಏಳಿಗೆಗಾಗಿ ಏನೆಲ್ಲಾ ಮಾಡ್ತಾನೇ ಅಲ್ವಾ?. ಅಂತಹ ವ್ಯವಸ್ಥೆಯಲ್ಲಿ ತಾನು ದೇಶದ ಅತ್ಯುನ್ನತ ಪದವಿಯಲ್ಲಿದ್ದರೂ ಕೂಡ ತನ್ನ ಕುಟುಂಬವನ್ನು ಶ್ರೀಮಂತಿಕೆಯ ಮಡಿಲಿನಲ್ಲಿ ಮಲಗಿಸಲಿಲ್ಲ, ಇಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿ ತನ್ನ ಕುಟುಂಬವನ್ನು ಹಣದ ಹಾಸಿಗೆಯಲ್ಲಿ ಮಲಗಿಸಲಿಲ್ಲ. ನಿಸ್ವಾರ್ಥ ಸೇವೆಯಲ್ಲಿ ಸ್ವಚ್ಛ ಭಾರತದ ಕನಸನ್ನು ಕಂಡು ನನಸು ಮಾಡಿದವರೇ ನಮ್ಮ ಪ್ರಧಾನಿ ನರೇಂದ್ರ ಮೋದಿ.

ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಆರ್.ಎಸ್.ಎಸ್ ಗರಡಿಯಲ್ಲಿ ಕಲಿತ ಶಿಸ್ತು ಇಂದು ಸಾಮಾಜಿಕ- ರಾಜಕೀಯದಲ್ಲಿ ದೇಶ-ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಮೋದಿಯವರ ಕುಟುಂಬ ಹೇಗಿದೆ ಗೊತ್ತಾ?. ಒಬ್ಬ ರಾಜಕಾರಣಿ ತಾನು ಉನ್ನತ ಹುದ್ದೆಯಲ್ಲಿದ್ದರೆ ತನ್ನ ಕುಟುಂಬಕ್ಕೆ ಆಸ್ತಿ, ಅಂತಸ್ತು, ಅಧಿಕಾರದಲ್ಲಿ ಸ್ಥಾನಮಾನವನ್ನು ಕಲ್ಪಿಸುವಲ್ಲಿ ಹಾತೊರೆಯುವಾಗ, ಪ್ರಧಾನಿ ನರೇಂದ್ರ ಮೋದಿಯವರ ತುಂಬು ಕುಟುಂಬ ಹೇಗೆ ಸಮಾಜದಲ್ಲಿ ಅಧಿಕಾರದ ಸಹಾಯವಿಲ್ಲದೆ ತಮ್ಮನ್ನು ತಾವು ಹೇಗೆ ಸಮಾಜದಲ್ಲಿ ಸರಳ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ, ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

1. ಅಮೃತ್‍ಬಾಯಿ ಮೋದಿ:
ನರೇಂದ್ರ ಮೋದಿಯವರ ದೊಡ್ಡ ಅಣ್ಣ ಅಮೃತ್‍ಬಾಯಿ ಮೋದಿ. ಖಾಸಗಿ ಕಂಪೆನಿಯಲ್ಲಿ ಫಿಟ್ಟರ್ ಆಗಿ ಕೆಲಸಮಾಡುತ್ತಿದ್ದು, ಇದೀಗ ಕೆಲಸದಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಜೀವನಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ತಿಂಗಳಿಗೆ 10,000 ರೂಪಾಯಿಯ ಪಿಂಚಣಿಯನ್ನು ಅಮೃತ್ ಬಾಯಿ ಪಡೆದುಕೊಳ್ಳುತ್ತಿದ್ದಾರೆ. ಇವರ ಮನೆಯಲ್ಲಿ ಒಂದು ಸಣ್ಣ ಕಾರು ಮತ್ತು ಇವರು ಸದಾ ಓಡಾಡುವ ಸ್ಕೂಟರ್ ಬಿಟ್ಟರೆ ಅಮೃತ್‍ಬಾಯಿಯಾಗಲಿ, ಅವರ ಕುಟುಂಬದ ಯಾವೊಬ್ಬ ಸದಸ್ಯನಾಗಲಿ, ವಿಮಾನದ ಒಳಗಡೆ ಏನಿದೆ ಅನ್ನೋದನ್ನೇ ನೋಡದೆ ಸರಳ ಜೀವನ ನಡೆಸುತ್ತಿದ್ದಾರೆ.

2 ಪ್ರಹ್ಲಾದ್‍ಬಾಯಿ ಮೋದಿ:
ಪ್ರಧಾನಿ ಮೋದಿಯವರ ತಮ್ಮನಾಗಿರುವ ಪ್ರಹ್ಲಾದ್‍ಬಾಯಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿ ಮಾಲೀಕರ ಯೂನಿಯನ್‍ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಇವರು ತನ್ನ ಮಗಳು ಕೆಲ ತಿಂಗಳ ಹಿಂದೆ ಖಾಯಲೆಯಿಂದ ಸಾವನ್ನಪ್ಪಿದ್ದರು. ಮಗಳು ಖಾಯಿಲೆಯಿಂದ ಬಳಲುತ್ತಿರಬೇಕಾದ್ರೂ ಕೂಡ ದುಬಾರಿ ಚಿಕಿತ್ಸೆಯ ಮೊರೆ ಹೋಗಿಲ್ಲ.

3 ಪಂಕಜ್‍ಬಾಯಿ ಮೋದಿ:
ನರೇಂದ್ರಮೋದಿಯವರ ಅಣ್ಣ ತಮ್ಮಂದಿರಲ್ಲಿ ಉನ್ನತ ಸ್ಥಾನದಲ್ಲಿ ಮತ್ತು ಶಾಶ್ವತ ಹುದ್ದೆಯಲ್ಲಿ ಇರುವವರೇ ಪಂಕಜ್‍ಬಾಯಿ ಮೋದಿ. ಗುಜರಾತ್ ಸರಕಾರದಲ್ಲಿನ ವಾರ್ತಾ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಇವರು 3 ಬೆಡ್ ರೂಮ್ ನ ಒಂದು ಮನೆಯನ್ನು ಹೊಂದಿದ್ದಾರೆ. ಅಲ್ಲದೇ ನರೇಂದ್ರ ಮೋದಿಯವರ ತಾಯಿ ಹೀರಾಬೆನ್, ಪಂಕಜ್‍ಬಾಯಿ ಮೋದಿಯವರೊಂದಿಗೆ ವಾಸವಾಗಿದ್ದಾರೆ⁠⁠⁠⁠.

4 ಅಶೋಕ್‍ಬಾಯಿ ಮೋದಿ:
ಇವರು ನರೇಂದ್ರ ಮೋದಿಯವರ ಚಿಕ್ಕಪ್ಪನ ಮೊದಲ ಮಗ. ಅಶೋಕ್ ಬಾಯಿ ತನ್ನ ಸಣ್ಣ ಥೇಲಾದಲ್ಲಿ ಗಾಳಿಪಟ, ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಾ ಬದುಕನ್ನು ನಡೆಸುತ್ತಿದ್ದಾರೆ. ಇವರು 8 ಅಡಿ ಎತ್ತರ ಹಾಗೂ 4 ಅಡಿ ಅಗಲದ ಬಾಡಿಗೆಯ ಸಣ್ಣ ಅಂಗಡಿ ನಡೆಸುತ್ತಿದ್ದು, ತಿಂಗಳಿಗೆ 7000 ರೂಪಾಯಿ ದುಡಿಯುತ್ತಾರೆ. ಅಲ್ಲದೇ ಇವರ ಹೆಂಡತಿ ಆಹಾರ ಕೇಂದ್ರದಲ್ಲಿ ಪಾತ್ರೆಗಳನ್ನು ತೊಳೆದು ತಿಂಗಳಿಗೆ 3000 ರೂಪಾಯಿಗಳನ್ನು ಸಂಪಾದಿಸಿ ತನ್ನ ಜೀವನವನ್ನು ನಡೆಸುತ್ತಿದ್ದಾರೆ.

5 ಭರತ್‍ಬಾಯಿ ಮೋದಿ:
ನರೇಂದ್ರ ಮೋದಿಯವರ ಚಿಕ್ಕಪ್ಪನ ಮಗ(ಅಶೋಕ್ ಬಾಯಿ ಸೋದರ) ಭರತ್‍ಬಾಯಿ. ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡಿ ತಿಂಗಳಿಗೆ 6000 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಅಲ್ಲದೇ ಇವರ ಹೆಂಡತಿ ತಿಂಡಿ ತಿನಿಸುಗಳನ್ನು ಮಾರಿ ತಿಂಗಳಿಗೆ ಬರುವ 4000 ರೂಪಾಯಿಗಳಿಂದ ತನ್ನ ಪುಟ್ಟ ಕುಟುಂಬವನ್ನು ನಡೆಸುತ್ತಿದ್ದಾರೆ.

6 ಚಂದ್ರಕಾಂತ್‍ಬಾಯಿ ಮೋದಿ:
ಸೋದರ ಸಂಬಂಧಿಯಾದ ಚಂದ್ರಕಾಂತ್‍ಬಾಯಿ ಸ್ಥಳೀಯ ಗೋಶಾಲೆಯಲ್ಲಿ ಸಹಾಯಾಕರಾಗಿ ಕೆಲಸ ಮಾಡುತ್ತಿರುವ ಇವರಿಗೆ ಉಳಿದುಕೊಳ್ಳಲು ಸ್ವಂತ ಮನೆಯೇ ಇಲ್ಲ.

7 ಅರವಿಂದ್‍ಬಾಯಿ ಮೋದಿ:
ಇವರು ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಾ, ಕೇವಲ ಅದರಲ್ಲಿ ಬಂದ ಆದಾಯದಿಂದ ಜೀವನ ಸವೆಸುತ್ತಿದ್ದಾರೆ. ಚಿಂದಿ ಸಂಗ್ರಹಣೆ, ಹಳೆಲೋಹದ ವಸ್ತುಗಳನ್ನು ಮನೆ ಮನೆಗೆ ತೆರಳಿ ಅದನ್ನು ಸಂಗ್ರಹಿಸಿ, ಅದನ್ನು ಮಾರಿ, ಬರುವ ಆದಾಯವೇ ಇವರ ಆಸ್ತಿ. ಈ ಗುಜರಿ ಕೆಲಸದಿಂದ ತಿಂಗಳಿಗೆ 10000 ರೂಪಾಯಿ ಪಡೆದುಕೊಳ್ಳುವುದೇ ಕಷ್ಟಕರ.

8. ನರೇಂದ್ರ ಮೋದಿಯವರ ಸೋದರ ಸಂಬಂಧಿ (ಮೋದಿಯ ಚಿಕ್ಕಪ್ಪನ ಮಗಳು) ಒಬ್ಬ ಬಸ್ ಕಂಡಕ್ಟರ್‍ನ್ನು ವಿವಾಹವಾಗಿದ್ದು, ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.

ರಾಜಕೀಯದಲ್ಲಿ ಇಷ್ಟೊಂದು ಹೆಸರು ಮಾಡಿರುವ ನರೇಂದ್ರ ಮೋದಿಯವರ ಕುಟುಂಬದ ಸದಸ್ಯರು ಸಾಮಾನ್ಯ ಜನರಂತೆ ಕಷ್ಟದ ಜೀವನವನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಇವರು ರಾಜಕಾರಣದ ಹೆಸರಲ್ಲಿ ಹಣ ಸಂಪಾದಿಸದೇ ಸರಳ ಸಜ್ಜನಿಕೆಯ ಬದುಕನ್ನು ಕಾಣುತ್ತಿದ್ದಾರೆ. ನಿಮಗೆ- ನಮಗೆಲ್ಲಾ ಗೊತ್ತಿರುವಂತಹದ್ದೇ. ನೆಹರೂ ಕುಟುಂಬ, ಮುಲಾಯಂ ಕುಟುಂಬ, ಲಾಲು ಕುಟುಂಬ ಹೀಗೆ ಅನೇಕ ಭ್ರಷ್ಟ ರಾಜಕಾರಣಿಗಳು, ತಮಗೆ ಸಿಗುವ ಸಂಬಳ ಸಾಕಾಗದೇ, ಗಿಂಬಳದ ಮೂಲಕ ತಮ್ಮ ಕುಟುಂಬ ಹಣದ ಸುಪ್ಪತ್ತಿಗೆಯಲ್ಲಿ ಮಿಂದೇಳುತ್ತಿದ್ದರೆ, ಗುಜರಾತ್‍ನಲ್ಲಿ 14 ವರ್ಷಗಳ ಕಾಲ ರಾಜಕಾರಣದಲ್ಲಿದ್ದು, ನಿಸ್ವಾರ್ಥ ಸೇವೆಯಿಂದ ದೇಶಕ್ಕಾಗಿ ಪಣತೊಟ್ಟಿರುವ ಏಕೈಕ ವ್ಯಕ್ತಿ. ಆದರೆ ಇದೇ ಪ್ರವೃತ್ತಿಯಿಂದ ದೇಶಹಿತವನ್ನು ಮಾಡುತ್ತೇನೆಂದು ಪಣವನ್ನು ಯಾರು ತೊಟ್ಟಿದ್ದಾರೆ?? ಹುಡುಕಬೇಕಷ್ಟೇ. ತಮ್ಮ ಜೀವನವನ್ನು ಸಮಾಜದ ಹಿತಕ್ಕಾಗಿಯೇ ಮುಡಿಪಾಗಿಟ್ಟಿರುವ ಮೋದಿಯವರಿಗೆ ನಮ್ಮ ಪರವಾಗಿ ಒಂದು ಸಲಾಮ್ ಸಲ್ಲಿಸೋಣವೇ??

– ಸರಿತಾ

Tags

Related Articles

Close