ಅಂಕಣಪ್ರಚಲಿತ

ರಾಜ್ಯಸಭೆಯ ಸಂಸದನೊಬ್ಬ ಪಾಕಿಸ್ತಾನಿ ಪ್ರಜೆ, ಸಿಮಿ ಭಯೋತ್ಪಾದನಾ ಗುಂಪಿನ ಸದಸ್ಯ!! ಹಾಗಾದರೆ ಈತನನ್ನು ಸಂಸದನ್ನಾಗಿ ಮಾಡಿದ್ದಾದರೂ ಯಾರು ಗೊತ್ತೇ??

ನಮ್ಮ ಸೈನಿಕರು, ದೇಶದ ಗಡಿಯಲ್ಲಿ ಭಯೋತ್ಪಾದಕರ ವಿರುದ್ದ ಹೋರಾಡಿ, ಅವರ ಅಟ್ಟಹಾಸವನ್ನು ನಿರ್ನಾಮ ಮಾಡುತ್ತಾ ದೇಶಕ್ಕಾಗಿ ಪ್ರತಿದಿನ ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಿರುವಾಗ, ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಿಗನೇ ಭಾರತದ ಸಂಸತ್ತಿನಲ್ಲಿ ಕುಳಿತುಕೊಂಡಿದ್ದಾರೆ ಎಂದರೆ ಅದುವೇ ಪರಮಾಶ್ಚರ್ಯದ ಸಂಗತಿ!
ಈ ಲೇಖನದ ಶಿರೋನಾಮೆಯು ಒಂದುಕ್ಷಣ ಎಲ್ಲರನ್ನೂ ಕೂಡ ದಂಗಾಗುವಂತೆ ಮಾಡುತ್ತೆ!! ಆದರೆ ಅದು ನಿಜ…. ಯಾಕೆಂದರೆ, ಮಮತಾ ಬ್ಯಾನರ್ಜಿ ಬಂಗಾಳದ ರಾಜಕೀಯ ಗದ್ದುಗೆಯಲ್ಲಿ ತನ್ನದೇ ಆದ ರಾಜಕೀಯ ದರ್ಬಾರ್ ನಡೆಸುತ್ತಿದ್ದಾರಲ್ಲದೇ ತೀವ್ರ ಕೋಮುವಾದಿ ರಾಜಕೀಯವನ್ನು ಆಡುತ್ತಿರುವಾಗ ಈ ಸುದ್ದಿ ಮಾತ್ರ ಎಲ್ಲೂ ಕೂಡ ಧ್ವನಿ ಎತ್ತಲಿಲ್ಲ!!
ಹೌದು……..ವಲಸಿಗರಾಗಿರುವ ಅಹ್ಮದ್ ಹಸನ್, ಅಕಾ ಇಮ್ರಾನ್, ಟಿಎಂಸಿಯ ಉದಾರತೆಯ, ಸೌಜನ್ಯತೆಯ ಗುಣನಡತೆಯಿಂದಾಗಿ ಮಮತಾ ಬ್ಯಾನರ್ಜಿಯವರ ನೆಚ್ಚಿನ ರಾಜ್ಯಸಭೆ ಸದಸ್ಯರಾಗಿದ್ದಾರೆ. ಬಾಂಗ್ಲಾದೇಶದ ಉಗಮದ ನಂತರ ಇವರು 1970-71ರಿಂದ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಂತಹ ಪಾಕಿಸ್ತಾನದ ನಾಗರಿಕರಾಗಿದ್ದಾರೆ.
ಚುನಾವಣಾ ಆಯೋಗದ ಮುಂಚಿತವಾಗಿ ಇವರ ಪ್ರಮಾಣಪತ್ರದಲ್ಲಿ, 60 ವರ್ಷ ವಯಸ್ಸಿನವರಾಗಿದ್ದಾರೆಂದಲ್ಲದೇ, 1972 ರಲ್ಲಿ ಹೈಯರ್ ಸೆಕಂಡರಿ ಪರೀಕ್ಷೆಯಲ್ಲಿ(ಪಿಯುಸಿ) ತೇರ್ಗಡೆಯಾಗಿದ್ದಾರೆ ಎಂದು ಹೇಳಲಾಗಿದೆ!! ಆದರೆ ತಮ್ಮ ಪೌರತ್ವ, ಸ್ಥಳ ಮತ್ತು ಹುಟ್ಟಿದ ದಿನಾಂಕದ ಬಗ್ಗೆ ಯಾವುದೇ ರೀತಿಯ ಮಾಹಿತಿಯು ಉಲ್ಲೇಖವಾಗಿಲ್ಲ ಎನ್ನುವುದು ದೊಡ್ಡ ವಿಪರ್ಯಾಸ.
ಗುಪ್ತಚರ ಸಂಸ್ಥೆ ಏನು ಹೇಳುತ್ತೆ ಗೊತ್ತೇ??
ಭಾರತ ಮತ್ತು ಬಾಂಗ್ಲಾದೇಶದ ಗುಪ್ತಚರ ಸಂಸ್ಥೆಗಳ ಪ್ರಕಾರ, ಹಸನ್ ಪೂರ್ವ ಪಾಕಿಸ್ತಾನದ ಸಿಲ್ಹಟ್‍ನ ಶ್ರೀಹಟ್ಟಾ ಗ್ರಾಮದಲ್ಲಿ ಜನಿಸಿದ ಇವರು ಅಸ್ಸಾಂ ಗಡಿಯ ಮುಖಾಂತರ ಭಾರತಕ್ಕೆ ಬಂದಿದ್ದು, ಮೊದಲಿಗೆ ಅಸ್ಸಾಂನ ಧುಬ್ರಿನಲ್ಲಿ ನೆಲೆಸಿದ್ದರು. ಅಷ್ಟೇ ಅಲ್ಲದೇ ಈ ಸ್ಥಳವು ಬಹಳ ಪ್ರಬಲವಾದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ತದನಂತರ ಅವರು ಉತ್ತರ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಬನಾರತ್ ಗೆ ಸ್ಥಳಾಂತರಗೊಂಡರು.
ಇವರ ತಂದೆ, ‘ರಝಕರ್’ರಾಗಿದ್ದು, ಬೃಹತ್ ಸಂಖ್ಯೆಯ ಬಂಗಾಳಿ ಬುದ್ಧಿಜೀವಿಗಳನ್ನು ಕೊಲ್ಲುವ ಜವಾಬ್ದಾರಿಯನ್ನು ಹೊಂದಿದ್ದನಲ್ಲದೇ, ಗುಪ್ತಚರ ವರದಿಗಳು ಉಲ್ಲೇಖಿಸಲ್ಪಟ್ಟಂತೆ, ಲಿಬರೇಷನ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಸೈನ್ಯಕ್ಕೆ ನೆರವಾಗಿರುವ ವ್ಯಕ್ತಿ ಎಂದು ಹೇಳಿದ್ದಾರೆ!!
ಅಸ್ಸಾಂನ ಪೆÇಲೀಸ್ ಸ್ಟೇಟ್, ಸ್ಪೆಷಲ್ ಬ್ರಾಂಚ್ ನ ವರದಿಯ ಪ್ರಕಾರ, “ಬಾಂಗ್ಲಾದೇಶದ ಉಗಮದ ಮುಂಚಿತವಾಗಿಯೇ ಅಸ್ಸಾಂನೊಳಗೆ ನುಸುಳಿದ್ದ ಹಸನ್ ಒಬ್ಬ ಪೂರ್ವ ಪಾಕಿಸ್ತಾನಿಯಾಗಿದ್ದಾರೆ!! ಹಸನ್ ಅಷ್ಟೇ ಅಲ್ಲದೇ ಈತನ ತಂದೆ ಕೂಡ ಒಳನುಸುಳಿದ್ದು, ಪಶ್ಚಿಮ ಬಂಗಾಳದ ಚಹಾ ಉದ್ಯಾನದಲ್ಲಿ ಉದ್ಯೋಗವನ್ನು ಪಡೆದ್ದ ಈತನ ತಂದೆ ಅಲ್ಲಿನ ಗಡಿಯುದ್ದಕ್ಕೂ ಬಂದಿದ್ದ ಬಾಂಗ್ಲಾದೇಶದ ಸ್ವಾತಂತ್ರ ಹೋರಾಟಗಾರರಿಂದ ಕೊಲ್ಲಲ್ಪಟ್ಟನು!! ಆದರೆ ಈತ ಪಶ್ಚಿಮ ಬಂಗಾಳದಿಂದ ಅಸ್ಸಾಂಗೆ ಭೇಟಿ ನೀಡಿರುವ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದು, ಈತ ಪಾಕಿಸ್ತಾನದ ಐ.ಎಸ್.ಐ ಸಮೀಪವಿರುವ ಅನೇಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದನು ” ಎಂದು ಹೇಳಲಾಗಿದೆ.
ಇಷ್ಟು ಮಾತ್ರವಲ್ಲದೇ, ಇನ್ನೊಂದು ವರದಿಯ ಪ್ರಕಾರ, “80ರ ದಶಕದಲ್ಲಿ ಐ.ಎಸ್.ಐ ಮೇಜರ್ ಸಿಲ್ಹಟ್ ನಲ್ಲಿನ ಮೌಲಾವಿ ಬಜಾರ್ ನಡೆಸುತ್ತಿದ್ದ ಶಿಬಿರಗಳನ್ನು ಈತ ಭೇಟಿ ಮಾಡುತ್ತಿದ್ದನಲ್ಲದೇ, ಅಸ್ಸಾಂನಲ್ಲಿದ್ದಾಗ ಈ ಎಲ್ಲಾ ವಿಚಾರಗಳನ್ನು ಕಾಪಾಡಿಕೊಂಡು ಬಂದಿದ್ದ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿದ್ದ ಸಿಪಿಎಂ ಅನ್ನು ಸೇರುವವರೆಗೂ ತಾನು ಎಡಪಂಥೀಯನೆಂದು ಹೇಳಿಕೊಂಡಿದ್ದಾನೆ. ಆದರೆ, ಅಸ್ಸಾಂನಲ್ಲಿ ಇವರ ಕಾರ್ಯಸೂಚಿ ಸ್ಪಷ್ಟವಾಗಿದ್ದರಿಂದ ಭಾರತ ವಿರೋಧಿ ಪಡೆಗಳನ್ನು ಭಾರತದಲ್ಲಿಯೇ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದ”. 
“ನಾನು 1977 ರಿಂದ 1984 ರವರೆಗೆ ಸಿಮಿ ಸದಸ್ಯರಾಗಿದ್ದೆ”. ಇದು ಹಸನ್ ನ ಸ್ವಂತ ಮಾತಾಗಿದೆ!! ಏಪ್ರಿಲ್ 24, 1977 ರಂದು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ದೊಡ್ಡ ಸಮಾವೇಶದಲ್ಲಿ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಉಗಮವಾಯಿತು ಎಂದು ಹೇಳಿದ್ದಾನೆ. ಆ ಸಂದರ್ಭದಲ್ಲಿ ಹಸನ್ ಪಶ್ಚಿಮ ಬಂಗಾಳದ ಅಧ್ಯಕ್ಷರಾಗಿ ಚುನಾಯಿತನಾಗಿದ್ದ. ಆದರೆ ಉಗ್ರಗಾಮಿ ಸಂಘಟನೆಯಾಗಿರುವುದರಿಂದ ಕಾಲಕ್ರಮೇಣ ಸಿಮಿ ಸಂಸ್ಥೆಯನ್ನು ಕೇಂದ್ರವು ನಿಷೇಧಿಸಿದೆ.
ಮಮತಾ ಬ್ಯಾನರ್ಜಿಯವರಲ್ಲಿ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು, ಈ ಬಗ್ಗೆ ಅನೇಕ ಇತಿಹಾಸವನ್ನು ಹೊಂದಿರುವವರನ್ನು ತನ್ನ ಪಕ್ಷದ ಉನ್ನತ ನಾಯಕತ್ವ ಸ್ಥಾನಕ್ಕೆ ನೇಮಿಸಿರುವುದಾದರೂ ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಲೇಬೇಕಾಗಿದೆ!! ಪಶ್ಚಿಮ ಬಂಗಾಳ ಜಿಹಾದಿ ಮಾನಸಿಕತೆ ಹೊಂದಿರುವ ಮಮತಾ ಬ್ಯಾನರ್ಜಿಯ ಕೈಯಲ್ಲಿ ನಲುಗಿ ಅಕ್ಷರಶಃ ಬಾಂಗ್ಲಾದೇಶವಾಗಿ ಮಾರ್ಪಡುತ್ತಿದೆ!! ಮಮತಾ ಬ್ಯಾನರ್ಜಿಯವರ ಸ್ವಾರ್ಥ, ಮತಬ್ಯಾಂಕ್ ರಾಜಕೀಯ ಮತ್ತು ಮೊಂಡುತನದಿಂದಾಗಿ ಪಶ್ಚಿಮ ಬಂಗಾಳ ಇಸ್ಲಾಮೀ ಉಗ್ರರ ಕಾರಸ್ಥಾನವಾಗಿ ಬದಲಾಗುತ್ತಿರುವುದು ಮಾತ್ರ ಅಕ್ಷರಶಃ ನಿಜ.
-ಅಲೋಖಾ
Tags

Related Articles

Close