ಪ್ರಚಲಿತ

ಮೋದಿ, ಅಡ್ವಾಣಿ, ರಾಜನಾಥ್, ವಿ.ಕೆ.ಸಿಂಗ್ ಹತ್ಯೆಗೆ ಬಿಗ್ ಪ್ಲಾನ್.! ಮತ್ತೆ ಬೆಚ್ಚಿ ಬಿತ್ತು ಭಾರತ! ಕರ್ನಾಟಕಕ್ಕೂ ಇದಕ್ಕೂ ಸಂಬಂಧವೇನು?!

ಭಯೋತ್ಪಾದನೆಯನ್ನು ಮಟ್ಟ ಹಾಕಲು  ಅನೇಕ ಕ್ರಮಗಳಿಗೆ ಕೈಗೊಳ್ಳುತ್ತಿದ್ದಂತೆಯೇ ಇದೀಗ ಬಿಜೆಪಿಯ ಪ್ರಮುಖ ನಾಯಕರುಗಳ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ..

ದೇಶದಲ್ಲಿ ಭಯೋತ್ಪಾದನಾ ಸಂಘಟನೆ ಹುಟ್ಟಡಗಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ನಡುವೆಯೇ, ಕರ್ನಾಟಕ ಸಹಿತ ದಕ್ಷಿಣ ಭಾರತದಲ್ಲಿ ಅಲ್ ಕಾಯಿದಾ ಸಂಘಟನೆ ಎಕ್ಯೂಐಎಸ್ ಎಂಬ ಹೆಸರಿನಲ್ಲಿ ತನ್ನ ಕಬಂಧಬಾಹು ಚಾಚಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ನ್ಯಾಯಾಲಯಗಳ ಆವರಣಗಳಲ್ಲಿ ಬಾಂಬ್ ಸ್ಫೋಟಿಸಿ ಸದ್ದು ಮಾಡಿದ್ದ ಈ ಸಂಘಟನೆ ಇನ್ನೂ ಸಕ್ರಿಯವಾಗಿದೆ.

ಅಲ್ ಕಾಯಿದಾ ಇಂಡಿಯನ್ ಸಬ್ ಕಾಂಟಿನೆಂಟ್ -ಎಕ್ಯೂಐಎಸ್ (ಅಲ್ ಕಾಯಿದಾ ಭಾರತೀಯ ಉಪಖಂಡ)ಸಂಘಟನೆ “ಬೇಸ್ ಮೂವ್‍ಮೆಂಟ್’ ಹೆಸರಿನಲ್ಲಿ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯ ವರದಿ ಮಾಹಿತಿ ಲಭ್ಯವಾಗಿದೆ!! ಮೈಸೂರು ಕೋರ್ಟ್ ಬಾಂಬ್ ಸ್ಫೋಟದ ಆರೋಪಿಗಳ ವಿಚಾರಣೆ ಬಳಿಕ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಈ ತೀರ್ಮಾನಕ್ಕೆ ಬಂದಿದೆ.

ತಲೆಮರೆಸಿಕೊಂಡಿರುವ ಆರೋಪಿಗಳು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಮತ್ತೆ ಚಟುವಟಿಕೆ ವಿಸ್ತರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಸೂಕ್ತ ನಿರ್ದೇಶನಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸಿದೆ. ಮುಜಿಬಿರ್ ಎಂಬ ಆರೋಪಿ ಮುಂಬಯಿಯಲ್ಲಿ ತಲ್ಲಣ ಉಂಟು ಮಾಡಿಸಲು ನಡೆಸಿದ ವಿಫಲ ಯತ್ನದ ಬಗ್ಗೆಯೂ ವಿವರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ ಆಡ್ವಾಣಿ, ಮಾಜಿ ಭೂ ಸೇನಾ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ವಿ.ಕೆ ಸಿಂಗ್, ವಿಎಚ್‍ಪಿ ನಾಯಕ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಎನ್‍ಐಎಗೆ ಲಭಿಸಿದೆ.

ನರೇಂದ್ರ ಮೋದಿಯವರು ಮೊದಲಿಂದಲೂ ಉಗ್ರರ ಟಾರ್ಗೆಟ್ ಆಗಿದ್ದು, ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಲೇ ಇದೆ. ಈ ಮುಂಚೆಯೂ ಮೋದಿಯವರ ಹತ್ಯೆಗೆ ಉಗ್ರರು ವಿಫಲ ಸಂಚು ರೂಪಿಸಿದ್ದರು.

2014ರ ಲೋಕಸಭೆ ಚುನಾವಣೆಗೆ ಮೊದಲೇ ಮೋದಿಯವರನ್ನು ಮುಗಿಸಬೇಕೆಂದು ಪಾಟ್ನಾದಲ್ಲಿ ಪ್ರಯತ್ನ ನಡೆಸಲಾಗಿತ್ತು. 2013 ಅಕ್ಟೋಬರ್ 27ರಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಹೂಂಕಾರ್ ರ್ಯಾಲಿಯಲ್ಲಿ ಮಾತನಾಡಲು ಆಗಮಿಸುವ ಸಂದರ್ಭದಲ್ಲಿ ಬಾಂಬ್ ಸ್ಫೋಟ ನಡೆದಿತ್ತು.ಸುಮಾರು 8 ಲಕ್ಷ ಜನ ನೆರೆದಿದ್ದ ಈ ಸಭೆ ಸಂದರ್ಭದಲ್ಲಿ ನಡೆದ ಈ ಸರಣಿ ಬಾಂಬ್ ಸ್ಪೋಟದಲ್ಲಿ 6 ಜನ ತೀರಿಕೊಂಡರು. ಮೋದಿಯವರು ಭಾಷಣ ಮಾಡುತ್ತಿದ್ದ ವೇದಿಕೆಗೆ 40 ಅಡಿ ದೂರದಲ್ಲೇ ಬಾಂಬ್ ಪತ್ತೆಯಾಯಿತು! ಸಭೆ ಮುಗಿದ ನಂತರ ನಡೆದ ತಪಾಸಣೆಯಲ್ಲಿ ಸುಮಾರು 17 ಸಜೀವ ಬಾಂಬುಗಳು ಸಿಕ್ಕಿದವು. ನರೇಂದ್ರ ಮೋದಿ ಬಚಾವಾಗಿದ್ದರು! ಈ ಮುಂಚೆ ಎನ್‍ಕೌಂಟರ್‍ಗೆ ಬಲಿಯಾದ ಇಶ್ರತ್ ಜಹಾನ್ ಎಂಬ ಯುವತಿಯೂ ಮೋದಿ ಹತ್ಯೆಗೆ ಮುಂದಾಗಿದ್ದಳು. ಈ ಬಗ್ಗೆ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿ ಕೂಡಾ ದೃಢಪಡಿಸಿದ್ದ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಲುವಾಗಿ ಪಾಕಿಸ್ತಾನದ ಐಎಸ್‍ಐ ಮತ್ತು ಸೌದಿ ಅರೇಬಿಯಾದ ಉಗ್ರ ಸಂಘಟನೆಗಳು ಭಾರಿ ಪ್ರಮಾಣದ ಸಂಚು ರೂಪಿಸಿದ್ದ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಪಟನಾ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದೀನ್‍ನ ಸಂಚು ವಿಫಲವಾದ ಮೇಲೆ ಐಎಸ್‍ಐ, ಭೂಗತ ದೊರೆ ದಾವೂದ್ ಇಬ್ರಾಹಿಂ ಮೊರೆ ಹೋಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

ಕೇವಲ ಪಾಕಿಸ್ತಾನದ ಭಯೋತ್ಪಾದನೆ ಸಂಘಟನೆಗಳಷ್ಟೇ ಅಲ್ಲ, ಸೌದಿ ಅರೇಬಿಯಾದ ಕೆಲ ಸಂಘಟನೆಗಳೂ ಕೂಡ ಮೋದಿ ಅವರ ಹತ್ಯೆಗಾಗಿ ಸಂಚು ರೂಪಿಸುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿ ಮೋದಿ ಅವರ ಹತ್ಯೆಗಾಗಿ ಭಾರಿ ಪ್ರಮಾಣದಲ್ಲೇ ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ದಳ ಮಾಹಿತಿ ಕಲೆಹಾಕಿತ್ತು. ಈ ಮಾಹಿತಿಯನ್ನು ಭಯೋತ್ಪಾದಕ ಶಹೀದ್ ಅಲಿಯಾಸ್ ಬಿಲಾಲ್ ಎಂಬಾತನಿಂದ ಕಲೆಹಾಕಿವೆ.

ನರೇಂದ್ರ ಮೋದಿ ಅವರಿಗೆ ಭಾರಿ ಪ್ರಮಾಣದ ಭದ್ರತೆ ಇರುವುದರಿಂದ ಸಾಮಾನ್ಯ ಜನರಿಗೆ ಅವರ ಬಳಿ ಹೋಗಲು ಕಷ್ಟ. ಭದ್ರತಾ ಅಧಿಕಾರಿಗಳನ್ನೇ ದಂಗೆ ಏಳುವಂತೆ ಮಾಡಿ ಅವರ ಹತ್ಯೆ ಮಾಡಿದರೆ ಹೇಗೆ ಎಂಬ ಕುಯುಕ್ತಿ ಅವರದ್ದಾಗಿತ್ತು. ಮೋದಿ ಹತ್ಯೆಗಾಗಿ ನೇರವಾಗಿ ದಾಳಿ ನಡೆಸುವ ಬದಲಾಗಿ ಸುಸೈಡ್ ಅಟ್ಯಾಕ್ ಮಾಡುವುದು.

ಆತ್ಮಹತ್ಯಾ ದಾಳಿಗಾಗಿ ಶಹೀನ್ ಪಡೆಯೊಂದನ್ನೂ ಕಟ್ಟಲಾಗಿದೆ. ಇದಷ್ಟೇ ಅಲ್ಲ ನಿಷೇಧಿತ ಸಂಘಟನೆ ಸಿಮಿ ಕೂಡ ಇವರಿಗೆ ಸಹಾಯ ಮಾಡುತ್ತಿದೆ. ಈ ಸಂಘಟನೆ ಎಲ್‍ಇಟಿ, ಹುಜಿ ಮತ್ತು ಜೆಇಎಂ ಸಂಘಟನೆಗಳ ಜೊತೆ ಸಂಪರ್ಕದಲ್ಲಿದೆ. ಭಯೋತ್ಪಾದಕರ ಜೊತೆ ಮೋದಿ ಅವರ ಮೇಲೆ ನಕ್ಸಲೀಯರು ಕೂಡ ಗುರಿ ಇಟ್ಟಿದ್ದಾರೆ ಎಂದೂ ಗುಪ್ತಚರ ದಳ ಮಾಹಿತಿ ನೀಡಿತ್ತು.

ಇದೀಗ ಮತ್ತೊಮ್ಮೆ ಹೈ ಅಲರ್ಟ್ ಘೋಷಿಸಲಾಗಿದೆ. ಎಕ್ಯೂಐಎಸ್ ದಕ್ಷಿಣ ಭಾರತದಲ್ಲಿ ನಡೆಸಿರುವ ಉಗ್ರಗಾಮಿ ಚಟುವಟಿಕೆಗಳು ಮತ್ತು ಮುಂಬಯಿ ಮೂಲಕ ದೇಶಾದ್ಯಂತ ನಡೆಸಲು ಉದ್ದೇಶಿಸಿದ್ದ ಚಟುವಟಿಕೆ ಬಗ್ಗೆ ಮಾಹಿತಿಯನ್ನು ಪೆÇಲೀಸರು ಸಂಗ್ರಹಿಸಿದ್ದಾರೆ. ಕೋರ್ಟ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ ಐವರನ್ನು ಬಂಧಿಸಲಾಗಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.

ಅವರ ಪತ್ತೆಗೂ ಎನ್‍ಐಎ ಬಲೆ ಬೀಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. 2000ರ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಕ್ರಿಯಾಶೀಲವಾಗಿದ್ದ ತಮಿಳುನಾಡು ಮೂಲದ “ಆಲ್ ಒಮಾ’ ಉಗ್ರ ಸಂಘಟನೆ ನಾಯಕ ಇಮಾಮ್ ಅಲಿ ಬೆಂಗಳೂರಿನಲ್ಲಿ ಪೆÇಲೀಸ್ ಎನ್‍ಕೌಂಟರ್‍ಗೆ ಬಲಿಯಾದ ಬಳಿಕ ತಟಸ್ಥವಾಗಿತ್ತು. 2015ರಲ್ಲಿ ಮತ್ತೆ ಚಿಗುರಿಕೊಂಡು ಎಕ್ಯೂಐಎಸ್ ಅಡಿಯಲ್ಲಿ ಬೇಸ್‍ಮೂವ್‍ಮೆಂಟ್ ಹೆಸರಿನಲ್ಲಿ ಕಾರ್ಯತತ್ಪರವಾಯಿತು.

ಈ ಸಂಘಟನೆಯ ಅಸ್ತಿತ್ವದ ಬಗ್ಗೆ ಮೈಸೂರು, ನೆಲ್ಲೂರು, ಸೇರಿದಂತೆ ವಿವಿಧೆಡೆಯ ನಾಲ್ಕು ಕೋರ್ಟ್‍ಗಳ ಆವರಣಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಿಂದ ಸಾಬೀತಾಗಿದೆ. ಈ ಬಗ್ಗೆ ಎನ್‍ಐಎ ಪೆÇಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಈ ಪ್ರಕರಣದ ಬೆನ್ನತ್ತಿಹೋದ ಎನ್‍ಐಎ ಅಧಿಕಾರಿಗಳು ಸಂಘಟನೆಯ ಮುಖ್ಯಸ್ಥ ಸೇರಿ 5 ಮಂದಿಯನ್ನು ವಿಚಾರಣೆ ಗೊಳಪಡಿಸಿ ಅವರ ಬಳಿಯಿದ್ದ ಪೆನ್‍ಡ್ರೈವ್, ಮೊಬೈಲ್ ಫೆÇೀನ್ ಸಹಿತ ಹಲವು ಮಹಣ್ತೀದ ದಾಖಲೆಗಳನ್ನು ಜಫ್ತಿ ಮಾಡಿದಾಗ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

ನಿಷೇಧಿತ ಉಗ್ರ ಸಂಘಟನೆ “ಆಲ್ ಮುಝೀದ್ ಫೆÇೀರ್ಸ್’ (ಎಎಂಎಫ್) ಕೂಡ ಎಕ್ಯೂಐಎಸ್ ನಿರ್ದೇಶನದಲ್ಲಿ “ಬೇಸ್ ಮೂವ್‍ಮೆಂಟ್’ ತೆಕ್ಕೆಗೆ ಸೇರಿಕೊಂಡ ಬಗ್ಗೆಯೂ ಉಲ್ಲೇಖವಿದೆ. 2011ರಿಂದ 2014ರವರೆಗೆ ಆ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಧುರೈಯ ಇಸ್ಲಾಮೀಪುರಂನಲ್ಲಿ ಇಸ್ಲಾಮಿಕ್ ಲೈಬ್ರರಿ ನಡೆಸುತ್ತಿದ್ದ ನೈನಾರ್ ಅಬ್ಟಾಸ್ ಅಲಿ ಎಎಂಎಫ್ನಿಂದ ಹೊರಬಂದು ದಕ್ಷಿಣ ಭಾರತದಲ್ಲಿ ತನ್ನದೇ ಉಗ್ರಸಂಘಟನೆ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದು ಎಕ್ಯೂಐಎಸ್ ವಿಸ್ತರಣೆಗೆ ಅನುಕೂಲವಾಗಿತ್ತು. ಆತನೆ, ನೂತನ ಸಂಘಟನೆಗೆ “ಬೇಸ್ ಮೂವ್‍ಮೆಂಟ್’ ಎಂದು ಹೆಸರಿಟ್ಟುಕೊಂಡಿದ್ದ ಎಂದು ಎನ್‍ಐಎ ಹೇಳಿದೆ. 2011ರಲ್ಲಿ ಉಸಮಾ ಬಿನ್ ಲಾದನ್ ಹತನಾದ ಬಳಿಕ ಪುನಶ್ಚೇತನಗೊಂಡಿದ್ದ ಎಕ್ಯೂಐಎಸ್ ಆತನ ಚಿತ್ರವನ್ನೇ ತನ್ನ ಲೋಗೋ ಆಗಿ ಬಳಸಿಕೊಂಡಿದೆ…

ಪವಿತ್ರ

Tags

Related Articles

Close