ಪ್ರಚಲಿತ

ವಿಶೇಷ ಸುದ್ದಿ! ಹನುಮಂತ ಹೊತ್ತು ತಂದಿರುವ ಸಂಜೀವಿನಿ ಪರ್ವತ ಇದೀಗ ಎಲ್ಲಿದೆ ಗೊತ್ತೆ?!

ರಾಮಾಯಣ ಮಹಾಭಾರತವು ನಡೆದಿದೆಯೋ ಅಥವಾ ಇಲ್ಲವೋ ಅನ್ನುವ ಮಾಹಿತಿಗಳನ್ನು ತಾಳೆ ಹಾಕುತ್ತಾ ಹೋದಾಗ ಅದರಲ್ಲಿರುವ ಅದೆಷ್ಟೋ ವಿಚಾರಗಳೊಂದಿಗೆ ಅನೇಕ ಕುರುಹುಗಳು ನಮಗೆ ಸಿಕ್ಕಿದೆ ಹಾಗೂ ಇಂದಿಗೂ ಸಿಗುತ್ತಲೇ ಇದೆ!! ಹೀಗಿರಬೇಕಾದರೆ, ರಾಮಾಯಣದಲ್ಲಿ ರಾಮನ ಭಂಟನಾದ ಕೇಸರಿತನಯನಾದ ಹನುಮಂತ, ಮಹಾಜ್ಞಾನಿ, ಮಹಾಬುದ್ದಿವಂತ!! ಅಷ್ಟೇ ಅಲ್ಲದೇ ಈತನಿಗೆ ತಿಳಿದಿರುವಷ್ಟು ವಿಚಾರಗಳು ಯಾರಿಗೂ ತಿಳಿದಿದ್ದೇ ಇಲ್ಲ ಎನ್ನುವುದನ್ನು ಪುರಾಣಗಳು ನಮಗೆ ಹೇಳಿಕೊಟ್ಟಿವೆ!! ಅಂದಹಾಗೆ ಲಕ್ಷ್ಮಣ ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ಹನುಮಂತ ತಂದ ಸಂಜೀವಿನಿಯ ಸಸ್ಯವೇ ಕಾರಣ ಎಂಬುವುದು ನಮಗೆ ತಿಳಿದಿದೆ!! ಅಷ್ಟೇ ಅಲ್ಲದೇ 5 ಜೌಷಧೀಯ ಸಸ್ಯ ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಮಹಾ ಪರಾಕ್ರಮಿಯಾದ ಹನುಮಂತ!! ಹಾಗಾದರೆ, ಅಂದು ಹನುಮಂತ ಹೊತ್ತು ತಂದ ಈ ಸಂಜೀವಿನಿ ಇದೀಗ ಎಲ್ಲಿದೆ ಎನ್ನುವುದು ಗೊತ್ತಾ??

ಭಾರತದಲ್ಲಿರುವ ಸುಮಾರು 18,000 ಪುಷ್ಪಸಸ್ಯಗಳ ರಾಶಿಯಿಂದ ‘ಸಂಜೀವಿನಿ’ ಎಂಬ ಏಕೈಕ ಪ್ರಭೇದವನ್ನು ಹುಡುಕುವ ಕ್ರಿಯೆಯೇನು ಸರಳವಾದ
ವಿಚಾರವೇನಲ್ಲ!!ಆದರೆ ರಾಮನ ಮಹಾ ಭಕ್ತನಾದ ಹನುಮಂತ ಲಕ್ಷ್ಮಣನನ್ನು ಉಳಿಸಲು ಹಿಮಾಲಯ ಪರ್ವತದಲ್ಲಿ ಸಿಗುವ ಮೂಲಿಕೆಯನ್ನು ತರಲು ಸೂಕ್ತ
ವ್ಯಕ್ತಿಯಾಗಿದ್ದ!! ಅದಷ್ಟೇ ಅಲ್ಲದೇ, ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ
ಅಲ್ಲಿರುವ ಎಲ್ಲ ಸಸ್ಯಗಳು ಕೂಡ ಸಂಜೀವಿನಿಯಂತೆಯೇ ಗೋಚರಿಸಿದವು ಕೂಡ!! ಹಾಗಾಗಿ ಲಕ್ಷ್ಮಣನನ್ನು ಮಾತ್ರ ಅಲ್ಲದೇ ತಮ್ಮ ಸೈನ್ಯದಲ್ಲಿ ಅಸುನೀಗಿದ ಅದೆಷ್ಟೋ ಸೈನಿಕರ ಪ್ರಾಣವನ್ನು ಉಳಿಸುವಲ್ಲಿ ಸಹಕಾರಿಯಾಯಿತು ಈ ಸಂಜೀವಿನಿ!!

ಬೃಹತ್ ಹುಲ್ಲಿನ ಮೆದೆಯಲ್ಲಿ ಎಲ್ಲೋ ಹುದುಗಿಕೊಂಡಿರುವ ಸೂಜಿಯನ್ನು ಹುಡುಕಿದಷ್ಟೆ ಕ್ಲಿಷ್ಟವೂ, ಸೂಕ್ಷ್ಮವೂ ಆದ ಕೆಲಸವಾಗಿದ್ದ ಈ ಸಂಜೀವಿನಿ ಇದೀಗ ಶ್ರೀಲಂಕಾದ ಪರ್ವತದಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ದೊರೆತಿದೆ!! ಹೌದು…. ರಾವಣನ ಲಂಕೆಯಲ್ಲಿ ನಡೆದ ಯುದ್ದದ ಸಂದರ್ಭದಲ್ಲಿ, ಈಡೀ ಸಂಜೀವಿನಿ ಪರ್ವತವನ್ನು ಎತ್ತಿ ತಂದಿದ್ದು ಲಂಕೆಗೆ, ಹಾಗಾಗಿ ಇದೀಗ ತಿಳಿದಿರುವ ಮಾಹಿತಿಯ ಪ್ರಕಾರ ಸಂಜೀವಿನಿ ಸಸ್ಯವು ಶ್ರೀಲಂಕಾದಲ್ಲಿರುವ ಪರ್ವತದಲ್ಲಿ ಇದೀಗ ಪತ್ತೆಯಾಗಿದೆ.

ಈ ಪರ್ವತದಲ್ಲಿರುವ ಸಾವಿರಾರು ಗಿಡಮೂಲಿಕೆಯ ಸಸ್ಯಗಳು ಕಂಡು ಬಂದಿದ್ದು, ಆ ಪ್ರದೇಶದ ಜನರು ಏನೇ ಸಮಸ್ಯೆ ಬಂದರು ಕೂಡ ಇಲ್ಲಿರುವ ಗಿಡಮೂಲಿಕೆಯನ್ನು ಬಳಸುತ್ತಾರೆ !! ಅಷ್ಟೇ ಅಲ್ಲದೇ, ಅದೆಷ್ಟೋ ವಿಜ್ಞಾನಿಗಳು, ಸಂಶೋಧಕರು ಈ ಒಂದು ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದ ಬಗ್ಗೆ ಸಾಕಷ್ಟು ಪರಿಶೋಧನೆಗಳನ್ನು ಮಾಡಿದ್ದಾರೆ!! ಅಲ್ಲದೇ, ಶ್ರೀಲಂಕಾದಲ್ಲಿನ ಈ ಪರ್ವತದಲ್ಲಿ ಕಂಡು ಬಂದಿರುವ ಗಿಡಮೂಲಿಕೆಗಳು ಬೇರಾವುದೇ ಸ್ಥಳಗಳಲ್ಲಿ ಇಂತಹ ಗಿಡಮೂಲಿಕೆಗಳು ಕಂಡು ಬರುವುದಿಲ್ಲ ಅನ್ನೋದು ಆಶ್ಚರ್ಯದ ಸಂಗತಿ!!

ಆದರೆ, ಶ್ರೀಲಂಕಾದಲ್ಲಿರುವ ಆ ಪರ್ವತದಲ್ಲಿ ಕಂಡುಬಂದಿರುವ ಜೌಷಧಿಯ ಗಿಡಮೂಲಿಕೆಗಳು, ಕಂಡು ಬಂದಿರುವುದು ಮಾತ್ರ ಹಿಮಾಲಯದಲ್ಲ್ರಿ!! ಆದರೆ, ಹನುಮಂತ ಹಾಗೂ ಸಂಜೀವಿನಿ ಪರ್ವತದ ಬಗ್ಗೆ ಅದೆಷ್ಟೋ ಊಹಾಪೋಹಗಳು ಕಂಡು ಬಂದಿರುವುದು ನಮೆಗೆಲ್ಲರಿಗೂ ತಿಳಿದ ವಿಚಾರ. ಅದೇನೆಂದರೆ, ಸಂಜೀವಿನಿ ಪರ್ವತವನ್ನು ತಂದಿದ್ದ ಹನುಮಂತನಿಗೆ, ಸಂಜೀವಿನಿ ಗಿಡ ಯಾವುದೆಂದು ಗೊತ್ತಾಗದೇ ಈಡೀ ಪರ್ವತವನ್ನೇ ಹೊತ್ತುಕೊಂಡು ಬಂದ ಎಂದು ಅದೆಷ್ಟೋ ಜನರು ಸುದ್ದಿ ಹಬ್ಬಿಸಿದ್ದಾರೆ. ಆದರೆ ಅದರ ಹಿಂದಿರುವು ಸತ್ಯವನ್ನು ಮಾತ್ರ ಜನ ತಿಳಿದುಕೊಂಡಿಲ್ಲ ಅನ್ನೋದೇ ವಿಪರ್ಯಾಸ!!

ಯಾವಾಗ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು, ಹಾರಿ ಬಂದಾಗ ಅದೆಷ್ಟೋ ಜೌಷಧಿಯ ಗಿಡದ ಬೀಜಗಳು ಬೇರೆ ಬೇರೆ ಜಾಗದಲ್ಲಿ ಬೀಳುತ್ತಾ ಹಲವು
ಜಾಗದಲ್ಲಿ ಕೆಲವೊಂದು ಜೌಷದೀಯ ಸಸ್ಯಗಳು ಬೆಳೆದವು!! ದೇಶದ ಜನರಿಗೆ ರೋಗದಿಂದ ಮುಕ್ತಿಸಿಗಲಿ ಎನ್ನುವ ಹನುಮಂತ ಮಾಡಿರುವ ಯೋಚನೆಯಿಂದ, ಕೆಲ ಔಷಧಿ ಸಸ್ಯಗಳು ನಮಗೆ ಸುಲಭವಾಗಿ ಸಿಗುವಂತಾಗಿದೆ!! ಹೀಗಿರಬೇಕಾದರೆ, ಮಹಾಜ್ಞಾನಿಯಾದ ಹನುಮಂತನಿಗೆ ಕೇವಲ ಮರುಜೀವಗೊಳಿಸುವ ಜೌಷಧಿ ಸಸ್ಯ ಯಾವುದೆಂದು ಆತ ಗೊತ್ತಿರಲಿಲ್ಲವೇ?? ಆದರೆ ಆತನ ಹಿಂದಿರುವ ಯೋಚನೆ ಮಾತ್ರ ಲೋಕೋದ್ಧಾರಕ್ಕೆ ಎನ್ನುವುದನ್ನು ನಾವು ಮರೆತ್ತಿದ್ದೇವೆ!!

ಇತ್ತೀಚೆಗೆ ಉತ್ತರಾಖಂಡ ಸರಕಾರವು ತನ್ನ ವಿಜ್ಞಾನಿಗಳನ್ನು ಬೆನ್ನಿಗೆ ಕಟ್ಟಿಕೊಂಡು 150 ಕೋಟಿ ರೂಪಾಯಿಗಳ ಸಂಶೋಧನಾ ಅನುದಾನಕ್ಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆ ಇಟ್ಟಿದೆ. ವಾಸ್ತವದಲ್ಲಿ, ಕಳೆದ ಹಲವು ದಶಕಗಳಿಂದ ಸಂಜೀವಿನಿ ಹುಡುಕಾಟದ ಪ್ರಯತ್ನಗಳು ನಡೆಯುತ್ತಲೇ ಇವೆ. ಸೋಮರಸದ ತಯಾರಿಕೆಗೆ ಉಪಯೋಗಿಸಿರಬಹುದಾದ ಹಲವು ಸಸ್ಯಗಳನ್ನು ವಿಜ್ಞಾನಿಗಳು ಈಗಾಗಲೇ ಹುಡುಕಿ ತೆಗೆದಿದ್ದಾರೆ!! ಅಷ್ಟೇ ಅಲ್ಲದೇ, ಸೌಗಂಧಿಕಾ ಪುಷ್ಪದ ಬಗ್ಗೆಯೂ ಅವರಿಗೆ ಈಗಾಗಲೇ ಸೂಚನೆಗಳು ಸಿಕ್ಕಿವೆ. ರಾಮಾಯಣ ಕಾಲದಲ್ಲಿರಬಹುದಾಗಿದ್ದ ಬಹುಪಾಲು ಸಸ್ಯಗಳ ಬಗ್ಗೆಯೂ, ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಬಲೆಬೀಸಿ ಹುಡುಕಿದ್ದಾರೆ. ಇತ್ತೀಚೆಗೆ ಸಂಜೀವಿನಿಯೂ ಕೂಡ ಅವರ ಹುಡುಕಾಟದ ಬಲೆಗೆ ಸಿಕ್ಕಿಹಾಕಿಕೊಂಡಿದೆ!!!

ಮರುಜೀವ ಪಡೆಯಬಲ್ಲ ಸಸ್ಯಗಳಿಗೆ ಹುಡುಕಾಟ ನಡೆಸಿದಾಗ ವಿಜ್ಞಾನಿಗಳಿಗೆ ದೊರತದ್ದು ಕೇವಲ ಎರಡು! ಆ ಪೈಕಿ ಒಂದು, “ಸಂಜೀವಿನಿ ಬೂಟಿ” ಎಂದು
ಕರೆಯಲಾಗುವ ಗರಿಗಿಡ. ಸಸ್ಯಶಾಸ್ತ್ರಜ್ಞರು ಸೆಲಾಜಿನೆಲ್ಲ ಬ್ರೈಯೋಪ್ಟರಿಸ್ ಎಂದು ಕರೆಯುವ ಈ ಸಸ್ಯವು ಭಾರತದ ಹಲವು ಪರ್ವತ ಪ್ರದೇಶಗಳಲ್ಲಿ ದೊರೆಯುತ್ತದೆ. ಎರಡನೆಯದು, ಡೆಸ್ಮೋಟ್ರಿಕಿಯಮ್ ಫಿಂಬ್ರಿಯಾಟಮ್ ಎಂಬ ಶೀತಾಳೆ ಗಿಡ. ತನ್ನ ಬುಡದಲ್ಲಿ ನೀರನ್ನು ಹೀರಿ ಹಿಡಿದುಕೊಳ್ಳಬಲ್ಲ ಬುಡ್ಡೆಯನ್ನು ಹೊಂದಿರುವ ಈ ಶೀತಾಳೆ ಗಿಡವು ಸಹ ಭಾರತದ ಪರ್ವತ ಪ್ರದೇಶಗಳಲ್ಲಿ ದೊರೆಯುತ್ತಿದೆ!! ಆದರೆ ಇಂತಹ ಅದೆಷ್ಟೋ ಜೌಷಧಿಯ ಗಿಡಗಳು ನಮ್ಮ ಸತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕಂಡುಬರುವ ಸಾಧ್ಯತೆ ಇದೆ ಎನ್ನುವುದು ಸತ್ಯ!!

-ಅಲೋಖಾ

 

Tags

Related Articles

Close