ಪ್ರಚಲಿತ

ರೆಡ್ಡಿ ಮಗಳ ಮದುವೆಗೆ 500 ಕೋಟಿ ಖರ್ಚಾಗಿದೆ ಐಟಿ ರೈಡ್ ಮಾಡಿಸಿ ಎಂದು ಬೊಬ್ಬೆ ಹೊಡೆದವರು ಈ ಗೌಡರ ಮಗಳ ಅದ್ಧೂರಿ ಮದುವೆ ಬಗ್ಗೆ ಯಾಕೆ ಮಾತಾಡುತ್ತಿಲ್ಲ?

ನಲವತ್ತು ಸಾವಿರ ಬಡಮಕ್ಕಳ ಮದುವೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಿಸಿದ ಜನಾರ್ದನ ರೆಡ್ಡಿ ಅವರು ತನ್ನ ಮಗಳ ಮದುವೆಗೆ 500 ಕೋಟಿ ರೂ ಖರ್ಚು ಮಾಡಿದರೆಂದು ಸುಳ್ಳು ಪ್ರಚಾರ ಹಬ್ಬಿಸಿ ಐಟಿ ದಾಳಿ ನಡೆಸಬೇಕೆಂದು ಬೊಬ್ಬೆ ಹೊಡೆದವರ ಬಾಯಿಗೆ ಈಗ ಬೀಗ ಜಡಿಯಲಾಗಿದೆಯೇ? ಯಾಕೆ ಒಬ್ಬರೂ ಕೂಡಾ ಮಾತಾಡುತ್ತಿಲ್ಲ? ಯಾಕೆ ಯಾರೂ ಕೂಡಾ ಐಟಿ ದಾಳಿ ನಡೆಸಬೇಕೆಂದು ಮಾತಾಡುತ್ತಿಲ್ಲ? ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ ಖರ್ಚು ಮಾಡಿದ್ದು 31 ಕೋಟಿ.. ಆದರೆ ಈ ಪುಣ್ಯಾತ್ಮ ತನ್ನ ಮಗಳ ಮದುವೆಗೆ ಖರ್ಚು ಮಾಡಿದ ಹಣವೆಷ್ಟು? ಇಷ್ಟೊಂದು ಅದ್ಧೂರಿ ಮದುವೆಗೆ ಹಣ ಎಲ್ಲಿಂದ ಬಂತು ಎಂದು ಯಾಕೆ ಯಾರೂ ಕೂಡಾ ಪ್ರಶ್ನಿಸುತ್ತಿಲ್ಲ? ಯಾಕೆ ಸ್ವಾಮಿ ಈ ಇಬ್ಬಂತಿತನ?

ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಅವರ ಮಗಳ ಮದುವೆಯ ವಿಚಾರವನ್ನು ನೋಡಿದಾಗ ಈ ರೀತಿ ಅನಿಸುತ್ತದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಮೇಗೌಡರ ಪುತ್ರಿ ಭವ್ಯ ಮತ್ತು ರಾಜೀವ್ ಮದುವೆ ನಡೆಯಲಿದೆ. ಶಿವರಾಮೇಗೌಡರು ಈ ಮದುವೆಗೆ ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ.

ಆದರೆ ರಾಜವೈಭೋಗವನ್ನೂ ನಾಚಿಸುವಷ್ಟು ಕೋಟಿಗಟ್ಟಲೆ ಹಣ ವೆಚ್ಚದಲ್ಲಿ ನಡೆಯುವ ಮದುವೆಗೆ ಹಣ ಎಲ್ಲಿಂದ ಬಂತು ಸ್ವಾಮಿ? ತನ್ನದು ಬಡರೈತರ ಪಕ್ಷ ಎಂದು ಬೊಬ್ಬೆ ಹೊಡೆಯುವ ಪಕ್ಷದವರಿಂದಲೇ ಈ ಅದ್ಧೂರಿ ಮದುವೆ ನಡೆಯುತ್ತದೆ ಎಂದಾಗ ಅಷ್ಟೊಂದು ಹಣದ ಮೂಲದ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ?

ಅಬ್ಬಬ್ಬಾ ಈ ಮಹಾಪುರುಷ ಮದುವೆಗಾಗಿ ಬುಕ್ ಮಾಡಿದ ಬಸ್‍ಗಳೆಷ್ಟು ಗೊತ್ತೇ?

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಈ ಅದ್ಧೂರಿ ಮದುವೆಗೆ ರಾಜ್ಯದ ಮೂಲೆಮೂಲೆಗಳಿಂದ ಜನರು ಬರುವಂತೆ ಮಾಡಲು ಬರೋಬ್ಬರಿ 216 ಕೆಎಸ್‍ಆರಟಿಸಿ ಬಸ್‍ಗಳನ್ನು ಬುಕ್ ಮಾಡಲಾಗಿದೆ! ಇದು ಸರಕಾರಿ ಬಸ್‍ಗಳ ಲೆಕ್ಕವಾದರೆ ಖಾಸಗಿ ವಾಹನಗಳ ಲೆಕ್ಕಾ ಇನ್ನೂ ಬಹಿರಂಗಗೊಂಡಿಲ್ಲ.

ಇಷ್ಟೊಂದು ಜನರು ಮದುವೆಗೆ ಬಂದು ಹೋಗುತ್ತಾರೆಂದರೆ ಬರೇ ಊಟಕ್ಕಾಗಿಯೇ ಎಷ್ಟು ಕೋಟಿ ಹಣಗಳನ್ನು ಖರ್ಚು ಮಾಡಿರಬಹುದು? ಇನ್ನು ಮದುವೆಯ ವರೋಪಚಾರಕ್ಕಾಗಿ ಎಷ್ಟು ಕೋಟಿ ಹಣ ಖರ್ಚಾಗಿದೆ? ಯಾಕೆ ಯಾರೂ ಕೂಡಾ ಸೊಲ್ಲೆತ್ತುತ್ತಿಲ್ಲ? ಮಾಧ್ಯಮಗಳೆಲ್ಲಾ ಯಾಕೆ ವರದಿ ಮಾಡುತ್ತಿಲ್ಲ? ಈ ಮಾಧ್ಯಮಗಳಿಗಾದರೂ ಏನಾಗಿದೆ?

ಮಂಡ್ಯ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ಮದ್ದೂರು, ಚನ್ನರಾಯಪಟ್ಟಣ ಹಾಗೂ ತುರುವೆಕೆರೆ ಡಿಪೆÇೀಗಳಿಂದ ಬಸ್‍ಗಳು ಇಂದು ಮುಂಜಾನೆ ಸುಮಾರು 5 ಗಂಟೆಯಿಂದಲೇ ಬೆಂಗಳೂರಿನತ್ತ ಹೊರಟಿವೆ. ಇನ್ನು ಬಸ್‍ಗಳ ಜೊತೆ ನೂರಾರು ಕಾರುಗಳಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ನಾಗಮಂಗಲ ತಾಲೂಕಿನ ಹಳ್ಳಿಗಳಿಂದ ಮಗಳ ಮದುವೆಗೆ ಬರುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರಿಗೆಗಾಗಿ ಶಿವರಾಮೇಗೌಡರು ಎಷ್ಟು ಹಣ ಖರ್ಚು ಮಾಡಿರಬಹುದೆಂದು ಯೋಚಿಸಿದಾಗಲೂ ತಲೆ ಗಿರ್ ಎನ್ನುತ್ತದೆ.

ಸಾರ್ವಜನಿಕರಿಗಾಗುವ ತೊಂದರೆಗೆ ಯಾರು ಹೊಣೆ?

ಏಕಕಾಲಕ್ಕೆ ಸುಮಾರು 216 ಬಸ್ ನೀಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಸರಕಾರಿ ಬಸ್‍ಗಳನ್ನು ಖಾಸಗಿ ಬಳಕೆಗೆ ಅನುಮತಿ ನೀಡಿದ್ದು ಯಾಕೆ? ಸಾರ್ವಜನಿಕರು ಸಂಚಾರಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳನ್ನೇ ಬಳಕೆ ಮಾಡುವುದರಿಂದ ಇಂದು ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‍ಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಆದ್ದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಯಾರು ಹೊಣೆ? ಅಲ್ಲದೆ ಇಲಾಖೆಗೆ ಇದರಿಂದ ಉಂಟಾಗುವ ನಷ್ಟವನ್ನು ಭರಿಸುವವರ್ಯಾರು? ಸಾರ್ವಜನಿಕ ಹಿತವನ್ನು ಮರೆತು ಸರಕಾರಿ ಸೊತ್ತುಗಳನ್ನು ತನ್ನ ಖಾಸಗಿ ಬಳಕೆಗೆ ತೊಡಗಿದ ಶಿವರಾಮೇಗೌಡರನ್ನು ಯಾಕೆ ಯಾರೂ ಕೂಡಾ ಪ್ರಶ್ನಿಸುತ್ತಿಲ್ಲ?

ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಮಾಡಿಸಿದ್ದ ವಿಶೇಷ ಆಹ್ವಾನ ಪತ್ರಿಕೆ ಮಾದರಿಯಲ್ಲೇ ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಗೆ ವಿಡಿಯೋ ಹಾಡೊಂದನ್ನು ಮಾಡಿಸಿದ್ದಾರೆ. ಹಾಡು, ಡ್ಯಾನ್ಸ್, ಗೀತೆ ಸಂಯೋಜನೆಯೊಂದಿಗೆ ವಿಶೇಷ ಡಿಜಿಟಲೈಸ್ಡ್ ಚಿತ್ರೀಕರಣ ಮಾಡಲಾಗಿದೆ. ವಿಡಿಯೋದಲ್ಲಿ ಶಿವರಾಮೇಗೌಡರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದು, ಮದುವೆಗೆ ವಿಶೇಷ ಆಹ್ವಾನ ಕೋರಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದು ಜನಾರ್ದನ ರೆಡ್ಡಿ ಇದೇ ರೀತಿ ಮಾಡಿದಾಗ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತೆಂದು ಪ್ರಶ್ನಿಸಿದ್ದವರೆಲ್ಲಾ ಇಂದು ಮೌನವಾಗಿರುವುದನ್ನು ಕಂಡಾಗ ಅಚ್ಚರಿ ಎನಿಸುವುದಿಲ್ಲವೇ? ಜನಾರ್ದನ ರೆಡ್ಡಿಯವರು ತಮ್ಮನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಶಿವರಾಮೇಗೌಡರು ಮಾಡಿದ ಸಾಮಾಜಿಕ ಸೇವೆಗಳಾದರೂ ಯಾವುದು?

ಶಿವರಾಮೇಗೌಡರೆ ನಿಮ್ಮ ಮಗಳ ಮದುವೆಗೆ ಮಾಡಿದ ಖರ್ಚೆಷ್ಟು? ಇಷ್ಟೊಂದು ಹಣ ಎಲ್ಲಿಂದ ಬಂತು?

ಶಿವರಾಮೇಗೌಡರೇ ನೀವು ನಿಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವುದು ನಿಮ್ಮಿಷ್ಟ. ಆದರೆ ಈ ಅದ್ಧೂರಿ ಮದುವೆಗೆ ಇಷ್ಟು ಹಣ ಎಲ್ಲಿಂದ ಬಂತು? ನಿಮ್ಮ ಆದಾಯದ ಮೂಲವೇನು? ಈ ಬಗ್ಗೆ ನೀವು ಸಾರ್ವಜನಿಕರಿಗೆ ಲೆಕ್ಕ ಕೊಡುವಿರಾ? ನೀವು ಮಾಡುವ ದುಂದುವೆಚ್ಚದಿಂದ ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದೀರಿ.

ನಿಮಗೆ ಬಡವರ ಕಾಳಜಿ ಇರುತ್ತಿದ್ದರೆ ಇಷ್ಟೊಂದು ಹಣ ಖರ್ಚು ಮಾಡುತ್ತಿದ್ದಿರಾ? ಯಾಕೆ ಗೊತ್ತೇ ನಿಮ್ಮ ಈ ಖರ್ಚಿನಿಂದ ಅದೆಷ್ಟೋ ರೈತರ ಸಾಲ ಮನ್ನಾ ಮಾಡಿ ಆತ್ಮಹತ್ಯೆಯನ್ನು ತಡೆಯಬಹುದಿತ್ತು. ಅದೆಷ್ಟೋ ಕೆರೆಗಳನ್ನು ಹೂಳೆತ್ತಿ ನೀರಿನ ಸಮಸ್ಯೆಯನ್ನು ನಿವಾರಿಸಬಹುದಿತ್ತು. ಅದೆಷ್ಟೋ ಬಡವರಿಗೆ ಮನೆ ಮಾಡಬಹುದಿತ್ತು. ಆದರೆ ಸಮಾಜದ ಹಿತವನ್ನು ಮರೆತು ತನ್ನ ಸ್ವಪ್ರತಿಷ್ಠೆಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮದುವೆ ಮಾಡುತ್ತಿದ್ದೀರಲ್ಲಾ ನೀವು ಸಮಾಜಕ್ಕೆ ಏನು ಸಂದೇಶ ಕೊಡಲು ಬಯಸಿದ್ದೀರಿ…

ಐಟಿ ದಾಳಿ ನಡೆಯಲಿ!

ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಿರುವ ಶಿವರಾಮೇಗೌಡರು ತನ್ನ ಮಗಳ ಮದುವೆಗೆ ಖರ್ಚು ಮಾಡುತ್ತಿರುವ ಹಣದ ಮೂಲವನ್ನು ಶಿವರಾಮೇಗೌಡರು ಕೂಡಲೇ ಬಹಿರಂಗಗೊಳಿಸಲಿ. ಇದರ ಜೊತೆಗೆ ತೆರಿಗೆ ಇಲಾಖೆ ಈ ಮದುವೆಯ ದುಂದುವೆಚ್ಚವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಶಿವರಾಮೇಗೌಡರ ನಿವಾಸಕ್ಕೆ ದಾಳಿ ನಡೆಸಿ ಹಣದ ಮೂಲವನ್ನು ಪತ್ತೆ ಮಾಡಬೇಕು.

ಆದಾಯಕ್ಕಿಂತಲೂ ಮಿತಿಮೀರಿದ ಆಸ್ತಿ ಇದ್ದರೆ ಕೂಡಲೇ ಅದನ್ನು ವಶಪಡಿಸಿಕೊಳ್ಳಬೇಕಿದೆ. ಆದಾಯದ ಮೂಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇಂದು ನಡೆದ ಮದುವೆಗೆ ಎಷ್ಟು ಖರ್ಚು? ಇಷ್ಟೊಂದು ಹಣ ಎಲ್ಲಿಂದ ಬಂತೆಂದು ಪತ್ತೆಹಚ್ಚಬೇಕಾಗಿದೆ.

ಜನಾರ್ದನ ರೆಡ್ಡಿಯವರು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಹಬ್ಬಿಸಿದವರು ಇಂದು ಶಿವರಾಮೇಗೌಡರ ಮದುವೆಯ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ರೆಡ್ಡಿಯವರ ಮಗಳ ಮದುವೆಯನ್ನೂ ಮೀರಿಸಿದ ಶಿವರಾಮೇಗೌಡರ ಮದುವೆಯ ಬಗ್ಗೆ ಯಾಕೆ ಮಾಧ್ಯಮಗಳೂ ಕೂಡಾ ಮೌನವಾಗಿದೆ? ಶಿವರಾಮೇಗೌಡರು ಕೂಡಲೇ ತನಗೆ ಬಂದಿರುವ ಹಣದ ಮೂಲವನ್ನು ತಕ್ಷಣ ಬಹಿರಂಗಗೊಳಿಸಿ ಗೊಂದಲವನ್ನು ಕೂಡಲೇ ನಿವಾರಿಸಿಕೊಳ್ಳಲಿ…

ಚೇಕಿತಾನ

Tags

Related Articles

Close