ಅಂಕಣ

ರಾಹುಲ್ ಗಾಂಧಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪರ್ಯಾಯ ವ್ಯಕ್ತಿಯೇ?! ಹೀಗೊಂದು ಅದ್ಭುತ ಸಮೀಕ್ಷೆ!

ರಾಹುಲ್ ಗಾಂಧಿ ನಿಜವಾಗಿಯೂ ನರೇಂದ್ರ ಮೋದಿಗೆ ಪರ್ಯಾಯ ವ್ಯಕ್ತಿಯೇ? ಇಂಥದೊಂದು ಪ್ರಶ್ನೆ ಎಲ್ಲರನ್ನೂ ಸುಳಿದಾಡುತ್ತದೆ. ಕಾಂಗ್ರೆಸ್‍ನ ಉಪಾಧ್ಯಕ್ಷ
ನಿಜವಾಗಿಯೂ ನರೇಂದ್ರಮೋದಿಗೆ ಪರ್ಯಾಯ ಆಗಲು ಸಾಧ್ಯವೇ? ಉತ್ತರ ಪ್ರದೇಶದ ಅನಿರುದ್ಧ್ ಸಿಂಗ್ ಎನ್ನುವವರು `ಕ್ವೋರಾ ಡಾಟ್‍ಕಾಂ’ನಲ್ಲಿ ಈ ಪ್ರಶ್ನೆಗೆ
ಏನೂಂತ ಉತ್ತರಿಸಿದ್ದಾರೆ ಗೊತ್ತಾ? ತುಂಬಾ ಕುತೂಹಲಕಾರಿಯಾಗಿದೆ.

ರಾಹುಲ್ ಗಾಂಧಿ: ನರೇಂದ್ರ ಮೋದಿ: ಉದಯ ಛೋಪ್ರಾ: ಅಮಿರ್ ಖಾನ್
ರಾಹುಲ್ ಗಾಂಧಿ: ನರೇಂದ್ರ ಮೋದಿ: ಅನಂತ್ ಅಂಬಾನಿ: ಧೀರೂ ಭಾಯಿ ಅಂಬಾನಿ
ರಾಹುಲ್ ಗಾಂಧಿ: ನರೇಂದ್ರ ಮೋದಿ: ತೇಜಸ್ವಿ ಯಾದವ್: ನಿತೀಶ್ ಕುಮಾರ್

ಸಂಸತ್‍ನಲ್ಲಿ ರಾಹುಲ್ ಗಾಂಧಿ:

ಹಾಜರಾತಿ: ಪಿಆರ್‍ಎಸ್ ಲೆಜಿಸ್ಲೇಸಿವ್ ರೀಸರ್ಚ್ ಪ್ರಕಾರ 15ನೇ ಲೋಕಸಭೆಯಲ್ಲಿ ರಾಹುಲ್‍ನ ಒಟ್ಟು ಹಾಜರಾತಿ ಶೇ. 42.
ರಾಷ್ಟ್ರೀಯ ಸರಾಸರಿ ಶೇಕಡಾವಾರು ಹಾಜರಾತಿಯೇ ಶೇ.76 ಇರಬೇಕು.
ಉತ್ತರ ಪ್ರದೇಶದ ಸಂಸದರ ಸರಾಸರಿ ಹಾಜರಾತಿ ಶೇ. 80 ಇರಬೇಕು.

ಭಾಗವಹಿಸುವಿಕೆ:
ರಾಹುಲ್ ಇದುವರೆಗೆ ಕೇವಲ 2 ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇಡೀ 15ನೇ ಲೋಕಸಭೆಯಲ್ಲಿ ಅವರದ್ದು ಕೇವಲ ಎರಡೇ ಡಿಬೇಟ್!
ರಾಹುಲ್ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗಳ ಸಂಖ್ಯೆ `ಸೊನ್ನೆ’.
ಇದುವರೆಗೆ ಯಾವುದೇ ಪ್ರವೇಟ್ ಮೆಂಬರ್ ಬಿಲ್ಲನ್ನು ಅವರಿಂದ ತರಲಾಗಿಲ್ಲ…
ಮುಂಚಿನ ಸಂಸದರು ಕೇಳಿದ ಸರಾಸರಿ ಪ್ರಶ್ನೆಯೇ 297 ಆಗಿತ್ತು.

ಮಾಧ್ಯಮದ ಮುಂದೆ ರಾಹುಲ್ ಗಾಂಧಿ…

`ಜನರು ನಮ್ಮನ್ನು ಆನೆ ಎನ್ನುತ್ತಾರೆ. ಆದರೆ ನಾವು ನಿಜವಾಗಿ ನೋಡಿದರೆ ಆನೆ ಅಲ್ಲ. ಬದಲಿಗೆ ನಾವು ಜೇನುಗೂಡು. ಇದನ್ನು ಕೇಳಿದರೆ ಖಂಡಿತಾ ನಿಮಗೆ ತಮಾಷೆ ಎನಿಸಬಹುದು. ನಿಜವಾಗಿಯೂ ಶಕ್ತಿಶಾಲಿಯಾವುದು? ಆನೆಯೋ ಅಥವಾ ಜೇನುಗೂಡೋ?’
(ನನಗೆ ಇಲ್ಲಿ ಏನು ಹೇಳಿದ್ದಾರೆಂದೇ ಗೊತ್ತಾಗುವುದಿಲ್ಲ. ಈ ದೃಷ್ಟಾಂತ ತರ್ಕಬದ್ಧವೂ ಸಮಂಸವೂ ಕಾಣುತ್ತಿಲ್ಲ.)

`ಭಾರತ ಒಂದು ಕಂಪ್ಯೂಟರ್ ಇದ್ದಂತೆ ಅದರಲ್ಲಿ ಕಾಂಗ್ರೆಸ್ ಡಿಫಾಲ್ಟ್ ಪ್ರೋಗ್ರಾಂ’
(ಖಂಡಿತವಾಗಿಯೂ… ನೀವು ಕಂಪ್ಯೂಟರ್ ಸಿಸ್ಟಮ್ ಹಾಳು ಮಾಡುವ ಮಾಲ್ವೇರ್ ವೈರಸ್. ಯಾಕೆಂದರೆ ವೈರಸ್ ಯಾವತ್ತೂ ಸಾಯುವುದಿಲ್ಲ)

`21ನೇ ಶತಮಾನದಲ್ಲಿ ಮಾನವ ಸಂಪನ್ಮೂಲದಲ್ಲಿ ಭಾರತ ಸೌದಿ ಅರೆಬಿಯಾದಂತಾಗುತ್ತದೆ’
(ಹಾಗೆ ಆಗದಂತೆ ದೇಶವನ್ನು ರಕ್ಷಿಸಬೇಕಾಗಿದೆ)

`ರಾಜಕೀಯ ಎಲ್ಲಾ ಕಡೆಗಳಲ್ಲೂ ಇದೆ. ಇದು ನಿಮ್ಮ ಕಿಸೆಯಲ್ಲೂ ಇದೆ. ಪ್ಯಾಂಟ್‍ನಲ್ಲೂ ಇದೆ ಎಲ್ಲೆಲ್ಲೂ ಇದೆ.. ಕಾಂಗ್ರೆಸ್ ಒಂದು ತಮಾಷೆಯಿಂದ ಕೂಡಿದ ಪಕ್ಷ. ಇದು ಜಗತ್ತಿನ ಅತಿದೊಡ್ಡ ರಾಜಕೀಯ ಸಂಸ್ಥೆ. ಇದಕ್ಕೆಯಾವುದೇ ನಿಯಂತ್ರಣವಿಲ್ಲ. ನಾವು ಪ್ರತೀ ನಿಮಿಷ ನಿಮಿಷದಲ್ಲೂ ಹೊಸ ಹೊಸ ನಿಯಮಗಳನ್ನು ಮಾಡ್ತನೇ ಇರುತ್ತೇವೆ ನಂತರ ಡಂಪ್ ಮಾಡುತ್ತೇವೆ. ಆ ನಿಯಮಗಳೇನೆಂದು ಯಾರಿಗೂ ಗೊತ್ತಿಲ್ಲ…’
(ನಿಜವಾಗಿ ನೋಡಿದರೆ ಇದು ತಮಾಷೆಯೇ ಅಲ್ಲ. ಇದು ಅವರ ಸಂಸ್ಕøತಿ ಏನೆಂಬುವುದನ್ನು ತೋರಿಸುತ್ತದೆ. ಆತನ ಬಾಯಿಯಿಂದ ಬರುವ ಮಾತುಗಳನ್ನೇ
ನೋಡುವಾಗ ಆ ಪಕ್ಷ ಯಾವ ರೀತಿ ಇದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು)

`ಪಂಜಾಬ್‍ನ 10ರಲ್ಲಿ ಏಳು ಮಂದಿ ಯುವಕರು ಡ್ರಗ್ಸ್‍ಗೆ ಸಿಲುಕಿದ್ದಾರೆ…’ (ಅದರಲ್ಲಿ ಇವನೂ ಒಬ್ಬ?)

ಎಲ್ಲಾ ಸಾರ್ವಜನಿಕ ವ್ಯವಸ್ಥೆಗಳು – ಆಡಳಿತ, ನ್ಯಾಯ, ಶಿಕ್ಷಣ ಮತ್ತು ರಾಜಕೀಯ ಇವೆಲ್ಲವನ್ನೂ ಜನರ ಜ್ಞಾನವರ್ಧನೆಗೆ ರೂಪಿಸಲಾಗಿದೆ. ಇಂತಹಾ ಒಂದು
ವ್ಯವಸ್ಥೆಯು ಸುಧಾರಣೆಗೆ ಉತ್ತೇಜನ ನೀಡುತ್ತದೆ…’
(ಕಾಂಗ್ರೆಸ್ ಇದುವರೆಗೆ ದೇಶಕ್ಕೆ ಏನು ಮಾಡಿದೆ, ಏನು ಮಾಡಿಲ್ಲ ಎಂದು ಮೋದಿಯೇ ಹೇಳಬೇಕಿಲ್ಲ. ರಾಹುಲೇ ಎಲ್ಲವನ್ನೂ ಹೇಳುತ್ತಿದ್ದಾರೆ)

-ದಯವಿಟ್ಟು ಗೂಗಲ್ ತೆರೆದು ಅದರಲ್ಲಿ `ರಾಹುಲ್ ಗಾಂಧಿ ಫನ್ನಿ’ ಎಂದು ಬರೆಯಿರಿ. ಆಗ ಇಡೀ ಭಾರತ ರಾಹುಲ್ ಬಗ್ಗೆ ಏನು ಯೋಚಿಸುತ್ತದೆ ಎಂದು ಅದರಲ್ಲಿ
ಸಿಗುತ್ತದೆ.
-ರಾಹುಲ್ ಆತನ ಪಕ್ಷಕ್ಕೆ ಮಾತ್ರ ಅತ್ಯಮೂಲ್ಯ ವ್ಯಕ್ತಿ. ಆದರೆ ಭಾರತಕ್ಕೇನೂ ಅಲ್ಲ.
-ಅವರ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿ ಪ್ರಕಟಿಸುತ್ತವೆ. ಯಾಕೆಂದರೆ ಅವರ ಹೆಸರಲ್ಲಿ ಗಾಂಧಿ ಇದೆ. ಆದರೆ ಆತನ ಕೆಲಸ, ಕೌಶಲ್ಯ, ನಾಯಕತ್ವಗುಣದಿಂದ
ಅಲ್ಲ…
-ಆತನಿಗೆ ನಿಜವಾದ ಭಾರತ ಎಂದರೇನು, ನಿಜವಾದ ಭಾರತೀಯರೆಂದರೇನು ಎಂದು ಆತನಿಗೆ ಗೊತ್ತಿಲ್ಲ… ತನ್ನ ಜೀವನ ಹಾಗೂ ತನ್ನ ಕುಟುಂಬಕ್ಕಾಗಿ ಮಾತ್ರ
ಜನರ ಮುಂದೆ ಹೋಗುತ್ತಾನೆ. ಅಲ್ಲದೆ ರಾಷ್ಟ್ರದ ಬಗ್ಗೆ ಯಾವ ಮಹತ್ವಾಕಾಂಕ್ಷೆಯನ್ನೂ ಹೊಂದಿಲ್ಲ.
ಅವರ ರಾಜಕೀಯ ಉದ್ದೇಶ ಮೆಚ್ಚಿಗೆಯಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ.
ರಾಜಕೀಯದಲ್ಲಿ ಯಶಸ್ವಿಯಾಗಬೇಕಿತ್ತು…

ಆತ ದೇಶದ ಅತ್ಯಂತ ಹಳೆ ಪಕ್ಷದ ಉಪಾಧ್ಯಕ್ಷನಾಗಿರುವ ಕಾರಣ ಆತನಿಗೆ ಜ್ಞಾನ, ಕೌಶಲ್ಯ ಇರಬೇಕಿತ್ತು. ಆದರೆ ಅದ್ಯಾವುದೂ ಇಲ್ಲ. ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಯಾವುದೇ ಕೌಶಲ್ಯವಿಲ್ಲ. ಒಬ್ಬ ಪ್ರತಿನಿಧಿಯಾಗಿರುವ ವ್ಯಕ್ತಿ ಜನರ ಮುಂದೆ ಪ್ರಾಮಾಣಿಕವಾಗಿ ಮಾತಾಡುವುದಿಲ್ಲ…
ಯಾವುದೇ ದೊಡ್ಡ ದೊಡ್ಡ ಸಂದರ್ಶನದಲ್ಲಿ ಅವರು ನೀಡುವ ಉತ್ತರದಲ್ಲಿ ಸ್ಪಷ್ಟತೆ ಇರುವುದಿಲ್ಲ.

-ಸಂಸತ್‍ಗೆ ಹೋಗುವಾಗ ಚೀಟಿ ಹಿಡಿದುಕೊಂಡು ಹೋಗುತ್ತಾರೆ. ಈಗ ಅದಕ್ಕಾಗಿ ಮೊಬೈಲ್ ಬಳಸುತ್ತಾರೆ. ಅವರು ಇಡೀ ದೇಶದ ಸಮಯವನ್ನು, ಹಣವನ್ನು ಹಾಳು ಮಾಡುತ್ತಿದ್ದಾರೆ. ನನಗದು ಇಷ್ಟವಿಲ್ಲ.

ಈ ವ್ಯಕ್ತಿಯನ್ನು ನರೇಂದ್ರ ಮೋದಿಗೆ ಹೋಲಿಕೆ ಮಾಡುತ್ತೀರಾ? ಆ ರೀತಿ ಮಾಡಿದರೆ ನಿಮಗೆ ಖುಷಿಯಾಗುತ್ತದಾ? ನೀವು ನನ್ನನ್ನು ಭಕ್ತ ಎಂದು ಕರೆಯಬಹುದು.

ಅಷ್ಟಕ್ಕೂ ನೀವು ಆತನನ್ನು ನರೇಂದ್ರ ಮೋದಿಗೆ ಹೋಲಿಸಬೇಕು? ನಿಮಗೆ ರಾಹುಲ್ ಗಾಂಧಿಯನ್ನು ಜ್ಯೋತಿರಾದಿತ್ಯ ಸಿಂದ್ಯಾ, ಸಚಿನ ಪೈಲಟ್‍ಗೆ ಯಾಕೆ
ಹೋಲಿಸುವುದಿಲ್ಲ? ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂವರನ್ನೂ ಒಬ್ಬರಿಗೊಬ್ಬರು ಹೋಲಿಕೆ ಮಾಡಬಹುದಲ್ವಾ?

ಪ್ರತಿಯೊಂದೂ ವಿಷಯದಲ್ಲೂ ಸಿಂದ್ಯಾ, ಪೈಲಟ್ ಮತ್ತು ರಾಗಾ ಒಬ್ಬರಿಗೊಬ್ಬರು ಪರಸ್ಪರ ಹೋಲಿಕೆಯಾಗುತ್ತಾರೆ. ಈ ಬಗ್ಗೆ ನಾನು ಬೆಟ್ ಬೇಕಾದ್ರೂ ಕಟ್ಟಬಲ್ಲೆ.

ಮೋದಿಗೆ ಹಲವಾರು ಮಂದಿ ಪರ್ಯಾಯ ಇರಬಹುದು. ಆದರೆ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಪರ್ಯಾಯ ವ್ಯಕ್ತಿಯಾಗಿರಲು ಸಾಧ್ಯವೇ ಇಲ್ಲ. ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಪರ್ಯಾಯವನ್ನು ಹುಡುಕುತ್ತದೆ.

Source : https://www.quora.com/Is-Rahul-Gandhi-really-a-proper-alternative-to-Narendra- Modi/answer/Aniruddh-Singh?share=ca4b9f40&srid=LgDC#

-ಚೇಕಿತಾನ…

Tags

Related Articles

Close