ಪ್ರಚಲಿತ

ವಿವೇಕಾನಂದರಂತೆಯೇ ಮೋದಿಯೂ ವಿಶ್ವ ಗುರು ಆಗುತ್ತಾರೆ ಎಂದು ಹೇಳಿದ ಮೋದಿ ಕುಟುಂಬದ ಆ ವ್ಯಕ್ತಿ ಯಾರು ಗೊತ್ತಾ? ಇದೊಂದು ಭಾವಾನಾತ್ಮಕ ಸ್ಟೋರಿ…

ಈಗಾಗಲೇ ನರೇಂದ್ರ ಮೋದಿಯು ಸ್ವಾಮಿ ವಿವೇಕಾನಂದರ ಅವತಾರನಾ… ಮೋದಿಗೂ ವಿವೇಕಾನಂದರಿಗೂ ಸಾಮ್ಯತೆ ಇದೆಯೇ ಎಂಬಿತ್ಯಾದಿ ಮಾತುಗಳು ಹೊರಬೀಳುತ್ತಲೇ ಇದ್ದು, ಈ ಬಗ್ಗೆ ಜೋತಿಷ್ಯ ಶಾಸ್ತ್ರವು ಸ್ಪಷ್ಟೀಕರಣ ನೀಡಿರುವ ವಿಚಾರ ತಿಳಿದೇ ಇದೆ. ಆದರೆ ಇದೀಗ ಸ್ವಾಮಿ ವಿವೇಕಾನಂದರ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಲ್ಲದೇ ವಿವೇಕಾನಂದರಂತೆಯೇ ಮೋದಿಯೂ ವಿಶ್ವ ಗುರು ಆಗುತ್ತಾರೆ ಎಂದು ಮೋದಿ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ!!

ಹೌದು, ಭಾರತದಲ್ಲಿ ಹಲವು ಬದಲಾವಣೆಗಳಿಗೆ ಕಾರಣರಾದ ಪ್ರಧಾನಿ ಮೋದಿ ಇಂದು ಎಲ್ಲರ ಮನೆ ಮಾತಾಗಿದ್ದಾರೆ. ಈ ಹಿಂದೆ ಕೆಲವರು ಪ್ರಧಾನಿ ಮೋದಿಯನ್ನ ವಿವೇಕಾನಂದರಿಗೆ ಹೋಲಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಜಾತಕ ಪರಾಮರ್ಶೆ ಮಾಡುವಾಗ ಇವರಲ್ಲಿ ಸ್ವಾಮಿ ವಿವೇಕಾನಂದರ ಗುಣ- ಸ್ವಭಾವ- ಧೋರಣೆಗಳು ಕಂಡುಬಂದವು. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ಈ ನರೇಂದ್ರರಿಗೂ ಆ ನರೇಂದ್ರರಿಗೂ ಆತ್ಮ ಸಂಬಂಧವಿದೆ. ನರೇಂದ್ರ ಮೋದಿಯವರು ಮತ್ತು ವಿವೇಕಾನಂದರು ಇಬ್ಬರೂ ನರೇಂದ್ರರೆ. ಅಂದರೆ ‘ನರಾಣಾಂ ಇಂದ್ರಃ’ ಎನ್ನುವ ವಚನ ಪ್ರಕಾರ ಇಬ್ಬರೂ ನರೇಂದ್ರರಾಗುತ್ತಾರೆ. ಇದು ಕೇವಲ ಜನ್ಮ ಸಿದ್ಧಾಂತದ ಒಂದು ವಿವರಣೆ ಮತ್ತು ವಿಶ್ಲೇಷಣೆಯಾಗಿದೆ.

ಅದೇನಿದ್ದರೂ ಇವರ ಜನ್ಮವು ಈ ದೇಶಕ್ಕೆ ವರವಂತೂ ಖಂಡಿತಾ ಹೌದು. ವಿವೇಕಾನಂದರನ್ನು ನಿಂದಿಸಿದ ಪೀಳಿಗೆಯು ಅವರ ನಂತರ ಈಗ ಹೊಗಳಿ ಅಟ್ಟಕ್ಕೇರಿಸುತ್ತಿದೆ. ಹಾಗೆಯೇ ಮೋದಿಯನ್ನು ವಿರೋಧಿಸಿದವರೂ ಮುಂದೊಂದು ದಿನ ಹೊಗಳುವ ಕಾಲವೂ ಇದೆ. ಅಥವಾ ಅವರ ಹೊಗಳಿಕೆ ಬೇಕೆಂದೂ ಈ ಲೇಖನ ಬರೆದುದಲ್ಲ ಎಂದು ಗುಜರಾತ್ ಫಲಿತಾಂಶದ ಭವಿಷ್ಯವನ್ನು ನಿಖರವಾಗಿ ಹೇಳಿ ಪ್ರಸಿದ್ದಿ ಪಡೆದಿದ್ದ ಪ್ರಕಾಶ್ ಅಮ್ಮಣ್ಣಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಬಸವನಗುಡಿಯ ಶ್ರೀ ಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವೇಕಾನಂದರ 155ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿಯವರು , ನರೇಂದ್ರ ಎಂಬುದು ಹೆಸರಿಗೆ ಮಾತ್ರವಲ್ಲ ವಿಚಾರ ಧಾರೆಗಳಲ್ಲಿ ಸಹ ಅವರಿಬ್ಬರಲ್ಲಿ ಸಾಮ್ಯತೆ ಇದೆ ಎಂದು ಹೇಳಿದ್ದಾರಲ್ಲದೇ ಸ್ವಾಮಿ ವಿವೇಕಾನಂದರ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ ಎಂದು ಪ್ರಹ್ಲಾದ್ ದಾಮೋದರದಾಸ್ ಮೋದಿ ಶ್ಲಾಘಿಸಿದ್ದಾರೆ.

ಈಗಾಗಲೇ ಪ್ರಕಾಶ್ ಅಮ್ಮಣ್ಣಾಯವರು ಹೇಳಿರುವ ಪ್ರಕಾರ, ಮೋದಿ ಹಾಗೂ ವಿವೇಕಾನಂದ ಇಬ್ಬರ ದೇಹಕ್ಕೂ ಇರೋ ಸಾಮ್ಯತೆ ಬಗ್ಗೆಯೂ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಇವರ ಪ್ರಕಾರ ಇಬ್ಬರ ದೇಹ ಭಾಷೆಯೂ ಒಂದೇ ಆಗಿದೆ. ವಿವೇಕಾನಂದರು ಮಹಾ ಜ್ಞಾನಿಗಳಾಗಿದ್ದರು. ನರೇಂದ್ರ ಮೋದಿಯವರಲ್ಲೂ ಅಪಾರ ದೇಶ ಪ್ರೇಮ, ಯೋಗ, ಧ್ಯಾನ ಇತ್ಯಾದಿಗಳನ್ನು ಕಾಣಬಹುದು. ಅಮೆರಿಕವೇ ಮೋದಿಯವರನ್ನು ಗೌರವಿಸಿತು, ಈ ಹಿಂದೆ ವಿವೇಕಾನಂದರು ಅಮೆರಿಕಕ್ಕೆ ಹೋಗುವಾಗ ಹೀನ ಸ್ಥಿತಿಯಲ್ಲಿ ಹೋದರು. ಬರುವಾಗ ಮಹಾ ಪುರುಷರಾಗಿ ಕಂಡರು. ಮೋದಿಗೆ ಬಹಿಷ್ಕಾರ ಹಾಕಿದ ಅಮೆರಿಕವೇ ನಂತರ ಪೀಠವಿಟ್ಟು ಸನ್ಮಾನಿಸಿದೆ. ವಿವೇಕಾನಂದರು ಅಪೂರ್ಣವಾಗಿ ಮಾಡಿದ್ದನ್ನು, ಮತ್ತೆ ನರೇಂದ್ರ ಮೋದಿಯವರಾಗಿ ಬಂದು ಪೂರ್ಣಗೊಳಿಸುವ ಪ್ರಯತ್ನಗಳು ಕಾಣುತ್ತಿವೆ ಅಂತೆಲ್ಲಾ ಹೇಳಿ ವಿವೇಕಾನಂದರ ಪುನರ್ಜನ್ಮವೇ ಪ್ರಧಾನಿ ಮೋದಿ ಎಂದು ಅಮ್ಣಣ್ಣಾಯ ತಿಳಿಸಿದ್ದಾರೆ.

ಆದರೆ ಇದೀಗ, ನರೇಂದ್ರ ಎಂಬುದು ಹೆಸರಿಗೆ ಮಾತ್ರವಲ್ಲ ವಿಚಾರ ಧಾರೆಗಳಲ್ಲಿ ಸಹ ಅವರಿಬ್ಬರಲ್ಲಿ ಸಾಮ್ಯತೆ ಇದೆ ಎಂದು ಮೋದಿ ಅವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿಯವರು ಹೇಳಿದ್ದು, ಹಿಂದೂ ಧರ್ಮ ಅಂದ್ರೇ ಏನು ಅನ್ನೊದನ್ನು ತಿಳಿಸೋಕೆ ಅಂತಲೇ ಜನ್ಮ ತಾಳಿದವರು ವಿವೇಕಾನಂದರು. ಚಿಕ್ಕಂದಿನಲ್ಲೇ ಮೂಢನಂಬಿಕೆಗಳನ್ನು ವಿರೋಧಿಸಿದವರು. ಕೊನೆಗೆ ರಾಮಕೃಷ್ಣ ಪರಮಹಂಸರನ್ನು ಕಲ್ಕತ್ತಾದಲ್ಲಿ ಭೇಟಿ ಮಾಡ್ತಾರೆ. ಅಲ್ಲಿಂದ ಪರಮಹಂಸರನ್ನು ಗುರುವಾಗಿ ಸ್ವೀಕರಿಸ್ತಾರೆ. ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಲ್ಲ, ಅವರು ವಿಶ್ವ ಗುರುವಾಗಿದ್ದಾರೆ. ಹಾಗಾಗಿ ಅವರ ವಿಚಾರಗಳು ಯಾವಾಗಲೂ ಪ್ರಸ್ತುತವಾಗಿರುತ್ತವೆ. ವಿವೇಕಾನಂದ ಹಾಗೂ ನರೇಂದ್ರ ಮೋದಿಗೆ ಹೆಸರು ಮತ್ತು ವಿಚಾರಗಳಲ್ಲೂ ಸಾಮತ್ಯೆಗಳಿವೆ. ಹಾಗಾಗಿ ನರೇಂದ್ರ ಮೋದಿ ವಿಶ್ವ ಗುರು ಆಗುತ್ತಾರೆ!! ನರೇಂದ್ರ ಅನ್ನೊ ಹೆಸರು ಪೂರ್ತಿ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ. ಅಷ್ಟೇ ಅಲ್ಲದೇ, “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಮಂತ್ರ ಎಲ್ಲೆಡೆ ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ವಿವೇಕಾನಂದರು ಹುಟ್ಟಿದರು. ಆ ಮಹಾನ್ ಚೇತನವು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಸ್ತಂಗತವಾಗಿದ್ದು ನೋವಿನ ಸಂಗತಿಯಾಗಿದೆ. ಭಾರತದ ರಾಜಕಾರಣದಲ್ಲಿ ವಿವೇಕಾನಂದರ ವಿಚಾರಗಳು ಹಾಗೂ ಚಾಣಕ್ಯ ನೀತಿ ಬಹುಮುಖ್ಯವಾಗಿವೆ. ಪ್ರಸುತ್ತ ದಿನಗಳಲ್ಲೂ ಅವರಿಬ್ಬರ ನೀತಿಗಳ ಆಧಾರದ ಮೇಲೆ ದೇಶದ ರಾಜ ಕಾರಣ ನಡೆದಿದೆ. ಈ ಎರಡು ವಿಚಾರಧಾರೆಗಳನ್ನು ನರೇಂದ್ರ ಮೋದಿ ಅವರಲ್ಲಿ ಕಾಣಬಹುದಾಗಿದೆ ಎಂದು ನುಡಿದಿದ್ದಾರೆ.

ಇನ್ನು ನಾನು ಪ್ರಧಾನ ಮಂತ್ರಿಗಳ ಸಹೋದರನಾದರೂ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದೇನೆ. ಇಲ್ಲಿ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಲ್ಲ. ಅವರೊಬ್ಬರು ವಿಶ್ವಗುರು. ಮುಂದೆ ನರೇಂದ್ರ ಮೋದಿ ಅವರು ಸಹ ವಿಶ್ವಗುರು ಆಗುತ್ತಾರೆ. ನರೇಂದ್ರ ಮೋದಿಯವರು ವಿವೇಕಾನಂದರ ನಂತರ ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರ ಹೆಸರಲ್ಲೂ ನರೇಂದ್ರ ಎಂಬುದು ಸಾಮಾನ್ಯವಾಗಿರುವುದರಿಂದ ಭಾರತಕ್ಕೆ ಶುಭದಿನ ಸಮೀಪಿಸುತ್ತಿದೆ ಎಂದು ಹಾಡಿ ಹೊಗಳಿದ್ದಾರೆ.

ಭಾರತದ ರಾಜಕಾರಣದಲ್ಲಿ ವಿವೇಕಾನಂದರ ವಿಚಾರಗಳು ಹಾಗೂ ಚಾಣಕ್ಯ ನೀತಿ ಬಹುಮುಖ್ಯವಾಗಿದ್ದು, ಪ್ರಸುತ್ತ ದಿನಗಳಲ್ಲೂ ಅವರಿಬ್ಬರ ನೀತಿಗಳ ಆಧಾರದ ಮೇಲೆ ದೇಶದ ರಾಜಕಾರಣ ನಡೆದಿದೆ. ಹಾಗಾಗಿ ಈ ಎರಡು ವಿಚಾರಧಾರೆಗಳನ್ನು ನರೇಂದ್ರ ಮೋದಿ ಅವರಲ್ಲಿ ಕಾಣಬಹುದಾಗಿರುವುದು ಮಾತ್ರ ಅಕ್ಷರಶಃ ನಿಜ…….

source:http://kannada.asianetnews.com/news/modi-become-vishwaguru-says-prahlad-modi

-ಅಲೋಖಾ

 

Tags

Related Articles

Close