ಅಂಕಣ

ವಿಜಯ್ ಮಲ್ಯಗೆ ‘ಈ ನಾಯಕ’ರೇ ಸಾವಿರಾರು ಕೋಟಿ ಸಾಲ ಕೊಡಿಸಿ ಈಗ ಮೋದಿಯನ್ನ ದೂರುತ್ತಿರೋರಿಗೆ ನೈತಿಕತೆ ಅನ್ನೋದಿದೆಯಾ?

ಮೋದಿ ಮೋದಿ ಮೋದಿ!!! ನಿಲ್ಲಿ ನಿಲ್ಲಿ ಇದು ಮೋದಿ ಅಭಿಮಾನಿಗಳು ಕೂಗುತ್ತಿರೋದಲ್ಲ ಬದಲಾಗಿ ಮೋದಿ ವಿರೋಧಿಗಳು ದಿನಬೆಳಗಾದರೆ ಮೋದಿ
ಜಪ ಮಾಡುತ್ತಿರೋದರ ಝಲಕ್!!

ದೇಶದ ಯಾವ ಭಾಗದಲ್ಲಿ ಏನೇ ಆದರೂ, ನಮ್ಮ ರಾಜ್ಯದಲ್ಲಿ ಪ್ರಗತಿಪರರ ಕೊಲೆಯಾದರೂ, ಕೇರಳದಲ್ಲಿ ಕೊಲೆಗಳಾದರೂ, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆಯ BSF ನವರು ಡ್ರಗ್, ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡರೂ, ಓರಿಸ್ಸಾದಲ್ಲೆಲ್ಲೋ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಶವವನ್ನ ಹೆಗಲ ಮೇಲೆ ಎತ್ತಿಕೊಂಡು ಹೋದರೂ, ನೋಟು ಅಮಾನ್ಯೀಕರಣ ಮಾಡಿದರೂ, ಬುಲೆಟ್ ಟ್ರೇನ್ ದೇಶಕ್ಕೆ ತರಲು ಚಿಂತಿಸಿದರೂ, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ, ಭಾರತೀಯ ಸೇನೆ ಪ್ರತ್ಯೇಕತಾವಾದಿಗಳ ಮೇಲೆ ಪೆಲೆಟ್ ಗನ್ ಉಪಯೋಗಿಸಿದರೂ, ಬುರ್ಹಾನ್ ವಾನಿಯಂಥ ಮೋಸ್ಟ್ ವಾಂಟೆಡ್
ಟೆರರಿಸ್ಟನ್ನ ಹೊಡೆದುರುಳಿಸಿದರೂ ಮೋದಿ ವಿರೋಧಿಗಳು ದಿನಬೆಳಗಾದರೆ ಟೀಕೆಯ ಮೂಲಕ ಬೊಟ್ಟು ಮಾಡಿ ತೋರಿಸೋದು ‘ಮೋದಿ’ಯೇ.

ಒಟ್ಟಿನಲ್ಲಿ ಮೋದಿಯನ್ನ ಬೆಂಬಲಿಸುವವರನ್ನ ಭಕ್ತರು ಅಂತ ಕರೆಯೋ ಮೋದಿ ವಿರೋಧಿಗಳೇ ಮೋದಿಯ ನಿಜವಾದ ಭಕ್ತರಾಗಿ ಬದಲಾಗಿಬಿಟ್ಟಿದ್ದಾರೆಂದರೆ ತಪ್ಪೇನಲ್ಲ ಬಿಡಿ. ಹೀಗೇ ಮೋದಿಯನ್ನ ದೂರೋಕೆ ದಿನಕ್ಕೊಂದು ಕಾರಣವನ್ನ ಹುಡುಕುತ್ತ ಕೂರೋ ಗಂಜಿ ಕೇಂದ್ರದ ಗಿರಾಕಿಗಳಿಗೆ, ಕಾಂಗ್ರೆಸ್ಸಿಗೆ ಒಟ್ಟಿನಲ್ಲಿ ಒಂದು ವಿಷಯ ಬೇಕಷ್ಟೆ.

ಅಷ್ಟಕ್ಕೂ ವಿಷಯವೇನೆಂದರೆ ಈ ಮೋದಿ ವಿರೋಧಿಗಳು ಕಾಂಗ್ರೆಸ್ಸಿಗರು, ವಿರೋಧ ಪಕ್ಷದವರು ಇತ್ತೀಚೆಗೆ ಮೋದಿಯನ್ನ ವಿರೋಧಿಸಲಿಕ್ಕೆ ‘ವಿಜಯ್ ಮಲ್ಯ’ನ ಹೆಸರನ್ನೂ ಉಪಯೋಗಿಸಿಕೊಂಡು ಮೈಲೇಜ್ ತಗೊಳ್ಳೋಕೆ ಪ್ರಯತ್ನ ಪಡ್ತಿರೋದಂತೂ ಸತ್ಯ. ವಿಜಯ್ ಮಲ್ಯ ಎಂಬ ಮದ್ಯದ ದೊರೆ ದೇಶದ ವಿವಿಧ ಬ್ಯಾಂಕುಗಳಿಂದ ಸರಿ ಸುಮಾರು 9000 ಕೋಟಿ ಸಾಲ ಪಡೆದು ದೇಶ ಬಿಟ್ಟು ಓಡಿ ಹೋಗಿದ್ದಾನೆ. ಹಾಗಂತ ಆತ ಸಾಲ ಮಾಡಿದ್ದು ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಮೇಲಲ್ಲ, ಆತ ಭಾರತದ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದದ್ದು ಕಾಂಗ್ರೆಸ್ ನೇತೃತ್ವದ UPA 1 ಹಾಗು UPA 2 ಅಧಿಕಾರಾವಧಿಯಲ್ಲಿ.

ಸಾಲ ಕೊಡೋದನ್ನ ಕೊಟ್ಟು, ಆತನಿಂದ ತಮ್ಮ ಅಧಿಕಾರಾವಧಿಯಲ್ಲೇ ಸಾಲ ವಸೂಲಾತಿಗಾಗಿ ಕ್ರಮ ಕೈಗೊಳ್ಳದ ನಾ(ಲಾ)ಯಕರು ಇಂದು ಮೋದಿಯನ್ನ
ವಿರೋಧಿಸುತ್ತ ಜನರ ಹಾದಿ ತಪ್ಪಿಸುವ ಕೆಲಸ ಮಾಡ್ತಿದಾರೆ. ಅಷ್ಟಕ್ಕೂ ವಿಜಯ್ ಮಲ್ಯಗೆ ದೇಶದ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಕೊಡಿಸಿದ ಆ ನಾಯಕರಾದರೂ ಯಾರು ಅನ್ನೋ ಪ್ರಶ್ನೆ ಉತ್ತರ ಸಿಕ್ಕಿದೆ.

ಕಾಂಗ್ರೆಸ್ ಸರಕಾದಲ್ಲಿ ಸಚಿವನಾಗಿದ್ದ ಎನ್.ಸಿ.ಪಿ ಪಕ್ಷದ ಶರದ್ ಪವಾರ್ ವಿಜಯ್ ಮಲ್ಯನಿಗೆ ಸಾಲ ಕೊಡಿಸಲು ಶಿಫಾರಸ್ಸು ಮಾಡಿದ್ದ ಅನ್ನೋದನ್ನ ಸ್ಪೆಷಲ್ ಫ್ರಾಡ್ ಇನ್ವೆಸ್ಟಿಗೇಷನ್ ಆಫಿಸ್ ವರದಿಯಿಂದ ರಿಪಬ್ಲಿಕ್ ಚಾನೆಲ್ ಖುಲಾಸೆಗೊಳಿಸಿದೆ. ಶರದ್ ಪವಾರ್ ವಿಜಯ್ ಮಲ್ಯ ಜೊತೆ ನಿಕಟ ಸಂಪರ್ಕ ಹೊಂದಿದವನಾಗಿದ್ದ. 2009 ರಲ್ಲಿ ಕೃಷಿ ಮಂತ್ರಿಯಾಗಿದ್ದ ಶರದ್ ಪವಾರ್’ಗೆ ರಹಸ್ಯ ಇ-ಮೇಲ್ ಕಳಿಸಿ ಕಿಂಗಫಿಶರ್ ಏರಲೈನ್ಸ್’ಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದ ಅನ್ನೋದನ್ನ ಈ ರಿಪೋರ್ಟ್ ಬಯಲು ಮಾಡಿದೆ.

ಕೃಷಿ ಮಂತ್ರಿಯಾಗಿದ್ದ ಶರದ್ ಪವಾರ್ ಆಗಿನ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿಗೆ ಈ ವಿಷಯವನ್ನ ತಿಳಿಸಿ ವಿಜಯ್ ಮಲ್ಯಗೆ ಸಾಲ ನೀಡಲು ಕೇಳಿಕೊಂಡಿದ್ದನಂತೆ. ಅಷ್ಟಕ್ಕೂ ಕೃಷಿ ಮಂತ್ರಿಯಾಗಿದ್ದ ಶರದ್ ಪವಾರ್ ಹಣಕಾಸು ಸಚಿವಾಲಯದಲ್ಲಿ ಅದ್ಹೇಗೆ ಹಸ್ತಕ್ಷೇಪ ಮಾಡಿ ವಿಜಯ್ ಮಲ್ಯಗೆ ಸಾಲ ಕೊಡಿಸಿದ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ. ಈ SFIO ರಿಪೋರ್ಟಿನಲ್ಲಿ ಇನ್ನಿಬ್ಬರು ಪ್ರಭಾವಿ ರಾಜಕಾರಣಿಗಳ ಹೆಸರೂ ಇದೆ, ಅವುಗಳು ಸೋನಿಯಾ ಗಾಂಧಿ ಹಾಗು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ಫಾರುಕ್ ಅಬ್ದುಲ್ಲಾ.

ಮಾಡೋ ಕೆಲಸಗಳನ್ನೆಲ್ಲ ‘ಅಚ್ಚುಕಟ್ಟಾಗಿ’ ತಮ್ಮ ಅಧಿಕಾರಾವಧಿಯಲ್ಲೇ ಮಾಡಿ ಈಗ ತಮ್ಮ ತಪ್ಪುಗಳನ್ನ ಮೋದಿಯ ತಲೆಗೆ ಕಟ್ಟೋಕೆ ಕಾಂಗ್ರೆಸ್ ನಿಂತಿದೆಯೆಂದರೆ ಅವರಿಗೇನಾದರೂ ಮಾನ ಮರ್ಯಾದೆ ಇದೆಯಾ ಅನ್ನೋ ಪ್ರಶ್ನೆ ಉದ್ಭವವಾಗುತ್ತೆ.

“ಆಯ್ತು ಅವರೇನೋ ಸಾಲ ಕೊಟ್ಟರು ಆದರೆ ಈ ಮೋದಿಗೆ ಸಾಲ ವಸೂಲಿ ಮಾಡಲಿಕ್ಕೆ & ಆತನನ್ನ ಅರೆಸ್ಟ್ ಮಾಡಿ ಭಾರತಕ್ಕೆ ಕರೆದುಕೊಂಡು ಬರೋಕ್ಕೆ ಯಾಕಾಗ್ಲಿಲ್ಲ?” ಅಂತ ಪ್ರಶ್ನೆ ಮಾಡುವವರಿಗೆ ಉತ್ತರ:

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸಗಳೇ ಭ್ರಷ್ಟರನ್ನ ಸದೆಬಡಿಯುವುದು, ಬ್ಯಾಂಕ್ಗಳಿಂದ ಸಾಲ ಪಡೆದುಡಿಫಾಲ್ಟರ್’ ಗಳಾಗಿರುವವರಿಂದಸಾಲ ವಸೂಲಾತಿ ಮಾಡುವುದಾಗಿತ್ತು.

ಈಗ ಈ ಮೋದಿ ನನ್ನ ಬೆಂಬಿಡೋಲ್ಲ ಅಂತ ಗೊತ್ತಾದ ಮಲ್ಯ ದೇಶ ಬಿಟ್ಟು ಪರಾರಿಯಾದ. ಹಾಗಂತ ಆತನ ಸಾಲವೇನೂ ಮುಳುಗಿ ಹೋಗಲಿಲ್ಲ,
ಮೋದಿ ಸರ್ಕಾರ ವಿಜಯ್ ಮಲ್ಯನ ಆಸ್ತಿಯನ್ನ ಜಪ್ತು ಮಾಡಿದ್ದಾರೆ, ಆತನ ಕಾರ್ ಸಮೇತ ಆತನ ಪ್ರಾಪರ್ಟಿಗಳನ್ನ ಹರಾಜು ಹಾಕಿ ಬ್ಯಾಂಕುಗಳ ಸಾಲವನ್ನ
ವಸೂಲಾತಿ ಮಾಡುತ್ತಿದೆ.

ಆತನ ಭಾರತದಲ್ಲಿರೋ 9000 ಕೋಟಿ ಆಸ್ತಿಯನ್ನ ಅದಾಗಲೇ ಮೋದಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ, ಅಷ್ಟೇ ಅಲ್ಲ ಲಂಡನ್ನಿನಲ್ಲಿ ಅಡಗಿ ಕೂತಿರೋ ಮಲ್ಯನನ್ನ ಭಾರತಕ್ಕೆ ಕರೆತರೋಕೆ ಇಂಗ್ಲೆಂಡ್ ಜೊತೆ ಮಾತುಕತೆಯನ್ನೂ ಮೋದಿ ಸರ್ಕಾರ ಮಾಡಿದೆ, ಈ ಮಾತುಕತೆಯ ಫಲವಾಗಿಯೇ ಮೊನ್ನೆ ಮೊನ್ನೆಯಷ್ಟೇ ವಿಜಯ್ ಮಲ್ಯನನ್ನ ಇಂಗ್ಲೆಂಡ್ ನಲ್ಲಿ ಬಂಧಿಸಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಬೇಲ್ ಪಡೆದು ಮಲ್ಯ ಹೊರಬಂದಿದ್ದಾನೆ.

ಸಾಲ ಕೊಡೋರು ಅವರು, ಆತನಿಗೆ ರಾಜಮರ್ಯಾದೆ ಕೊಟ್ಟು ಸಲುಹಿದವರು ಅವರು ಆದರೆ ಹೆಸರು ಕೆಡಿಸಬೇಕಂತಿರೋದು ಮಾತ್ರ ಮೋದಿಯದ್ದು, ವ್ಹಾಹ್
ಕಾಂಗ್ರೆಸ್ ವ್ಹಾಹ್, ಇದೇ ಕುತಂತ್ರದ ರಾಜಕಾರಣವನ್ನೇ ಸ್ವಾತಂತ್ರ್ಯ ಬಂದಾಗಿನಿಂದಲೂ ಮಾಡಿಕೊಂಡು ಬಂದವರು ನೀವಂತ ಜನರಿಗೆ ಅರ್ಥವಾಗುತ್ತಿದೆ. ಕಾಲ ಬದಲಾಗಿದೆ ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತವಾಗಿದೆ.

ಕಾಂಗ್ರೆಸ್ ಹೇಳುವ ಮಾತನ್ನ ನಂಬುವ ಮೊದಲೂ ಅದರ ಬಗ್ಗೆ ಪರಾಮರ್ಶಿಸಿ ನಂತರ ಅದನ್ನ ನಂಬಿ, ಇಲ್ಲವಾದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೇಗೆ ನಂಬಿಸಿ ನಿಮ್ಮನ್ನ ಮೂರ್ಖರನ್ನಾಗಿ ಮಾಡಿತ್ತೋ ಅದೇ ರೀತಿಯಲ್ಲಿ ಮುಂದೆಯೂ ಮೂರ್ಖರನ್ನಾಗೇ ಮಾಡುತ್ತಿರುತ್ತಾರೆ.

News Source : Republic TV

– Vinod Hindu Nationalist

Tags

Related Articles

Close