ಪ್ರಚಲಿತ

ಶ್ರೀರಾಮನ ಅಸ್ತಿತ್ವಕ್ಕೆ ದಾಖಲೆಯೇ ಇಲ್ಲ ಎನ್ನುವ ದ್ವಾರಕನಾಥ್ ಅವರೇ ಈ ದಾಖಲೆಗಳಿಗೆ ಏನು ಕಥೆ ಕಟ್ಟುತ್ತೀರಿ?

ಶ್ರೀರಾಮ ದೇವರೇ ಅಲ್ಲ!!

ಹಿಂದೂಗಳ ಆರಾಧ್ಯ ದೈವನಾಗಿರುವ ಶ್ರೀರಾಮನ ಬಗ್ಗೆ ವಿವಾದತ್ಮಾಕ ಹೇಳಿಕೆಗಳನ್ನು ನೀಡಿದರೆ ರಾತ್ರಿ ಬೆಳಗಾಗುವುದರೊಳಗೆ ಹೆಸರು ಮಾಡಲು ಕ್ಯೂ
ನಿಂತಿರುವಂತೆ ಕಾಣುತ್ತೆ!! ಯಾಕೆಂದರೆ ಈಗಾಗಲೇ “ಶ್ರೀರಾಮ ದೇವರೇ ಅಲ್ಲ ಬಹುಧರ್ಮೀಯರು ಶ್ರೀರಾಮನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಅವನು ದೇವರಲ್ಲ, ಎಲ್ಲರಂತೆ ಮನುಷ್ಯ. ಅವನು ಪರಸ್ತ್ರೀಯರ ಸಂಬಂಧ ಇಟ್ಟುಕೊಂಡಿದ್ದ”ಎಂದಿರುವ ಕೆ ಎಸ್ ಭಗವಾನ್ ಸಾಲಿಗೆ ಇದೀಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ಸೇರಿದ್ದಾರೆ.

ಹೌದು… ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ. ಅದೊಂದು ಅಪ್ಪಟ ಸುಳ್ಳು ಎಂದು ಹೇಳಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ!! ಅಷ್ಟೇ ಅಲ್ಲದೇ, ನಾಲಗೆ ಹರಿಬಿಟ್ಟಿದ್ದ ದ್ವಾರಕನಾಥ್, ಇತಿಹಾಸದಲ್ಲಿ ಶ್ರೀರಾಮ ಹುಟ್ಟಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ರಾಮನ ಕುರಿತು ಸರಿಯಾದ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.

ಭಗವದ್ಗೀತೆಯನ್ನು ಸುಟ್ಟು ಬಿಡುತ್ತೇನೆ ಎಂದಿದ್ದ ಪೆÇ್ರ. ಕೆ ಎಸ್ ಭಗವಾನ್, ಶ್ರೀರಾಮ ದೇವರೇ ಅಲ್ಲ ಬಹುಧರ್ಮೀಯರು ಶ್ರೀರಾಮನನ್ನು ದೇವರೆಂದು
ಪೂಜಿಸುತ್ತಾರೆ. ಆದರೆ ಅವನು ದೇವರಲ್ಲ, ಎಲ್ಲರಂತೆ ಮನುಷ್ಯ. ಅವನು ಪರಸ್ತ್ರೀಯರ ಸಂಬಂಧ ಇಟ್ಟುಕೊಂಡಿದ್ದ. ಅಷ್ಟೇ ಅಲ್ಲದೇ ಶ್ರೀರಾಮ ಮದ್ಯ ಸೇವಿಸುತ್ತಿದ್ದ ಶ್ರೀರಾಮ, ಸೀತೆ ಜೊತೆಗೂಡಿ ಮದ್ಯ ಸೇವಿಸುತ್ತಿದ್ದ. ಮದ್ಯ ಸೇವಿಸಿ ಪರಸ್ತ್ರೀಯರೊಂದಿಗೆ ಮೋಜು ಮಾಡುತ್ತಿದ್ದ ಎಂದು ವಾಲ್ಮೀಕಿಯೇ ಹೇಳಿದ್ದಾರೆ. ಹಾಗಿದ್ದಾಗ ಶ್ರೀರಾಮಚಂದ್ರ ‘ಮರ್ಯಾದಾ ಪುರುಷೋತ್ತಮ’ ಆಗಲು ಹೇಗೆ ಸಾಧ್ಯ ಎನ್ನುವ ಮೂಲಕ ವಿವಾದತ್ಮಾಕ ಹೇಳಿಕೆ ನೀಡಿ ಫೇಮಸ್ ಆಗಿದ್ದರು ಭಗವಾನ್!!

ಆದರೆ ಇದೀಗ ಶ್ರೀರಾಮಚಂದ್ರನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ. ಅದೊಂದು ಅಪ್ಪಟ ಸುಳ್ಳು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಿಎಸ್ ದ್ವಾರಕನಾಥ್, ನಮ್ಮ ತಾತನ ಹೆಸರು ಹೇಳಿ ಎಂದರೆ ಹೇಳಬಹುದು. ಅವರ ಅಪ್ಪನ ಹೆಸರು ಹೇಳಿ ಅಂದರೆ ಆಗುತ್ತಾ. ಆದರೆ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಹೇಳಿದ್ದಾರೆ ಈ ಅಸಾಮಿ!!

ಅಷ್ಟೇ ಅಲ್ಲದೇ, ನಮಗೆ ಜ್ಞಾನ ಬಂದ ನಂತರ ದಾಖಲಾತಿಗಳ ಪ್ರಕಾರ ನಾನು ಜಗತ್ತಿನಲ್ಲಿ ಮೂರು ವ್ಯಕ್ತಿಗಳನ್ನು ಗುರುತಿಸಬಹುದು. ಮೊದಲನೆಯದ್ದಾಗಿ ಬುದ್ದ. ಇವರು ಸುಮಾರು 2600 ವರ್ಷಗಳ ಹಿಂದೆ ಇದ್ದರು ಎಂಬುದಕ್ಕೆ ದಾಖಲಾತಿಗಳಿವೆ. ಎರಡನೆಯದಾಗಿ ಜೀಸಸ್. ಇವರು ಸುಮಾರು 1600 ವರ್ಷಗಳ ಹಿಂದೆ ಇದ್ದರು, ಇದಕ್ಕೂ ಪುರಾವೆಗಳಿವೆ. ಇನ್ನು ಮೂರನೆಯದಾಗಿ ಪೈಗಂಬರ್. ಇವರು ಸುಮಾರು 600 ವರ್ಷಗಳ ಹಿಂದೆ ಇದ್ದರು ಎಂಬುವುದಕ್ಕೆ ದಾಖಲಾತಿಗಳಿವೆ. ಇವುಗಳನ್ನು ಹೊರತುಪಡಿಸಿದರೆ ಇನ್ನು ಯಾವ ದಾಖಲಾತಿಗಳೂ ವಿಜ್ಞಾನದ ಕಣ್ಣಿಗೆ ಸಿಗುತ್ತಿಲ್ಲ. ಹಿಂದಿನಿಂದಲೂ ಸುಳ್ಳು ಹೇಳಿಕೊಂಡೇ ಸತ್ಯಾವನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಾಗಾದರೆ ಸಿಎಸ್ ದ್ವಾರಕನಾಥ್ ಹಿಂದೂ ಧರ್ಮದ ವಾತಾವರಣದಲ್ಲಿ ಬೆಳೆದಿದ್ದು ನಿಜವೇ ಎನ್ನುವ ಪ್ರಶ್ನೆಯೂ ಕಾಡುತ್ತೆ!! ಯಾಕೆಂದರೆ ರಾಮಾಯಣ ನಡೆದಿದ್ದು ನಿಜ ಎನ್ನುವುದು ಹಲವಾರು ದಾಖಲೆಗಳ ಮೂಲಕ ರುಜುವಾತಾಗಿದೆ!! ಈ ಹಿಂದೆ ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಬೊಗಳೆ ಬಿಟ್ಟಿದ್ದರು ಈ ಬುದ್ದಿಜೀವಿಗಳು. ಆದರೆ ಇದರ ಬಗ್ಗೆ ನಡೆಸಿದ ಉತ್ಖನನದಿಂದಾಗಿ ಇದೊಂದು ಕಾಲ್ಪನಿಕ ವಿಚಾರವಲ್ಲ. ರಾಮ ಸೇತುವೆ ಅನ್ನೋದು ಇದೆ ಎನ್ನುವ ಮೂಲಕ ಬೊಗಳೆ ಬಿಟ್ಟಿದ್ದ ಪ್ರಗತಿಪರ ಚಿಂತಕರ ಬಾಯಿ ಮುಚ್ಚಿಸಲಾಗಿತ್ತು! ಹಾಗೆಯೇ ಅದೆಷ್ಟೋ ಉತ್ಖನನದ ಮೂಲಕ ರಾಮಾಯಣ ಮಹಾಭಾರತ ನಡೆದಿದ್ದು ನಿಜ ಎನ್ನುವುದು ದೃಢಪಟ್ಟಿದೆ!! ಹೀಗಿರಬೇಕಾದರೆ ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ ಎಂದು ಹೇಳುತ್ತಿರುವುದನ್ನು ನೋಡಿದರೆ ಇವರಿಗೆ ಏನೆನ್ನಬೇಕೋ ಎನ್ನುವುದೇ ಗೊತ್ತಾಗುತ್ತಿಲ್ಲ!!

ಅನುಮತಿ ನೀಡಿದರೆ ಭಗವದ್ಗೀತೆಯನ್ನು ಸುಟ್ಟು ಹಾಕುತ್ತೇನೆಂದು ಹೇಳಿರುವ ಪೆÇ್ರ. ಭಗವಾನ್ ಸಾಲಿಗೆ ಸೇರಿರುವ ಮತ್ತೊಬ್ಬ ಲೇಖಕ ಯೋಗೀಶ್ ಮಾಸ್ಟರ್, ಢುಂಡಿ ಕಾದಂಬರಿಯಲ್ಲಿ ಹಿಂದೂ ದೇವರಾದ ಗಣಪತಿ, ಶಿವ, ಪಾರ್ವತಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದರು!! ಇನ್ನು ಈ ಬಾರಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ನೀಡಿರುವ ಹೇಳಿಕೆ ನೋಡಿದರೆ ಕಾಂಗ್ರೆಸ್ ಸರಕಾರ ಬೀಳುವ ಮುನ್ನ ಯಾವುದಾದರು ಪ್ರಶಸ್ತಿ ಪಡೆಯುವ ಅಂದಾಜಲ್ಲಿದ್ದರೋ ಹೇಗೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!

ಹಿಂದೂ ದೇವಾನುದೇವತೆಗಳನ್ನು ಮನಬಂದಂತೆ ಟೀಕಿಸಿದರೆ ಬಹುಬೇಗನೆ ಫೇಮಸ್ ಆಗಲು ಸಾಧ್ಯ ಎನ್ನುವುದನ್ನು ಕೆಲ ವಿಚಾರವಾದಿಗಳು ಕಂಡುಕೊಂಡಿರುವ ಸತ್ಯವಾಗಿರುವುದಂತೂ ನಿಜ ಎಂದೆನಿಸುತ್ತೆ!! ಅಷ್ಟೇ ಅಲ್ಲದೇ, ಇಂತಹ ವಿಚಾರವಾದಿಗಳಿಗೆ ಇತರ ಕೋಮಿನಲ್ಲಿನ ನಂಬಿಕೆಯನ್ನು ಪ್ರಶ್ನಿಸುವ ತಾಕತ್ತಿಲ್ಲವೇ ಎನ್ನುವುದು ಇಲ್ಲಿಯ ಪ್ರಶ್ನೆಯಲ್ಲದಿದ್ದರೂ, ಬಹುಸಂಖ್ಯಾತ ಹಿಂದೂ ಧರ್ಮೀಯರ ಧಾರ್ಮಿಕ ನಂಬಿಕೆಗಳನ್ನು ಟೀಕಿಸುವ ಹಕ್ಕನ್ನು ಇಂತಹ ವಿಚಾರವಾದಿಗಳಿಗೆ ನೀಡಿದವರು ಯಾರು ಎನ್ನುವುದೇ ಪ್ರಶ್ನೆಯಾಗಿದೆ.

ಹಿಂದೂ ಪೂಜಾಪದ್ದತಿ, ದೇವರು, ಗ್ರಂಥಗಳ ಬಗ್ಗೆ ಎಲುಬಿಲ್ಲದ ನಾಲಿಗೆಯ ಇವರ ಹೇಳಿಕೆಗಳಿಗೆ, ಟೀಕೆ ಪ್ರತಿಭಟನೆ ವ್ಯಕ್ತವಾದರೂ ಮತ್ತೆ ಮತ್ತೆ ಬಹುಧರ್ಮೀಯರ ಮನಸ್ಸು ನೋಯಿಸುವ, ತಾಳ್ಮೆ ಪರೀಕ್ಷಿಸುವ ಹೇಳಿಕೆಗಳಿಗೆ ಕೊನೆಯೇ ಇಲ್ವೇ?? ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಏನು ಮಾಡಬೇಕು ನೀವೇ ಹೇಳಿ…..

ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ0ಬಲರ್ಹವಾದ ದಾಖಲೆ ಇಲ್ಲಿದೆ.

ಭಾರತೀಯ ಕ0ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್‍ವೇರ್ ಅನ್ನು ಯು.ಎಸ್. ನಿ0ದ ಪಡೆದುಕೊ0ಡರು. ಇದನ್ನು ಸೂರ್ಯಗ್ರಹಣ, ಚ0ದ್ರಗ್ರಹಣ ಹಾಗೂ ಭೂಮಿಯಿ0ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ0ಬ0ಧಿಸಿದ0ತೆ ನೀಡಲಾಗಿ, ಅದರಿ0ದ ಮಹತ್ತರವಾದ ಹಾಗೂ ಉತ್ತಮ ಫಲಿತಾ0ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ0ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ0ಗ್ಲ ವಾರ್ಷಿಕ ದಿನಾ0ಕದ0ತೆ ಪಡೆದರು.

ಮಹರ್ಷಿ ವಾಲ್ಮೀಕಿಗಳು ರಾಮಾಯಣದ ಬಾಲಕಾ0ಡ ಸರ್ಗ 19 ಮತ್ತು 8 ಮತ್ತು 9 ನೇ (1/18/8,9) ರಲ್ಲಿ ತಿಳಿಸಿದ0ತೆ ಶ್ರೀ ರಾಮನ ಜನ ವಾದದ್ದು ಚೈತ್ರ ಶುಧ್ಢ ನವಮಿಯ ದಿನ0ದು. ಆ ದಿನದ ಗ್ರಹಗತಿ ಹೀಗಿದೆ:

ದಿನ:ಚೈತ್ರ ಶುದ್ಧ 9

ಸಮಯ: ದಿನ- ಹಗಲು

ರವಿ:  ಮೇಷ ರಾಶಿಯಲ್ಲೂ

ಶನಿ:  ತುಲಾ ರಾಶಿಯಲ್ಲೂ

ಗುರು: ಕರ್ಕಾಟಕ ರಾಶಿಯಲ್ಲೂ

ಶುಕ್ರ : ಮೀನ ರಾಶಿಯಲ್ಲೂ

ಮ0ಗಳ:ಮಕರದಲ್ಲಿಯೂ

ಚ0ದ್ರ: ಪುನರ್ವಸು ನಕ್ಷತ್ರದಲ್ಲಿಯೂ

ರಾಹು: ಧನುಸ್ಸು
ಕೇತು: ಮಿಥುನ

ಲಗ್ನ: ಕರ್ಕಾಟಕ ಲಗ್ನವಾಗಿದ್ದು, ಲಗ್ನಾಧಿಪತಿಯು ಪೂರ್ವದಲ್ಲಿ ಏಳ್ಗತಿಯನ್ನು ಹೊ0ದುತ್ತಿದ್ದ ಕಾಲ.

ಈ ಎಲ್ಲಾ ಅ0ಕಿ ಅ0ಶಗಳನ್ನೂ ಆ ಸಾಫ್ಟ್‍ವೇರ್‍ನಲ್ಲಿ ಹಾಕಲಾಯ್ತು. ಅದು ಆ ದಿನವನ್ನು ಕ್ರಿ.ಪೂ. 5114, ಜನವರಿ 10 ಎ0ದು ತೋರಿಸಿತು. ಶ್ರೀ ರಾಮನ ಜನನ ಜನವರಿ 10. ಕ್ರಿ.ಪೂ. 5114 ರಲ್ಲಿ ಆಯಿತು ಎ0ದಾಯಿತಲ್ಲವೇ? ಅ0ದರೆ ಇದು 7121 ವರುಷಗಳ ಹಿ0ದೆ. ಭಾರತೀಯ ಪ0ಚಾ0ಗದ ಪ್ರಕಾರ ಚೈತ್ರ ಶುಧ್ಧ ನವಮಿಯ ದಿನದ ಅಪರಾಹ್ನ 12 ರಿ0ದ 1 ಗ0ಟೆಗೆ ನಮ್ಮ ರಾಷ್ಟ್ರದಾದ್ಯ0ತ ಶ್ರೀರಾಮ ನವಮಿಯನ್ನು ಆಚರಿಸುತ್ತೇವಲ್ಲವೇ?

ಶ್ರೀ ರಾಮ ಜನಿಸಿದ್ದು ಅಯೋಧ್ಯೆ ಯಲ್ಲಿ ಎ0ದು ಬಹುತೇಕ ಎಲ್ಲಾ ರಾಮಾಯಣಗಳೂ ವಾಲ್ಮೀಕಿ ರಾಮಾಯಣ, ತುಳಸೀ ರಾಮಾಯಣ, ಕಾಳಿದಾಸನ ರಘುವ0ಶ, ಮತ್ತು ಅನೇಕ ಬೌಧ್ಧ ಮತ್ತು ಜೈನ ಬರಹಗಳು ತಿಳಿಸುತ್ತವೆ. ಈ ಎಲ್ಲಾ ರಚನೆಗಳೂ ಅಯೋಧ್ಯೆಯ ಇತಿಹಾಸದ ಬಗ್ಗೆ ಅ0ದರೆ ಅದರ ಭೌಗೋಳಿಕ ಅಸ್ತಿತ್ವ, ಶ್ರೀಮ0ತ ಶಿಲ್ಪಕಲೆ, ಅಯೋಧ್ಯೆಯ ಸೌ0ದರ್ಯತೆಯ ಬಗ್ಗೆ ಭಾರೀ ವಿವರವಾಗಿ ವರ್ಣಿಸಿವೆ. ಅಯೋಧ್ಯೆ ಅನೇಕ ಸು0ದರವಾದ ಅರಮನೆಗಳು ಹಾಗೂ ದೇವಾಲಯಗಳನ್ನು ಹೊ0ದಿತ್ತೆ0ದು ತಿಳಿಸುತ್ತವೆ. ಅಯೋಧ್ಯಾ ನಗರಿಯು ಸರಯೂ ನದಿಯ ದಡದಲ್ಲಿದ್ದು, ಒ0ದು ಪಾರ್ಶ್ವದಲ್ಲಿ ಗ0ಗ ಮತ್ತು ಪಾ0ಚಾಲ ದೇಶಗಳನ್ನು ಮತ್ತೊ0ದು ಪಾರ್ಶ್ವದಲ್ಲಿ ಮಿಥಿಲಾ ನಗರಿಯನ್ನು ಸರಹದ್ದಾಗಿ ಪಡೆದಿತ್ತು. ಸಾಮಾನ್ಯವಾಗಿ 7000 ವರುಷಗಳು ಒ0ದು ದೀರ್ಘಾವಧಿಯಾಗಿದ್ದು, ಹವಾಮಾನ್ಯ ವೈಪರೀತ್ಯಗಳು (ಭೂಕ0ಪ,ಬಿರುಗಾಳಿ, ಪ್ರವಾಹ, ಇತ್ಯಾದಿ) ಮತ್ತು ವಿದೇಶೀ ಆಕ್ರಮಣಗಳು ನದೀ ಮಾರ್ಗವನ್ನು ಬದಲಿಸಿದವು, ಪಟ್ಟಣಗಳನ್ನು ಮತ್ತು ಕಟ್ಟಡಗಳನ್ನು ನಾಶಮಾಡಿದವು ಅಲ್ಲದೆ ಭೌಗೋಳಿಕ ಸರಹದ್ದು ಯಾ ವಿಸ್ತೀರ್ಣಗಳನ್ನು ನಾಶಪಡಿಸಿದವು. ಈಗಿನ ಅಯೋಧ್ಯೆಯು ವಿಸ್ತೀರ್ಣದಲ್ಲಿ ಚಿಕ್ಕದಾಯಿತು ಹಾಗೂ ನದಿಗಳು ಉತ್ತರ ಹಾಗೂ ದಕ್ಷಿಣದಲ್ಲಿ ಸುಮಾರು 40 ಕಿ.ಮೀ. ವರೆಗೆ ತಮ್ಮ ಮಾರ್ಗವನ್ನು ಬದಲಿಸಿದವು.

ತನ್ನ 13 ನೇ ವಯಸ್ಸಿನಲ್ಲಿ ( ವಾಲ್ಮೀಕಿ ರಾಮಾಯಣದ0ತೆ) ತಪೆÇೀವನ ( ಸಿಧ್ಧಾಶ್ರಮ) ದಲ್ಲಿ ನೆಲೆಸಿದ್ದ ಮಹಷಿ9 ವಿಶ್ವಾಮಿತ್ರರೊ0ದಿಗೆ ಅಯೋಧ್ಯೆಯನ್ನು ತ್ಯಜಿಸಿ, ಜನಕ ನಗರಿಯಾದ ಮಿಥಿಲೆಗೆ ತೆರಳಿದರು. ಜನಕನ ಆಸ್ಥಾನದಲ್ಲಿ ಶಿವ ಧನುಸ್ಸನ್ನು ಮುರಿದ ಶ್ರೀ ರಾಮ ಸೀತೆಯನ್ನು ಕೈಹಿಡಿದ. ಸ0ಶೋಧನೆಗಳು ವಾಲ್ಮೀಕಿ ಮಹರ್ಷಿ ತಿಳಿಸಿದ ಶ್ರೀರಾಮನು ಸ0ದರ್ಶಿಸಿದ್ದ ಸ್ಥಳಗಳ ಮೂಲಕ ಆರ0ಭವಾದವು ಮತ್ತು ವಾಲ್ಮೀಕಿ ತಿಳಿಸಿದ್ದನೆನ್ನಲಾದ ಹಾಗೂ ಶ್ರೀರಾಮನ ಜೀವನದ ಮಹತ್ತರ ಘಟನೆಗಳಿಗೆ ಸ0ಬ0ಧಿಸಿದ0ತೆ ಸುಮಾರು 23 ಸ್ಥಳಗಳನ್ನು ಪತ್ತೆಹಚ್ಚಲಾಯ್ತು. ಆ ಸ್ಥಳಗಳು ಶ್ರು0ಗಿ ಆಶ್ರಮ, ರಾಮ್ ಘಾಟ್, ತಾಟಕವನ, ಸಿಧ್ಧಾಶ್ರಮ, ಗೌತಮಾಶ್ರಮ, ಜನಕಪುರಿ ( ಪ್ರಸ್ತುತ ನೇಪಾಲದಲ್ಲಿದೆ) ಸೀತಾ ಕು0ಡ ಇತ್ಯಾದಿಗಳಾಗಿದ್ದು, ಆ ಸ್ಥಳಗಳಲ್ಲಿ ಆ ರಾಮಾಯಣದ ಮಹಾಶಯರಿಗೆ ಸ0ಬ0ಧಿಸಿದ ಅನೇಕ ಕಟ್ಟಡ ದಾಖಲೆಗಳನ್ನು ವೀಕ್ಷಿಸ ಬಹುದಾಗಿದೆ.

ವನವಾಸಾರ0ಭದ ಬಗ್ಗೆ: ವಾಲ್ಮೀಕಿ ಮಹರ್ಷಿಯು ರಾಮಾಯಣದ ಅಯೋಧ್ಯಾ ಕಾ0ಡ (2/4/18) ದಲ್ಲಿ ದಶರಥನು ಶ್ರೀ ರಾಮನಿಗೆ ಪಟ್ಟವನ್ನು ಕಟ್ಟಲು ಏಕೆ ತರಾತುರಿಯನ್ನು ಮಾಡಿದನೆ0ದರೆ ಆಗ ಅವನ ಗ್ರಹಗತಿ ಹೀಗಿತ್ತು: ದಶರಥನು ರೇವತಿ ನಕ್ಷತ್ರದಲ್ಲಿ ಜನಿತನಾಗಿದ್ದು, ಆಗ ರೇವತಿ ನಕ್ಷತ್ರವು ರವಿ, ಮ0ಗಳ ಹಾಗೂ ರಾಹು ಗಳಿ0ದ ಸುತ್ತುವರಿಯಲ್ಪಟ್ಟಿದ್ದು, ಸಾಮಾನ್ಯವಾಗಿ ಆ ಗ್ರಹಗತಿಯಲ್ಲಿ ರಾಜನು ಮರಣ ಹೊ0ದಬೇಕು ಇಲ್ಲವೇ ಅನೇಕ ಗೊ0ದಲಗಳಿಗೆ ಬಲಿಪಶುವಾಗಬೇಕು. ಈ ಗ್ರಹಗತಿಯು ಆ0ಗ್ಲ ವಾರ್ಷಿಕ ದಿನಾ0ಕದ0ತೆ ಜನವರಿ 5 ,5089 ಕ್ರಿ.ಪೂ. ರ0ದು ಸ0ಭವಿಸಿದ್ದು, ಅದೇ ದಿನವೇ ಶ್ರೀ ರಾಮ ಅಯೋಧ್ಯೆಯನ್ನು ತ್ಯಜಿಸಿ, ತನ್ನ ವನವಾಸಾರ0ಭ ಮಾಡಿದ್ದು. ಹೀಗೆ ಶ್ರೀರಾಮನು ವನವಾಸಕ್ಕೆ ತೆರಳಿದ್ದು ತನ್ನ 25 ನೇ ವಯಸ್ಸಿನಲ್ಲಿ. (5114-5089)

ತನ್ನ ವನವಾಸದ 13 ನೇ ವರ್ಷದ ಅ0ತ್ಯ ಭಾಗದಲ್ಲಿ ಶ್ರೀರಾಮನು ಖರದೂಷಣರೊ0ದಿಗೆ ಯುಧ್ಧ ಮಾಡಿದ್ದು ಆ ದಿನ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣವಿತ್ತೆ0ದೂ ವಾಲ್ಮೀಕಿ ರಾಮಾಯಣದಲ್ಲಿ ಬರೆಯುತ್ತಾನೆ. ಈ ಅ0ಕಿಅ0ಶಗಳನ್ನು ಹೊಡೆದ ಕೂಡಲೇ ಸಾಫ್ಟ್ ವೇರ್ ದಿನಾ0ಕ್ ಅಕ್ಟೋಬರ್ 7, ಕ್ರಿ.ಪೂ. 5077ನೇ ಇಸವಿಯ0ದು ಸೂರ್ಯಗ್ರಹಣವಿತ್ತೆ0ದೂ, ಅದನ್ನು ಪ0ಚವಟಿಯಿ0ದ ವೀಕ್ಷಿಸಬಹುದಾಗಿತ್ತೆ0ದೂ ತಿಳಿಸಿತು. ವಾಲ್ಮೀಕಿ ಹೇಳಿದ ಗ್ರಹಗತಿಗಳೂ ನಿಖರವಾಗಿದ್ದವು. ಮ0ಗಳನು ಮಧ್ಯಭಾಗದಲ್ಲಿದ್ದನೆ0ದೂ, ಒ0ದು ಬದಿಯಲ್ಲಿ ವೀನಸ್ ಮತ್ತು ಬುಧರಿದ್ದರು, ಮತ್ತೊ0ದು ಬದಿಯಲ್ಲಿ ರವಿ ಮತ್ತು ಶನಿ ಯೂ ಇದ್ದರು. ವಾಲ್ಮೀಕಿಯು ಸೂಚಿಸಿದ ಗ್ರಹಗತಿಯೂ ಸಾಫ್ಟ್ ವೇರ್ ತಿಳಿಸಿದ ಗ್ರಹಗತಿಗಳೂ ತಾಳೆಯಾಗಿದ್ದವು. ಮು0ದಿನ ಅಧ್ಯಾಯಗಳಲ್ಲಿ ತಿಳಿಸಿದ ಗ್ರಹಗತಿಗಳ0ತೆ, ರಾವಣನು ಡಿಸೆ0ಬರ್ 4, 5075 ಕ್ರಿ.ಪೂ ದ0ದು ವಧಿಸಲ್ಪಟ್ಟನು ಮತ್ತು ಕ್ರಿ.ಪೂ 5075 ಡಿಸೆ0ಬರ್ ಆರರ0ದು ಶ್ರೀರಾಮ ತನ್ನ ವನವಾಸವನ್ನು ಅ0ತ್ಯ ಗೊಳಿಸಿದನು. ಆ ದಿನವೂ ಸಹ ಚೈತ್ರ ಶುಧ್ಧ ನವಮಿಯೇ ಆಗಿತ್ತು. ತನ್ನ ವನವಾಸವನ್ನು ಅ0ತ್ಯಗೊಳಿಸಿ ಅಯೋಧ್ಯೆಗೆ ಹಿ0ತಿರುಗಿದಾಗ ಶ್ರೀ ರಾಮನ ವಯಸ್ಸು 39.(5114-5075)

ಭಟ್ನಾಗರ್ ರವರ ಸಹೋದ್ಯೋಗಿಯಾಗಿದ್ದ ಡಾ|| ರಾಮ್ ಅವತಾರ್, ಮಹರ್ಷಿ ವಾಲ್ಮೀಕಿಯು ಬರೆದ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಸ0ದರ್ಶಿಸಿದ್ದ ಅಯೋಧ್ಯೆಯಿ0ದ ಆರ0ಭಿಸಿ ರಾಮೇಶ್ವರದ ವರೆಗಿನ ಸ್ಥಳಗಳ ಸ0ಶೋಧನೆಯತ್ತ ತಮ್ಮ ಗಮನವನ್ನು ಕೇ0ದ್ರೀಕರಿಸಿದರು.ಅವರು ಆ ಸಾಲಿನಲ್ಲಿ ಸುಮಾರು 195 ಸ್ಥಳಗಳನ್ನು ಕ0ಡುಹಿಡಿದರು. ಹಾಗೂ ಆ ಸ್ಥಳಗಳಲ್ಲಿ ರಾಮಾಯಣದ ಕಾಲದಲ್ಲಿ ಕಟ್ಟಿದ್ದರೆನ್ನಲಾದ ಶ್ರೀರಾಮ-ಸೀತೆಯರ ಜೀವನಕ್ಕೆ ಸ0ಬ0ಧಿಸಿದ ಕಟ್ಟಡಗಳನ್ನು ಗುರುತಿಸಿದರು. ಈ ಸ0ಶೋಧನೆಯು ತಮಸಾತಲ್( ಮ0ದಾಹ್),ಶ್ರು0ಗೇರ್ವರ್ ರ್ಪುರ್( ಸಿ0ಗರೌರ್),ಋಷಿ ಭಾರಧ್ವಾಜರ ಆಶ್ರಮ( ಅಲಹಾಬಾದ್ ನಗರಿಯ ಹತ್ತಿರ)ಋಷಿ ಅತ್ರಿಗಳ ಆಶ್ರಮ,ಮಾರ್ಕಾ0ಡೇಯರ ಆಶ್ರಮ( ಮಾರ್ಕು0ಡಿ),ಚಿತ್ರಕೂಟ,ಪರ್ಣಕುಟಿ( ಗೋದಾವರೀ ನದಿಯ ತೀರದಲ್ಲಿ),ಪ0ಚವಟಿ, ಸೀತಾ ಸರೋವರ,ರಾಮ್ ಕು0ಡ್( ನಾಸಿಕದ ಹತ್ತಿರ ತ್ರಯ0ಬಕೇಶ್ವರದಲ್ಲಿ),ಶಬರೀ ಆಶ್ರಮ,ಕಿಷ್ಕಿ0ಧೆ( ಈಗಿನ ಅಣ್ಣಗೊರೈ ಗ್ರಾಮ), ಧನುಷ್ಕೋಟಿ ಮತ್ತು ರಾಮೇಶ್ವರ ದೇವಸ್ಥಾನಗಳನ್ನು ಒಳಗೊ0ಡಿತ್ತು.

ವಾಲ್ಮೀಕಿಯು ಶ್ರೀರಾಮನು ರಾಮೇಶ್ವರ ಮತ್ತು ಶ್ರೀಲ0ಕೆಗೆ ಸ0ಪರ್ಕ ಕಲ್ಪಿಸಲೋಸುಗ ವಾನರರ ಒಡಗೂಡಿ ಒ0ದು ಸೇತುವೆಯನ್ನು ನಿರ್ಮಿಸಿದ ಬಗ್ಗೆ ಹೇಳಿದ್ದಾನಷ್ಟೇ. ಇತ್ತೀಚೆಗೆ ನಾಸಾ ರಾಮೇಶ್ವರ0 ಮತ್ತು ಶ್ರೀಲ0ಕಾದ ನಡುವಿನ ಪಾಕ್ ಸ0ಧಿಯಲ್ಲಿ ಕೂಡಿಕೊ0ಡಿರುವ ಮನುಷ್ಯ ನಿರ್ಮಿತ ಸೇತುವೆಯ ಚಿತ್ರವನ್ನು ತೆಗೆಯಿತು.ಇತ್ತಿಚೆಗೆ ಶ್ರೀಲ0ಕಾ ಸರಕಾರವು ಸೀತಾವನವನ್ನು ಪ್ರವಾಸೋದ್ಯಮ ತಾಣವನ್ನಾಗಿ ಉನ್ನತಿಗೊಳಿಸಿದೆ. ಲ0ಕನ್ನರು ರಾವಣನು ಸೀತೆಯನ್ನು ಬ0ಧಿಸಿಟ್ಟಿದ್ದ ತಾಣವಾದ ಅದನ್ನು ಅಶೋಕವನವೆ0ದು ಕರೆಯುತ್ತಾರೆ. ( ಇದು ನಡೆದಿದ್ದು ಕ್ರಿ.ಪೂ.5076ನೇ ಇಸವಿಯಲ್ಲಿ)

ಭಾರತೀಯ ಇತಿಹಾಸವು ಶ್ರೀರಾಮನು ಸೂರ್ಯವ0ಶದವನಾಗಿದ್ದು,ಆ ವ0ಶದ 64 ನೇ ರಾಜನೆ0ದೂ ದಾಖಲಿಸಿದೆ. 80 ವರುಷಗಳ ಹಿ0ದೆ ಶ್ರೀ ರಾಯ್ ಬಹಾದ್ದೂರ್ ಸೀತಾರಾಮ್ ರವರು ಬರೆದ ತಮ್ಮ “ ಅಯೋಧ್ಯಾ ಕಾ ಇತಿಹಾಸ್ “ ಎ0ಬ ಗ್ರ0ಥದಲ್ಲಿ ಆ ವ0ಶದ 63 ರಾಜರ ನಾಮಧೇಯಗಳನ್ನು ಹಾಗೂ ಅವರಿಗೆ ಸ0ಬ0ಧಿಸಿದ ವಿವರಗಳನ್ನು ವರ್ಣಿಸಿದ್ದಾರೆ. ಲೂಸಿಯಾನಾ ವಿಶ್ವವಿದ್ಯಾಲಯದ ಪೆÇ್ರ|| ಸುಭಾಷ್ ಕಾಕ್ ಸಹ ತಮ್ಮ ಗ್ರ0ಥವಾದ “ ದಿ ಅಶ್ಟ್ರೋನೋಮಿಕಲ್ ಕೋಡ್ ಆಫ್ ಋಗ್ವೇದ “ ದಲ್ಲಿಯೂ ಶ್ರೀ ರಾಮನ 63 ಪೂರ್ವಜರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ದಶರಥ ಮಹಾರಾಜ, ಅಜ, ರಘು, ದಿಲೀಪ ಮು0ತಾದವರನ್ನು ಶ್ರೀರಾಮನ ಪೂರ್ವಜರೆ0ದು ತಿಳಿಯಲಾಗಿದೆ. ಕಾಶ್ಮೀರದಿ0ದ ಕನ್ಯಾಕುಮಾರಿಯವರೆಗೂ ಹಾಗೂ ಬ0ಗಾಲದಿ0ದ ಗುಜರಾತ್ ವರೆಗೂ ಅದರಲ್ಲೂ ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮು0ತಾದ ಪ್ರದೇಶಗಳಲ್ಲಿನ ಬುಡಕಟ್ಟು ಜನರು ಶ್ರೀ ರಾಮನ ಅಸ್ತಿತ್ವವನ್ನು ನಿಖರವಾಗಿ ನ0ಬುತ್ತಾರೆ. ಅವರುಗಳು ಆಚರಿಸುವ ಬಹುತೇಕ ಹಬ್ಬ/ಹರಿದಿನಗಳು ಶ್ರೀರಾಮ ಮತ್ತು ಶ್ರೀ ಶ್ಯಾಮರ ಜೀವನಕ್ಕೆ ಸ0ಬ0ಧಿಸಿದ ಘಟನೆಗಳ ಕುರಿತೇ ಆಗಿರುತ್ತದೆ.

ಶ್ರೀರಾಮನು ಮಹಮದ್ ಪೈಗ0ಬರ್ ಮತ್ತು ಏಸುಕ್ರಿಸ್ತರು ಜನಿಸುವುದಕ್ಕಿ0ತ ಮು0ಚೆಯೇ ಹಾಗೂ ಇಸ್ಲಾ0 ಮತ್ತು ಕ್ರೈಸ್ತ ಮತಗಳು ಈ ಭೂಮಿಗೆ ಪರಿಚಯವಾಗುವುದಕ್ಕಿ0ತ ಮೊದಲಿನ ಕಾಲಕ್ಕೆ ಸೇರಿದವನು. ಹಾಗಾಗಿ ಶ್ರೀ ರಾಮನು ಭಾರತದ ಜಾತಿ-ಮತಗಳ-ವರ್ಣಗಳ ಭೇಧವಿಲ್ಲದೆ ಎಲ್ಲರಿಗೂ ಸೇರಿದವನು.

ಶ್ರೀ ರಾಮರಾಜ್ಯದ ಕಾಲದಲ್ಲಿ ಜನನದಿ0ದಲೇ ಮಾನವನಿಗೆ ಹೊ0ದಿಕೊ0ಡು ಬರುವ ಈ ದುಷ್ಟ ಜಾತಿ ಪಧ್ಧತಿಯ ಅಸ್ತಿತ್ವವಿರಲಿಲ್ಲ. ವಾಲ್ಮೀಕಿಯು ಕೆಳಸ್ತರದವನಾಗಿದ್ದರೂ ಸೀತಾಮಾತೆಯು ಅವನ ದತ್ತು ಪುತ್ರಿಯ0ತೆ ಅವನ ಆಶ್ರಮದಲ್ಲಿ ಶ್ರೀ ರಾಮನಿ0ದ ಪರಿತ್ಯಾಗಗೊಳ್ಳಲ್ಪಟ್ಟ ನ0ತರ ಅವನೊ0ದಿಗಿದ್ದಲೂ ಮತ್ತು ಅಲ್ಲಿಯೇ ಲವ-ಕುಶರನ್ನು ಹಡೆದಳು.ಅವನ ಶಿಷ್ಯರಾಗಿಯೇ ಲವ-ಕುಶರು ಬೆಳೆದರು. ಶಬರಿಯು “ ಭೀಲ್ “ ಎನ್ನುವ ಬುಡಕಟ್ಟಿಗೆ ಸೇರಿದವಳಾಗಿದ್ದಳು. ಶ್ರೀರಾಮನ ಸೈನ್ಯವು ಮಧ್ಯ ಹಾಗೂ ದಕ್ಷಿಣ ಭಾರತದ ಅನೇಕ ಬುಡಕಟ್ಟುಗಳ ವೀರರಿ0ದ ಕೂಡಿದ್ದ ಸೈನ್ಯವಾಗಿದ್ದರಿ0ದಲೇ ಶ್ರೀರಾಮನು ಭಾರತೀಯರ ಎಲ್ಲಾ ವರ್ಗದ ಜನರಿಗೂ ಆದರ್ಶಪ್ರಾಯನು.

ನಾವು ವಾಲ್ಮೀಕಿಯು ಈ ಭೂಮಿಯ ಮೊದಲನೇ ಖಗೋಳ ಶಾಸ್ತ್ರಜ್ಞನಾಗಿದ್ದನು ಹಾಗೂ ಅವನ ಖಗೋಳ ವಿದ್ಯೆಯ ಅಡಿಪಾಯದ ಮೇಲೇಯೇ ಈ ದಿನ ಆ ವಿದ್ಯೆ ಇಷ್ಟು ಮು0ದುವರಿದಿದೆ ಎ0ಬುದಕ್ಕೆ ಅತ್ಯ0ತ ಹೆಮ್ಮೆ ಪಡಬೇಕಲ್ಲವೇ? ಇತ್ತೀಚಿನ ನೂತನವಾದ ಖಗೋಳ ಶಾಸ್ತ್ರದ ಸಾಫ್ಟ್ ವೇರ್ ಗಳೂ ಆತನ ಖಗೋಳ ಶಾಸ್ತ್ರದ ಮಾಹಿತಿಗಳನ್ನು ಅತ್ಯ0ತ ನಿಖರ ಎ0ದು ಒಪ್ಪಿಕೊ0ಡಿವೆ.

ಮೊಹಮದ್ ಪೈಗ0ಬರ್ 1400 ವರುಷಗಳ ಹಿ0ದೆಯೂ, ಕ್ರಿಸ್ತನು 2000 ವರುಷಗಳ ಹಿ0ದೆಯೂ, ಗೌತಮ ಬುಧ್ಧನು 2600 ವರುಷಗಳ ಹಿ0ದೆಯೂ ಜನಿಸಿದವರು. ಶ್ರೀ ರಾಮನು 7000 ವರುಷಗಳ ಹಿ0ದೆಯೇ ಜನಿಸಿದವನು.ಆದ್ದರಿ0ದಲೇ ಶ್ರೀರಾಮನಿಗೆ ಸ0ಬ0ಧಿಸಿದ ಎಲ್ಲಾ ವಿಚಾರಗಳನ್ನೂ ಸ0ಶೋಧಿಸುವುದೆ0ದರೆ ಕಷ್ಟಸಾಧ್ಯವೇ ಸರಿ. ಏಕೆ0ದರೆ ಸುಮಾರು ದಾಖಲೆಗಳು ಹವಾಮಾನ ವೈಪ್ಯರೀತ್ಯಗಳಿ0ದಾಗಿ ನಾಶವಾಗಿವೆ.ಆದರೆ ದೊರೆತ ದಾಖಲೆಗಳು ನಮಗೆ ನಮ್ಮ ಸನಾತನ ಸ0ಸ್ಕ್ರುತಿಯ ಅರಿವಾಗಲು ಸಾಕು.

ಆಧಾರಗಳು

೧.hari-vrinda-dham.sulekha.com/blog/…/was-sri-ram–really-born

೨. Was Lord Rama really born? Or Valmiki, the the defacto CEO of NASA

೩. timesofindia.indiatimes.com/cms.dll/html/uncomp/articleshow?…

೪. http://www.slideshare.net/kalyan97/ramasetu – United States

೫. Was Lord Ram Really Born? | Gleez

೬.sawaal.ibibo.com/do-it…/was-lord–ram–really–born-216623.html

-ಅಲೋಖಾ

Tags

Related Articles

Close