ಜಿಲ್ಲಾ ಸುದ್ದಿಪ್ರಚಲಿತ

ಶರತ್ ಮಡಿವಾಳ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನ!!! ಪೊಲೀಸರು ಕುರಾನ್ ಎಸೆದು, ಮದ್ರಸಾ ಪುಸ್ತಕಗಳನ್ನು ಹರಿದರಂತೆ!! ಹಿಂದಿನ ಹಿಡನ್ ಅಜೆಂಡಾ ಏನು ಗೊತ್ತಾ?

ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರನ್ನು ಇಸ್ಲಾಂ ಮೂಲಭೂತವಾದಿಗಳು ಕೊಲೆ ನಡೆಸಿದ್ದಾರೆ. ಆರೋಪಿಗಳ ಬಂಧನವೂ ನಡೆದಿದೆ. ಒಬ್ಬ ವ್ಯಕ್ತಿ ತಪ್ಪು
ಮಾಡಿದರೆ ಆತನನ್ನು ಸಮರ್ಥನೆ ಮಾಡಲು ಇಸ್ಲಾಂನ ನಂಬಿಕೆ, ಗ್ರಂಥ ಇತ್ಯಾದಿಗಳನ್ನು ಮುಂದಕ್ಕೆ ತರಲಾಗುತ್ತದೆ. ಇಸ್ಲಾಂ ಎಂಬ ಹೆಸರೆತ್ತಿದಾಗ ಎಲ್ಲಾ ಮುಸ್ಲಿಮರು ಒಂದಾಗುತ್ತಾರೆ ಎಂಬ ಕಾರಣಕ್ಕೆ ಆತ ಎಷ್ಟೇ ಪಾಪಿಯಾಗಿದ್ದರೂ ಆತನಿಗೆ ಬೆಂಬಲ ನೀಡುತ್ತಾರೆ. ಇದೇ ರೀತಿ ಈಗ ಶರತ್ ಮಡಿವಾಳ ಹಂತಕರನ್ನು ಪೊಲೀಸರು ವಿಚಾರಣೆ ನಡೆಸದಂತೆ ಕಟ್ಟಿ ಹಾಕುವ ಸಲುವಾಗಿ ಮತ್ತೆ ಇಲ್ಲಿ ಇಸ್ಲಾಂ ಗ್ರಂಥವನ್ನು ಮುಂದಕ್ಕೆ ತರಲಾಗಿದೆ. ಇದು ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಕುತಂತ್ರವಾಗಿದ್ದು, ಇಸ್ಲಾಂ ಅಜೆಂಡಾ ಎನ್ನುವುದರಲ್ಲಿ ಎರಡು ಮಾತಿಲ್ಲ.

ಶರತ್ ಮಡಿವಾಳ ಹತ್ಯೆಯಿಂದಾಗಿ ಇಡೀ ಜಿಲ್ಲೆಯಲ್ಲೇ ಆಕ್ರೋಶ ವ್ಯಕ್ತವಾಗಿತ್ತು. ಸಾವಿರಾರು ಮಂದಿ ಹಿಂದೂಗಳು ಬೀದಿಗೆ ಬಂದು ಹೋರಾಟ ನಡೆಸಿದ್ದರು.
ಶವಯಾತ್ರೆಯ ಸಂದರ್ಭ ಮುಸ್ಲಿಂ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಕೋಮುಗಲಭೆ ನಡೆಸಲು ವ್ಯವಸ್ಥಿತ ಪಿತೂರಿಯನ್ನು ನಡೆಸಿದ್ದರು. ಮುಸ್ಲಿಂ ಕಿಡಿಗೇಡಿಗಳು ಮಸೀದಿಯ ಹಿಂದೆ ನಿಂತು ಕಲ್ಲು ತೂರಾಟ ನಡೆಸಿರುವುದನ್ನು ಕೆಲವರು ವೀಡಿಯೋ ಮಾಡಿಕೊಂಡು ವಾಟ್ಸಾಪ್‍ನಲ್ಲಿ ಹರಿಯಬಿಟ್ಟಿದ್ದರು. ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಶರತ್ ಮಡಿವಾಳ ಹತ್ಯೆಯ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಬೇಕಾಗಿದೆ. ಹತ್ಯೆ ಆರೋಪಿಗಳೆಲ್ಲಾ ಪಿಎಫ್‍ಐ ಕಾರ್ಯಕರ್ತರೆಂಬುವುದನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಾವೆಲ್ಲಾ ಸುಮ್ಮನಾಗುತ್ತೇವೆ. ಆದರೆ ಯಾವುದೇ ಪ್ರಕರಣ ಸಾಬೀತಾಗಬೇಕಾದರೆ ಪೊಲೀಸರು ವಿಚಾರಣೆ ನಡೆಸಿ ಕೊಲೆಗೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆಗ ಮಾತ್ರ ಒಬ್ಬ ಅಪರಾಧಿಗೆ ಶಿಕ್ಷೆಯಾಗಲು ಸಾಧ್ಯ. ಸರಿಯಾದ ದಾಖಲೆ, ಸಾಕ್ಷಿ ಕೊಡದೇ ಹೋದರೆ ಆ ಪ್ರಕರಣ ಬಿದ್ದು ಹೋಗಿ ಅಪರಾಧಿ ಆರೋಪ ಮುಕ್ತನಾಗಿ ರಾಜಾರೋಷವಾಗಿ ತಿರುಗುತ್ತಾನೆ. ಇದೇ ರೀತಿ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲೂ ನಡೆಸಿ ಆರೋಪಿಗಳನ್ನು ಆರೋಪಮುಕ್ತವನ್ನಾಗಿಸುವ ಇಸ್ಲಾಂ ಅಜೆಂಡಾವೊಂದು ವ್ಯವಸ್ಥಿತವಾದ ಸಂಚನ್ನು ನಡೆಸುತ್ತಿದೆ. ಈ ಸಂಚನ್ನು ಬಯಲುಗೊಳಿಸುವುದೇ ನಮ್ಮ ಉದ್ದೇಶ.

ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ಪಿಎಫ್‍ಐ ಮುಖಂಡರಾದ ಅಬ್ದುಲ್ ಶಾಫಿ, ಖಲೀಲುಲ್ಲಾ, ರಿಯಾಝ್ ಪಾರಂಕಿ, ಸಿದ್ದಿಕ್ ನೆಲ್ಯಾಡಿ, ಖಲೀಮ್ ಅಲಿಯಾಸ್
ಖಮೀಲುಲ್ಲಾ, ರಹೀಂ ಅಲಾಡಿ, ಸಿದ್ದಿಕ್ ಪಾಶಾ, ಸಲೇನಾ ಅಲಿಯಾಸ್ ಸ್ವಲೇಹ್ ಮುಂತಾದವರನ್ನು ಬಂಧಿಸಲಾಗಿದೆ. ಜುಲೈ 4ರಂದು ಹಂತಕರ ಪಡೆಯೊಂದು ಶರತ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಅಟಕಾಯಿಸಿ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಆದರೆ ಎರಡು ದಿನಗಳ ಬಳಿಕ ಶರತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪೊಲೀಸರು ಆರೋಪಿಗಳನ್ನು ಬಂಧಿಸಿ ತಮ್ಮ ವಿಚಾರಣೆ ನಡೆಸುತ್ತಾರೆ, ಅವರಿಗೆ ಶಿಕ್ಷೆಯಾಗುತ್ತದೆ ಎಂದೆಲ್ಲಾ ನಾವು ಯೋಚಿಸಿ ಸುಮ್ಮನಾಗುತ್ತೇವೆ. ಆದರೆ ನಮ್ಮ ಯೋಚನೆಯೇ ತಪ್ಪು. ಯಾಕೆಂದರೆ ಪೊಲೀಸರು ಸರಿಯಾಗಿ ವಿಚಾರಣೆ ನಡೆಸದಂತೆ ತಡೆಯಲು ಇನ್ನಿಲ್ಲದ ಪ್ರಯತ್ನವನ್ನು ನಡೆಸಲಾಗುತ್ತದೆ. ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿ ಅವರಿಗೆ ಪೂರಕ ಸಾಕ್ಷಿ ಸಿಗದಂತೆ, ಅವರ ಮೇಲೆ ಒತ್ತಡ ಹಾಕಿ, ಪ್ರಕರಣ ದಾಖಲಾಗುವಂತೆ ಮಾಡಿ ವಿಚಾರಣೆಯಿಂದ ವಿಮುಖರನ್ನಾಗಿಸಲು ವ್ಯವಸ್ಥಿತ ಸಂಚು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಅದ್ಯಾವುದು ಗೊತ್ತಾ…? ಪೊಲೀಸರು ಕುರಾನ್ ಎಸೆದು, ಪುಸ್ತಕ ಹರಿದು ದಾಂಧಲೆ ನಡೆಸಿದರಂತೆ…. ಇಂಥದೊಂದು ಕಟ್ಟುಕತೆಯನ್ನು ಹೆಣೆದು ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ.

ಬಂಟ್ವಾಳದ ಸಜಿಪಮುನ್ನೂರು ಗ್ರಾಮದ ಪಣೋಲಿಬೈಲ್ ನಿವಾಸಿ ಖಲಂದರ್ ಎಂಬಾತ ಶರತ್ ಹತ್ಯಾ ಪ್ರಕರಣದ ಪ್ರಧಾನ ಆರೋಪಿಯಾಗಿದ್ದು, ಈತ
ತಲೆಮರೆಸಿಕೊಂಡಿದ್ದಾನೆ. ಈತನ ಮನೆಗೆ ಬಂದು ಪೊಲೀಸರು ವಿಚಾರಣೆ ನಡೆಸಿದರೆ ಆತನ ಮನೆಯವರು ಮಾತ್ರ ಆರೋಪಿಸುವುದೇ ಬೇರೆ. ಪೊಲೀಸರ ತಂಡ ಕುರಾನ್ ಎಸೆದು, ಮದ್ರಸ ಪುಸ್ತಕಗಳನ್ನು ಹರಿದು ದಾಂಧಲೆ ನಡೆಸಿದೆ ಎಂಬ ಆರೋಪ ಮಾಡುತ್ತಾರೆ.

ಬಂಟ್ವಾಳ ನಗರ ಠಾಣೆ ಎಸ್ಸೈ ಎ.ಕೆ. ರಕ್ಷಿತ್ ಗೌಡ, ಉಪ್ಪಿನಂಗಡಿ ಎಸ್ಸೈ ನಂದಕುಮಾರ್, ಪುತ್ತೂರು ಸಿಐ ಮಹೇಶ್ ಪ್ರಸಾದ್ ಖಲಂದರ್ ಮನೆಯಲ್ಲಿ ತನಿಖೆ
ನಡೆಸಿದ್ದಾರೆ. ಆದರೆ ಪೊಲೀಸರ ತನಿಖೆಯನ್ನು ವಿಮುಖಗೊಳಿಸುವ ಸಲುವಾಗಿ ಪೊಲೀಸರು ಗ್ರಂಥ ಎಸೆದಿದ್ದಾರೆ ಎಂಬ ಕಟ್ಟುಕತೆಯನ್ನು ಹೆಣೆಯಲಾಗುತ್ತಿದೆ
ಎಂಬುವುದಂತೂ ಸ್ಪಷ್ಟ. ಗ್ರಂಥ ಎಸೆದಿದ್ದಾರೆ ಎಂದು ಹೇಳಿದರೆ ಎಲ್ಲಾ ಮುಸ್ಲಿಮರು ಒಂದಾಗುತ್ತಾರೆ, ಇದರಿಂದ ಪೊಲೀಸರು ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಈ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯೂ ಇದೆ.

ಪೊಲೀಸರು ಕೊಲೆಗೆ ದುಷ್ಪ್ರೇರಣೆ ನೀಡುವ ಪೂರಕ ಅಂಶಗಳನ್ನು ಕಲೆಹಾಕುತ್ತಾರೆ. ಅಲ್ಲದೆ ತನಿಖೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಿಕೊಂಡೇ
ಮಾಡಲಾಗುತ್ತದೆ. ಆದರೂ ಖಲಂದರ್ ಮನೆಯವರು ಪೊಲೀಸರ ಮೇಲೆ ಕೆಲವೊಂದು ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಆದರೆ ಇಸ್ಲಾಂನ ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟುಕೊಂಡು ಆಟವಾಡುವ ಅಜೆಂಡವೊಂದು ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದುದು ಇಲ್ಲಿ ಕಂಡುಬಂದಿತು. ಒಂದು ವೇಳೆ ಪೊಲೀಸರು ವಿಚಾರಣೆಯ ವಿಡಿಯೋ ನಡೆಸದೇ ಇದ್ದಿದ್ದರೆ, ಸರಿಯಾದ ಸ್ಪಷ್ಟೀಕರಣ ನೀಡದೇ ಇರುತ್ತಿದ್ದರೆ ಇಂದು ಆ ಪ್ರಕರಣ ದೊಡ್ಡದೊಂದು ವಿವಾದವೇರ್ಪಟ್ಟು ಜಿಲ್ಲೆಗೆ ಜಿಲ್ಲೆಯೇ ಹೊತ್ತಿ ಉರಿಯುತ್ತಿತ್ತು.

ಸತ್ಯ ಬಯಲು ಮಾಡಿದ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ:

ಖಲಂದರ್ ಮನೆಯವರು ಪೊಲೀಸರು ಕುರಾನ್ ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಆರೋಪವನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ
ಅಲ್ಲಗಳೆದಿದ್ದಾರೆ. ಸರಿಯಾದ ಸಮಯದಲ್ಲಿ ತಕ್ಕುದಾದ ಸ್ಪಷ್ಟೀಕರಣ ನೀಡಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಂಬಲ ಸೂಚಿಸಿದ್ದಾರೆ.

`ಶರತ್ ಮಡಿವಾಳ ಹತ್ಯೆಯ ಪ್ರಮುಖ ಆರೋಪಿ ಬಂಟ್ವಾಳದ ಪನೋಲಿಬೈಲ್ ನಿವಾಸಿ ಖಲಂದ್ ಶಾಫಿ ಮನೆಯವರಿಗೆ ಸರ್ಚ್ ವಾರೆಂಟ್ ತೋರಿಸಿಯೇ ತಪಾಸಣೆ ನಡೆಸಲಾಗಿದೆ. ಈ ವೇಳೆ ಮುಸ್ಲಿಮರ ಪವಿತ್ರ ಗ್ರಂಥ ಕುರಾನನ್ನು ಎಸೆದು ಅವಮಾನಿಸಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದುದು. ಕುರಾನ್‍ನ ಪ್ರಾಮುಖ್ಯತೆ ತಮಗೂ ತಿಳಿದಿದೆ. ಅದಕ್ಕಾಗಿಯೇ ತನಿಖೆಯ ವೇಳೆ ಕುರಾನನ್ನು ಸ್ಪರ್ಷಿಸಿಲ್ಲ. ಸರ್ಚ್ ವಾರಂಟ್ ಪಡೆದು ನಡೆಸಿದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಮನೆಗೆ ಮಹಿಳಾ ಸಿಬ್ಬಂದಿಯೊಂದಿಗೆ ತೆರಳಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಮನೆಯವರು ವಿರೋಧ ವ್ಯಕ್ತಪಡಿಸದೆ ಸಹಕರಿಸಿದ್ದಾರೆ. ಪವಿತ್ರ ಕುರಾನ್ ಹೊಂದಿರುವ ಪ್ಲಾಸ್ಟಿಕ್ ಬ್ಯಾಗನ್ನು ಮನೆಯವರೇ ಪೊಲೀಸರಿಗೆ ತೋರಿಸಿದ್ದಾರೆ. ಪೊಲೀಸರು ಅದನ್ನು ಮುಟ್ಟದೆ ಮನೆಯವರ ಮೂಲಕವೇ ಒಳಗಿಡಲು ಸೂಚಿಸುವ ವಿಡಿಯೋ ದಾಖಲೆ ಇದೆ ಎಂದಿದ್ದಾರೆ. ಅಲ್ಲದೆ ಅದನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆಯೂ ತೋರಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಧಾರ್ಮಿಕ ನಂಬಿಕೆ, ಶ್ರದ್ಧಾ ಕಾರ್ಯಗಳ ಬಗ್ಗೆ ನಮಗೆ ತಿಳುವಳಿಕೆ, ಗೌರವ ಇದೆ, ಹೀಗಿರುವಾಗ ಕುರಾನನ್ನು ಅವಮಾನಿಸಲಾಗಿದೆ ಎಂಬುವುದು ಸತ್ಯಕ್ಕೆ ದೂರವಾದ ವಿಚಾರ. ಧಾರ್ಮಿಕ ಗ್ರಂಥವನ್ನು ಇಡಲು ಪ್ರತ್ಯೇಕ ಸ್ಥಳವಿರುತ್ತದೆ. ಅದೇ ರೀತಿ ಖಲಂದರ್‍ನ ಮನೆಯಲ್ಲಿಯೂ ಧರ್ಮಗ್ರಂಥಗಳನ್ನು ಇಡಲು ಪ್ರತ್ಯೇಕ ಜಾಗವಿತ್ತು. ಅವುಗಳನ್ನು ಗಮನಿಸಿದ ಪೊಲೀಸರು ಕುರಾನ್ ಗ್ರಂಥವನ್ನು ಮುಟ್ಟಬೇಡಿ ಎಂದು ಸೂಚನೆ ನೀಡಿದ್ದಾರೆ. ಈ ಕಾರಣದಿಂದ ಕುರಾನನ್ನು ಮುಟ್ಟಿಲ್ಲ. ಆರೋಪ ಕೇಳಿಬಂದ ತಕ್ಷಣ ಪ್ರತಿಕ್ರಿಯಿಸಿದ್ದೆ‘ ಎಂದು ಎಸ್‍ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಪೊಲೀಸರು ಇಷ್ಟೆಲ್ಲಾ ದಾಖಲೆ ಒದಗಿಸಿದ್ದು, ಪೊಲೀಸರು ತನಿಖೆ ನಡೆಸಿದ ವಿಡಿಯೋವನ್ನೂ ಪತ್ರಕರ್ತರಿಗೆ ತೋರಿಸಿದ್ದಾರೆ. ಹಾಗಾದರೆ ಖಲಂದರ್ ಮನೆಯಲ್ಲಿ
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪುಸ್ತಕಗಳನ್ನು ನೋಡಿದಾಗ ಇದೆಲ್ಲಾ ಪೊಲೀಸರ ವಿರುದ್ಧ ಮಾಡಿರುವ ವ್ಯವಸ್ಥಿತ ಪಿತೂರಿಯಾಗಿರುವ ಸಾಧ್ಯತೆಯನ್ನೂ
ಅಲ್ಲಗಳೆಯುವಂತಿಲ್ಲ.

ಒಂದು ಸುಳ್ಳನ್ನು ಹಲವು ಬಾರಿ ಹೇಳಿದರೆ ಆ ಸುಳ್ಳನ್ನು ಸತ್ಯವೆಂದೇ ಜನರು ನಂಬುತ್ತಾರೆ ಎಂಬ ಸಿದ್ಧಾಂತದಂತೆಯೇ ಇಸ್ಲಾಂ ಅಜೆಂಡಾ ಕೆಲಸ ಮಾಡುತ್ತದೆ.
ಉದಾಹರಣೆಗೆ ಇತ್ತೀಚೆಗೆ ನಡೆದ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ಬಂಧನವಾಗದೇ ಇದ್ದರೂ ಸಂಘಪರಿವಾರದ ಮೇಲೆ ಹಾಕುವ ಪಿತೂರಿ ನಡೆಯುತ್ತದೆ.
ಕೋಮುಗಲಭೆಗೆ ಮೂಲತಃ ಕಾಂಗ್ರೆಸ್, ಕಮ್ಯುನಿಸ್ಟ್, ಇಸ್ಲಾಂ ಮೂಲಭೂತವಾದಿಗಳಾಗಿದ್ದರೂ ಅದೇ ಪಂಗಡದವರು ಹೇಳುವುದು ಮಾತ್ರ ಇದೆಲ್ಲಾ ಆರೆಸ್ಸೆಸ್ ಕೃತ್ಯ ಎಂಬ ಸುಳ್ಳನ್ನು. ಆದರೆ ಇಂದು ಆ ಸುಳ್ಳುಗಳನ್ನು ಇಂದು ಯಾರೂ ಕೂಡಾ ನಂಬುವುದಿಲ್ಲ. ಯಾಕೆಂದರೆ ಸತ್ಯ ಏನೆಂದು ಅರಿಯುವ ವಿವೇಚನೆ ಎಲ್ಲರಿಗೂ ಬಂದಿದೆ.

ರಾಜಹಂಸ

Tags

Related Articles

Close