ಅಂಕಣಜಿಲ್ಲಾ ಸುದ್ದಿಪ್ರಚಲಿತರಾಜ್ಯ

ಯಶಸ್ವಿಯಾದ ಭಿಕ್ಷಾಂದೇಹಿ ಅಭಿಯಾನ!! ರಾಮ ವಿದ್ಯಾ ಕೇಂದ್ರಕ್ಕೆ ಹರಿದು ಬಂತು ಬರೋಬ್ಬರಿ 38 ಲಕ್ಷ ರೂಪಾಯಿಗಳು!!!

ಭಿಕ್ಷಾಂದೇಹಿ ಆಂದೋಲನ ರಾಮ ವಿದ್ಯಾ ಕೇಂದ್ರದ ಮಕ್ಕಳಿಗೆ ಧನಸಹಾಯ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದಿಂದ ವಂಚಿತಕ್ಕೊಳಗಾಗಿದ್ದ ರಾಮವಿದ್ಯಾ ಕೇಂದ್ರ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಈ ಆಂದೋಲನದಿಂದ ಸ್ಥಿರವಾಗಿದೆಯೆಂದೇ ಹೇಳಬಹುದು!
ನಾಚಿಕರಯೂ ಇಲ್ಲದ ಸಿದ್ಧರಾಮಯ್ಯನ ಸರಕಾರ ರಾಜಕೀಯ ದ್ವೇಷಕ್ಕೆ, ಮಧ್ಯಾಹ್ನ ಬಿಸಿಯೂಟದ ಅನುದಾನವನ್ನು ಕಲ್ಲಡ್ಕ ಶಾಲೆಗೆ ತಕ್ಷಣವೇ ನಿಲ್ಲಿಸಿತ್ತು! ವಿದ್ಯಾರ್ಥಿಗಳ ಕೂಗಿಗೂ ಜಾಣ ಕಿವುಡನಾಗಿದ್ದ ಸಿದ್ಧರಾಮಯ್ಯ ಇಂದಿರಾ ಕ್ಯಾಂಟೀನ್ ನಲ್ಲಿ ತಾಜಾ ಆಹಾರ ಮುಕ್ಕಿದ್ದೂ ಅಲ್ಲದೇ, ಮಕ್ಕಳ ಭವಿಷ್ಯಕ್ಕೆ ಮಣ್ಣೆರಚಲು ಹೊರಟಿದ್ದ ಸರಕಾರದ ಆಟವೊಂದಕ್ಕೆ ಸೋಲಾಗಿರುವುದಂತೂ ಸತ್ಯ!

ಇವತ್ತು, ಜನಾರ್ಧನ ರೆಡ್ಡಿ, ಲಾಲೇಶ್ ರೆಡ್ಡಿ, ರಾಜ್ ಗೋಪಾಲ್ ರೆಡ್ಡಿ, ಪಾರ್ವತ್ ಶೆಟ್ಟಿ, ತಮ್ಮೇಶ್ ಗೌಡ, ಜಸ್ವಂತ್ ಸೇಠ್ ಎಲ್ಲರೂ ಸೇರಿ, 26 ಲಕ್ಷ ರೂಪಾಯಿಯ ಧನಸಹಾಯ ಮಾಡಿದ್ದಾರೆ! ಅಲ್ಲದೇ,ಉಳಿದ ದಾನಿಗಳ ಹಣವೂ ಸೇರಿ, ಪೂರ್ಣವಾಗಿ 38 ಲಕ್ಷ ರೂಪಾಯಿಯ ಧನ ಸಹಾಯ ಕಲ್ಲಡ್ಕ ಶಾಲೆಗೆ ಕೇವಲ ಹತ್ತೇ ದಿನದಲ್ಲಿ ಹರಿದು ಬಂದಿದೆ! ಜನಾರ್ಧನ್ ರೆಡ್ಡಿಯವರು ಇವತ್ತು ಶಾಲೆಗೆ ಭೇಟಿ ನೀಡಿದ್ದಲ್ಲದೇ, ತಕ್ಷಣವೇ 26 ಲಕ್ಷ ರೂಪಾಯಿಯ ಧನ ಸಹಾಯವನ್ನು ಮಾಡಿದ್ದಾರೆ!

ಈ ಹಣದಿಂದ ಇನ್ನು ಆರು ತಿಂಗಳು ವಿದ್ಯಾರ್ಥಿಗಳಿಗೆ ಅನ್ನಸಹಾಯ ಮಾಡುವುದಲ್ಲದೇ, ಖಾಲಿಯಾಗಿದ್ದ ಬುತ್ತಿ ಮತ್ತೆ ತುಂಬಿದೆ! ಎಲ್ಲಾ ವಿದ್ಯಾರ್ಥಿಗಳೂ ಒಕ್ಕೊರಲಿನಿಂದ ಧನ್ಯವಾದ ಸಲ್ಲಿಸಿದ್ದಲ್ಲದೇ, ಧನ ಸಹಾಯ ಮಾಡಿದ ಎಲ್ಲಾ ದಾನಿಗಳಿಗೂ ನಾವು ಚಿರ ಋಣಿಯಾಗಿದ್ದೇವೆಂದು ಹೇಳಿದ್ದಾರೆ!

ಶಾಲೆ 3016 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದು, ಜೊತೆ ಜೊತೆಗೇ ಭಾರತದ ಸಂಸ್ಕೃತಿಯನ್ನೂ ಪರಿಚಯಿಸುತ್ತಾ, ಆದರ್ಶ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡುವಲ್ಲಿ ಕಲ್ಲಡ್ಕ ಶಾಲೆ ನಿರತವಾಗಿದೆ! 94% ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಈ ಶಾಲೆ, ಇಡಿಯ ಕರ್ನಾಟಕದಲ್ಲೇ ಬೃಹತ್ತಾದ ಕನ್ನಡ ಮಾಧ್ಯಮ ಶಾಲೆಯಾಗಿದೆ!

ಕೊಲ್ಲೂರು ಮೂಕಾಂಬಿಕ ಸಮಿತಿಯಿಂದ ಮಕ್ಕಳ ಬಿಸಿಯೂಟಕ್ಕೆ ಅನುದಾನವಾಗುತ್ತಿದ್ದರೂ ಸಹ, ರಾಜ್ಯ ಸರಕಾರ ಸಮಿತಿಗೆ ಅನುದಾನ ನಿಲ್ಲಿಸುವಂತೆ ಆಜ್ಞಾಪಿಸಿದ್ದರಿಂದ ಸಾವಿರಾರು ಮಕ್ಕಳು ಹಸಿವಿನಿಂದ ಬಳಲುವಂತಾಗಿತ್ತು! ಆದಕಾರಣ, postcard.news ಭಿಕ್ಷಾಂದೇಹಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ತನ್ಮೂಲಕ, ಕಲ್ಲಡ್ಕ ಶಾಲೆಗೆ ಧನಸಹಾಯ ಮಾಡುವಲ್ಲಿ ನಿರತವಾದ ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇವಲ ಐದೇ ದಿನದಲ್ಲಿ 12 ಲಕ್ಷ ರೂಪಾಲಿ ಧನಸಹಾಯ ಹಾಗೂ 4,500 ಕೆಜಿ ಅಕ್ಕಿಯ ಸಹಾಯ ಹರಿದು ಬಂದಿತ್ತು.

ಪ್ರತಿ ದಿನದ ಒಂದು ಹೊತ್ತಿನ ಊಟಕ್ಕೆ, ಪ್ರತಿ ವಿದ್ಯಾರ್ಥಿಗೆ ತಲಾ 10 ರೂಪಾಯಿ ವಿನಿಯೋಗವಾಗುತ್ತದೆ. ಹಾಗೆಯೇ, 3000 ವಿದ್ಯಾರ್ಥಿಗಳಿಗೆ ಪ್ರತಿದಿನ 30,000 ರೂಪಾಯಿ ತಗುಲುತ್ತದೆ. ನಿಮ್ಮ 10 ರೂಪಾಯಿಗಳ ಸಹಾಯವೂ ಒಂದು ವಿದ್ಯಾರ್ಥಿಯ ಒಂದು ಹೊತ್ತಿನ ಬುತ್ತಿ ತುಂಬಿಸುತ್ತದೆ!!!

 

 

 

ಸಹಾಯ ಮಾಡಲಿಚ್ಛಿಸಿದಲ್ಲಿ, ಈ ಕೆಳಗಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಬಹುದು. ಜಮಾವಣೆ ಮಾಡಿದ ಹಣದ ರಶೀದಿಯ ಪ್ರತಿಯನ್ನು ಕೆಳಗಿನ ಲಿಂಕ್ ಗಳಿಗೆ ಕಳುಹಿಸಿರೆಂದು ವಿನಂತಿಸುತ್ತಿದ್ದೇವೆ!

Sri Rama Vidya Kendra Trust
A/C : 2832500100045001
IFSC code : KARB0000283
Karnataka Bank
WhatsApp: 8747004965
E-mail: postcardkannada@gmail.com
Tweet: @mvmeet
FB : Mahesh Vikram Hegde and Vivek Shetty

– ಪೋಸ್ಟ್ ಕಾರ್ಡ್ ತಂಡ

Tags

Related Articles

Close