ಅಂಕಣ

ಮೋದಿ ಮ್ಯಾಜಿಕ್!! ದಶಕಗಳ ಕಾಯುವಿಕೆಯ ನಂತರ ಕೊನೆಗೂ ಭಾರತೀಯ ಸೈನಿಕರಿಗೆ ಸಿಗಲಿದೆ ಬುಲೆಟ್ ಪ್ರೂಫ್ ಶಿರಸ್ತ್ರಾಣಗಳು!!!!!

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಸೈನಿಕರಿಗೆ ಇದೀಗ ಅವರ ಬದುಕಿಗೊಂದು ಹೊಸ ಆಶಾಕಿರಣ ಮೂಡಿದಂತಾಗಿದೆ. ಹೌದು.. ಸೇನೆಯಲ್ಲಿ ಸೇರ್ಪಡೆಗೊಳ್ಳುವ ಯೋಧರಿಗೆ ಪಟಕಾ ಮಾದರಿಯ ಹೆಲ್ಮೆಟ್ ಗಳನ್ನು ನೀಡಲಾಗುತ್ತಿತ್ತು. ಇವು ಹಣೆ ಮತ್ತು ಹಿಂಭಾಗಕ್ಕೆ ಮಾತ್ರ ರಕ್ಷಣೆ ನೀಡುತ್ತಿದ್ದವು. ಮೇಲಾಗಿ ಇದು, ಬರೋಬ್ಬರಿ 2.5 ಕೆಜಿ ತೂಕ ಹೊಂದಿದ್ದ ಇವುಗಳನ್ನು ಹಾಕಿಕೊಳ್ಳುವುದು ಯೋಧರಿಗೆ ಭಾರವಾಗಿ ಪರಿಣಮಿಸುತ್ತಿತ್ತು!! ಹೀಗಾಗಿ ಕಡಿಮೆ ತೂಕದ ಹಾಗೂ ಗುಂಡು ನಿರೋಧಕ ಶಿರಸ್ತ್ರಾಣಗಳನ್ನು ನೀಡಬೇಕೆಂದು ಯೋಧರು ಹಲವು ವರ್ಷಗಳಿಂದಲೂ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಇದೀಗ ಈ ಬೇಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ!!

ಹೌದು.. ಗಡಿ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸಲು ಮುಂದಾಗಿರುವ ಸರ್ಕಾರ, ಇದೀಗ 1,59,000 ಬುಲೆಟ್ ಪ್ರೂಫ್ ಹೆಲ್ಮೆಟ್ ಕೂಡ ಒದಗಿಸಲು ನಿರ್ಧರಿಸಿದೆ. ಅತ್ಯಾಧುನಿಕ ಮತ್ತು ಅಗತ್ಯ ಸೌಲಭ್ಯಕ್ಕೆ ಸೇನೆ ಪದೇ ಪದೇ ಬೇಡಿಕೆ ಸಲ್ಲಿಸುತ್ತಿದ್ದರೂ, ಇದೀಗ ಎರಡು ದಶಕಗಳ ಬಳಿಕ ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿಗೆ ಸರಕಾರ ಮುಂದಾಗಿದೆ.

ಆದರೆ ಈ ಬುಲೆಟ್ ಪ್ರೂಫ್ ಹೆಲ್ಮೆಟ್‍ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯ ಅಡಿ, ದೇಶೀಯವಾಗಿ ತಯಾರಾಗುವ ಎಂಕೆಯು ಸಿಸ್ಟಮ್ ಕಂಪನಿಯ ಹೆಲ್ಮೆಟ್ ಅನ್ನು ಸೈನಿಕರಿಗೆ ಒದಗಿಸಲಾಗುತ್ತದೆ. ಎಂಕೆಯು ಸಿಸ್ಟಮ್ ಸೇನೆ ಮತ್ತು ಭದ್ರತಾ ಪಡೆಗಳಿಗೆ ಅಗತ್ಯವಿರುವ ಹಲವು ಉಪಕರಣಗಳನ್ನು ತಯಾರಿಸಿ ರಫ್ತು ಮಾಡುತ್ತದೆ. ಆದರೆ ಇದೇ ಮೊದಲ ಬಾರಿಗೆ ಭಾರತೀಯ ಸೇನೆಗೆ ಬುಲೆಟ್ ಪ್ರೂಫ್ ಹೆಲ್ಮೆಟ್ ಒದಗಿಸಲಿದೆ ಎಂದು ಹೇಳಲಾಗಿದೆ!! ಇವಿಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ದರ್ಜೆಯ ಮತ್ತು ಗುಣಮಟ್ಟದ ಹೆಲ್ಮೆಟ್ ಇದಾಗಿದ್ದು, ಸೇನೆಯು 1,59,000 ಹೆಲ್ಮೆಟ್‍ಗೆ ಬೇಡಿಕೆ ಸಲ್ಲಿಸಿದೆ. ಅವುಗಳನ್ನು ಮುಂದಿನ ಮೂರು ವರ್ಷದೊಳಗಾಗಿ ಕಂಪನಿ ಪೂರೈಸಲಿದೆ. ಹಗುರವಾದ ಈ ಹೆಲ್ಮೆಟ್‍ಗಳನ್ನು ಮೊದಲ ಹಂತದಲ್ಲಿ ಗಡಿ ಕಾಯುವ ಮತ್ತು ವಿವಿಧ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಯೋಧರಿಗೆ ಒದಗಿಸಲಾಗುತ್ತದೆ. ಜತೆಗೆ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‍ಗಳನ್ನು ಒದಗಿಸಲು ಕೂಡ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗುತ್ತಿದೆ.

ಭಾರತದ ಸೇನೆಯು ಮೇಕ್ ಇಂಡಿಯಾ ಮಾರ್ಗದ ಮೂಲಕ ಅನೇಕ ಪ್ರಮುಖ ಉಪಕರಣಗಳನ್ನು ಕೂಡ ಖರೀದಿಸಲು ಒತ್ತು ನೀಡಿದೆ. “ಹೊಸ ಬ್ಯಾಲಿಸ್ಟಿಕ್
ಶಿರಸ್ತ್ರಾಣಗಳು ಸೇನೆಗೆ ದಶಕಗಳ ನಂತರ ಬರಲಿವೆ. ಅಷ್ಟೇ ಅಲ್ಲದೇ, 1,59,000 ಹೆಲ್ಮೆಟ್‍ಗಳು ಆರಂಭಿಕ ಪ್ರಮಾಣದಲ್ಲಿ ಬರುತ್ತಿದೆ. ಇದರಲ್ಲಿ 6000ದಷ್ಟು
ಹೆಲ್ಮೆಟ್‍ಗಳನ್ನು ಭಾರತೀಯ ನೌಕಾಪಡೆಗೆ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯದ(ಎಮ್‍ಒಡಿ) ಮೂಲಗಳು ತಿಳಿಸಿವೆ!!

ಪ್ರಾಣ ಒತ್ತೆಯಿಟ್ಟು ದೇಶ ಕಾಯುವ ಯೋಧರಿಗೆ ರಕ್ಷಣೆ ನೀಡುವಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಭಾರತೀಯ ಸೇನೆ, ಗುಂಡು ನಿರೋಧಕ ಅತ್ಯಾಧುನಿಕ ವಿಶ್ವದರ್ಜೆಯ ಹೆಲ್ಮೆಟ್ ಗಳನ್ನು ನೀಡ ಬಯಸಿರುವುದು ಹೆಮ್ಮೆಯ ವಿಚಾರ. ನೂತನ ಮಾದರಿಯ ಹೆಲ್ಮೆಟ್ ಗಳನ್ನು ತಯಾರಿಸಲು ಕಾನ್ಪುರದ ಎಂಕೆಯು ಕಂಪನಿಗೆ ಅಧಿಕೃತ ಆದೇಶ ನೀಡಲಾಗಿದ್ದು, ಎಂಕೆಯು ಕಂಪನಿಯು ವಿಶ್ವ ನಾನಾ ದೇಶಗಳ ಸೇನೆಗಳಿಗೆ ರಕ್ಷಣಾ ಪರಿಕರಗಳನ್ನು ತಯಾರಿಸಿ ರವಾನಿಸುತ್ತದೆ ಎಂದು ಮೂಲಗಳು ತಿಳಿಸಿವೆ!!

ಹೊಸ ಹೆಲ್ಮೆಟ್‍ನ ವೈಶಿಷ್ಟ್ಯಗಳೇನು?

– ಈ ಹೆಲ್ಮೆಟ್ ಗಳು 9 ಮಿಲಿಮೀಟರ್ ಹತ್ತಿರದಿಂದ ಹೊಡೆದ ಬುಲೆಟ್‍ನ ರಭಸವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ.
– ಬಳಸಲು ಬಲು ಹಗರ ಹಾಗೂ ಆರಾಮದಾಯಕ
– ನೈಟ್ ಬೈನಾಕ್ಯುಲರ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳು
– ಮೈಕ್ ಹೊಂದಿದ್ದು, ದೂರ ಸಂಪರ್ಕ ಸಾಧನಗಳ ಅಳವಡಿಕೆ

ಎಕನಾಮಿಕ್ ಟೈಮ್ಸ್‍ನ ಒಂದು ವರೆದಿಯ ಪ್ರಕಾರ, ಈ ಹಿಂದೆ ಇದ್ದ ಹೆಲ್ಮೆಟ್‍ಗಳು ಕಲ್ಲುಗಳಿಂದ ಮತ್ತು ಕೆಲವು ಚೂಪಾದ ವಸ್ತುಗಳಿಂದ ಮಾತ್ರ
ರಕ್ಷಿಸಬಹುದಾಗಿತ್ತು!! ಆದರೆ ಒಂದು ಗುಂಡು ನೇರವಾಗಿ ಬಂದು ಹೆಲ್ಮೆಟ್‍ಗೆ ಹೊಡೆದರೆ ಅದು ಸೈನಿಕನನ್ನು ರಕ್ಷಿಸುವುದಿಲ್ಲ” ಎಂದು ಮೂಲಗಳು ತಿಳಿಸಿವೆ.
ಸೈನ್ಯªಮೀ ಹಿಂದೆ ಪಾಟ್ಕಾಗಳನ್ನು ಉಪಯೋಗಿಸುತ್ತಿದ್ದು, ಇದು ಒಬ್ಬರ ಹಣೆಯನ್ನು ಮಾತ್ರ ರಕ್ಷಿಸುತ್ತಿತ್ತು!! ಆದರೆ ತಲೆಯ ಬೇರೆ ಭಾಗಗಳನ್ನು ರಕ್ಷಿಸುವಲ್ಲಿ
ಯೋಗ್ಯವಾಗಿರಲಿಲ್ಲ. ಅಲ್ಲದೇ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪಶ್ಚಿಮದಲ್ಲಿನ ಭಯೋತ್ಪಾದಕ ಮತ್ತು ಪ್ರತಿಭಟನಾ ಕಾರ್ಯಚರಣೆಗಳಲ್ಲಿ ಬಳಸಲ್ಪಡುತ್ತಿರುವ ಈ ಪಾಟ್ಕಾಗಳು ಯುದ್ಧ ಸಮಯದ ಬಳಕೆಗೆ ಸೂಕ್ತವಾಗಿಲ್ಲ. ಯಾಕೆದರೆ ಇದು ಸೀಮಿತ ರಕ್ಷಣೆ ಮಾತ್ರ ಒದಗಿಸುತ್ತದೆ ಎಂದು ಸೈನ್ಯದ ಸಿಬ್ಬಂದಿಗಳು ಹೇಳಿದ್ದಾರೆ.
ಯುದ್ದ ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಸೈನಿಕ ಬಳಸಬೇಕಾದ ರಕ್ಷಣಾತ್ಮಕ ತಡೆ ಸಾಮಾಗ್ರಿಗಳಲ್ಲಿ ಒಂದಾದ ಬ್ಯಾಲಿಸ್ಟಿಕ್ ಶಿರಸ್ತ್ರಾಣವನ್ನು ತರಿಸುವ ಯೋಜನೆಯಲ್ಲಿದೆ!!! ಈ ಬ್ಯಾಲಿಸ್ಟಿಕ್ ಶಿರಸ್ತ್ರಾಣಕ್ಕೆ ರೇಡಿಯೋ ಸೆಟ್‍ಗಳನ್ನು ಅಳವಡಿಸಲಾಗಿದ್ದು, ಇದು ಸೈನಿಕರ ಕಾರ್ಯಚರಣೆಯ ನಡುವೆ ಉತ್ತಮ ಸಂವಹನಕ್ಕಾಗಿ ಸಹಾಯವಾಗಲಿದೆ!!!

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಭಾರತೀಯ ಸೇನೆಯ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್‍ಗಳನ್ನು ಖರೀದಿಸುವ ಯೋಜನೆಯನ್ನು ಹಾಕಿದ್ದು ಇದಕ್ಕೆ ರಕ್ಷಣಾ ಸಚಿವಾಲಯವು ಆದೇಶವನ್ನು ನೀಡಿದೆ!! ಇದೀಗ, ಗುಂಡು ನಿರೋಧಕ ಜಾಕೆಟ್‍ಗಳು, ಗುಂಡು ನಿರೋಧಕ ಹೆಲ್ಮೆಟ್‍ಗಳು ಭಾರತೀಯ ಸೈನ್ಯವನ್ನು ಆಧುನೀಕರಣದತ್ತ ಕೊoಡುಯ್ಯುತ್ತಿದೆ. ಅಲ್ಲದೇ ಈ ಉಪಕರಣಗಳು ಸೈನಿಕನ ಜೀವವನ್ನು ಉಳಿಸಲು ಸಹಾಯಕಾರಿಯಾಗಿದೆ. ಇದರೊಂದಿಗೆ ಭಾರತೀಯ ಸೇನೆಯ ನೈತಿಕತೆ ಮತ್ತು ಬಲವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ!!!

– ಅಲೋಖಾ

Tags

Related Articles

Close