ಪ್ರಚಲಿತ

ವೆಂಕಯ್ಯ ನಾಯ್ಡು ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ಉಗ್ರ ಯಾಕುಬ್ ಮೆಮೊನ್ ಬೆಂಬಲಿಸಿದ್ದ ಗೋಪಾಲ್ ಗಾಂಧಿಗೆ ಹೀನಾಯ ಸೋಲು

ವೆಂಕಯ್ಯ ನಾಯ್ಡು ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಯಾಕೂಬ್ ಮೆಮೊನ್ ನ ಕ್ಷಮಾಪಣೆಗೆ ಆಗ್ರಹಿಸಿದ್ದ ಗೋಪಾಲ್ ಗಾಂಧಿ ಹೀನಾಯವಾಗಿ ಸೋಲುಂಡಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ ಎರಡು ಸಿದ್ದಾಂತಗಳ ಮಧ್ಯೆ ಎಂಬುದಾಗಿ ಕಾಂಗ್ರೆಸ್ ಹೇಳಿತ್ತು. ಕೊನೆಯಲ್ಲಿ, ಮೋದಿ ಸಿದ್ಧಾಂತಗಳು ಮತ್ತೆ ಗೆಲುವಿನ ಪತಾಕೆ ಹಾರಿಸಿದೆ. ಈ ಚುನಾವಣೆ ನಿಜಕ್ಕೂ ಎರಡು ಸಿದ್ಧಾಂತಗಳ ಮಧ್ಯೆಯೇ ಎಂಬುದರಲ್ಲಿ ಸಂಶಯವಿಲ್ಲ. ಸೋನಿಯಾ ಗಾಂಧಿ ಯುಪಿಎ ಅಭ್ಯರ್ಥಿಯಾಗಿ ಯಾಕೂಬ್ ಮೆಮೊನ್ ಎಂಬ ಉಗ್ರನ ಪರವಾಗಿ ಕ್ಷಮಾ ಅರ್ಜಿಯನ್ನು ಸಲ್ಲಿಸಿದ್ದ ಗೋಪಾಲ್ ಗಾಂಧಿಯನ್ನು ಆಯ್ಕೆ ಮಾಡಿದ್ದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಎನ್ ಡಿಎ ಅಭ್ಯರ್ಥಿಯಾಗಿ ಭಾರತದ ಗೌರವವನ್ನು ಎತ್ತಿ ಹಿಡಿದಿದ್ದ ವೆಂಕಯ್ಯ ನಾಯ್ಡುವನ್ನು ಆಯ್ಕೆ ಮಾಡಿದ್ದರು.

ನಿರೀಕ್ಷಿಸಿದಂತೆ, ವೆಂಕಯ್ಯ ನಾಯ್ಡು  ಜಯಭೇರಿ ಬಾರಿಸಿದ್ದಾರೆ. ಮತ್ತೆ ಉನ್ನತಿಯೆಡೆಗೆ ಸಾಗುತ್ತಲಿರುವ ಭಾರತಕ್ಕೆ ಒಬ್ಬ ದಿಟ್ಟ ಉಪ ರಾಷ್ಟ್ರಪತಿಯ ಅಗತ್ಯವಿದೆಯೇ ಹೊರತು ಉಗ್ರರ ಬಗೆಗೆ ಮೃದುಭಾವ ಹೊಂದಿರುವವರ ಅಗತ್ಯವಿಲ್ಲವೆಂಬುದು ಸಾಬೀತಾಗಿದೆ!

ಈ ಚುನಾವಣೆ ಕೇವಲ ಮತಕ್ಕಾಗಿರದೇ ಒಬ್ಬ ದೇಶಭಕ್ತ ಹಾಗೂ ಉಗ್ರಭಕ್ತನ ಮಧ್ಯೆ ನಡೆವ ಯುದ್ಧವೆಂದೇ ಹೇಳಬಹುದಾಗಿದೆ!
ಶೇಕಡವಾರು 98.21% ಮತ್ತು 785 ಕ್ಕೆ 771 ಮತಗಳು ದಾಖಲಾಗಿವೆ. ನಾಯ್ಡುರವರು  ಮುಂಚೆಯಿಂದಲೂ ಆತ್ಮವಿಶ್ವಾಸದಿಂದಲಿದ್ದರು ಹಾಗೂ ಗಾಂಧಿ ಪ್ರಾರಂಭದಿಂದಲೂ ಹಗರಣಗಳ ಮಧ್ಯೆಯೇ ಕೂರುವಂತಾಗಿತ್ತು.

ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ಹಮೀದ್ ಅನ್ಸಾರಿಯವರ ಅವಧಿ ಆಗಸ್ಟ್ 10 ಕ್ಕೆ ಮುಗಿದ ನಂತರ ನಾಯ್ಡುರವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮತ ಹಾಕದವರಾರು?!
ಬಿಜೆಪಿ ನಾಯಕರಾದ ಸನ್ವರ್ಲಾಲ್ ಜಾಟ್ ಹಾಗೂ ವಿಜಯ್ ಗೋಯೆಲ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಕಾರಣ ಮತ ಹಾಕಲು ಸಾಧ್ಯವಾಗಿಲ್ಲ. ಒಟ್ಟಾರೆ 14 ಎಮ್ ಪಿ ಮತ ಹಾಕಲು ಸಾಧ್ಯವಾಗಿಲ್ಲ. ಪಕ್ಷಾವಾರು ಭಾಗಿಯಾಗದೇ ಇರುವವರು ಬಿಜೆಪಿ – 2, ಐಎನ್ ಸಿ – 2, ಐಯುಎಮ್ ಎಲ್ – 2, ಟಿಎಮ್ ಸಿ – 4, ಎನ್ ಸಿ ಪಿ – 1, ಪಿಎಮ್ ಕೆ – 1 ಮತ್ತು ಪಕ್ಷೇತರ – 2.

ಪ್ರಾರಂಭದಿಂದಲೂ ಮುಂಚೂಣಿಯಲ್ಲಿದ್ದ ನಾಯ್ಡುರವರು ಕೊನೆಯಲ್ಲಿ 516 ಮತಗಳನ್ನು ಪಡೆದರೆ, ಗೋಪಾಲ ಗಾಂಧಿ 244 ಮತಗಳಿಗೆ ತೃಪ್ತಿ ಪಟ್ಟಿದ್ದಾರೆ.

ಅಲ್ಲದೇ, ಸೋನಿಯಾ ಬೆಂಬಲಿಗರು ಕೂಡ ಈ ಚುನಾವಣೆಯಲ್ಲಿ ನಾಯ್ಡುರವರಿಗೆ ಬೆಂಬಲ ಸೂಚಿಸಿ ಮತ ನೀಡಿದ್ದಾರೆ. ಮುಂಚೆಗಿಂತಲೂ ಹತ್ತರಷ್ಟು ಮತ ಪಡೆಯಬೇಕೆಂದಿದ್ದ ಕಾಂಗ್ರೆಸ್ ಗೆ ಆಘಾತವಾಗಿದೆ. ಒಟ್ಟಾರೆ ಕಾಂಗ್ರೆಸ್ ನಿಂದ 19 ಮತಗಳು ನಾಯ್ಡು ರವರ ಪಾಲಾಗಿವೆ.

ಈ ಗೆಲುವು ಸೋನಿಯಾ ಸರ್ವಾಧಿಕಾರತ್ವದ ಬಗೆಗಿನ ತಾತ್ಸಾರ ಹಾಗೂ ಮೋದಿ ಅಲೆಯ ಸಂಪೂರ್ಣ ಚಿತ್ರಣ ಎನ್ನುವುದರಲ್ಲಿ ಸಂಶಯವಿಲ್ಲ. ಒಬ್ಬ ದೇಶಭಕ್ತನನ್ನು ಆದರಿಸಿ ಬೆಂಬಲಿಸಿರುವುದು ನಿಜಕ್ಕೂ ಅಚ್ಛೇ ದಿನ್ ನ ಆರಂಭದ ಲಕ್ಷಣ!

-Saptharshi

Tags

Related Articles

Close