ಅಂಕಣಪ್ರಚಲಿತ

ವೀರಶೈವ ಲಿಂಗಾಯತ ಹೆಸರಿನಲ್ಲಿ ಧರ್ಮವನ್ನು ಒಡೆಯುವ ಕಾಂಗ್ರೆಸ್ಸಿನ ಎಂ.ಬಿ.ಪಾಟೀಲನಿಗೆ ಸಿದ್ದಗಂಗಾ ಶ್ರೀಗಳಿಂದ ಮಂಗಳಾರತಿ!!! ರೊಚ್ಚಿಗೆದ್ದ ಸೋಮಣ್ಣ!

“ಆತ್ಮೀಯ ಪ್ರಜೆಗಳೇ, ನಿಮಗೆ ಏನು ಬೇಕು?”

“ಒಡೆಯ, ನಮಗೇನು ಬೇಡ. ಒಂದು ಪ್ರತ್ಯೇಕ ಧರ್ಮದ ಸ್ಥಾನ ಬೇಕು.”

“ಅದಷ್ಟು ಸುಲಭವಿಲ್ಲ. ಗಲಭೆಗಳಾದಾವು, ಗಲಾಟೆಗಳಾಗಬಹುದು. ಆದರೂ ಪರವಾಗಿಲ್ಲ. ನಮಗೆ ನೀವು, ನಿಮ್ಮ ಮತ ತಾನೆ ಬಹುಮುಖ್ಯ. ಮುಂದಿನ ಬಾರಿಯೂ ನಮ್ಮ ಜತೆಗೆ ನೀವು ಇರುತ್ತೀರೆಂಬ ಆಶಾಭಾವನೆಯಲ್ಲಿದ್ದೇವೆ ನಾವು. ನಿಮಗೆ ಸಹಕಾರ ಕೊಟ್ಟ ನಂತರ ನಮ್ಮನ್ನು ತಳ್ಳಬೇಡಿ ಅಷ್ಟೇ.”

“ಖಂಡಿತ ಸ್ವಾಮೀ..ನಮ್ಮ ಬೇಡಿಕೆಯನ್ನು ಈಡೇರಿಸಿ.”

ಮಿತ್ರರೇ.. ಇದು ಯಾರದ್ದೋ ಸಂಭಾಷಣೆಗಳೆಂದುಕೊಳ್ಳಬೇಡಿ. ಪ್ರಸ್ತುತ ಸರಕಾರಕ್ಕೆ ಹಾಗೂ ಕೆಲವು ಧರ್ಮದ ಬಿರುಕಿಗೆ ಕಾಯುತ್ತಿರುವ ಮತಾಂಧರಿಗೂ ನಡುವೆ ನಡೆಯುತ್ತಿರುವ ಮಾತುಕತೆಗಳು. ಯಾವ ಯೋಜನೆಗಳಿಂದ ತಮ್ಮ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳು ಸಿಗಬಹುದೋ ಆ ಕಾರ್ಯ ಮಾಡಲು ಸಿದ್ಧ. ಗೊತ್ತಿರಲಿ. ಸಮಾಜಕ್ಕೆ ಪೂರಕವಾದಂತಹ ಯೋಜನೆಗಳು ಅಲ್ಲವೇ ಅಲ್ಲ. ಅದೇ ರೀತಿಯಾಗಿ ಈಗ ಧರ್ಮ ಸ್ಥಾಪನೆ ವಿಷಯ. ಹಿಂದೂ ಧರ್ಮದಲ್ಲಿಯೇ ಒಂದಾಗಿದ್ದ ಲಿಂಗಾಯತ-ವೀರಶೈವರನ್ನು ಒಡೆಯಲು ಸದಾ ಪ್ರೇರಣೆ ಕೊಡುತ್ತಿದೆ ಮತಾಂಧ ಸರಕಾರ. ಎಲ್ಲಿ ಸಮಾಜದ ಬಿರುಕು ಮೂಡಿಸಲು ಅವಕಾಶವಿದೆಯೋ ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಿದೆ. ಜಾತಕ ಪಕ್ಷಿ ತರಹ!!

ಎಂ ಬಿ ಪಾಟೀಲರೇ , ಏನಿದು ನಿಮ್ಮ ಮರ್ಮ-ಕರ್ಮ !!

ಲಿಂಗಾಯತ ಧರ್ಮದ ಕುರಿತಾಗಿ ಅನೇಕ ವಿವಾದಗಳು ಕರ್ನಾಟಕದಾದ್ಯಂತ ವಿವಾದ ಹಬ್ಬಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಆದರೆ ದುರಂತದ ವಿಚಾರ ಕೇಳಿ. ಲಿಂಗಾಯತ ಧರ್ಮ ಒಡೆಯುವ ವಿಚಾರದ ಕುರಿತಾಗಿ ಸದಾ ವಿರೋಧಿಸಿದ್ದವರು ಸಿದ್ದಗಂಗಾ ಶ್ರೀಗಳು. ಆದರೆ ಎಂ ಬಿ ಪಾಟೇಲರು, “ಲಿಂಗಾಯತ ಹಾಗೂ ವೀರಶೈವ ಧರ್ಮಗಳು ಬೇರ್ಪಡಿಸಬೇಕು, ಅದಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಸಿಗಬೇಕು ಎಂಬುಧಾಗಿ ಸಿದ್ದಗಂಗಾ ಶ್ರೀಗಳು ಹೇಳಿದ್ದಾರೆ” ಅನ್ನುವ ಹೇಳಿಕೆಯನ್ನು ಕೊಟ್ಟರು. ಆದರೆ ಸಿದ್ದಗಂಗಾ ಶ್ರೀಗಳ ವತಿಯಿಂದ ಬಂದ ಅಧಿಕೃತ ಮಾಹಿತಿಗಳ ಪ್ರಕಾರ,” ಅವರು ಈ ರೀತಿಯಾಗಿ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ. ಸ್ವತಃ ಧರ್ಮ ಸ್ಥಾಪನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ” ಎಂಬುದಾಗಿ ಮಾಧ್ಯಮಗಳಿಗೂ ಮಾಹಿತಿಯನ್ನು ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದಗಂಗಾ ಶ್ರೀಗಳೇ ಸುಳ್ಳು ಹೇಳುತ್ತಿದ್ದಾರೆಂಬ ದೂರು!! ತಾನು ತನ್ನ ಕುಟುಂಬದ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂಬ ಸಮರ್ಥನೆ ಪಾಟೀಲರದ್ದು.

ಇದೇ ವಿಚಾರದ ಕುರಿತಾಗಿ ಸಿಡಿದೆದ್ದ ಸೋಮಣ್ಣ, ಪಾಟೀಲರು ಚುನಾವಣೆಯ‌ ಗಿಮಿಕ್ ಪ್ರಾರಂಭಿಸಿದ್ದಾರೆ. ಸಮಾಜ‌ ಒಡೆಯುವ ಹುನ್ನಾರವನ್ನು ನಾವು ಸಹಿಸಲು
ಸಾಧ್ಯವೇ ಇಲ್ಲವೆಂದಿದ್ದಾರೆ!!

ನೀರಾವರಿ ಸಚಿವರೇ, ನಿಮ್ಮ ಮರ್ಮವೇನು, ನಿಮ್ಮ ಕರ್ಮವೇನು??

* ಎಂ. ಬಿ ಪಾಟೀಲರೇ, ನಿಮ್ಮ ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಹುನ್ನಾರಕ್ಕೆ ಮುನ್ನುಡಿಯಿಟ್ಟರೇ?

* ನಡೆದಾಡುವ ದೇವರೆಂದೇ ಕರೆಯಲಾಗುತ್ತಿರುವ ಸಿದ್ದಗಂಗಾ ಶ್ರೀಗಳೇ ಸುಳ್ಳು ಹೇಳುತ್ತಿದ್ದಾರೆಂಬುದಾಗಿ ದೂರಿದ ನಿಮಗೆ ಸಂತರ ಮೇಲೆ ಅದೆಷ್ಟು
ಅಭಿಮಾನವಿದೆ??

* ಕಳೆದ 4 ವರ್ಷಗಳಲ್ಲಿ ಇಲ್ಲದ ಲಿಂಗಾಯತ ಪ್ರೇಮ, ಚುನಾವಣಾ ಸಮಯದಲ್ಲೇ ಉದಯವಾಗಲು ಕಾರಣವೇನು?? ನಿಮ್ಮ ವಿರೋಧ ಪಕ್ಷದ ನಾಯಕರು
ಲಿಂಗಾಯತರೆಂದೇ??

* ಕೇವಲ 5 ವರ್ಷಗಳಿಗೊಮ್ಮೆ ಬರುವ ತಾತ್ಕಾಲಿಕ ಚುನಾವಣೆಗೋಸ್ಕರ ಶಾಶ್ವತವಾಗಿ ಸಮಾಜದ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡುತ್ತಿರುವ ನೀವು ಯಾವ ರೀತಿಯಾದ ಜನನಾಯಕ ಪಾಟೀಲರೇ??

ಕಾಂಗ್ರೆಸ್ ಲಿಂಗಾಯತರನ್ನು ಬೇರ್ಪಡಿಸಲು ಕಾರಣವೇನು ಗೊತ್ತೇ?? ಅದರ ಹಿಂದಿದೆ ಬಹಳ ದೊಡ್ಡ ಗಿಮಿಕ್ !!

ಹಿಂದೂ ತತ್ವ-ಚಿಂತನೆಗಳಲ್ಲಿ ಒಂದಾಗಿದ್ದ ಬಸವಣ್ಣನವರ ಚಿಂತನೆಗಳು , ನಂತರ ಪ್ರತ್ಯೇಕತೆಗಾಗಿ ಕೂಗು ಬರಲು ಪ್ರಾರಂಭವಾಯಿತು. ಇದು ಅಂದಿನ ಕಾಲದ ಕೂಗೇ ??? ಖಂಡಿತಾ ಅಲ್ಲ. ಇತ್ತೀಚೆಗಿನ ಹಲವು ವರ್ಷಗಳ್ಲಿ ಆದ ಬದಲಾವಣೆಗಳಿವು. ನಾವು ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವಿದೆ. ಆ ಸಮುದಾಯದ ಎಲ್ಲರೂ ಇಟ್ಟರುವ ಬೇಡಿಕೆಯಲ್ಲವಿದು. ಕೆಲವು ಹಿತಾಸಕ್ತಿಯನ್ನು ಬಯಸಿರುವವರು ಇಟ್ಟಿರುವ ಬೇಡಿಕೆಗಳಿವು. ಲಿಂಗಾಯತರು ದೇಶಾದ್ಯಂತ ವ್ಯಾಪಿಸಿದರೂ ಅತಿ ಹೆಚ್ಚು ಶೇಖಡ ಕರ್ನಾಟಕದಲ್ಲಿಯೇ ವಾಸವಾಗಿದ್ದಾರೆ. ಕರುನಾಡ ರಾಜ್ಯದ ಶೇಖಡ 17% ಜನರು ಲಿಂಗಾಯತ ವರ್ಗಕ್ಕೆ ಸೇರಿದವರು. ಲಿಂಗಾಯತ ಹಾಗೂ ವೊಕ್ಕಲಿಗ – ಈ ಎರಡು ಸಮುದಾಯಗಳು ಕರುನಾಡನ್ನು ಆಳುತ್ತಿವೆ ಎಂದರೆ ತಪ್ಪಾಗದು. ಹಾಗಾಗಿ ಯಾವ ಸಮುದಾಯದ ಬೇಡಿಕೆಗಳನ್ನು ಈಡೇರಿಸಿದರೆ ಮುಂದಿನ ಚುನಾವಣೆಗೆ ಲಾಭವಾಗುತ್ತದೆ ಅನ್ನುವ ಲೆಕ್ಕಾಚಾರದಲ್ಲಿಯೆ ಸರ್ಕಾರಗಳು ಯೋಚಿಸುತ್ತಿರುವಂತಿದೆ. ಒಂದು ಸಮಾಜವನ್ನು ಒಟ್ಟುಗೂಡಿಸಬೇಕಾದ ಸರ್ಕಾರ ಇವರ ಬೇಡಿಕೆಯನ್ನು ವಿಮರ್ಶಿಸುವ ಕಾರ್ಯಕ್ಕೆ ಮುಂದಾಯಿತು. ಅವರ ಸಮುದಾಯದ ಕೆಲವರ ವಿರೋಧದ ನಡುವೆಯೆ. ಇದುವೆ ಬಹಳ ಅಚ್ಚರಿಯ ಸಂಗತಿ. ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಇದರ ಕುರಿತಾಗಿ ಬಹಳಷ್ಟು ಮುತುವರ್ಜಿಯನ್ನು ವಹಿಸುತ್ತಿದೆ. ಕಾರಣ ಮೊದಲಿನ ಕಾಲದಲ್ಲಿ ಇದ್ದಷ್ಟು ಲಿಂಗಾಯತರ ಒಲವು ಈಗ ಸಿಕ್ಕುತ್ತಿಲ್ಲ. ಅದಕ್ಕೂ ಒಂದು ಪ್ರಬಲವಾದ ಕಾರಣವಿದೆ.

ಕರ್ಣಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿತ್ತು. 20ನೆಯ ಶತಮಾನದ ಅಂತ್ಯದ ಸಂದರ್ಭದಲ್ಲಿ. ಆ ವೀರೇಂದ್ರ ಪಾಟೀಲ್ 1989 ರಲ್ಲಿ
ಚುನಾವಣೆಯ ನೇತೃತ್ವ ವಹಿಸಿದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು. ತಮ್ಮ ಸಂಪುಟದಲ್ಲಿ 17 ಜನರಿದ್ದರು. ತಮ್ಮ ಸ್ವ-ಸಾಮಥ್ರ್ಯದಿಂದ 177 ಜನರನ್ನು ತಮ್ಮ ಸಂಪುಟಕ್ಕೆ ಸೇರಿಸುವಲ್ಲಿ ಅವರು ಯಶಸ್ಸನ್ನು ಕಂಡರು. 1989 ರ ಚುನಾವಣೆಯಲ್ಲಿ
ಅಭುತಪೂರ್ವವಾದ ಗೆಲುವನ್ನೂ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಕಂಡಿತು. ಎಲ್ಲಾ ಗ್ರಾಮಗಳಿಗೂ ನೀರು ಹಾಗು ಸಾರಿಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತಿದ್ದರು. ಮಧ್ಯಕ್ಕೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಸರ್ಕಾರದ ಖಜಾನೆಯನ್ನು ತುಂಬಿಸುವಲ್ಲಿಯೂ ಯಶ ಕಂಡರು. 1990 ರಲ್ಲೆ ಕೋಮುಗಲಭೆಯು ರಾಜ್ಯದಲ್ಲಿ ವಿಪರೀತವಾಗಿ ನಡೆದುಹೋಯಿತು .ಆದರೆ ಆ ಸಮಯಕ್ಕೆ ಅದೇ ಪಕ್ಷದಲ್ಲೆ ಇದ್ದ ಕೆಲವು ಅತೃಪ್ತರು ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರಿಗೆ, ಶ್ರೀ ಪಾಟೀಲ್‍ರು ಕೋಮುಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಕೆಳಗಿಸುವಂತೆ ದೂರನ್ನು ಕೊಟ್ಟರು. ಈ ಅತೃಪ್ತರ ದೂರನ್ನು ಪರಿಗಣಿಸಿ ಅವರನ್ನು ಕೆಳಗಿಳಸಲಾಯಿತು. ಅಲ್ಲಿಗೆ ಬಹಳಷ್ಟು ಹೆಸರನ್ನು ಪಡೆದಿದ್ದ ಪಾಟೀಲರು ಜವಾಬ್ದಾರಿಯಿಂದ ಹೊರಗುಳಿದರು. ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಆ ಸಮುದಾಯದ ಶೇಕಡ 50% ಮತವನ್ನು ಕಳೆದುಕೊಳ್ಳಬೇಕಾಯಿತು. ಅದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಾಂಗ್ರೆಸ್ ಪಕ್ಷ ಅನುಭವಿಸಬೇಕಾಯಿತು.

ಈ ಹೊಡೆತವನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಸದಾ ಹವಣಿಸುತ್ತಿತ್ತು. ಈಗ ಲಿಂಗಾಯತರು ಹೊಸ ಧರ್ಮ ಬೇಡಿಕೆಯಿಟ್ಟಿರುವುದು ಅದಕ್ಕೆ ಪೂರಕವಾಗಿದೆ. ಕೆಲವರ ಮಾತನ್ನು ಕೇಳಿ ಒಂದು ಪಕ್ಷ ಮೂಢವಾಗುತ್ತಿದೆ. ಯಾಕೆಂದರೆ ಲಿಂಗಾಯತ ಸಮುದಾಯದ ದೊಡ್ಡ ಶಕ್ತಿಗಳಾದ ಸಿದ್ಧಗಂಗಾ, ಮುರುಘ ಮಠಗಳು ಹೊಸ ಧರ್ಮವನ್ನು ಸ್ಥಾಪಿಸಲು ವಿರೋಧಿಸಿವೆ. ಒಂದು ವೇಳೆ ಸರ್ಕಾರ ಇವರ ಮಾತುಗಳನ್ನು ಅಲ್ಲಗಳೆದು ಹೊಸ ಧರ್ಮಕ್ಕೇ ಮುಂದಾದರೆ ಮುಂದಿನ ಗಂಡಾಂತರದಿಂದ ಪಾರಾಗಲು ಸಾಧ್ಯವಿಲ್ಲ ಎನ್ನುವುದೂ ಅಲ್ಲಗಳೆಯಲಾಗದ ವಿಚಾರ.

ಬಸವಣ್ಣನವರು ಮಾನವ ಧರ್ಮ ಒಂದೇ ಎಂದು ಪ್ರತಿಪಾದಿಸಿದ್ದರು. ದಯೆಯೇ ಧರ್ಮದ ಮೂಲ ಎಂದಿದ್ದರು. ಆದರೆ ಈಗ ಹೊಸ ಧರ್ಮವೇ ಮುಖ್ಯ ಎಂದು
ಹವಣಿಸುತ್ತಿದೆ. ಆಗ ನಿಜವಾಗಿಯೂ ಬಸವಣ್ಣನವರ ತತ್ವ-ಚಿಂತನೆಯನ್ನು ಪ್ರತಿಪಾದಿಸಿದಂತೆ ಆಗುತ್ತದೆಯೇ ? ಯಾಕೆ ಇಷ್ಟು ಮೂಢರಾಗುತ್ತಿದ್ದಾರೆ ಎಲ್ಲಾ?? ಇಷ್ಟೆಲ್ಲಾ ಪ್ರಶ್ನೆಗಳು ಇದ್ದರೂ ನನ್ನನ್ನು ಪದೇ ಪದೇ ಕಾಡುವ ಮುಖ್ಯ ಪ್ರಶ್ನೆಯೊಂದಿದೆ.

ಯಾವುದು ಗೊತ್ತಾ??  “ಮಂಕು ಅಥವಾ ಮಂಜು ಕವಿದ ಮನಸ್ಸಿಗೆ ಬೆಳಕು ಕಾಣಿಸೀತೆ? ”

– ಶಂಕರ್ ಪಾಟೀಲ್⁠⁠⁠⁠

Tags

Related Articles

Close