ಪ್ರಚಲಿತ

ಯೋಗಿ ತಾಜ್ ಮಹಲ್ ನ ಮೇಲೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಬೊಬ್ಬಿರಿಯುತ್ತಿರುವ ಮಾಧ್ಯಮಗಳು ತಿಳಿಯಲೇಬೇಕಾದ ಕೆಲವು ಸತ್ಯಗಳು!

ಯಾವಾಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾದ ಯೋಗಿ ಆದಿತ್ಯನಾಥ್ ಭಾರತೀಯ ಸಂಸ್ಕೃತಿಗೆ ಯಾವ ಲೆಕ್ಕದಲ್ಲಿಯೂ ತಾಜ್ ಮಹಲ್ ಸಂಬಂಧಿಸಿಲ್ಲ
ಎಂದುಬಿಟ್ಟರೋ, ಒಂದಷ್ಟು ಜನರಿಗೆ ತಾಜ್ ಮಹಲ್ ಬಗ್ಗೆ ಪ್ರೀತಿ ಉಕ್ಕಿ ಹರಿದು ಹತ್ರು ಹಲವಾರು ತಾಜ್ ಮಹಲ್ ಕಟ್ಟುತ್ತೇವೆಂದು ಹೊರಟಿದ್ದಾರೆ!

ಹೌದು! ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ವರ್ಷದ ಪ್ರವಾಸೀ ತಾಣಗಳ ಪಟ್ಟಿಯಿಂದ ತಾಜ್ ಮಹಲ್ ನನ್ನು ತೆಗೆದು ಬದಿಗಿರಿಸಿದರೋ, ಮೊಘಲ ಸಾಮ್ರಾಜ್ಯದ ಅಭಿಮಾನಿಗಳೆಲ್ಲ ಹುಚ್ಚರಾಗಿ ಹೋಗಿದ್ದಾರೆ! ಉತ್ತರ ಪ್ರದೇಶದ ಯೋಗಿ ಸಾರಥ್ಯದ ಸರಕಾರವಕ್ಕೆ “ಮೊಘಲರಿಂದಲೇ ಇವತ್ತು ಭಾರತ ಇಷ್ಟು ಸಮೃದ್ಧಭರಿತವಾಗಿದೆ” ಎಂದು ಮನವೊಲಿಸಲು ಹೋಗಿದ್ದಾರೆ!

ನಿಮಗೊಂದು ವಿಷಯ ಹೇಳಿಬಿಡುತ್ತೇನೆ! ಮೊಘಲ ಸಾಮ್ರಾಜ್ಯದ ಕೀರ್ತಿಯ ಪುಟದುದ್ದಕ್ಕೂ ಚೆಲ್ಲಿರುವುದು ಹಿಂದೂಗಳ ರಕ್ತ ಅಷ್ಟೇ! ಹಿಂದೂ, ಜೈನ, ಸಿಖ್, ಬುದ್ಧ ಎಂದೆಲ್ಲ ಬೇರ್ಪಡಿಸುವ ಅಗತ್ಯವೇ ಇಲ್ಲ! ಭಾರತೀಯರ ರಕ್ತಪಾತವಾದ ಮೇಲೂ ಸಹ, ಅದೆಷ್ಟೋ ಅಸಂಖ್ಯ ದೇವಾಲಯಗಳ ನಾಶವಾದರೂ ಸಹ, ಅದೆಷ್ಟೋ ಭಾರತದ ಸಂಸ್ಕೃತಿ ಹೇಳ ಹೆಸರಿಲ್ಲದಾದರೂ ಸಹ, ಭಾರತದ ಯಾವುದೇ ವ್ಯವಸ್ಥಿತ ಶಿಕ್ಷಣದ ಪಠ್ಯ ಪುಸ್ತಕಗಳಲಿ ಮೊಘಲರ ಕ್ರೂರತೆಯ ಬಗೆಗೆ ಉಲ್ಲೇಖವಿಲ್ಲ!

ಯಾವ ಪುರುಷನಿಗೆ 300 ಹೆಂಡತಿಯರಿದ್ದರೋ ಅವನನ್ನು ದ ಗ್ರೇಟ್ ಅಕ್ಬರ್ ಎಂದು ಕರೆದೆವು! ಈ ಪರಮಶ್ರೇಷ್ಟನಿಗೆ ಇದಲ್ಲದೇ 5000 ಲೈಂಗಿಕ ಗುಲಾಮರೂ ಆತನ ಜನಾನಾದೊಳವಿದ್ದರು! ಚಿತ್ತೋಸ್ ಘರ್ ನನ್ನು ವಶಪಡಿಸಿಕೊಳ್ಳುವ ಭರದಲ್ಲಿ ಬರೋಬ್ಬರಿ 30,000 ಹಿಂದೂಗಳ ಮಾರಣಹೋಮಕ್ಕೆ ಕಾರಣನಾದ ಅಕ್ಬರ್ ಎಂಬುವವನು ಪರಮಶ್ರೇಷ್ಟನೇ?! ಅಲ್ಲವೇ ಅಲ್ಲ! ಇಂತಹ ಕಾಮುಕ ರಾಜನಿಂದ ತಪ್ಪಿಸಿಕೊಳ್ಳಲು ಅದೆಷ್ಟೋ ರಜಪೂತ ಮಹಿಳೆಯರು ಜೌಹರ್ ಗೆ ಆಹುತಿಯಾಗಿ ಹೋದರು!

ಜೌಹರ್ ಹಾಗೂ ಜಿಹಾದ್!!

ದುರಂತವೆಂದರೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳೆಂದರೆ ನಿಮಗಾಶ್ಚರ್ಯವಾಗಬಹುದು! ಆದರೆ, ಅದು ಸತ್ಯ! ಜಿಹಾದ್ ನಿಂದ ತಪ್ಪಿಸಿಕೊಳ್ಳಬೇಕಾದರೆ ರಜಪೂತ ಮಹಿಳೆಯರು ಜೌಹರ್ ನನ್ನು ಸ್ವೀಕರಿಸಬೇಕಾಗಿತ್ತು! ಅದೇ ಜೌಹರ್ ಗೆ ಒಪ್ಪಲಿಲ್ಲವೆಂದರೆ ಕಾಮುಕ ಮೊಘಲರ ಜಿಹಾದ್ ಗೊಳಪಡಬೇಕಿತ್ತು! ಒಂದು ಕ್ಷಣ ಯೋಚಿಸಿ! ಇಡೀ ದೇಹ ಬೆಂಕಿಯಲ್ಲಿ ಸಜೀವ ದಹನವಾಗುತ್ತದೆ! ಅದಿಲ್ಲವೆಂದರೆ, ಪರಪುರುಷನ ಲೈಂಗಿಕ ಶೋಷಣೆ! ಬದುಕಿನುದ್ದಕ್ಕೂ!

ಬಾಬರ್, ಹುಮಾಯುನ್, ಅಕ್ಬರ್, ಜಹಾಂಗೀರ್, ಷಾ ಜಹಾನ್; ಇವರೆಲ್ಲರನ್ನೂ ಕೂಡ ನಮ್ಮ ಭಾರತೀಯರು ಶ್ರೇಷ್ಟ ಮೊಘಲ ದೊರೆಯೆಂದು ಆರಾಧಿಸುತ್ತಿದ್ದಾರಲ್ಲವಾ,?! ಇವರ ಬದುಕಿನ ಪೂರ್ತಿ ತುಂಬಿದ್ದು ಹಿಂದೂಗಳ ಅತ್ಯಾಚಾರ, ಕೊಲೆ, ಸುಲಿಗೆಯಷ್ಟೇ!!! ಬಿಡಿ! ಇಂತಹವರನ್ನು ಸಜೀವ ದಹನಕ್ಕಿಂತ ಸಜೀವವಾಗಿಯೇ ಮೈ ಚರ್ಮವನ್ನು ಕಿತ್ತು ತುಂಡು ತುಂಡಾಗಿಸಿದರೂ ಸಹ ಕಡಿಮೆಯೇ!

ಸಿಖ್ಖರ ಮೇಲಿನ ದೌರ್ಜನ್ಯವೊಂದು . . .

ಕೆಲ ಯುರೋಪಿಯನ್ನರು ಯಾವತ್ತಿಗೂ ಭಾರತದ ಸೇನೆ ಯುದ್ಧದಲ್ಲಿ ಸೋಲುವುದೇ ಇಲ್ಲವೆನ್ನುತ್ತಾರೆ! ಯಾಕೆ ಗೊತ್ತಾ?! ಸೇನೆಯೊಳಗಿರುವ ಸಿಖ್ಖರ ತಾಕತ್ತು ಭಾರತವನ್ನಿನ್ನೂ ಕಾಪಾಡುತ್ತಲೇ ಇದೆ! ಆದರೆ, ಮೊಘಲರಿಂದಾದ ದಬ್ಬಾಳಿಕೆ ಮಾತ್ರ ಓಹ್! ಇಡೀ ಸಿಖ್ ಪಂಗಡ ಅವತ್ತು ಸತ್ತು ಬದುಕಿತ್ತು!

ಗುರು ಅರ್ಜನ್ ನ ಹಿಂದುತ್ವದ ಸಿದ್ಧಾಂತಕ್ಕೆ ಅದೆಷ್ಟೋ ಜನ ಶರಣು ಹೋಗುತ್ತಿದ್ದ ಕಾಲವದು! ಅದೆಷ್ಟೋ ವೀರರನ್ನು ಸೃಷ್ಟಿಸಿದ ಖ್ಯಾತಿ ಸಿಖ್ಖರಿಗಿದೆ! ಯಾವಾಗ ಗುರು ಅರ್ಜನ್ ನ ಹಿಂದುತ್ವವೊಂದು ಪಸರಿಸತೊಡಗಿತೋ, ಮೊಘಲ್ ದೊರೆ ಜಹಾಂಗೀರ್ ಸಲೀಸಾಗಿ ಇಸ್ಲಾಂ ಗೆ ಮತಾಂತವಾಗೆಂದುಬಿಟ್ಟ! ಪ್ರಾಣ ಹೋದರೂ ಧರ್ಮ ಬಿಡೆನೆಂದ ಗುರು ಅರ್ಜನ್ ನನ್ನು ಸಜೀವವಾಗಿ ಗರಗಸದಿಂದ ದೇಹವನ್ನು ಸೀಳಿ ಕೊಲ್ಲಲಾಯಿತು! ಇದು, ಪರಮಶ್ರೇಷ್ಟ ಮೊಘಲರ ಸಹಿಷ್ಣುತೆ!!

ಯಾವಾಗ ಅಕ್ಬರ್ ಗದ್ದುಗೆಗೇರಿದನೋ, ತನ್ನ ಹಿಂದಿನ ಮೊಘಲ ರಾಜರಿಗಿಂತಲೂ ಹೆಚ್ಚು ಕ್ರೂರನಾಗಬೇಕೆಂದು ಬಯಸುವ ಪ್ರತಿ ಮೊಘಲನ
ಹೊರತಾಗಿಲ್ಲದ ಅಕ್ಬರ್ ನ ಕ್ರೂರತೆಯೊಂದು ನೂರಾರು ವರುಷಗಳವರೆಗೆ ಇಡೀ ಭಾರತವನ್ನು ಅಂಧಕಾರದಲ್ಲಿ ಮುಳುಗಿಸಿಬಿಟ್ಟಿತ್ತು! ಆತನ ಮಗನಾದ ಔರಂಗಜೇಬ್ ನ ಕ್ರೂರತೆ ಸಿಖ್ಖರ ಗುರುವಾಗಿದ್ದ ತೇಗ ಬಹಾದೂರರನ್ನು ಸಾರ್ವಜನಿಕವಾಗಿ ತಲೆ ಕತ್ತರಿಸಿ ಬಿಸಾಡಿದರೂ ತೃಪ್ತಿಯಾಗಲಿಲ್ಲ! ಗುರು ಗೋವಿಂದರ ಅವಳಿ ಮಕ್ಕಳಾದ 8 ವರ್ಷದ ಮುದ್ದು ಕಂದಮ್ಮಗಳನ್ನು ಜೀವಂತವಾಗಿ ಗೋಡೆಗೆ ಮೆತ್ತಿಸಿ, ಮೂರ್ಛೆ ಹೋದ ನಂತರ ಅದೇ ಜಾಗದಲ್ಲಿ ತಲೆ ಕತ್ತರಿಸಿ ಕೊಂದ! ಅಯ್ಯೋ! ಅಂತಹ ಕ್ರೂರ ಮೊಘಲ ದೊರೆಗಳು ಭಾರತದ ಇತಿಹಾಸದಲ್ಲಿ ಆರಾಧಿಸಲ್ಪಟ್ಟರು! ಆದರೆ, ಧರ್ಮಕ್ಕೋಸ್ಕರ ಪ್ರಾಣವನ್ನೇ ಅರ್ಪಿಸಿದವರೆಲ್ಲರೂ ನಿಂದಿಸಲ್ಪಟ್ಟರು! ಛೇ!

ತೀರಾ ಆಳಕ್ಕಿಳಿದು ಸಿಖ್ಖರ ಹತ್ಯಾಕಾಂಡದ ಬಗ್ಗೆ ಅಧ್ಯಯನ ಮಾಡಿದರೆ ನಿಮಗೆ ತಿಳಿಯಬಹುದು! ಬಾಬಾ ಬಂದಾ ಸಿಂಗ್ ಬಹಾದ್ದೂರ್ ನ ಕಣ್ಣೆದುರಿಗೆ ಆತನ ಮಗನ ಹೃದಯವನ್ನು ಕಬ್ಬಿಣದ ಸಲಾಕೆಯಿಂದ ಹೊರತೆಗೆದಿದ್ದರು! ಸ್ವತಃ ತಂದೆಯ ಬಾಯಿಗೇ ಮಗನ ಹೃದಯವನ್ನು ತುರುಕಲಾಗಿತ್ತು!

ಇಷ್ಟೇ ಅಲ್ಲ! ಮೊಘಲರು ಮಂದಿರಗಳನ್ನೆಲ್ಲ ನಾಶ ಪಡಿಸಿ ಅವಶೇಷಗಳಲ್ಲಿ ಮಸೀದಿಯನ್ನು ನಿರ್ಮಿಸಿದರಲ್ಲ, ಅಂತಹದ್ದರಲ್ಲಿ ಈ ತಾಜ್ ಕೂಡ ಒಂದು! ಶಿವನ ತೇಜೋ ಮಹಾಲಯವಾಗಿದ್ದ ಅದ್ಭುತವೊಂದು ತದನಂತರ ಅದಾವುದೋ ಹುಚ್ಚು ಶಹಜಾನನ ನಾಟಕೀಯ ಪ್ರೇಮದ ಕುರುಹಾಗಿ ನಿಂತಿತು! ದುರಂತ! ಮೊಘಲ ಸಾಮ್ರಾಜ್ಯದ ಅಸ್ತಿತ್ವವೇ ಇಲ್ಲದಿದ್ದರೂ ಇನ್ನೂ ಅದು ತಾಜ್ ಮಹಲ್ ಆಗಿಯೇ ಉಳಿದುಕೊಂಡಿದೆ!

ಅಯೋಧ್ಯಾದ ರಾಮ ಮಂದಿರ, ಲಾಹೋರಿನ ಶ್ರೀ ಬಾಓಲಿ ಸಾಹಿಬ್ ಮಂದಿರ,. ಹೀಗದೆಷ್ಟೋ ಹಿಂದೂ ಶ್ರದ್ಧಾ ಕೇಂದ್ರಗಳು ಮಸೀದಿಯಾಗಿ ಹೋಗಿದೆ!

ಇಷ್ಟೆಲ್ಲಾ ಮೊಘಲ ದೊರೆಗಳಡಿಯಲ್ಲಿ ಭಾರತ ಅಕ್ಷರಶಃ ನಲುಗಿದ್ದರೂ ಸಹ ಮತ್ತೆ ಮತ್ತೆ ಅವರನ್ನು ಪರಮಶ್ರೇಷ್ಟರೆಂದು ಗೌರವಿಸುವುದೇ ಆದರೆ, ಅಂತಹವರ ಮೈಯ್ಯಲ್ಲಿ ರಕ್ತವೇ ಇಲ್ಲ ಅಷ್ಟೇ! ಮತ್ತೆ ಮತ್ತೆ ಭಾರತಕ್ಕೆ ಅನ್ಯಾಯ ಮಾಡುತ್ತಲೇ ಬರುವ ನಾವುಗಳೆಲ್ಲ ಅದೇ ಮೊಘಲ ಸಾಮ್ರಾಜ್ಯದ ಕ್ರೂರತೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವಷ್ಟೇ!

ಈಗ ಹೇಳಿ! ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾದ ಯೋಗಿ ಆದಿತ್ಯನಾಥ್ ತಾಜ್ ಮಹಲ್ ನ ಬಗ್ಗೆ ತೆಗೆದುಕೊಂಡ ನಿರ್ಧಾರ ತಪ್ಪೇ?!

– ತಪಸ್ವಿ

Tags

Related Articles

Close